Tag: ಶಿಕ್ಷಕ

  • ಅಪ್ರಾಪ್ತ ವಿದ್ಯಾರ್ಥಿನಿಯನ್ನು ಮದುವೆಯಾಗಿದ್ದ ಸರ್ಕಾರಿ ಶಿಕ್ಷಕ ಅಮಾನತು

    ಅಪ್ರಾಪ್ತ ವಿದ್ಯಾರ್ಥಿನಿಯನ್ನು ಮದುವೆಯಾಗಿದ್ದ ಸರ್ಕಾರಿ ಶಿಕ್ಷಕ ಅಮಾನತು

    ಬೀದರ್: ಅಪ್ರಾಪ್ತ ವಿದ್ಯಾರ್ಥಿನಿಯನ್ನು (Minor Student) ಪುಸಲಾಯಿಸಿ ಗೌಪ್ಯವಾಗಿ ವಿವಾಹ (Marriage) ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಶಾಲಾ ಶಿಕ್ಷಕನನ್ನು (Teacher) ಅಮಾನತು (Suspend) ಮಾಡಲಾಗಿದೆ.

    ಶಿಕ್ಷಕ ಸಂದೀಪ್ ಕುಮಾರ್ ಅಜೂರೆ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಡಿಡಿಪಿಐ ಸಲೀಂ ಪಾಷಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ (Bhalki) ತಾಲೂಕಿನ ಹಲಸಿ ತೂಗಾಂವ್ ಗ್ರಾಮದಲ್ಲಿ 15 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಯಾರಿಗೂ ತಿಳಿಯದಂತೆ ಶಿಕ್ಷಕ ಗೌಪ್ಯವಾಗಿ ಮದುವೆಯಾಗಿದ್ದ. ಇದನ್ನೂ ಓದಿ: Shivamogga: ಈದ್ ಮಿಲಾದ್ ಹಬ್ಬದ ಸಭೆಯಲ್ಲಿ ಗಲಾಟೆ – ಓರ್ವನ ಕೊಲೆಯಲ್ಲಿ ಅಂತ್ಯ

    ಈಗಾಗಲೇ ಆತನಿಗೆ ಮದುವೆಯಾಗಿ ಮಗುವಿದ್ದರೂ ಸಹಿತ ಹಲಸಿ ತೂಗಾಂವ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಮದುವೆಯಾಗಿದ್ದ. ಈ ಕುರಿತು ಶಿಶು ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಬಾಳುವಾಲೆ ಶಿಕ್ಷಕನ ವಿರುದ್ಧ ಸೂಕ್ತ ಕ್ರಮಕ್ಕಾಗಿ ಮೇಹಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯಿಂದ್ಲೇ 14ರ ಬಾಲಕಿ ಮೇಲೆ ರೇಪ್‌ – ಪತಿ, ಪತ್ನಿ ಅರೆಸ್ಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರಯಾನ-3 ಬಗ್ಗೆ ಶಿಕ್ಷಕನಿಂದ ಅವಹೇಳನಕಾರಿ ಪೋಸ್ಟ್- ಶಿಕ್ಷಣ ಸಚಿವರಿಗೆ ಸುರೇಶ್ ಕುಮಾರ್ ದೂರು

    ಚಂದ್ರಯಾನ-3 ಬಗ್ಗೆ ಶಿಕ್ಷಕನಿಂದ ಅವಹೇಳನಕಾರಿ ಪೋಸ್ಟ್- ಶಿಕ್ಷಣ ಸಚಿವರಿಗೆ ಸುರೇಶ್ ಕುಮಾರ್ ದೂರು

    ಬೆಂಗಳೂರು: ಕೋಟ್ಯಂತರ ಭಾರತೀಯರ ಕನಸಾದ ಚಂದ್ರಯಾನ-3 (Chandrayaan-3) ಉಪಗ್ರಹವನ್ನು ಹೊತ್ತ ಮಾರ್ಕ್-3 ನೌಕೆ ನಭಕ್ಕೆ ಹಾರಿದೆ. ಆದರೆ ಈ ಕುರಿತು ಕನ್ನಡ ಉಪನ್ಯಾಸಕನೊಬ್ಬ ಮಾಡಿರುವ ಪೋಸ್ಟ್ ವಿವಾದ ಎಬ್ಬಿಸಿದ್ದು, ಇದೀಗ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ (Suresh Kumar) ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ (Madhu Bangarappa) ದೂರು ನೀಡಿದ್ದಾರೆ.

    ಮಲ್ಲೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಹುಲಿಕುಂಟೆ ಮೂರ್ತಿ (Hulikunte Murthy) ಅವಹೇಳನಕಾರಿಯಾಗಿ ಬರೆದು ಪೋಸ್ಟ್ ಮಾಡಿದ್ದಾನೆ. ಇದನ್ನು ಗಮನಿಸಿದ ಮಾಜಿ ಶಿಕ್ಷಣ ಸಚಿವರು, ಇಂತಹ ಬೇಜವಾಬ್ದಾರಿ ಉಪನ್ಯಾಸಕ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ ಇಂಥವರ ಬಗ್ಗೆ ಎಚ್ಚರಿಕೆ ವಹಿಸುವಂತೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

    ಪತ್ರದಲ್ಲೇನಿದೆ..?: ಬೆಂಗಳೂರು ಮಲ್ಲೇಶ್ವರಂ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಉಪನ್ಯಾಸಕ ಹುಲಿಕುಂಟೆ ಮೂರ್ತಿ ತಮ್ಮ ಅಭಿವ್ಯಕ್ತಿ ಸ್ವತಂತ್ರ್ಯವನ್ನು ತಮ್ಮ ಸ್ವೇಚ್ಛಾಚಾರವನ್ನಾಗಿ ತೋರಿದ್ದಾರೆ. ಚಂದ್ರಯಾನ-3 ಉಡಾವಣೆಯಾದ ದಿನವೇ ಉಪನ್ಯಾಸಕ ತನ್ನ ಟ್ವಿಟ್ಟರ್ ಅಕೌಂಟ್ ಮೂಲಕ ‘ಚಂದ್ರಯಾನ ಈ ಸಲ ತಿರುಪತಿ ನಾಮವೇ ಗತಿ ಅನಿಸತ್ತೆ’ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ 8 ವಲಯಗಳಲ್ಲಿ ಕುಡಿಯಲು ನೀರು ಯೋಗ್ಯವಲ್ಲ!

    ಇಂತಹ ವ್ಯಕ್ತಿ ನಮ್ಮ ವಿದ್ಯಾರ್ಥಿಗಳಿಗೆ ಯಾವ ರೀತಿ ಪ್ರೇರಣೆ ನೀಡಲು ಸಾಧ್ಯ?. ಹುಲಿಕುಂಟೆ ಮೂರ್ತಿಯಿಂದ ಈ ಕುರಿತು ಸ್ಪಷ್ಟೀಕರಣ ಕೇಳುವುದು ಹಾಗೂ ಮತ್ತೊಮ್ಮೆ ಈ ರೀತಿಯ ಬೇಜವಾಬ್ದಾರಿ ನಡವಳಿಕೆ ಜರುಗದಂತೆ ಎಚ್ಚರವಹಿಸಲು ಎಚ್ಚರಿಕೆ ನೀಡಬೇಕು ಎಂದು ಸುರೇಶ್ ಕುಮಾರ್ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೊಟ್ಟೆ ನೋವು ತಾಳಲಾರದೆ ಶಿಕ್ಷಕ ಆತ್ಮಹತ್ಯೆ

    ಹೊಟ್ಟೆ ನೋವು ತಾಳಲಾರದೆ ಶಿಕ್ಷಕ ಆತ್ಮಹತ್ಯೆ

    ದಾವಣಗೆರೆ: ಬಹು ದಿನಗಳಿಂದ ಹೊಟ್ಟೆ ನೋವಿನಿಂದ (Stomach Pain) ಬಳಲುತ್ತಿದ್ದ ಶಿಕ್ಷಕನೊಬ್ಬ (Teacher) ಕೆರೆಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ಪಟ್ಟಣದಲ್ಲಿ ನಡೆದಿದೆ.

    ಚನ್ನಗಿರಿ ತಾಲೂಕಿನ ಹಿರೇಉಡ ಗ್ರಾಮದ ನಿವಾಸಿ  ಕೃಷ್ಣನಾಯ್ಕ್ (42) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ. ಇವರು ಮೈಸೂರಿನಲ್ಲಿ (Mysuru) ಸರ್ಕಾರಿ ಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೇ ಅನೇಕ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಇವರು, ನಾಲ್ಕು ದಿನಗಳ ಹಿಂದೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೂ ಸಹ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಚನ್ನಗಿರಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಐಷಾರಾಮಿ ಕಾರು ಹೊಂದಿರುವವರು ಎಚ್ಚರ – ಮೈಸೂರಿನಲ್ಲಿ ಸಕ್ರಿಯವಾಗಿದೆ ಹೈಟೆಕ್ ಕಳ್ಳರ ಗ್ಯಾಂಗ್

    ಕೆರೆಯ ವಾಕಿಂಗ್ ಪಾತ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ಜನರಿಗೆ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಕಾಣಿಸಿದೆ. ಕೂಡಲೇ ಚನ್ನಗಿರಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಕೆರೆಯಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಯುವಕನ ಬರ್ಬರ ಹತ್ಯೆ

  • ಗ್ಯಾರಂಟಿ ಯೋಜನೆ ವಿರುದ್ದ ಟೀಕೆ – ಪೋಸ್ಟ್‌ ಹಂಚಿಕೊಂಡಿದ್ದ ಶಿಕ್ಷಕ ಅಮಾನತು

    ಗ್ಯಾರಂಟಿ ಯೋಜನೆ ವಿರುದ್ದ ಟೀಕೆ – ಪೋಸ್ಟ್‌ ಹಂಚಿಕೊಂಡಿದ್ದ ಶಿಕ್ಷಕ ಅಮಾನತು

    ಚಿತ್ರದುರ್ಗ: ರಾಜ್ಯಕ್ಕಾಗಿ ಸಿಎಂಗಳು ಮಾಡಿದ ಸಾಲ ಎಂದು ಸರ್ಕಾರದ ಗ್ಯಾರಂಟಿ ಯೋಜನೆ (Congress Guarantee) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು (Teacher) ಅಮಾನತುಗೊಂಡಿದ್ದಾರೆ.

    ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕಾನುಬೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಾಂತಮೂರ್ತಿ ಅಮಾನತುಗೊಂಡಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಜಾರಿ ಯಾವಾಗ? – ಗೊಂದಲದಲ್ಲಿ ಮತದಾರ, ಬಿಲ್‌ ಕಟ್ಟಿ ಎನ್ನುತ್ತಿದೆ ಬೆಸ್ಕಾಂ

    ಶಿಕ್ಷಕನ ನಡೆಯಿಂದ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಮುಜುಗರ ತಂದಿದೆ. ಹೀಗಾಗಿ ಡಿಡಿಪಿಐ ರವಿಶಂಕರ್‌ರೆಡ್ಡಿ‌ ನಿರ್ದೇಶನದ ಮೇರೆಗೆ ಶಿಕ್ಷಕ ಶಾಂತ ಮೂರ್ತಿಯನ್ನು ಅಮಾನತುಗೊಳಿಸಿ (Suspended) ಹೊಸದುರ್ಗ ಬಿಇಓ ಜಯಪ್ಪ ಆದೇಶ ಪ್ರಕಟಿಸಿದ್ದಾರೆ.  ಇದನ್ನೂ ಓದಿ: ತಡವಾಗಿ ಬಂದ ಸಹಾಯಕ ಆಯುಕ್ತ – ಸಭೆಯಿಂದಲೇ ಹೊರಕಳುಹಿಸಿದ ರಾಯಚೂರು ಡಿಸಿ

     

    ಪೋಸ್ಟ್‌ನಲ್ಲಿ ಏನಿತ್ತು?
    ಸಿಎಂಗಳು ಮಾಡಿದ ಸಾಲ ಪಟ್ಟಿ ಇರುವ ಪೋಸ್ಟ್‌ ಒಂದನ್ನು ಒಬ್ಬರು ಹಂಚಿಕೊಂಡಿದ್ದರು. ಈ ಪೋಸ್ಟ್‌ನಲ್ಲಿ ಎಸ್‌ಎಂ ಕೃಷ್ಣ, ಧರಂ ಸಿಂಗ್‌, ಎಚ್‌ಡಿ ಕುಮಾರಸ್ವಾಮಿ, ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌ ಸಿದ್ದರಾಮಯ್ಯನವರ ಅವಧಿ ಸಾಲದ ಮಾಹಿತಿ ನೀಡಲಾಗಿತ್ತು. ಸಿದ್ದರಾಮಯ್ಯನವರ ಅವಧಿಯಲ್ಲಿ 2,42,000 ಕೋಟಿ ರೂ. ಸಾಲ ಮಾಡಲಾಗಿದೆ. ಸಿದ್ದರಾಮಯ್ಯ ಮಾಡಿದ್ದ ಸಾಲ 2,42,000 ಕೋಟಿ ರೂ. ಬಿಟ್ಟಿ ಭಾಗ್ಯ ಕೊಡದೇ ಇನ್ನೇನು ಎಂದು ಬರೆಯಲಾಗಿತ್ತು. ಈ ಪೋಸ್ಟನ್ನು ಶಾಂತಮೂರ್ತಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.

  • ಒಂದು ಸೆಕೆಂಡ್‌ನಲ್ಲಿ ನಿನ್ನನ್ನು ಭಯೋತ್ಪಾದಕ ಅಂತ ಘೋಷಿಸುತ್ತೇನೆ – ಶಿಕ್ಷಕನಿಗೆ ಬಿಹಾರ ಪೊಲೀಸ್ ಬೆದರಿಕೆ

    ಒಂದು ಸೆಕೆಂಡ್‌ನಲ್ಲಿ ನಿನ್ನನ್ನು ಭಯೋತ್ಪಾದಕ ಅಂತ ಘೋಷಿಸುತ್ತೇನೆ – ಶಿಕ್ಷಕನಿಗೆ ಬಿಹಾರ ಪೊಲೀಸ್ ಬೆದರಿಕೆ

    ಪಾಟ್ನಾ: ಒಂದು ಸೆಕೆಂಡ್‌ನಲ್ಲಿ ನಿನ್ನನ್ನು ಭಯೋತ್ಪಾದಕನೆಂದು ಘೋಷಿಸುತ್ತೇನೆ ಎಂದು ಶಿಕ್ಷಕರೊಬ್ಬರಿಗೆ (Teacher) ಬಿಹಾರ (Bihar) ಪೊಲೀಸ್ ಅಧಿಕಾರಿ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವೈರಲ್ ಆಗಿದೆ.

    ರಾಜಧಾನಿ ಪಾಟ್ನಾದಿಂದ (Patna) ಸುಮಾರು 165 ಕಿ.ಮೀ ದೂರದಲ್ಲಿರುವ ಜಮುಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕರೊಬ್ಬರು ವಿವಾದವನ್ನು ಬಗೆಹರಿಸಿಕೊಳ್ಳುವ ಸಲುವಾಗಿ ತಮ್ಮ ಕುಟುಂಬದೊಂದಿಗೆ ಜಮುಯಿ (Jamui) ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಆದರೆ ಮೂರು ದಿನ ತಡವಾಗಿ ಬಂದಿದ್ದರಿಂದ ರಾಜೇಶ್ ಶರಣ್ ಎಂಬ ಪೊಲೀಸ್ ಅಧಿಕಾರಿ ಕೋಪಗೊಂಡು ಶಿಕ್ಷರಿಗೆ ಮತ್ತು ಆತನ ಕುಟುಂಬದವರಿಗೆ ಬೆದರಿಕೆ (Threat) ಹಾಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೇ ಪೊಲೀಸ್ ಅಧಿಕಾರಿಯ ಸುತ್ತಲೂ ಜನರಿದ್ದರೂ ಸಹ ಯಾರೂ ಮಧ್ಯಪ್ರವೇಶ ಮಾಡಿ ಮಾತನಾಡಲಿಲ್ಲ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಗುಪ್ತ ಮಾಹಿತಿ ರವಾನೆ – ರಕ್ಷಣಾ ಸಂಸ್ಥೆಯ ವಿಜ್ಞಾನಿ ಅರೆಸ್ಟ್

    ಶಿಕ್ಷಕ ತಡವಾಗಿ ಬರಲು ಕಾರಣ ಏನೆಂದು ಹೇಳಲು ಹೊರಟಾಗ, ಹೆಚ್ಚು ಮಾತನಾಡಬೇಡಿ. ಜನರನ್ನು ಭಯೋತ್ಪಾದಕರು ಎಂದು ಘೋಷಿಸುವುದು ನಮ್ಮ ಕೆಲಸ. ಒಂದು ಸೆಕೆಂಡಿನಲ್ಲಿ ನಿನ್ನನ್ನು ಭಯೋತ್ಪಾದಕ ಎಂದು ಘೋಷಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಜಮುಯಿ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ. ಇದನ್ನೂ ಓದಿ: ಮಣಿಪುರ ಧಗಧಗ – ಪರಿಸ್ಥಿತಿ ಕೈಮೀರಿದರೆ ಕಂಡಲ್ಲಿ ಗುಂಡು ಹಾರಿಸಿ: ಸರ್ಕಾರ ಆದೇಶ

  • ಚುನಾವಣಾ ತರಬೇತಿ ಮುಗಿಸಿ ಮನೆಗೆ ಹೋಗುತ್ತಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು

    ಚುನಾವಣಾ ತರಬೇತಿ ಮುಗಿಸಿ ಮನೆಗೆ ಹೋಗುತ್ತಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು

    ಧಾರವಾಡ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ (Election) ಮತಗಟ್ಟೆ ಅಧಿಕಾರಿಗಳ ತರಬೇತಿ ಮುಗಿಸಿ ಮನೆಗೆ ಹೋಗುತ್ತಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ (Heart Attack) ಮೃತಪಟ್ಟ ಘಟನೆ ಧಾರವಾಡ (Dharwad) ಜಿಲ್ಲೆಯಲ್ಲಿ ನಡೆದಿದೆ.

    ಶಿಕ್ಷಕ ಮಲ್ಲಪ್ಪ ಭೀಮಪ್ಪ ಸೋನಾರ (54) ಮೃತ ಶಿಕ್ಷಕ. ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ಆರ್ಯ ಭಟ್ಟ ಪ್ರಾಥಮಿಕ ಶಾಲೆಯ ಶಿಕ್ಷಕ ಮಲ್ಲಪ್ಪ ಅವರು ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತಗಟ್ಟೆ ಅಧಿಕಾರಿಗಳ ತರಬೇತಿಯಲ್ಲಿದ್ದರು.

    ಧಾರವಾಡ ಜೆಎಸ್ಎಸ್ ಕಾಲೇಜಿನಲ್ಲಿ 71- ಧಾರವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ನಿಯೋಜಿತರಾದ ಅಧಿಕಾರಿ, ಸಿಬ್ಬಂದಿಗೆ ತರಬೇತಿ ಆಯೋಜಿಸಲಾಗಿತ್ತು. ಈ ತರಬೇತಿಯಲ್ಲಿ ಭಾಗವಹಿಸಿದ್ದ ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ನೇಮಕಗೊಂಡಿದ್ದ ಶಿಕ್ಷಕ ಮಲ್ಲಪ್ಪ ಭೀಮಪ್ಪ ಸೋನಾರ ಅವರು ತರಬೇತಿ ಮುಗಿಸಿ ಮೆಟ್ಟಿಲು ಇಳಿದು ಮನೆಗೆ ಹೋಗುವ ವೇಳೆ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಇದನ್ನೂ ಓದಿ: ಪುತ್ತೂರು ಕೈ ಅಭ್ಯರ್ಥಿಯ ಸಹೋದರ ಮನೆ ಮೇಲೆ ಐಟಿ ರೇಡ್ – ಗಿಡದಲ್ಲಿ ಕಂತೆ ಕಂತೆ ನೋಟು 1 ಕೋಟಿ ಜಪ್ತಿ

    ಶಿಕ್ಷಕ ಸೋನಾರ ಅವರ ಆಕಸ್ಮಿಕ ಸಾವಿಗೆ ಶೋಕ ವ್ಯಕ್ತಪಡಿಸಿರುವ ಜಿಲ್ಲಾ ಚುನಾವಣಾಧಿಕಾರಿಗಳು, ಮೃತರ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಎಲ್ಲ ನೆರವು ತಲುಪಿಸಲಾಗುವುದೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ತಾಲಿಬಾನ್ ಸರ್ಕಾರ ರಚನೆಯಾಗುತ್ತೆ: ಪ್ರತಾಪ್ ಸಿಂಹ

  • ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ- ಶಿಕ್ಷಕ ಅರೆಸ್ಟ್

    ಮುಂಬೈ: 12 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯ (Student) ಮೇಲೆ ಪದೇ ಪದೇ ಅತ್ಯಾಚಾರ (Rape) ಎಸಗಿದ ಆರೋಪದಡಿ ಶಾಲೆಯ ಗಣಿತ ಶಿಕ್ಷಕನನ್ನು (Teacher) ಪೊಲೀಸರು ಬಂಧಿಸಿರುವ (Arrest) ಘಟನೆ ಮಹಾರಾಷ್ಟ್ರದ (Maharashtra) ನಾಗಪುರದಲ್ಲಿ ನಡೆದಿದೆ.

    57 ವರ್ಷದ ಆರೋಪಿ ಶಿಕ್ಷಕ ಕಳೆದ ಮೂರು ತಿಂಗಳಿನಿಂದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸಂತ್ರಸ್ತೆ ಆರನೇ ತರಗತಿಯಲ್ಲಿ ಓದುತ್ತಿದ್ದು, ಕಳೆದ ಕೆಲವು ದಿನಗಳಿಂದ ಆಕೆಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಆಕೆಯ ತಾಯಿ ಏನಾಯಿತು ಎಂದು ವಿಚಾರಿಸಿದಾಗ ಸಂತ್ರಸ್ತೆ ತನಗಾದ ಅನ್ಯಾಯವನ್ನು ವಿವರಿಸಿದ್ದಾಳೆ ಎಂದು ಸಕ್ಕರೆದಾರ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: 4 ವರ್ಷದ ಪ್ರೀತಿಗೆ ಎಳ್ಳುನೀರು- ರೊಚ್ಚಿಗೆದ್ದು ಅಪ್ರಾಪ್ತ ಪ್ರಿಯತಮೆಗೆ ಚಾಕು ಇರಿದ! 

    ಏಪ್ರಿಲ್ 5ರಂದು ಆರೋಪಿಯು ಪರೀಕ್ಷೆಯ ನಂತರ ತನ್ನನ್ನು ಶಾಲೆಯ ವಿಜ್ಞಾನ ಪ್ರಯೋಗಾಲಯಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕಳೆದ ವರ್ಷ ಡಿಸೆಂಬರ್ 10ರಿಂದ ತನ್ನನ್ನು ಮದುವೆಯಾಗುವುದಾಗಿ ಹೇಳಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ನಮ್ಮ ನಡುವಿನ ಸಂಬಂಧವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ (Threat) ಹಾಕಿದ್ದಾನೆ ಎಂದು ಸಂತ್ರಸ್ತೆ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಬೀದಿ ನಾಯಿಗಳ ದಾಳಿ – ಅಪ್ರಾಪ್ತ ಬಾಲಕ ಮೃತ್ಯು 

    CRIME COURT

    ಈ ಕುರಿತು ಸಂತ್ರಸ್ತೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಆಧಾರದ ಮೇಲೆ ಪೊಲೀಸರು ಐಪಿಸಿ (IPC) ಸೆಕ್ಷನ್ 376 (2) (f) (ಹನ್ನೆರಡು ವರ್ಷದೊಳಗಿನ ಬಾಲಕಿ ಮೇಲೆ ಅತ್ಯಾಚಾರ), 376 (2) (n) (ಪುನರಾವರ್ತಿತ ಅತ್ಯಾಚಾರ), 506 (ಕ್ರಿಮಿನಲ್ ಬೆದರಿಕೆ) ಮತ್ತು ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಾರ್‌ನಲ್ಲಿ ರಾಮಾಯಣ ವೀಡಿಯೋ – ಓರ್ವ ಅರೆಸ್ಟ್

  • ಮಗುವಿಗೆ ಹೊಡೆದ ಅಂತ ಶಿಕ್ಷಕನಿಗೆ ಅಟ್ಟಾಡಿಸಿ, ಹಿಗ್ಗಾಮುಗ್ಗ ಥಳಿಸಿದ ಪೋಷಕರು

    ಮಗುವಿಗೆ ಹೊಡೆದ ಅಂತ ಶಿಕ್ಷಕನಿಗೆ ಅಟ್ಟಾಡಿಸಿ, ಹಿಗ್ಗಾಮುಗ್ಗ ಥಳಿಸಿದ ಪೋಷಕರು

    ಚೆನ್ನೈ: ಪಾಠ ಹೇಳಿಕೊಡೋ ಶಿಕ್ಷಕರು ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಹೊಡೆದು ಸರಿದಾರಿಗೆ ತರುವುದು ಸಹಜ. ಹೀಗೆ 2ನೇ ತರಗತಿಯ ಬಾಲಕಿಯೊಬ್ಬಳಿಗೆ (Girl) ಶಿಕ್ಷಕ (Teacher) ಹೊಡೆದ ಅಂತ ವಿದ್ಯಾರ್ಥಿನಿಯ (Student) ಪೋಷಕರು (Parents) ಶಾಲೆಗೆ (School) ಬಂದು ಶಿಕ್ಷಕನನ್ನು ಅಟ್ಟಾಡಿಸಿಕೊಂಡು ಹೋಗಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ.

    ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಈ ಘಟನೆ ನಡೆದಿದೆ. ತಮ್ಮ ಮಗುವಿಗೆ ಥಳಿಸಿದ್ದಾನೆ ಎಂದು ಆರೋಪಿಸಿ ಪೋಷಕರು ಶಿಕ್ಷಕ ಆರ್ ಭರತ್‌ನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಘಟನೆಯ ವೀಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಶಿಕ್ಷಕನಿಗೆ ಥಳಿಸಿದ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.

    ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿರುವ ವೀಡಿಯೋದಲ್ಲಿ ದಂಪತಿ ತರಗತಿಗೆ ನುಗ್ಗಿ, ತಮ್ಮ ಮಗುವಿಗೆ ಶಿಕ್ಷಕ ಹೊಡೆದಿದ್ದಾನೆ ಎಂದು ಆರೋಪಿಸಿ ಜಗಳ ಶುರುಮಾಡಿರುವುದು ಕಂಡುಬಂದಿದೆ. ಮಗುವನ್ನು ಹೊಡೆಯುವುದು ಕಾನೂನು ಬಾಹಿರ. ನಿಮಗೆ ಮಗುವಿಗೆ ಹೊಡೆಯಲು ಹಕ್ಕು ಯಾರು ನೀಡಿದರು? ನನ್ನ ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ಮಗುವಿನ ತಾಯಿ ಸೆಲ್ವಿ ವಾಗ್ದಾಳಿ ನಡೆಸಿದ್ದಾಳೆ. ಇದನ್ನೂ ಓದಿ: ರಾಯಚೂರಿನಲ್ಲಿ ಅಬಕಾರಿ ಪೊಲೀಸರ ದಾಳಿ- ಮಹಿಳೆ ವಶ

    ಈ ಎಲ್ಲಾ ದೃಶ್ಯಗಳನ್ನೂ ಇತರ ಮಕ್ಕಳು ನೋಡುತ್ತಿರುವಂತೆಯೇ ಬಾಲಕಿಯ ತಂದೆ ಶಿವಲಿಂಗ ಶಿಕ್ಷಕನನ್ನು ಅಟ್ಟಾಡಿಸಿಕೊಂಡು ಶಾಲೆಯ ಅಂಗಳಕ್ಕೆ ಹೋಗಿದ್ದಾನೆ. ಬಳಿಕ ಕೈಗೆ ಸಿಕ್ಕ ಇಟ್ಟಿಗೆ, ಕಲ್ಲಿನ ಚೂರುಗಳಿಂದ ಶಿಕ್ಷಕನ ಮೇಲೆ ದಾಳಿ ನಡೆಸಿದ್ದಾನೆ. ದಂಪತಿ ಶಿಕ್ಷಕನ ಮೇಲೆ ಮನಬಂದಂತೆ ದಾಳಿ ನಡೆಸುವುದನ್ನು ಕಂಡ ಇತರ ಶಿಕ್ಷಕರು ಸಹಾಯಕ್ಕಾಗಿ ಕಿರುಚಿಕೊಂಡಿರುವುದು ಕಂಡುಬಂದಿದೆ.

    ಮಾಹಿತಿ ಪಡೆದ ಪೊಲೀಸರು ಘಟನೆಗೆ ಸಂಬಂಧಪಟ್ಟಂತೆ ಮಗುವಿನ ತಂದೆ, ತಾಯಿ ಹಾಗೂ ಅಜ್ಜನನ್ನು ಬಂಧಿಸಿದ್ದಾರೆ. ಆರೋಪಿಗಳ ಮೇಲೆ ಹಲ್ಲೆ, ಕ್ರಿಮಿನಲ್ ಬೆದರಿಕೆ, ಪಿತೂರಿ ಹಾಗೂ ಸರ್ಕಾರಿ ನೌಕರನನ್ನು ಕರ್ತವ್ಯದಿಂದ ನಿರ್ವಹಿಸದಂತೆ ತಡೆದಿರುವುದಕ್ಕಾಗಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಎಲ್ ಬಾಲಾಜಿ ಸರವಣನ್ ತಿಳಿಸಿದ್ದಾರೆ.

    ವಿಚಾರಣೆ ವೇಳೆ ಬಾಲಕಿ ತರಗತಿಯಲ್ಲಿ ತನ್ನ ಸಹಪಾಠಿಗಳೊಂದಿಗೆ ಜಗಳವಾಡುತ್ತಿದ್ದಳು. ಈ ವೇಳೆ ಆಕೆಗೆ ಶಿಕ್ಷಕ ತನ್ನ ಸೀಟು ಬದಲಾಯಿಸುವಂತೆ ಹೇಳಿದ್ದ. ಬಳಿಕ ಬಾಲಕಿ ತನ್ನ ಸೀಟಿನಿಂದ ಎದ್ದೇಳುವ ವೇಳೆ ಆಯಾ ತಪ್ಪಿ ಬಿದ್ದಿದ್ದಾಳೆ. ಬಳಿಕ ಮನೆಗೆ ಹೋಗಿ ತನ್ನ ಅಜ್ಜನಲ್ಲಿ ಶಿಕ್ಷಕ ಹೊಡೆದಿರುವುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ದೆಹಲಿಯ ಬ್ರಿಟಿಷ್‌ ಹೈಕಮೀಷನ್‌ಗೆ ನೀಡಿದ ಭದ್ರತೆ ತೆಗೆದು ಯುಕೆಗೆ ಬಿಸಿ ಮುಟ್ಟಿಸಿದ ಭಾರತ

  • ಹೇರ್‌ಸ್ಟೈಲ್ ಮಾಡಿಕೊಂಡು ಬಂದಿದ್ದಕ್ಕೆ ವಿದ್ಯಾರ್ಥಿಯ ತಲೆ ಬೋಳಿಸಿದ ಶಿಕ್ಷಕ

    ಹೇರ್‌ಸ್ಟೈಲ್ ಮಾಡಿಕೊಂಡು ಬಂದಿದ್ದಕ್ಕೆ ವಿದ್ಯಾರ್ಥಿಯ ತಲೆ ಬೋಳಿಸಿದ ಶಿಕ್ಷಕ

    ಲಕ್ನೋ: ವಿದ್ಯಾರ್ಥಿಯೊಬ್ಬ (Student) ಹೇರ್‌ಸ್ಟೈಲ್ (Hairstyle) ಮಾಡಿಕೊಂಡು ಬಂದಿದ್ದಕ್ಕೆ ಶಿಕ್ಷಕರೊಬ್ಬರು ಆತನ ತಲೆ ಬೋಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttara Pradesh) ನಡೆದಿದೆ.

    ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಕುರ್ಕಿ ಬಜಾರ್ ಬಳಿ ಇರುವ ಶಾಲೆಯಲ್ಲಿ (School) ಈ ಘಟನೆ ನಡೆದಿದೆ. ವಿದ್ಯಾರ್ಥಿಯು ಕ್ರಾಪ್ ಮಾಡಿದ ಹೇರ್ ಸ್ಟೈಲ್‍ನಲ್ಲಿ ಶಾಲೆಗೆ ಹೋಗಿದ್ದ. ಈ ವೇಳೆ ಇದನ್ನು ನೋಡಿದ ಶಾಲೆಯ ಶಿಕ್ಷಕ ಕೋಪಗೊಂಡಿದ್ದಾರೆ. ನಂತರ ವಿದ್ಯಾರ್ಥಿಯ ತಲೆ ಬೋಳಿಸಿದ್ದಾರೆ.

    ಘಟನೆಯ ನಂತರ ಮನೆಗೆ ಬಂದ ವಿದ್ಯಾರ್ಥಿಯ ಬೋಳು ತಲೆಯನ್ನು ನೋಡಿ ಆತನ ತಂದೆ ಪ್ರಶ್ನಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿ ಘಟನೆಯನ್ನು ವಿವರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಆತನ ತಂದೆ ದೂರು ನೀಡಿದ್ದಾರೆ. ಇದನ್ನೂ ಓದಿ: ಫೆ. 21ರಿಂದ ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ ಯಾತ್ರೆಯ ಮೂರನೇ ಟ್ರಿಪ್‌

    ಘಟನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶದ ಪೊಲೀಸರು ಶಾಲೆಯ ಶಿಕ್ಷಕನನ್ನು ಬಂಧಿಸಿದ್ದಾರೆ. ಜೊತೆಗೆ ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ. ಇದನ್ನೂ ಓದಿ: ಪಕ್ಷ ಸೂಚಿಸಿದ್ರೆ ಹಾಸನದಿಂದಲೂ ಸ್ಪರ್ಧೆಗೆ ಸಿದ್ಧ: ಹೆಚ್‌.ಡಿ.ರೇವಣ್ಣ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ವಕ್ಷೇತ್ರದ ಗ್ರಾಮಸ್ಥರಿಂದ ಸಚಿವರಿಗೆ ತರಾಟೆ – ಕಕ್ಕಾಬಿಕ್ಕಿಯಾದ ಹಾಲಪ್ಪ ಆಚಾರ್‌

    ಸ್ವಕ್ಷೇತ್ರದ ಗ್ರಾಮಸ್ಥರಿಂದ ಸಚಿವರಿಗೆ ತರಾಟೆ – ಕಕ್ಕಾಬಿಕ್ಕಿಯಾದ ಹಾಲಪ್ಪ ಆಚಾರ್‌

    ಕೊಪ್ಪಳ: ಸರ್ಕಾರಿ ಶಾಲೆಯಲ್ಲಿ (Government School) ಶಿಕ್ಷಕರ (Teacher) ಕೊರತೆ ಹಿನ್ನೆಲೆಯಲ್ಲಿ ಸಚಿವ ಹಾಲಪ್ಪ ಆಚಾರ್‌ಗೆ (Halappa Achar) ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.

    ಕೊಪ್ಪಳ (Koppala) ಜಿಲ್ಲೆಯ ಯಲಬುರ್ಗಾ ತಾಲೂಕಿನ ಚೌಡಾಪೂರ ಗ್ರಾಮದಲ್ಲಿ ಘಟನೆ ನಡೆದಿದೆ. ಕಳೆದ 5 ವರ್ಷದಿಂದ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲದೇ, ಕೇವಲ ಅತಿಥಿ ಶಿಕ್ಷಕರಿಂದ ಶಾಲೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಅನೇಕ ಬಾರಿ ಯಲಬುರ್ಗಾ ಶಾಸಕರಾದ ಸಚಿವ ಆಚಾರ್‌ಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಆದರೆ, ಗ್ರಾಮಸ್ಥರ ಮನವಿಗೆ ಹಾಲಪ್ಪ ಆಚಾರ್‌ ಕಿವಿಕೊಟ್ಟಿಲ್ಲ‌. ಈ ಹಿನ್ನೆಲೆಯಲ್ಲಿ ಸಚಿವ ಹಾಲಪ್ಪ ಆಚಾರ್‌ಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಮೋದಿ ಆಗಮನ ಎಫೆಕ್ಟ್-‌ ಗುಂಡಿ ಮುಕ್ತ ಭಾಗ್ಯ..!

    ಘಟನೆಯ ಕುರಿತು ಕೂಡಲೇ ಎಚ್ಚೆತ್ತ ಸಚಿವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ ಶಿಕ್ಷರನ್ನು ನಿಯೋಜನೆ ಮಾಡುವಂತೆ ಹೇಳಿದ್ದು, ಇದಕ್ಕೆ ಸುಮ್ಮನಾಗದ ಜನರು ಮತ್ತೇ ಸಚಿವ ಆಚಾರ್ ವಿರುದ್ಧ ಗರಂ ಆಗಿದ್ದು,‌ ನಮಗೆ ನಿಯೋಜನೆ ಬೇಡ, ಖಾಯಂ ಶಿಕ್ಷಕರನ್ನು ನೇಮಿಸಿ ಎಂದು ಒತ್ತಾಯಿಸಿದ್ದಾರೆ. ಗ್ರಾಮಸ್ಥರ ಆಕ್ರೋಶ ಕಂಡು ಕಕ್ಕಾಬಿಕ್ಕಿಯಾದ ಸಚಿವ ಹಾಲಪ್ಪ ಆಚಾರ್ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಬೆಳಗಾವಿ ಮಹಾನಗರ ಪಾಲಿಕೆ ಮುಂದೆ MES ಸದಸ್ಯರ ನಾಡದ್ರೋಹಿ ಘೋಷಣೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k