ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕಾದರೆ ಗುಣಮಟ್ಟ ಶಿಕ್ಷಣ ಅತ್ಯವಶ್ಯಕವಾಗಿ ಇರಬೇಕು. ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡುವ ಕೆಲಸ ಮಾಡಬೇಕು. ಇಲ್ಲದೆ ಇದ್ದರೆ ಅಂತಹ ಕಾಲೇಜು ವಿಶ್ವವಿದ್ಯಾಲಯಗಳು ಅವಶ್ಯಕತೆ ಇಲ್ಲ. ಅವುಗಳನ್ನು ಮುಚ್ಚಿ ಬಿಡಿ ಅಂತ ರಾಜ್ಯಪಾಲ ವಿ.ಆರ್.ವಾಲಾ ನ್ಯಾಕ್ ಸಂಸ್ಥೆಗೆ ಸಲಹೆ ನೀಡಿದ್ದಾರೆ.
ರಾಜಭವನದಲ್ಲಿ ನಡೆದ ನ್ಯಾಕ್ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮಾತನಾಡಿದ ವಿ.ಆರ್.ವಾಲಾ, ಬಿ ಮತ್ತು ಸಿ ಗ್ರೇಡ್ ಕಾಲೇಜುಗಳು, ವಿಶ್ವವಿದ್ಯಾಲಯಗಳಿಗೆ ಉತ್ತಮ ಶಿಕ್ಷಣ ನೀಡಲು ಅವಕಾಶ ಕೊಡಬೇಕು. ಪ್ರತಿ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ಕೊಡಿಸೋದು ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಕರ್ತವ್ಯ. ಅದನ್ನ ಮರೆಯೋ ಸಂಸ್ಥೆಗಳನ್ನ ಮುಚ್ಚೋದು ವಾಸಿ ಅಂದರು.
I am happy to learn that NAAC also strives to promote quality-related research studies, consultancy and training programs, and
collaborates with other stakeholders of higher education for quality evaluation, promotion and sustenance. pic.twitter.com/l7RLz791MB— Vice-President of India (@VPIndia) January 7, 2020
ಪ್ರತಿ ಸಂಸ್ಥೆ ಎ ಗ್ರೇಡ್ ಮಾನ್ಯತೆಯನ್ನೆ ಹೊಂದಿರಬೇಕು. ಬಿ ಮತ್ತು ಸಿ ದರ್ಜೆಯ ಕಾಲೇಜು ವಿವಿಗಳಿಗೆ ಅವಕಾಶ ಕೊಡಿ. ಒಂದು ವೇಳೆ ಅವುಗಳು ಸುಧಾರಣೆ ಮಾಡದೇ ಇದ್ದರೆ ಅಂತಹ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನ ಕ್ಲೋಸ್ ಮಾಡಿ ಅಂತ ನ್ಯಾಕ್ ಸಂಸ್ಥೆಗೆ ಸಲಹೆ ನೀಡಿದರು.
ರಾಷ್ಟ್ರೀಯ ಮೌಲ್ಯಮಾಪನ ಮತ್ತು ಪ್ರಮಾಣೀಕರಣ ಮಂಡಳಿ (ನ್ಯಾಕ್/ ಎನ್ ಎ ಎ ಸಿ) 25 ನೇ ವರ್ಷ ಆಚರಿಸುತ್ತಿರುವ ಈ ಮಹತ್ವದ ಸಂತೋಷದ ಸಂದರ್ಭದಲ್ಲಿ ನಿಮ್ಮೆಲ್ಲರ ಜೊತೆಗಿರುವುದು ನನಗೆ ಹರ್ಷ ತಂದಿದೆ. pic.twitter.com/QF1GSErjkX
— Vice-President of India (@VPIndia) January 7, 2020
ನಮ್ಮ ದೇಶದಲ್ಲಿ ಯುವ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದ್ರೆ ಗುಣಮಟ್ಟ ಶಿಕ್ಷಣ ನಮ್ಮಲ್ಲಿ ಕಡಿಮೆ ಇದೆ. ಫ್ರಾನ್ಸ್, ಜಪಾನ್ ನಮಗಿಂತ ಚಿಕ್ಕ ರಾಷ್ಟ್ರ ಆದ್ರು ನಮ್ಮ ದೇಶಕ್ಕೆ ವಿಮಾನಗಳನ್ನ ಪೂರೈಕೆ ಮಾಡುತ್ತಿವೆ. ಇದಕ್ಕೆ ಕಾರಣ ಅಲ್ಲಿನ ಶಿಕ್ಷಣ. ಹೀಗಾಗಿ ಭಾರತದಲ್ಲೂ ಇದೇ ಮಾದರಿಯ ಗುಣಮಟ್ಟದ ಶಿಕ್ಷಣ ಅವಶ್ಯಕತೆ ಇದೆ ಅಂತ ತಿಳಿಸಿದರು
