Tag: ಶಿಕ್ಷಕ

  • ಒಳ ಉಡುಪು ನೇತುಹಾಕಿದ್ದಕ್ಕೆ ಶಿಕ್ಷಕನ ಮೇಲೆ ಬಿತ್ತು ಕೇಸ್

    ಒಳ ಉಡುಪು ನೇತುಹಾಕಿದ್ದಕ್ಕೆ ಶಿಕ್ಷಕನ ಮೇಲೆ ಬಿತ್ತು ಕೇಸ್

    ಲಕ್ನೋ: ಪ್ರತಿಭಟನಾ ನಿರತ ಶಿಕ್ಷಕರೊಬ್ಬರು ತಮ್ಮ ಒಳಉಡುಪನ್ನು ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಒಣಗಿಸಲು ನೇತುಹಾಕಿದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಮಾಜಿ ಶಾಸಕರೊಬ್ಬರು ಭೂ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಶಿಕ್ಷಕರೊಬ್ಬರು ಜಿಲ್ಲಾಧಿಕಾರಿ ಕಚೇರಿಯ ಬಳಿ 23ಕ್ಕೂ ಹೆಚ್ಚು ವರ್ಷಗಳಿಂದ ಧರಣಿ ನಡೆಸುತ್ತಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಕಚೇರಿಯ ಹೊರಗಡೆಯೇ ತಮ್ಮ ಒಳ ಉಡುಪನ್ನು ನೇತುಹಾಕಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

    ಐಪಿಸಿ ಸೆಕ್ಷನ್ 509(ಮಹಿಳೆಯ ಗೌರವಕ್ಕೆ ಧಕ್ಕೆ) ಅಡಿ ಶಿಕ್ಷಕ ವಿಜಯ್ ಸಿಂಗ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಉಸ್ತುವಾರಿ ನಜರತ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಸಮೀಪಾಲ್ ಅತ್ರಿ ತಿಳಿಸಿದ್ದಾರೆ.

    ಪ್ರತಿಭಟನೆಯನ್ನು ಹಿಂಪಡೆಯುವಂತೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ದೂರ ಹೋಗುವಂತೆ ಅಧಿಕಾರಿಗಳು ಹೇಳಿದ ನಂತರ ಸಿಂಗ್ ತಮ್ಮ ಧರಣಿಯ ಸ್ಥಳವನ್ನು ಬದಲಾಯಿಸಿದ್ದಾರೆ ಎಂದು ಸಹ ವರದಿಯಾಗಿದೆ. ಮಾಜಿ ಶಾಸಕರು ಭೂ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಇವರು ಫೆಬ್ರವರಿ 26, 1996ರಂದು ಈ ಸ್ಥಳದಲ್ಲಿ ಧರಣಿ ಪ್ರಾರಂಭಿಸಿದ್ದರು ಎಂದು ತಿಳಿದು ಬಂದಿದೆ.

  • ವಿವಿಧ ಬಗೆಯ ಹಣ್ಣುಗಳನ್ನು ಬೆಳೆದು ವರ್ಷಕ್ಕೆ 6 ಲಕ್ಷ ಸಂಪಾದಿಸಿ ಇತರರಿಗೆ ಮಾದರಿಯಾದ ಶಿಕ್ಷಕ

    ವಿವಿಧ ಬಗೆಯ ಹಣ್ಣುಗಳನ್ನು ಬೆಳೆದು ವರ್ಷಕ್ಕೆ 6 ಲಕ್ಷ ಸಂಪಾದಿಸಿ ಇತರರಿಗೆ ಮಾದರಿಯಾದ ಶಿಕ್ಷಕ

    ಬೀದರ್: ಬರಡು ಭೂಮಿಯಲ್ಲಿ ಮಿಶ್ರ ಬಂಪರ್ ಹಣ್ಣು ಗಿಡಗಳನ್ನು ಬೆಳೆದು ಬರಗಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಇತರ ರೈತರಿಗೆ ಶಿಕ್ಷಕ ಕಮ್ ರೈತ ಮಾದರಿಯಾಗಿದ್ದಾರೆ. ನಾಲ್ಕು ಎಕರೆ ಭೂಮಿಯಲ್ಲಿ ಹತ್ತಾರು ವಿವಿಧ ಹಣ್ಣುಗಳನ್ನು ಬೆಳೆದು ಪ್ರತಿ ವರ್ಷ 5 ರಿಂದ 6 ಲಕ್ಷ ಸಂಪಾದನೆ ಮಾಡುವ ಮೂಲಕ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ.

    ಜಿಲ್ಲೆಯ ಭಾಲ್ಕಿ ತಾಲೂಕಿನ ಅಂಬೆಸಾಂಗವಿ ಗ್ರಾಮದ ಬಳಿಯ ಬರಡು ಭೂಮಿಯನ್ನು ಕೃಷಿ ಭೂಮಿಯಾಗಿ ಮಾಡಿ ಶಿಕ್ಷಕ ಕಮ್ ಮಾದರಿ ರೈತ ಸಾಧನೆ ಮಾಡಿದ್ದಾರೆ. ಭಾಲ್ಕಿ ಪಟ್ಟಣ್ಣದ ಖಾಸಗಿ ಶಾಲೆಯಲ್ಲಿ ಆಂಗ್ಲ ಭಾಷೆಯ ಶಿಕ್ಷಕರಾಗಿರುವ ಗಣಪತಿ ಬೋಚ್ರೆ ಸತತ ಪರಿಶ್ರಮದಿಂದ ಇಂದು ಮಾದರಿ ರೈತರಾಗಿದ್ದಾರೆ. ನಾಲ್ಕು ಎಕರೆ ಬರಡು ಭೂಮಿಯನ್ನು 5 ವರ್ಷಗಳಲ್ಲಿ ಸತತ ಪರಿಶ್ರಮ ಹಾಕಿ ಕೃಷಿ ಭೂಮಿಯನ್ನಾಗಿ ಮಾಡಿಕೊಂಡು ಇಂದು ಪ್ರತಿವರ್ಷ 5 ರಿಂದ 6 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಇವರ ಈ ಪರಿಶ್ರಮ ನೋಡಿದ ಜಿಲ್ಲೆಯ ರೈತರು ಅವರನ್ನೇ ಅನುಸರಿಸುತ್ತಿದ್ದಾರೆ. ರೈತರು ಸರಿಯಾಗಿ ಪ್ಲಾನ್ ಮಾಡಿ ಕೃಷಿ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಶ್ನೆಯೇ ಬರಲ್ಲ ಎಂದು ಮಾದರಿ ರೈತ ತಿಳಿಸಿದ್ದಾರೆ.

    ಮಾವು, ನೇರಳೆ, ದಾಳಿಂಬೆ, ಮೊಂಸಬಿ, ಕಿತ್ತಳೆ, ಜಾಪಳ್, ಸಪೋಟಾ ಗಿಡಗಳು ಸೇರಿದಂತೆ ಹಲವಾರು ಹಣ್ಣಿನ ಗಡಿಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಇದರಲ್ಲಿ ವಿಶೇಷವಾಗಿ ಮಾವಿನ ಹಣ್ಣನಲ್ಲಿ ನಾಲ್ಕು ವಿಧಗಳ ಗಿಡಗಳನ್ನು ವಿದೇಶದಿಂದ ತಂದು ಹಾಕಿದ್ದಾರೆ. ಸಂರ್ಪೂಣವಾಗಿ ಸಾವಯವ ಗೊಬ್ಬರವನ್ನು ಹಾಕಿ ಹಣ್ಣಿನ ಗಿಡಗಳನ್ನು ಬೆಳೆಸಿದ್ದು ಜಿಲ್ಲೆ, ರಾಜ್ಯ ಸೇರಿದಂತೆ ರಾಷ್ಟ್ರದಲ್ಲೂ ಇವುಗಳಿಗೆ ಬೇಡಿಕೆ ಇದೆ. ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಆತಂಕದಲ್ಲಿ ಕಾಲ ಕಳೆಯುತ್ತಿದ್ದು ಈ ರೀತಿ ಮಾದರಿ ರೈತನ ಸಾಧನೆ ನೋಡಿ ಸ್ಫೂರ್ತಿಯಾಗಿದ್ದಾರೆ. ಸರ್ಕಾರಗಳು ರೈತರಿಗೆ ಯಾವುದೇ ಸಹಕಾರ ನೀಡದೆ ರೈತರಿಗೆ ಶಾಪವಾಗಿದ್ದು, ಈ ರೀತಿಯ ಸಾಧನೆ ಮೂಲಕ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡಿದ್ದಾರೆ.

  • ಶಾಲಾ ಆವರಣದಲ್ಲೇ ಪ್ರೇಯಸಿ ಜೊತೆ ಶಿಕ್ಷಕ ಸೆಕ್ಸ್

    ಶಾಲಾ ಆವರಣದಲ್ಲೇ ಪ್ರೇಯಸಿ ಜೊತೆ ಶಿಕ್ಷಕ ಸೆಕ್ಸ್

    ಚೆನ್ನೈ: ಶಾಲೆಯ ಆವರಣದಲ್ಲಿ ಶಿಕ್ಷಕನೊಬ್ಬ ತನ್ನ ಅಂಗನವಾಡಿ ಸಿಬ್ಬಂದಿ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಈ ಸಂಬಂಧ ಗ್ರಾಮಸ್ಥರು ಶಿಕ್ಷಕನಿಗೆ ಥಳಿಸಿದ ಘಟನೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ನಡೆದಿದೆ.

    ನಾಮಕ್ಕಲ್ ಉದುಪ್ಪಂ ಸರ್ಕಾರಿ ಶಾಲೆಯ ಶಿಕ್ಷಕ ಶಾಲೆ ಸಮಯ ಮುಗಿದ ನಂತರ ಅಂಗನವಾಡಿ ಮಹಿಳಾ ಸಿಬ್ಬಂದಿ ಜೊತೆ ದೈಹಿಕ ಸಂಬಂಧ ಬೆಳೆಸುತ್ತಿದ್ದನು. ಕಳೆದ ಎರಡು ತಿಂಗಳಿಂದ ಇಬ್ಬರ ನಡುವೆ ಅಕ್ರಮ ಸಂಬಂಧ ಇತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಮಹಿಳೆಯೂ ಗ್ರಾಮೀಣ ಮಕ್ಕಳ ಆರೋಗ್ಯ ಅಭಿವೃದ್ಧಿ ವಿಭಾಗದ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಾಳೆ. ಅಲ್ಲದೆ ಆಕೆ ಈ ಶಾಲೆಯೊಂದಿಗೆ ಸಂಬಂಧ ಹೊಂದಿದ್ದಾಳೆ. ಶಾಲೆಯ ಸಮಯ ಮುಗಿದ ನಂತರ ಇಬ್ಬರು ಒಟ್ಟಿಗೆ ಭೇಟಿ ಆಗುತ್ತಿದ್ದರು.

    ಇಬ್ಬರು ದೈಹಿಕ ಸಂಬಂಧ ಬೆಳೆಸುತ್ತಿರುವುದನ್ನು ಶಾಲೆಯ ಮಕ್ಕಳು ನೋಡಿದ್ದಾರೆ. ಅಲ್ಲದೆ ಈ ಬಗ್ಗೆ ತಮ್ಮ ಪೋಷಕರಿಗೂ ದೂರು ನೀಡಿದ್ದಾರೆ. ಮಂಗಳವಾರ ಪೋಷಕರ ಗುಂಪು ಶಾಲೆಗೆ ಭೇಟಿ ನೀಡಿದ್ದಾಗ ಇಬ್ಬರೂ ದೈಹಿಕ ಸಂಬಂಧ ಬೆಳೆಸುತ್ತಿದ್ದರು.

    ಇದರಿಂದ ಸಿಟ್ಟುಗೊಂಡ ಗ್ರಾಮಸ್ಥರು ಶಿಕ್ಷಕನನ್ನು ಹಾಗೂ ಅಂಗನವಾಡಿ ಸಿಬ್ಬಂದಿಯನ್ನು ಥಳಿಸಿದ್ದಾರೆ. ನಂತರ ಹುಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಹೇಳಿ ನಿಂದಿಸಿದ್ದಾರೆ. ಬಳಿಕ ಪುಡನ್‍ಸಂಡೈ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಶಿಕ್ಷಕನನ್ನು ಹಾಗೂ ಅಂಗನವಾಡಿ ಸಿಬ್ಬಂದಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.

    ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಶಾಲೆಯ ಪ್ರಾಂಶುಪಾಲರು ಆರೋಪಿ ಶಿಕ್ಷಕನ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೆ ಅಂಗನವಾಡಿ ಸಿಬ್ಬಂದಿ ಬಗ್ಗೆ ಆಕೆ ಕೆಲಸ ಮಾಡುವ ಸ್ಥಳದಲ್ಲಿ ಹೇಳುವುದಾಗಿ ಹೇಳಿದ್ದಾರೆ.

  • ಸಚಿವರ ಕಾಲಿಗೆ ಬಿದ್ದ ಶಿಕ್ಷಕಿ- ತಪ್ಪೆಂದು ಶಿಕ್ಷಕಿಯ ಕಾಲಿಗೆ ನಮಸ್ಕರಿಸಿದ ಸುರೇಶ್ ಕುಮಾರ್

    ಸಚಿವರ ಕಾಲಿಗೆ ಬಿದ್ದ ಶಿಕ್ಷಕಿ- ತಪ್ಪೆಂದು ಶಿಕ್ಷಕಿಯ ಕಾಲಿಗೆ ನಮಸ್ಕರಿಸಿದ ಸುರೇಶ್ ಕುಮಾರ್

    ಬೆಂಗಳೂರು: ರಾಜ್ಯದಲ್ಲಿ ಶಿಕ್ಷಕರ ಕಡ್ಡಾಯ ವರ್ಗಾವಣೆ ವಿರೋಧಿಸಿ ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿವಾಸದ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ಪ್ರತಿಭಟನೆ ವೇಳೆ ಶಿಕ್ಷಕಿಯೊಬ್ಬರು ಸಚಿವರ ಕಾಲಿಗೆ ಬಿದ್ದು ಮನವಿ ಸಲ್ಲಿಸಿದ್ದಾರೆ. ಕೂಡಲೇ ಸಚಿವರು ಹೀಗೆಲ್ಲ ಮಾಡೋದು ತಪ್ಪು ಎಂದು ಹೇಳಿ ಶಿಕ್ಷಕಿಯ ಕಾಲಿಗೆ ನಮಸ್ಕರಿಸಿದರು.

    ಬಸವೇಶ್ವರ ನಗರದಲ್ಲಿರುವ ಸುರೇಶ್ ಕುಮಾರ್ ನಿವಾಸಕ್ಕೆ ಆಗಮಿಸಿದ ನೂರಾರು ಶಿಕ್ಷಕರು ಪ್ರತಿಭಟನೆಗೆ ಮುಂದಾದರು. ಕೂಡಲೇ ಸಚಿವರು ಬಂದು ಶಿಕ್ಷಕರ ಬಳಿ ಮಾತನಾಡಿ ಅಹವಾಲು ಸ್ವೀಕರಿಸಿದರು. ಶಿಕ್ಷಕರೊಂದಿಗೆ ಚರ್ಚಿಸಿ ಕೂಡಲೇ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ಯಾವ ಶಿಕ್ಷಕರು ಪ್ರತಿಭಟನೆ ಮಾಡಿಲ್ಲ. ನನ್ನನ್ನು ಭೇಟಿಯಾಗಿ ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಕೆಲವು ಶಿಕ್ಷಕ ವರ್ಗ ವರ್ಗಾವಣೆ ಮಾಡಬೇಕು, ಮತ್ತೆ ಕೆಲವರು ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕಳೆದ ವಾರ ಬಂದು ಮನವಿ ಮಾಡಿಕೊಂಡಾಗ ಕಡ್ಡಾಯ ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಮತ್ತೆ ಕೆಲವು ಶಿಕ್ಷಕರೊಂದಿಗೆ ಬಂದು ಕಷ್ಟ ಹೇಳಿಕೊಂಡಿದ್ದಾರೆ. ಕಡ್ಡಾಯ ವರ್ಗಾವಣೆಯ ವಿಚಾರವನ್ನೇ ಕೈ ಬಿಡಬೇಕೆಂದು ಎಂದು ಹೇಳುತ್ತಿದ್ದಾರೆ.

    ಗ್ರಾಮೀಣ ಮತ್ತು ನಗರ ಭಾಗದ ಶಿಕ್ಷಕರ ಮನವಿಗಳು ತುಂಬಾ ವಿಭಿನ್ನವಾಗಿವೆ. ಇಬ್ಬರಿಗೂ ಅವರದ್ದೇ ಆದ ಕಷ್ಟಗಳಿವೆ. 2017ರಲ್ಲಿ ತನ್ವೀರ್ ಸೇಠ್ ಅವರಿದ್ದಾಗ ಕಡ್ಡಾಯ ವರ್ಗಾವಣೆ ಜಾರಿಗೆ ಬಂದಿತ್ತು. ಕೆಲ ಲೋಪ ದೋಷಗಳಿಂದಾಗಿ ಶಿಕ್ಷಕರು ಕಷ್ಟ ಅನುಭವಿಸುತ್ತಿದ್ದಾರೆ. ಲೋಪ ದೋಷಗಳನ್ನು ಸರಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಾಧ್ಯವಾದಷ್ಟು ಎಲ್ಲರಿಗೂ ನ್ಯಾಯ ನೀಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

  • ಹೆಲಿಕಾಪ್ಟರ್ ಜರ್ನಿ – ನಿವೃತ್ತಿ ದಿನ ಪತ್ನಿಯ ಆಸೆ ಈಡೇರಿಸಿದ ಶಿಕ್ಷಕ

    ಹೆಲಿಕಾಪ್ಟರ್ ಜರ್ನಿ – ನಿವೃತ್ತಿ ದಿನ ಪತ್ನಿಯ ಆಸೆ ಈಡೇರಿಸಿದ ಶಿಕ್ಷಕ

    ಜೈಪುರ: ರಾಜಸ್ಥಾನದ ಶಿಕ್ಷಕರೊಬ್ಬರು ತಮ್ಮ ನಿವೃತ್ತಿಯ ದಿನ ಪತ್ನಿಯ ಆಸೆಯನ್ನು ಈಡೇರಿಸಿದ್ದಾರೆ. ಒಂದು ದಿನ ಪತ್ನಿ ಹೆಲಿಕಾಪ್ಟರ್ ಬಾಡಿಗೆಗೆ ಎಷ್ಟಾಗುತ್ತೆ ಎಂದು ಕೇಳಿದ್ದರು. ಒಮ್ಮೆ ಹೆಲಿಕಾಪ್ಟರ್ ನಲ್ಲಿ ಕುಳಿತಕೊಳ್ಳಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇದೀಗ ಶಿಕ್ಷಕ ತಮ್ಮ ನಿವೃತ್ತಿಯ ಹಣದಿಂದ ಪತ್ನಿಯ ಆಸೆಯನ್ನು ಪೂರ್ಣ ಮಾಡಿದ್ದಾರೆ.

    ರಮೇಶ್ ಚಾಂದ್ ಮೀನಾ ಪತ್ನಿಗಾಗಿ ಹೆಲಿಕಾಪ್ಟರ್ ಬುಕ್ ಮಾಡಿರುವ ಶಿಕ್ಷಕ. ಕಾಪರ್ ನಲ್ಲಿ ಸಾಂಪ್ರದಾಯಿಕ ಉಡುಗೆ, ಸನ್ ಗ್ಲಾಸ್ ತೊಟ್ಟ ಪತ್ನಿ ಮತ್ತು ಮೊಮ್ಮಗನೊಂದಿಗೆ ತಮ್ಮ ಮೊದಲು ವಾಯುಯಾನ ಮಾಡಿದ್ದಾರೆ. ತಮ್ಮ ಶಾಲೆಯ ಬಳಿಯಿಂದ ಸ್ವಗ್ರಾಮ ಮಲವಾಲಿಗೆ ಪ್ರಯಾಣಿಸಿದ್ದಾರೆ.

    ರಮೇಶ್ ಮೀನಾ ಪತ್ನಿಯ ಖುಷಿಗಾಗಿ ನವದೆಹಲಿಯ ಕಾಪರ್ ಸರ್ವಿಸ್ ನಲ್ಲಿ 3.70 ಲಕ್ಷ ರೂ. ನೀಡಿ ಹೆಲಿಕಾಪ್ಟರ್ ಬುಕ್ ಮಾಡಿದ್ದರು. 18 ನಿಮಿಷದ ನಮ್ಮ ಪ್ರಯಾಣ ಅದ್ಭುತವಾದ ಅನುಭವವನ್ನು ನೀಡಿದೆ ಎಂದು ರಮೇಶ್ ಮೀನಾ ಹೇಳುತ್ತಾರೆ.

    ಒಂದು ದಿನ ಮನೆಯ ಮೇಲೆ ಕುಳಿತಾಗ ಪತ್ನಿ ಹೆಲಿಕಾಪ್ಟರ್ ನೋಡಿ, ಇದರ ಪ್ರಯಾಣಕ್ಕೆ ಎಷ್ಟು ಹಣ ಬೇಕು. ಬಾಡಿಗೆ ಪಡೆಯಲು ತುಂಬಾ ಹಣ ಬೇಕಲ್ವಾ ಎಂದು ಪ್ರಶ್ನೆ ಮಾಡಿದ್ದಳು. ಅಂದೇ ನಿವೃತ್ತಿಯ ದಿನದಂದು ಪತ್ನಿಯ ಆಸೆಯನ್ನು ಪೂರ್ಣ ಮಾಡಬೇಕೆಂದು ನಿರ್ಧರಿಸಿದ್ದೆ. ಇದು ನಮ್ಮ ಮೊದಲ ವಾಯು ಪಯಣವಾಗಿದ್ದು, ಖುಷಿಯಾಗಿತ್ತು ಎಂದು ರಮೇಶ್ ಮೀನಾ ಸಂತೋಷ ಹಂಚಿಕೊಂಡಿದ್ದಾರೆ.

    ಸ್ವಗ್ರಾಮದಲ್ಲಿ ಕಾಪರ್ ಇಳಿಸಲು ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಲಾಗಿತ್ತು. ಅನುಮತಿ ನೀಡಿದ ಜಿಲ್ಲಾಡಳಿತಕ್ಕೆ ತಮ್ಮ ಧನ್ಯವಾದಗಳನ್ನು ರಮೇಶ್ ಮೀನಾ ತಿಳಿಸಿದರು.

  • ಹೆಡ್‍ಫೋನ್ ಬೆಲೆ ಜಗಳ ಶಿಕ್ಷಕನ ಕೊಲೆಯಲ್ಲಿ ಅಂತ್ಯ

    ಹೆಡ್‍ಫೋನ್ ಬೆಲೆ ಜಗಳ ಶಿಕ್ಷಕನ ಕೊಲೆಯಲ್ಲಿ ಅಂತ್ಯ

    ನವದೆಹಲಿ: ಹೆಡ್‍ಫೋನ್ ಬೆಲೆ ವಿಚಾರವಾಗಿ ಶಿಕ್ಷಕನನ್ನು ಇಬ್ಬರು ವ್ಯಾಪಾರಿಗಳು ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರ ದೆಹಲಿಯ ಕೊತ್ವಾಲಿ ಪ್ರದೇಶದಲ್ಲಿ ನಡೆದಿದೆ.

    27 ವರ್ಷದ ಮೊಹಮ್ಮದ್ ಒವೈಶ್ ಕೊಲೆಯಾದ ಶಿಕ್ಷಕ. ಇವರು ದೆಹಲಿಯ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದನು. ಕೊಲೆ ಆರೋಪಿಗಳನ್ನು ಅಲ್ಲನ್ ಮತ್ತು ಅಯೂಬ್ ಎಂದು ಗುರುತಿಸಲಾಗಿದೆ.

    ದೆಹಲಿಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಒವೈಶ್ ಕೆಲಸ ಮುಗಿಸಿ ಉತ್ತರ ಪ್ರದೇಶದ ತನ್ನ ಮನೆಗೆ ಹೋಗಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾನೆ. ಈ ವೇಳೆ ರಸ್ತೆ ಬದಿಯಲ್ಲಿ ಮಾರುತ್ತಿದ್ದ ಹೆಡ್‍ಫೋನ್ ಕೊಂಡುಕೊಳ್ಳಲು ಹೋದಾಗ ಬೆಲೆ ವಿಚಾರಕ್ಕೆ ಓವೈಶ್ ಮತ್ತು ಅಲ್ಲನ್ ನಡುವೆ ಜಗಳವಾಗಿದೆ. ಈ ವೇಳೆ ಕೋಪಗೊಂಡ ಹೆಡ್‍ಫೋನ್ ವ್ಯಾಪಾರಿಗಳು ಶಿಕ್ಷಕನನ್ನು ಹೊಡೆದು ಸಾಯಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಹರೇಂದ್ರ ಕುಮಾರ್ ಸಿಂಗ್, ನಮಗೆ ರೈಲ್ವೆ ನಿಲ್ದಾಣದ ಬಳಿ ಒಬ್ಬ ವ್ಯಕ್ತಿ ಬಿದ್ದಿದ್ದಾನೆ ಎಂದು ಕರೆ ಬಂತು. ನಾವು ತಕ್ಷಣ ಅಲ್ಲಿಗೆ ಹೋಗಿ ಅವನನ್ನು ಅಸಫ್ ಅಲಿ ಆಸ್ಪತ್ರೆಗೆ ದಾಖಲು ಮಾಡಿದೆವು. ಅಲ್ಲಿನ ವೈದ್ಯರು ಆತ ಅದಾಗಲೇ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದರು. ನಂತರ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಆತನ ಕುಟುಂಬಕ್ಕೆ ಹಸ್ತಾಂತರ ಮಾಡಿರುವುದಾಗಿ ಹೇಳಿದರು.

  • 7ನೇ ತರಗತಿ ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ ಶಿಕ್ಷಕ

    7ನೇ ತರಗತಿ ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ ಶಿಕ್ಷಕ

    ತಿರುವನಂತಪುರಂ: 12 ವರ್ಷದ ಬಾಲಕಿ ಮೇಲೆ ಶಿಕ್ಷಕನೇ ಅತ್ಯಾಚಾರ ಎಸಗಿದ್ದು, 7ನೇ ತರಗತಿ ವಿದ್ಯಾರ್ಥಿನಿ ಇದೀಗ ಗರ್ಭಿಣಿಯಾಗಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.

    ಕುಟುಂಬಸ್ಥರು ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋದಾಗ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಅತ್ಯಾಚಾರ ಎಸಗಿದ 30 ವರ್ಷದ ಶಾಲಾ ಶಿಕ್ಷಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದಾರೆ.

    ವಿದ್ಯಾರ್ಥಿನಿ ಮೇಲೆ ಸತತ ಎರಡು ತಿಂಗಳಿಂದ ಅತ್ಯಾಚಾರ ಮಾಡಲಾಗಿದ್ದು, ಈ ಕುರಿತು ಕುಟುಂಬಸ್ಥರಿಗೆ ತಿಳಿದಿಲ್ಲ. ತಪಾಸಣೆಗಾಗಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ನಂತರ ಕುಟುಂಬಸ್ಥರಿಗೆ ಹಾಗೂ ಪೊಲೀಸರಿಗೆ ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಕುರಿತು ತಿಳಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಕುರಿತು ವಿದ್ಯಾರ್ಥಿನಿಯ ಹೇಳಿಕೆ ಪಡೆದಿದ್ದು, ತನ್ನ ಶಿಕ್ಷಕನೇ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾಳೆ. ನಾಪತ್ತೆಯಾದ ಶಿಕ್ಷಕನ ಮೇಲೆ ಅತ್ಯಾಚಾರ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

  • ತರಗತಿಯಲ್ಲಿ ಕುಡಿದು ಮಲಗಿದ್ದ ಶಿಕ್ಷಕ – ಡಿಸಿಯಿಂದ ಅಮಾನತು

    ತರಗತಿಯಲ್ಲಿ ಕುಡಿದು ಮಲಗಿದ್ದ ಶಿಕ್ಷಕ – ಡಿಸಿಯಿಂದ ಅಮಾನತು

    ರಾಯ್ಪುರ: ತರಗತಿಯಲ್ಲಿ ಕುಡಿದು ಮಲಗಿದ್ದ ಶಿಕ್ಷಕನನ್ನು ಜಿಲ್ಲಾಧಿಕಾರಿ ಅಮಾನತು ಮಾಡಿರುವ ಘಟನೆ ಛತ್ತೀಸ್‍ಗಢದ ಆಶ್‍ಪುರದಲ್ಲಿ ನಡೆದಿದೆ.

    ಆಶ್‍ಪುರ ಜಿಲ್ಲೆಯ ತುರಾಂಗ್‍ಖಾರ್ ಎಂಬ ಹಳ್ಳಿಯ ಪ್ರಾಥಮಿಕ ಶಾಲೆಯ ಶಿಕ್ಷಕನೊಬ್ಬ ಶಾಲೆಗೆ ಮದ್ಯಪಾನ ಮಾಡಿಕೊಂಡು ಬಂದು ಮಕ್ಕಳಿಗೆ ಪಾಠ ಮಾಡದೇ ತರಗತಿಯಲ್ಲಿ ಮಲಗಿದ್ದ.

    ಕುಡಿದು ಶಾಲೆಗೆ ಬಂದಿದ್ದ ಶಿಕ್ಷಕ ತರಗತಿಯಲ್ಲಿ ಪಾಠ ಮಾಡದೇ ಮಾಲಗಿದ್ದನ್ನು ಅಲ್ಲಿನ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ನಂತರ ಅವನನ್ನು ಎಬ್ಬಿಸಿ ಪ್ರಶ್ನೆ ಮಾಡಿದ್ದಕ್ಕೆ ನಾನು ಮದ್ಯಪಾನ ಮಾಡಿಲ್ಲ ಎಂದು ಹೇಳಿದ್ದಾನೆ. ಈಗ ಈ ವಿಚಾರವಾಗಿ ಸ್ಥಳೀಯರು ಮಕ್ಕಳ ಬಳಿ ಮಾಹಿತಿ ಪಡೆದು ಶಿಕ್ಷಕನ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಜನರು ಒತ್ತಾಯ ಮಾಡಿದ್ದರು.

    ಈ ವಿಚಾರವಾಗಿ ಮಾತನಾಡಿರುವ ಜಿಲ್ಲಾ ಶಿಕ್ಷಣಾಧಿಕಾರಿ ಬಾಲಾ ರಾಮ್ ಧ್ರುವ ಈ ಘಟನೆಯ ಬಗ್ಗೆ ಪ್ರಸ್ತುತ ವರದಿಗಾಗಿ ಕಾಯಲಾಗುತ್ತಿದ್ದು, ವರದಿ ಬಂದಲ್ಲಿ ಅ ವರದಿಯ ಆಧಾರದ ಮೇಲೆ ಅ ಶಿಕ್ಷಕನಿಗೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.

  • ಶಿಕ್ಷಕಿಯ ಮೇಲೆ 2 ವರ್ಷಗಳಿಂದ ಅತ್ಯಾಚಾರವೆಸಗಿದ್ದ ಪ್ರಾಂಶುಪಾಲ ಅರೆಸ್ಟ್

    ಶಿಕ್ಷಕಿಯ ಮೇಲೆ 2 ವರ್ಷಗಳಿಂದ ಅತ್ಯಾಚಾರವೆಸಗಿದ್ದ ಪ್ರಾಂಶುಪಾಲ ಅರೆಸ್ಟ್

    – ಪಾನೀಯದಲ್ಲಿ ಮತ್ತು ಬರುವ ಔಷಧಿ ಹಾಕಿ ರೇಪ್

    ನವದೆಹಲಿ: ಶಿಕ್ಷಕಿಯ ಮೇಲೆ ಕಳೆದ 2 ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗಿದ್ದ ಪ್ರಾಂಶುಪಾಲನನ್ನು ದೆಹಲಿ ಪೊಲೀಸರು ಗುರುವಾರ ಬಂದಿಸಿದ್ದಾರೆ.

    ದಕ್ಷಿಣ ದೆಹಲಿಯ ಜಸೋಲ ಖಾಸಗಿ ಶಾಲೆಯ ಪ್ರಾಂಶುಪಾಲ ರಾಕೇಶ್ ಸಿಂಗ್ ಬಂಧಿತ ಪ್ರಾಂಶುಪಾಲ. 27 ವರ್ಷದ ಸಂತ್ರಸ್ತೆ ಬುಧವಾರ ನೀಡಿದ್ದ ದೂರು ಪಡೆದ ಪೊಲೀಸರು ಆರೋಪಿ ರಾಕೇಶ್ ಸಿಂಗ್‍ನನ್ನು ಬಂಧಿಸಿದ್ದಾರೆ.

    ಆಗಿದ್ದೇನು?:
    ಪ್ರಾಶುಂಪಾಲ ರಾಕೇಶ್ ಸಿಂಗ್ 2017ರ ಜೂನ್‍ನಲ್ಲಿ ಶಾಲಾ ಅವಧಿಯ ಬಳಿಕ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುವಂತೆ ಸಂತ್ರಸ್ತೆಯನ್ನು ಕರೆದಿದ್ದನು. ನಂತರ ಶಿಕ್ಷಕಿಯನ್ನು ತನ್ನ ಕಚೇರಿಗೆ ಕರೆದುಕೊಂಡು ಹೋಗಿ ಮತ್ತು ಬರುವ ಔಷಧ ಬೆರೆಸಿದ ಪಾನೀಯ ನೀಡಿದ್ದನು. ಇದನ್ನು ಕುಡಿದ ಶಿಕ್ಷಕಿ ಪ್ರಜ್ಞೆ ತಪ್ಪಿ ಬಿದ್ದ ವೇಳೆ ರಾಕೇಶ್ ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ ಈ ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಪೊಲೀಸ್ ಆಯುಕ್ತ ಚಿನ್ಮೊಯ್ ಬಿಸ್ವಾಲ್ ತಿಳಿಸಿದ್ದಾರೆ.

    ಪ್ರಾಂಶುಪಾಲ ತನ್ನ ಬಳಿ ಇದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಈ ಮೂಲಕ ಕಳೆದ 5 ವರ್ಷಗಳಿಂದ ಶಾಲೆಯ ಆವರಣದಲ್ಲಿ ಅತ್ಯಾಚಾರ ಎಸಗಿದ್ದಾನೆ. ಆರೋಪಿಗೆ ಇಬ್ಬರು ಸಹ ಶಿಕ್ಷಕರು ಸಹಾಯ ಮಾಡಿದ್ದಾರೆ. ನಾನು ಗರ್ಭಿಣಿಯಾದಾಗ ಮಗುವನ್ನು ತೆಗೆಸುವಂತೆ ಒತ್ತಾಯಿಸಿದ್ದರು ಎಂದು ಸಂತ್ರಸ್ತೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎಂದು ಚಿನ್ಮೊಯ್ ಬಿಸ್ವಾಲ್ ವಿವರಿಸಿದ್ದಾರೆ.

    ಈ ಸಂಬಂಧ ಸಂತ್ರಸ್ತೆಯು ಸಾವಿತ್ರಿ ವಿಹಾರ್ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ. ಆರೋಪಿ ರಾಕೇಶ್ ಸಿಂಗ್‍ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.

  • ಮಾರ್ಕ್ಸ್‌ಗಾಗಿ ವಿದ್ಯಾರ್ಥಿನಿ ಜೊತೆ ಪ್ರಿನ್ಸಿಪಾಲ್ ಕಾಮದಾಟ

    ಮಾರ್ಕ್ಸ್‌ಗಾಗಿ ವಿದ್ಯಾರ್ಥಿನಿ ಜೊತೆ ಪ್ರಿನ್ಸಿಪಾಲ್ ಕಾಮದಾಟ

    ಗದಗ: ಕಾಲೇಜಿನ ಕಾಮುಕ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿನಿ ಜೊತೆ ಅಶ್ಲೀಲವಾಗಿ ವರ್ತಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಖಾಸಗಿ ಕಾಲೇಜಿನ ಕನ್ನಡ ಉಪನ್ಯಾಸಕರು ಹಾಗೂ ಕಾಲೇಜಿನ ಪ್ರಾಂಶುಪಾಲ ಬಸವರಾಜ್ ವಿದ್ಯಾರ್ಥಿನಿ ಜೊತೆ ಅಶ್ಲೀಲವಾಗಿ ವರ್ತಿಸಿದ ಕಾಮುಕ. ಈತ ಕಾಲೇಜಿನ ವಿದ್ಯಾರ್ಥಿನಿ ಜೊತೆ ಚಿನ್ನ, ರನ್ನಾ, ಬಂಗಾರ ಎಂದು ಸೆಕ್ಸ್ ಪಾಠ ಮಾಡಿರುವುದು ಬೆಳಕಿಗೆ ಬಂದಿದೆ. ಇಂಟರ್ನಲ್ ಮಾರ್ಕ್ಸ್‌ ಗಾಗಿ ನಡೆದ ವಿದ್ಯಾರ್ಥಿನಿ ಹಾಗೂ ಪ್ರಾಂಶುಪಾಲನ ಕಾಮಪುರಾಣ ಈಗ ಬೆಳಕಿಗೆ ಬಂದಿದೆ.

    ಬೆಳಗ್ಗೆ ಸಭ್ಯನ ಹಾಗೆ ಬಂದು ಪಾಠ ಮಾಡುತ್ತಿದ್ದ ಬಸವರಾಜ್, ಆ ಬಳಿಕ ವಿದ್ಯಾರ್ಥಿನಿಯರ ಇಂಟರ್ನಲ್ ಮಾರ್ಕ್ಸ್‌ ಮುಂದಿಟ್ಟುಕೊಂಡು ಕಾಮದ ಪಾಠ ಶುರು ಮಾಡಿಕೊಳ್ಳುತ್ತಿದ್ದನು. ಇದೇ ರೀತಿ ಅರೆಬೆತ್ತಲಾಗಿ ಓರ್ವ ವಿದ್ಯಾರ್ಥಿನಿಗೆ ವಿಡಿಯೋ ಕಾಲ್ ಮಾಡಿ, ಅದರ ಸ್ಕ್ರೀನ್‍ಶಾಟ್ ತೆಗೆದು ಸರಿಯಾಗೇ ತಗಲಾಕ್ಕೊಂಡಿದ್ದಾನೆ. ಈ ಫೋಟೋ, ಮೆಸೇಜ್‍ಗಳು ವೈರಲ್ ಆಗಿದ್ದು, ಕಾಲೇಜಿನ ಹಳೆ ವಿದ್ಯಾರ್ಥಿಗಳು ಬಸವರಾಜ್‍ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಬಸವರಾಜ್ ಈ ರೀತಿ ಮಾಡಿರುವುದು ಇದೇ ಮೊದಲೇನಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ರೀತಿ ಕಾಮಪುರಾಣ ಮುಂದುವರಿಸಿದ್ದಾನೆ. ಈ ಬಗ್ಗೆ ಕಾಲೇಜ್ ಆಡಳಿತಕ್ಕೆ ಕೇಳಿದರೆ ಸೂಕ್ತ ದಾಖಲೆ ನೀಡಿ, ರೈಟಿಂಗ್‍ನಲ್ಲಿ ಬರೆದುಕೊಡಿ ಎನ್ನುತ್ತಿದ್ದಾರೆ.

    ಏನು ಸಾರ್ ಹೀಗೆಲ್ಲಾ ಮಾಡುತ್ತಿರಲ್ಲ ಎಂದು ಬಸವರಾಜ್‍ನನ್ನು ಕೇಳಿದರೆ, ನಾನು ವಿದ್ಯಾರ್ಥಿನಿಯೊಂದಿಗೆ ಮೆಸೇಜ್ ಮಾಡಿದ್ದು ನಿಜ. ಆದರೆ ಇದು ನನ್ನ ಖಾಸಗಿ ಬದುಕು. ಯಾರೋ ನನ್ನ ಮತ್ತು ಆ ಹುಡುಗಿ ಮೊಬೈಲ್ ಹ್ಯಾಕ್ ಮಾಡಿ ಈ ಫೋಟೋ, ಮೆಸೇಜ್ ಕದ್ದಿದ್ದಾರೆ. ಅವರನ್ನು ಸುಮ್ನೆ ಬಿಡಲ್ಲ, ಕೇಸ್ ಹಾಕುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾನೆ.

    ಭಾರತೀಯ ಪರಂಪರೆಯಲ್ಲಿ ಶಿಕ್ಷಕರಿಗೆ ಒಂದು ಮಹತ್ವದ ಸ್ಥಾನ ಇದೆ. ಆದರೆ ಇಂತಹ ಕೆಲ ನೀಚರಿಂದ ಶಿಕ್ಷಕರ ಹೆಸರು ಹಾಳಾಗುತ್ತಿದೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಯಾವ ರೀತಿ ಕ್ರಮಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.