Tag: ಶಿಕ್ಷಣಾಧಿಕಾರಿ

  • ಶಾಲೆಯಲ್ಲಿ ಮಧ್ಯಾಹ್ನದ ಊಟ ಸೇವಿಸಿ 20 ಮಕ್ಕಳು ಅಸ್ವಸ್ಥ

    ಶಾಲೆಯಲ್ಲಿ ಮಧ್ಯಾಹ್ನದ ಊಟ ಸೇವಿಸಿ 20 ಮಕ್ಕಳು ಅಸ್ವಸ್ಥ

    ಪಾಟ್ನಾ: ಶಾಲೆಯಲ್ಲಿ ಮಧ್ಯಾಹ್ನ ವೇಳೆ ನೀಡಲಾಗಿದ್ದ ಉಪಹಾರ ಸೇವಿಸಿ 20 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಬಿಹಾರದ ಮಾಧೇಪುರ ಜಿಲ್ಲೆಯ ಕಾಶಿಪುರದಲ್ಲಿ ಬೆಳಕಿಗೆ ಬಂದಿದೆ.

    ಮಕ್ಕಳು ಸೇವಿಸಿದ ಆಹಾರ ಕಲುಷಿತಗೊಂಡಿದ್ದರಿಂದ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಹುತೇಕ ಮಕ್ಕಳು ಸಹಜ ಸ್ಥಿತಿಗೆ ಮರಳಿದ್ದು, ಇಬ್ಬರು ಮಕ್ಕಳಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರಾದ ಡಾ.ಮುಖೇಶ್‌ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಆಂಬುಲೆನ್ಸ್‌ಗೆ ದಾರಿ ಕಲ್ಪಿಸಲು ತಮ್ಮ ಬೆಂಗಾವಲು ವಾಹನ ನಿಲ್ಲಿಸಿದ ಯೋಗಿ ಆದಿತ್ಯನಾಥ್‌

    MEALS

    ಘಟನೆ ಸಂಬಂಧ ಶಾಲಾ ಶಿಕ್ಷಕಿ ಬಬಿತಾ ಕುಮಾರಿ ಅವರಿಂದ ಮಾಹಿತಿ ಪಡೆದ ಬ್ಲಾಕ್ ಶಿಕ್ಷಣಾಧಿಕಾರಿ ಗುಣಾನಂದ್‌ಸಿಂಗ್, ಮಕ್ಕಳಿಗೆ ಮಧ್ಯಾಹ್ನ ನೀಡಲಾದ ಆಹಾರವು ಹಳಸಾಗಿತ್ತು ಎಂದು ತಿಳಿದು ಬಂದಿದೆ. ಈ ಕುರಿತು ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗುವುದು. ಅಲ್ಲದೆ, ಇನ್ನು ಮುಂದೆ ಅಂತಹ ಗುಣಮಟ್ಟದ ಆಹಾರ ನೀಡದಂತೆ ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 20 ಕಡೆ ದಾಳಿ, ಸಾವಿರಾರು ಜನರ ಹತ್ಯೆ – ಮೋದಿಗೆ ಕೊಲೆ ಬೆದರಿಕೆ

    ಸರ್ಕಾರೇತರ ಸಂಸ್ಥೆಯೊಂದು ಮಕ್ಕಳಿಗೆ ಮಧ್ಯಾಹ್ನದ ಉಪಹಾರ ನೀಡಲು ಪ್ರಾರಂಭಿಸಿದಾಗಿನಿಂದಲೂ ಕಳಪೆ ಗುಣಮಟ್ಟದ ಆಹಾರವನ್ನು ಪೂರೈಸುತ್ತಿದೆ. ಈ ಬಗ್ಗೆ ಪೋಷಕರು ಶಾಲಾ ಮುಖ್ಯಸ್ಥರಿಗೆ ದೂರು ನೀಡಿದ್ದರು. ಅಲ್ಲದೆ, ಶಾಲೆಗಳಲ್ಲಿ ಬೇಯಿಸಿದ ಆಹಾರವನ್ನೇ ನೀಡುವಂತೆ ಮನವಿ ಮಾಡಿದ್ದರು. ಕ್ರಮ ಕೈಗೊಳ್ಳದ ಪರಿಣಾಮ ಇಂದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಪೋಷಕರು ವಿಷಾದ ವ್ಯಕ್ತಪಡಿಸಿದ್ದಾರೆ.ಶಾಲೆ, ಪಾಟ್ನಾ, ಬಿಹಾರ, ಶಿಕ್ಷಣಾಧಿಕಾರಿ.

     

  • ಬಸ್ಸಿನಲ್ಲೇ ಎಣ್ಣೆ ಹೊಡೆದ ಶಾಲಾ ಹೆಣ್ಮಕ್ಳು: ವಿಡಿಯೋ ವೈರಲ್

    ಬಸ್ಸಿನಲ್ಲೇ ಎಣ್ಣೆ ಹೊಡೆದ ಶಾಲಾ ಹೆಣ್ಮಕ್ಳು: ವಿಡಿಯೋ ವೈರಲ್

    ಚೆನ್ನೈ: ತಮಿಳುನಾಡಿನ ತಿರುಕಝುಕುಂದ್ರಂ ನಿಂದ ಥಾಚೂರ್ ಮಾರ್ಗವಾಗಿ ತೆರಳುತ್ತಿದ್ದ ಬಸ್‍ನಲ್ಲಿ ಶಾಲಾ ಹೆಣ್ಣುಮಕ್ಕಳು ಮದ್ಯ ಸೇವಿಸುತ್ತಿರುವ ವೀಡಿಯೋ ವೈರಲ್ ಆಗಿದೆ.

    ಚೆಂಗ್ಲಪಟ್ಟು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯರು ಮದ್ಯ ಸೇವಿಸುತ್ತಿರುವ ದೃಶ್ಯವನ್ನು ಅಲ್ಲೇ ಇದ್ದ ವಿದ್ಯಾರ್ಥಿಯೊಬ್ಬ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ವಿದ್ಯಾರ್ಥಿಗಳು ಶಾಲಾ ಸಮವಸ್ತ್ರವನ್ನು ಧರಿಸಿ ಇಂತಹ ಕೆಲಸ ಮಾಡಿರುವುದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನನಗೆ ವಯಸ್ಸಾಯ್ತು ಅಂತ ಕಾಲೆಳೆಯುತ್ತಾರೆ ಅದಕ್ಕೆ ವಾರಕ್ಕೊಮ್ಮೆ ಶೇವ್ ಮಾಡಿಸ್ತೀನಿ: ಸಿದ್ದರಾಮಯ್ಯ

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಶಿಕ್ಷಣಾಧಿಕಾರಿ, ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ. ಪೊಲೀಸರಿಂದಲೂ ತನಿಖೆ ನಡೆಸಲಾಗುತ್ತದೆ. ಈಗಾಗಲೇ ಒಂದು ಸುತ್ತಿನ ತನಿಖೆ ನಡೆದಿದ್ದು, ಅಂತಹ ವಿದ್ಯಾರ್ಥಿಗಳ ವಿರುದ್ಧ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಾಲಿವುಡ್ ಗಲ್ಲಿ ಬಾಯ್ ಖ್ಯಾತಿಯ ರಾಪರ್ ಧರ್ಮೇಶ್ ಪರ್ಮಾರ್ ಇನ್ನಿಲ್ಲ

  • ಶಾಸಕರ ಎದುರೇ ಶಿಕ್ಷಣಾಧಿಕಾರಿಗೆ ಚಳಿ ಬಿಡಿಸಿದ ವಿದ್ಯಾರ್ಥಿನಿ

    ಶಾಸಕರ ಎದುರೇ ಶಿಕ್ಷಣಾಧಿಕಾರಿಗೆ ಚಳಿ ಬಿಡಿಸಿದ ವಿದ್ಯಾರ್ಥಿನಿ

    -ಫೋನ್‌ನಲ್ಲೇ ಅಧಿಕಾರಿಗೆ ಫುಲ್ ಕ್ಲಾಸ್

    ರಾಯಚೂರು: ಶಿಕ್ಷಕರ ಕೊರತೆ ಹಿನ್ನೆಲೆ ಕರೆ ಮಾಡಿ ಶಾಸಕರನ್ನು ಶಾಲೆಗೆ ಕರೆಸಿ, ಅವರೆದುರೇ ಕ್ಷೇತ್ರ ಶಿಕ್ಷಣಾಧಿಕಾರಿಗೆ ಕರೆ ಮಾಡಿ ವಿದ್ಯಾರ್ಥಿನಿ ಕ್ಲಾಸ್ ತೆಗೆದುಕೊಂಡ ಘಟನೆ ರಾಯಚೂರಿನ ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ನಡೆದಿದೆ.

    ಮಲ್ಲಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲದೆ ಕಾಟಾಚಾರಕ್ಕೆ ಅತಿಥಿ ಶಿಕ್ಷಕರನ್ನ ನೇಮಿಸಿ ಶಿಕ್ಷಣ ಇಲಾಖೆ ಕೈ ತೊಳೆದುಕೊಂಡಿದೆ. ಇದರಿಂದ ಪಠ್ಯಕ್ರಮ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಶಿಕ್ಷಣಾ ಇಲಾಖೆಯ ಈ ನಿರ್ಲಕ್ಷ್ಯ ಕಂಡು ಬೇಸತ್ತ ವಿದ್ಯಾರ್ಥಿನಿ ಮೋನಿಕಾ ಶಿಕ್ಷಕರ ಕೊರತೆ ಬಗ್ಗೆ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಫೋನ್‌ನಲ್ಲೇ ಅಧಿಕಾರಿಯ ಚಳಿ ಬಿಡಿಸಿದ್ದಾಳೆ. ಒಂದು ದಿನದಲ್ಲಿ ಶಾಲೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸದಿದ್ದರೆ ಶಾಲೆ ಬಂದ್ ಮಾಡಿ, ಹೋರಾಟ ಮಾಡೋದಾಗಿ ಬಾಲಕಿ ಎಚ್ಚರಿಕೆ ಕೊಟ್ಟಿದ್ದಾಳೆ. ಇದನ್ನೂ ಓದಿ:ವಿದ್ಯಾರ್ಥಿನಿಗೆ ಕಾಮಪಾಠ-ಉಪನ್ಯಾಸಕನಿಗೆ ಬಿತ್ತು ಧರ್ಮದೇಟು

    ಅಷ್ಟೇ ಅಲ್ಲದೆ ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರಿಗೆ ಕರೆ ಮಾಡಿ ಶಾಲೆಗೆ ಕರೆಸಿಕೊಂಡ ವಿದ್ಯಾರ್ಥಿನಿ ಅವರನ್ನೂ ತರಾಟೆಗೆ ತಗೆದುಕೊಂಡಿದ್ದಾಳೆ. ಶಾಸಕರ ಎದುರೇ ಶಿಕ್ಷಣಾಧಿಕಾರಿಗೆ ಕರೆ ಮಾಡಿ ಎಚ್ಚರಿಸಿದ್ದಾಳೆ. ವಿದ್ಯಾರ್ಥಿನಿ ಕರೆ ಮಾಡಿ ಶಿಕ್ಷಣಾಧಿಕಾರಿಗೆ ಸಖತ್ ಕ್ಲಾಸ್ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಲಕಿ ಧೈರ್ಯಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.

  • ಕ್ಲಾಸಿನಲ್ಲಿ ಪಾಠ ಬದಲು ನಿದ್ದೆ ಮಾಡ್ತಿದ್ದ ಶಿಕ್ಷಕರ ವಿರುದ್ಧ ತಿರುಗಿಬಿದ್ದ ವಿದ್ಯಾರ್ಥಿಗಳು

    ಕ್ಲಾಸಿನಲ್ಲಿ ಪಾಠ ಬದಲು ನಿದ್ದೆ ಮಾಡ್ತಿದ್ದ ಶಿಕ್ಷಕರ ವಿರುದ್ಧ ತಿರುಗಿಬಿದ್ದ ವಿದ್ಯಾರ್ಥಿಗಳು

    ಬೀದರ್: ಕ್ಲಾಸ್ ರೂಮಿನಲ್ಲಿ ಪಾಠ ಮಾಡದೇ ನಿದ್ದೆ ಮಾಡುತ್ತಿದ್ದ ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳು ತಿರುಗಿಬಿದ್ದ ಘಟನೆ ಗಡಿ ಜಿಲ್ಲೆ ಬೀದರ್ ನಲ್ಲಿ ನಡೆದಿದೆ.

    ಬೀದರ್ ತಾಲೂಕಿನ ಮೊಗದಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಕುಂಭಕರ್ಣ ನಿದ್ದೆಗೆ ನೊಂದು ಹೋಗಿದ್ದಾರೆ. ಒಟ್ಟು 107 ವಿದ್ಯಾರ್ಥಿಗಳಿಗೆ ಇಬ್ಬರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆಗೆ ಹೋದ ತಕ್ಷಣ ಶಿಕ್ಷಕರು ಬೆಂಚ್ ಮೇಲೆ ಕಾಲು ಹಾಕಿ ಪಾಠ ಮಾಡದೆ ನಿದ್ದೆಗೆ ಜಾರುತ್ತಾರೆ. 6 ತಿಂಗಳಿನಿಂದ ಶಿಕ್ಷಕರು ಅಲ್ಪಸ್ವಲ್ಪ ಪಾಠ ಮಾಡಿದ್ದು ಬಿಟ್ಟರೆ ಇನ್ನುಳಿದ ಸಮಯ ಕೇವಲ ನಿದ್ದೆ ಮಾಡಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿಗಳು ನ್ಯಾಯ ಕೇಳಲು ನೇರವಾಗಿ ಕ್ಷೇತ್ರ ಶಿಕ್ಷಣಾಧಿರಿಗಳ ಕಚೇರಿಗೆ ಬಂದು ಬಿಇಓಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ಆಟೋದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದು ನ್ಯಾಯ ಕೇಳಿದ್ದಾರೆ. ಸ್ವತಃ ವಿದ್ಯಾರ್ಥಿಗಳೇ ಕಚೇರಿಗೆ ಬಂದು ಬಿಇಓಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕೂಡ ಒಂದು ಕ್ಷಣ ಕಕ್ಕಾಬಿಕ್ಕಿ ಆದರು. ಏನೇ ಮಾಡಿದ್ರೂ ನಡೆಯುತ್ತೆ ಎಂಬ ಶಿಕ್ಷಕರ ನಡೆಗೆ ಗಡಿ ಜಿಲ್ಲೆಯ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದು ಶಿಕ್ಷಕರ ವಿರುದ್ಧ ಸಿಡಿದೆದ್ದು ಪಾಠ ಮಾಡಿದ್ದಾರೆ.

  • ತರಗತಿಯಲ್ಲಿ ಕುಡಿದು ಮಲಗಿದ್ದ ಶಿಕ್ಷಕ – ಡಿಸಿಯಿಂದ ಅಮಾನತು

    ತರಗತಿಯಲ್ಲಿ ಕುಡಿದು ಮಲಗಿದ್ದ ಶಿಕ್ಷಕ – ಡಿಸಿಯಿಂದ ಅಮಾನತು

    ರಾಯ್ಪುರ: ತರಗತಿಯಲ್ಲಿ ಕುಡಿದು ಮಲಗಿದ್ದ ಶಿಕ್ಷಕನನ್ನು ಜಿಲ್ಲಾಧಿಕಾರಿ ಅಮಾನತು ಮಾಡಿರುವ ಘಟನೆ ಛತ್ತೀಸ್‍ಗಢದ ಆಶ್‍ಪುರದಲ್ಲಿ ನಡೆದಿದೆ.

    ಆಶ್‍ಪುರ ಜಿಲ್ಲೆಯ ತುರಾಂಗ್‍ಖಾರ್ ಎಂಬ ಹಳ್ಳಿಯ ಪ್ರಾಥಮಿಕ ಶಾಲೆಯ ಶಿಕ್ಷಕನೊಬ್ಬ ಶಾಲೆಗೆ ಮದ್ಯಪಾನ ಮಾಡಿಕೊಂಡು ಬಂದು ಮಕ್ಕಳಿಗೆ ಪಾಠ ಮಾಡದೇ ತರಗತಿಯಲ್ಲಿ ಮಲಗಿದ್ದ.

    ಕುಡಿದು ಶಾಲೆಗೆ ಬಂದಿದ್ದ ಶಿಕ್ಷಕ ತರಗತಿಯಲ್ಲಿ ಪಾಠ ಮಾಡದೇ ಮಾಲಗಿದ್ದನ್ನು ಅಲ್ಲಿನ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ನಂತರ ಅವನನ್ನು ಎಬ್ಬಿಸಿ ಪ್ರಶ್ನೆ ಮಾಡಿದ್ದಕ್ಕೆ ನಾನು ಮದ್ಯಪಾನ ಮಾಡಿಲ್ಲ ಎಂದು ಹೇಳಿದ್ದಾನೆ. ಈಗ ಈ ವಿಚಾರವಾಗಿ ಸ್ಥಳೀಯರು ಮಕ್ಕಳ ಬಳಿ ಮಾಹಿತಿ ಪಡೆದು ಶಿಕ್ಷಕನ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಜನರು ಒತ್ತಾಯ ಮಾಡಿದ್ದರು.

    ಈ ವಿಚಾರವಾಗಿ ಮಾತನಾಡಿರುವ ಜಿಲ್ಲಾ ಶಿಕ್ಷಣಾಧಿಕಾರಿ ಬಾಲಾ ರಾಮ್ ಧ್ರುವ ಈ ಘಟನೆಯ ಬಗ್ಗೆ ಪ್ರಸ್ತುತ ವರದಿಗಾಗಿ ಕಾಯಲಾಗುತ್ತಿದ್ದು, ವರದಿ ಬಂದಲ್ಲಿ ಅ ವರದಿಯ ಆಧಾರದ ಮೇಲೆ ಅ ಶಿಕ್ಷಕನಿಗೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.