Tag: ಶಿಕ್ಷಕ

  • ಮತಯಂತ್ರಗಳ ಮಾಸ್ಟರಿಂಗ್ ವೇಳೆ ಹೃದಯಾಘಾತದಿಂದ ಶಿಕ್ಷಕ ಸಾವು

    ಮತಯಂತ್ರಗಳ ಮಾಸ್ಟರಿಂಗ್ ವೇಳೆ ಹೃದಯಾಘಾತದಿಂದ ಶಿಕ್ಷಕ ಸಾವು

    ಯಾದಗಿರಿ: ಮತಯಂತ್ರಗಳ ಮಾಸ್ಟರಿಂಗ್ ವೇಳೆ ಶಾಲಾ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸುರಪುರದ ಎಸ್.ಪಿ ಕಾಲೇಜು ಮೈದಾನದಲ್ಲಿ ನಡೆದಿದೆ.

    ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿವಾಸಿ ಶಿವಪುತ್ರ (50) ಮೃತ ಶಾಲಾ ಶಿಕ್ಷಕರು. ಶಿವಪುತ್ರ ಅವರು ಶಹಪುರ ತಾಲೂಕಿನ ಹಳೇಸಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ಇದನ್ನು ಓದಿ: ಫೋನಿನಲ್ಲಿ ಹೇಳಿದ್ದನ್ನು ಕೇಳಿ ಚುನಾವಣಾಧಿಕಾರಿ ಪ್ರಾಣ ಉಳಿಸಿದ ಯೋಧ

    ಶಿವಪುತ್ರ ಅವರು ಚುನಾವಣಾ ಕರ್ತವ್ಯಕ್ಕೆ ಹಾಜರಾಗಲು ಇಂದು ಸುರಪುರದ ಎಸ್.ಪಿ ಕಾಲೇಜು ಮೈದಾನಕ್ಕೆ ಬಂದಿದ್ದರು. ಮತಯಂತ್ರಗಳ ಮಾಸ್ಟರಿಂಗ್ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ಏಕಾಏಕಿ ಕುಸಿದು ಬಿದ್ದು ಸ್ಥಳಲ್ಲಿಯೇ ಮೃತಪಟ್ಟಿದ್ದಾರೆ.

    ಬಳ್ಳಾರಿ ಸಿರಗುಪ್ಪದಲ್ಲಿ ಚುನಾವಣಾ ತರಬೇತಿ ವೇಳೆ (ಏಪ್ರಿಲ್ 11ರಂದು) ಕೆಕ್ಕಲಕೋಟೆ ಗ್ರಾಮದ ಶಿಕ್ಷಕ ಬಿ.ರಮೇಶ್ (46) ಸಾವನ್ನಪ್ಪಿದ್ದರು. ಬಿ.ರಮೇಶ್ ಅವರು ಸಿರಗುಪ್ಪದ ಆರನೇ ವಾರ್ಡಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರು. ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಪೂಲಿಂಗ್ ಆಫೀಸರ್ ಆಗಿ ನೇಮಕವಾಗಿದ್ದರು.

  • ಬಟ್ಟೆ ಬಿಚ್ಚುವಂತೆ ಹೇಳಿದ್ದ ಶಿಕ್ಷಕನ ವಿರುದ್ಧ ಯುವತಿ ದೂರು

    ಬಟ್ಟೆ ಬಿಚ್ಚುವಂತೆ ಹೇಳಿದ್ದ ಶಿಕ್ಷಕನ ವಿರುದ್ಧ ಯುವತಿ ದೂರು

    ಹೈದರಾಬಾದ್: ಡ್ಯಾನ್ಸ್ ಶಿಕ್ಷಕನೊಬ್ಬ 21 ವರ್ಷದ ಯುವತಿಯನ್ನು ಬಟ್ಟೆ ಬಿಚ್ಚುವಂತೆ ಹೇಳಿದ್ದು, ಇದೀಗ ಆತನ ವಿರುದ್ಧ ಯುವತಿ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ.

    ಯುವತಿ ತೆಲಂಗಾಣದ ನಾರಾಯಂಗುಡಾ ಪೊಲೀಸ್ ಠಾಣೆಯಲ್ಲಿ ಬುಧವಾರ ನೃತ್ಯ ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದಾಳೆ. ಆರೋಪಿ ಡಾನ್ಸ್ ಅಕಾಡೆಮಿ ಶಿಕ್ಷಕನಾಗಿದ್ದು, ವಿದ್ಯಾರ್ಥಿಗಳಿಗೆ ಬಟ್ಟೆಯನ್ನು ಬಿಚ್ಚುವಂತೆ ಹೇಳಿದ್ದನು ಎಂದು ಯುವತಿ ಆರೋಪಿಸಿದ್ದಾಳೆ.

    ದೂರಿನಲ್ಲಿ ಏನಿದೆ?
    ನಾಟಕ ಅಕಾಡೆಮಿ ಶಿಕ್ಷಕ ಎಲ್ಲಾ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗುವ ಮುನ್ನ ತಮ್ಮ ಬಟ್ಟೆಯನ್ನು ಬಿಚ್ಚುವಂತೆ ಕೇಳಿದ್ದನು. ಆದರೆ ನಾನು ಶಿಕ್ಷಕನ ಮಾತನ್ನು ತಿರಸ್ಕರಿಸಿದೆ. ಹೀಗಾಗಿ ನನ್ನನ್ನು ತರಗತಿಯಿಂದ ಹೊರಗೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಯುವತಿ ದೂರ ಸಲ್ಲಿಸಿದ ನಂತರ ಪೊಲೀಸರು ಆರೋಪಿಯ ವಿರುದ್ಧ ಸೆಕ್ಷನ್ 509 (ಮಹಿಳೆ ಅವಮಾನ ಮಾಡುವ ಉದ್ದೇಶ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

  • ಚುನಾವಣಾ ತರಬೇತಿ ವೇಳೆ ಹೃದಯಾಘಾತದಿಂದ ಶಿಕ್ಷಕ ಸಾವು

    ಚುನಾವಣಾ ತರಬೇತಿ ವೇಳೆ ಹೃದಯಾಘಾತದಿಂದ ಶಿಕ್ಷಕ ಸಾವು

    ಬಳ್ಳಾರಿ: ಚುನಾವಣಾ ತರಬೇತಿ ವೇಳೆ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬಳ್ಳಾರಿಯ ಸಿರಗುಪ್ಪದಲ್ಲಿ ನಡೆದಿದೆ.

    ಸಿರಗುಪ್ಪ ತಾಲೂಕಿನ ಕೆಕ್ಕಲಕೋಟೆ ಗ್ರಾಮದ ಶಿಕ್ಷಕ ಬಿ.ರಮೇಶ್ (46) ಮೃತರು. ಬಿ.ರಮೇಶ್ ಅವರು ಸಿರಗುಪ್ಪದ ಆರನೇ ವಾರ್ಡಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಪೂಲಿಂಗ್ ಆಫೀಸರ್ ಆಗಿ ನೇಮಕವಾಗಿದ್ದರು.

    ಸಿರಗುಪ್ಪದ ವಿವೇಕಾನಂದ ಶಾಲೆಯಲ್ಲಿ ಇಂದು ಚುನಾವಣಾ ತರಬೇತಿ ಆರಂಭವಾಗಿದ್ದು, 480ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ವೇಳೆ ಬಿ.ರಮೇಶ್ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾರ್ಗ ಮಧ್ಯೆ ಬಿ.ರಮೇಶ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ.

  • ಕೊಡಗಿನ ಶಿಕ್ಷಕನಿಂದ ಕಾನ್ಫರೆನ್ಸ್ ಕಾಲ್ ಟೀಚಿಂಗ್ – ಶಹಬ್ಬಾಸ್ ಎಂದ ಪೋಷಕರು

    ಕೊಡಗಿನ ಶಿಕ್ಷಕನಿಂದ ಕಾನ್ಫರೆನ್ಸ್ ಕಾಲ್ ಟೀಚಿಂಗ್ – ಶಹಬ್ಬಾಸ್ ಎಂದ ಪೋಷಕರು

    – ಮುಳ್ಳೂರು ಶಾಲೆಯ ವಿದ್ಯಾರ್ಥಿಗಳಿಗೆ ಪಾಠ
    – ಶಾಲೆಯ ಆವರಣದಲ್ಲಿ ವಿಜ್ಞಾನ ಮಾದರಿ

    ಮಡಿಕೇರಿ: ಕೊಡಗಿನ ಸರ್ಕಾರಿ ಶಾಲೆಯ ಶಿಕ್ಷರೊಬ್ಬರು ಮಕ್ಕಳಿಗೆ ಉಪಯುಕ್ತವಾಗಲೆಂದು ಕಾನ್ಫರೆನ್ಸ್ ಕಾಲ್ ಟೀಚಿಂಗ್ ಮಾಡುವ ಮೂಲಕ ಪೋಷಕರ ಮನ ಗೆದ್ದಿದ್ದಾರೆ.

    ಸೋಮವಾರಪೇಟೆ ತಾಲೂಕಿನ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವಿನೂತನ ಕಲಿಕೆ ವಿಧಾನವನ್ನು ಬಳಸಲಾಗುತ್ತಿದೆ. ಇಲ್ಲಿನ ಶಿಕ್ಷಕ ಸತೀಶ್ ಅವರು ಟೆಕ್ನಾಲಜಿ ಬಳಸಿ ವಿನೂತನ ರೀತಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

    ಇವರ ಈ ವಿಶೇಷ ಪಾಠದ ಪ್ಲಾನ್‍ನಿಂದ ಶಾಲೆಗೆ ಹಾಜರಾಗದ ವಿದ್ಯಾರ್ಥಿಗಳು ಕೂಡ ಸಂಜೆ ಮನೆಯಲ್ಲಿಯೇ ಸಂಜೆ ವೇಳೆ ಪಾಠ ಕೇಳ್ತಿದ್ದಾರೆ. ಶಾಲೆಯ ಪಾಠ ಅರ್ಥವಾಗದ ಮಕ್ಕಳು ಮತ್ತೆ ಪಾಠ ಕೇಳಿ ಕಲಿಯುತ್ತಿದ್ದಾರೆ. ಈ ವಿಭಿನ್ನ ಪ್ರಯೋಗ ಮಕ್ಕಳಿಗೂ, ಪೋಷಕರಿಗೂ ಖುಷಿ ಕೊಟ್ಟಿದೆ.

    ಶಾಲೆಯ ಆವರಣದ ಸುತ್ತಲೂ ಸೈನ್ಸ್ ಮಾಡೆಲ್‍ಗಳನ್ನು ನಿರ್ಮಿಸಲಾಗಿದೆ. ಈ ಮಾಡೆಲ್‍ಗಳನ್ನು ನೋಡಿ ಕಲಿತು, ಅದರ ಕೆಲಸದ ಬಗ್ಗೆ ಇಲ್ಲಿನ ಮಕ್ಕಳು ವಿವರಿಸುತ್ತಾರೆ. ಕಾಲೇಜು ಮಟ್ಟದ ಪ್ರಾಕ್ಟಿಕಲ್ ಟೀಚಿಂಗ್ ಕೂಡ ಅಲ್ಲಿದೆ. ಟೆಕ್ನಾಲಜಿಯನ್ನ ಹೇಗೆ ಬಳಸಿಕೊಳ್ಳಬೇಕು ಅನ್ನೋದನ್ನ ಶಿಕ್ಷಕ ಸತೀಶ್ ಇಲ್ಲಿನ ಮಕ್ಕಳಿಗೆ ಕಲಿಸುತ್ತಿದ್ದಾರೆ.

    ಹೇಗೆ ಕಾನ್ಫರೆನ್ಸ್ ಕಾಲ್?
    ಸಿಟಿಯ ಹೈಫೈ ಶಾಲೆಗಳಲ್ಲಿ ಮಕ್ಕಳಿಗೆ ವಾಟ್ಸಾಪ್ ಗ್ರೂಪ್ ಮಾಡಿ ಟೀಚ್ ಮಾಡುವಂತಹದ್ದು ಗ್ರಾಮೀಣ ಭಾಗಕ್ಕೆ ಆಗಲ್ಲ, ಅದರ ಬದಲಿಗೆ ಬಂದಿರೋದೆ ಕಾನ್ಫರೆನ್ಸ್ ಕಾಲ್ ಟೀಚಿಂಗ್. ಇದು ತುಂಬಾ ಸಿಂಪಲ್. ಸಂಜೆ ಮಕ್ಕಳು ಮನೆಗೆ ಹೋದ್ಮೇಲೆ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಈ ಕಾನ್ಫರೆನ್ಸ್ ಕಾಲ್ ಟೀಚಿಂಗ್ ಸಮಯ ಫಿಕ್ಸ್ ಆಗಿರುತ್ತೆ. ಏಕಕಾಲದಲ್ಲಿ ಎಂಟರಿಂದ ಹತ್ತು ವಿದ್ಯಾರ್ಥಿಗಳನ್ನು ಕರೆಯಲ್ಲಿ ನಿರತರಾಗುವಂತೆ ಮಾಡಿ ಬೋಧನೆ ಮಾಡಬಹುದು. ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಪ್ರತಿನಿತ್ಯ ಈ ಮೂಲಕ ಗಮನಿಸಬಹುದು. ಕೆಲ ಮನೆಗಳಲ್ಲಿ ಪೋಷಕರು ಹಲವು ಕಾರಣಗಳಿಂದ ತಮ್ಮ ಮಕ್ಕಳ ಕಲಿಕೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಅಂತಹ ಮಕ್ಕಳ ಬಗ್ಗೆ ಕೂಡ ನಿಗಾ ವಹಿಸಲು ಇದು ನೆರವಾಗುತ್ತದೆ ಎಂದು ಸತೀಶ್ ತಿಳಿಸಿದ್ದಾರೆ.

    ಪ್ರಸ್ತುತ ನಾನು 3, 4 ಹಾಗೂ 5ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನಕ್ಕೊಂದು ವಿಷಯದಂತೆ ಕಾನ್ಫರೆನ್ಸ್ ಕಾಲ್ ಮೂಲಕ ಬೋಧಿಸುತ್ತಿದ್ದೇನೆ. ವಿದ್ಯಾರ್ಥಿಗಳು ಕೂಡ ಆಸಕ್ತಿಯಿಂದ ಕಲಿಯುತ್ತಿದ್ದು, ಸಂಜೆ ತಮ್ಮ ಬರವಣಿಗೆಗಳನ್ನು ಬೇಗ ಬೇಗ ಮುಗಿಸಿಕೊಂಡು ಶಿಕ್ಷಕರ ಕರೆಗಾಗಿ ಕಾಯುತ್ತಿರುತ್ತಾರೆ. ಇದಕ್ಕೆ ಪೋಷಕರು ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದು, ಕಾನ್ಫರೆನ್ಸ್ ಕಾಲ್ ಟೀಚಿಂಗ್ ಬಳಿಕ ಅದನ್ನು ರೆಕಾರ್ಡ್ ಮಾಡಿಕೊಂಡು ಅತಿ ಉಪಯುಕ್ತ ತರಗತಿಗಳನ್ನು ಶಿಕ್ಷಕರು ಇತರ ಕೆಲಸದಲ್ಲಿ ನಿರತರಾದಾಗ ಮಕ್ಕಳಿಗೆ ಕೇಳಿಸುತ್ತಿದ್ದಾರೆ ಎಂದು ಸತೀಶ್ ಹೇಳಿದ್ದಾರೆ. ಸತೀಶ್ ಅವರ ಈ ವಿಶಿಷ್ಟ ಪ್ರಯತ್ನಕ್ಕೆ ಪೋಷಕರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಶಿಕ್ಷಕನಿಂದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

    ಶಿಕ್ಷಕನಿಂದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

    – ಶಿಕ್ಷಕನಿಗೆ ಗ್ರಾಮಸ್ಥರಿಂದ ಥಳಿತ

    ರಾಮನಗರ: ಸರ್ಕಾರಿ ಶಾಲಾ ಶಿಕ್ಷಕನೊಬ್ಬ ನಾಲ್ಕನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ರಾಮನಗರ ತಾಲೂಕಿನಲ್ಲಿ ನಡೆದಿದೆ.

    ಸರ್ಕಾರಿ ಪ್ರಾಥಾಮಿಕ ಶಾಲೆಯ ಚಂದ್ರುಶೇಖರ್ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಶಿಕ್ಷಕ. ಶಾಲೆಯ ನಾಲ್ಕನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ದಿನನಿತ್ಯವೂ ಚಂದ್ರಶೇಖರ್ ಲೈಂಗಿಕ ಕಿರುಕುಳ ನೀಡಿದ್ದ. ಅಷ್ಟೇ ಅಲ್ಲದೆ ಕಳೆದ ಎರಡು ದಿನಗಳ ಹಿಂದೆ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿ ಕೆನ್ನೆ ಕಚ್ಚಿ, ಮೈ ಮೇಲೆ ಗಾಯಗಳನ್ನು ಮಾಡಿದ್ದಾನೆ.

    ವಿದ್ಯಾರ್ಥಿನಿ ಇಂದು ಬೆಳಿಗ್ಗೆ ಸ್ನಾನಕ್ಕೆ ಹೋಗುವಾಗ ಪೋಷಕರು ಗಾಯಗಳನ್ನು ಗಮನಿಸಿ ವಿಚಾರಸಿದ್ದಾರೆ. ಆಗ ವಿದ್ಯಾರ್ಥಿನಿ ಘಟನೆಯನ್ನು ವಿವರಿಸಿದ್ದಾರೆ. ಇದರಿಂದಾಗಿ ಆಕ್ರೋಶಗೊಂಡ ಬಾಲಕಿಯ ಪೋಷಕರು ಹಾಗೂ ಗ್ರಾಮಸ್ಥರು ಶಾಲೆಗೆ ನುಗ್ಗಿ ಕಾಮುಕ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆಯ ಕುರಿತು ಮಾಹಿತಿ ಸ್ಥಳೀಯರು ದೂರು ನೀಡುತ್ತಿದ್ದಂತೆ ಶಾಲೆಗೆ ಭೇಟಿ ನೀಡಿದ ತಾಲೂಕು ಶಿಕ್ಷಣಾಧಿಕಾರಿ ಚಂದ್ರಶೇಖರ್ ನನ್ನು ಅಮಾನತುಗೊಳಿಸಿದ್ದಾರೆ.

    ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು, ಅಕ್ಷರ ಜ್ಞಾನ ನೀಡಬೇಕು. ಕೂಲಿ ಮಾಡಿ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ. ಆದರೆ ಚಂದ್ರಶೇಖರ್ ಪುಟ್ಟ ಮಗುವಿನ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಗ್ರಾಮದ ಮಹಿಳೆ ಒತ್ತಾಯಿಸಿದ್ದಾರೆ.

    ಈ ಘಟನೆಯ ಕುರಿತು ಮಾಹಿತಿ ಸಿಗುತ್ತಿದ್ದಂತೆ ಶಾಲೆಗೆ ಭೇಟಿ ನೀಡಿದ ರಾಮನಗರ ಗ್ರಾಮಾಂತರ ಪೊಲೀಸರು ಶಿಕ್ಷಕ ಚಂದ್ರಶೇಖರ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿಕ್ಷಕನಿಗೆ ಕಠಿಣ ಶಿಕ್ಷೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೀತಿಯ ಗುರುವನ್ನು ಕಳೆದುಕೊಂಡ ದುಃಖದಲ್ಲಿ ನಟ ಶರಣ್

    ಪ್ರೀತಿಯ ಗುರುವನ್ನು ಕಳೆದುಕೊಂಡ ದುಃಖದಲ್ಲಿ ನಟ ಶರಣ್

    ಬೆಂಗಳೂರು: ಪ್ರತಿಯೊಬ್ಬರ ಜೀವನದಲ್ಲೂ ನೆನಪಲ್ಲೇ ಉಳಿಯುವಂತಹ ಒಬ್ಬರು ಮಾರ್ಗದರ್ಶಕರಿರುತ್ತಾರೆ. ಅವರ ಮಾರ್ಗದರ್ಶನದಲ್ಲೇ ಸಾಗಿ ಸಾಧನೆ ಮಾಡಿರುತ್ತಾರೆ. ಅಂತಹ ಶಿಕ್ಷಕರೊಬ್ಬರು ನಟ ಶರಣ್ ಅವರಿಗೂ ಇದ್ದು, ಇದೀಗ ಅವರನ್ನು ಕಳೆದುಕೊಂಡ ದುಃಖದಲ್ಲಿ ಶರಣ್ ಇದ್ದಾರೆ.

    ಶರಣ್ ಅವರ ಗುರುಗಳಾದ ಬೆಲಹರ್ ಸರ್ ವಿಧಿವಶರಾಗಿದ್ದಾರೆ. ಬೆಲಹರ್ ಅವರು ಶರಣ್ ಅವರ ಶಾಲಾ ಶಿಕ್ಷಕರಾಗಿದ್ದಾರೆ. ಇವರು ಗಣಿತ ಪಾಠವನ್ನು ಮಾಡುತ್ತಿದ್ದರು. ಹೀಗಾಗಿ ಶರಣ್ ತಮ್ಮ ಪ್ರೀತಿಯ ಗುರುಗಳನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.

    ನಟ ಶರಣ್ ಈ ಬಗ್ಗೆ ಅವರೇ ಟ್ವೀಟ್ ಮಾಡುವ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. “ನನ್ನ ಅಚ್ಚು-ನೆಚ್ಚಿನ ಶಿಕ್ಷಕರಾದ ಬೆಲಹರ್ ಸರ್ ರನ್ನು ನಾನು ಕಳೆದುಕೊಂಡಿದ್ದೇನೆ. ಅವರು ನನಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಗಣಿತ ಪಾಠ ಮಾಡುತ್ತಿದ್ದರು. ನಿಮ್ಮನ್ನು ನನ್ನ ಬದುಕಿನಲ್ಲಿ ಪಡೆದಿದ್ದು ನನ್ನ ಅದೃಷ್ಟ” ಎಂದು ಅಳು ಎಮೋಜಿಯನ್ನು ಹಾಕಿ ಅವರ ಜೊತೆಗಿನ ಫೋಟೋವನ್ನು ಹಾಕಿದ್ದಾರೆ.

    ಸದ್ಯಕ್ಕೆ ನಟ ಶರಣ್ ಅವರ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಆದರೂ ತಮಗೆ ಪ್ರೀತಿಯಿಂದ ಪಾಠ ಹೇಳಿಕೊಟ್ಟ ಗುರುಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೂನಿಫಾರಂ ಧರಿಸಿಲ್ಲ ಯಾಕೆ ಎಂದು ಕೇಳಿದ್ದಕ್ಕೆ ಶಿಕ್ಷಕನ ಮೇಲೆ ಹಲ್ಲೆ

    ಯೂನಿಫಾರಂ ಧರಿಸಿಲ್ಲ ಯಾಕೆ ಎಂದು ಕೇಳಿದ್ದಕ್ಕೆ ಶಿಕ್ಷಕನ ಮೇಲೆ ಹಲ್ಲೆ

    ತಿರುವನಂತಪುರಂ: ಯೂನಿಫಾರಂ ಧರಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಘಟನೆ ಕೇರಳಾದ ಕಟ್ಟಪ್ಪನದಲ್ಲಿ ನಡೆದಿದೆ.

    ಅಭಿನ್ ಸುರೇಶ್(19) ಶಿಕ್ಷಕನ ಮೇಲೆ ಹಲ್ಲೆ ಮಾಡಿ ಅರೆಸ್ಟ್ ಆದ ವಿದ್ಯಾರ್ಥಿ. ಮಂಗಳವಾರ ಅಭಿನ್ ಹಾಲ್ ಟಿಕೆಟ್ ಪಡೆಯಲು ಯೂನಿಫಾರಂ ಧರಿಸದೇ ಶಾಲೆಗೆ ಹೋಗಿದ್ದನು. ಅಲ್ಲದೇ ಶಿಕ್ಷಕನ ಅನುಮತಿ ಪಡೆಯದೇ ಕ್ಲಾಸ್‍ರೂಂ ಒಳಗೆ ಹೋಗಿದ್ದನು.

    ಈ ವೇಳೆ ಅಭಿನ್‍ನ ಭೂಗೋಳ ಶಿಕ್ಷಕ ಎಸ್. ಜಯದೇವ್ ಯೂನಿಫಾರಂ ಏಕೆ ಧರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಶಿಸ್ತಿನಿಂದ ನಡೆದುಕೋ ಎಂದು ಎಚ್ಚರಿಸಿದ್ದಾರೆ. ಇದರಿಂದ ಕೋಪಗೊಂಡ ಅಭಿನ್ ತನ್ನ ಶಿಕ್ಷಕ ಜಯದೇವ್‍ಗೆ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದಾನೆ. ಪರಿಣಾಮ ಶಿಕ್ಷಕನ ಕೆನ್ನೆ ಹಾಗೂ ಕಿವಿಗೆ ಗಾಯಗಳಾಗಿದೆ.

    ಅಭಿನ್ ತನ್ನ ಕಬ್ಬಿಣದ ಕಡುಗದಿಂದ ನನ್ನ ಹೊಟ್ಟೆಗೆ ಪಂಚ್ ಮಾಡಿದ್ದಾನೆ ಎಂದು ಶಿಕ್ಷಕ ಜಯದೇವ್ ಆರೋಪಿಸಿದ್ದಾರೆ. ಸದ್ಯ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಜಯದೇವ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಜಯದೇವ್ ಕಿರುಚಾಟ ಕೇಳುತ್ತಿದ್ದಂತೆ ಅಕ್ಕಪಕ್ಕದ ಕ್ಲಾಸ್‍ರೂಮಿನಲ್ಲಿದ್ದ ಬೇರೆ ಶಿಕ್ಷಕರು ಘಟನಾ ಸ್ಥಳಕ್ಕೆ ಓಡಿ ಬಂದಿದ್ದಾರೆ. ಅಭಿನ್ ವಿರುದ್ಧ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಭಿನ್‍ನನ್ನು ಬಂಧಿಸಿ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡ್ರಾಪ್ ಕೊಡೋದಾಗಿ ಹೇಳಿ ಕಾಡಿಗೆ ಕರ್ಕೊಂಡು ಹೋಗಿ ಶಿಕ್ಷಕನಿಂದ ರೇಪ್

    ಡ್ರಾಪ್ ಕೊಡೋದಾಗಿ ಹೇಳಿ ಕಾಡಿಗೆ ಕರ್ಕೊಂಡು ಹೋಗಿ ಶಿಕ್ಷಕನಿಂದ ರೇಪ್

    -ಸಾಮಾಜಿಕ ಜಾಲತಾಣಕ್ಕೆ ಫೋಟೋ ಅಪ್ಲೋಡ್

    ಭುವನೇಶ್ವರ: ಶಾಲಾ ಶಿಕ್ಷಕನೋರ್ವ ಡ್ರಾಪ್ ಕೊಡುವ ನೆಪದಲ್ಲಿ ಕಾಲೇಜು ಹುಡುಗಿಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ಒಡಿಶಾದ ಬಲಂಗೀರ್ ಜಿಲ್ಲೆಯ ಮುರಿಬಾಹಲ್ ಪ್ರದೇಶದಲ್ಲಿ ನಡೆದಿದೆ.

    ಈ ಕುರಿತು ಸಂತ್ರಸ್ತೆಯ ಕುಟುಂಬ ಸದಸ್ಯರು ಮುರಿಬಾಹಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಅತ್ಯಾಚಾರ ಎಸಗಿದ್ದಲ್ಲದೆ ಅತ್ಯಾಚಾರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಅಪ್ಲೋಡ್ ಮಾಡಿದ್ದಾನೆ. ಆರೋಪಿಯನ್ನು ಗಾನೋ ಸೆಲಾಮಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸಂತ್ರಸ್ತೆ ಫೆಬ್ರವರಿ 6 ರಂದು ಕಾಲೇಜಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದಳು. ಆಗ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಗಾನೋ ಸೆಲಾಮಾ ಬಂದು ತಾನು ಕಾಲೇಜಿಗೆ ಡ್ರಾಪ್ ಮಾಡುತ್ತೇನೆಂದು ಹೇಳಿ ಕೂರಿಸಿಕೊಂಡಿದ್ದಾನೆ. ನಂತರ ಕಾಲೇಜಿಗೆ ಡ್ರಾಪ್ ಮಾಡುವ ಬದಲು ಆಕೆಯನ್ನು ಕಾಡಿನೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಅತ್ಯಾಚಾರದ ಫೋಟೋಗಳನ್ನು ತೆಗೆದುಕೊಂಡಿದ್ದಾನೆ. ಜೊತೆಗೆ ಈ ಘಟನೆಯ ಬಗ್ಗೆ ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸ್ವಲ್ಪ ದಿನದ ನಂತರ ಆರೋಪಿ ಅತ್ಯಾಚಾರದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಪೋಸ್ಟ್ ಮಾಡಿದ್ದಾನೆ. ಆ ಫೋಟೋ ವೈರಲ್ ಆದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಕುಟುಂಬಸ್ಥರು ಈ ಕುರಿತು ದೂರು ದಾಖಲಿಸಿದ್ದಾರೆ.

    ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದೇನೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧಕಾರ್ಯ ನಡೆಸುತ್ತಿದ್ದೇವೆ. ಸದ್ಯಕ್ಕೆ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕಿಸ್ತಾನ ವಿರುದ್ಧ ಬರೆದ ಶಿಕ್ಷಕನ ಹಾಡು ವೈರಲ್!

    ಪಾಕಿಸ್ತಾನ ವಿರುದ್ಧ ಬರೆದ ಶಿಕ್ಷಕನ ಹಾಡು ವೈರಲ್!

    ಕೊಪ್ಪಳ: ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆ ಪಾಕ್ ವಿರುದ್ಧ ಶಿಕ್ಷಕರೊಬ್ಬರು ಬರೆದ ಹಾಡು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ನಡುವೆ ಕೊಪ್ಪಳದ ಶಿಕ್ಷಕ ಹನುಮಂತಪ್ಪ ಕುರಿ ಪಾಕಿಸ್ತಾನದ ವಿರುದ್ಧ ಸ್ವತಃ ತಾವೇ ಹಾಡು ಬರೆದು ಹಾಡಿದ್ದಾರೆ. ಕೆಣಕಬೇಡಿ, ಕೆಣಕಬೇಡಿ ಪಾಕಿಗಳೆ. ಕೆಣಕಿ, ತಿಣುಕಬೇಡಿ ತಿರುಬೋಕಿಗಳೆ ಎಚ್ಚರ ಎಂದು ಶಿಕ್ಷಕ ಹಾಡಿದ್ದಾರೆ. ಈ ಹಾಡಿನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಮನ ಗೆದ್ದಿದೆ.

    ಒಟ್ಟು 3 ನಿಮಿಷ 42 ಸೆಕೆಂಡ್ ಇರುವ ಈ ಹಾಡಿನಲ್ಲಿ ಪಾಕಿಸ್ತಾನವನ್ನ ಶಿಕ್ಷಕ ಹನುಮಂತಪ್ಪ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಈ ಹಾಡಿನಲ್ಲಿ ನಮ್ಮ ಭಾರತದ ಸರ್ವಧರ್ಮದ ಸೌಹಾರ್ದತೆಯನ್ನು ಹಾಗೂ ಕೆಚ್ಚೆದೆಯ ವೀರರನ್ನು ಹನುಮಂತಪ್ಪ ಅಭಿಮಾನದಿಂದ ಹೊಗಳಿದ್ದಾರೆ. ಜವಾನರಿಗೆ ಜೈಕಾರ ಪಾಕಿ ದಿವಾನರಿಗೆ ಧಿಕ್ಕಾರ ಎಂದು ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಹಾಡಿನಿಂದಲೇ ಶಿಕ್ಷಕ ಪಾಕ್‍ಗೆ ಚಾಟಿ ಏಟು ನೀಡಿ ಫುಲ್ ವೈರಲ್ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾತ್‍ರೂಂನಲ್ಲಿ ಅಡಗಿಸಿಟ್ಟು ಶಿಕ್ಷಕನಿಂದ 14ರ ಬಾಲಕನಿಗೆ ಲೈಂಗಿಕ ದೌರ್ಜನ್ಯ

    ಬಾತ್‍ರೂಂನಲ್ಲಿ ಅಡಗಿಸಿಟ್ಟು ಶಿಕ್ಷಕನಿಂದ 14ರ ಬಾಲಕನಿಗೆ ಲೈಂಗಿಕ ದೌರ್ಜನ್ಯ

    ವದೆಹಲಿ: ಶಿಕ್ಷಕನೊಬ್ಬ 14 ವರ್ಷದ ಅಪ್ರಾಪ್ತ ವಿದ್ಯಾರ್ಥಿಗೆ ಆತನ ಮನೆಯಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಪೂರ್ವ ದೆಹಲಿಯಲ್ಲಿ ನಡೆದಿದೆ.

    ಈ ಘಟನೆ ಶುಕ್ರವಾರ ನಡೆದಿದ್ದು, ಆರೋಪಿ ಶಿಕ್ಷಕ ಎರಡು ತಿಂಗಳಿನಿಂದ ವಿದ್ಯಾರ್ಥಿಗೆ ಭೋದನೆ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    35 ವರ್ಷ ವಯಸ್ಸಿನ ಆರೋಪಿ ಶಿಕ್ಷಕ ಹೈಡ್ ಆ್ಯಂಡ್ ಸೀಕ್ ಆಟವನ್ನು ಆಡೋಣ ಎಂದು ಹೇಳಿ ಹುಡುಗನನ್ನು ಬಾತ್‍ರೂಮ್ ಒಳಗೆ ಕರೆದುಕೊಂಡು ಹೋಗಿ ಅಡಗಿಸಿಟ್ಟಿದ್ದಾನೆ. ಅಲ್ಲಿ ಹುಡುಗನನ್ನು ಅನುಚಿತವಾಗಿ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

    ಈ ಘಟನೆ ನಡೆದ ವೇಳೆಯಲ್ಲಿ ಹುಡುಗನ ಪೋಷಕರು ಮನೆಯಲ್ಲಿ ಇರಲಿಲ್ಲ. ವಿದ್ಯಾರ್ಥಿಯ ಪೋಷಕರು ಮನೆಗೆ ಬಂದಾಗ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾನೆ. ಬಳಿಕ ಪೋಷಕರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮೇಘನಾ ಯಾದವ್ ಹೇಳಿದ್ದಾರೆ.

    ಪೊಲೀಸರು ಈ ಕುರಿತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv