Tag: ಶಿಕ್ಷೆ

  • ಅಂತರ್ಜಾತಿ ಮದ್ವೆಯಾದ ಪ್ರೇಮಿಗಳು- ಯುವತಿಗೆ ಗ್ರಾಮಸ್ಥರಿಂದ ವಿಚಿತ್ರ ಶಿಕ್ಷೆ!

    ಅಂತರ್ಜಾತಿ ಮದ್ವೆಯಾದ ಪ್ರೇಮಿಗಳು- ಯುವತಿಗೆ ಗ್ರಾಮಸ್ಥರಿಂದ ವಿಚಿತ್ರ ಶಿಕ್ಷೆ!

    ಭೋಪಾಲ್: ಯುವತಿಯೊಬ್ಬಳು ಬೇರೆ ಜಾತಿ ಯುವಕನನ್ನು ಮದುವೆಯಾದ ಹಿನ್ನೆಲೆಯಲ್ಲಿ ಸಿಟ್ಟುಗೊಂಡ ಗ್ರಾಮಸ್ಥರು, ಒತ್ತಾಯವಾಗಿ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಶಿಕ್ಷೆಯನ್ನು ಆಕೆಗೆ ನೀಡಿದ ವಿಚಿತ್ರ ಘಟನೆ ಮಧ್ಯಪ್ರದೇಶದ ದೇವಿಘರ್ ನಲ್ಲಿ ನಡೆದಿದೆ.

    ಜಾಬುವ ಜಿಲ್ಲೆಯ ದೇವಿಘರ್ ನಿವಾಸಿಯಾದ 20 ವರ್ಷದ ಯುವತಿಯೊಬ್ಬಳು ಅಂತರ್ಜಾತಿ ವಿವಾಹವಾಗಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಸಿಟ್ಟಿಗೆದ್ದ ಗ್ರಾಮಸ್ಥರು ಮದುವೆಯಾದ ಯುವಕ, ಯುವತಿಗೆ ವಿಚಿತ್ರ ಶಿಕ್ಷೆ ನೀಡಿದ್ದಾರೆ. ಅದೇನಪ್ಪಾ ಅಂದ್ರೆ ಮದುವೆಯಾದ ತಪ್ಪಿಗೆ ಯುವತಿ ತನ್ನ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವಂತೆ ಒತ್ತಾಯಿಸಿ ಶಿಕ್ಷೆ ವಿಧಿಸಿದ್ದಾರೆ.

    ಈ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಈ ರೀತಿ ಯುವತಿಗೆ ಗ್ರಾಮಸ್ಥರು ಶಿಕ್ಷೆ ನೀಡಿದ್ದು ತಪ್ಪು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾಹಿತಿ ಕಲೆ ಹಾಕಿದ ಜಾಬುವ ಪೊಲೀಸರು ಈಗಾಗಲೇ ಘಟನೆಯಲ್ಲಿ ಶಾಮೀಲಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಪಟ್ಟ ಐಪಿಸಿ ಸೆಕ್ಷನ್ ಕಾಯ್ದೆ ಅಡಿಯಲ್ಲಿ ಆರೋಪಿಗಳ ಮೇಲೆ ಕೇಸ್ ದಾಖಲಿಸಲಾಗಿದ್ದು, ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮಲಗಿದ್ದ ದಂಪತಿ ಮೇಲೆರಗಿ ಪತ್ನಿಯ ಮೇಲೆ ಅತ್ಯಾಚಾರ, ಪತಿ ಕೊಲೆ

    ಮಲಗಿದ್ದ ದಂಪತಿ ಮೇಲೆರಗಿ ಪತ್ನಿಯ ಮೇಲೆ ಅತ್ಯಾಚಾರ, ಪತಿ ಕೊಲೆ

    – ಕೊಲೆಗೆ ಜೀವಾವಧಿ, ಅತ್ಯಾಚಾರಕ್ಕೆ ಮರಣದಂಡನೆ ಶಿಕ್ಷೆ

    ತಿರುವನಂತಪುರಂ: ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ಮೃತ ವ್ಯಕ್ತಿಯ ಪತ್ನಿಯನ್ನು ಅತ್ಯಾಚಾರ ಮಾಡಿದ ಅಪರಾಧಿಗೆ ಮರಣದಂಡನೆ ಶಿಕ್ಷೆಯನ್ನು ಕೇರಳದ ಸ್ಥಳೀಯ ನ್ಯಾಯಾಲಯವು ವಿಧಿಸಿದೆ.

    ಅಪರಾಧಿಗಳಾದ ಅನಿಲ್ ಕುಮಾರ್ ಮತ್ತು ಚಂದ್ರಶೇಖರನ್ ಅವರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಮಿನಿ ಎಸ್.ದಾಸ್ ಅವರು ಶಿಕ್ಷೆ ಜೊತೆಗೆ 1 ಲಕ್ಷ ಮತ್ತು 1.75 ಲಕ್ಷ ರೂ. ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.

    ಈ ಘಟನೆ 2017ರಲ್ಲಿ ನಡೆದಿದ್ದು, ಈಗ ನ್ಯಾಯಾಲಯ ತೀರ್ಪು ಪ್ರಕಟ ಮಾಡಿದೆ. ಕೋವಲಂ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟ ಕೊಲಿಯೂರ್ ನಲ್ಲಿ ಈ ಘಟನೆ ನಡೆದಿತ್ತು. ಕೋರ್ಟ್ ಅಪರಾಧಿ ಅನಿಲ್ ಕುಮಾರ್ ಗೆ ಮರಣ ದಂಡನೆ ಮತ್ತು ಎರಡನೇ ಅಪರಾಧಿ  ಚಂದ್ರಶೇಖರನ್‍ಗೆ ಜೀವಾವಧಿ ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಕೊಲಿಯೂರು ಪ್ರದೇಶದಲ್ಲಿ ದಂಪತಿ ತಮ್ಮ ನಿವಾಸದಲ್ಲಿ ಮಲಗಿದ್ದರು. ಆಗ ಈ ಇಬ್ಬರು ಅಪರಾಧಿಗಳು ಮನೆಗೆ ನುಗ್ಗಿ ಇದ್ದಕ್ಕಿದ್ದಂತೆ ಸುತ್ತಿಗೆ ಮತ್ತು ಕಬ್ಬಿಣದ ರಾಡ್‍ನಿಂದ ದಂಪತಿಯ ಮೇಲೆ ದಾಳಿ ಮಾಡಿದ್ದಾರೆ. ಚಂದ್ರಶೇಖರನ್ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ವೇಳೆ ಮಹಿಳೆಯೂ ಕೂಡ ಅಪರಾಧಿಗಳ ಮೇಲೆ ಅದೇ ರೀತಿಯ ಕಬ್ಬಿಣದ ರಾಡ್‍ನಿಂದ ಹಲ್ಲೆ ಮಾಡಿದ್ದಾರೆ. ಆದರೆ ಆರೋಪಿ ಅನಿಲ್ ಆಕೆಗೆ ಕಬ್ಬಿಣದ ರಾಡ್‍ನಿಂದ ಹೊಡೆದಿದ್ದಾನೆ. ಅಷ್ಟೇ ಅಲ್ಲದೇ ಮಹಿಳೆಯನ್ನು ಅತ್ಯಾಚಾರ ಮಾಡಿದ್ದಾನೆ. ಬಳಿಕ ಅನಿಲ್, ಚಂದ್ರಶೇಖರನ್ ಮನೆಯಲ್ಲಿ ಇದ್ದ ಹಣ, ಚಿನ್ನ ಮತ್ತು ಮೌಲ್ಯವಾದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.

    ಇತ್ತ ಸಂತ್ರಸ್ತೆಯ ಮೆದುಳಿಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಕೋಮಾಗೆ ಹೋಗಿದ್ದರು. ಇತ್ತೀಚೆಗೆ ಮಹಿಳೆಗೆ ಪ್ರಜ್ಞೆ ಬಂದಿದೆ. ಆದರೆ ಹಳೆಯ ನೆನಪುಗಳನ್ನು ಕಳೆದುಕೊಂಡಿದ್ದರು. ಅಪರಾಧಿಗಳು ಮನೆ ದೋಚಿ ಹೋದ ಕೆಲವು ಗಂಟೆಗಳ ನಂತರ ರೂಮಿನಲ್ಲಿ ಮಲಗಿದ್ದ ಮೃತರ ಮಕ್ಕಳು ಎಚ್ಚರಗೊಂಡಿದ್ದಾರೆ. ನಂತರ ಈ ಘಟನೆ ಬೆಳಕಿಗೆ ಬಂದಿತ್ತು. ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್‍ಗೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು.

    ಈ ಪ್ರಕರಣದಲ್ಲಿ ಯಾವುದೇ ಸಾಕ್ಷಿಗಳು ಇರಲಿಲ್ಲ. ಆದ್ದರಿಂದ ಸಾಂದರ್ಭಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅನಿಲ್ ಕುಮಾರ್ ಸಂತ್ರಸ್ತೆಯ ಪಕ್ಕದ ಮನೆಯ ನಿವಾಸಿಯಾಗಿದ್ದನು. ಅಪರಾಧಿ ಕುಮಾರ್ ಸಂತ್ರಸ್ತೆಯನ್ನ ತನ್ನ ಜೊತೆ ಸಹಕರಿಸು ಎಂದು ಅನೇಕ ಬಾರಿ ಒತ್ತಾಯಿಸಿದ್ದನು. ಆದರೆ ಸಂತ್ರಸ್ತೆ ಇದಕ್ಕೆ ನಿರಾಕರಿಸಿದ ಬಳಿಕ ಈ ಕೃತ್ಯ ಮಾಡಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.

  • ಸಿಬಿಐ ನಾಗೇಶ್ವರ್ ರಾವ್‍ಗೆ 1 ಲಕ್ಷ ರೂ. ದಂಡ – ಕೋರ್ಟ್ ಮೂಲೆಯಲ್ಲಿ ಕೂರುವ ಶಿಕ್ಷೆ

    ಸಿಬಿಐ ನಾಗೇಶ್ವರ್ ರಾವ್‍ಗೆ 1 ಲಕ್ಷ ರೂ. ದಂಡ – ಕೋರ್ಟ್ ಮೂಲೆಯಲ್ಲಿ ಕೂರುವ ಶಿಕ್ಷೆ

    ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸಿಬಿಐ ಹಿರಿಯ ಅಧಿಕಾರಿಯಾಗಿರುವ ಎಂ ನಾಗೇಶ್ವರ್ ರಾವ್ ಅವರಿಗೆ ಸುಪ್ರೀಂ ಕೋರ್ಟ್ ಒಂದು ಲಕ್ಷ ರೂ. ದಂಡ ವಿಧಿಸಿ ಕೋರ್ಟ್ ಮೂಲೆಯಲ್ಲಿ ಕೂರುವ ಶಿಕ್ಷೆಯನ್ನು ನೀಡಿದೆ.

    ಬಿಹಾರ ವಸತಿ ನಿಲಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದ ಎಂ ನಾಗೇಶ್ವರ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ಪ್ರಕರಣದಲ್ಲಿ ನಾಗೇಶ್ವರ್ ರಾವ್ ಮತ್ತು ಹೆಚ್ಚುವರಿ ಕಾನೂನು ಸಲಹೆಗಾರ ಭಾಸುರಾಮ್ ತಪ್ಪಿಸ್ಥರು ಎಂದು ತೀರ್ಪು ನೀಡಿದೆ.

    ವಿಚಾರಣೆಯ ವೇಳೆ ಎಂ ನಾಗೇಶ್ವರ್ ರಾವ್ ಅವರ ಕ್ಷಮೆಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳು, 30 ದಿನಗಳ ಕಾಲ ಜೈಲು ಶಿಕ್ಷೆ ನೀಡುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ ನಾಗೇಶ್ವರ್ ರಾವ್ ಸೋಮವಾರವೇ ಬೇಷರತ್ ಕ್ಷಮೆ ಕೇಳಿದ ಪರಿಣಾಮ ಕೋರ್ಟ್ ಹಾಲಿನಲ್ಲಿ ಕುಳಿತುಕೊಳ್ಳುವ ಶಿಕ್ಷೆ ವಿಧಿಸಿದ್ದಾರೆ.

    ಸಿಬಿಐ ಹಂಗಾಮಿ ನಿರ್ದೇಶಕರಾಗಿದ್ದ ವೇಳೆ ನಾಗೇಶ್ವರ್ ರಾವ್ ಅವರು, ಸುಪ್ರೀಂ ಆದೇಶವಿದ್ದರೂ ಕೂಡ ಬಿಹಾರದ ವಸತಿ ನಿಲಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ಮಾಜಿ ಜಂಟಿ ನಿರ್ದೇಶಕ ಎಕೆ ಶರ್ಮಾರನ್ನು ಜನವರಿ 18 ರಂದು ವರ್ಗಾವಣೆ ಮಾಡಿದ್ದರು. ಇದು ನ್ಯಾಯಾಂಗ ನಿಂದನೆ ಎಂದು ಸುಪ್ರೀಂ ಪರಿಗಣಿಸಿತ್ತು. ವಿಚಾರಣೆಯ ವೇಳೆ ಕೋರ್ಟ್ ಬಿಹಾರ ವಸತಿ ನಿಲಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಯಾವೊಬ್ಬ ಅಧಿಕಾರಿಯನ್ನು ತನ್ನ ಗಮನಕ್ಕೆ ಬಾರದೇ ವರ್ಗಾವಣೆ ಮಾಡುವಂತಿಲ್ಲ ಎಂದು ಕೋರ್ಟ್ ಸಿಬಿಐಗೆ ಸೂಚಿಸಿದೆ.

    ಈ ಪ್ರಕರಣದಲ್ಲಿ ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿಲ್ಲ. ಕೆಲಸ ಒತ್ತಡದಿಂದ ಹಾಗು ನಿರ್ಧಾರದ ಪ್ರಕ್ರಿಯೆಯಲ್ಲಿನ ಲೋಪದಿಂದ ಘಟನೆ ನಡೆದಿದೆ ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೇ ತಮ್ಮ ಆದೇಶದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ಉಲ್ಲಂಘಿಸುವ ಉದ್ದೇಶ ಇರಲಿಲ್ಲ ಸಿಬಿಐ ಪರವಾಗಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ವಾದಿಸಿದ್ದರು.

    ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕರಾಗಿದ್ದ ರಾಕೇಶ್ ಅಸ್ಥಾನಾ ಅವರ ನಡುವಿನ ಕಿತ್ತಾಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಬ್ಬರನ್ನು ಸೆವೆಯಿಂದ ಮುಕ್ತಿಗೊಳಿಸಿ ಎಂ ನಾಗೇಶ್ವರ್ ಅವರನ್ನು ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಿತ್ತು. ಈ ಸಂದರ್ಭದಲ್ಲಿ ಹಲವು ಅಧಿಕಾರಿಗಳನ್ನು ನಾಗೇಶ್ವರ್ ರಾವ್ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಬ್ಲಿಕ್ ಪ್ಲೇಸ್‍ನಲ್ಲಿ ಹಗ್ ಮಾಡಿದಕ್ಕೆ ಜೈಲು ಸೇರಿದ್ರು ಪ್ರೇಮಿಗಳು..!

    ಪಬ್ಲಿಕ್ ಪ್ಲೇಸ್‍ನಲ್ಲಿ ಹಗ್ ಮಾಡಿದಕ್ಕೆ ಜೈಲು ಸೇರಿದ್ರು ಪ್ರೇಮಿಗಳು..!

    ಜಕಾರ್ತಾ: ಸಾರ್ವಜನಿಕ ಸ್ಥಳದಲ್ಲಿ ತಬ್ಬಿಕೊಂಡಿದ್ದಕ್ಕೆ ಯುವ ಪ್ರೇಮಿಗಳಿಗೆ 17 ಬಾರಿ ಥಳಿಸಿ ಜೈಲಿಗಟ್ಟಿದ ಘಟನೆ ಇಂಡೋನೇಷ್ಯಾದ ಏಸೆ ಪ್ರಾಂತ್ಯದಲ್ಲಿ ನಡೆದಿದೆ.

    ಏಸೆ ಪ್ರಾಂತ್ಯದ ಮಹಿಳಾ ವಿಶ್ವವಿದ್ಯಾನಿಲಯದ 18 ವರ್ಷದ ವಿದ್ಯಾರ್ಥಿನಿ ಹಾಗೂ ಯುವಕನೊಬ್ಬನು ಸಾರ್ವಜನಿಕ ಸ್ಥಳದಲ್ಲಿ ತಬ್ಬಿಕೊಂಡಿದ್ದರು. ಆದರಿಂದ ಪ್ರೇಮಿಗಳು ಏಸೆ ಪ್ರಾಂತ್ಯದ ಕಾನೂನನ್ನು ಉಲ್ಲಂಘಸಿ ಕಾನೂನಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿ ಇಬ್ಬರಿಗೂ ಶಿಕ್ಷೆ ವಿಧಿಸಲಾಗಿದೆ.

    ಏಸೆ ಪ್ರಾಂತ್ಯದ ರಾಜಧಾನಿಯಾದ ಬಾಂಡಾ ಏಸೆಯಲ್ಲಿ ಪ್ರೇಮಿಗಳಿಬ್ಬರಿಗೂ ಮಸೀದಿಯ ಮುಂದೆ ಕೂರಿಸಿ ಸಾರ್ವಜನಿಕರ ಎದುರೇ ಅಲ್ಲಿನ ಧಾರ್ಮಿಕ ಮುಖಂಡರು 17 ಬಾರಿ ಬಿದಿರಿನ ಕೋಲಿನಿಂದ ಹೊಡೆದಿದ್ದಾರೆ. ಬಳಿಕ ಕಾನೂನನ್ನು ಉಲ್ಲಂಘಿಸಿದಕ್ಕೆ ಇಬ್ಬರಿಗೂ 1 ತಿಂಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲು ಆದೇಶ ಹೊರಡಿಸಿದ್ದಾರೆ.

    ಏಸೆ ಪ್ರಾಂತ್ಯದಲ್ಲಿ ಇಸ್ಲಾಂ ಧರ್ಮವನ್ನು ಪಾಲಿಸುವ ಜನರ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿನ ಸರ್ಕಾರ ಹಾಗೂ ಧಾರ್ಮಿಕ ಮುಖಂಡರು ಮಾಡಿರುವ ಕಾನೂನನ್ನು ಎಲ್ಲರೂ ಚಾಚು ತಪ್ಪದೇ ಪಾಲಿಸುತ್ತಾರೆ. ಅಷ್ಟೇ ಅಲ್ಲದೆ ಇಲ್ಲಿ ಕಾನೂನನ್ನು ಉಲ್ಲಂಘಿಸಿದರೆ ಷರಿಯಾ ಕಾನೂನಿನ ಪ್ರಕಾರ ಕಠಿಣ ಹಾಗೂ ಕ್ರೂರ ಶಿಕ್ಷೆಯನ್ನು ನೀಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಚಾಕ್ಲೇಟ್, ಸೈಕಲ್ ಆಸೆ ತೋರಿಸಿ ಬಾಲಕಿಯ ಅತ್ಯಾಚಾರವೆಸಗಿದ್ದ ವೃದ್ಧನಿಗೆ ಕಠಿಣ ಶಿಕ್ಷೆ

    ಚಾಕ್ಲೇಟ್, ಸೈಕಲ್ ಆಸೆ ತೋರಿಸಿ ಬಾಲಕಿಯ ಅತ್ಯಾಚಾರವೆಸಗಿದ್ದ ವೃದ್ಧನಿಗೆ ಕಠಿಣ ಶಿಕ್ಷೆ

    ಚಿಕ್ಕಬಳ್ಳಾಪುರ: 8 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ 62 ವರ್ಷದ ಕಾಮುಕ ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 14,000 ರೂಪಾಯಿ ದಂಡ ವಿಧಿಸಲಾಗಿದೆ.

    ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ಹನುಂತಪ್ಪ ಕೋರೆಡ್ಡಿಯವರು ಈ ಮಹತ್ವದ ಆದೇಶ ನೀಡಿದ್ದಾರೆ.

    ಘಟನೆಯ ವಿವರ:
    ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧಿ 62 ವರ್ಷದ ಗಂಗಾಧರಪ್ಪ ಶಾಲೆಗೆ ಹೋಗಿ ಮನೆಗೆ ಬರುತ್ತಿದ್ದ ಬಾಲಕಿಗೆ ಚಾಕ್ಲೇಟ್ ಕೊಟ್ಟಿದ್ದಾನೆ. ತದನಂತರ ತುಳಿಯಲು ಸೈಕಲ್ ಕೊಡುಸುವುದಾಗಿ ಪುಸಲಾಯಿಸಿ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದನು. ಈತನ ನಡುವಳಿಕೆ ಬಗ್ಗೆ ಸಂಶಯ ಕಂಡು ಸ್ಥಳೀಯರು ಮನೆಗೆ ನುಗ್ಗಿ ನೋಡಿದಾಗ ಬಾಲಕಿ ಮನೆಯಲ್ಲಿರುವುದು ಪತ್ತೆಯಾಗಿದೆ. ಹೀಗಾಗಿ ಗಂಗಾಧರಪ್ಪನಿಗೆ ಹಿಗ್ಗಮುಗ್ಗಾ ಥಳಿಸಿ ಸ್ಥಳೀಯರು ಮಂಚೇನಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದರು.

    10 ದಿನದಲ್ಲಿ ಚಾರ್ಜ್ ಶೀಟ್..!
    ನವೆಂಬರ್ 19 ರಂದು ಬೆಳಕಿಗೆ ಬಂದ ಪ್ರಕರಣವನ್ನ ಪೋಕ್ಸೋ ಕಾಯ್ದೆ ಸೇರಿದಂತೆ ಇನ್ನಿತರೆ ಸೆಕ್ಷನ್ ಗಳಡಿ ಕೇಸ್ ದಾಖಲಿಸಿಕೊಂಡ ಮಂಚೇನಹಳ್ಳಿ ಪೊಲೀಸರು ತನಿಖೆ ನಡೆಸಿದ್ದರು. ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಿದ ಪೊಲೀಸರು 10 ದಿನಗಳಲ್ಲೇ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ಕೋರ್ಟ್ ನಲ್ಲಿ ವಾದ ಪ್ರತಿವಾದ ಆಲಿಸಿ ಕೇವಲ 16 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ಪ್ರಕಟ ಮಾಡಿ ಮಹತ್ವದ ಆದೇಶ ಹೊರಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ವಿದ್ಯಾರ್ಥಿನಿಯ ಕಿಡ್ನಾಪ್, ರೇಪ್ – ಅಪರಾಧಿಗೆ 10 ವರ್ಷ ಜೈಲು, 15 ಸಾವಿರ ರೂ. ದಂಡ

    ವಿದ್ಯಾರ್ಥಿನಿಯ ಕಿಡ್ನಾಪ್, ರೇಪ್ – ಅಪರಾಧಿಗೆ 10 ವರ್ಷ ಜೈಲು, 15 ಸಾವಿರ ರೂ. ದಂಡ

    ಹುಬ್ಬಳ್ಳಿ: 17 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿ ಧಾರವಾಡದ 2ನೇ ಅಧಿಕ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರ ಸಿ.ಎಂ ಆದೇಶ ನೀಡಿದ್ದಾರೆ.

    ಹುಬ್ಬಳ್ಳಿ ನಾಗಶೆಟ್ಟಕೊಪ್ಪದ ನಿವಾಸಿ ಟಿಪ್ಪು ಸುಲ್ತಾನ್ ಬೆಪಾರಿ ಶಿಕ್ಷೆಗೊಳಗಾದ ಅಪರಾಧಿ. 2015 ರ ನವೆಂಬರ್ 30 ರಾಜನಗರ ಛಡ್ಡಾ ಕಾಲೇಜಿನಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು.

    ಈ ಸಂಬಂಧ ಹುಬ್ಬಳ್ಳಿ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ಈ ಪ್ರಕಣರದ ತನಿಖೆ ನಡೆಸಿದ ಅಶೋಕ ನಗರ ಠಾಣೆಯ ಇನ್ಸ್ ಪೆಕ್ಟರ್ ಜಗದೀಶ್ ಹಂಚಿನಾಳ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಗುರುವಾರ ನ್ಯಾಯಾಧೀಶರು ಕೂಲಂಕುಷವಾಗಿ ವಿಚಾರಣೆ ನಡೆಸಿ ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೀವು ಏನು ತಪ್ಪು ಮಾಡ್ತಿದ್ದೀರಿ ಎಂದು ಗೊತ್ತಾಗ್ಬೇಕು – ತನ್ನ ಮುಂದೆಯೇ ಸೆಕ್ಸ್ ಮಾಡುವಂತೆ ದಂಪತಿಗೆ ಒತ್ತಾಯ

    ನೀವು ಏನು ತಪ್ಪು ಮಾಡ್ತಿದ್ದೀರಿ ಎಂದು ಗೊತ್ತಾಗ್ಬೇಕು – ತನ್ನ ಮುಂದೆಯೇ ಸೆಕ್ಸ್ ಮಾಡುವಂತೆ ದಂಪತಿಗೆ ಒತ್ತಾಯ

    ಮುಂಬೈ: ಮಹಾರಾಷ್ಟ್ರದ ಥಾಣೆಯಲ್ಲಿ ಮಕ್ಕಳಾಗುವಂತೆ ಮಾಡುತ್ತೇನೆ ಎಂದು ವಿವಾಹಿತ ದಂಪತಿಗೆ ತನ್ನ ಮುಂದೆಯೇ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ ನಕಲಿ ವೈದ್ಯನಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ.

    ನಪುಂಸಕತೆಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯ ಯೋಗೇಶ್ ಕುಪೇಕರ್ ಸಂತಾನ ಪ್ರಾಪ್ತಿಗೆ ಬಂದ ದಂಪತಿಗೆ ಇಂತಹ ಕೆಟ್ಟ ಸಲಹೆ ನೀಡಿದ್ದ. ಈತನ ವಿರುದ್ಧ ಪ್ರಕರಣ ದಾಖಲಾಗಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪಿ.ಪಿ ಜಾಧವ್, ಅಪರಾಧಿ ಯೋಗೇಶ್ ಕುಪೇಕರ್ ಗೆ 10 ವರ್ಷ ಜೈಲು ಶಿಕ್ಷೆ ಮತ್ತು 30 ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

    ಏನಿದು ಪ್ರಕರಣ?
    ವಿವಾಹಿತ ದಂಪತಿಗೆ ಮಕ್ಕಳಗಾದ ಹಿನ್ನೆಲೆಯಲ್ಲಿ 2014ರಲ್ಲಿ ಯೋಗೇಶ್ ಬಳಿ ಚಿಕಿತ್ಸೆಗಾಗಿ ಹೋಗಿದ್ದಾರೆ. ಆತನಿಂದ ಎರಡು ವರ್ಷ ಕಾಲ ಚಿಕಿತ್ಸೆ ಪಡೆದುಕೊಂಡರೂ ಅವರಿಗೆ ಮಕ್ಕಳಾಗಿರಲಿಲ್ಲ. ಬಳಿಕ ಯೋಗೇಶ್ ದಂಪತಿ ತಮಗೆ ಮಕ್ಕಳಾಗಲು ಏನು ಮಾಡಲೂ ಸಿದ್ಧರಾಗಿದ್ದಾರೆ ಎನ್ನುವುದನ್ನು ತಿಳಿದುಕೊಂಡಿದ್ದ.

    2016ರಲ್ಲಿ ಯೋಗೇಶ್ ದಂಪತಿಗೆ ತನ್ನ ಮುಂದೆಯೇ ಲೈಂಗಿಕ ಕ್ರೀಯೆ ನಡೆಸುವಂತೆ ಒತ್ತಡ ಹೇರಿದ್ದಾನೆ. ನೀವು ಏನು ತಪ್ಪು ಮಾಡುತ್ತಿದ್ದೀರಿ ಎಂಬುದು ನನಗೆ ಗೊತ್ತಾಗಬೇಕು. ಆಗ ಮಾತ್ರ ನಾನು ಸೂಕ್ತ ಸಲಹೆ ನೀಡಲು ಸಾಧ್ಯವೆಂದು ಎಂದು ಹೇಳಿ ತನ್ನ ಸಲಹೆ ಆತ ಸಮರ್ಥನೆ ಬೇರೆ ಕೊಟ್ಟಿದ್ದ. ಅಷ್ಟೇ ಅಲ್ಲದೇ ಯೋಗೇಶ್ ದಂಪತಿಯಿಂದ ಚಿಕಿತ್ಸೆ ರೂಪದಲ್ಲಿ ಸುಮಾರು 10 ಸಾವಿರ ರೂಪಾಯಿಯನ್ನು ಪಡೆದುಕೊಂಡಿದ್ದ.

    ವೈದ್ಯನ ಈ ಸಲಹೆಯಿಂದ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ 2016 ರಲ್ಲಿ ಆತನ ವಿರುದ್ಧ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ ಲೈಂಗಿಕ ಕಿರುಕುಳ ಮತ್ತು ಮಹಾರಾಷ್ಟ್ರದಲ್ಲಿ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಕಾಯ್ದೆ(2013) ಅಡಿ ಪ್ರಕರಣ ದಾಖಲಾಗಿತ್ತು.

    ಇದೊಂದು ವಿಶೇಷ ಪ್ರಕರಣವಾಗಿದ್ದು, ದಂಪತಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಎನ್ನುವುದನ್ನೇ ದುರ್ಬಳಕ್ಕೆ ಮಾಡಿಕೊಂಡು ಕೃತ್ಯಕ್ಕೆ ಪ್ರಚೋದನೆ ನೀಡಿದ್ದು ಅಪರಾಧ. ಒಬ್ಬಳು ಮಗಳು ಇದ್ದು, ಪತ್ನಿ ಶಿಕ್ಷಕಿಯಾಗಿದ್ದರೂ ಅಪರಾಧಿ ಈ ರೀತಿಯ ಅಪಾಯಕಾರಿ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ. ಹೀಗಾಗಿ ಈತ ಶಿಕ್ಷೆಗೆ ಅರ್ಹ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿಕ್ಷೆಗೆ ಮುನ್ನವೇ ಕೋರ್ಟ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ!

    ಶಿಕ್ಷೆಗೆ ಮುನ್ನವೇ ಕೋರ್ಟ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ!

    ರಾಯಚೂರು: ಕೊಲೆ ಪ್ರಕರಣ ಆರೋಪಿಯೊಬ್ಬ ಶಿಕ್ಷೆ ಪ್ರಕಟಿಸುವ ಮುನ್ನವೇ ನ್ಯಾಯಾಲಯದ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

    ರಾಯಚೂರಿನ ಜ್ಯೋತಿ ಕಾಲೋನಿ ನಿವಾಸಿಯಾಗಿದ್ದ ಶಂಕರ್ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ. ಪತ್ನಿ ಕೊಲೆ ಪ್ರಕರಣದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಎರಡು ಕಾಲು ಮುರಿದಿದ್ದು, ಶಂಕರನನ್ನು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    2016 ಜನವರಿ 30 ರಂದು ಪತ್ನಿ ಶಿವಪುತ್ರಮ್ಮಳನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿ ಪಶ್ಚಿಮ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ. ಜಿಲ್ಲಾ ಸೇಷನ್ ಜಡ್ಜ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಆರೋಪಿ ಶಂಕರ್‌ನ ಇಬ್ಬರು ಮಕ್ಕಳು ಕೊಲೆ ಮಾಡಿರುವ ಬಗ್ಗೆ ಸಾಕ್ಷಿ ಹೇಳಿದ್ದರು. ಅಪರಾಧ ಸಾಬೀತಾದ ಹಿನ್ನೆಲೆ ಇಂದು ಶಿಕ್ಷೆಯ ಪ್ರಮಾಣದ ತೀರ್ಪು ಪ್ರಕಟಿಸಬೇಕಿತ್ತು. ಈ ವೇಳೆ ಪೊಲೀಸರ ಕಣ್ಣು ತಪ್ಪಿಸಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 13ರ ಪೋರಿಗೆ ಕಿಸ್ ಕೊಟ್ಟ 16ರ ಪೋರನಿಗೆ ಶಿಕ್ಷೆ

    13ರ ಪೋರಿಗೆ ಕಿಸ್ ಕೊಟ್ಟ 16ರ ಪೋರನಿಗೆ ಶಿಕ್ಷೆ

    ಟರ್ಕಿ: 16 ವರ್ಷದ ಬಾಲಕನೊಬ್ಬ ತನ್ನ 13ರ ಗರ್ಲ್ ಫ್ರೆಂಡ್‍ಗೆ ಕಿಸ್ ಕೊಟ್ಟಿದ್ದಕ್ಕೆ ನಾಲ್ಕೂವರೆ ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಪ್ರಕರಣವೊಂದು ಟರ್ಕಿಯಲ್ಲಿ ನಡೆದಿದೆ.

    ಬಾಲಕ ಶಾಲೆ ಆವರಣದಲ್ಲಿಯೇ ತನ್ನ ಗೆಳತಿಯನ್ನು ಅಪ್ಪಿಕೊಂಡು ಎಲ್ಲರ ಸಮ್ಮುಖದಲ್ಲೇ ಕಿಸ್ ಮಾಡಿದ್ದಾನೆ. ಇದನ್ನು ನೋಡಿದ ಆತನ ಸ್ನೇಹಿತರು ತಮ್ಮ ಮೊಬೈಲಿನಲ್ಲಿ ಆ ಪ್ರಸಂಗವನ್ನು ಸೆರೆ ಹಿಡಿದಿದ್ದಾರೆ. ನಂತರ ಆ ವಿಡಿಯೋವನ್ನು ಬೇರೆಯವರಿಗೆ ಶೇರ್ ಮಾಡಿ ವೈರಲ್ ಮಾಡಿದ್ದಾರೆ ಎಂದು ವರದಿಯಾಗಿದೆ.

    ಆ ಶಾಲೆಯ ಶಿಕ್ಷಕಿ ಬಾಲಕನ ಕಿಸ್ಸಿಂಗ್ ವೈರಲ್ ವಿಡಿಯೋ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಬಾಲಕನ ವಿರುದ್ಧ ಕಾನೂನು ಕ್ರಮಗೈಕೊಂಡಿದ್ದಾರೆ. ಟರ್ಕಿಯಲ್ಲಿ ಈ ರೀತಿ ಮಾಡಿದರೆ ಅದು ಅಪರಾಧವಾಗುತ್ತದೆ. ಸದ್ಯ ಕೋರ್ಟ್ ಬಾಲಕನಿಗೆ ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಪೊಲೀಸರು ಬಾಲಕನನ್ನು ಹಿಡಿದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಕೋರ್ಟ್ ಬಾಲಕನಿಗೆ ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ಈ ವಿಡಿಯೋ ಸೆರೆ ಹಿಡಿದ 5 ವಿದ್ಯಾರ್ಥಿಗಳನ್ನು ಕೂಡ ಆರೋಪಿಗಳು ಎಂದು ಹೇಳಲಾಗುತ್ತಿದೆ. ಸದ್ಯ ಆ ಐವರು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲಾಗಿದೆ.

    ಸದ್ಯ ವಕೀಲರು ಮುಖ್ಯ ಆರೋಪಿ ಆ ಬಾಲಕನನ್ನು ಶಿಕ್ಷೆಯಿಂದ ತಪ್ಪಿಸಲು ಪ್ರಯತ್ನಿಸಿದ್ದರು. ಈ ಮೊದಲು ಬಾಲಕನ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ. ಹಾಗಾಗಿ ಬಾಲಕನಿಗೆ ಸಾಧಾರಣ ಶಿಕ್ಷೆ ವಿಧಿಸಬೇಕೆಂದು ವಕೀಲರು ಕೋರ್ಟ್‍ನಲ್ಲಿ ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಟ್ಸಪ್ ಗ್ರೂಪಿನಲ್ಲಿ ಹಾಯ್, ಬಾಯ್ ಸಂದೇಶ – ವಿದ್ಯಾರ್ಥಿಗಳನ್ನು ಬಸ್ಕಿ ಹೊಡೆಸಿದ ಪ್ರಾಧ್ಯಾಪಕರು

    ವಾಟ್ಸಪ್ ಗ್ರೂಪಿನಲ್ಲಿ ಹಾಯ್, ಬಾಯ್ ಸಂದೇಶ – ವಿದ್ಯಾರ್ಥಿಗಳನ್ನು ಬಸ್ಕಿ ಹೊಡೆಸಿದ ಪ್ರಾಧ್ಯಾಪಕರು

    ಕೋಲಾರ: ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣವಾದ ವಾಟ್ಸಪ್ ಗ್ರೂಪ್ ಮೂಲಕ ಹಾಯ್ ಮತ್ತು ಬಾಯ್ ಸಂದೇಶ ಕಳುಹಿಸಿದ್ದಕ್ಕೆ ಎನ್‍ಸಿಸಿ ಪ್ರಾಧ್ಯಾಪಕರೊಬ್ಬರು ಬಸ್ಕಿ ಹೊಡೆಸುವ ಮೂಲಕ ಶಿಕ್ಷೆ ಕೊಟ್ಟಿದ್ದಾರೆ.

    ಕೋಲಾರ ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಈ ರೀತಿಯ ಶಿಕ್ಷೆಯನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಎನ್‍ಸಿಸಿ ಪ್ರಾಧ್ಯಾಪಕ ಲಾರೆನ್ಸ್ ಅವರು ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಿದ್ದಾರೆ. ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಎನ್‍ಸಿಸಿಗೆ ಸೇರಿದ ವಿದ್ಯಾರ್ಥಿಗಳಿಗಾಗಿಯೇ ಒಂದು ವಾಟ್ಸಪ್ ಗ್ರೂಪ್ ಮಾಡಲಾಗಿತ್ತು. ಈ ಗ್ರೂಪಿನಲ್ಲಿ ಪ್ರಾಧ್ಯಾಪಕರಾದ ಲಾರೆನ್ಸ್ ಅಡ್ಮಿನ್ ಆಗಿದ್ದರು. ಅವರು ವಿದ್ಯಾರ್ಥಿಗಳಿಗೆ ಈ ಗ್ರೂಪಿನಲ್ಲಿ ಅನವಶ್ಯಕವಾಗಿ ಹಾಯ್, ಬಾಯ್, ಗುಡ್ ನೈಟ್, ಗುಡ್ ಮಾರ್ನಿಂಗ್ ಮತ್ತು ಫೋಟೋಗಳನ್ನು ಮಾಡಬಾರದು ಎಂದು ಎಚ್ಚರಿಕೆ ಕೊಟ್ಟಿದ್ದರು.

    ಪ್ರಾಧ್ಯಾಪಕರು ಎಚ್ಚರಿಕೆ ನೀಡಿದ್ದರೂ ವಿದ್ಯಾರ್ಥಿಗಳು ವಾಟ್ಸಪ್ ಗ್ರೂಪಿನಲ್ಲಿ ಅನವಶ್ಯಕವಾಗಿ ಹಾಯ್, ಬಾಯ್ ಮೆಸೇಜ್ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಪ್ರಾಧ್ಯಾಪಕರು ಇಂದು ಕಾಲೇಜಿಗೆ ಬಂದಾಗ ಯಾರು ಯಾರು ಅನವಶ್ಯಕ ಸಂದೇಶ ಮಾಡಿದ್ದರು ಅಂತಹವರನ್ನು ತರಗತಿ ಕೊಠಡಿಯಲ್ಲಿ ಹೊರ ಹಾಕಿ ಶಿಕ್ಷೆ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv