Tag: ಶಿಕ್ಷಕ

  • ಪಠ್ಯಪುಸ್ತಕದಲ್ಲಿ ನೋಟ್ ಮಾಡ್ಕೊಂಡಿದ್ದಕ್ಕೆ ಥಳಿತ- ವಿದ್ಯಾರ್ಥಿ ಭುಜ ಮುರಿತ..!

    ಪಠ್ಯಪುಸ್ತಕದಲ್ಲಿ ನೋಟ್ ಮಾಡ್ಕೊಂಡಿದ್ದಕ್ಕೆ ಥಳಿತ- ವಿದ್ಯಾರ್ಥಿ ಭುಜ ಮುರಿತ..!

    ಶಿವಮೊಗ್ಗ: ಇಲ್ಲಿನ ದುರ್ಗಿಗುಡಿ ಶಾಲೆಯ ಶಿಕ್ಷಕನೋರ್ವ ಪಠ್ಯ ಪುಸ್ತಕದಲ್ಲಿ ಪಾಠದ ಪಾಯಿಂಟ್ಸ್ ಬರೆದುಕೊಳ್ಳುತ್ತಿದ್ದ ಕಾರಣಕ್ಕೆ ವಿದ್ಯಾರ್ಥಿಗೆ ಥಳಿಸಿದ್ದು, ಇದರಿಂದಾಗಿ ವಿದ್ಯಾರ್ಥಿಯ ಭುಜ ಮುರಿತಕ್ಕೆ ಕಾರಣವಾಗಿರುವ ಘಟನೆ ಬೆಳಕಿಗೆ ಬಂದಿದೆ.

    ಶಾಲಾ ಶಿಕ್ಷಕನ ಹೊಡೆತಕ್ಕೆ ನಲುಗಿ ವಿದ್ಯಾರ್ಥಿ ಗೌತಮ್ ಭುಜದ ಮೂಳೆ ಮುರಿದಿದೆ. ಗೌತಮ್ ನಗರದ ದುರ್ಗಿಗುಡಿ ಶಾಲೆಯ 7 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಜ. 9 ರಂದು ಶಾಲೆಯಲ್ಲಿ ಕನ್ನಡ ವಿಷಯ ಪಾಠದ ವೇಳೆ ಗೌತಮ್ ಕನ್ನಡ ಪಠ್ಯ ಪುಸ್ತಕದಲ್ಲಿ ಪಾಠದ ಪಾಯಿಂಟ್ಸ್ ಬರೆದುಕೊಳ್ಳುತ್ತಿದ್ದನಂತೆ, ಇದನ್ನ ಗಮನಿಸಿದ ಶಾಲೆಯ ಮೇಷ್ಟ್ರು ಪರಮೇಶ್ವರ್ ರಫ್ ನೋಟ್ ಬುಕ್ ಎಲ್ಲಿ ಎಂದು ವಿಚಾರಿಸಿ ಕೆನ್ನೆಗೆ ಭಾರಿಸಿದ್ದಾರಂತೆ. ತಂದಿಲ್ಲ ಎಂದು ಉತ್ತರ ನೀಡಿರುವ ವಿದ್ಯಾರ್ಥಿಗೆ ಬೆನ್ನಿನ ಮೇಲೆ ಭಾರಿಸಿದ್ದಾರೆ. ಇದರಿಂದಾಗಿ ತರಗತಿಯ ಟೇಬಲ್ ಗೆ ವಿದ್ಯಾರ್ಥಿಯ ಎಡಭುಜ ತಗುಲಿ ಫ್ರಾಕ್ಚರ್ ಆಗಿದೆ.

    ಗಾಯಗೊಂಡು ನಲುಗಿದ್ದ ವಿದ್ಯಾರ್ಥಿಗೆ ಪುನಃ ಆ ಕನ್ನಡ ಮೇಷ್ಟ್ರು, ನಾಟಕ ಮಾಡುತ್ತಿಯಾ ಎಂದು ಮತ್ತೆ ಥಳಿಸಿದ್ದಲ್ಲದೇ, ನಿಂದಿಸಿದ್ದಾರೆ. ನಂತರ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕವೂ ಗೌತಮ್‍ಗೆ ಎರಡು ದಿನ ತೀವ್ರವಾಗಿ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆತನನ್ನ ಪುನಃ ಆಸ್ಪತ್ರೆಗೆ ಕರೆದುಕೊಂಡು ತೋರಿಸಿದಾಗ ಭುಜ ಮುರಿದಿದೆ ಎಂದು ತಿಳಿದುಬಂದಿರುವುದಾಗಿ ವಿದ್ಯಾರ್ಥಿಯ ಪಾಲಕರಾದ ಸುಮತಿ ತಿಳಿಸಿದ್ದಾರೆ.

    ಒಬ್ಬ ಶಾಲಾ ಶಿಕ್ಷಕನಾದವನಿಗೆ ವಿದ್ಯಾರ್ಥಿಗಳ ಸೂಕ್ಷ್ಮತೆ ಮತ್ತು ಪರಿಸ್ಥಿತಿಯ ಅರಿವಿರಬೇಕು. ಆದರೆ ಈ ಸೂಕ್ಷ್ಮತೆಯ ಅರಿವಿಲ್ಲದ ಕಾರಣ ಮೇಷ್ಟ್ರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕನ್ನಡ ಶಾಲೆ ಉಳಿವಿಗಾಗಿ ಡ್ರೈವರ್ ಆದ್ರು ಮೇಷ್ಟ್ರು!

    ಕನ್ನಡ ಶಾಲೆ ಉಳಿವಿಗಾಗಿ ಡ್ರೈವರ್ ಆದ್ರು ಮೇಷ್ಟ್ರು!

    ಉಡುಪಿ: ಖಾಸಗಿ ಶಾಲೆಗಳ ಆರ್ಭಟ ಮತ್ತು ಪೋಷಕರ ಅತಿಯಾದ ಆಂಗ್ಲ ಮಾಧ್ಯಮದ ಒಲವಿನಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಆದರೆ ಉಡುಪಿಯ ಬ್ರಹ್ಮಾವರ ತಾಲೂಕಿನ ಬಾರಾಳಿಯ ಶಿಕ್ಷಕರಾದ ರಾಜಾರಾಮ್ ಅವರು ಕನ್ನಡ ಶಾಲೆಗಳ ಉಳಿಸಲು ಹಗಲಿರುಳು ಪ್ರಯತ್ನ ಮಾಡುತ್ತಿದ್ದಾರೆ.

    ಬಾರಾಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾಗಿರುವ ರಾಜಾರಾಮ್ ಅವರು, ಬೆಳಗ್ಗೆ 7 ಗಂಟೆಗೆ ಎದ್ದು ಶಾಲೆಯ ಬಸ್ಸಿನ ಚಾಲಕನ ಸೀಟು ಏರಿ 87 ಮಕ್ಕಳನ್ನು ಕರೆದುಕೊಂಡು ಬೆಳಗ್ಗೆ 9.15ಕ್ಕೆ ಶಾಲೆಗೆ ಬರುತ್ತಾರೆ. ಮತ್ತೆ ಸಂಜೆ ತರಗತಿ ಬಿಟ್ಟ ಕೂಡಲೇ ಎಲ್ಲಾ ಮಕ್ಕಳನ್ನು ಮನೆಗೆ ಬಿಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

    ಹಳ್ಳಿಗಾಡಿನ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲದಿದ್ದಾಗ ಶಾಲೆಯ ಹಳೆ ವಿದ್ಯಾರ್ಥಿ ವಿಜಯ ಹೆಗ್ಡೆ ಎಂಬುವವರು ಸ್ಕೂಲ್ ಬಸ್ ಖರೀದಿಸಿ ಶಾಲೆಗೆ ಕೊಟ್ಟಿದ್ದಾರೆ. ಬಸ್‍ಗೆ ಚಾಲಕ ಹಾಗೂ ಸಹಾಯಕ, ಡೀಸೆಲ್ ಹಾಗೂ ನಿರ್ವಹಣೆ ಮಾಡಲು ತಿಂಗಳಿಗೆ ಸಾವಿರಾರು ರೂ. ಖರ್ಚಾಗುತ್ತಿತ್ತು. ಶಾಲೆಯಲ್ಲಿ ಹೆಚ್ಚಿನ ಅನುದಾನ ಇಲ್ಲದೇ ಬಸ್ ಓಡಾಟ ನಿಲ್ಲಿಸಬೇಕೆಂದಿದ್ದಾಗ ಶಾಲೆಯ ದೈಹಿಕ ಶಿಕ್ಷಕರಾಗಿರುವ ರಾಜಾರಾಮ ಅವರು ತಾವು ಡ್ರೈವರ್ ಆಗಲು ಮುಂದೆ ಬಂದಿದ್ದಾರೆ. ದಿನಕ್ಕೆ 8 ಟ್ರಿಪ್ ಡ್ರೈವರ್ ಆಗಿ ಕೆಲಸ ಮಾಡುವ ರಾಜಾರಾಮ್ ಮೇಷ್ಟ್ರು, ಬಸ್ ನಿರ್ವಹಣೆಗೆ ಈವರೆಗೆ 70 ಸಾವಿರ ರೂ. ಸಂಬಳದ ಹಣ ಖರ್ಚು ಮಾಡಿದ್ದಾರೆ.

    ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರಾಳಿ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು 6 ಕಿ.ಮೀ. ನಡೆದು ಹೋಗುವ ಅನಿವಾರ್ಯತೆ ಇತ್ತು. ಈ ಸಮಸ್ಯೆಯಿಂದ ಶಾಲೆಗೆ ಆಗಮಿಸುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಕಡಿಮೆಯಾಗಿತ್ತು. ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಲು ಮುಂದಾದ ಶಾಲೆಯ ಶಿಕ್ಷಕ ರಾಜರಾಮ್ ತಾವೇ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಶಾಲೆಗೆ ಸುತ್ತಲಿನ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದು, ಶಿರಿಯಾರ ಕಲ್ಲುಬೆಟ್ಟು, ಹೊರಳಿಜೆಡ್ಡು, ಅಲ್ತಾರು ಕಾರ್ತಿಬೆಟ್ಟು, ಕಾಜ್ರಳ್ಳಿ, ಮುಸಪುರಿ ಗ್ರಾಮಗಳಿಂದ ತಾವೇ ವಿದ್ಯಾರ್ಥಿಗಳನ್ನು ಕರೆತರುತ್ತಾರೆ. ಉಳಿದಂತೆ ದೈಹಿಕ ಶಿಕ್ಷಣದ ಜೊತೆಗೆ ವಿಜ್ಞಾನ ಮತ್ತು ಗಣಿತವನ್ನೂ ಬೋಧಿಸುತ್ತಾರೆ.

    ಶಾಲಾ ವಾಹನ ಚಾಲನೆ ಮಾಡಲು ಶಿಕ್ಷಕರು ಪರವಾನಗಿ ಸಹ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಮುಂದಾದ ಬಳಿಕ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಪೋಷಕರು ಸಹ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆ. ಕಳೆದ 2 ಎರಡು ವರ್ಷದಿಂದ ಈ ಎಲ್ಲಾ ಸೇವೆಯನ್ನು ಒಂದು ದಿನವೂ ತಪ್ಪದೆ ಮಾಡುತ್ತಿರುವ ರಾಜಾರಾಮ್ ಮೇಷ್ಟ್ರು, ಮಕ್ಕಳು ಹಾಗೂ ಪೋಷಕರು ಸೇರಿದಂತೆ ಸಹ ಶಿಕ್ಷಕರ ಅಕ್ಕರೆಗೆ ಪಾತ್ರರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಾಟ್ಸಪ್‍ನಲ್ಲಿ ಬೆತ್ತಲೇ ಫೋಟೋ ಕಳಿಸ್ತಾನೆ – ಹೇಂಗಿದೆ ನೋಡಿ ಹೇಳು ಅಂತಾನೆ ಗಣಿತ ಮೇಷ್ಟ್ರು

    ವಾಟ್ಸಪ್‍ನಲ್ಲಿ ಬೆತ್ತಲೇ ಫೋಟೋ ಕಳಿಸ್ತಾನೆ – ಹೇಂಗಿದೆ ನೋಡಿ ಹೇಳು ಅಂತಾನೆ ಗಣಿತ ಮೇಷ್ಟ್ರು

    ಬೆಂಗಳೂರು: ಗಣಿತ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಬೆತ್ತಲೇ ಫೋಟೋ ಕಳುಹಿಸಿ ವಿಕೃತ ಮೆರೆದ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

    ಚನ್ನೇಗೌಡ ಬೆತ್ತಲೆ ಫೋಟೋ ಕಳುಹಿಸಿದ ಶಿಕ್ಷಕ. ಚನ್ನೇಗೌಡ ಮೂಲತಃ ಮಂಡ್ಯದವನಾಗಿದ್ದು, ತನ್ನ ವಿದ್ಯಾರ್ಥಿಯ ಫೋನ್ ನಂಬರ್ ಪಡೆದು ಬೆತ್ತಲೆ ಫೋಟೋವನ್ನು ಕಳುಹಿಸಿದ್ದಾನೆ. ತನ್ನ ಶಿಕ್ಷಕನ ಹೊಸ ಅವತಾರ ಕಂಡು ಹಳೆ ವಿದ್ಯಾರ್ಥಿನಿ ಕಂಗಾಲಾಗಿದ್ದಾಳೆ.

    ವಿದ್ಯಾರ್ಥಿನಿ ತುಮಕೂರಲ್ಲಿ 9ನೇ ಕ್ಲಾಸ್‍ನಲ್ಲಿ ಓದುವ ವೇಳೆ ಚನ್ನೇಗೌಡ ಗಣಿತ ವಿಷಯ ಹೇಳಿಕೊಡುತ್ತಿದ್ದನು. ನಂತರ ಯುವತಿ ಮದುವೆ ಆಗಿ ಬೆಂಗಳೂರಿನ ಗಂಡನ ಮನೆಗೆ ಶಿಫ್ಟ್ ಆಗಿದ್ದಳು. ಇತ್ತೀಚೆಗೆ ಚನ್ನೇಗೌಡ ಅದು ಹೇಗೋ ಯುವತಿ ಫೋನ್ ನಂಬರ್ ಪಡೆದಿದ್ದಾನೆ.

    ಯುವತಿಯ ಫೋನ್ ನಂಬರ್ ಪಡೆದ ಚನ್ನೇಗೌಡ ಚಾಟ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ವಾಟ್ಸಾಪ್‍ನಲ್ಲಿ ಬೆತ್ತಲೆ ಫೋಟೋ ಕಳುಹಿಸಿ ಹೇಗಿದೆ ನೋಡಿ ಹೇಳು ಎಂದು ಮೆಸೇಜ್ ಮಾಡಿದ್ದಾನೆ. ಈ ಮೆಸೇಜ್ ನೋಡಿದ ಯುವತಿ ತನ್ನ ಪತಿಯ ಮೂಲಕ ಚನ್ನೇಗೌಡನ ವಿರುದ್ಧ ದೂರು ನೀಡಿದ್ದಾಳೆ.

    ಗಣಿತ ಶಿಕ್ಷಕ ಚನ್ನೇಗೌಡ ವಿರುದ್ಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 15ರ ವಿದ್ಯಾರ್ಥಿನಿಯನ್ನೇ ಮದುವೆಯಾದ ಟ್ಯೂಷನ್ ಟೀಚರ್!

    15ರ ವಿದ್ಯಾರ್ಥಿನಿಯನ್ನೇ ಮದುವೆಯಾದ ಟ್ಯೂಷನ್ ಟೀಚರ್!

    – ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಗ್ರಾಮಸ್ಥರ ಹಿಂದೇಟು

    ಪಟ್ನಾ: ಟ್ಯೂಷನ್ ಕಲಿಸುತ್ತಿದ್ದ ಬಿಹಾರದ ಗ್ರಾಮವೊಂದರ ಶಿಕ್ಷಕನೊಬ್ಬ ತನ್ನ ಬಳಿ ಬರುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನೇ ಮದುವೆಯಾಗಿದ್ದಾನೆ.

    ನಾರಾಯಣ್‍ಪುರ ಗ್ರಾಮದಲ್ಲಿ ಶಿಕ್ಷಕ ಚಂದ್ರಪ್ರಕಾಶ್ ಮೆಹ್ತಾ(50) ವಿದ್ಯಾರ್ಥಿಗಳಿಗೆ ಖಾಸಗಿ ಟ್ಯೂಷನ್ ಕೇಂದ್ರವನ್ನು ನಡೆಸುತ್ತಿದ್ದನು. ಆತನ ಬಳಿ ಗ್ರಾಮದ ಹಲವು ಹೆಣ್ಣು ಮಕ್ಕಳು ಟ್ಯೂಷನ್‍ಗೆ ಹೋಗುತ್ತಿದ್ದರು. ಆದ್ರೆ ಕೆಲವು ದಿನಗಳ ಹಿಂದೆ ಚಂದ್ರಪ್ರಕಾಶ್ ಟ್ಯೂಷನ್‍ಗೆ ಬರುತ್ತಿದ್ದ 15 ವರ್ಷದ ವಿದ್ಯಾರ್ಥಿನಿಯೊಬ್ಬಳನ್ನು ಯಾರಿಗೂ ತಿಳಿಯದಂತೆ ವಿವಾಹವಾಗಿದ್ದನು. ಅಷ್ಟೇ ಅಲ್ಲದೆ ಅವಳ ಜೊತೆ ದೈಹಿಕ ಸಂಬಂಧವನ್ನು ಕೂಡ ಇಟ್ಟುಕೊಂಡಿದ್ದನು.

    ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಇಡೀ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ಮಕ್ಕಳಿಗೂ ಯಾರಾದರೂ ಮೋಡಿ ಮಾಡಿ ಮದುವೆಯಾಗಿಬಿಟ್ಟರೆ ಏನು ಗತಿ ಎಂದು ಹೆದರಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.

    ಯಾರೋ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಅಂತ ಶಿಕ್ಷಣದಿಂದ ವಂಚಿತರಾಗಿರುವ ಹೆಣ್ಣು ಮಕ್ಕಳು ಈಗ ಕಣ್ಣೀರಿಡುತ್ತಿದ್ದಾರೆ. ಘಟನೆ ಕುರಿತು ತಿಳಿಯುತ್ತಿದಂತೆ ಸ್ಥಳಕ್ಕೆ ಭೇಟಿ ನೀಡಿದ ಮಹಿಳಾ ಪರ ಸಂಘಟನೆಯ ಸದಸ್ಯರು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೇ ಗ್ರಾಮಸ್ಥರು ಮಾತ್ರ ಯಾರ ಮೇಲೂ ನಮಗೆ ನಂಬಿಕೆ ಇಲ್ಲ. ನಮ್ಮ ಮಕ್ಕಳ ಭದ್ರತೆ ನಮಗೆ ಮುಖ್ಯ. ನಾವು ಅವರನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಗೆ ಕರೆದುಕೊಂಡು ಹೋಗಿ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

    ಮನೆಗೆ ಕರೆದುಕೊಂಡು ಹೋಗಿ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

    ಕಲಬುರಗಿ: ಶಾಲಾ ಬಾಲಕನ ಮೇಲೆ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಾಶುಮೀಯಾ(32) ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಶಿಕ್ಷಕ. ಪಾಶುಮೀಯಾ 12 ವರ್ಷದ ವಿದ್ಯಾರ್ಥಿಗೆ ಐಸ್ ಕ್ರೀಂ ನೀಡುವುದಾಗಿ ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದನು. ಈ ವೇಳೆ ಶಿಕ್ಷಕ ಮನೆಯಲ್ಲಿ ಬಾಲಕನ ಮೇಲೆ ಪಾಶುಮೀಯಾ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

    ಶಿಕ್ಷಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವಿಷಯವನ್ನು ಪೋಷಕ ಬಳಿ ಹೇಳಿಕೊಂಡಿದ್ದಾನೆ. ಪೋಷಕರು ಬಾಲಕನನ್ನು ಸೇಡಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಾಲಕ ಈಗ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಳಿಕ ಪೋಷಕರು ಮಳಖೇಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಈ ಬಗ್ಗೆ ಮಳಖೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪಾಶುಮಿಯಾಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕ ಪತಿಯನ್ನ ಕೊಲೆಗೈದ ಪತ್ನಿ

    ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕ ಪತಿಯನ್ನ ಕೊಲೆಗೈದ ಪತ್ನಿ

    ಹೈದರಾಬಾದ್: ಕುಡಿದ ಅಮಲಿನಲ್ಲಿ ಸ್ವಂತ ಮಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕನನ್ನು ಆತನ ಪತ್ನಿಯೇ ಹೊಡೆದು ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯ ಕಲ್ಯಾಣದುರ್ಗಂನಲ್ಲಿ ನಡೆದಿದೆ.

    ಸದಾಶಿವ ಎಂಬಾತನೇ ಮೃತ ಶಿಕ್ಷಕ. ಶೋಭಾರಾಣಿ ಕೊಲೆ ಮಾಡಿದ ಆರೋಪಿ. ಕೊತಚೆರುವು ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನಾಗಿ ಸದಾಶಿವ ಕರ್ತವ್ಯ ನಿರ್ವಹಿಸುತ್ತಿದ್ದನು. ಕಳೆದ 25 ವರ್ಷದ ಹಿಂದೆ ಸದಾಶಿವ ಹಾಗೂ ಶೋಭಾರಾಣಿ ಮದುವೆಯಾಗಿದ್ದರು. ಆದರೆ ಮದುವೆಯಾದ 5 ವರ್ಷದ ಬಳಿಕ ಸದಾಶಿವ ಕುಡಿಯಲು ಆರಂಭಿಸಿ ಬೇರೆ ಮಹಿಳೆಯರ ಸಂಬಂಧವನ್ನು ಇಟ್ಟುಕೊಂಡಿದ್ದ. ಹಾಗೆಯೆ ಹೆಂಡತಿ ಮಗಳನ್ನು ಬಿಟ್ಟು ಬೇರೆ ಮಹಿಳೆಯ ಜೊತೆ ಇರಲು ಆರಂಭಿಸಿದ್ದನು.

    ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದ ಸದಾಶಿವ ಪತ್ನಿ ಹಾಗೂ ಮಗಳಿಗೆ ಹೊಡೆದು ಹಿಂಸೆ ನೀಡುತ್ತಿದ್ದನು. ಆದರೂ ಇದನ್ನೆಲ್ಲ ಸಹಿಸಿಕೊಂಡು ಶೋಭಾ ತನ್ನ ಮಗಳನ್ನು ಹೇಗೋ ಕಷ್ಟ ಪಟ್ಟು ಸಾಕುತ್ತಿದ್ದಳು. ಬುಧವಾರ ರಾತ್ರಿ ಸದಾಶಿವ ಕುಡಿದು ಬಂದು ಶೋಭಾ ಜೊತೆ ಜಗಳವಾಡಿದ್ದಾನೆ. ಅಷ್ಟೆ ಅಲ್ಲದೆ ತನ್ನ ಸ್ವಂತ ಮಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಆಗ ಶೋಭಾ ಬೇರೆ ಉಪಾಯವಿಲ್ಲದೆ ಆತನ ತಲೆಗೆ ಕಟ್ಟಿಗೆ ತುಂಡಿನಿಂದ ಹೊಡಿದ್ದಾಳೆ. ಸದಾಶಿವನ ತಲೆಗೆ ಬಲವಾಗಿ ಪೆಟ್ಟು ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಗುರುವಾರದಂದು ಈ ಘಟನೆ ಬೆಳಕಿಗೆ ಬಂದಿದ್ದು, ಆರೋಪಿ ಶೋಭಾಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 63ರ ಅಜ್ಜನಿಗೆ ನೆನಪಾಯ್ತು 30 ವರ್ಷ ಹಿಂದಿನ ಲವ್ ಕಹಾನಿ

    63ರ ಅಜ್ಜನಿಗೆ ನೆನಪಾಯ್ತು 30 ವರ್ಷ ಹಿಂದಿನ ಲವ್ ಕಹಾನಿ

    -ಹಳೇ ಲವ್ವರ್ ನೆನೆದು ಕಟ್ಟಿಕೊಂಡ ಪತ್ನಿಗೇ ಗುಂಡಿಟ್ಟು ಕೊಂದ

    ಚಿಕ್ಕಮಗಳೂರು: ನಿವೃತ್ತ ಶಿಕ್ಷಕನೊಬ್ಬ ತನ್ನ ಪತ್ನಿಗೆ ಗುಂಡಿಟ್ಟು ಕೊಂದು ಬಳಿಕ ಠಾಣೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದೆ.

    63 ವರ್ಷದ ಮುದುಕ ಶಿಕ್ಷಕನಿಗೆ 30 ವರ್ಷದ ಹಿಂದಿನ ಲವ್ ಕಹಾನಿ ನೆನಪಾಗಿದ್ದು, ತನ್ನ ಹಳೆಯ ದ್ವೇಷದಿಂದಲೇ ಕಟ್ಟಿಕೊಂಡ ಹೆಂಡತಿಯನ್ನು ಗುಂಡಿಕ್ಕಿ ಕೊಲೆಗೈದಿದ್ದಾನೆ.

    ಬಸವರಾಜಪ್ಪ 35 ವರ್ಷಗಳ ಕಾಲ ಶಿಕ್ಷಕನಾಗಿದ್ದು, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಂಚುಗಾರನಹಳ್ಳಿ ನಿವಾಸಿಯಾಗಿದ್ದಾನೆ. ಈತ 35 ವರ್ಷಗಳ ಕಾಲ ಶಿಕ್ಷಕ ವೃತ್ತಿ ಮಾಡಿ ಈಗ ನಿವೃತ್ತಿ ಪಡೆದಿದ್ದಾನೆ. ಕಳೆದ ಸೋಮವಾರ ರಾತ್ರಿ ತನ್ನ ಪತ್ನಿಯ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಹತ್ಯೆಗೈದಿದ್ದಾನೆ. ಆರು ವರ್ಷದ ಹಿಂದೆಯೇ ತನ್ನ ಪತ್ನಿ ಜಯಮ್ಮಗೆ ಡಿವೋರ್ಸ್ ನೀಡಿದ್ದ ಬಸವರಾಜಪ್ಪ, ತವರು ಮನೆಯಲ್ಲಿದ್ದ ಜಯಮ್ಮ ಸ್ನಾನ ಮಾಡಿ ಬರುವ ವೇಳೆ ಏಕಾಏಕಿ ಮನೆಗೆ ನುಗ್ಗಿ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡಿನ ದಾಳಿಯಿಂದ ರಕ್ತದ ಮಡುವಿನಲ್ಲಿ ಬಿದ್ದ ಜಯಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಪ್ರೀತಿಸಿ ಮದುವೆಯಾಗಿದ್ದ ಜಯಮ್ಮಳಿಗೆ ಬಸವರಾಜಪ್ಪ ಕಳೆದ 30 ವರ್ಷಗಳಿಂದ ಕಿರುಕುಳ ನೀಡುತ್ತಿದ್ದನು. ಎರಡ್ಮೂರು ಬಾರಿ ಬುರುಡೆ ಬಿಚ್ಚಿ ತವರಿಗೆ ಕೂಡ ಅಟ್ಟಿದ್ದನು. 6 ವರ್ಷದ ಹಿಂದೆ ಡಿವೋರ್ಸ್ ನೀಡಿ ಬೇರೆ ಇದ್ದರು. ಇಷ್ಟಕ್ಕೆಲ್ಲಾ ಆಫ್ಟರ್ ಮ್ಯಾರೇಜ್ ಲವ್ ಸ್ಟೋರಿಯೇ ಕಾರಣ. ಶಿಕ್ಷಕನಾಗಿದ್ದಾಗ ಸಹ ಉದ್ಯೋಗಿಯನ್ನು ಬಸವರಾಜಪ್ಪ ಲವ್ ಮಾಡಿದ್ದನು. ಪತ್ನಿಗೆ ಡಿವೋರ್ಸ್ ನೀಡಿ ಆಕೆಯನ್ನ ಮದುವೆಯಾಗೋಕೆ ಯತ್ನಿಸಿದ್ದನು. ಸಾಧ್ಯವಾಗದಿದ್ದಕ್ಕೆ ಕಳೆದ 30 ವರ್ಷಗಳಿಂದ ಸ್ನೇಹಿತ ಹಾಗೂ ಪತ್ನಿ ಮೇಲೆ ಹಗೆ ಸಾಧಿಸಿ ಕೊಲೆ ಮಾಡಿದ್ದಾನೆ.

    ಪತ್ನಿಯನ್ನ ಹತ್ಯೆ ಮಾಡಿದ ಕೂಡಲೇ ಗ್ರಾಮಸ್ಥ ಹಾಗೂ 60 ವರ್ಷದ ಸ್ನೇಹಿತ ಮರುಳಸಿದ್ದಪ್ಪ ಎಂಬವರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಜಮೀನಿನಲ್ಲಿ ಕೆಲಸ ಮಾಡ್ತಿದ್ದ ಸಿದ್ದಪ್ಪ ಹಾಗೂ ಆತನ ಮಗನ ಮೇಲೆ ಮನಸ್ಸೋ ಇಚ್ಛೆ ದೊಣ್ಣೆ ಬೀಸಿದ್ದಾನೆ. ಅವರಿಬ್ಬರಿಗೂ ಬಲವಾದ ಗಾಯಗಳಾಗಿದ್ದು ಆಸ್ಪತ್ರೆ ಸೇರಿದ್ದಾರೆ. ಬಸಪ್ಪನ ಲವ್ ಸ್ಟೋರಿ ಹಳ್ಳ ಹತ್ತಲೂ ಸಿದ್ದಪ್ಪನೇ ಕಾರಣ ಎಂದು ಸಿದ್ದಪ್ಪನ ಮೇಲೆ ಬಸಪ್ಪ 30 ವರ್ಷಗಳಿಂದ ಹಗೆ ಸಾಧಿಸುತ್ತಿದ್ದನು.

    ಗಾಯಾಳು ಸಿದ್ದಪ್ಪ ಹೇಳುವ ಪ್ರಕಾರ, ಬಸವರಾಜಪ್ಪ ಜಯಮ್ಮನ ಮದುವೆಯಾದ ಬಳಿಕವೂ ಬೇರೆ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಲೂ ಯತ್ನಿಸಿದ್ದನು. ಆಗ ಪತ್ನಿ ಜಯಮ್ಮನಿಗೆ ಡಿವೋರ್ಸ್ ನೀಡಿ ಬೇರೆ ಹುಡುಗಿಯನ್ನು ಮದುವೆಯಾಗೋದಾಗಿ ಸ್ನೇಹಿತ ಸಿದ್ದಪ್ಪ ಬಳಿ ಹೇಳಿಕೊಂಡಿದ್ದನು. ಈತ ಪ್ರೀತಿಸುತ್ತಿದ್ದ ಹುಡುಗಿಯ ಮನೆಯವರ ಜೊತೆ ತನಗೆ ಮದುವೆಯಾಗಿಲ್ಲ ಎಂದು ಹೇಳಿ ಮಾತನಾಡಿ ಒಪ್ಪಿಸು ಎಂದಿದ್ದ. ಇದಕ್ಕೆ ಸಿದ್ದಪ್ಪ ಒಪ್ಪದ ಕಾರಣ ಅಂದಿನಿಂದ ಹಗೆ ಸಾಧಿಸ್ತಿದ್ದನು. ಆದರೆ ಸಿದ್ದಪ್ಪ ನಿವೃತ್ತ ಶಿಕ್ಷಕ ಬಸವರಾಜಪ್ಪ ಪತ್ನಿ ಜಯಮ್ಮ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು ಎಂಬ ಮಾತುಗಳು ಕೇಳಿ ಬರುತ್ತಿದೆ.

    ಹಳೆಯ ಸ್ನೇಹವೊಂದು ಅಕ್ರಮ ಸಂಬಂಧ ಹಾಗೂ ಪ್ರೀತಿಯ ವ್ಯಾಮೋಹಕ್ಕೆ ಬಿದ್ದು ಜೀವನದ ಸಂಧ್ಯಾಕಾಲದಲ್ಲಿ ಹಳೆಯ ದ್ವೇಷ ಜ್ವಾಲಾಮುಖಿಯಂತೆ ಉಕ್ಕಿ ಹರಿದಿದ್ದು ಒಂದು ಜೀವವನ್ನು ಬಲಿತೆಗೆದುಕೊಂಡಿದೆ. ಜೊತೆಗೆ ಇಬ್ಬರು ಸ್ನೇಹಿತರಲ್ಲಿ ಓರ್ವ ಜೈಲು ಪಾಲಾದರೆ ಮತ್ತೋರ್ವ ಆಸ್ಪತ್ರೆ ಪಾಲಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರ್ಗಿಲ್‍ನಲ್ಲಿ ಪಾಕ್ ವಿರುದ್ಧ ಸೆಣಸಿದ್ದ ಯೋಧ-ವಿದ್ಯಾರ್ಥಿಗಳಿಗೆ ಉಚಿತ ಸೇನಾ ತರಬೇತಿ

    ಕಾರ್ಗಿಲ್‍ನಲ್ಲಿ ಪಾಕ್ ವಿರುದ್ಧ ಸೆಣಸಿದ್ದ ಯೋಧ-ವಿದ್ಯಾರ್ಥಿಗಳಿಗೆ ಉಚಿತ ಸೇನಾ ತರಬೇತಿ

    -ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಬೋಧನೆ

    ಧಾರವಾಡ/ಹುಬ್ಬಳ್ಳಿ: ಸೇನೆ ಸೇರಬೇಕು, ದೇಶ ಸೇವೆ ಮಾಡಬೇಕು ಎಂದು ಅದೆಷ್ಟೋ ಜನರು ಕನಸು ಕಾಣುತ್ತಾರೆ. ಆದ್ರೆ ಎಲ್ಲರಿಗೂ ಆ ಅದೃಷ್ಟ ಸಿಗಲ್ಲ. ಇವತ್ತಿನ ನಮ್ಮ ಪಬ್ಲಿಕ್ ಹೀರೋ ಹುಬ್ಬಳ್ಳಿಯ ನಿವೃತ್ತ ಯೋಧ ನಾಗರಾಜ್ ಅವರು ಶಾಲೆಯಲ್ಲಿ ಸೇನಾ ತರಬೇತಿ ನೀಡುತ್ತಿದ್ದಾರೆ.

    ಧಾರವಾಡದ ಕುಂದಗೋಳದ ನಿವಾಸಿ ನಾಗರಾಜ್ ಗವಳಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ನಾಗರಾಜ್ ವಿದ್ಯಾರ್ಥಿಗಳಿಗೆ ಸೇನಾ ಕಸರತ್ತು ಹೇಳಿಕೊಡುತ್ತಿದ್ದಾರೆ. 1999ರಲ್ಲಿ ಕಾರ್ಗಿಲ್‍ ವಶ ಪಡಿಸಿಕೊಂಡಿದ್ದ ಪಾಕಿಸ್ತಾನವನ್ನು ಸದೆಬಡಿದ ಆಪರೇಷನ್ ಪರಾಕ್ರಮ ಮತ್ತು ಆಪರೇಷನ್ ವಿಜಯ್ ಎರಡರಲ್ಲೂ ಭಾಗಿಯಾಗಿದ್ದ ಧೀರ ಯೋಧ. 2010ರಲ್ಲಿ ಹವಾಲ್ದಾರ್ ವೃತ್ತಿಯಿಂದ ನಿವೃತ್ತರಾಗಿರೋ ನಾಗರಾಜ್, ಕುಂದಗೋಳದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ವಿದ್ಯಾರ್ಥಿನಿಯರಿಗೆ ವಿಶೇಷವಾಗಿ ಸೆಲ್ಫ್ ಡಿಫೆನ್ಸ್ ತರಬೇತಿ ನೀಡುತ್ತಿದ್ದಾರೆ. 5 ವರ್ಷದಿಂದ ಜಿಲ್ಲೆಯ ಕೆಲ ಕಾಲೇಜ್‍ಗಳಲ್ಲಿ ಉಚಿತ ಸೈನಿಕ ತರಬೇತಿಯನ್ನೂ ಕೊಡುತ್ತಿದ್ದಾರೆ. ದೇಶವನ್ನು ಕಾಯೋ ಹೆಗ್ಗಳಿಕೆ, ಅಲ್ಲಿನ ಕಷ್ಟ ಸ್ಥಿತಿಯನ್ನೂ ಮಕ್ಕಳಿಗೆ ನಾಗರಾಜ್ ಮನವರಿಕೆ ಮಾಡಿಕೊಡುತ್ತಿದ್ದಾರೆ.

    https://www.youtube.com/watch?v=bzVl6Whz15o

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನೇ ಕೊಂದ ಶಿಕ್ಷಕ

    ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನೇ ಕೊಂದ ಶಿಕ್ಷಕ

    ಮುಂಬೈ: ಕಾಲೇಜ್ ಶಿಕ್ಷಕನೊಬ್ಬ ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ.

    ವೈಶಾಲಿ ಮುಲಿಕ್ (21) ಕೊಲೆಯಾದ ವಿದ್ಯಾರ್ಥಿನಿ. ಆರೋಪಿಯನ್ನು 27 ವರ್ಷದ ರಿಷಿಕೇಶ್ ಮೋಹನ್ ಕುಡಲ್ಕರ್ ಎಂದು ಗುರುತಿಸಲಾಗಿದ್ದು, ಸದ್ಯಕ್ಕೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ವೈಶಾಲಿಗೆ ಈಗಾಗಲೇ ಮದುವೆಯಾಗಿದ್ದು, ಆಕೆಗೆ ಆರು ತಿಂಗಳ ಮಗು ಕೂಡ ಇತ್ತು. ವೈಶಾಲಿ ತನ್ನ ಶಿಕ್ಷಣವನ್ನು ಮುಂದುವರಿಸಬೇಕೆಂದು ಬಯಸಿದಳು. ಅದರಂತೆಯೇ ಮೃತ ವಿದ್ಯಾರ್ಥಿನಿ ಸಾಂಗ್ಲಿಯಲ್ಲಿರುವ ಯಶ್ವಂತ್ರಾವ್ ಚವಾಣ್ ಮುಕ್ತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆದರೆ ಭಾನುವಾರ ಕಾಲೇಜಿನ ಮೂರನೇ ಮಹಡಿಯಲ್ಲಿ ವೈಶಾಲಿಯ ಮೃತ ದೇಹ ಪತ್ತೆಯಾಗಿತ್ತು.

    ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ಶಂಕಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವೇಳೆ ಇದು ಕೊಲೆ ಎನ್ನುವ ಫಲಿತಾಂಶ ಬಂದಿದೆ. ತಕ್ಷಣ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಕಾಲೇಜಿನ ಸಿಸಿಟಿವಿಯ ತುಣುಕನ್ನು ಪರಿಶೀಲಿಸಿದರು. ಅದರಲ್ಲಿ ಒಬ್ಬ ಮನುಷ್ಯ ಮತ್ತು ವೈಶಾಲಿ ತರಗತಿ ಒಳಗೆ ಹೋಗಿದ್ದು, 15 ನಿಮಿಷಗಳ ನಂತರ ಕೇವಲ ಮನುಷ್ಯ ಹೊರಬಂದಿರುವುದು ಸೆರೆಯಾಗಿತ್ತು.

    ಪೊಲೀಸರು ಸಿಸಿಟಿಯಲ್ಲಿದ್ದ ವ್ಯಕ್ತಿಯನ್ನು ರಿಷಿಕೇಶ್ ಮೋಹನ್ ಕುಡಲ್ಕರ್ ಗುರುತಿಸಿದ್ದು, ತಕ್ಷಣ ಕ್ರೈಂ ಬ್ರಾಂಚ್ ಆತನಿಗಾಗಿ ಹುಡುಕಾಟ ಶುರುಮಾಡಿದ್ದರು. ಕೊನೆಗೆ ಆತನನ್ನು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಬಂಧಿಸಿದ್ದರು.

    ಆರೋಪಿ ಕಸ್ಬಿಡಿಗ್ರಾಜ್ ನಿವಾಸಿಯಾಗಿದ್ದು, ಯಶ್ವಂತ್ರಾವ್ ಚವಾಣ್ ಮುಕ್ತ ವಿವಿಯಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದನು. ಮೃತ ವೈಶಾಲಿ ಮತ್ತು ಶಿಕ್ಷಕ ಒಂದೇ ಗ್ರಾಮದವರಾಗಿದ್ದು ಪರಸ್ಪರ ಇಬ್ಬರಿಗೂ ಪರಿಚಯ ವಿತ್ತು. ಇಬ್ಬರ ಮಧ್ಯೆ ಸಂಬಂಧವೂ ಇತ್ತು ಎಂದು ವರದಿಯಾಗಿದೆ.

    ಅಷ್ಟೇ ಅಲ್ಲದೇ ಮೃತ ವೈಶಾಲಿಗೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿ ರಿಷಿಕೇಶ್ ಅನುಮಾನಗೊಂಡಿದ್ದಾನೆ. ಬಳಿಕ ಇದರಿಂದ ಕೋಪಗೊಂಡು ತರಗತಿಯ ಒಳಗೆ ಕರೆದುಕೊಂಡು ಹೋಗಿ ತನ್ನ ಜೊತೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ. ಆಗ ವೈಶಾಲಿ ಇದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡು ಆರೋಪಿ ಆಕೆಯನ್ನು ಕೊಲೆ ಮಾಡಿದ್ದಾನೆ.

    ಸದ್ಯಕ್ಕೆ ಪೊಲೀಸರು ಆತನನ್ನು ಬಂಧಿಸಿದ್ದು, ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಸಚಿವರ ಪರ ಪ್ರಚಾರಕ್ಕೆ ಇಳಿದಿದ್ದ ಶಿಕ್ಷಕ ಅಮಾನತು..!

    ಮಾಜಿ ಸಚಿವರ ಪರ ಪ್ರಚಾರಕ್ಕೆ ಇಳಿದಿದ್ದ ಶಿಕ್ಷಕ ಅಮಾನತು..!

    ಹಾಸನ: ಸಾಮಾಜಿಕ ಜಾಲತಾಣದಲ್ಲಿ ಚುನಾವಣಾ ಪ್ರಚಾರ ಮಾಡಿದ್ದ ಶಿಕ್ಷಕನನ್ನು ಅರಕಲಗೂಡು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಬಿದರೂರು ಸರ್ಕಾರಿ ಪ್ರಾಥಮಿಕ ಶಾಲೆಯ ಕೆ.ಟಿ.ಮೋಹನ್ ಕುಮಾರ್ ಅಮಾನತಾಗಿರುವ ಶಿಕ್ಷಕ. ಮೋಹನ್ ಚುನಾವಣೆ ಪ್ರಚಾರ ಮಾಡಿರುವ ಕುರಿತು ಬಿಇಒ ಕೆ.ಎನ್.ಶಿವನಂಜೇಗೌಡ ಅವರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಶಿಕ್ಷಕನನ್ನು ಪ್ರಾಥಮಿಕ ತನಿಖೆ ನಡೆಸಿ ಅಮಾನತು ಮಾಡಿದ್ದಾರೆ.

    ಏನಿದು ಪ್ರಕರಣ?:
    ಶಿಕ್ಷಕ ಮೋಹನ್ ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಮಂಜು ಪರ ಪ್ರಚಾರ ಮಾಡಿದ್ದರು. ವಾಟ್ಸಾಪ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎ.ಮಂಜು ಪರ ಮತಯಾಚನೆ ಮಾಡುತ್ತಿದ್ದ ವಿಡಿಯೋವನ್ನು ಕಳುಹಿಸಿದ್ದರು. ಅಷ್ಟೇ ಅಲ್ಲದೆ ಚುನಾವಣಾ ಸಂದರ್ಭದಲ್ಲಿ ಅರಕಲಗೂಡು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದ ಮೋಹನ್ ಕಾಂಗ್ರೆಸ್‍ಗೆ ಮತ ಹಾಕುವಂತೆ ಶಿಕ್ಷಕರಿಗೆ ಒತ್ತಾಯ ಹೇರಿದ್ದರು ಎನ್ನಲಾಗಿತ್ತು.

    ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಮೋಹನ್ ವಿರುದ್ಧ ಬಿಇಒ ಕೆ.ಎನ್.ಶಿವನಂಜೇಗೌಡ ಅವರು ತನಿಖೆ ಆರಂಭಿಸಿದ್ದರು. ಈ ವೇಳೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಮೋಹನ್ ಪ್ರಚಾರದಲ್ಲಿ ತೊಡಗಿದ್ದು ತಿಳಿದು ಬಂದಿತ್ತು. ಹೀಗಾಗಿ ಸದ್ಯ ಮೋಹನ್ ಗೆ ಅಮಾನತು ಆದೇಶ ಪತ್ರ ಹೊರಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv