Tag: ಶಿಕ್ಷಣ ಸಚಿವ

  • ಕಾಂಗ್ರೆಸ್ ಗಿಡ ಅಪಾಯಕಾರಿಯಂತ ಕಿತ್ತು ಹಾಕಿದ್ದೀವಿ ಅಂದ್ರು ಸಚಿವ ಎನ್.ಮಹೇಶ್: ವಿಡಿಯೋ ನೋಡಿ

    ಕಾಂಗ್ರೆಸ್ ಗಿಡ ಅಪಾಯಕಾರಿಯಂತ ಕಿತ್ತು ಹಾಕಿದ್ದೀವಿ ಅಂದ್ರು ಸಚಿವ ಎನ್.ಮಹೇಶ್: ವಿಡಿಯೋ ನೋಡಿ

    ಚಾಮರಾಜನಗರ: ಕಾಂಗ್ರೆಸ್ ಗಿಡವನ್ನು ಕಡಿಯುವ ಕೆಲಸವನ್ನು ಮಾಡಿದ್ದೇವೆ ಎನ್ನುವ ಮೂಲಕ ಶಿಕ್ಷಣ ಸಚಿವ ಎನ್.ಮಹೇಶ್ ಕಾಂಗ್ರೆಸ್ ಪಕ್ಷದ ವಿರುದ್ಧ ವಿಡಂಬನಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಗಿಡ ತುಂಬಾ ಅಪಾಯಕಾರಿ, ಹೀಗಾಗಿ ಅದನ್ನು ಕಡಿಯುವ ಕೆಲಸ ಮಾಡಿದ್ದೇವೆ ಎಂದು ಹೇಳುತ್ತಲೇ ಕಾರ್ಯಕರ್ತರು ಸಾರ್ ಅದು ಪಾರ್ತೇನಿಯಂ ಗಿಡ ಎಂದರು. ಆದರೂ ಸಹ ಅದು ಕಾಂಗ್ರೆಸ್ ಗಿಡ ಅದಕ್ಕೆ ಕಿತ್ತಿ ಹಾಕಿದ್ದೀವಿ ಎನ್ನುವ ಹೇಳಿಕೆ ನೀಡಿದರು.

    ಕೊಳ್ಳೆಗಾಲ ನಗರಸಭೆಯಲ್ಲಿ ಬಿಎಸ್‍ಪಿ ಜೊತೆ ಕಾಂಗ್ರೆಸ್ ಸೇರಿ ಮೈತ್ರಿಗೆ ಮುಂದಾದರೆ ನಿರ್ಲಕ್ಷ್ಯವಾಗುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿಯೊಂದಿಗೆ ಬಿಎಸ್‍ಪಿಯವರು ಮೈತ್ರಿ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ. ಹೀಗಾಗಿ ಪರೋಕ್ಷವಾಗಿ ನಾವು ಕಾಂಗ್ರೆಸ್‍ನನ್ನು ಕೊಳ್ಳೆಗಾಲದಲ್ಲಿ ನಿರ್ಮೂಲನೆ ಮಾಡಿದ್ದೇವೆ ಎನ್ನುವ ಅರ್ಥದಲ್ಲಿ ಸಚಿವರ ಈ ರೀತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ದೋಸ್ತಿ ಸರ್ಕಾರದ ಪ್ರಭಾವಿ ಸಚಿವರೇ ಕಾಂಗ್ರೆಸ್ ನಿರ್ಮೂಲನೆ ಹೇಳಿಕೆ ಸಾಕಷ್ಟು ಕುತೂಹಲ ಕೆರೆಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಕೊಳ್ಳೇಗಾಲದ ಎಂಜಿಎಸ್‍ವಿ ಶಾಲೆಯನ್ನು ದತ್ತು ಪಡೆದ ಶಿಕ್ಷಣ ಸಚಿವ

    ಕೊಳ್ಳೇಗಾಲದ ಎಂಜಿಎಸ್‍ವಿ ಶಾಲೆಯನ್ನು ದತ್ತು ಪಡೆದ ಶಿಕ್ಷಣ ಸಚಿವ

    ಚಾಮರಾಜನಗರ: ತಾನು ವಿದ್ಯಾಭ್ಯಾಸ ಮಾಡಿದ ಶಾಲೆಯನ್ನು ದತ್ತು ಪಡೆದು ಶಾಲೆಯನ್ನು ಹೈಟೆಕ್ ಆಗಿ ನಿರ್ಮಾಣ ಮಾಡಲು ಶಿಕ್ಷಣ ಸಚಿವ ಎನ್.ಮಹೇಶ್ ಚಿಂತನೆ ನಡೆಸಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿರುವ ಎಂಜಿಎಸ್‍ವಿ ಶಾಲೆಯೂ ಸದ್ಯ ಶಿಥಿಲಾವಸ್ಥೆಯಲ್ಲಿದೆ. ಈ ಶಾಲೆಯ ವೀಕ್ಷಣೆಗೆಂದು ಆಗಮಿಸಿದ್ದ ಸಚಿವ ಎನ್.ಮಹೇಶ್ ಇದು ನಾನು ಓದಿದ ಶಾಲೆ ಈಗ ಸ್ಥಿತಿಯಲ್ಲಿರುವುದು ನಿಜಕ್ಕೂ ಬೇಸರ ತಂದಿದೆ. ಹೀಗಾಗಿ ಶಾಲೆಯನ್ನು ದತ್ತು ಪಡೆದು ಹೈಟೆಕ್ ಆಗಿ ಅಭಿವೃದ್ಧಿ ಮಾಡುತ್ತೇನೆ ಎಂದಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ನನು ನನ್ನ ಹೈಸ್ಕೂಲ್ ಓದನ್ನ ಇಲ್ಲೇ ಮುಗಿಸಿದ್ದೇನೆ. ಅಲ್ಲದೇ 2 ವರ್ಷ ಪಿಯುಸಿ ಕೂಡ ಇಲ್ಲೇ ಮಾಡಿದ್ದೇನೆ. ಮುಡುಗುಂಡದ ಗುರ್ಕಾರ್ ಸುಬ್ಬಪ್ಪ ವೀರಪ್ಪ ಹಾಗೂ ಕುಟುಂಬ ಕಟ್ಟಿದ ಅದ್ಭುತವಾದಂತಹ ಶಾಲೆಯಾಗಿದೆ. ದಾನಿಗಳು ಆ ಕಾಲದಲ್ಲೇ ಇಷ್ಟೊಂದು ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದಲ್ಲಿದ್ದುಕೊಂಡು ಇದನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲವೆಂದರೆ ನನ್ನಂತಹ ಹಳೇಯ ವಿದ್ಯಾರ್ಥಿಗಳಿಗೆ ಅವಮಾನ ಅಂತ ಅನಿಸಿದೆ. ಹೀಗಾಗಿ ಎಂಜಿಎಸ್‍ವಿ ಶಾಲೆ ಹಾಗೂ ಮೈದಾನ ಎಲ್ಲವನ್ನು ಹೈಟೆಕ್ ಮಾಡುವ ಜವಾಬ್ದಾರಿಯನ್ನು ಶಿಕ್ಷಣ ಸಚಿವನಾಗಿ ನಾನೇ ಹೊತ್ತುಕೊಂಡಿದ್ದೇನೆ ಅಂದ್ರು.

    ಶಾಲೆಯಲ್ಲಿ ಏನೇನು ಕೆಲಸಗಳಾಗಬೇಕು ಎಂಬುದನ್ನು ಪಿಡಬ್ಯುಡಿ ಎಂಜಿನಿಯರ್ ಗೆ ಬಂದು ಪರಿಶೀಲನೆ ನಡೆಸಲು ಹೇಳಿದ್ದೇನೆ. ಇಲ್ಲಿರುವ ಕಲೆಗೆ ಯಾವುದೇ ಹಾನಿಯಾಗದಂತೆ ಕಟ್ಟಡವನ್ನು ಸುಭದ್ರಪಡಿಸಬೇಕು. ಈ ವರ್ಷದಲ್ಲಿ ಇದನ್ನು ಮುಗಿಸಬೆಕು ಅಂತ ಯೋಜನೆ ಹಾಕಿಕೊಂಡಿರುವುದಾಗಿ ಸಚಿವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಚೀನಾ ನ್ಯೂ ಇಯರ್ ಮಾಡಲು ಮುಂದಾಗಿದ್ದು ತಪ್ಪಲ್ಲ- ಡೆಲ್ಲಿ ಪಬ್ಲಿಕ್ ಸ್ಕೂಲ್ ಪರ ಸಚಿವ ತನ್ವೀರ್ ಸೇಠ್ ಬ್ಯಾಟಿಂಗ್

    ಚೀನಾ ನ್ಯೂ ಇಯರ್ ಮಾಡಲು ಮುಂದಾಗಿದ್ದು ತಪ್ಪಲ್ಲ- ಡೆಲ್ಲಿ ಪಬ್ಲಿಕ್ ಸ್ಕೂಲ್ ಪರ ಸಚಿವ ತನ್ವೀರ್ ಸೇಠ್ ಬ್ಯಾಟಿಂಗ್

    ಬೆಂಗಳೂರು: ಚೀನಾ ನ್ಯೂ ಇಯರ್ ಆಚರಣೆಗೆ ಮುಂದಾಗಿದ್ದು ತಪ್ಪಲ್ಲ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳುವ ಮೂಲಕ ನಗರದ ಡೆಲ್ಲಿ ಪಬ್ಲಿಕ್ ಸ್ಕೂಲ್ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ಚೀನಾ ದೇಶದ ನ್ಯೂ ಇಯರ್ ಆಚರಣೆ ಮಾಡುವುದು ತಪ್ಪಲ್ಲ. ಅದು ದೇಶ ವಿರೋಧಿ ನಡೆ ಅಲ್ಲ. ದೇಶಗಳು ಯಾವ ರೀತಿ ನ್ಯೂ ಇಯರ್ ಆಚರಿಸುತ್ತವೆ ಅನ್ನೋದು ತೋರಿಸೊ ಉದ್ದೇಶ ಅಷ್ಟೆ ಅಂತ ಅವರು ಹೇಳಿಕೆ ನೀಡಿದ್ದರು.

    ಆದ್ರೆ ಈ ಬಗ್ಗೆ ಪ್ರತಿಕ್ರಿಯೆ ನಿಡಲು ಸಚಿವರು ಹಿಂದೇಟು ಹಾಕುತ್ತಿದ್ದು, ಇದರಲ್ಲಿ ಶಾಲೆಯದ್ದು ಏನೂ ತಪ್ಪಿಲ್ಲ ಅನ್ನೊ ಶಾಲೆಯ ಹೇಳಿಕೆಯನ್ನ ಪ್ರತಿಕ್ರಿಯೆ ರೂಪದಲ್ಲಿ ಕಳುಹಿಸಿದ್ದಾರೆ.

    ಶುಕ್ರವಾರ ಚೀನಾ ನ್ಯೂ ಇಯರ್ ಸೆಲೆಬ್ರೇಷನ್‍ಗಾಗಿ ಮಕ್ಕಳಿಗೆ ಚೀನಾ ಡ್ರೆಸ್ ಹಾಕಿಕೊಂಡು ಬರಬೇಕು. ಅಷ್ಟೇ ಅಲ್ಲದೇ ಊಟಕ್ಕೆ ನೂಡಲ್ಸ್, ಫ್ರೈಡ್ ರೈಸ್, ಮಂಚೂರಿಯಂತಹ ಚೈನೀಸ್ ಫುಡ್ ತರಬೇಕು ಎಂದು ಆಗಸ್ಟ್ 3ನೇ ತಾರೀಕಿನಂದು ಡೆಲ್ಲಿ ಪಬ್ಲಿಕ್ ಸ್ಕೂಲ್ ಸುತ್ತೋಲೆ ಹೊರಡಿಸಿತ್ತು.

    ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಉತ್ತರ ವಲಯ 4 ಬಿಇಓ ನಾರಾಯಣ, ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ನಾಳಿನ ಚೀನಾ ನ್ಯೂ ಇಯರ್ ಕ್ರಾರ್ಯಕ್ರಮವನ್ನ ರದ್ದು ಮಾಡಿಸ್ತೀವಿ. ಕಾರ್ಯಕ್ರಮ ನಡೆಯುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಇದಕ್ಕೆ ನಮ್ಮ ಅನುಮತಿ ಪಡೆದಿಲ್ಲ. ಮಾಧ್ಯಮಗಳಲ್ಲಿ ನೋಡಿ ವಿಷಯ ಗೊತ್ತಾಗಿದೆ. ಶಾಲೆ ಹೊರಡಿಸಿರುವ ಸುತ್ತೋಲೆ ಗಮನಿಸಿದ್ದೇನೆ. ಕೂಡಲೇ ಕಾರ್ಯಕ್ರಮವನ್ನು ರದ್ದು ಮಾಡಿಸ್ತೀನಿ ಅಂತ ಹೇಳಿದ್ದರು.