Tag: ಶಿಕ್ಷಕ

  • 13ರ ಬಾಲೆ ಮೇಲೆ ಅತ್ಯಾಚಾರವೆಸಗಿದ್ದ 75ರ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

    13ರ ಬಾಲೆ ಮೇಲೆ ಅತ್ಯಾಚಾರವೆಸಗಿದ್ದ 75ರ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

    ಮುಂಬೈ: ಪರೀಕ್ಷೆಗೆ ಟಿಪ್ಸ್ ಹೇಳಿಕೊಡುವ ನೆಪವೊಡ್ಡಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

    75 ವರ್ಷದ ಶಿಕ್ಷಕನೊಬ್ಬ ಪರೀಕ್ಷೆಗೆ ಟಿಪ್ಸ್ ಹೇಳಿಕೊಡುವ ನೆಪವೊಡ್ಡಿ 13 ವರ್ಷದ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ್ದ. ಅಷ್ಟೇ ಅಲ್ಲದೆ ವಿಡಿಯೋ ಚಿತ್ರೀಕರಿಸಿದ್ದ. ಈತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪೋಸ್ಕೋ ಕಾಯ್ದೆಯ ಅಡಿಯಲ್ಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

    ಶಿಕ್ಷಕನ ಕೃತ್ಯದ ವಿಡಿಯೋವನ್ನು ಯುವಕರು ಮೊಬೈಲ್ ನಲ್ಲಿ ನೋಡುತ್ತಿದ್ದಾಗ ಸಂತ್ರಸ್ತೆಯ ನೆರೆಮನೆಯಾತ ಗಮನಿಸಿದ್ದಾನೆ. ಈ ವಿಚಾರವನ್ನು ಆತ ಬಾಲಕಿಯ ಸಂಬಂಧಿಕರಿಗೆ ತಿಳಿಸಿದ ಪರಿಣಾಮ ಪ್ರಕರಣ ಬೆಳಕಿಗೆ ಬಂದಿದೆ.

    2013ರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 4 ವರ್ಷಗಳ ಕಾಲ ನಡೆದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದು, 75 ವರ್ಷದ ಆರೋಪಿಗೆ ಜೀವಾವಧಿ ಶಿಕ್ಷೆಯಾಗಿದೆ.

    ಕೃತ್ಯ ಎಸಗಿದ್ದು ಹೇಗೆ?
    2012ರ ಡಿಸೆಂಬರ್‍ನಲ್ಲಿ ಒಂದು ದಿನ ಬಾಲಕಿ ತನ್ನ ಸ್ನೇಹಿತೆಯರೊಂದಿಗೆ ಪರೀಕ್ಷೆಗೆ ಹೋಗುತ್ತಿದ್ದಳು. ಆರೋಪಿ ಶಿಕ್ಷಕ ಅವರನ್ನು ಕರೆದು ಪರೀಕ್ಷೆಯ ಟಿಪ್ಸ್ ಹಾಗೂ ನೋಟ್ಸ್ ನೀಡುವುದಾಗಿ ಹೇಳಿದ್ದಾನೆ.

    ಹುಡಗಿಯರು ಒಳಗೆ ಬರುತ್ತಿದ್ದಂತೆ ಬಾಗಿಲು ಹಾಕಲು ಪ್ರಯತ್ನಿಸಿದಾಗ ಸಂತ್ರಸ್ತ ಬಾಲಕಿಯನ್ನು ಬಿಟ್ಟು ಎಲ್ಲ ಹುಡುಗಿಯರು ತಪ್ಪಿಸಿಕೊಂಡಿದ್ದಾರೆ. ಆದರೆ, ಅಲ್ಲೆ ಉಳಿದುಕೊಂಡ ಬಾಲಕಿಯ ಮೇಲೆ ಶಿಕ್ಷಕ ಅತ್ಯಾಚಾರವೆಸಗಿದ್ದ. ನಂತರ ಮತ್ತೆರಡು ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ವಿಡಿಯೋ ಕೂಡ ಮಾಡಿಕೊಂಡಿದ್ದನು. ಅಲ್ಲದೇ ಯಾರಿಗಾದರೂ ಹೇಳಿದರೆ ನಿಮ್ಮ ತಂದೆ-ತಾಯಿಯರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದ.

  • ಶಾಲೆ ಪಾಠ ಬಿಟ್ಟು ಫೋನಿನಲ್ಲಿ ಕಾಮ ಪಾಠ ಮಾಡಿದ ಶಿಕ್ಷಕ!

    ಶಾಲೆ ಪಾಠ ಬಿಟ್ಟು ಫೋನಿನಲ್ಲಿ ಕಾಮ ಪಾಠ ಮಾಡಿದ ಶಿಕ್ಷಕ!

    ಬೆಂಗಳೂರು: ಶಿಕ್ಷಕನೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡುವ ಆರೋಪಿ ಮಂಜೇಶ್ ಅದೇ ಶಾಲೆಯಲ್ಲಿ ಆರನೇ ತರಗತಿ ಓದುವ ವಿದ್ಯಾರ್ಥಿನಿಯ ಜೊತೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆಗೆ ಫೋನ್ ಮಾಡಿ ವಾಟ್ಸಪ್ ಕಾಲ್ ಮಾಡುವಂತೆ ಒತ್ತಾಯಿಸಿದ್ದಾನೆ. ಅಷ್ಟೇ ಅಲ್ಲದೇ ಮನೆಬಿಟ್ಟು ಬಂದು ತನ್ನ ಜೊತೆ ಮಲಗು.. ಹೀಗೆ ಅಸಭ್ಯ ರೀತಿಯಲ್ಲಿ ಮಾತನಾಡಿದ್ದಾನೆ.

    ವಿದ್ಯಾರ್ಥಿನಿ ತನ್ನ ಅಣ್ಣನ ಮೊಬೈಲ್‍ನಲ್ಲಿ ಆತನ ಜೊತೆ ಮಾತನಾಡಿದ್ದು, ಹೀಗಾಗಿ ಮನೆಯವರಿಗೆ ತಿಳಿದಿದೆ. ನಂತರ ಮನೆಯವರು ಮೊಬೈಲ್ ನ ಆಡಿಯೋ ರೆಕಾರ್ಡ್ ಕೇಳಿಸಿಕೊಂಡಿದ್ದಾರೆ. ಆಗ ಆರೋಪಿ ಮಂಜೇಶ್‍ನ ಕೃತ್ಯ ಗೊತ್ತಾಗಿದೆ. ತಕ್ಷಣ ಪೋಷಕರೇ ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಶಿಕ್ಷಕನೇ ಕಾಮುಕನಾಗಿದ್ದಕ್ಕೆ ವಿದ್ಯಾರ್ಥಿನಿಯ ಪೋಷಕರು ಆತನಿಗೆ ಸರಿಯಾಗಿಯೇ ಪಾಠ ಕಲಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಸಂಬಂಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಸರಿಯಾಗಿ ಕಲ್ತಿಲ್ಲ ಅಂತ ಡಸ್ಟರ್ ನಿಂದ ವಿದ್ಯಾರ್ಥಿ ತಲೆ ಓಪನ್ ಮಾಡಿದ ಶಿಕ್ಷಕ!

    ಸರಿಯಾಗಿ ಕಲ್ತಿಲ್ಲ ಅಂತ ಡಸ್ಟರ್ ನಿಂದ ವಿದ್ಯಾರ್ಥಿ ತಲೆ ಓಪನ್ ಮಾಡಿದ ಶಿಕ್ಷಕ!

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಶಿಕ್ಷಕನೊಬ್ಬ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವಿದ್ಯಾರಣ್ಯಪುರದ ತಿಂಡ್ಲು ಬಳಿ ಇರುವ ನಾರಾಯಣ ಈ ಟೆಕ್ನಿಕೊ ಶಾಲೆಯಲ್ಲಿ ನಡೆದಿದೆ.

    ವೆಂಕಟೇಶ್ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಗಣಿತ ಶಿಕ್ಷಕ. ಸರಿಯಾಗಿ ಕಲಿತ್ತಿಲ್ಲ ಎಂದು ವೆಂಕಟೇಶ್ ಡಸ್ಟರ್ ನಿಂದ ವಿದ್ಯಾರ್ಥಿ ತಲೆ ಓಪನ್ ಮಾಡಿದ್ದು, ಕ್ಲಾಸ್ ರೂಂನಲ್ಲಿ ಹಾಕಲಾಗಿರೋ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

    ಶಿಕ್ಷಕನಿಂದ ವಿದ್ಯಾರ್ಥಿ ಮೇಲೆ ಹಲ್ಲೆ ಖಂಡಿಸಿ ಪೋಷಕರಿಂದ ಶಾಲೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಶಿಕ್ಷಕ ವೆಂಕಟೇಶ್ ವಿರುದ್ಧ ವಿದ್ಯಾರ್ಥಿ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

  • ಬೋರ್ಡ್ ಎಕ್ಸಾಂನಲ್ಲಿ `ಐ ಲವ್ ಯೂ ಪೂಜಾ’ ಎಂದು ಬರೆದ ವಿದ್ಯಾರ್ಥಿ!

    ಬೋರ್ಡ್ ಎಕ್ಸಾಂನಲ್ಲಿ `ಐ ಲವ್ ಯೂ ಪೂಜಾ’ ಎಂದು ಬರೆದ ವಿದ್ಯಾರ್ಥಿ!

    ಲಕ್ನೋ: ವಿದ್ಯಾರ್ಥಿಯೊಬ್ಬ ತಾನು ಪ್ರೀತಿಯಲ್ಲಿ ಬಿದ್ದ ಕಾರಣ ಪರೀಕ್ಷೆಗೆ ಓದಲು ಸಾಧ್ಯವಾಗಿಲ್ಲ ಎಂದು ಉತ್ತರ ಪತ್ರಿಕೆಯಲ್ಲಿ ಬರೆದಿಟ್ಟು ಉತ್ತೀರ್ಣಗೊಳಿಸುವಂತೆ ಮನವಿ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆ ಮೌಲ್ಯ ಮಾಪನದ ವೇಳೆ ಬೆಳಕಿಗೆ ಬಂದಿದೆ.

    ಉತ್ತರ ಪ್ರದೇಶದ ಶಿಕ್ಷಣ ಕ್ಷೇತ್ರದಲ್ಲಿ ಕಟ್ಟುನಿಟ್ಟಿನ ಪರೀಕ್ಷೆ ನಡೆಸಲು ಸೂಚಿಸಿದ್ದ ಸಿಎಂ ಯೋಗಿ ಆದಿತ್ಯನಾಥ್ ಅದೇಶದ ಬಳಿಕ ಲಕ್ಷ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ಸದ್ಯ ಬೋರ್ಡ್ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಆಂಭವಾಗಿದ್ದು, ವಿದ್ಯಾರ್ಥಿಗಳು ವಿಚಿತ್ರ ಉತ್ತರಗಳನ್ನು ಬರೆದು ಪರೀಕ್ಷೆಯಲ್ಲಿ ಉತೀರ್ಣ ಮಾಡಲು ಕೇಳಿಕೊಂಡಿದ್ದಾರೆ.

    ಕೆಲ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯೊಂದಿಗೆ ಹಣವನ್ನು ಇಟ್ಟು ಉತೀರ್ಣ ಮಾಡಲು ಅಮಿಷ ಒಡ್ಡಿದ್ದಾರೆ. ಅಲ್ಲದೇ ತನಗೆ ತಾಯಿ ಇಲ್ಲ, ಈ ಬಾರಿ ಪರೀಕ್ಷೆಯಲ್ಲಿ ನಾನು ಅನುತ್ತೀರ್ಣವಾದರೆ ತಂದೆ ತನ್ನನ್ನು ಕೊಲೆ ಮಾಡುವುದಾಗಿ ಮತ್ತೊಬ್ಬ ವಿದ್ಯಾರ್ಥಿ ಬರೆದಿದ್ದಾನೆ. ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ತನ್ನ ಪ್ರೇಮದ ಬಗ್ಗೆ ಬರೆದಿದ್ದು, ತಾನು ಪ್ರೀತಿ ಮಾಡುವ ಯುವತಿಯ ಹೆಸರು ಹಾಗೂ ಹೃದಯದ ಚಿಹ್ನೆ ಬರೆದಿಟ್ಟಿದ್ದಾನೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಕರೊಬ್ಬರು ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರ ಅನುಕಂಪ ಪಡೆಯಲು ಈ ರೀತಿ ಮಾಡಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಹಣ ಅಮಿಷ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ಉತ್ತರ ಪ್ರದೇಶದ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗೆ ಮಾರ್ಚ್ 17 ರಿಂದ ಮಾಲ್ಯ ಮಾಪನ ಆರಂಭವಾಗಿದ್ದು, 248 ಕೇಂದ್ರಗಳಲ್ಲಿ ನಡೆಯುತ್ತಿದೆ. ಸುಮಾರು 5.5 ಕೋಟಿ ಉತ್ತರ ಪತ್ರಿಗಳನ್ನು 1.46 ಲಕ್ಷ ಶಿಕ್ಷಕರು ಮೌಲ್ಯ ಮಾಪನ ಮಾಡುತ್ತಿದ್ದಾರೆ.

    ಬೋರ್ಡ್ ಪರೀಕ್ಷೆಯ ಫಲಿತಾಂಶ ಏಪ್ರಿಲ್ ಮೂರನೇ ವಾರದಲ್ಲಿ ಬಿಡುಗಡೆಯಾಗುವ ಸಂಭವವಿದೆ ಎಂದು ಯುಪಿ ಶಿಕ್ಷಣ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆಯ ಸ್ಟ್ರಿಕ್ಟ್ ರೂಲ್ಸ್ ಗೆ ಹೆದರಿ 10 ಲಕ್ಷ ವಿದ್ಯಾರ್ಥಿಗಳು ಗೈರು!

  • ಹೆಚ್ಚಿನ ಅಂಕ ನೀಡಲು ವಿದ್ಯಾರ್ಥಿನಿ ಬಳಿ ಕಿಸ್ ಕೇಳಿದ ಶಿಕ್ಷಕ

    ಹೆಚ್ಚಿನ ಅಂಕ ನೀಡಲು ವಿದ್ಯಾರ್ಥಿನಿ ಬಳಿ ಕಿಸ್ ಕೇಳಿದ ಶಿಕ್ಷಕ

    ಮುಂಬೈ: ಹೆಚ್ಚಿನ ಅಂಕ ನೀಡಲು ವಿದ್ಯಾರ್ಥಿನಿ ಬಳಿ ಶಿಕ್ಷಕನೊರ್ವ ಕಿಸ್ ಕೇಳಿದ ಘಟನೆ ಮುಂಬೈನಲ್ಲಿ ನಡೆದಿದೆ.

    35 ವರ್ಷದ ಶಿಕ್ಷಕನೊರ್ವ 17 ವರ್ಷದ ಕಾಮರ್ಸ್ ವಿದ್ಯಾರ್ಥಿನಿ ಬಳಿ ಕಿಸ್ ಕೇಳಿದ್ದು, ಇದ್ದರಿಂದ ಮನನೊಂದ ಯುವತಿ ಖಿನ್ನತೆಗೆ ಜಾರಿದ್ದಾಳೆ. ಅಷ್ಟೇ ಅಲ್ಲದೇ ಈ ಘಟನೆ ನಡೆದ ಎರಡು ವಾರಗಳ ನಂತರ ತನ್ನ ಕುಟುಂಬದವರ ಬಳಿ ಹೇಳಿಕೊಂಡಿದ್ದಾಳೆ.

    ನಗರದ ಪ್ರಸಿದ್ಧ ಕಾಲೇಜಿನಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಈ ಕಾಮುಕ ಮಾರ್ಚ್ 8ರಂದು ಯುವತಿಯ ಬಳಿ ನೀನು ನನಗೆ ಕಿಸ್ ಕೊಟ್ಟರೆ ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ನೀಡುತ್ತೇನೆ ಎಂದು ಕೆಟ್ಟ ಆಫರ್ ನೀಡಿದ್ದಾನೆ.

    ಈ ಘಟನೆ ನಂತರ ಯುವತಿ ಮನನೊಂದು ಖಿನ್ನತೆಗೆ ಜಾರಿದ್ದಾಳೆ. ಬಳಿಕ ಆಕೆಯ ಕುಟುಂಬದವರು ಆಕೆಯ ವಿಚಿತ್ರ ವರ್ತನೆ ನೋಡಿ ಪ್ರಶ್ನಿಸಿದ್ದಾರೆ. ಆಗ ಯುವತಿ ನಡೆದ ಎಲ್ಲ ಘಟನೆ ಬಗ್ಗೆ ತನ್ನ ಕುಟುಂಬದವರ ಹತ್ತಿರ ಹೇಳಿದ್ದಾಳೆ ಎಂದು ಪಾಂಟ್‍ನಗರದ ಪೊಲೀಸ್ ಅಧಿಕಾರಿಯಾದ ರೋಹಿಣಿ ಕಾಳೆ ತಿಳಿಸಿದ್ದಾರೆ.

    ಪೊಲೀಸರು ಈ ಘಟನೆ ಬಗ್ಗೆ ಆದಷ್ಟು ಬೇಗ ತನಿಖೆ ನಡೆಸಲಿ ಎಂದು ಯುವತಿಯ ಪೋಷಕರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಶಿಕ್ಷಕನ ವಿರುದ್ಧ ಐಪಿಸಿ ಸೆಕ್ಷನ್ ಹಾಗೂ ಪೋಸ್ಕೋ ಕಾಯ್ದೆ ಅಡಿ ಲೈಂಗಿಕ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಶಿಕ್ಷಕನನ್ನು ಬಂಧಿಸಿದ್ದಾರೆ.

  • ಬೆಳಗ್ಗೆ ಶಿಕ್ಷಕ ಸಂಜೆ ಭಿಕ್ಷುಕ- ಕುಡಿಯೋದಕ್ಕೆ ಮಾರ್ಕೆಟ್, ಬಸ್ ಸ್ಟ್ಯಾಂಡ್‍ನಲ್ಲಿ ಭಿಕ್ಷಾಟನೆ ಮಾಡೋ ಕುಡುಕ ಅಧ್ಯಾಪಕ

    ಬೆಳಗ್ಗೆ ಶಿಕ್ಷಕ ಸಂಜೆ ಭಿಕ್ಷುಕ- ಕುಡಿಯೋದಕ್ಕೆ ಮಾರ್ಕೆಟ್, ಬಸ್ ಸ್ಟ್ಯಾಂಡ್‍ನಲ್ಲಿ ಭಿಕ್ಷಾಟನೆ ಮಾಡೋ ಕುಡುಕ ಅಧ್ಯಾಪಕ

    ತುಮಕೂರು: ನಿಜವಾಗ್ಲೂ ಇದು ಶಿಕ್ಷಕ ಸಮುದಾಯವೇ ತಲೆತಗ್ಗಿಸುವ ಸ್ಟೋರಿ. ಕುಡಿತಕ್ಕೆ ದಾಸನಾದ ಶಿಕ್ಷಕ ಭಿಕ್ಷಾಟನೆ ಮಾಡ್ತಿರೋ ವಿಲಕ್ಷಣ ಘಟನೆ ಇದು.

    ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ಶಿಕ್ಷಕ ನಾಗೇಂದ್ರಪ್ಪ ಎಣ್ಣೆ ಹೊಡೆಯಲು ಹಣಕ್ಕಾಗಿ ಭಿಕ್ಷಾಟನೆ ಮಾಡುತ್ತಿದ್ದಾನೆ. ಕುಮಾರಲಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕನಾದ ಈತ ದಿನನಿತ್ಯ ಕುಡಿದುಕೊಂಡೇ ಶಾಲೆಗೆ ಹೋಗ್ತಾನೆ. ನಶೆಯಲ್ಲೇ ಪಾಠ ಮಾಡ್ತಾನೆ. ಕುಡಿಯಲು ಹಣ ಇಲ್ಲದೇ ಇದ್ದಾಗ ಮಾರುಕಟ್ಟೆ, ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಾನೆ.

    ಶುಕ್ರವಾರ ರಾತ್ರಿ ಬಸ್ ನಿಲ್ದಾಣದಲ್ಲೇ ಮಲಗಿದ್ದ ನಾಗೇಂದ್ರ, ಬನಿಯನ್ ಮತ್ತು ಟವಲ್ ಸುತ್ತುಕೊಂಡು ಬಸ್ ನಿಲ್ದಾಣದಲ್ಲಿ ಭಿಕ್ಷೆ ಎತ್ತುತ್ತಿದ್ದ. ಕನಕಲುಬಂಡಿ ಶಾಲೆಯಲ್ಲಿ ಸೇವೆ ಸಲ್ಲಿಸುತಿದ್ದಾಗ ಅಮಾನತುಗೊಂಡಿದ್ದ. ಆದರೂ ಬುದ್ಧಿ ಕಲಿಯದ ಈತ ಮತ್ತೆ ಹಳೇ ಚಾಳಿ ಮುಂದುವರೆಸಿದ್ದಾನೆ.

  • ವಿದ್ಯಾರ್ಥಿನಿಯನ್ನ ಮನೆಗೆ ಕರೆಸಿಕೊಂಡು ನಿರಂತರವಾಗಿ ಅತ್ಯಾಚಾರ-ಶಿಕ್ಷಕನ ಬಂಧನ

    ವಿದ್ಯಾರ್ಥಿನಿಯನ್ನ ಮನೆಗೆ ಕರೆಸಿಕೊಂಡು ನಿರಂತರವಾಗಿ ಅತ್ಯಾಚಾರ-ಶಿಕ್ಷಕನ ಬಂಧನ

    ಶಿವಮೊಗ್ಗ: ವಿದ್ಯಾರ್ಥಿನಿ ಮೇಲೆ ಶಿಕ್ಷಕನೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ಸಾಗರದಲ್ಲಿ ನಡೆದಿದೆ.

    ಜಿಲ್ಲೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ಶಿಕ್ಷಕ ಈ ಕೃತ್ಯ ಎಸಗಿದ್ದು, ಅತ್ಯಾಚಾರ ಮಾಡಿದ ಶಿಕ್ಷಕ ಪ್ರಕಾಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿ ಶಿಕ್ಷಕನ ವಿರುದ್ಧ ಪೋಸ್ಕೋ ಹಾಗೂ ಜಾತಿನಿಂದನೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

    ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಮನೆಯ ಸಮೀಪವೇ ಈ ಶಿಕ್ಷಕ ಮನೆ ಮಾಡಿದ್ದನು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸಂತ್ರಸ್ತೆಯನ್ನು ಪಾಠ ಹೇಳಿಕೊಡುವ ನೆಪದಲ್ಲಿ ಕರೆಸಿಕೊಂಡು ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲದೇ ಇದೇ ಚಾಳಿ ಮುಂದುವರೆಸಿದ್ದು, ಪದೇ ಪದೇ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ.

    ಈ ವಿಚಾರ ಸಂತ್ರಸ್ತೆಯ ಪೋಷಕರಿಗೆ ತಿಳಿದ ನಂತರ ಅವರು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಸಾಗರ ಟೌನ್ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದು, ದೂರಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

  • 8ನೇ ತರಗತಿ ವಿದ್ಯಾರ್ಥಿನಿಗೆ ವಿದ್ಯಾರ್ಥಿಗಳ ಮುಂದೆ ಗುಲಾಬಿ ಕೊಟ್ಟು ಜೈಲು ಸೇರಿದ ಶಿಕ್ಷಕ!

    8ನೇ ತರಗತಿ ವಿದ್ಯಾರ್ಥಿನಿಗೆ ವಿದ್ಯಾರ್ಥಿಗಳ ಮುಂದೆ ಗುಲಾಬಿ ಕೊಟ್ಟು ಜೈಲು ಸೇರಿದ ಶಿಕ್ಷಕ!

    ಚೆನ್ನೈ: ಪ್ರೇಮಿಗಳ ದಿನದಂದು ಶಿಕ್ಷಕನೊಬ್ಬ ಎಂಟನೇ ತರಗತಿಯ ವಿದ್ಯಾರ್ಥಿನಿಗೆ ಗುಲಾಬಿ ಹೂ ಕೊಟ್ಟು ಪ್ರೇಮ ನಿವೇದನೆ ಮಾಡಿ ಜೈಲು ಸೇರಿರುವ ಘಟನೆ ತಮಿಳುನಾಡಿನ ಚಿನ್ನ ಸೇಲಂ ಜಿಲ್ಲೆ ವಿಲ್ಲುಪುರಂ ನಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ವಿಲ್ಲುಪುರಂ ಗ್ರಾಮದ ಸರ್ಕಾರಿ ಅನುದಾನಿತ ಶಾಲೆಯ ಶಿಕ್ಷಕ ನಿರ್ಮಲ್ ಪ್ರೇಮಕುಮಾರ್ (43) ಎಂಟನೇ ತರಗತಿ ವಿದ್ಯಾರ್ಥಿನಿಗೆ ಶಾಲೆಯ ಇತರೇ ವಿದ್ಯಾರ್ಥಿಗಳ ಎದುರೇ ಪ್ರೇಮ ನಿವೇದನೆ ಮಾಡಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ಗುಲಾಬಿಯನ್ನು ಪಡೆದುಕೊಳ್ಳಲು ನಿರಾಕರಿಸಿದ್ದಾಳೆ. ಆದರೆ ಪ್ರೇಮಕುಮಾರ್ ಮಾತ್ರ ಗುಲಾಬಿಯನ್ನು ಪಡೆಯಲು ಬಲವಂತವಾಗಿ ಒತ್ತಡ ಹಾಕಿದ್ದಾನೆ.

    ಬಾಲಕಿ ಗುಲಾಬಿ ಪಡೆಯಲು ನಿರಾಕರಿಸಿದಕ್ಕೆ ಪ್ರೇಮ ಕುಮಾರ್ ತಮ್ಮ ಸಹೋದ್ಯೋಗಿ ಶಾಲೆಯ ದೈಹಿಕ ಶಿಕ್ಷಕ ಎಸ್. ಲಾರೆನ್ಸ್ (31) ಸಹಾಯ ಕೇಳಿದ್ದಾನೆ. ಸ್ನೇಹಿತನಿಗೆ ಸಹಾಯ ಮಾಡುವ ಉದ್ದೇಶದಿಂದ ಲಾರೆನ್ಸ್, ಗುಲಾಬಿ ಪಡೆಯದಿದ್ದರೆ ವಿದ್ಯಾಬ್ಯಾಸ ಮುಂದುವರೆಸಲು ತೊಂದರೆಯಾಗುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಶಾಲೆಯಲ್ಲಿ ನಡೆದ ಘಟನೆಯನ್ನು ಪೋಷಕರಿಗೆ ತಿಳಿಸದಂತೆ ಎಚ್ಚರಿಸಿದ್ದಾನೆ.

    ಶಿಕ್ಷಕರ ಅನುಚಿತ ವರ್ತನೆಯಿಂದ ಬೇಸರಗೊಂಡ ಬಾಲಕಿ ಮನೆಗೆ ಅಳುತ್ತಾ ತೆರಳಿದ್ದಾಳೆ. ಈ ವೇಳೆ ವಿದ್ಯಾರ್ಥಿನಿಯ ಪೋಷಕರು ಈಕೆಯನ್ನು ಸಮಾಧಾನ ಪಡಿಸಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ಅನಂತರ ಪೊಲೀಸರಿಗೆ ದೂರು ನೀಡಿ, ಜಿಲ್ಲೆಯ ಶಿಕ್ಷಣಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿ ಇಬ್ಬರು ಶಿಕ್ಷಕರನ್ನು ಸೋಮವಾರ ಅಮಾನತು ಮಾಡಿ ಆದೇಶ ನೀಡಿದ್ದಾರೆ.

    ವಿದ್ಯಾರ್ಥಿನಿ ಪೋಷಕರು ನೀಡಿದ ದೂರಿನ ಅನ್ವಯ ಪೊಲೀಸರು ಇಬ್ಬರು ಶಿಕ್ಷಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಅಂದಹಾಗೇ ಇಬ್ಬರು ಶಿಕ್ಷಕರಿಗೂ ಈಗಾಗಲೇ ಮದುವೆಯಾಗಿದ್ದು ಮಕ್ಕಳು ಇದ್ದಾರೆ.

     

  • ಕಾಲೇಜಿನ ಸ್ಟಾಫ್ ರೂಮಿನಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಲಾಕ್ ಮಾಡಿಕೊಂಡು ಅತ್ಯಾಚಾರವೆಸಗಿದ ಶಿಕ್ಷಕ

    ಕಾಲೇಜಿನ ಸ್ಟಾಫ್ ರೂಮಿನಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಲಾಕ್ ಮಾಡಿಕೊಂಡು ಅತ್ಯಾಚಾರವೆಸಗಿದ ಶಿಕ್ಷಕ

    ಶಿಮ್ಲಾ: ಕಾಲೇಜಿನ ಸ್ಟಾಫ್ ರೂಮಿನಲ್ಲಿ ಹಿರಿಯ ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಹಮಿರ್ಪುರ್ ನಲ್ಲಿ ನಡೆದಿದೆ.

    ಹಮಿರ್ಪುರದ ಸ್ಥಳೀಯ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆ ಗುರುವಾರದಂದು ಈ ಬಗ್ಗೆ ಹೇಳಿಕೊಂಡ ನಂತರ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿ ಕೆಮಿಸ್ಟ್ರಿ ಶಿಕ್ಷಕನಾಗಿದ್ದು, ಸಂತ್ರಸ್ತೆಯನ್ನು ಸ್ಟಾಫ್ ರೂಮಿಗೆ ಕರೆದು ನಂತರ ರೂಂ ಲಾಕ್ ಮಾಡಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

    ಈ ಘಟನೆಯ ಬಳಿಕ ನೂರಾರು ವಿದ್ಯಾರ್ಥಿಗಳು ತಮ್ಮ ತರಗತಿಗಳನ್ನು ಬಿಟ್ಟು ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗೆ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸಿದ್ದು, ನಗರದಲ್ಲಿ ಕಾನೂನು- ಸುವ್ಯವಸ್ಥೆ ಕ್ಷೀಣಿಸುತ್ತಿದೆ. ಹೆಣ್ಣುಮಕ್ಕಳಿಗೆ ಹೆಚ್ಚಿನ ಭದ್ರತೆ ನೀಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

    ಆರೋಪಿ ಶಿಕ್ಷಕನನ್ನು ಈಗ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತೆ ಅಪ್ರಾಪ್ತೆಯಾಗಿರುವುದರಿಂದ ಆರೋಪಿ ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಮತ್ತು ಸಂಬಂಧಿತ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ರಮಣ್ ಕುಮಾರ್ ಮೀನಾ ತಿಳಿಸಿದ್ದಾರೆ.

    ಸಂತ್ರಸ್ತೆಯ ಹೇಳಿಕೆಯನ್ನು ರೆಕಾರ್ಡ್ ಮಾಡಲಾಗುತ್ತದೆ ಹಾಗೂ ಒಂದು ತಿಂಗಳೊಳಗೆ ಕೋರ್ಟ್ ಗೆ ಚಾರ್ಜ್‍ಶೀಟ್ ಸಲ್ಲಿಸಲಾಗುತ್ತದೆ ಎಂದು ಮೀನಾ ಅವರು ಹೇಳಿದ್ದಾರೆ.

  • 13ರ ಬಾಲಕಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ- ಇಂದು ಕಿಸ್ ಡೇ ಎಂದು ಹೇಳಿ ಸ್ಟಾಫ್ ರೂಮ್ ಬಾಗಿಲು ಹಾಕ್ದ ಕಾಮುಕ

    13ರ ಬಾಲಕಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ- ಇಂದು ಕಿಸ್ ಡೇ ಎಂದು ಹೇಳಿ ಸ್ಟಾಫ್ ರೂಮ್ ಬಾಗಿಲು ಹಾಕ್ದ ಕಾಮುಕ

    ಗಾಂಧಿನಗರ: ಶಿಕ್ಷಕನೊಬ್ಬ ನೋಟ್ಸ್ ಚೆಕ್ ಮಾಡುವುದಾಗಿ ಹೇಳಿ ಸ್ಟಾಫ್ ರೂಮಿನಲ್ಲೇ 6ನೇ ಕ್ಲಾಸ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರೋ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಇಲ್ಲಿನ ವಲ್ಸದ್ ಜಿಲ್ಲೆಯ ಗಾಂಧಿವಾಡಿಯ ಸರಸ್ವತಿ ಹಿಂದಿ ಹೈಸ್ಕೂಲ್‍ನಲ್ಲಿ ಸೋಮವಾರದಂದು ಶಿಕ್ಷಕ ಈ ಕೃತ್ಯವೆಸಗಿದ್ದಾನೆ. ಇವತ್ತು ಕಿಸ್ ಡೇ ಎಂದು ಹೇಳಿ ಬಾಲಕಿಗೆ ಶಿಕ್ಷಕ ಚುಂಬಿಸಿದ್ದಾನೆ. ಈ ಬಗ್ಗೆ ಬಾಲಕಿ ಪೋಷಕರಿಗೆ ವಿಷಯ ತಿಳಿಸಿದ ಬಳಿಕ ಶಿಕ್ಷಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು, ಘಟನೆ ನಡೆದಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.

    ಬಾಲಕಿಯ ಪೋಷಕರು ಉಮರ್‍ಗಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 6ನೇ ಕ್ಲಾಸ್‍ನಲ್ಲಿ ಓದುತ್ತಿದ್ದ 13 ವರ್ಷದ ಬಾಲಕಿಯನ್ನ ವಿಜ್ಞಾನ ವಿಭಾಗದ ಶಿಕ್ಷಕ ಓಂ ಪ್ರಕಾಶ್ ಯಾದವ್ ಸೋಮವಾರ ಮಧ್ಯಾಹ್ನ 2.30ರ ವೇಳೆಯಲ್ಲಿ ಸ್ಟಾಫ್ ರೂಮಿಗೆ ಕರೆಸಿದ್ದ. ಕ್ಲಾಸ್ ನೋಟ್ಸ್‍ಗಳನ್ನ ಚೆಕ್ ಮಾಡ್ತೀನಿ, ಎಲ್ಲರೂ ನೋಟ್ ಪುಸ್ತಕಗಳನ್ನ ಕಳಿಸಬೇಕೆಂದು ಹೇಳುವಂತೆ ಮತ್ತೊಬ್ಬ ವಿದ್ಯಾರ್ಥಿಯನ್ನ ಕಳಿಸಿದ್ದ.

    ಬಾಲಕಿ ಎಲ್ಲರ ಪುಸ್ತಕಗಳನ್ನ ಸಂಗ್ರಹಿಸಿ ಸ್ಟಾಫ್ ರೂಮಿಗೆ ಹೋಗಿದ್ದಳು. ಈ ವೇಳೆ ಶಿಕ್ಷಕ ಓಂ ಪ್ರಕಾಶ್ ಎಲ್ಲಾ ಪುಸ್ತಕಗಳನ್ನ ನೋಡಲು ಸಾಧ್ಯವಿಲ್ಲ ಎಂದು ಹೇಳಿ ಬಾಗಿಲು ಹಾಕಿದ್ದ. ನಂತರ ಇಂದು ಕಿಸ್ ಡೇ ಎಂದು ಹೇಳಿ ಬಾಲಕಿಗೆ ಕಿಸ್ ಮಾಡಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬಾಲಕಿ ಮನೆಗೆ ಬಂದ ಬಳಿಕ ಪೋಷಕರಿಗೆ ವಿಷಯ ತಿಳಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ವಿಷಯ ತಿಳಿಯುತ್ತಿದ್ದಂತೆ ಹಲವಾರು ಪೋಷಕರು ಶಾಲೆಗೆ ಹೋಗಿ ಪ್ರಿನ್ಸಿಪಾಲ್‍ಗೆ ಈ ಬಗ್ಗೆ ತಿಳಿಸಿದ್ದಾರೆ. ನಂತರ ಕಾಮುಕ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.