Tag: ಶಿಕ್ಷೆ

  • 190 ಪುರುಷರನ್ನು ರೇಪ್‍ಗೈದಿದ್ದ ಸಲಿಂಗಕಾಮಿಗೆ ಶಿಕ್ಷೆ ಪ್ರಕಟ

    190 ಪುರುಷರನ್ನು ರೇಪ್‍ಗೈದಿದ್ದ ಸಲಿಂಗಕಾಮಿಗೆ ಶಿಕ್ಷೆ ಪ್ರಕಟ

    – ಕುಡಿದು ತೂರಾಡುವವರೇ ಇವನ ಟಾರ್ಗೆಟ್
    – ಶಿಕ್ಷಣಕ್ಕಾಗಿ ಬಂದವನ ಬಣ್ಣ ಬಯಲು

    ಲಂಡನ್: ಪುರುಷರನ್ನು ಅತ್ಯಾಚಾರಗೈದು, ಲೈಂಗಿಕ ಕಿರುಕುಳ ನೀಡಿದ್ದ 36 ವರ್ಷದ ರೆನ್ಹಾರ್ಡ್ ಸಿನಾಗಾಗೆ ಇಂಗ್ಲೆಂಡ್ ನ್ಯಾಯಾಲಯ ಜೀವಾವಧಿ ಶಿಕ್ಷೆಯ ತೀರ್ಪನ್ನು ನೀಡಿದೆ. ಸುದೀರ್ಘವಾಗಿ ಪ್ರಕರಣದ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಸಿನಾಗಾ ಅನೇಕರ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈತನನ್ನು ಅಪರಾಧಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ.

    ಎರಡೂವರೆ ವರ್ಷದ ಅವಧಿಯಲ್ಲಿ ಸಿನಾಗಾ ಹಲವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹಲವರಿಗೆ ತನ್ನ ಮನೆಯಲ್ಲಿ ಆಶ್ರಯ ನೀಡೋದಾಗಿ ಕರೆ ತರುತ್ತಿದೆ. ಕೆಲವೊಮ್ಮೆ ಮೊಬೈಲ್ ಚಾರ್ಜ್ ಗೆ ಸಹಾಯ ಮಾಡುವ ನೆಪದಲ್ಲಿ ಕರೆ ತಂದು ಅತ್ಯಾಚಾರ ಎಸಗುತ್ತಿದ್ದನು ಎಂದು ವರದಿಯಾಗಿದೆ.

    ಬಾರ್ ಗಳಿಂದ ಕುಡಿದು ತೂರಾಡುತ್ತಾ ಹೊರ ಬರುವ ಯುವಕರನ್ನೇ ಸಿನಾಗಾ ಟಾರ್ಗೆಟ್ ಮಾಡುತ್ತಿದ್ದನು. ನಶೆಯಲ್ಲಿ ಇರುವ ಯುವಕರನ್ನು ಮನೆಗೆ ಕರೆ ತಂದು ರೇಪ್ ಮಾಡುತ್ತಿದ್ದನು. ಬೆಳಗ್ಗೆ ನಶೆಯಲ್ಲಿದ್ದ ನಿಮಗೆ ಆಶ್ರಯ ನೀಡಿದ್ದೇನೆ ಎಂದು ಹೇಳಿ ಕಳುಹಿಸುತ್ತಿದ್ದನು. 2017 ಜುಲೈನಲ್ಲಿ ನಶೆಯಲ್ಲಿದ್ದ 18 ವರ್ಷದ ಯುವಕನನ್ನು ಮನೆಗೆ ಕರೆ ತಂದಿದ್ದಾನೆ. ಸೆಕ್ಸ್ ಮಾಡುತ್ತಿದ್ದ ವೇಳೆ ಯುವಕ ಎಚ್ಚರಗೊಂಡಿದ್ದಾನೆ. ಕೂಡಲೇ ಆತನ ಮನೆಯಿಂದ ಹೊರ ಬಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

    ದೂರು ದಾಖಲಿಸಿಕೊಂಡ ತನಿಖೆಗಳಿದ ಪೊಲೀಸರು ಸಿನಾಗಾನನ್ನ ಬಂಧಿಸಿದ್ದಾರೆ. ಆತನ ಮೊಬೈಲ್ ನಲ್ಲಿ ಹಲವರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ ಫೋಟೋ ಮತ್ತು ವಿಡಿಯೋಗಳು ಲಭ್ಯವಾಗಿವೆ. ಇಷ್ಟು ಮಾತ್ರವಲ್ಲದೇ ತಾನು ಅತ್ಯಾಚಾರಗೈದ ಯುವಕರ ಹೆಸರು ಮತ್ತು ವಿಳಾಸದ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದನು. ಮ್ಯಾಂಚೆಸ್ಟರ್ ನಗರದಲ್ಲಿ 48 ಜನರ ಮೇಲೆ ಅತ್ಯಾಚಾರಗೈದಿರುವುದು ದೃಢಪಟ್ಟಿದೆ. ಆತನ ಮೊಬೈಲಿನಲ್ಲಿ ವಿಡಿಯೋ ಆಧರಿಸಿ ಸುಮಾರು 70 ಸಂತ್ರಸ್ತರನ್ನು ಪೊಲೀಸರು ಹುಡುಕುತ್ತಿದ್ದಾರೆ.

    ಪೊಲೀಸರ ಪ್ರಕಾರ ಸಿನಾಗಾ ಬರೋಬ್ಬರಿ 190 ಜನರ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಹುತೇಕರಿಗೆ ತಮ್ಮ ಮೇಲೆ ನಡೆದ ಅತ್ಯಾಚಾರ ನಡೆದಿರೋದು ತಿಳಿಯದ ಕಾರಣ ಪ್ರಕರಣ ಹೊರ ಬಂದಿರಲಿಲ್ಲ. ಇಂಡೋನೇಷ್ಯಾ ಮೂಲದವನಾದ ಸಿನಾಗಾ, ಶಿಕ್ಷಣಕ್ಕಾಗಿ 2007ರಲ್ಲಿ ಇಂಗ್ಲೆಂಡ್ ಗೆ ಆಗಮಿಸಿದ್ದನು. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ ಸಮಾಜ ಶಾಸ್ತ್ರದಲ್ಲಿ ಪದವಿ ಸಹ ಪಡೆದುಕೊಂಡಿದ್ದಾರೆ. ಭೂಗೋಳ ಶಾಸ್ತ್ರದಲ್ಲಿ ಡಾಕ್ಟರೇಟ್ ಮಾಡುತ್ತಿದ್ದಾಗ ಸಿನಾಗಾನ ಬಂಧನವಾಗಿದೆ.

  • ಶ್ವಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್ – ಸಾಕು ನಾಯಿ ಕಚ್ಚಿದ್ರೆ ಜೈಲು ಗ್ಯಾರಂಟಿ

    ಶ್ವಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್ – ಸಾಕು ನಾಯಿ ಕಚ್ಚಿದ್ರೆ ಜೈಲು ಗ್ಯಾರಂಟಿ

    ಗಾಂಧಿನಗರ: ಶ್ವಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್. ಒಂದಕ್ಕಿಂತ ಹೆಚ್ಚು ಬಾರಿ ಸಾಕು ನಾಯಿ ಸಾರ್ವಜನಿಕರನ್ನು ಕಚ್ಚಿದ್ದರೆ ನಾಯಿಯ ಯಜಮಾನ ಜೈಲು ವಾಸ ಅನುಭವಿಸಬೇಕಾಗುತ್ತದೆ.

    ಗುಜರಾತ್‍ನ ಘೋದಸಾರ್ ನಿವಾಸಿ ಭಾರೇಶ್ ಪಾಂಡ್ಯಾ ಸಾಕಿದ ನಾಯಿ ನೆರೆಹೊರೆಯ ನಾಲ್ವರು ಮಂದಿಗೆ ಕಚ್ಚಿತ್ತು. ಇದೀಗ ಪಾಂಡ್ಯಾನಿಗೆ ಸ್ಥಳೀಯ ಕೋರ್ಟ್ ಒಂದು ವರ್ಷ ಕಠಿಣ ಕಾರಾಗ್ರಹವಾಸ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. 2014 ರಿಂದ ವಾದ ವಿವಾದ ಆಲಿಸಿದ ನ್ಯಾಯಾಲಯವು ಶ್ವಾನ ಸಾಕಿದ ಮಾಲೀಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ನೇರವಾಗಿ ಭಾಗಿಯಾಗದಿದ್ದರೂ ನಾಯಿಯ ಮಾಲೀಕನ ಬೇಜವಾಬ್ದಾರಿ ವರ್ತನೆ ಶಿಕ್ಷೆಗೆ ಅರ್ಹ ಎಂಬ ನಿರ್ಧಾರಕ್ಕೆ ಬಂದಿದೆ.

    ಅಪರಾಧಿ ಪಾಂಡ್ಯಾನಿಗೆ ಐಪಿಸಿ ಸೆಕ್ಷನ್ 338ರ ಅನ್ವಯ ಎರಡು ವರ್ಷ ಕಠಿಣ ಶಿಕ್ಷೆ ವಿಧಿಸಬೇಕು ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಅಭಿಪ್ರಾಯ ತಿಳಿಸಿತ್ತು. ಸಾಕು ಪ್ರಾಣಿಗಳನ್ನು ಸಾಕಲು ಮತ್ತು ಅವುಗಳನ್ನು ನಿಯಂತ್ರಿಸಲು ಪ್ರಾಣಿಪ್ರಿಯರು ಬೇಜವಾಬ್ದಾರಿ ತೋರುವವರಿಗೆ ಈ ಪ್ರಕರಣ ಒಂದು ಉದಾಹರಣೆಯಾಗುತ್ತದೆ ಎಂಬ ಉದ್ದೇಶದಿಂದ ಕೋರ್ಟ್ ಅಪರಾಧಿಗೆ ಶಿಕ್ಷೆ ವಿಧಿಸಿದೆ.

    ಏನಿದು ಪ್ರಕರಣ?
    2012 ಮತ್ತು 2014ರ ನಡುವೆ ಘೋಡಾಸರ್ ನಲ್ಲಿನ ಆಶಾಪುರಿ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಪಾಂಡ್ಯಾ ಒಂದು ಡಾಬರ್ ಮ್ಯಾನ್ ನಾಯಿಯನ್ನು ಸಾಕಿದ್ದನು. ಅದಕ್ಕೆ ಶಕ್ತಿ ಎಂದು ಹೆಸರಿಟ್ಟಿದ್ದನು. ಈ ನಾಯಿ ಅಕ್ಕಪಕ್ಕದ ಮನೆಯವರ ನಾಲ್ವರಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿತ್ತು. ಕಚ್ಚಿಸಿಕೊಂಡವರಲ್ಲಿ ಮೂವರು ಮಕ್ಕಳಿದ್ದು ಯುವಕ ಅವಿನಾಶ್ ಪಾಟೀಲ್‍ಗೆ ಕಚ್ಚಿಗಾಯಗೊಳಿಸಿತ್ತು. ಈತ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದನು.

    ನಾಯಿಯ ದಾಳಿಯಿಂದಾಗಿ ನನ್ನ ಮೂಳೆಗಳು ಮುರಿದಿವೆ ಎಂದು ಆರೋಪಿಸಿ 2014ರ ಫೆಬ್ರವರಿಯಲ್ಲಿ ಇಸನ್‍ಪುರ ಪೊಲೀಸ್ ಠಾಣೆಯಲ್ಲಿ ಪಾಟೀಲ್ ದೂರು ದಾಖಲಿಸಿದ್ದನು. ಇತರರ ಪ್ರಾಣಕ್ಕೆ ಅಪಾಯವನ್ನುಂಟುಮಾಡಿದ ಕಾರಣಕ್ಕಾಗಿ ಪ್ರಕರಣ ದಾಖಲಾಗಿತ್ತು. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಯು.ಎನ್ ಸಿಂಧಿ ಅವರು ಈ ಪ್ರಕರಣ ಕುರಿತು ಕೋರ್ಟಿನಲ್ಲಿ ವಾದ ಮಂಡಿಸಿದ್ದರು. ಕೊನೆಗೆ ಪಾಂಡ್ಯ ಅಪರಾಧಿ ಎಂಬುದು ಕೋರ್ಟಿನಲ್ಲಿ ಸಾಬೀತಾಯಿತು. ಪಾಂಡ್ಯಾ ಕೋರ್ಟಿನಲ್ಲಿ ಮನವಿ ಮಾಡಿಕೊಂಡಿದ್ದನು. ಆದರೆ ನ್ಯಾಯಾಲಯವು ಆತನ ಮನವಿಯನ್ನು ನಿರಾಕರಿಸಿ ಒಂದು ವರ್ಷದ ಜೈಲು ಶಿಕ್ಷೆ ಮತ್ತು 1,500 ರೂ. ದಂಡ ವಿಧಿಸಿ ಆದೇಶ ಪ್ರಕಟಿಸಿದೆ.

  • ಮದ್ವೆಗೂ ಮುನ್ನ ಸೆಕ್ಸ್ ಮಾಡಿದ್ದಕ್ಕೆ ಯುವಕನಿಗೆ 100 ಛಡಿಯೇಟಿನ ಶಿಕ್ಷೆ

    ಮದ್ವೆಗೂ ಮುನ್ನ ಸೆಕ್ಸ್ ಮಾಡಿದ್ದಕ್ಕೆ ಯುವಕನಿಗೆ 100 ಛಡಿಯೇಟಿನ ಶಿಕ್ಷೆ

    -ಪ್ರಜ್ಞೆ ತಪ್ಪಿದ್ರೂ ಬಿಟ್ಟಿಲ್ಲ

    ಜಕಾರ್ತಾ: ಯುವಕನೊಬ್ಬ ಮದುವೆಗೂ ಮುನ್ನವೇ ಲೈಂಗಿಕ ಸಂಬಂಧ ಹೊಂದಿದ್ದರಿಂದ ಆತನಿಗೆ 100 ಛಡಿಯೇಟಿನ ಶಿಕ್ಷೆಯನ್ನು ನೀಡಲಾಗಿದೆ. ಈ ವೇಳೆ ಆತ ಪ್ರಜ್ಞೆ ತಪ್ಪಿ ಬಿದ್ದರೂ ಬಿಡದೇ ಹಿಗ್ಗಾಮುಗ್ಗ ಥಳಿಸಿದ ಅಮಾನವೀಯ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

    ಇಂಡೋನೇಷ್ಯಾದ ಯುವಕನೊಬ್ಬ ಮದುವೆಗೂ ಮುನ್ನವೇ ಮಹಿಳೆಯೊಂದಿಗೆ ಸೆಕ್ಸ್ ಮಾಡಿದ್ದನು. ಹೀಗಾಗಿ ಆತ ತಪ್ಪಿತಸ್ಥನೆಂದು ಸಾಬೀತಾಗಿತ್ತು. ಆದ್ದರಿಂದ ಯುವಕನಿಗೆ ಛಡಿಯೇಟಿನ ಶಿಕ್ಷೆಯನ್ನು ನೀಡಲಾಗಿದೆ.

    ಈ ರೀತಿ ಸಾರ್ವಜನಿಕವಾಗಿ ಒಬ್ಬರಿಗೆ ಛಡಿಯೇಟು ನೀಡುವುದನ್ನು ವಿಶ್ವದಾದ್ಯಂತ ಖಂಡನೆ ಮಾಡಲಾಗಿದೆ. ಆದರೂ ಇಂಡೋನೇಷ್ಯಾದ ಆಚೆ ಎನ್ನುವ ಪ್ರದೇಶದಲ್ಲಿ ಸ್ಥಳೀಯ ಇಸ್ಲಾಮಿಕ್ ಕಾನೂನಿನಡಿಯಲ್ಲಿ ಸಾರ್ವಜನಿಕವಾಗಿ ಹೊಡೆಯುವುದು ಸಾಮಾನ್ಯವಾಗಿದೆ. ಇಲ್ಲಿ ಜೂಜು, ಮದ್ಯಪಾನ ಮತ್ತು ಸಲಿಂಗಕಾಮಿ, ವಿವಾಹಪೂರ್ವ ಲೈಂಗಿಕ ಸಂಬಂಧ ಹೊಂದುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ.

    ವಿಶ್ವದ ಅತಿದೊಡ್ಡ ಮುಸ್ಲಿಂ ಬಹುಸಂಖ್ಯಾತ ದೇಶವಾದ ಇಂಡೋನೇಷ್ಯಾದ ಪ್ರದೇಶ ಆಚೆಯಲ್ಲಿ ಈ ಕಾನೂನು ಜಾರಿಯಲ್ಲಿದೆ. ಅದರಂತೆಯೇ ಇತ್ತೀಚೆಗೆ 22 ವರ್ಷದ ಯುವಕನಿಗೆ 100 ಛಡಿಯೇಟಿನ ಶಿಕ್ಷೆ ವಿಧಿಸಲಾಗಿದೆ.

    ಯುವಕ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೊಡೆಯುತ್ತಿದ್ದ ಅಧಿಕಾರಿ ಬಳಿ, ನನ್ನ ಬೆನ್ನಿಗೆ ಹೊಡೆಯಬೇಡಿ ಎಂದು ಪರಿ ಪರಿಯಾಗಿ ಮನವಿ ಮಾಡಿಕೊಂಡನು. ಆದರೂ ಹೊಡೆಯುವುದನ್ನು ನಿಲ್ಲಿಸಲಿಲ್ಲ. ಹೊಡೆತಕ್ಕೆ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆತನಿಗೆ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಮತ್ತೆ ಛಡಿಯೇಟು ನೀಡುವುದನ್ನು ಮುಂದುವರಿಸಿದ್ದಾರೆ. ಕೊನೆಗೆ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಯುವಕನಿಗೆ ನೀಡುತ್ತಿದ್ದ ಶಿಕ್ಷೆಯನ್ನು ನೋಡಲು ನೂರಾರು ಮಂದಿ ಅಲ್ಲಿ ಜಮಾಯಿಸಿದ್ದರು. ಅವರಲ್ಲಿ ಕೆಲವರು ‘ಕಠಿಣ, ಕಠಿಣ’ ಎಂದು ಕೂಗುತ್ತಿದ್ದರು. ಇಲ್ಲೂ ಕೆಲವರು “ಕಾನೂನು ಉಲ್ಲಂಘಿಸಿದ್ದಕ್ಕಾಗಿ ಆತ ಎದುರಿಸಬೇಕಾದ ಪರಿಣಾಮ ಇದು” ಎಂದು ಹೇಳುತ್ತಿದ್ದರು. ಈ ಹಿಂದೆ ಜುಲೈನಲ್ಲಿ ವಿವಾಹಪೂರ್ವ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ಮೂರು ಜನರಿಗೆ ತಲಾ 100 ಬಾರಿ ಹೊಡೆಯಲಾಗಿತ್ತು.

  • 7ರ ಬಾಲೆಯನ್ನ ಅತ್ಯಾಚಾರಗೈದ ಕಾಮುಕನಿಗೆ 10 ವರ್ಷ ಜೈಲು ಶಿಕ್ಷೆ

    7ರ ಬಾಲೆಯನ್ನ ಅತ್ಯಾಚಾರಗೈದ ಕಾಮುಕನಿಗೆ 10 ವರ್ಷ ಜೈಲು ಶಿಕ್ಷೆ

    ಶಿವಮೊಗ್ಗ : ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ ಶಿವಮೊಗ್ಗ ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಹಾಗು 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

    2014ರಲ್ಲಿ ತೀರ್ಥಹಳ್ಳಿ ತಾಲೂಕಿನ ಏಳು ವರ್ಷದ ಬಾಲಕಿ ಮೇಲೆ ಭಾಸ್ಕರ್ (32) ಎಂಬಾತ ಅತ್ಯಾಚಾರ ಎಸಗಿದ್ದನು. ಈ ಪ್ರಕರಣದಲ್ಲಿ ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಮಾಳೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

     

    ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಬಿ.ಶಿವಪ್ರಸಾದ್ ಅವರು ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ ಹಾಗು 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಒಂದು ವೇಳೆ ದಂಡ ಕಟ್ಟಲು ವಿಫಲವಾದಲ್ಲಿ ಆರು ತಿಂಗಳ ಸಾದಾ ಸಜೆ ಅನುಭವಿಸುವಂತೆ ಹಾಗೂ ಜಿಲ್ಲಾ ಕಾನೂನು ನೆರವು ಸಮಿತಿ ಶಿಫಾರಸು ಮೇರೆಗೆ ಸಂತ್ರಸ್ತ ಬಾಲಕಿಗೆ ಸರ್ಕಾರ ಮೂರು ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಸ್.ಕೆ.ಮೂರ್ತಿರಾವ್ ವಾದ ಮಂಡಿಸಿದ್ದರು.

  • 6ರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸೆದ ಕಾಮುಕನಿಗೆ 10 ವರ್ಷ ಜೈಲು, 20 ಸಾವಿರ ರೂ. ದಂಡ

    6ರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸೆದ ಕಾಮುಕನಿಗೆ 10 ವರ್ಷ ಜೈಲು, 20 ಸಾವಿರ ರೂ. ದಂಡ

    ರಾಮನಗರ: ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕಾಮುಕನಿಗೆ 10 ವರ್ಷ ಜೈಲು, 20 ಸಾವಿರ ರೂ. ದಂಡ ವಿಧಿಸಿ ರಾಮನಗರ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ  ಶಿಕ್ಷೆ ವಿಧಿಸಿದೆ.

    ತಮಿಳುನಾಡು ಮೂಲದ ಮಂಜುನಾಥ್ ಜೈಲು ಶಿಕ್ಷೆಗೆ ಒಳಗಾದ ಕಾಮುಕ. 2018 ರಲ್ಲಿ ಕನಕಪುರ ನಗರದ ಪ್ರಶಾಂತನಗರದಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದ ಆರೋಪಿ ಮಂಜುನಾಥ್ ತನ್ನ ಪತ್ನಿಯ ಸಹಾಯದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಪರಾಧಿ ಮಂಜುನಾಥ್‍ನ ಕೃತ್ಯ ಎರಡು ದಿನಗಳ ಬಳಿಕ ಬಾಲಕಿಯ ತಂದೆ-ತಾಯಿಗೆ ತಿಳಿದು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಬಾಲಕಿಯ ಪೋಷಕರ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಠಾಣೆಯ ವೃತ್ತ ನಿರೀಕ್ಷಕ ಮಲ್ಲೇಶ್ ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ಸರ್ಕಾರಿ ಅಭಿಯೋಜಕಿ ಶಿಲ್ಪಾ ಅವರು ವಾದ ಮಂಡಿಸಿದ್ದು, ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು ಅಪರಾಧಿ ಮಂಜುನಾಥ್‍ಗೆ 10 ವರ್ಷ ಜೈಲು 20 ಸಾವಿರ ದಂಡ ಶಿಕ್ಷೆ ನೀಡಿ ಆದೇಶಿಸಿದ್ದಾರೆ.

    ಅಲ್ಲದೇ ಬಾಲಕಿ ಮೇಲಿನ ಹಲ್ಲೆಗೆ ಒಂದು ತಿಂಗಳ ಹೆಚ್ಚುವರಿ ಜೈಲುವಾಸ ಹಾಗೂ ದಂಡ ಕಟ್ಟಲು ವಿಫಲವಾದರೆ 6 ತಿಂಗಳ ಕಾಲ ಹೆಚ್ಚುವರಿ ಜೈಲುವಾಸ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ.

  • ಪ್ರೇಮಿಯ ಮರ್ಮಾಂಗ ಕತ್ತರಿಸಿದ ಪ್ರೇಯಸಿಗೆ 13 ವರ್ಷ ಜೈಲು ಶಿಕ್ಷೆ

    ಪ್ರೇಮಿಯ ಮರ್ಮಾಂಗ ಕತ್ತರಿಸಿದ ಪ್ರೇಯಸಿಗೆ 13 ವರ್ಷ ಜೈಲು ಶಿಕ್ಷೆ

    – ಸೆಕ್ಸ್ ವಿಡಿಯೋ ಸ್ನೇಹಿತರಿಗೆ ತೋರಿಸಿದಕ್ಕೆ ಕತ್ತರಿಸಿದ್ಳು
    – ಕೋರ್ಟ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಪ್ರೇಯಸಿ
    – ಕೊಲೆ ಮಾಡಿಲ್ಲ, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದೆ

    ಬ್ಯೂನಸ್‍ಐರಿಸ್: ತಮ್ಮಿಬ್ಬರ ಸೆಕ್ಸ್ ವಿಡಿಯೋವನ್ನು ಪ್ರೇಮಿ ತನ್ನ ಸ್ನೇಹಿತರಿಗೆ ತೋರಿಸಿದ ಎಂಬ ಸಿಟ್ಟಿಗೆ ಪ್ರೇಯಸಿ ಆತನ ಮರ್ಮಾಂಗವನ್ನೇ ಕತ್ತರಿಸಿದ್ದು, ಆಕೆಗೆ ನ್ಯಾಯಾಲಯ 13 ವರ್ಷದ ಜೈಲು ಶಿಕ್ಷೆ ವಿಧಿಸಿದೆ.

    ಅರ್ಜೆಂಟಿನಾದಲ್ಲಿ 2017ರಲ್ಲಿ ಕೃತ್ಯ ಎಸಗಿದಕ್ಕೆ ದೋಷಿಯಾಗಿರುವ ಬ್ರೆಂಡಾಗೆ(28) ಅರ್ಜೆಂಟಿನಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ:ಸೆಕ್ಸ್ ನಿರಾಕರಿಸಿದ್ದಕ್ಕೆ ಪುರುಷರಿಬ್ಬರ ಮರ್ಮಾಂಗ ಕತ್ತರಿಸಿದ ಸಲಿಂಗಕಾಮಿ

    ಆರ್ಕಿಟೆಕ್ಟ್ ಆಗಿರುವ ಬ್ರೆಂಡಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಅಬರಿಬ್ಬರ ನಡುವೆ ಲೈಂಗಿಕ ಸಂಪರ್ಕ ಕೂಡ ಇತ್ತು. ಆದರೆ ಅವರಿಬ್ಬರು ಸೆಕ್ಸ್ ಮಾಡಿರುವ ವಿಡಿಯೋವನ್ನು ಯುವಕ ಬ್ರೆಂಡಾಗೆ ತಿಳಿಯದಂತೆ ಸೆರೆಹಿಡಿದಿದ್ದನು. ಅಷ್ಟೇ ಅಲ್ಲದೆ ಈ ವಿಡಿಯೋವನ್ನು ತನ್ನ ಸ್ನೇಹಿತರಿಗೆ ತೋರಿಸಿದ್ದನು. ಇದನ್ನೂ ಓದಿ:ಪ್ರೀತಿ ನಿರಾಕರಿಸಿದ್ದಕ್ಕೆ ಗುಪ್ತಾಂಗಕ್ಕೆ ಸ್ಕ್ರೂ ಡ್ರೈವರ್‌ನಿಂದ ಇರಿತ – ಐಸಿಯುನಲ್ಲಿದ್ದ ಯುವತಿ ಸಾವು

    ಈ ಬಗ್ಗೆ ಬ್ರೆಂಡಾಗೆ ತಿಳಿದು ಆಕೆ ಯುವಕನ ವಿರುದ್ಧ ಕೋಪಗೊಂಡಿದ್ದಳು. ಆದ್ದರಿಂದ ಆತನಿಗೆ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿದ ಬ್ರೆಂಡಾ ಒಂದು ದಿನ ಪ್ರಿಯಕರನನ್ನು ತನ್ನ ಮನೆಗೆ ಕರೆಸಿ ಈ ಕೃತ್ಯವೆಸೆಗಿದ್ದಳು. ನನ್ನನ್ನು ಮನೆಗೆ ಕರೆಸಿ, ಸರ್ಪ್ರೈಸ್​ ಕೊಡುವುದಾಗಿ ಹೇಳಿ ನನ್ನ ಕಣ್ಣಿಗೆ ಬಟ್ಟೆ ಕಟ್ಟಿದಳು. ಬಳಿಕ ನನ್ನ ಮರ್ಮಾಂಗ ಕತ್ತರಿಸಿದಳು ಎಂದು ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದನು.

    ಯುವಕನ ದೂರಿನ ಆಧಾರದ ಮೇಲೆ ಪೊಲೀಸರು ಬ್ರೆಂಡಾಳನ್ನು ಬಂಧಿಸಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಬ್ರೆಂಡಾ ತಪ್ಪನ್ನು ಒಪ್ಪಿಕೊಂಡಿದ್ದು, ನಾನು ಆತನನ್ನು ಸಾಯಿಸಲು ಆ ರೀತಿ ಮಾಡಿಲ್ಲ. ಆತನ ಮೇಲೆ ನನಗೆ ಪ್ರೀತಿಯಿದೆ. ಆದರೆ ಅವನು ತಪ್ಪು ಮಾಡಿದ್ದಾನೆ, ಅದಕ್ಕೆ ಬುದ್ಧಿ ಕಲಿಸಲು ಹೀಗೆ ಮಾಡಿದೆ. ಅಲ್ಲದೆ ಕೃತ್ಯವೆಸೆಗಿದ ಬಳಿಕ ಆತ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದಾಗ ನಾನೇ ಆತನನ್ನು ಆಸ್ಪತ್ರೆಗೆ ಸೇರಿಸಿದ್ದು ಎಂದು ಹೇಳಿದ್ದಾಳೆ. ಇದನ್ನೂ ಓದಿ:ಪುರುಷರ ಮರ್ಮಾಂಗಕ್ಕೆ ಯುವತಿ ಬಾಯಿಟ್ಟು ಎಡಿಟ್ – ಸೈಕೋ ಸ್ಟೂಡೆಂಟ್ ವಿರುದ್ಧ ದೂರು

    ಈ ಸಂಬಂಧ ವಾದ, ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಆರೋಪಿಗೆ 13 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಈ ಪ್ರಕರಣ ನಡೆದ ಬಳಿಕ ಬ್ರೆಂಡಾಳನ್ನು ಅರ್ಜೆಂಟಿನಾ ಮಂದಿ ಈ ಹಿಂದೆ ಇದೇ ರೀತಿ ಪ್ರಿಯಕರ ಮರ್ಮಾಂಗ ಕತ್ತರಿಸಿದ ಆರೋಪಿ ಲೊರೆನಾಳಿಗೆ ಹೋಲಿಸುತ್ತಿದ್ದಾರೆ. ಇದನ್ನೂ ಓದಿ:ಸಂಸಾರ ನಡೆಸೋಣ ಬಾ ಎಂದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಪತ್ನಿ

    1993ರಲ್ಲಿ ಲೊರೆನಾ ಮಲಗಿದ್ದ ತನ್ನ ಪತಿಯ ಮರ್ಮಾಂಗ ಕತ್ತರಿಸಿ ವಿಕೃತಿ ಮೆರೆದಿದ್ದಳು. ಪತಿ ಪ್ರತಿದಿನ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದನು, ಚಿತ್ರಹಿಂಸೆ ನೀಡುತ್ತಿದ್ದನು. ಆತನ ಹಿಂಸೆಗೆ ಬೇಸತ್ತು ಆತ ಮಲಗಿದ್ದಾಗ ಆತನ ಮರ್ಮಾಂಗ ಕತ್ತರಿಸಿದೆ ಎಂದು ತಪ್ಪೊಪ್ಪಿಕೊಂಡಿದ್ದಳು. ಈ ಪ್ರಕರಣ ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಅಲ್ಲದೆ ಪ್ರಕರಣ ಬೆಳಕಿಗೆ ಬಂದಾಗ ಇಡೀ ಅರ್ಜೆಂಟಿನಾವನ್ನು ಬೆಚ್ಚಿಬೀಳಿಸಿತ್ತು.

  • ಮದ್ವೆಯಾದ ಮರುದಿನವೇ ಮನೆಗೆ ಕರ್ಕೊಂಡು ಬಂದು ಮಗಳ ಹತ್ಯೆ

    ಮದ್ವೆಯಾದ ಮರುದಿನವೇ ಮನೆಗೆ ಕರ್ಕೊಂಡು ಬಂದು ಮಗಳ ಹತ್ಯೆ

    -ಪೋಷಕರಿಗೆ ಜೀವಾವಧಿ ಶಿಕ್ಷೆ ಜೊತೆ ದಂಡ

    ಹೈದರಾಬಾದ್: ತಮ್ಮ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದಕ್ಕೆ ಪೋಷಕರೇ ಮಗಳನ್ನು ಮರ್ಯಾದಾ ಹತ್ಯೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ದಂಪತಿಗೆ ಜೀವಾವಧಿ ಶಿಕ್ಷೆ ಮತ್ತು 2,000 ರೂ. ದಂಡವನ್ನು ವಿಧಿಸಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

    ಅಪರಾಧಿ ದಂಪತಿಯನ್ನು ಪಚಲಾ ಹರಿಬಾಬು ಮತ್ತು ಸಾಮ್ರಾಜ್ಯಂ ಎಂದು ಗುರುತಿಸಲಾಗಿದೆ. ಇವರು ಗುಂಟೂರು ಜಿಲ್ಲೆಯ ಗೋಗುಲಮುಡಿ ಗ್ರಾಮದ ನಿವಾಸಿಗಳಾಗಿದ್ದು, ಈ ದಂಪತಿಗೆ ದೀಪ್ತಿ (26) ಮತ್ತು ಶ್ರುತಿ ಇಬ್ಬರು ಹೆಣ್ಣು ಮಕ್ಕಳಿದ್ದರು. ಆದರೆ ದೀಪ್ತಿ ಪ್ರೀತಿಸಿ ಮದುವೆಯಾಗಿದ್ದಕ್ಕೆ ಪೋಷಕರೇ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ದೀಪ್ತಿ ಹೈದರಾಬಾದ್‍ನ ಎಚ್‍ಸಿಎಲ್‍ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಗೋದಾವರಿ ಜಿಲ್ಲೆಯ ರಾಜೋಮಂಗಿ ಗ್ರಾಮದ ಅನಂತಪಲ್ಲಿ ಕಿರಣಕುಮಾರ್ ನನ್ನು ಪ್ರೀತಿಸುತ್ತಿದ್ದಳು. ಕಿರಣ್‍ಕುಮಾರ್ ಮತ್ತು ದೀಪ್ತಿ ಬೇರೆ ಬೇರೆ ಜಾತಿಯಾಗಿದ್ದರಿಂದ ತಮ್ಮ ಮದುವೆಗೆ ಪೋಷಕರು ಒಪ್ಪುವುದಿಲ್ಲವೆಂದು ಯಾರಿಗೂ ತಿಳಿಸದಂತೆ ಮದುವೆಯಾಗಲು ನಿರ್ಧರಿಸಿದ್ದರು. ಅದೇ ರೀತಿ ದೀಪ್ತಿ ಮತ್ತು ಕಿರಣ್ ಹೈದರಾಬಾದ್‍ನ ಆರ್ಯ ಸಮಾಜದಲ್ಲಿ ಪೋಷಕರ ವಿರೋಧದ ನಡುವೆ ಮದುವೆಯಾಗಿದ್ದರು.

    ದೀಪ್ತಿ ಮತ್ತು ಕಿರಣ್ ತಮ್ಮ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು ಎಂಬ ವಿಚಾರ ಪೋಷಕರಿಗೆ ತಿಳಿದಿದೆ. ಇದರಿಂದ ಕೋಪಗೊಂಡ ಪೋಷಕರು ಮಗಳನ್ನೇ ಕೊಲೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು. ಅದರಂತೆಯೇ ಮದುವೆಯಾದ ಮರುದಿನವೇ ಪೋಷಕರು ದಂಪತಿಯನ್ನು ಭೇಟಿಯಾಗಿದ್ದು, ನವಜೋಡಿಯನ್ನು ಗುಂಟೂರಿಗೆ ಕರೆದುಕೊಂಡು ಬಂದಿದ್ದಾರೆ. ಪೂಜೆ ಮಾಡುವ ನೆಪದಲ್ಲಿ ಪೋಷಕರು ತಮ್ಮೊಂದಿಗೆ ಮಗಳು ಮಾತ್ರ ಮನೆಗೆ ಬರಬೇಕೆಂದು ಹೇಳಿ ಕಿರಣ್‍ನನ್ನು ಹೋಟೆಲ್‍ನಲ್ಲಿ ಬಿಟ್ಟು ದೀಪ್ತಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಗಳನ್ನು ಮನೆಗೆ ಕರೆದುಕೊಂಡು ಬಂದ ಕೂಡಲೇ ಆಕೆಯನ್ನು ಮಂಚಕ್ಕೆ ಕಟ್ಟಿದ್ದಾರೆ. ತಾಯಿ ದೀಪ್ತಿಯ ಕೈಗಳನ್ನು ಹಿಡಿದುಕೊಂಡಿದ್ದಾಳೆ. ಆಗ ತಂದೆ ಹರಿಬಾಬು ದುಪ್ಪಟ್ಟದಿಂದ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇತ್ತ ಪತಿ ಕಿರಣ್ ಕುಮಾರ್ ಪತ್ನಿಯನ್ನು ಹುಡುಕಿಕೊಂಡು ದೀಪ್ತಿ ಮನೆಗೆ ಬಂದಿದ್ದಾನೆ. ಆಗ ಪತ್ನಿಯ ಕೊಲೆಯ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಕಿರಣ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

    ದೂರು ದಾಖಲಿಸಿಕೊಂಡ ಪೊಲೀಸರು ದಂಪತಿಯನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಆಗ ತಾವೇ ಮಗಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯಕ್ಕೆ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ದಂಪತಿಗೆ ಜೀವಾವಧಿ ಶಿಕ್ಷೆ ಮತ್ತು 2,000 ರೂ. ದಂಡವನ್ನು ವಿಧಿಸಿದೆ.

  • 2 ವರ್ಷ, 100 ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾ.ರೇಖಾ

    2 ವರ್ಷ, 100 ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾ.ರೇಖಾ

    ಕೋಲಾರ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪಿಗೆ ಜೀವಾವಧಿ ಶಿಕ್ಷೆ, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪಿಗೆ 10 ವರ್ಷ ಜೈಲು, 1 ಲಕ್ಷ ರೂ. ದಂಡ ಹೀಗೆ ಒಂದಲ್ಲ ಎರಡಲ್ಲ ಕೇವಲ ಎರಡು ವರ್ಷಗಳಲ್ಲಿ ಬರೋಬ್ಬರಿ 100 ಪ್ರಕರಣಗಳಲ್ಲಿ ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆ ವಿಧಿಸಿರುವ ಹೆಗ್ಗಳಿಕೆ ಕೋಲಾರ 2ನೇ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಸಲ್ಲುತ್ತದೆ.

    ರಾಜ್ಯದಲ್ಲಿ ಹಾಗೂ ದೇಶದಲ್ಲೇ ಅತಿ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಿರುವ ಕೋಲಾರ 2ನೇ ಜಿಲ್ಲಾ ಸತ್ರನ್ಯಾಯಾಲಯದ ನ್ಯಾಯಾಧೀಶೆ ಬಿ.ಎಸ್.ರೇಖಾ ಅವರು ಕಳೆದ ಎರಡು ವರ್ಷಗಳಲ್ಲಿ 100 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.

    2017 ರಿಂದ 2019ರವರೆಗೆ ನೂರು ಪ್ರಕರಣಗಳಲ್ಲಿ 74 ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕಣಗಳಾದರೆ, 26 ಜಾತಿನಿಂದನೆ ಹಾಗೂ ಕೊಲೆ ಪ್ರಕರಣಗಳಾಗಿವೆ. ಈ 100 ಪ್ರಕರಣಗಳಲ್ಲಿ ನ್ಯಾಯಾಧೀಶೆ ಬಿ.ಎಸ್ ರೇಖಾರವರು ನೀಡಿರುವ ಶಿಕ್ಷೆ ಪ್ರಮಾಣಗಳನ್ನು ನೋಡೋದಾದರೆ, 3 ಪ್ರಕರಣಗಳಲ್ಲಿ ಮರಣ ದಂಡನೆ ಶಿಕ್ಷೆ, 11 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ, 26 ಪ್ರಕರಣಗಳಲ್ಲಿ 10 ವರ್ಷ ಜೈಲು ಶಿಕ್ಷೆ ಮತ್ತು 39 ಪ್ರಕರಣಗಳಲ್ಲಿ 7 ವರ್ಷ ಜೈಲು ಶಿಕ್ಷೆ, 21 ಪ್ರಕರಣಗಳಲ್ಲಿ 5 ವರ್ಷಕ್ಕಿಂತ ಕಡಿಮೆ ಶಿಕ್ಷೆ ನೀಡಲಾಗಿದೆ ಎಂದು ಸರ್ಕಾರಿ ವಕೀಲ ಮುನಿಸ್ವಾಮಿ ಗೌಡ ಹೇಳಿದ್ದಾರೆ.

    ಇದರ ಜೊತೆಗೆ ವಿಶೇಷವಾಗಿ ಆಗಸ್ಟ್ 1 2018 ರಂದು ಮಾಲೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ವಿಶೇಷ ಕಾಳಜಿ ವಹಿಸಿದ ನ್ಯಾಯಾಲಯ ಕೇವಲ 45 ದಿನಗಳಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಇತಿಹಾಸ ಕೂಡ ಇದೆ. ಈ ನ್ಯಾಯಾಲಯದಲ್ಲಿ ಅತ್ಯಾಚಾರಿಗಳಿಗೆ ನಿರ್ದಾಕ್ಷಿಣ್ಯವಾಗಿ ಶಿಕ್ಷೆ ವಿಧಿಸಿದ ನ್ಯಾಯಾಧೀಶರಾದ ರೇಖಾ ಅವರು ತಮ್ಮ 100ನೇ ಪ್ರಕರಣದಲ್ಲಿ ಮಂಗಳವಾರ ಶಿಕ್ಷೆ ವಿಧಿಸಿದ್ದು, ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಸಹಕರಿಸಿದ ಒಂದಿಡೀ ಕುಟುಂಬಕ್ಕೆ ಜೈಲು ಶಿಕ್ಷೆ ವಿಧಿಸಿದ್ದಾರೆ.

    ಕೋಲಾರದ ಎರಡನೇ ಜಿಲ್ಲಾಸತ್ರ ನ್ಯಾಯಾಲಯದ ತೀರ್ಪು, ಜಿಲ್ಲೆಯಲ್ಲಿ ಕಾಮುಕರಿಗೆ ಸಿಂಹಸ್ವಪ್ನವಾಗಿದ್ದು ಇಂತಹ ತೀರ್ಪುಗಳಿಂದ ಜಾಗೃತರಾಗಿರುವ ಕಾಮುಕರು ಅಪರಾಧ ಕೃತ್ಯ ಎಸಗಲು ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಅತ್ಯಾಚಾರ, ಕೊಲೆ ಹಾಗೂ ಜಾತಿನಿಂದನೆ ಪ್ರಕರಣಗಳು ಕ್ರಮೇಣ ಕಡಿಮೆಯಾಗಿದೆ. ನ್ಯಾಯ ದೇವತೆಗೆ ಹಾಗೂ ನ್ಯಾಯಾಧೀಶರ ತೀರ್ಪಿಗೆ ಜಿಲ್ಲಾಡಳಿತ ಕೂಡ ಶ್ಲಾಘನೆ ವ್ಯಕ್ತಪಡಿಸಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ.

  • ವಿಮಾನದಲ್ಲಿ ಮಲಗಿದ್ದ ಯುವತಿಯ ಒಳಉಡುಪಿಗೆ ಕೈಹಾಕಿ ಜೈಲು ಸೇರಿದ ಭಾರತೀಯ

    ವಿಮಾನದಲ್ಲಿ ಮಲಗಿದ್ದ ಯುವತಿಯ ಒಳಉಡುಪಿಗೆ ಕೈಹಾಕಿ ಜೈಲು ಸೇರಿದ ಭಾರತೀಯ

    ಲಂಡನ್: ಭಾರತೀಯ ಮೂಲದ ವ್ಯಕ್ತಿಯೊಬ್ಬ ವಿಮಾನದಲ್ಲಿ ಪ್ರಯಾಣ ಮಾಡುವಾಗ ಯುವತಿಯೊಬ್ಬಳ ಒಳಉಡುಪಿಗೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಒಂದು ವರ್ಷದ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

    ಅಪರಾಧಿಯನ್ನು ಹರ್ದೀಪ್ ಸಿಂಗ್ (36) ಎಂದು ಗುರುತಿಸಲಾಗಿದ್ದು, ಈತ ತನ್ನ ಒಂದು ವರ್ಷದ ಶಿಕ್ಷೆ ಪೂರ್ಣಗೊಂಡ ನಂತರ ಭಾರತಕ್ಕೆ ಮರಳಲಿದ್ದಾನೆ.

    ಹರ್ದೀಪ್ ಸಿಂಗ್ ಇಂಗ್ಲೆಂಡಿಗೆ ಪ್ರವಾಸಿ ವೀಸಾದಲ್ಲಿ ಪ್ರಯಾಣ ಮಾಡುತ್ತಿದ್ದನು. ವಿಮಾನ ಹಾರಾಟದ ಸಂದರ್ಭದಲ್ಲಿ ತನ್ನ ಪಕ್ಕದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದ ಯುವತಿಗೆ ಸುರ್ದೀಘವಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪ ಈತನ ಮೇಲಿತ್ತು. ಮ್ಯಾಂಚೆಸ್ಟರ್ ನ ಮಿನ್ಷಲ್ ಸ್ಟ್ರೀಟ್ ಕ್ರೌನ್ ಕೋರ್ಟ್ ನಲ್ಲಿ ಈ ಪ್ರಕರಣದ ವಿಚಾರಣೆ ನಡೆದು ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ.

    ವಿಮಾನ ಹಾರಾಟದ ಆರಂಭದಿಂದಲೂ ಸಿಂಗ್‍ ಅಸಭ್ಯವಾಗಿ ವರ್ತಿಸುತ್ತಿದ್ದನು. ಸಿಂಗ್ ಯುವತಿಯ ಖಾಸಗಿ ಅಂಗಗಳನ್ನು ಮುಟ್ಟಿ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದನು. ಆದರೆ ಯುವತಿ ಈತನ ಜೊತೆ ಮಾತನಾಡದೇ ವಿರೋಧಿಸಿದ್ದಳು. ಇದರಿಂದ ಸಿಂಗ್ ಎಲ್ಲರೂ ಮಲಗುವರೆಗೂ ಕಾದು ಈ ರೀತಿಯ ಕೃತ್ಯವೆಸಗಿದ್ದಾನೆ ಎಂದು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸ್ ವಿಮಾನ ನಿಲ್ದಾಣದ ಡಿಟೆಕ್ಟಿವ್ ಕಾನ್ಸ್ಟೇಬಲ್ ಕ್ಯಾಥರೀನ್ ಇವಾನ್ಸ್ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಈ ಘಟನೆ ಫೆಬ್ರವರಿ 23 ರಂದು ನಡೆದಿದ್ದು, ಮುಂಬೈನಿಂದ ಮ್ಯಾಂಚೆಸ್ಟರ್ ಗೆ ಹೊರಟಿದ್ದ ವಿಮಾನದಲ್ಲಿ 20 ವರ್ಷದ ಯುವತಿ ಪ್ರಯಾಣಿಸುತ್ತಿದ್ದಳು. ಆಕೆಯ ಪಕ್ಕದ ಸೀಟಿನಲ್ಲಿ ಸಿಂಗ್ ಕುಳಿತಿದ್ದನು. ಮೊದಲಿಗೆ ಸಿಂಗ್ ಯುವತಿಯೊಂದಿಗೆ ಮಾತನಾಡಲು ಇಷ್ಟಪಟ್ಟಿದ್ದನು. ಆದರೆ ಯುವತಿ ಸಿಂಗ್ ಜೊತೆ ಮಾತನಾಡದೇ ಸುಮ್ಮನೆ ಕುಳಿತಿದ್ದಳು. ನಂತರ ಇಬ್ಬರು ಮಾತನಾಡಿದ್ದಾರೆ. ಆದರೆ ಅಪರಾಧಿ ಸಿಂಗ್‍ಗೆ ಸರಿಯಾಗಿ ಇಂಗ್ಲಿಷ್ ಬಾರದ ಕಾರಣ ಯುವತಿಗೆ ಆತನ ಮಾತು ಅರ್ಥವಾಗುತ್ತಿರಲಿಲ್ಲ.

    ಸ್ವಲ್ಪ ಸಮಯದ ನಂತರ ಸಿಂಗ್ ನಮ್ಮ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯನ್ನು ತೋರಿಸಿ ‘ನಿಮ್ಮ ತಾಯಿಯೇ’ ಎಂದು ಕೇಳಿದ್ದಾನೆ. ಆದರೆ ಈ ವೇಳೆ ನಾನು ಕಿವಿಗೆ ಹೆಡ್‍ಫೋನ್ ಹಾಕಿಕೊಂಡು ಸಿನಿಮಾ ನೋಡುತ್ತಿದ್ದೆ. ಹೀಗಾಗಿ ನಾನು ಆತನಿಗೆ ಉತ್ತರಿಸಲಿಲ್ಲ. ಆದರೂ ಆತ ನನ್ನ ಕಿವಿಗೆ ಹಾಕಿದ್ದ ಹೆಡ್‍ಫೋನ್ ತೆಗೆದು ಹಾಕಿ ಮಾತನಾಡಲು ಪ್ರಯತ್ನಿಸಿದ್ದನು” ಎಂದು ಯುವತಿ ವಿಚಾರಣೆ ವೇಳೆ ನಡೆದ ಘಟನೆಯನ್ನು ಜಡ್ಜ್ ಮುಂದೆ ವಿವರಿಸಿದ್ದಾಳೆ.

    ಲೈಂಗಿಕ ಕಿರುಕುಳ:
    ಯುವತಿ ಪ್ರಯಾಣದ ಸಂದರ್ಭದಲ್ಲಿ ವಿಮಾನದಲ್ಲಿದ್ದ ಸೌಲಭ್ಯಗಳನ್ನು ಬಳಸಲು ಮುಂದಾಗಿದ್ದಾಳೆ. ಆದರೆ ಸಿಂಗ್ ಯುವತಿಯನ್ನು ಹೋಗಲು ಬಿಡದೇ ಪಕ್ಕದಲ್ಲಿಯೇ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಾನೆ. ವಿಮಾನದೊಳಗಿನ ದೀಪಗಳನ್ನು ಆರಿಸಿದ ಬಳಿಕ ಎಲ್ಲ ಪ್ರಯಾಣಿಕರಂತೆ ಯುವತಿ ಕೂಡ ಹೊದಿಕೆ ಹೊದ್ದುಕೊಂಡು ಮಲಗಿದ್ದಾಳೆ.

    ನಾನು ಮಲಗುತಿದ್ದಂತೆ ಸಿಂಗ್ ಲೈಂಗಿಕ ಕಿರುಕುಳ ನೀಡಲು ಶುರುಮಾಡಿದ್ದ. ಇದರಿಂದ ತಕ್ಷಣ ಎಚ್ಚರಗೊಂಡ ನಾನು ಆತನನ್ನು ದೂರ ತಳ್ಳಲು ಪ್ರಯತ್ನಿಸಿದೆ. ಆದರೆ ಆತ ನನ್ನ ಬಟ್ಟೆ ಮತ್ತು ಒಳಉಡುಪಿಗೆ ಕೈಹಾಕಿ ಬಲವಂತವಾಗಿ ಕಿಸ್ ಮಾಡಲು ಮುಂದಾಗಿದ್ದ. ಈ ವೇಳೆ ವಿಮಾನದಲ್ಲಿ ಎಲ್ಲರು ಮಲಗಿದ್ದರು. ಆಗ ನಾನು ಆತನಿಗೆ ತನ್ನ ಕೈಗಳನ್ನು ಹಿಂದೆ ತೆಗೆದುಕೊಳ್ಳುವಂತೆ ಪದೇ ಪದೇ ಮನವಿ ಮಾಡಿಕೊಂಡೆ. ನನ್ನ ಮನವಿಯನ್ನು ಕ್ಯಾರೇ ಮಾಡದ ಆತ ಕಿರುಕುಳ ನೀಡುವುದನ್ನು ಮುಂದುವರಿಸಿದ್ದ ಎಂದು ಯುವತಿ ತಿಳಿಸಿದ್ದಾಳೆ.

    ಕೊನೆಗೆ ಯುವತಿ ಆತನಿಂದ ದೂರ ಹೋಗಲು ಪ್ರಯತ್ನಿಸಿದ್ದಾಳೆ. ಆದರೆ ಸಿಂಗ್ ತನ್ನ ಕಾಲನ್ನು ಅಡ್ಡ ಇಟ್ಟು ಹೋಗದಂತೆ ತಡೆದಿದ್ದಾನೆ. ಇದರಿಂದ ಯುವತಿ ಆತನಿಂದ ದೂರ ಹೋಗಲು ಸಾಧ್ಯವಾಗದೇ ಅಲ್ಲೆ ಕುಳಿತಿದ್ದಳು. ಇತ್ತ ಸಹ ಪ್ರಯಾಣಿಕರು ನಿದ್ದೆ ಮಾಡುತ್ತಿದ್ದ ಕಾರಣ ಆಕೆಯ ಸಹಾಯಕ್ಕೆ ಯಾರು ಬಂದಿರಲಿಲ್ಲ. ಈ ವೇಳೆ ಯಾವ ಕ್ಯಾಬಿನ್ ಸಿಬ್ಬಂದಿಯೂ ಯುವತಿಗೆ ಕಾಣಲಿಲ್ಲ. ಕೊನೆಗೆ ಸುಮಾರು 15 ನಿಮಿಷದವರೆಗೂ ಆತನ ಕಿರುಕುಳ ನೀಡಿದ್ದಾನೆ. ನಂತರ ಯುವತಿ ಧೈರ್ಯ ಮಾಡಿ ಆತನಿಂದ ಬಿಡಿಸಿಕೊಂಡು ಓಡಿಬಂದು ವಿಮಾನ ಸಿಬ್ಬಂದಿಗೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ತಕ್ಷಣ ಸಿಂಬ್ಬಂದಿ ಮ್ಯಾಂಚೆಸ್ಟರ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ವಿಮಾನ ಲ್ಯಾಂಡಿಂಗ್ ಮೊದಲೇ ಬಂದು ಆತನಿಗಾಗಿ ಕಾಯುತ್ತಿದ್ದರು. ನಂತರ ವಿಮಾನದಿಂದ ಇಳಿಯುತ್ತಿದ್ದಂತೆ ಪೊಲೀಸರು ಆತನನ್ನು ವಶ ಪಡಿಸಿಕೊಂಡಿದ್ದರು. ಮೊದಲು ಸಿಂಗ್ ತನ್ನ ಮೇಲೆ ಮಾಡಿದ ಆರೋಪವನ್ನು ನಿರಾಕರಿಸಿದ್ದ. ಆದರೆ ಕೋರ್ಟ್ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದು, ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

  • ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್‍ವಾಡಿಯಾಗೆ ಜೈಲು ಶಿಕ್ಷೆ

    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್‍ವಾಡಿಯಾಗೆ ಜೈಲು ಶಿಕ್ಷೆ

    ನವದೆಹಲಿ: ಉದ್ಯಮಿ ಹಾಗೂ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ತಂಡದ ಸಹ ಮಾಲೀಕರಾಗಿರುವ ನೆಸ್ ವಾಡಿಯಾ ಅವರಿಗೆ ಜಪಾನ್ ಕೋರ್ಟ್ 2 ವರ್ಷ ಜೈಲಿ ಶಿಕ್ಷೆ ವಿಧಿಸಿದೆ.

    ನೆಸ್ ವಾಡಿಯಾ ಮಾದಕ ವಸ್ತು ಸಾಗಾಣೆ ಆರೋಪದಲ್ಲಿ ಮಾರ್ಚ್ ನಲ್ಲಿ ಉತ್ತರ ಜಪಾನಿನ ದ್ವೀಪದ ಹೊಕ್ಕೈಹೋಡ ಚಿಟೋಸ್ ವಿಮಾನ ನಿಲ್ದಾಣದಲ್ಲಿ ಬಂಧನವಾಗಿದ್ದರು. ಈ ಸಂದರ್ಭದಲ್ಲಿ ಅವರ ಜೇಬಿನಲ್ಲಿ ಸುಮಾರು 25 ಗ್ರಾಂ ಗಾಂಜಾ ಪತ್ತೆಯಾಗಿತ್ತು.

    ಈ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, ತಮ್ಮ ಬಳಿ ಇದ್ದ ಮಾದಕ ವಸ್ತು ವೈಯಕ್ತಿಕ ಬಳಕೆಗೆ ಎಂದು ವಾಡಿಯಾ ಹೇಳಿಕೆ ನೀಡಿದ್ದರು. ನಂತರ ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ಸಪ್ಪೊರೊ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

    ವಾಡಿಯಾ ಸಂಸ್ಥೆ ಭಾರತ ಬಹುದೊಡ್ಡ ಉದ್ಯಮ ಸಂಸ್ಥೆಯಾಗಿದ್ದು, 47 ವರ್ಷದ ನೆಸ್ ವಾಡಿಯಾ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. 2014ರ ಜೂನ್ ಐಪಿಎಲ್ ಟೂರ್ನಿಯ ವೇಳೆ ಪ್ರೀತಿ ಜಿಂಟಾ ನೆಸ್ ವಾಡಿಯಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯದ ವೇಳೆ ತಮ್ಮ ಮೇಲೆ ವಾಡಿಯಾ ಹಲ್ಲೆ ನಡೆಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

    2020ರ ಟೋಕಿಯೋ ಒಲಂಪಿಕ್ಸ್ ಹಿನ್ನೆಲೆಯಲ್ಲಿ ಜಪಾನ್ ಮಾದಕ ವಸ್ತುಗಳ ಸಾಗಾಣೆ ಮಾಡುವವರ ವಿರುದ್ಧ ಕಠಿಣ ನಿಯಮಗಳನ್ನು ಜಾರಿ ಮಾಡಿದೆ.