Tag: ಶಿಖಾ

  • ಸಂಜೆಯೊಳಗೆ ಕೆಲಸಕ್ಕೆ ಬರುವಂತೆ ತರಬೇತಿ ನೌಕರರಿಗೆ ನೋಟಿಸ್

    ಸಂಜೆಯೊಳಗೆ ಕೆಲಸಕ್ಕೆ ಬರುವಂತೆ ತರಬೇತಿ ನೌಕರರಿಗೆ ನೋಟಿಸ್

    – ಎಸ್ಮಾ ಜಾರಿ ಬಗ್ಗೆ ಚರ್ಚೆ

    ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಂಜೆಯೊಳಗೆ ಕೆಲಸಕ್ಕೆ ಬರುವಂತೆ ತರಬೇತಿ ನೌಕರರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಬಿಎಂಟಿಸಿ ಎಂಡಿ ಶಿಖಾ ಹೇಳಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಎಸ್ಮಾ ಜಾರಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಇವತ್ತು ನೋಡಿಕೊಂಡು, ನಾಳೆ ಎಸ್ಮಾ ಬಗ್ಗೆ ಚಿಂತನೆ ನಡೆಸುತ್ತೇವೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಖಾಸಗಿ ಬಸ್ಸುಗಳು ಹೆಚ್ಚು ಓಡಾಡುತ್ತಿವೆ. ಸಾರಿಗೆ ನೌಕರರು ಬೇಗ ಕೆಲಸಕ್ಕೆ ಬನ್ನಿ ಎಂದು ಮನವಿ ಮಾಡಿಕೊಂಡರು.

    ತರಬೇತಿ ನೌಕರರಿಗೆ ನೋಟಿಸ್ ಕೊಟ್ಟಿದ್ದೇವೆ. ವೈಯಕ್ತಿಕವಾಗಿಯೂ ನೋಟಿಸ್ ಕೊಟ್ಟಿದ್ದೇವೆ. ಸಂಜೆಯೊಳಗೆ ಕೆಲಸಕ್ಕೆ ಬರುತ್ತಾರೆ ಎಂದು ಶಿಖಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಂಬಳ ಪರಿಷ್ಕರಣೆ ಮಾಡಿದ್ರೆ ವರ್ಷಕ್ಕೆ 1 ಸಾವಿರ ಕೋಟಿ ಹೊರೆಯಾಗಲಿದೆ: ಸವದಿ

    ಕೋವಿಡ್ ಹಾಗೂ ಮುಷ್ಕರದಿಂದ ಸಾಕಷ್ಟು ಲಾಸ್ ಆಗಿದೆ. ನಮ್ಮ ಮೊದಲ ಆದ್ಯತೆ ಬಿಎಂಟಿಸಿ ಬಸ್ ನೌಕರರು ಕೆಲಸಕ್ಕೆ ಬರೋದು. ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್ಸುಗಳ ಮಧ್ಯದ ಕ್ಲಾಶ್ ಗಳನ್ನು ಬಗೆಹರಿಸುವುದು ನಮ್ಮ ಎರಡನೇ ಕರ್ತವ್ಯವಾಗಿದೆ ಎಂದು ಅವರು ವಿವರಿಸಿದರು.

  • ನಾಳೆ ಸರ್ಕಾರಿ ಬಸ್ ರೂಟ್‍ನಲ್ಲಿ ಖಾಸಗಿ ಬಸ್ ಸಂಚಾರ – ಬಿಎಂಟಿಸಿ ಎಂಡಿ ಶಿಖಾ

    ನಾಳೆ ಸರ್ಕಾರಿ ಬಸ್ ರೂಟ್‍ನಲ್ಲಿ ಖಾಸಗಿ ಬಸ್ ಸಂಚಾರ – ಬಿಎಂಟಿಸಿ ಎಂಡಿ ಶಿಖಾ

    ಬೆಂಗಳೂರು: ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಸರ್ಕಾರಿ ಬಸ್ ಸಾಗುವ ಮಾರ್ಗಗಳಲ್ಲಿ ಖಾಸಗಿ ಬಸ್ ಓಡಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾಳೆ ಸ್ವ ಇಚ್ಛೆಯಿಂದ ಕೆಲಸಕ್ಕೆ ಬರುವ ನೌಕರರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಮತ್ತು ಬಸ್ ಗಳಿಗೆ ಯಾವುದೇ ಹಾನಿಯಾಗದಂತೆ ನೊಡಿಕೊಳ್ಳಲು ಪೊಲೀಸರ ಸಹಕಾರ ಕೇಳಿದ್ದೇವೆ. ನೌಕರರ ಮುಷ್ಕರ ಅತಿರೇಕಕ್ಕೆ ಹೋದರೆ ಎಸ್ಮಾ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ಕೋವಿಡ್‍ನಿಂದ ನಾವು ಸಾಕಷ್ಟು ನಷ್ಟ ಅನುಭವಿಸಿದ್ದೇವೆ.ಇಂತಹ ಸಂದರ್ಭದಲ್ಲಿ ನೌಕರರು ಮುಷ್ಕರ ನಡೆಸುವುದು ಸರಿಯಲ್ಲ ಎಂದರು.

    ಪರ್ಯಾಯ ವ್ಯವಸ್ಥೆಗಳಲ್ಲಿ ಖಾಸಗಿ ಬಸ್, ಮ್ಯಾಕ್ಸಿ ಕ್ಯಾಬ್ಸ್, ಟ್ಯಾಕ್ಸಿಗಳು ಇರುತ್ತವೆ. ಪ್ರಯಾಣ ದರದ ಬಗ್ಗೆ ಇಂದು ಸಂಜೆಯೊಳಗೆ ಕಮೀಷನರ್ ನಿರ್ಧಾರ ಮಾಡುತ್ತಾರೆ. ಬೆಂಗಳೂರಿನಲ್ಲಿ ಬಿಎಂಟಿಸಿ ನಂಬಿ ಸುಮಾರು 20 ಲಕ್ಷ ಜನರು ಓಡಾಡುತ್ತಾರೆ. ಹೀಗಾಗಿ ಸಂಪೂರ್ಣ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಪ್ರಯಾಣಿಕರು ತಾಳ್ಮೆಯಿಂದ ಸಹಕರಿಸಿ ಎಂದು ಮನವಿ ಮಾಡಿದರು.

    ನಾವು ಈ ಕುರಿತು ಈಗಾಗಲೇ ಸಾಕಷ್ಟು ಸಭೆಗಳನ್ನು ನಡೆಸಿದ್ದೇವೆ. ನಿನ್ನೆ ಬಿಎಂಟಿಸಿ ಒಕ್ಕೂಟದ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರಿಗೆ ಎಲ್ಲಾ ವಿಷಯವನ್ನು ಸ್ಪಷ್ಟಪಡಿಸಿದ್ದೇವೆ. ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಗಾಗಲೇ ಸ್ವೀಕರಿಸಿ ಅದಕ್ಕೆ ಚಾಲನೆ ನೀಡಿದ್ದೇವೆ. 6ನೇ ವೇತನ ಆಯೋಗವನ್ನು ಈಗ ಜಾರಿಗೊಳಿಸಲು ಸಾಧ್ಯವಿಲ್ಲ. ವೇತನ ಹೆಚ್ಚಳದ ಬಗ್ಗೆ ಎಲೆಕ್ಷನ್ ಕಮೀಷನ್ ಸ್ಪಷ್ಟೀಕರಿಸಿದ ಮೇಲೆ ಮಾಹಿತಿ ನೀಡಲಾಗುತ್ತದೆ ಎಂದು ಇಂದು ಸಿಎಂ ಜೊತೆ ನಡೆದ ಸಭೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದರು.

    ಕೊರೋನಾ ಸಮಯದಲ್ಲಿ ನಮ್ಮ ಸಾರಿಗೆ ಇಲಾಖೆಗೆ ತುಂಬಾ ನಷ್ಟವಾಗಿದೆ. ಹೀಗಾಗಿ ಮುಷ್ಕರಗಳನ್ನೆಲ್ಲ ಮಾಡಬೇಡಿ ಎಂದು ನೌಕರರಲ್ಲಿ ಮನವಿ ಮಾಡಿದ್ದೇವೆ. ಅಲ್ಲದೇ ಕೆಲಸ ಮಾಡದವರಿಗೆ ವೇತನ ನೀಡುವುದಿಲ್ಲ ಎಂದು ಸೂಚನೆ ನೀಡಿದ್ದೇವೆ. ನೌಕರರು ಮುಷ್ಕರ ನಿಲ್ಲಿಸದೇ ಹೋದರೆ ಪರ್ಯಾಯ ವ್ಯವಸ್ಥೆ ಅನಿವಾರ್ಯವಾಗುತ್ತದೆ. ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಶಿಖಾ ತಿಳಿಸಿದರು.

  • ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯವರೆಗೂ ಬಿಎಂಟಿಸಿ ಬಸ್ ಸಂಚಾರ

    ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯವರೆಗೂ ಬಿಎಂಟಿಸಿ ಬಸ್ ಸಂಚಾರ

    ಬೆಂಗಳೂರು: ನೈಟ್ ಕರ್ಫ್ಯೂ ಸಡಿಲ ಮಾಡಿದ ಹಿನ್ನೆಲೆಯಲ್ಲಿ ಇಂದಿನಿಂದ ಬಿಎಂಟಿಸಿ ಬಸ್ ಸಂಚಾರದ ಅವಧಿಯಲ್ಲಿ ಬದಲಾವಣೆಯಾಗಿದೆ.

    ಇದುವರೆಗೂ ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಮಾತ್ರ ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ಇತ್ತು. ಇಂದಿನಿಂದ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಬಿಎಂಟಿಸಿ ಬಸ್‍ಗಳು ಓಟಾಟ ಮಾಡಲಿವೆ. ಈ ಹಿಂದೆಯೇ ಎಂಡಿ ಶಿಖಾ ಅವರು ಬಸ್ ಸಂಚಾರ ಅವಧಿಯನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ನೀಡಿದೆ.

    ಇಂದಿನಿಂದ ನೈಟ್ ಕರ್ಫ್ಯೂ ಸಮಯ ಕೂಡ ಬದಲಾವಣೆಯಾಗಿದೆ. ರಾತ್ರಿ 9 ಗಂಟೆಯಿಂದ ರಾತ್ರಿ 5 ಗಂಟೆಯವರಗೆ ಮಾತ್ರ ಕರ್ಫ್ಯೂ ಜಾರಿಯಾಗಿದೆ. ಹೀಗಾಗಿ ಬಿಎಂಟಿಸಿ ಬಸ್‍ಗಳ ಸಂಚಾರ ಅವಧಿ ಕೂಡ ಬದಲಾವಣೆಯಾಗಿದೆ. ಈ ಮೂಲಕ ಪ್ರಯಾಣಿಕರು ಹೆಚ್ಚಿನ ಸಂಖ್ಯೆ ಓಡಾಡಬಹುದು.

    ಈ ಬಗ್ಗೆ ಬಿಎಂಟಿಸಿ ಎಂಡಿ ಶಿಖಾ, “ಭಾನುವಾರ ಬಿಎಂಟಿಸಿಗೆ ಗೈಡ್ ಲೈನ್ಸ್ ಬಂದಿದೆ. ಹೀಗಾಗಿ ಎಂಚ್‍ಎ ನಿರ್ದೇಶನದಂತೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಬಸ್‍ಗಳನ್ನು ಓಡಿಸುತ್ತೇವೆ” ಎಂದು ಪಬ್ಲಿಕ್ ಟಿವಿ ಸ್ಪಷ್ಟಪಡಿಸಿದ್ದಾರೆ. ಕಂಟೈನ್ಮೆಂಟ್ ಝೋನ್‍ಗಳಲ್ಲಿ ಬಸ್‍ಗಳ ಓಡಾಟಕ್ಕೆ ಇನ್ನೂ ಸರ್ಕಾರ ಅವಕಾಶ ನೀಡಿಲ್ಲ. ಹೀಗಾಗಿ ಕಂಟೈನ್ಮೆಂಟ್ ಝೋನ್ ಏರಿಯಾಗಳಲ್ಲಿ ಬಸ್ ಓಡಾಟವಿಲ್ಲ.

  • ವೋಲ್ವೋ ಬಸ್‍ನ ಚಾಲಕಿಯಾದ ಬಿಎಂಟಿಸಿ ಎಂಡಿ ಶಿಖಾ

    ವೋಲ್ವೋ ಬಸ್‍ನ ಚಾಲಕಿಯಾದ ಬಿಎಂಟಿಸಿ ಎಂಡಿ ಶಿಖಾ

    ಬೆಂಗಳೂರು: ಬಿಎಂಟಿಸಿ ಎಂಡಿ, ಮಹಿಳಾ ಐಎಎಸ್ ಅಧಿಕಾರಿ ಶಿಖಾ ವೋಲ್ವೋ ಬಸ್‍ನ ಚಾಲಕರಾಗಿದ್ದಾರೆ.

    ಶಿಖಾ ಅವರು ಡಿಪೋವೊಂದರಲ್ಲಿ ಹೊಸ ಬಿಎಂಟಿಸಿ ವೋಲ್ವೋ ಬಸ್‍ನಲ್ಲಿ ಟೆಸ್ಟ್ ಡ್ರೈವ್ ತಾವೇ ಮಾಡಿ ಬಸ್ಸಿಗೆ ಸರ್ಟಿಫಿಕೇಟ್ ನೀಡಿದ್ದಾರೆ. ಶಿಖಾ ಬಸ್ ಚಲಾಯಿಸುವ ವಿಡಿಯೋ ಈಗ ಎಲ್ಲರ ಹುಬ್ಬೇರಿಸಿದೆ. ಖಡಕ್ ಅಧಿಕಾರಿ ಶಿಖಾ ಬಸ್ ಚಲಾಯಿಸುವ ದೃಶ್ಯ ಕಂಡು ಅಧಿಕಾರಿಗಳು ಸಿಬ್ಬಂದಿಗಳೇ ದಂಗಾಗಿದ್ದಾರೆ. ಇದನ್ನೂ ಓದಿ: 60 ಕಿ.ಮೀ. ಬಸ್ ಓಡಿಸಿದ್ದು ರೇಣುಕಾಚಾರ್ಯ, ನೋಟಿಸ್ ಬಂದಿದ್ದು ಡಿಪೋ ಮ್ಯಾನೇಜರ್‌ಗೆ

    ಖಾಲಿ ರೋಡ್‍ನಲ್ಲಿ ಶಿಖಾ ಅವರು ಸುಮಾರು ಹೊತ್ತು ಬಸ್ ಚಲಾಯಿಸಿದ್ದಾರೆ. ಕೆಲವರು ಶಿಖಾ ಡ್ರೈವಿಂಗ್‍ಗೆ ಖುಷಿ ಪಟ್ಟು ಏನ್ ಡ್ರೈವಿಂಗ್ ಎಂದು ಹೊಗಳಿದ್ದಾರೆ. ಮತ್ತೆ ಕೆಲವರು, “ಅಲ್ಲಾ ಮೊನ್ನೆ ರೇಣುಕಾಚಾರ್ಯ ಕೆಎಸ್‍ಆರ್ ಟಿಸಿ ಬಸ್ ಓಡಿಸಿದಾಗ ಕಾಯ್ದೆ ಪ್ರಕಾರ ಹಿಂಗೆಲ್ಲ ಬಸ್ ಓಡಿಸುವ ಹಾಗಿಲ್ಲ ಎಂದು ರೂಲ್ಸ್ ಮಾತಾನಾಡುತ್ತಿದ್ರೂ ಜೊತೆಗೆ ರೇಣುಕಾಚಾರ್ಯ ವಿರುದ್ಧ ದೂರು ಕೊಡುವುದಕ್ಕೆ ರೆಡಿಯಾಗಿದ್ದರು. ಆದರೆ ಈಗ ಶಿಖಾ ಹೇಗೆ ಬಸ್ ಚಲಾಯಿಸುತ್ತಾರೆ” ಎಂದು ಪ್ರಶ್ನಿಸುತ್ತಿದ್ದಾರೆ.

    ಜನವರಿ 5ರಂದು ಹೊನ್ನಾಳಿಯಲ್ಲಿ ಬಸ್ ಉದ್ಘಾಟನೆ ವೇಳೆ ಶಾಸಕಾ ರೇಣುಕಾಚಾರ್ಯ ಕೆಎಸ್‍ಆರ್‍ಟಿಸಿ ಡ್ರೈವರ್ ಡ್ರೆಸ್ ಹಾಕಿಕೊಂಡು ಸುಮಾರು 60 ಕಿ.ಮೀ ಬಸ್ ಓಡಿಸಿದ್ದು ಎಲ್ಲೆಡೆ ಭಾರೀ ವಿವಾದವಾಗಿತ್ತು

  • ಕೊಡಗು ವಿದ್ಯಾರ್ಥಿಗಳಿಗೆ ಪಿಯುಸಿ ಬೋರ್ಡ್ ಅಭಯ!

    ಕೊಡಗು ವಿದ್ಯಾರ್ಥಿಗಳಿಗೆ ಪಿಯುಸಿ ಬೋರ್ಡ್ ಅಭಯ!

    ಬೆಂಗಳೂರು: ಕೊಡಗು ಮಳೆಗೆ ಕೊಚ್ಚಿ ಹೋದ ವಿದ್ಯಾರ್ಥಿಗಳ ಭವಿಷ್ಯದ ನೆರವಿಗೆ ಇದೀಗ ಪಿಯುಸಿ ಬೋರ್ಡ್ ಧಾವಿಸಿದೆ.

    ಮಳೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕೊಚ್ಚಿ ಹೋಗಿರುವುದರಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದರು. ಹೀಗಾಗಿ ಮಕ್ಕಳಿಗೆ ಅಭಯ ನೀಡಿರುವ ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಅವರು, ಕೊಡಗು ಮಕ್ಕಳಿಗೆ ಉಚಿತ ಅಂಕಪಟ್ಟಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ವಿದ್ಯಾರ್ಥಿಗಳು ತಾವು ಓದಿದ ಕಾಲೇಜಿಗೆ ಹೋಗಿ ಹೆಸರು ನೊಂದಾಯಿಸಿಕೊಳ್ಳಬೇಕು. ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳ ಮಾಹಿತಿಯನ್ನ ಉಪ ನಿರ್ದೇಶಕರಿಗೆ ನೀಡುತ್ತಾರೆ. ಬಳಿಕ ನೋಂದಾಯಿಸಿಕೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ದ್ವೀತಿಯ ಪಿಯುಸಿ ಅಂಕಪಟ್ಟಿ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

    ರಜೆಯಿಂದಾಗಿ ಹಾಜರಾತಿ ಕೊರತೆ ಅನ್ನೋ ಆತಂಕವೂ ವಿದ್ಯಾರ್ಥಿಗಳಿಗೆ ಬೇಡ. ದಸರಾ ರಜೆ, ಇನ್ನಿತರ ರಜೆಗಳಲ್ಲಿ ವಿಶೇಷ ತರಗತಿ ಮಾಡಿ ವಿದ್ಯಾರ್ಥಿಗಳಿಗೆ ಹಾಜರಾತಿ ನೀಡುವುದಾಗಿ ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಈ ಬಾರಿಯ ಪರೀಕ್ಷೆಯಲ್ಲಿ ಪಿಯು ಬೋರ್ಡ್ ಪಾಸ್

    ಈ ಬಾರಿಯ ಪರೀಕ್ಷೆಯಲ್ಲಿ ಪಿಯು ಬೋರ್ಡ್ ಪಾಸ್

    ಬೆಂಗಳೂರು: ಕಳೆದ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದಾಗಿ ಭಾರೀ ಟೀಕೆಗೆ ಗುರಿಯಾಗಿದ್ದ ಪಿಯು ಬೋರ್ಡ್ ಈ ಬಾರಿಯ ಪರೀಕ್ಷೆಯಲ್ಲಿ ಪಾಸಾಗಿದೆ.

    2016-17ನೇ ಸಾಲಿನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಸೋಮವಾರಕ್ಕೆ ಮುಕ್ತಾಯವಾಯಿತು. ಇಂದು ಇಂಗ್ಲಿಷ್ ವಿಷಯದ ಪರೀಕ್ಷೆ ನಡೆದಿದ್ದು ನಾಲ್ಕು ಜನ ಡಿಬಾರ್ ಆಗಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಶಿಖಾ ಮಾತನಾಡಿ, ಈ ಬಾರಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದೇ ಪಿಯು ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಮುಂದಿನ ಏಪ್ರಿಲ್ 5ರಿಂದ ಮೌಲ್ಯಮಾಪನ ಆರಂಭವಾಗಲಿದೆ. ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯನ್ನು 6.84 ಲಕ್ಷ ವಿದ್ಯಾರ್ಥಿಗಳು ಬರೆದಿದ್ದು, ಇಂದಿನದ್ದು ಸೇರಿ ಒಟ್ಟು 38 ಮಂದಿ ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ ಎಂದು ತಿಳಿಸಿದರು.

    ಈ ಬಾರಿ ಏನೇನು ಸುಧಾರಣೆಯಾಗಿತ್ತು?
    ಕಳೆದ ವರ್ಷ ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಎರಡು ಬಾರಿ ಸೋರಿಕೆಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿಡುವ ಖಜಾನೆ (ಸ್ಟ್ರಾಂಗ್ ರೂಂ) ಬಳಿ ಯಾರದ್ದೇ ಚಲನವಲನ ಕಂಡರೂ ತಕ್ಷಣ ಅದರ ವಿಡಿಯೋ ತುಣುಕು ಸಮೇತ `ಅಲರ್ಟ್’ ಮಾಡುವಂತಹ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯನ್ನು ಈ ಬಾರಿ ಅಳವಡಿಸಿತ್ತು.

    ಖಜಾನೆಯ ಕಣ್ಗಾವಲು ಪ್ರದೇಶದ ವ್ಯಾಪ್ತಿಯೊಳಗೆ ಯಾರದ್ದೇ ಚಲನವಲನ ಕಂಡರೂ ಅದರ 15 ಸೆಕೆಂಡ್ ವಿಡಿಯೋ ತುಣುಕು ಸಮೇತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಖಜಾನೆ ಅಧಿಕಾರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಮತ್ತು ಜಿಲ್ಲಾ ಉಪನಿರ್ದೇಶಕರ ಮೊಬೈಲ್‍ಗಳಿಗೆ ಸಂದೇಶ ರವಾನೆ ಆಗುವಂತಹ ಈ ವ್ಯವಸ್ಥೆಯಿಂದಾಗಿ ಈ ಬಾರಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ.

    ಅಷ್ಟೇ ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲಿರುವ ಪ್ರಶ್ನೆಪತ್ರಿಕೆಗಳನ್ನು ದೂರದ ಪರೀಕ್ಷಾ ಕೇಂದ್ರಗಳಿಗೂ ತಲುಪಲು ಸಾಧ್ಯವಾಗುವಂತೆ ಪರೀಕ್ಷಾ ಸಮಯವನ್ನು ಈ ಬಾರಿ ಬದಲಾವಣೆ ಮಾಡಲಾಗಿತ್ತು. ಹಿಂದಿನ ವರ್ಷ ಪರೀಕ್ಷೆಗಳು ಬೆಳಿಗ್ಗೆ 9ರಿಂದ ಆರಂಭವಾಗುತ್ತಿದ್ದರೆ, ಈ ಬಾರಿ ಬೆಳಿಗ್ಗೆ 10.15ರಿಂದ ಆರಂಭಗೊಂಡು ಮಧ್ಯಾಹ್ನ 1.30ರವರೆಗೆ ನಡೆದಿತ್ತು.

    ಕೇರಳದಲ್ಲಿ ಸೋರಿಕೆ: ಕೇರಳದಲ್ಲಿ ಮಾರ್ಚ್ 25ರಂದು ಎಸ್‍ಎಸ್‍ಎಲ್‍ಸಿಯ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಮಾರ್ಚ್ 31ರಂದು ಮತ್ತೊಮ್ಮೆ ಪರೀಕ್ಷೆ ನಡೆಯಲಿದೆ.

    ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಪಿಯು ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದಕ್ಕೆ ಕಾಲೇಜಿನ ಮಾನ್ಯತೆ ರದ್ದು