Tag: ಶಿಕ್ಷೆ

  • ದ್ವಿತೀಯ ದರ್ಜೆ ಸಹಾಯಕನಿಗೆ 2 ಕೋಟಿ ದಂಡ, 6 ವರ್ಷ ಜೈಲು ಶಿಕ್ಷೆ

    ದ್ವಿತೀಯ ದರ್ಜೆ ಸಹಾಯಕನಿಗೆ 2 ಕೋಟಿ ದಂಡ, 6 ವರ್ಷ ಜೈಲು ಶಿಕ್ಷೆ

    – ದುಡ್ಡಿನಾಸೆಗೆ ಹೆಂಡ್ತಿ ಕೊಂದು ಜೈಲಲ್ಲಿದ್ದಾನೆ

    ಚಿಕ್ಕಮಗಳೂರು: ಮೇಲಾಧಿಕಾರಿಯ ನಕಲಿ ಸಹಿ ಮಾಡಿ ಸರ್ಕಾರದ 1.29 ಕೋಟಿಗೂ ಅಧಿಕ ಹಣವನ್ನ ಗುಳುಂ ಮಾಡಿದ್ದ ದ್ವಿತೀಯ ದರ್ಜೆ ಸಹಾಯಕನಿಗೆ ಜಿಲ್ಲೆಯ ತರೀಕೆರೆ ತಾಲೂಕಿನ ಜೆ.ಎಂ.ಎಫ್.ಸಿ. ನ್ಯಾಯಾಲಯ ಎರಡು ಕೋಟಿ ದಂಡ ಹಾಗೂ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

    ಶಿವಮೊಗ್ಗ ಮೂಲದ ಮೋಹನ್‍ನಿಗೆ ಶಿಕ್ಷೆ ವಿಧಿಸಲಾಗಿದೆ. 2009ರಲ್ಲಿ ತರೀಕೆರೆ ತಾಲೂಕಿನ ಅರಣ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಅಧಿಕಾರಿಗಳ ಸಹಿಯನ್ನ ನಕಲಿ ಮಾಡಿ 1 ಕೋಟಿ 29 ಲಕ್ಷ 8 ಸಾವಿರದ 451 ರೂಪಾಯಿ ಹಣವನ್ನ ವಂಚಿಸಿ ಮೋಸ ಮಾಡಿದ್ದನು. ಈ ಹಣವನ್ನ ತನ್ನ ಹೆಂಡತಿ ಅಕೌಂಟ್‍ಗೆ ಟ್ರಾನ್ಸ್ ಫರ್ ಮಾಡಿದ್ದ.

    ಪತ್ನಿ ಸರ್ಕಾರದ ಹಣವನ್ನ ಹೀಗೆ ದುರುಪಯೋಗ ಮಾಡಿಕೊಳ್ಳಬಾರದೆಂದು ಪತಿಯ ವಿರುದ್ಧವೇ ತಿರುಗಿ ಬಿದ್ದಿದ್ದರು. ಆದರೆ ಸರ್ಕಾರದ ಹಣದ ಆಸೆಗೆ ಪತ್ನಿಯ ಕೊಲೆ ಮಾಡಿದ್ದನು. ಮೋಹನ್ ಪತ್ನಿಯನ್ನ ಕೊಲೆ ಮಾಡಿದ್ದ ಕೇಸಲ್ಲಿ ಈಗಾಗಲೇ ಶಿವಮೊಗ್ಗದ ಜೈಲಿನಲ್ಲಿದ್ದಾನೆ. ಯಾವಾಗ ಸರ್ಕಾರದ ಹಣ ದುರುಪಯೋಗವಾಯ್ತೋ ಆಗ ಅರಣ್ಯ ಇಲಾಖೆಯ ಆರ್‌ಎಫ್ಓ ತರೀಕೆರೆ ಠಾಣೆಯಲ್ಲಿ ದೂರು ನೀಡಿದ್ದರು.

    ಪ್ರಕರಣ ದಾಖಲಿಸಿಕೊಂಡ ತರೀಕೆರೆ ಪೊಲೀಸರು ಮೋಹನ್ ಬಗ್ಗೆ ಮಾಹಿತಿ ಕಲೆ ಹಾಕಿದ ಸಬ್ ಇನ್ಸ್‌ಪೆಕ್ಟರ್ ಶರಣಪ್ಪ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನಪ್ಪ ಆರೋಪಿ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದರು. 2009 ರಿಂದ ಸುದೀರ್ಘ ವಿಚಾರಣೆ ನಡೆಸಿದ ತರೀಕೆರೆ ಜೆಎಂಎಫ್‍ಸಿ ನ್ಯಾಯಾಲಯ ಮೋಹನ್ ಗೆ ಎರಡು ಕೋಟಿ ದಂಡ ಹಾಗೂ ಆರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಮೋಹನ್ ಸರ್ಕಾರಕ್ಕೆ ದಂಡದ ರೂಪವಾಗಿ ಎರಡು ಕೋಟಿ ಹಣವನ್ನ ನೀಡದ್ದಿದ್ದರೆ ಮತ್ತೆ ಮೂರು ವರ್ಷಗಳ ಕಾಲ ಹೆಚ್ಚಿನ ಜೈಲು ಶಿಕ್ಷೆ ವಿಧಿಸುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಜೆಎಂಎಫ್‍ಸಿ ನ್ಯಾಯಾಲಯದ ಹಿರಿಯ ಸಿಜೆಎಂಸಿ ನಂಜೇಗೌಡರವರು ಆರೋಪಿಗೆ ಎರಡು ಕೋಟಿ ದಂಡ ಹಾಗೂ ಆರು ವರ್ಷ ಜೈಲು ಶಿಕ್ಷೆಯನ್ನ ಪ್ರಕಟಿಸಿದ್ದಾರೆ.

    ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಗೋವಿಂದರಾಜ್ ಅವರು ವಾದ ಮಂಡಿಸಿದ್ದರು. ಸರ್ಕಾರದ ಕಣ್ಣಿಗೆ ಮಣ್ಣೆರಚಿ ಹಣ ಮಾಡೋ ಭ್ರಷ್ಟ ಅಧಿಕಾರಿಗಳಿಗೆ ಈ ತೀರ್ಪು ಚಳಿ-ಜ್ವರ ತರಿಸುವಂತದ್ದಾಗಿರೋದರಲ್ಲಿ ಯಾವುದೇ ಅನುಮಾನವಿಲ್ಲ. ನಾಲ್ಕು ಜನರಿಗೆ ಇಂತಹ ತೀರ್ಪು ಕೊಟ್ಟರೆ ಉಳಿದವರು ನೆಟ್ಟಗಾಗುತ್ತಾರೆ ಅನ್ನೋದು ಸ್ಥಳೀಯರ ಅಭಿಪ್ರಾಯವಾಗಿದೆ.

  • ಲಾಕ್‍ಡೌನ್ ಉಲ್ಲಂಘನೆ- ಠಾಣೆಯೊಳಗೆ ಸಪ್ನಾ ಚೌಧರಿ ಹಾಡಿಗೆ ಡ್ಯಾನ್ಸ್ ಮಾಡಿಸಿದ ಪೊಲೀಸ್ರು

    ಲಾಕ್‍ಡೌನ್ ಉಲ್ಲಂಘನೆ- ಠಾಣೆಯೊಳಗೆ ಸಪ್ನಾ ಚೌಧರಿ ಹಾಡಿಗೆ ಡ್ಯಾನ್ಸ್ ಮಾಡಿಸಿದ ಪೊಲೀಸ್ರು

    ಲಕ್ನೋ: ಲಾಕ್‍ಡೌನ್ ಉಲ್ಲಂಘನೆ ಮಾಡಿದ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆತಂದು ಆತನ ಕೈಯಲ್ಲಿ ಸಪ್ನಾ ಚೌಧರಿಯ ಹಾಡಿಗೆ ಪೊಲೀಸರು ಡ್ಯಾನ್ಸ್ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಉತ್ತರ ಪ್ರದೇಶದ ಎಟಾವಾ ಜಿಲ್ಲೆಯ ಪೊಲೀಸ್ ಠಾಣೆಯೊಳಗೆ ಈ ಘಟನೆ ನಡೆದಿದೆ. ಈ ವಿಡಿಯೋದಲ್ಲಿ ಹರ್ಯಾಣದ ಸ್ಟಾರ್ ಸಪ್ನಾ ಚೌಧರಿ ನೃತ್ಯ ಮಾಡಿರುವ ಜನಪ್ರಿಯ ಹಾಡಿಗೆ ಯುವಕ ಡ್ಯಾನ್ಸ್ ಮಾಡಿದ್ದು, ಇದನ್ನು ಪೊಲೀಸರು ಸುತ್ತಲು ನಿಂತು ನೋಡುತ್ತಿರುತ್ತಾರೆ. ಜೊತೆಗೆ ಅವರೇ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

    ಪೊಲೀಸ್ ಠಾಣೆಯೊಳಗೆ ಯುವಕ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಪೊಲೀಸರು ಯುವಕನನ್ನು ಯಾಕೆ ಡಾನ್ಸ್ ಮಾಡಿಸಿದ್ದಾರೆ ಎಂಬ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ವರದಿಗಳ ಪ್ರಕಾರ ಆತ ಲಾಕ್‍ಡೌನ್ ನಿಯಮವನ್ನು ಉಲ್ಲಂಘನೆ ಮಾಡಿದ್ದು, ಈ ಕಾರಣದಿಂದ ಪೊಲೀಸರು ಠಾಣೆಗೆ ಕರೆತಂದು ಡ್ಯಾನ್ಸ್ ಮಾಡುವ ಶಿಕ್ಷೆ ನೀಡಿದ್ದಾರೆ ಎಂದು ಹೇಳಲಾಗಿದೆ.

    ಇದರ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಈ ವಿಡಿಯೋ ನಯಾ ಶಹರ್ ಪೊಲೀಸ್ ಠಾಣೆಯಲ್ಲಿ ಮಾಡಲಾಗಿದೆ. ಆ ಪೊಲೀಸ್ ಠಾಣೆಯ ಇನ್ಚಾರ್ಜ್ ಆಫೀಸರ್ ಯುವಕನಿಗೆ ಈ ರೀತಿ ಡ್ಯಾನ್ಸ್ ಮಾಡಲು ಹೇಳಿದ್ದಾರೆ. ಈ ಶಿಕ್ಷೆ ನೀಡಬಾರದಿತ್ತು. ಈಗ ಈ ವಿಡಿಯೋವನ್ನು ಡಿಲೀಟ್ ಮಾಡಿಸಲಾಗಿದೆ. ಜೊತೆಗೆ ಆ ಪೊಲೀಸ್ ಅಧಿಕಾರಿಯನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

  • ಅನಾವಶ್ಯಕವಾಗಿ ಹೊರಬಂದ್ರೆ ಅಂಬುಲೆನ್ಸ್‌ನಲ್ಲಿ ಶಿಕ್ಷೆ: ಪೊಲೀಸರ ಹೊಸ ಪ್ರಯೋಗ

    ಅನಾವಶ್ಯಕವಾಗಿ ಹೊರಬಂದ್ರೆ ಅಂಬುಲೆನ್ಸ್‌ನಲ್ಲಿ ಶಿಕ್ಷೆ: ಪೊಲೀಸರ ಹೊಸ ಪ್ರಯೋಗ

    ರಾಯಚೂರು: ಕೊರೊನಾ ಸೋಂಕಿತ ರೋಗಿಯನ್ನು ಅಂಬುಲೆನ್ಸ್ ನಲ್ಲಿ ಇರಿಸಿ ಅದೇ ವ್ಯಾನಿನಲ್ಲಿ ಅನಗತ್ಯವಾಗಿ ತಿರುಗಾಡುವವರನ್ನು ಹಾಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದೇ ಮಾದರಿಯಲ್ಲಿ ಇಂದು ರಾಯಚೂರು ಜಿಲ್ಲಾ ಪೊಲೀಸರು ಸಹ ಅನಗತ್ಯವಾಗಿ ತಿರುಗಾಡುವವರಿಗೆ ಶಿಕ್ಷೆ ನೀಡಿದ್ದಾರೆ.

    ಗ್ರೀನ್ ಜೋನಿನಲ್ಲಿರುವ ರಾಯಚೂರಿನಲ್ಲಿ ಲಾಕ್‍ಡೌನ್‍ನ್ನು ಒಂದಿಷ್ಟು ಸಡಿಲಿಕೆ ಮಾಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ತ್ರಿಬ್ಬಲ್ ರೈಡ್ ಹೋಗುತ್ತಿದ್ದಾರೆ. ಕೆಲವರು ಅನಾವಶ್ಯಕವಾಗಿ ಹೊರಗಡೆ ತಿರುಗಾಡುತ್ತಿದ್ದರು. ಇಂಥವರನ್ನು ನಗರದ ಚಂದ್ರಮೌಳೇಶ್ವರ ವೃತ್ತ ಹಾಗೂ ಮಹಾತ್ಮಾ ಗಾಂಧಿ ವೃತ್ತದಲ್ಲಿ ಪೊಲೀಸರು ಹಿಡಿದು ಅಂಬುಲೆನ್ಸ್ ನಲ್ಲಿ ಹಾಕಿದ್ದಾರೆ.

    ಜೊತೆಗೆ ಪೊಲೀಸ್ ಸಿಬ್ಬಂದಿಯೇ ರೋಗಿಯಂತೆ ಅಂಬುಲೆನ್ಸ್ ನಲ್ಲಿ ಮಲಗಿ ಹೆದರಿಸುವ ಮೂಲಕ ಅನಗತ್ಯವಾಗಿ ಹೊರಬರುವವರಿಗೆ ಬುದ್ಧಿ ಕಲಿಸಲಾಗುತ್ತಿದೆ. ಅಲ್ಲದೆ ಅಂಬುಲೆನ್ಸ್ ಶಿಕ್ಷೆ ಬಳಿಕ ವಶಕ್ಕೆ ಪಡೆದವರ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಇಡೀ ದಿನ ಠಾಣೆಯಲ್ಲಿ ಕುಳಿತುಕೊಳ್ಳುವ ಶಿಕ್ಷೆ ನೀಡಿದ್ದಾರೆ. ಕೊರೊನಾ ತಡೆಗಾಗಿ ಸಾಮಾಜಿಕ ಅಂತರಕ್ಕಾಗಿ ಜನರು ಹೊರಬರದಂತೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಜನರು ಸಹ ಸಹಕರಿಸಬೇಕೆಂದು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮನವಿ ಮಾಡಿಕೊಂಡಿದ್ದಾರೆ.

  • ತಿರುಗಾಡ್ತಿದ್ದವರಿಗೆ ಗೋಣಿಚೀಲದ ಕಿಟ್ ಹಾಕಿಸಿದ ಪೊಲೀಸರು

    ತಿರುಗಾಡ್ತಿದ್ದವರಿಗೆ ಗೋಣಿಚೀಲದ ಕಿಟ್ ಹಾಕಿಸಿದ ಪೊಲೀಸರು

    ಕೊಪ್ಪಳ: ಲಾಕ್‍ಡೌನ್ ಶುರುವಾದಗಿನಿಂದ ಪೊಲೀಸರು ಹಗಲಿರುಳು ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೂ ಕೆಲವರು ಅನಾವಶ್ಯಕವಾಗಿ ರಸ್ತೆಗೆ ಬಂದು ತಿರುಗಾಡುತ್ತಿದ್ದರು. ಅಂತವರಿಗೆ ಕೊಪ್ಪಳ ಪೊಲೀಸರು ವಿನೂತನ ಶಿಕ್ಷೆ ನೀಡಿದ್ದಾರೆ.

    ಪೊಲೀಸರು ಅನಾವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡುತ್ತಿದ್ದ ವಾಹನ ಸವಾರರಿಗೆ ಗೋಣಿ ಚೀಲದ ಪಿಪಿಇ ಕಿಟ್ ಹಾಕಿಸಿದ್ದಾರೆ. ಈ ಮೂಲಕ ಕೊಪ್ಪಳ ನಗರ ಠಾಣಾ ಪೊಲೀಸರು ವಿಭಿನ್ನ ರೀತಿಯಲ್ಲಿ ಕೊರೊನಾ ವೈರಸ್ ಜಾಗೃತಿ ಮೂಡಿಸಿದ್ದಾರೆ.

    ಭಾರತ ಲಾಕ್‍ಡೌನ್ ನಡುವೆಯೂ ವಾಹನ ಸವಾರರು ಅನಾವಶ್ಯಕವಾಗಿ ತಿರುಗಾಡುತ್ತಿದ್ದರು. ಈ ಹಿಂದೆ ಹಲವು ಬಾರಿ ಪೊಲೀಸರು ಮನೆಯಿಂದ ಹೊರಗೆ ಬಂದು ತಿರುಗಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ಪೂಜೆ ಮಾಡಿ, ಮಂಗಳಮುಖಿಯರಿಂದ ರಾಖಿ ಕಟ್ಟಿಸಿದ್ದರು. ಆದರೂ ವಾಹನ ಸವಾರರು ಪೊಲೀಸರ ಮಾತಿಗೆ ಕ್ಯಾರೆ ಎನ್ನುತ್ತಿರಲಿಲ್ಲ. ಹೀಗಾಗಿ ಪೊಲೀಸರು ಇಂದು ವಿನೂತವಾಗಿ ಗೋಣಿ ಚೀಲದ ಪಿಪಿಇ ಕಿಟ್ ಹಾಕಿಸಿದ್ದಾರು.

    ಗೋಣಿ ಚೀಲದಿಂದ ಮಾಡಿದ ಮಾದರಿ ಪಿಪಿಇ ಕಿಟ್ ಹಾಕಿಸಿದ್ದರು. ಗೋಣಿ ಚೀಲದ ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಕಿಸಿದ್ದರು. ನಂತರ ಅನಾವಶ್ಯಕವಾಗಿ ತಿರುಗಾಡುವವವರಿಗೆ ಪಿಪಿಇ ಕಿಟ್ ಹಾಕಿಕೊಂಡವರು ತಿಳಿ ಹೇಳಿದ್ದಾರೆ.

  • ಸಮೋಸಾ ಬೇಕೆಂದು ಹಠ ಮಾಡಿದವನಿಗೆ ಚರಂಡಿ ಸ್ಚಚ್ಛ ಮಾಡೋ ಶಿಕ್ಷೆ

    ಸಮೋಸಾ ಬೇಕೆಂದು ಹಠ ಮಾಡಿದವನಿಗೆ ಚರಂಡಿ ಸ್ಚಚ್ಛ ಮಾಡೋ ಶಿಕ್ಷೆ

    – ಸಮೋಸಾಕ್ಕಾಗಿ 4 ಬಾರಿ ಹೆಲ್ಪ್‌ಲೈನ್‌ಗೆ ಕರೆ

    ಲಕ್ನೋ: ಇಡೀ ದೇಶವೇ ಲಾಕ್‍ಡೌನ್ ಮೂಲಕ ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಉತ್ತರ ಪ್ರದೇಶ ಸರ್ಕಾರ ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಗೆ ತುರ್ತು ಸಹಾಯವಾಣಿ ಸ್ಥಾಪಿಸಿದೆ. ಆದರೆ ವ್ಯಕ್ತಿಯೊಬ್ಬ ಕೋವಿಡ್-19 ಸಹಾಯವಾಣಿಗೆ ಕರೆ ಮಾಡಿ ಸಮೋಸಾ ಕೇಳುವ ಮೂಲಕ ಅಪಹಾಸ್ಯ ಮಾಡಿದ್ದಾನೆ.

    ರಾಂಪುರ ಜಿಲ್ಲೆಯ ವ್ಯಕ್ತಿಯೊಬ್ಬ ಕೋವಿಡ್-19 ಹೆಲ್ಪ್‍ಲೈನ್‍ಗೆ ಕರೆ ಮಾಡಿ ಸಮೋಸಾ ಬೇಕೆಂದು ಕೇಳಿದ್ದಾನೆ. ಅಧಿಕಾರಿಗಳು ಎಚ್ಚರಿಕೆ ಕೊಟ್ಟು ಸುಮ್ಮನಾಗಿದ್ದಾರೆ. ಆದರೆ ಆತ ಸತತ ನಾಲ್ಕು ಬಾರಿ ಈ ನಂಬರ್‌ಗೆ ಫೋನ್ ಮಾಡಿ ತನಗೆ ತುರ್ತಾಗಿ ಸಮೋಸಾ ತಂದುಕೊಡಬೇಕು ಎಂದು ಹಠ ಮಾಡಿದ್ದಾನೆ. ಕೊನೆಗೆ ಅಧಿಕಾರಿಗಳು ಅವನಿಗೆ ಸಮೋಸಾ ಕೊಡಲು ನಿರ್ಧರಿಸಿದ್ದರು.

    ಈ ಬಗ್ಗೆ ರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಂಜನೇಯ ಕುಮಾರ್ ಸಿಂಗ್ ಅವರು ಟ್ವಿಟ್ಟರಿನಲ್ಲಿ ತಿಳಿಸಿದ್ದಾರೆ. “ವ್ಯಕ್ತಿಯೊಬ್ಬ ಸಹಾಯವಾಣಿಗೆ ಫೋನ್ ಮಾಡಿ ಸಮೋಸಾ ಕೇಳಿದ್ದನು. ನಾವು ಆ ವ್ಯಕ್ತಿಗೆ ಎಚ್ಚರಿಕೆ ಕೂಡ ನೀಡಿದ್ದೆವು. ಆದರೆ ಆತ ಪದೇ ಪದೇ ಫೋನ್ ಮಾಡಿ ಸಮೋಸಾ ಬೇಕೆಂದು ಹಠ ಮಾಡಿದ್ದನು. ಕೊನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪೊಲೀಸರ ಜೊತೆ ಆತನಿಗೆ ಸಮೋಸಾ ತೆಗೆದುಕೊಂಡು ಹೋಗಿದ್ದಾರೆ. ನಂತರ ಆತನಿಗೆ ಚರಂಡಿ ಸ್ವಚ್ಛಗೊಳಿಸುವ ಶಿಕ್ಷೆ ನೀಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

    ಸಮೋಸಾದ ಜೊತೆ ಪೊಲೀಸರನ್ನು ಕಂಡು ವ್ಯಕ್ತಿ ಕ್ಷಮೆ ಕೇಳಲು ಮುಂದಾಗಿದ್ದಾನೆ. ಆದರೆ ಸಹಾಯವಾಣಿಗೆ ಫೋನ್ ಮಾಡಿ ತೊಂದರೆ ಕೊಟ್ಟಿದ್ದಕ್ಕೆ, ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಕೆಲಸವನ್ನೆಲ್ಲಾ ಬಿಟ್ಟು ಈತನಿಗೆ ಸಮೋಸಾ ತಂದು ಕೊಟ್ಟಿದ್ದಕ್ಕೆ ಕೋಪದಿಂದ ಆತನಿಗೆ ಚರಂಡಿ ಸ್ವಚ್ಛ ಮಾಡುವ ಶಿಕ್ಷೆ ನೀಡಿದ್ದನು. ಚರಂಡಿ ಸ್ವಚ್ಛಗೊಳಿಸಿ ಬಳಿಕ ಅಧಿಕಾರಿಗಳ ಕ್ಷಮೆ ಕೇಳಿದ್ದಾನೆ ಎಂದು ಆಂಜನೇಯ ಕುಮಾರ್ ಸಿಂಗ್ ತಿಳಿಸಿದ್ದಾರೆ.

    ಸಿಂಗ್ ಅವರು ವ್ಯಕ್ತಿ ಚರಂಡಿ ಸ್ಚಚ್ಛ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದೀಗ ಆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಧಿಕಾರಿಗಳ ಕ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ವಿಭೂತಿ ಹಚ್ಚಿ, ಊದಿನ ಕಡ್ಡಿ ಬೆಳಗಿ ಪೊಲೀಸರಿಂದ ಪೂಜೆ

    ವಿಭೂತಿ ಹಚ್ಚಿ, ಊದಿನ ಕಡ್ಡಿ ಬೆಳಗಿ ಪೊಲೀಸರಿಂದ ಪೂಜೆ

    – ಲಾಕ್‍ಡೌನ್ ಉಲ್ಲಂಘಿಸಿದವರಿಗೆ ವಿನೂತನ ಶಿಕ್ಷೆ

    ವಿಜಯಪುರ: ಇಡೀ ಭಾರತ ದೇಶವೇ ಕೊರೊನಾ ಭೀತಿ ಹಿನ್ನೆಲೆಯಲ್ಲಿ ನೀಡಿದ ಲಾಕ್‍ಡೌನ್‍ಗೆ ಬೆಂಬಲ ನೀಡಿ ಮನೆಯಲ್ಲಿ ಜನರು ಲಾಕ್ ಆಗಿದ್ದಾರೆ. ಆದರೆ ಕೆಲವರು ಮಾಸ್ಕ್ ಧರಿಸದೆ ರಸ್ತೆಯಲ್ಲಿ ಓಡಾಗುತ್ತಿದ್ದಾರೆ. ಇದೇ ರೀತಿ ಕೊರೊನಾ ಎಮರ್ಜೆನ್ಸಿ ಧಿಕ್ಕರಿಸಿದವರಿಗೆ ವಿಜಯಪುರದ ಗಾಂಧಿ ಚೌಕ್ ಪೊಲೀಸರು ವಿಶಿಷ್ಟ ಪಾಠ ಕಲಿಸಿದ್ದಾರೆ.

    ಲಾಕ್‍ಡೌನ್ ಉಲ್ಲಂಘಿಸಿ ಸುಖಾಸುಮ್ಮನೆ ರಸ್ತೆ ಮೇಲೆ ತಿರುಗಾಡುವವರಿಗೆ ಪೊಲೀಸರು ಹಣೆಗೆ ವಿಭೂತಿ ಹಚ್ಚಿ, ಊದಿನ ಕಡ್ಡಿಯಿಂದ ಪೂಜೆ ಮಾಡುತ್ತಿದ್ದಾರೆ. ಗಾಂಧಿಚೌಕ ಪೊಲೀಸ್ ಠಾಣಾ ಸಿಪಿಐ ರವೀಂದ್ರ ನಾಯ್ಕೊಡಿ ಹಾಗೂ ಸಂಚಾರಿ ಪಿಎಸ್.ಐ ಆರೀಫ್ ಮುಶ್ರಪುರಿ ನೇತೃತ್ವದಲ್ಲಿ ಪೂಜೆ ಕಾರ್ಯ ನಡೆಯುತ್ತಿದೆ.

    ನಗರದ ಗೋದಾವರಿ, ಗಾಂಧಿಚೌಕ್ ಬಳಿ  ಸೇರಿದಂತೆ ಹಲವೆಡೆ ಈ ಕಾರ್ಯ ನಡೆಯುತ್ತಿದೆ. ಅಲ್ಲದೆ ಲಾಠಿ ಬೀಸಿದರು ಜನರು ಬಗ್ಗದ ಕಾರಣ ಈ ವಿನೂತನ ಶಿಕ್ಷೆಗೆ ಪೊಲೀಸ್ರು ಮುಂದಾಗಿದ್ದಾರೆ.

    ಪೂಜೆ ನಂತರ ಮುಂದಿನ ಬಾರಿ ಲಾಕ್‍ಡೌನ್ ಉಲ್ಲಂಘಿಸಿದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ವಿಜಯಪುರ ಪೊಲೀಸರ ವಿನೂತ ಪ್ರಯತ್ನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಮನೆಯಿಂದ ಹೊರಬಂದವರಿಗೆ ಕಸಗುಡಿಸೋ ಶಿಕ್ಷೆ

    ಮನೆಯಿಂದ ಹೊರಬಂದವರಿಗೆ ಕಸಗುಡಿಸೋ ಶಿಕ್ಷೆ

    ಕಲಬುರಗಿ: ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದರೂ ಜನರು ಮನೆಯಿಂದ ಹೊರ ಬರುತ್ತಿದ್ದಾರೆ. ಅಂತವರಿಗೆ ಪೊಲೀಸರು ಕೂಡ ಬಸ್ಕಿ ಹೊಡಿಸುವ ಮೂಲಕ ಶಿಕ್ಷೆ ಕೊಟ್ಟಿದ್ದರು. ಇದೀಗ ಜಿಲ್ಲೆಯಲ್ಲಿ ಮನೆಯಿಂದ ಹೊರಬಂದವರಿಗೆ ಕಸಗುಡಿಸುವ ಶಿಕ್ಷೆ ಕೊಟ್ಟಿದ್ದಾರೆ.

    ಕೊರೊನಾ ಭೀತಿಯಿಂದ ಲಾಕ್‍ಡೌನ್ ಮಧ್ಯೆಯೂ ಕಲಬುರಗಿಯಲ್ಲಿ ನಿಯಮವನ್ನು ಬ್ರೇಕ್ ಮಾಡಿ ವಾಹನ ಸವಾರರು ಓಡಾಡುತ್ತಿದ್ದರು. ಅಂತವರಿಗೆ ಖಾಕಿ ಪಡೆ ಸಖತ್ ಟ್ರೀಟ್ ಮೆಂಟ್ ಕೊಟ್ಟಿದೆ. ಮನೆಯಿಂದ ಹೊರ ಬಂದ ಬೈಕ್ ಸವಾರರಿಗೆ ರಸ್ತೆ ಕುಸಗುಡಿಸಿ ಶಿಕ್ಷೆಯನ್ನು ಪೊಲೀಸರು ನೀಡಿದ್ದಾರೆ.

    ನಗರದ ಪ್ರಕಾಶ್ ಏಶಿಯನ್ ಮಾಲ್ ವೃತ್ತದಲ್ಲಿ ಮನೆಯಿಂದ ಹೊರಬಂದವರಿಗೆ ಪೊಲೀಸರು ಲಾಠಿ ಏಟು ಕೊಟ್ಟಿದ್ದಾರೆ. ಜೊತೆಗೆ ವಿವಿಧ ಬಡಾವಣೆಗಳಲ್ಲಿ ಪುಂಡಪೋಕರಿಗಳನ್ನು ಕರೆದುಕೊಂಡು ಹೋಗಿ ಸ್ವಚ್ಛತೆ ಇಲ್ಲದಿರುವ ಏರಿಯಾಗಳಲ್ಲಿ ಕಸ ಗುಡಿಸಿದ್ದಾರೆ.

    ಕಲಬುರಗಿಯ ಚೌಕ್ ಠಾಣಾ ಸಿಪಿಐ ಶಕೀಲ್ ಚೌಧರಿ ಅವರು ಈ ರೀತಿಯ ಕಸಗುಡಿಸುವ ಶಿಕ್ಷೆಯನ್ನು ನೀಡಿದ್ದರು. ಅಲ್ಲದೇ ಮತ್ತೆ ಮನೆಯಿಂದ ಹೊರ ಬಂದರೆ ಕ್ರಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷೆ ನೀಡಿ ಎಚ್ಚರಿಗೆ ನೀಡಿದ್ದಾರೆ.

  • ಮದ್ವೆಯಾಗೋದಾಗಿ ನಂಬಿಸಿ ರೇಪ್- ದೋಷಿಗೆ 25 ಸಾವಿರ ದಂಡ, 10 ವರ್ಷ ಶಿಕ್ಷೆ

    ಮದ್ವೆಯಾಗೋದಾಗಿ ನಂಬಿಸಿ ರೇಪ್- ದೋಷಿಗೆ 25 ಸಾವಿರ ದಂಡ, 10 ವರ್ಷ ಶಿಕ್ಷೆ

    ಹಾವೇರಿ: ಯುವತಿಯನ್ನು ಅತ್ಯಾಚಾರ ಮಾಡಿದ ಅಪರಾಧಿಗೆ ಜಿಲ್ಲೆಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಾರಾಗೃಹವಾಸ ಶಿಕ್ಷೆ ಮತ್ತು 25 ಸಾವಿರ ದಂಡವನ್ನು ವಿಧಿಸಿದೆ.

    ಮಂಜಪ್ಪ ಭೋಜಪ್ಪ ಚೌಡಣ್ಣನವರ್ ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹವಾಸ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ಹಾವೇರಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ ಕಿಣಿ ಅವರು ತೀರ್ಪು ನೀಡಿದ್ದಾರೆ.

    ಅಪರಾಧಿ ಹಂಸಭಾವಿ ಠಾಣೆಯ ವ್ಯಾಪ್ತಿಯ ಲಿಂಗಾಪುರ ಗ್ರಾಮದ ನಿವಾಸಿಯಾಗಿದ್ದು, ಯುವತಿಯನ್ನು ಮದುವೆಯಾಗುದಾಗಿ ನಂಬಿಸಿ ಬಲವಂತವಾಗಿ ಅತ್ಯಾಚಾರ ಎಸಗಿ ಮೋಸ ಮಾಡಿದ್ದನು. ಅಲ್ಲದೇ ಯುವತಿಯ ಜಾತಿ ನಿಂದನೆ ಮಾಡಿದ್ದನು. ನೊಂದ ಯುವತಿ ಈ ಕುರಿತು ಹಂಸಭಾವಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಠಾಣೆಯ ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನ ಸಲ್ಲಿಸಿದ್ದರು.

    ವಿಚಾರಣೆ ನಡೆಸಿದ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹವಾಸ ಮತ್ತು 25 ಸಾವಿರ ಹಣ ದಂಡ ವಿಧಿಸಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ಪ್ರಕರಣದಲ್ಲಿ ಸಿದ್ದರೋಡ ಎಂ. ಗೆಜ್ಜಿಹಳ್ಳಿ ವಾದ ಮಂಡಿಸಿದ್ದರು.

  • ದೇಶದ ಬದ್ಧತೆಗೆ ಧಕ್ಕೆ ತಂದವರು ದೇಶ ದ್ರೋಹಿಗಳೇ: ಕಾರಜೋಳ

    ದೇಶದ ಬದ್ಧತೆಗೆ ಧಕ್ಕೆ ತಂದವರು ದೇಶ ದ್ರೋಹಿಗಳೇ: ಕಾರಜೋಳ

    ಚಿಕ್ಕೋಡಿ(ಬೆಳಗಾವಿ): ದೇಶದ ಏಕತೆ ಹಾಗೂ ಬದ್ಧತೆಗೆ ಧಕ್ಕೆ ತಂದರೆ ಅವರು ದೇಶ ದ್ರೋಹಿಗಳೇ. ಅವರು ಯಾವುದೇ ಸಮುದಾಯದವರು ಆಗಲಿ, ಅವರು ದೇಶ ದ್ರೋಹಿಗಳೇ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

    ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಬಾಂಬರ್ ಆದಿತ್ಯ ರಾವ್ ಬಗ್ಗೆ ಮಾತನಾಡಿದ ಅವರು, ತಪ್ಪು ಮಾಡಿದವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಲಿದೆ. ಆದಿತ್ಯ ರಾವ್, ಪ್ರಭಾಕರ್ ಭಟ್ ಜೊತೆಗಿನ ಫೋಟೋ ವಿಚಾರವಾಗಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನನ್ನೊಂದಿಗೂ ಬಹಳ ಜನ ಫೋಟೋ ತೆಗೆದುಕೊಂಡಿದ್ದಾರೆ. ಅವರು ಏನಾದರೂ ಮಾಡಿದರೆ ನಾನು ಜವಾಬ್ದಾರಿ ಆಗ್ತೀನಾ ಎಂದು ಪ್ರಶ್ನಿಸಿದರು.

    ಇದೇ ವೇಳೆ ಪ್ರವಾಹ ಸಂತ್ರಸ್ತರ ವಿಚಾರವಾಗಿ ಮಾತನಾಡಿದ ಅವರು, ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡುವ ವಿಚಾರಕ್ಕೆ ಸರ್ಕಾರ ಬದ್ಧವಾಗಿದೆ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂಬ ಆರೋಪ ಸುಳ್ಳು. ಕೇಂದ್ರಕ್ಕಿಂತ ಹೆಚ್ಚುವರಿಯಾಗಿ ಪರಿಹಾರ ಕೊಡುತ್ತಿದ್ದೇವೆ. ಎನ್.ಡಿ.ಆರ್.ಎಫ್ ಮಾನದಂಡಕ್ಕಿಂತ ಹೆಚ್ಚು ಪರಿಹಾರ ಕೊಟ್ಟಿದ್ದೇವೆ. ಕೆಲವೆಡೆ ತಾಂತ್ರಿಕ ತೊಂದರೆಯಿಂದಾಗಿ ಪರಿಹಾರ ವಿಳಂಬ ಆಗಿದೆ. ಆದರೆ ನೆರೆ ಪರಿಹಾರ ವಿಷಯದಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

    ಇದೇ ವೇಳೆ ಪರಿಹಾರ ವಿಚಾರವಾಗಿ ಡಿಸಿಎಂ ಕಾರಿಜೋಳ ಬೆಳಗಾವಿ ಜಿಲ್ಲಾಧಿಕಾರಿಗೆ ಕರೆ ಮಾಡಿ ತಕ್ಷಣವೇ ಬಾಕಿ ಇರುವ ಸಂತ್ರಸ್ತರ ಪರಿಹಾರ ಬಿಡುಗಡೆ ಮಾಡುವಂತೆ ಸೂಚನೆ ನೀಡಿದರು.

  • ಅಪ್ರಾಪ್ತೆಗೆ ಲೈಂಗಿಕ ಕಿರುಕುಳ- ಕಾಮುಕರಿಗೆ 10 ವರ್ಷ ಶಿಕ್ಷೆ, ದಂಡ

    ಅಪ್ರಾಪ್ತೆಗೆ ಲೈಂಗಿಕ ಕಿರುಕುಳ- ಕಾಮುಕರಿಗೆ 10 ವರ್ಷ ಶಿಕ್ಷೆ, ದಂಡ

    – ನೀರು ಕೇಳೋ ನೆಪದಲ್ಲಿ ಲೈಂಗಿಕ ದೌರ್ಜನ್ಯ

    ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗಳಿಬ್ಬರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಒಂದನೇ ಅಧಿಕ ಹಾವೇರಿ ಜಿಲ್ಲಾ ಸತ್ರ (ಪೋಕ್ಸೋ) ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

    ಅಪರಾಧಿಗಳನ್ನು ಫಕ್ಕೀರೇಶ ಈರಪ್ಪ ಕಾಮನಹಳ್ಳಿ ವಾಲಿಕಾರ ಮತ್ತು ಬಸವರಾಜ್ ರಾಮಪ್ಪ ಸಣ್ಣಪ್ಪನವರ್ ಎಂದು ಗುರುತಿಸಲಾಗಿದೆ. ಫಕ್ಕೀರೇಶನಿಗೆ 10 ವರ್ಷಗಳ ಸಜೆ, ಎರಡನೇ ಆರೋಪಿ ಬಸವರಾಜ್ ರಾಮಪ್ಪ ಸಣ್ಣಪ್ಪನವರ ಈತನಿಗೆ 7 ವರ್ಷಗಳ ಶಿಕ್ಷೆ ಹಾಗೂ ದಂಡ ವಿಧಿಸಿ ಒಂದನೇ ಅಧಿಕ ಹಾವೇರಿ ಜಿಲ್ಲಾ ಸತ್ರ (ಪೋಕ್ಸೋ) ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

    ಏನಿದು ಪ್ರಕರಣ?
    ಅಪರಾಧಿಗಳಿಬ್ಬರೂ ಅಪ್ರಾಪ್ತ ಬಾಲಕಿಯನ್ನು ನಿತ್ಯ ಶಾಲೆಗೆ ವಾಹನದಲ್ಲಿ ಬಿಡುವುದು ಹಾಗೂ ಕರೆತರುವುದು ಮಾಡಿ ಪರಿಚಯ ಮಾಡಿಕೊಂಡಿದ್ದರು. ಒಂದು ದಿನ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೀರು ಕೇಳುವ ನೆಪದಲ್ಲಿ ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಕುರಿತಂತೆ ದೂರು ದಾಖಲಾಗಿತ್ತು. ಈ ಸಂಬಂಧ ಶಿಗ್ಗಾಂವ ವೃತ್ತ ನಿರೀಕ್ಷಕರು ಅಪರಾಧಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

    ಸದರಿ ಪ್ರಕರಣದ ಸುಧೀರ್ಘ ವಿಚಾರಣೆ ಬಳಿಕ ಒಂದನೇ ಅಧಿಕ ಜಿಲ್ಲಾ ಸತ್ರ (ಪೋಕ್ಸೋ) ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಅಪರಾಧಿಗಳ ಮೇಲಿನ ಆರೋಪಗಳು ರುಜುವಾತಾಗಿದೆ. ಆದ್ದರಿಂದ ಪ್ರಕರಣದ ಒಂದನೇ ಅಪರಾಧಿಗೆ ಫಕ್ಕೀರೇಶ ಈರಪ್ಪ ಕಾಮನಹಳ್ಳಿ ವಾಲಿಕಾರನಿಗೆ ಕಲಂ 376 ಐಪಿಸಿ ಮತ್ತು ಕಲಂ 4 ಮತ್ತು 6 ಪೋಕ್ಸೋ ಕಾಯ್ದೆಯಡಿ 10 ವರ್ಷಗಳ ಸಜೆ ಮತ್ತು 10 ಸಾವಿರ ದಂಡ ವಿಧಿಸಲಾಗಿದೆ.

    ಎರಡನೇ ಆರೋಪಿ ಬಸವರಾಜನಿಗೆ ಏಳು ವರ್ಷ ಸಜೆ ಮತ್ತು 10 ಸಾವಿರ ದಂಡವಿಧಿಸಲಾಗಿದೆ. ಅಲ್ಲದೇ ಸಂತ್ರಸ್ತೆಗೆ 15 ಸಾವಿರ ರೂ. ನೀಡಲು ಕೋರ್ಟ್ ಆದೇಶಿಸಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ (ಪೋಕ್ಸೋ) ವಿಶೇಷ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ವಿನಾಯಕ ಎಸ್.ಪಾಟೀಲ್ ಅವರು ವಾದ ಮಂಡಿಸಿದ್ದರು.