Tag: ಶಿಕ್ಷಕ

  • ದಿನಕ್ಕೆ 17 ಗಂಟೆ ಪಾಠ ಮಾಡೋ ಮೇಷ್ಟ್ರು- 50 ವರ್ಷಗಳಿಂದ ಟ್ಯೂಷನ್ ಉಚಿತ

    ದಿನಕ್ಕೆ 17 ಗಂಟೆ ಪಾಠ ಮಾಡೋ ಮೇಷ್ಟ್ರು- 50 ವರ್ಷಗಳಿಂದ ಟ್ಯೂಷನ್ ಉಚಿತ

    ಬೆಂಗಳೂರು: ಇಂದಿನ ದಿನಗಳಲ್ಲಿ ಟ್ಯೂಷನ್ ಹೆಸರಿನಲ್ಲಿ ಟುಟೋರಿಯಲ್‍ಗಳು ಶಿಕ್ಷಣವನ್ನು ಒಂದು ಉದ್ಯಮ ಮಾಡಿಕೊಂಡಿವೆ. ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ಹಣವನ್ನು ಪೀಕ್ತಿವೆ. ಅದ್ರೆ ಇಲ್ಲೊಬ್ರು ಮೇಷ್ಟ್ರು ಮಾತ್ರ ಫ್ರೀಯಾಗಿಯೇ ತಮ್ಮ ಜ್ಞಾನವನ್ನು ಧಾರೆ ಎರೆಯುತ್ತಿದ್ದಾರೆ. ಇವರೇ ಇಂದಿನ ನಮ್ಮ ಪಬ್ಲಿಕ್ ಹಿರೋ.

    ಹೌದು. ಬೆಂಗಳೂರಿನ ಸಂಜಯ್ ನಗರದ ನಿವಾಸಿ 73 ವರ್ಷದ ರಾಜಶೇಖರಯ್ಯ ಮೇಷ್ಟ್ರು ಹೆಚ್‍ಎಎಲ್‍ನ ನಿವೃತ್ತ ನೌಕರರು. ಕಳೆದ 50 ವರ್ಷಗಳಿಂದ ಮನೆಯಲ್ಲಿ `ರಶ್ಮಿ’ ಹೆಸರಿನಲ್ಲಿ ಟುಟೋರಿಯಲ್ ನಡೆಸುತ್ತಿದ್ದು, ಪಿಯುಸಿ, ಬಿಕಾಂ, ಬಿಬಿಎಂ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಫ್ರೀಯಾಗಿ ಟ್ಯೂಷನ್ ಹೇಳಿಕೊಡ್ತಾ ಇದ್ದಾರೆ.

    ರಾಜಶೇಖರಯ್ಯ ಅವರು ವಿದ್ಯಾರ್ಥಿಯಾಗಿದ್ದಾಗ ಗುರುಗಳಾದ ಟಿ ಆರ್ ಶಾಮಣ್ಣನವರು, `ನಿನ್ನ ಜ್ಞಾನವನ್ನು ಜೀವನ ಪೂರ್ತಿ ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕೆಂದು’ ಭಾಷೆ ಪಡೆದಿದ್ರಂತೆ. ಅಂದಿನಿಂದ ಇವತ್ತಿನವರೆಗೂ ಕೊಟ್ಟ ಭಾಷೆಯಂತೆ ನಡೆದುಕೊಳ್ಳುತ್ತಿದ್ದಾರೆ. ಈವರೆಗೆ ಸುಮಾರು 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇವರ ಬಳಿ ಟ್ಯೂಷನ್ ಪಡೆದಿದ್ದು, ದೇಶ ವಿದೇಶಗಳಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡ್ತಿದ್ದಾರೆ. ಬೆಳಗ್ಗೆ 5 ಗಂಟೆಗೆ ಟ್ಯೂಷನ್ ಶುರುಮಾಡಿದ್ರೆ ರಾತ್ರಿ 10 ಗಂಟೆವರೆಗೂ ಟ್ಯೂಷನ್ ಹೇಳಿಕೊಡ್ತಾರೆ.

    https://www.youtube.com/watch?v=LEN-VJ3XoPQ&spfreload=5

     

  • ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿ 3 ದಿನವಾದ್ರೂ ಇಲ್ಲಿ ಫಲಿತಾಂಶ ಸಿಕ್ಕಿಲ್ಲ

    ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿ 3 ದಿನವಾದ್ರೂ ಇಲ್ಲಿ ಫಲಿತಾಂಶ ಸಿಕ್ಕಿಲ್ಲ

    ಕಲಬುರಗಿ: ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿ ಮೂರು ದಿನಗಳು ಕಳೆದಿವೆ. ಆದರೆ ಜಲ್ಲೆಯ ಚಿಂಚೋಳಿ ತಾಲೂಕಿನ ರಾಯಕೋಡ ಗ್ರಾಮದ ಶಾಲೆಯಲ್ಲಿ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ.

    ಈ ಶಾಲೆಯ ಶಿಕ್ಷಕರಿಬ್ಬರೂ ಹೆಡ್‍ಮಾಸ್ಟರ್ ನಾನಲ್ಲ ಅಂತ ಕಚ್ಚಾಡಿಕೊಂಡು ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟ ಆಡ್ತಿದ್ದಾರೆ. ಕಷ್ಟಪಟ್ಟು ಓದಿರೋ ಮಕ್ಕಳು ಕೆಲವೇ ಅಂಕಗಳಲ್ಲಿ ಫೇಲಾಗಿದ್ದಾರಂತೆ. ಹೀಗಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಲು ಪರದಾಡುತ್ತಿದ್ದಾರೆ.

    ಈ ಶಾಲೆಗೆ ಹಿಂದೆ ರಾಜಕುಮಾರ ಎಂಬವರು ಮುಖ್ಯೋಪಾಧ್ಯಾಯರಾಗಿದ್ದರು. 4 ತಿಂಗಳು ಹಿಂದೆ ವರ್ಗಾವಣೆಯಾಗಿ ಬೇರೊಂದು ಶಾಲೆಗೆ ಹೋಗಿದ್ದಾರೆ. ಅಂದಿನಿಂದ ಏಪ್ರಿಲ್ 10ರವರೆಗೆ ಶಿಕ್ಷಣ ಇಲಾಖೆ ಪ್ರಭಾರಿ ಮುಖ್ಯಗುರುಗಳಾಗಿ ಲಿಂಗಣ್ಣ ಅವರನ್ನು ನೇಮಕ ಮಾಡಿದೆ. ಆದ್ರೆ ಅವರು ಸಹ ನೇಮಕವಾದ ದಿನದಿಂದ ಶಾಲೆಯತ್ತ ಮುಖ ಮಾಡಿಲ್ಲ.

    ಇಲ್ಲಿನ ಶಿಕ್ಷಕರಿಗೂ ಸಹ 4 ತಿಂಗಳಿನಿಂದ ಸಂಬಳವಾಗಿಲ್ಲ. ಈ ಕುರಿತು ಶಿಕ್ಷಣ ಇಲಾಖೆಗೆ ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಗ್ರಾಮಸ್ಥರು ದೂರು ನೀಡಿದ್ದರೂ ಇಲಾಖೆ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ.

     

  • ಇಂಟರ್ನಲ್ ಮಾರ್ಕ್ಸ್ ಕೇಳಿದ್ರೆ ಸರಸಕ್ಕೆ ಕರೀತಾನೆ ಶಿಕ್ಷಕ!

    ಇಂಟರ್ನಲ್ ಮಾರ್ಕ್ಸ್ ಕೇಳಿದ್ರೆ ಸರಸಕ್ಕೆ ಕರೀತಾನೆ ಶಿಕ್ಷಕ!

    – ಕಾಲೇಜು ಬಿಟ್ಟು ವಿದ್ಯಾರ್ಥಿನಿಯರ ಪ್ರತಿಭಟನೆ

    ಕಲಬುರಗಿ: ಇಂಟರ್‍ನಲ್ ಮಾರ್ಕ್ಸ್ ಕೊಡಲು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ, ಕಲಬುರಗಿ ನಗರದ ಎಚ್‍ಕೆಇ ಸಂಸ್ಥೆಯ ಮಲಕರೆಡ್ಡಿ ಹೋಮಿಯೊಪತಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

    ಕಾಲೇಜಿನ ಫಿಜಿಯಾಲಾಜಿ ಉಪನ್ಯಾಸಕ ಸಿದ್ದಲಿಂಗ ಮಾಲಿಪಾಟೀಲ್ ಇಂತಹ ಹೀನ ಕೆಲಸ ಮಾಡಿದ್ದಾನೆ. ಇದರಿಂದ ನೊಂದ ವಿದ್ಯಾರ್ಥಿನಿ ಕಾಲೇಜಿನ ಪ್ರಾಂಶುಪಾಲರಿಗೆ ಲಿಖಿತ ದೂರು ನೀಡಿದ್ದಾರೆ.

    ನಿತ್ಯ ಮದ್ಯಪಾನ ಮಾಡಿ ಬರುವ ಈ ಕಾಮಿ ಶಿಕ್ಷಕ ಪ್ರತಿ ವಿದ್ಯಾರ್ಥಿನಿಯನ್ನೂ ಸಹ ಕಾಮದ ದೃಷ್ಟಿಯಿಂದ ನೋಡುತ್ತಾನಂತೆ. ಉಪನ್ಯಾಸಕನ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿಗಳು ಮೂರು ದಿನಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿದ ಶಿಕ್ಷಣ ಸಂಸ್ಥೆ ಕಾಮುಕ ಉಪನ್ಯಾಕನ ವಿರುದ್ಧ ಕ್ರಮ ಜರುಗಿಸಿಲ್ಲ ಎನ್ನುವ ಮಾತು ಕೇಳಿ ಬಂದಿದೆ.

  • ಶನಿವಾರ ಬಂತಂದ್ರೆ ಶೌಚಾಲಯದ ಅರಿವಿನ ದಿನ-ಇಡೀ ಊರಿಗೆ ಸ್ವಚ್ಚತೆಯ ಹರಿಕಾರ

    ಶನಿವಾರ ಬಂತಂದ್ರೆ ಶೌಚಾಲಯದ ಅರಿವಿನ ದಿನ-ಇಡೀ ಊರಿಗೆ ಸ್ವಚ್ಚತೆಯ ಹರಿಕಾರ

    ಹಾವೇರಿ: ಮೇಷ್ಟ್ರು ಅಂದ್ರೆ ಬರೀ ಪಾಠ ಮಾಡಿ ಮನೆಗೆ ಹೋಗ್ತಾರೆ ಅಂತಾ ಜನಗಳು ತಿಳಿದಿರುತ್ತಾರೆ. ಆದರೆ ಇದರ ಹೊರತಾಗಿಯೂ ಕೆಲ ಮೇಷ್ಟ್ರು ಒಂದಿಷ್ಟು ಒಳ್ಳೆ ಕೆಲಸ ಮಾಡ್ತಾರೆ. ಮನೆ ಮನೆಗೆ ತೆರಳಿ ಶೌಚಾಲಯದ ಬಗ್ಗೆ ಅರಿವು ಮೂಡಿಸ್ತಾರೆ. ಅವರ ಶ್ರಮಕ್ಕೆ ಫಲ ಕೂಡಾ ಸಿಕ್ಕಿದೆ.

    ಹಾನಗಲ್ ತಾಲೂಕಿನ ಡೊಳ್ಳೇಶ್ವರ ಗ್ರಾಮದ ಶಿಕ್ಷಕ ಶಿವಬಸಯ್ಯ ಚಿಲ್ಲೂರುಮಠ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಹಾವೇರಿ ಜಿಲ್ಲೆ ಕಳೆದ ಎರಡು ವರ್ಷಗಳಿಂದ ಶಾಲೆಯ 15 ವಿದ್ಯಾರ್ಥಿಗಳ ಕ್ಲಬ್ ಮಾಡಿಕೊಂಡು ಸಮಾಜಸೇವೆ ಮಾಡ್ತಿದ್ದಾರೆ. ಪ್ರತಿ ಶನಿವಾರ ಶೌಚಾಲಯವಿಲ್ಲದ ಮನೆಗಳಿಗೆ ತೆರಳಿ ಶೌಚಾಲಯದ ಬಗ್ಗೆ ಅರಿವು ಮೂಡಿಸ್ತಿದ್ದಾರೆ. ಇವರ ಮಾತು ಕೇಳಿ ಈಗಾಗಲೇ ಸುಮಾರು 70 ರಿಂದ 80 ಮನೆಯವರು ಶೌಚಾಲಯಗಳನ್ನು ಕಟ್ಟಿಸಿಕೊಂಡಿದ್ದಾರೆ.

    ಈ ಊರಿನ 447 ಕುಟುಂಬಗಳಲ್ಲಿ ಇನ್ನು ಕೇವಲ 149 ಮನೆಗಳಲ್ಲಿ ಶೌಚಾಲಯ ಇಲ್ಲ. ಆದಷ್ಟು ಬೇಗ ಇಡೀ ಊರನ್ನೇ ಬಯಲುಮುಕ್ತ ಶೌಚಾಲಯ ಮಾಡುವ ಗುರಿ ಹೊಂದಿದ್ದಾರೆ. ಇವರ ಕೆಲಸಕ್ಕೆ ಊರಿನ ಜನ ಹಾಗೂ ಪಂಚಾಯ್ತಿಯವರು ಕೈಜೋಡಿಸಿದ್ದಾರೆ.

    ಶಾಲೆಯ ಸಹಶಿಕ್ಷಕ ಮತ್ತು ಮಕ್ಕಳ ಹಕ್ಕು ಕ್ಲಬ್‍ನ ಸದಸ್ಯರು ಜಾಗೃತಿ ಮೂಡಿಸಿ ಶೌಚಾಲಯವನ್ನ ಕಟ್ಟಿಸುವ ಕಾರ್ಯವನ್ನ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಗ್ರಾಮಪಂಚಾಯ್ತಿ ಸದಸ್ಯರು ಹಾಗೂ ಶಾಲೆಯ ಎಲ್ಲಾ ಶಿಕ್ಷಕವೃಂದ ಸಹ ಸಾಥ್ ನೀಡಿದ್ದಾರೆ.

    https://www.youtube.com/watch?v=r6hMYhEmmug