Tag: ಶಿಕ್ಷೆ

  • 15 ದಿನದ 8 ನಾಯಿ ಮರಿಗಳನ್ನು ಕಲ್ಲಿಗೆ ಹೊಡೆದು ಸಾಯಿಸಿದ್ದ ಮಹಿಳೆಗೆ ಕೋರ್ಟ್ ನೀಡಿದ್ದು ಈ ಶಿಕ್ಷೆ

    15 ದಿನದ 8 ನಾಯಿ ಮರಿಗಳನ್ನು ಕಲ್ಲಿಗೆ ಹೊಡೆದು ಸಾಯಿಸಿದ್ದ ಮಹಿಳೆಗೆ ಕೋರ್ಟ್ ನೀಡಿದ್ದು ಈ ಶಿಕ್ಷೆ

    ಬೆಂಗಳೂರು: ನಾಯಿಮರಿಗಳನ್ನು ಹತ್ಯೆಗೈದ ಮಹಿಳೆಗೆ ನ್ಯಾಯಾಲಯ 1 ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ.

    ಪೊನ್ನಮ್ಮ ಶಿಕ್ಷೆಗೆ ಗುರಿಯಾಗಿರುವ ಮಹಿಳೆ. 2016ರ ಮಾರ್ಚ್ 16 ರಂದು 15 ದಿನಗಳ ಎಂಟು ನಾಯಿ ಮರಿಗಳನ್ನು ಮಹಿಳೆ ಕ್ರೂರವಾಗಿ ಹತ್ಯೆ ಮಾಡಿದ್ದಳು. ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಿಹಳ್ಳಿಯಲ್ಲಿ ಈ ಪ್ರಕರಣ ನಡೆದಿದ್ದು, ರಾಜ್ಯಾದ್ಯಂತ ಸುದ್ದಿಯಾಗಿತ್ತು. ಮರಿ ಹಾಕಿದ್ದ ನಾಯಿ ರಾತ್ರಿಯಲ್ಲಾ ಬೋಗಳುತ್ತೆ ಅನ್ನೊ ಕಾರಣಕ್ಕೆ ಹದಿನೈದು ದಿನದ 8 ನಾಯಿ ಮರಿಗಳನ್ನು ಕಲ್ಲಿಗೆ ಹೊಡೆದು ಮಹಿಳೆ ಹತ್ಯೆ ಮಾಡಿದ್ದಳು.

    ಈ ಘಟನೆ ನಡೆದ ಹದಿನೈದು ದಿನಗಳ ಬಳಿಕ ತಾಯಿ ನಾಯಿಯೂ ಸಾವನಪ್ಪಿತ್ತು. ಈ ಕುರಿತು ಸ್ಥಳೀಯರು ನೀಡಿದ ದೂರಿನ ಮೇರೆಗೆ ಕ್ಯೂಪಾ ಪ್ರಾಣಿ ದಯಾ ಸಂಘ ದೂರು ದಾಖಲಿಸಿತ್ತು.

    ಪ್ರಕರಣದ ಬಳಿಕ ಪೀಣ್ಯ ಪೊಲೀಸರು ಪೊನ್ನಮ್ಮ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಆರೋಪಿತ ಮಹಿಳೆಗೆ 45ನೇ ಎಸಿಎಂಎಂ ಕೋರ್ಟ್ 1 ಸಾವಿರ ದಂಡ ಇಲ್ಲವೇ 15 ದಿನ ಜೈಲು ಶಿಕ್ಷೆ ಪ್ರಕಟಿಸಿದೆ. ಸದ್ಯ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

  • ಸೆಕ್ಸ್ ನಂತ್ರ ಗೊತ್ತಾಗಿದ್ದು, ಅವಳು ಮಂಗಳಮುಖಿ-ಕೊನೆಗೆ 119 ಬಾರಿ ಇರಿದು ಕೊಂದ

    ಸೆಕ್ಸ್ ನಂತ್ರ ಗೊತ್ತಾಗಿದ್ದು, ಅವಳು ಮಂಗಳಮುಖಿ-ಕೊನೆಗೆ 119 ಬಾರಿ ಇರಿದು ಕೊಂದ

    ವಾಷಿಂಗ್ಟನ್: ತಾನು ಲೈಂಗಿಕ ಕ್ರಿಯೆ ನಡೆಸಿದ್ದು ಮಂಗಳಮುಖಿಯೊಂದಿಗೆ ತಿಳಿದ ವ್ಯಕ್ತಿ ಕೋಪದಿಂದ ಆಕೆಯನ್ನು ಹರಿತವಾದ ಚಾಕುವಿನಿಂದ ಸುಮಾರು 119 ಬಾರಿ ಇರಿದು ಕೊಲೆ ಮಾಡಿರುವ ಘಟನೆ ಅಮೇರಿಕಾದಲ್ಲಿ ನಡೆದಿದೆ.

    ಡೀ ವಿಗಾಂ (25) ಕೊಲೆಯಾದ ಮಂಗಳಮುಖಿ. ಡುವ್ಯಾನ್ ಹಿಕ್ಯಾರಸನ್(55) ಎಂಬಾತನೇ ಮಂಗಳಮುಖಿಯನ್ನು ಕೊಲೆಗೈದ ವ್ಯಕ್ತಿ. ಡೀ ವಿಗಾಂ ಮತ್ತು ಡುವ್ಯಾನ್ ಮಿಸಿಸಿಪ್ಪಿ ನಗರದ ಬೆಸ್ಟ್ ವೆಸ್ಟರ್ನ್ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ದರು. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಕೊನೆಯಲ್ಲಿ ಡೀ ಮೊದಲು ಗಂಡಸು ಎಂಬ ರಹಸ್ಯ ಗೊತ್ತಾಗಿದೆ.

    ತಾನು ಮಂಗಳಮುಖಿ ಎಂಬುದನ್ನು ಡೀ ಮರೆಮಾಚಿದ್ದಳು. ಇದ್ರಿಂದ ಕುಪಿತಗೊಂಡ ಡುವ್ಯಾನ್ ಹರಿತವಾದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಡೀ ಮುಖದ ತುಂಬೆಲ್ಲಾ ಇರಿದಿದ್ದು, 10 ಇಂಚಿನಷ್ಟು ಗಾಯಗಳನ್ನು ಮಾಡಿ ಕೊಲೆಗೈದಿದ್ದಾನೆ.

    ಡೀ ವಿಗಾಂ ನಗರದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದಳು. ಇನ್ನೂ ಡುವ್ಯಾನ್ ಮಾಜಿ ನಾವಿಕನಾಗಿದ್ದನು. ಕೊಲೆಯಾದ ಎರಡು ದಿನಗಳ ನಂತರ ಡುವ್ಯಾನನ್ನು ಕೀಸ್ಲೆರ್ ವಾಯು ಸೇನೆಯ ಬಳಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಕೆಲವು ತಿಂಗಳುಗಳ ಹಿಂದೆ ಕಪಲ್ ಆನ್‍ಲೈನ್‍ನಲ್ಲಿ ಪರಿಚಯಗೊಂಡಿದ್ರು.

    ಎಲ್ಲಾ ಕಳೆದುಕೊಂಡೆ: ಪೊಲೀಸರು ಡುವ್ಯಾನ್‍ನ್ನು ಕೋರ್ಟ್ ಗೆ ಹಾಜರುಪಡಿಸಿದಾಜ ಜಡ್ಜ್ ಮುಂದೆ ನಾನು ಎಲ್ಲಾ ಕಳೆದುಕೊಂಡಿದ್ದೇನೆ ಎಂದು ತಿಳಿಸಿದ್ದಾನೆ. ನಾವಿಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ನಂತರ ಆಕೆ, ತಾನು ಮೊದಲಿಗೆ ಗಂಡು ಮಗುವಾಗಿ ಹುಟ್ಟಿ, ನಂತರ ಮುಂದಿನ ದಿನಗಳಲ್ಲಿ ತಾನು ಹೆಣ್ಣಾಗಿರುವ ವಿಚಾರವನ್ನು ತಿಳಿಸಿದ್ದಾಳೆ ಎಂದಿದ್ದಾನೆ.

    ಕೋರ್ಟ್ ನಲ್ಲಿ ಡುವ್ಯಾನ್ ತಾನು ಮಾಡಿದ ತಪ್ಪಿಗೆ ಡೀ ವಿಗಾಂಳ ಕುಟುಂಬಸ್ಥರಲ್ಲಿಯೂ ಕ್ಷಮೆ ಕೇಳಿದ್ದಾನೆ. ಕೋರ್ಟ್ ಡುವ್ಯಾನ್‍ಗೆ 40 ವರ್ಷಗಳ ಜೈಲು ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.

    ನಾನು ಅವಳ ಜೀವನ ಶೈಲಿಯನ್ನು ಒಪ್ಪಿಕೊಂಡಿರಲಿಲ್ಲ. ನನಗೆ ಅವನ ನೋವು ಮತ್ತು ಆ ಕ್ಷಣದ ಕೋಪ ಅರ್ಥವಾಗುತ್ತದೆ. ಆದ್ರೂ ನಾನು ನನ್ನ ಸಹೋದರನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಡೀ ಸೋದರಿ ಡೇನಿಶಾ ವಿಗಾಂ ಹೇಳಿದ್ದಾರೆ.

  • 16ರ ಪೋರನೊಂದಿಗೆ ಸೆಕ್ಸ್ ಮಾಡಿದ್ದ 27 ವರ್ಷದ ಟೀಚರ್‍ಗೆ ಶಿಕ್ಷೆ ಪ್ರಕಟ

    16ರ ಪೋರನೊಂದಿಗೆ ಸೆಕ್ಸ್ ಮಾಡಿದ್ದ 27 ವರ್ಷದ ಟೀಚರ್‍ಗೆ ಶಿಕ್ಷೆ ಪ್ರಕಟ

    ವಾಷಿಂಗ್ಟನ್: 16ರ ಪೋರನೊಂದಿಗೆ ಸೆಕ್ಸ್ ಮಾಡಿದ್ದ 27 ವರ್ಷದ ಶಿಕ್ಷಕಿಗೆ ಕೋರ್ಟ್ 9 ತಿಂಗಳು ಜೈಲು ಶಿಕ್ಷೆ ಮತ್ತು 2 ವರ್ಷದವರೆಗೆ ವೃತ್ತಿಯ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.

    ಫೆಬ್ರವರಿ ತಿಂಗಳಲ್ಲಿ ನೇಬ್ರಾಸ್ಕಾ ಸಿಟಿಯ 27 ವರ್ಷದ ಇಮಿಲಿ ಲೋಫಿಂಗ್ ತನ್ನ 16 ವರ್ಷದ ವಿದ್ಯಾರ್ಥಿಯೊಂದಿಗೆ ಸೆಕ್ಸ್ ಮಾಡಿದ್ದಳು. ವಿದ್ಯಾರ್ಥಿಯ ತಾಯಿ ನನ್ನ 16 ವರ್ಷದ ಮಗ ಆತನ ಶಾಲೆಯ ಲೋಫಿಯಾ ಎಂಬ ಶಿಕ್ಷಕಿಯ ಜೊತೆ ಲೈಂಗಿಕ ಸಂಪರ್ಕದಲ್ಲಿದ್ದಾನೆ ಎಂದು ವೀಪಿಂಗ್ ವಾಟರ್ ಸ್ಕೂಲ್‍ಗೆ ಮೇಲ್ ಮಾಡಿದ್ರು. ಮೇಲ್ ಬಳಿಕ ಲೋಫಿಯಾಳ ಕಾಮ ಪುರಾಣ ಬೆಳಕಿಗೆ ಬಂದಿತ್ತು.

    ಲೋಫಿಯಾಗೆ ಈಗಾಗಲೇ ಮದುವೆಯಾಗಿದ್ರು, ಚಿಕ್ಕ ಬಾಲಕನೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಳು. ಲೋಫಿಯಾ ನೆಬ್ರಾಸ್ಕ ಸಿಟಿಯ ಮಿಡಲ್ ಸ್ಕೂಲ್‍ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದಳು. ತನ್ನ ರಾಸಲೀಲೆಯ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಲೋಫಿಯಾ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಳು.

    https://twitter.com/BrandonWOWT/status/836423346350866433?ref_src=twsrc%5Etfw&ref_url=http%3A%2F%2Fwww.foxnews.com%2Fus%2F2017%2F07%2F17%2Fjail-for-married-english-teacher-27-who-arranged-tryst-with-16-year-old-boy-for-purpose-sexual-penetration.html

  • 370 ರೂ. ಕಳ್ಳತನ: 29 ವರ್ಷಗಳ ವಿಚಾರಣೆ ಬಳಿಕ ತೀರ್ಪು- ಶಿಕ್ಷೆ ಏನು ಗೊತ್ತಾ?

    370 ರೂ. ಕಳ್ಳತನ: 29 ವರ್ಷಗಳ ವಿಚಾರಣೆ ಬಳಿಕ ತೀರ್ಪು- ಶಿಕ್ಷೆ ಏನು ಗೊತ್ತಾ?

    ಬರೇಲಿ: 1988ರಲ್ಲಿ ರೈಲಿನಲ್ಲಿ ವ್ಯಕ್ತಿಯೊಬ್ಬರಿಂದ 370 ರೂ. ಹಣ ಕದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷಗಳ ವಿಚಾರಣೆ ಬಳಿಕ ಬರೇಲಿ ಕೋರ್ಟ್ ಇಬ್ಬರು ಕಳ್ಳರಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

    ಬರೇಲಿಯ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಮಂಗಳವಾರದಂದು ತೀರ್ಪು ಪ್ರಕಟಿಸಿದ್ದು, ಕಳ್ಳರಿಗೆ 5 ವರ್ಷ ಜೈಲು ಜೊತೆಗೆ ತಲಾ 10 ಸಾವಿರ ರೂ ದಂಡ ವಿಧಿಸಿದೆ. ಈ ಪ್ರಕರಣದ ಮೂರನೇ ಆರೋಪಿ 2004ರಲ್ಲಿ ಸಾವನ್ನಪ್ಪಿದ್ದಾನೆ.

    ಏನಿದು ಪ್ರಕರಣ: 1988ರ ಅಕ್ಟೋಬರ್ 21ರಂದು ಚಂದ್ರ ಪಾಲ್, ಕನ್ಹಯ್ಯ ಲಾಲ್ ಹಾಗು ಸರ್ವೇಶ್ ಎಂಬ ಮೂವರು ರೈಲಿನಲ್ಲಿ ಪ್ರಯಾಣಿಸುತ್ತಿದ್ರು. ಇದೇ ರೈಲಿನಲ್ಲಿ ವಾಜಿದ್ ಹುಸೇನ್ ಎಂಬ ವ್ಯಕ್ತಿ ಕೆಲಸಕ್ಕಾಗಿ ಪಂಜಾಬ್‍ನಿಂದ ಶಹಜಹಾನ್‍ಪುರ್‍ಗೆ ಹೋಗುತ್ತಿದ್ರು. ಈ ಮೂವರು ವಾಜಿದ್ ಅವರಿಗೆ ಟೀನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಕೊಟ್ಟು ನಂತರ ವಾಜಿದ್ ಜೇಬಿನಲ್ಲಿದ್ದ 370 ರೂಪಾಯಿಯನ್ನು ಕದ್ದಿದ್ದರು.

    ಮೂವರ ವಿರುದ್ಧ ಐಪಿಸಿ ಸೆಕ್ಷನ್ 379(ಕಳ್ಳತನ), 328(ವಿಷಯುಕ್ತ ಸಾಮಗ್ರಿಯಿಂದ ಹಾನಿ ಉಂಟುಮಾಡುವುದು) ಹಾಗೂ 411(ಅಪ್ರಾಮಾಣಿಕತೆ) ಅಡಿಯಲ್ಲಿ ಎಫ್‍ಐಆರ್ ದಾಖಲಾಗಿತ್ತು. 2004ರಲ್ಲಿ ಆರೋಪಿ ಪಾಲ್ ಮೃತಪಟ್ಟಿರುವುದು ಗೊತ್ತಾಗಿತ್ತು. ನಂತರ ಕನ್ಹಯ್ಯ ಹಾಗೂ ಸರ್ವೇಶ್ ವಿರುದ್ಧ ಈ ಪ್ರಕರಣವನ್ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಆರೋಪಿ ಪಾಲ್ 16 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಎಂದು ಹೆಚ್ಚುವರಿ ಜಿಲ್ಲಾ ಸರ್ಕಾರಿ ಕೌನ್ಸೆಲ್ ಸುರೇಶ್ ಬಾಬು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಸದ್ಯ 59 ವರ್ಷ ವಯಸ್ಸಿನ ವಾಜಿದ್ ಹುಸೇನ್ ಅವರು 2012ರಲ್ಲಿ ಆರೋಪಿಗಳ ವಿರುದ್ಧ ಹೇಳಿಕೆ ನೀಡಲು ಕೋರ್ಟ್‍ಗೆ ಬಂದಿದ್ದರು. ಕನ್ಹಯ್ಯ ಲಾಲ್ ಹಾಗೂ ಸರ್ವೇಶ್‍ಗೆ ಸುಮಾರು 60 ವರ್ಷ ವಯಸ್ಸಾಗಿದ್ದು ಇಬ್ಬರಿಗೂ ಬೆಳದು ನಿಂತ ಮಕ್ಕಳಿದ್ದಾರೆ. ಯುವಕರಾಗಿದ್ದಾಗ ಏನೋ ತಪ್ಪು ಮಾಡಿಬಿಟ್ಟೆವು ಅಂತ ಈಗ ಪಶ್ಚಾತ್ತಾಪ ಪಡ್ತಿದ್ದಾರೆ. ಈಗ ನೀಡಲಾಗಿರೋ ಜೈಲು ಶಿಕ್ಷೆಗಿಂತ ವಿಚಾರಣೆ ವೇಳೆಯೇ ನಮಗೆ ನಿಜವಾದ ಶಿಕ್ಷೆ ಸಿಕ್ಕಿದೆ ಅಂತ ಹೇಳಿದ್ದಾರೆ.

  • ಖ್ಯಾತ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿಗೆ 21 ತಿಂಗಳ ಜೈಲು ಶಿಕ್ಷೆ

    ಖ್ಯಾತ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿಗೆ 21 ತಿಂಗಳ ಜೈಲು ಶಿಕ್ಷೆ

    ಮ್ಯಾಡ್ರಿಡ್: ತೆರಿಗೆ ವಂಚನೆ ಪ್ರಕರಣದಲ್ಲಿ ಖ್ಯಾತ ಫುಟ್ಪಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಅವರ ಮೇಲ್ಮನವಿ ಅರ್ಜಿಯನ್ನು ಸ್ಪೇನ್ ಸುಪ್ರೀಂ ಕೋರ್ಟ್ ವಜಾಗೊಳಿಸಿ, ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.

    ತೆರಿಗೆ ವಂಚನೆ ಪ್ರಕರಣದ ಸಂಬಂಧ ಅರ್ಜೆಂಟೀನಾದ ಆಟಗಾರ ಮೆಸ್ಸಿ ಹಾಗೂ ತಂಜೆ ಜಾರ್ಜ್ ಅವರಿಗೆ ಸ್ಥಳೀಯ ನ್ಯಾಯಾಲಯ 2016ರ ಜುಲೈ ನಲ್ಲಿ  21 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮೆಸ್ಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

    ಮೆಸ್ಸಿ ಮತ್ತು ಜಾರ್ಜ್ 4.1 ಮಿಲಿಯನ್ ಯುರೋ(ಅಂದಾಜು 29.70 ಕೋಟಿ ರೂ) ಅಧಿಕ ಮೊತ್ತದ ತೆರಿಗೆಯನ್ನು ಸ್ಪೇನಿನಲ್ಲಿ ಬಾಕಿ ಉಳಿಸಿಕೊಂಡಿದ್ದ ಪ್ರಕರಣದಲ್ಲಿ ಈಗ ಶಿಕ್ಷೆಯಾಗಿದೆ.

    ಜೈಲಿಗೆ ಹೋಗಬೇಕಿಲ್ಲ: ದಂಡ ಪಾವತಿಸುವ ಮೂಲಕ ಇವರಿಬ್ಬರಿಗೂ ಜೈಲು ಶಿಕ್ಷೆಯನ್ನು ತಪ್ಪಿಸಿಕೊಳ್ಳುವ ಅವಕಾಶವಿದೆ. 2 ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆಯ ಆದೇಶಕ್ಕೆ ಸ್ಪೇನ್ ದೇಶದಲ್ಲಿ ಈ ವಿಶೇಷ ಸೌಲಭ್ಯವಿದೆ. ಕೋರ್ಟ್ ಆದೇಶದಂತೆ ಮೆಸ್ಸಿ ಅವರು 2 ಮಿಲಿಯನ್ ಯುರೋ(ಅಂದಾಜು 14.48 ಕೋಟಿ ರೂ.), ತಂದೆ 1.5 ಮಿಲಿಯನ್ ಯುರೋ(ಅಂದಾಜು 10.80 ಕೋಟಿ ರೂ.) ಪಾವತಿಸಿ ಜೈಲು ಶಿಕ್ಷೆಯನ್ನು ತಪ್ಪಿಸಿಕೊಳ್ಳಬಹುದಾಗಿದೆ.

    4.1 ಮಿಲಿಯನ್ ಯುರೋವನ್ನು 2007 ರಿಂದ 2009ರ ಅವಧಿಯಲ್ಲಿ ಮೆಸ್ಸಿ ಹಾಗೂ ಅವರ ತಂದೆಯವರು ಬೆಲಿಜ್ ಮತ್ತು ಉರುಗ್ವೆಯಲ್ಲಿ ಅಡಗಿಸಿಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಅಂದು ಈ ಆರೋಪಕ್ಕೆ ಸ್ಪಷ್ಟನೆ ನೀಡಿದ್ದ ಮೆಸ್ಸಿ, ನನಗೆ ಆರ್ಥಿಕ ವ್ಯವಹಾರಗಳು ತಿಳಿದಿಲ್ಲ, ಫುಟ್ಬಾಲ್ ಆಟ ಅಷ್ಟೆ ತಿಳಿದಿದೆ ಎಂದು ಪ್ರತಿಕ್ರಿಯಿಸಿದ್ದರು.

  • ಮಂಗಳೂರು ಟೆರರ್ ಕೇಸ್: ಮೂವರು ದೋಷಿ, ನಾಲ್ವರು ಖುಲಾಸೆ

    ಮಂಗಳೂರು ಟೆರರ್ ಕೇಸ್: ಮೂವರು ದೋಷಿ, ನಾಲ್ವರು ಖುಲಾಸೆ

    – ಏಪ್ರಿಲ್ 12 ರಂದು ಶಿಕ್ಷೆಯ ಪ್ರಮಾಣ ಪ್ರಕಟ

    ಮಂಗಳೂರು: 20008ರಲ್ಲಿ ಮಂಗಳೂರಿನ ವಿವಿಧೆಡೆ ಉಗ್ರವಾದಿ ಚಟುವಟಿಕೆ ಆರೋಪದಲ್ಲಿ ಬಂಧಿತರಾಗಿದ್ದವರ ಪೈಕಿ ಮೂವರ ಮೇಲಿನ ಆರೋಪ ಸಾಬೀತಾಗಿದೆ.

    ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ದೋಷಿಗಳೆಂದು ಮಹತ್ವದ ತೀರ್ಪು ನೀಡಿದ್ದು, ನಾಲ್ವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಏಪ್ರಿಲ್ 12ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

    ಸೈಯದ್ ಮಹಮ್ಮದ್ ನೌಶಾದ್,ಅಹ್ಮದ್ ಬಾವಾ ಅಬುಬಕ್ಕರ್, ಫಕೀರ್ ಅಹ್ಮದ್ ಎಂಬ ಮೂವರ ಆರೋಪ ಸಾಬೀತಾಗಿದೆ. ಇದೇ ವೇಳೆ ಸಾಕ್ಷ್ಯಾಧಾರಗಳ ಕೊರತೆಯಿಂದ ಶಬೀರ್ ಭಟ್ಕಳ, ಅಹ್ಮದ್ ಅಲಿ, ಜಾವೇದ್ ಅಲಿ ಮತ್ತು ಉಮರ್ ಫಾರೂಕ್ ಅವರನ್ನು ಕೋರ್ಟ್ ಆರೋಪದಿಂದ ಖುಲಾಸೆಗೊಳಿಸಿದೆ.

    2008ರಲ್ಲಿ ಮುಂಬೈ ಮತ್ತು ಮಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮಂಗಳೂರಿನ ಉಳ್ಳಾಲದ ಮುಕ್ಕಚ್ಚೇರಿ, ಚೆಂಬುಗುಡ್ಡೆ, ಹಳೆಯಂಗಡಿ, ಪಾಂಡೇಶ್ವರದ ಸುಭಾಷ್‍ನಗರದಿಂದ ಏಳು ಮಂದಿಯನ್ನು ಉಗ್ರವಾದ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಬಂಧಿಸಿದ್ದರು. ಆ ಬಳಿಕ ದೇಶವಿರೋಧಿ ಚಟುವಟಿಕೆ, ವಿಧ್ವಂಸಕ ಕೃತ್ಯಕ್ಕೆ ಸಂಚು, ಸ್ಪೋಟಕ ತಯಾರಿಕೆ ಆರೋಪದಲ್ಲಿ ಏಳು ಮಂದಿ ವಿರುದ್ಧ ಕೇಸು ದಾಖಲಾಗಿತ್ತು.