Tag: ಶಿಕ್ಷಕ

  • ಟ್ಯೂಷನ್ ನೆಪದಲ್ಲಿ 1ನೇ ತರಗತಿ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದ ಶಿಕ್ಷಕ

    ಟ್ಯೂಷನ್ ನೆಪದಲ್ಲಿ 1ನೇ ತರಗತಿ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದ ಶಿಕ್ಷಕ

    – ಶಾಲಾ ಶೌಚಾಲಯದಲ್ಲಿ ಕೃತ್ಯವೆಸೆಗಿದ
    – ಅಣ್ಣನಿಗೆ ಚಾಕಲೇಟ್ ಆಸೆ ತೋರಿಸಿ ತಂಗಿ ಮೇಲೆ ರೇಪ್

    ಲಕ್ನೋ: ಟ್ಯೂಷನ್ ಹೇಳಿ ಕೊಡುವ ನೆಪದಲ್ಲಿ ಕಾಮುಕ ಶಿಕ್ಷಕನೋರ್ವ 6 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರಗೈದ ಹೀನಾಯ ಘಟನೆ ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯಲ್ಲಿ ನಡೆದಿದೆ.

    ಬಾಂಡಾ ಜಿಲ್ಲೆಯ ಟಿಂಡ್ವಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಖಾಸಗಿ ಶಾಲೆಯ ಶಿಕ್ಷಕ ಕಿಶನ್ ಮಿಶ್ರಾ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಶಿಕ್ಷಕ. ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಯಲ್ಲಿ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಿಕ್ಷಕ ಅತ್ಯಾಚಾರ ಮಾಡಿದ್ದಾನೆ. ಇದನ್ನೂ ಓದಿ:ಮನೆಗೆ ನುಗ್ಗಿ ಅಪ್ರಾಪ್ತೆಯನ್ನು ಅತ್ಯಾಚಾರಗೈದು ಬೆಂಕಿ ಹಚ್ಚಿದ ಕಾಮುಕ

    ಶುಕ್ರವಾರ ಸಂಜೆ ಶಾಲೆ ಮುಗಿದ ಬಳಿಕ ಟ್ಯೂಷನ್ ಹೇಳಿ ಕೊಡುವ ನೆಪದಲ್ಲಿ ಬಾಲಕಿ ಹಾಗೂ ಆಕೆಯ ಅಣ್ಣನನ್ನು ಶಿಕ್ಷಕ ಶಾಲೆಯಲ್ಲಿ ಉಳಿಸಿಕೊಂಡಿದ್ದನು. ಸುಮಾರು 5 ಗಂಟೆ ವೇಳೆಗೆ ಇಬ್ಬರನ್ನು ಮನೆಗೆ ಹೋಗುವಂತೆ ಶಿಕ್ಷಕ ಹೇಳಿದ್ದಾನೆ.

    ಅಣ್ಣಾ, ತಂಗಿ ಮನೆಗೆ ತೆರಳುತ್ತಿದ್ದ ವೇಳೆ ಬಾಲಕಿಗೆ ಚಾಕಲೇಟ್ ತೆಗೆದುಕೊಂಡು ಬಾ ಎಂದು ಹೇಳಿ ಅಂಗಡಿಗೆ ಕಳುಹಿಸಿ, ಬಳಿಕ ಬಾಲಕಿಯನ್ನು ಪುಸಲಾಯಿಸಿ ಶಾಲಾ ಶೌಚಾಲಯಕ್ಕೆ ಶಿಕ್ಷಕ ಕರೆದುಕೊಂಡು ಹೋಗಿ ಆಕೆಯನ್ನು ಅತ್ಯಾಚಾರಗೈದಿದ್ದಾನೆ. ಈ ವೇಳೆ ಹೇಗೋ ಬಾಲಕಿ ಕಾಮುಕ ಶಿಕ್ಷಕನಿಂದ ತಪ್ಪಿಸಿಕೊಂಡು ಮನೆಗೆ ಸೇರಿದ್ದಳು. ಇದನ್ನೂ ಓದಿ:ಅಪ್ರಾಪ್ತೆ ಮೇಲೆ ತಂದೆಯಿಂದಲೇ ಅತ್ಯಾಚಾರ- 8 ವರ್ಷ ಬಳಿಕ ಆರೋಪಿ ಅರೆಸ್ಟ್

    ಮನೆಗೆ ಬಂದ ಬಾಲಕಿ ತಾಯಿಯ ಬಳಿ ನಡೆದ ವಿಚಾರವನ್ನು ಹೇಳಿದ್ದಾಳೆ. ಹೀಗಾಗಿ ಶನಿವಾರ ಬಾಲಕಿ ತಾಯಿ ಪೊಲೀಸರಿಗೆ ಶಿಕ್ಷಕನ ವಿರುದ್ಧ ದೂರು ಕೊಟ್ಟಿದ್ದರು. ತಾಯಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸದ್ಯ ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ. ಈಗಾಗಲೇ ವಿದ್ಯಾರ್ಥಿನಿಯ ವೈದ್ಯಕೀಯ ಪರೀಕ್ಷೆ ನಡೆದಿದ್ದು, ವರದಿ ಬರಬೇಕಿದೆ.

  • ಹಾವು ಕಚ್ಚಿದ್ರೂ ಪಾಠ ಮುಂದುವರಿಕೆ – ಟೀಚರ್ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ

    ಹಾವು ಕಚ್ಚಿದ್ರೂ ಪಾಠ ಮುಂದುವರಿಕೆ – ಟೀಚರ್ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ

    – ಆಸ್ಪತ್ರೆಗೆ ದಾಖಲಿಸದೆ ತರಗತಿ ಮುಂದುವರಿಸಿದ ಟೀಚರ್
    – ದಾರಿ ಮಧ್ಯೆ ಪ್ರಾಣಬಿಟ್ಟ ಬಾಲಕಿ

    ತಿರುವನಂತಪುರಂ: ಹಾವು ಕಡಿತದಿಂದ ಬಾಲಕಿ ಪ್ರಾಣಬಿಟ್ಟ ಘಟನೆ ಕೇರಳದ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯಲ್ಲಿ ನಡೆದಿದೆ.

    ಶೆಹೆಲಾ ಶರ್ಲಿನ್(10) ಮೃತಪಟ್ಟ ಬಾಲಕಿ. ಹಾವು ಕಚ್ಚಿದ ಒಂದು ಗಂಟೆ ನಂತರ ಶೆಹೆಲಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಅಲ್ಲದೆ ಶೆಹೆಲಾಳಿಗೆ ಹಾವು ಕಚ್ಚಿದರೂ ಆಕೆಯ ತಂದೆ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿ ಶಿಕ್ಷಕರು ತಮ್ಮ ಪಾಠವನ್ನು ಮುಂದುವರಿಸುತ್ತಿದ್ದರು. ಆದರೆ ಅಷ್ಟರಲ್ಲಿ ಶೆಹೆಲಾ ಕಾಲು ನೀಲಿ ಬಣ್ಣಕ್ಕೆ ತಿರುಗಿತ್ತು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

    ನಾವು ಶಿಕ್ಷಕರ ಗಮನಕ್ಕೆ ತಂದರೂ ಅವರು ನಿರ್ಲಕ್ಷ್ಯ ವಹಿಸಿದರು. ಹಾವು ಕಡಿತದಿಂದ ಗಾಯವಾಗಿಲ್ಲ. ಬದಲಾಗಿ ಶೆಹೆಲಾ ಉಗುರಿನಿಂದ ಗಾಯ ಮಾಡಿಕೊಂಡಿದ್ದಾಳೆ ಎಂದು ಹೇಳಿ ಪಾಠ ಮುಂದುವರಿಸಿದ್ದರು ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

    ಮಾಧ್ಯಮದವರು ಬಾಲಕಿ ಕುಳಿತಿದ್ದ ಡೆಸ್ಕ್ ಕೆಳಗೆ ರಂಧ್ರದೊಂದಿಗೆ ತರಗತಿಯ ದೃಶ್ಯಗಳನ್ನು ಪ್ರಸಾರ ಮಾಡಿತ್ತು. ಮೂಲಗಳ ಪ್ರಕಾರ ಟೀಚರ್ ಅಮಾನತುಗೊಂಡಿದ್ದು ವಿಚಾರಣೆ ಬಾಕಿ ಇದೆ ಎಂದು ತಿಳಿದು ಬಂದಿದೆ.

    ಬಾಲಕಿಯ ಸಂಬಂಧಿಕರಾದ ಶಾನವಾಜ್ ಈ ಬಗ್ಗೆ ಪ್ರತಿಕ್ರಿಯಿಸಿ, ಶೆಹೆಲಾಳನ್ನು ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಬಳಿಕ ಅಲ್ಲಿನ ವೈದ್ಯರು ಶೆಹೆನಾಳನ್ನು ಕೋಝಿಕೋಡ್ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರು. ಆದರೆ ಶೆಹೆಲಾಳ ಸ್ಥಿತಿ ಹದಗೆಟ್ಟಿದ್ದರಿಂದ ಆಕೆಯನ್ನು ಕೊಝಿಕೋಡ್ ಹೋಗುವ ಮಾರ್ಗದಲ್ಲಿರುವ ವೈತ್ರಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆಕೆಯನ್ನು ಪರಿಶೀಲಿಸಿದ ವೈದ್ಯರು ಶೆಹೆಲಾ ಮೃತಪಟ್ಟಿದ್ದಾಳೆ ಎಂದು ತಿಳಿಸಿದರು ಎಂಬುದಾಗಿ ವಿವರಿಸಿದರು.

    ಈ ಬಗ್ಗೆ ವಯನಾಡ್ ಜಿಲ್ಲಾಧಿಕಾರಿ ಅದೀಲಾ ಅಬ್ದುಲಾ ಮಾತನಾಡಿ, ಇದು ಅತ್ಯಂತ ದುರದೃಷ್ಟಕರವಾದ ಸಂಗತಿ. ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಮಗುವಿನ ವೈದ್ಯಕೀಯ ನೆರವು ವಿಳಂಬವಾಗಿದೆ ಎಂಬ ಆರೋಪದ ಬಗ್ಗೆ ವರದಿ ಸಲ್ಲಿಸಲು ಶಿಕ್ಷಣ ಇಲಾಖೆಯ ಅಧಿಕಾರಿಯನ್ನು ಕೇಳಿದ್ದೇನೆ ಎಂದು ಹೇಳಿದ್ದಾರೆ. ಇತ್ತ ಕೇರಳ ಸಿಎಂ ಪಿಣರಾಯಿ ವಿಜಯನ್, ಈ ಘಟನೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಬಾಲಕಿ ಸಾವಿನಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಬಾಲಕಿಯ ಸಂಬಂಧಿಕರು ಶಾಲೆ ಕಚೇರಿಗೆ ಹೋಗಿ ಅಲ್ಲಿದ್ದ ಶಿಕ್ಷಕರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಶಾಲೆಗೆ ಪೊಲೀಸರು ಬಿಗಿಯಾದ ಭದ್ರತೆ ನೀಡಿದ್ದು ಗ್ರಾಮಸ್ಥರನ್ನು ತಡೆದಿದ್ದಾರೆ.

  • ‘ನಮ್ಮನ್ನು ಬಿಟ್ಟು ಹೋಗ್ಬೇಡಿ ಸಾರ್ ಪ್ಲೀಸ್’ – ಶಿಕ್ಷಕನನ್ನು ಬಿಗಿದಪ್ಪಿ ಅತ್ತ ವಿದ್ಯಾರ್ಥಿಗಳು

    ‘ನಮ್ಮನ್ನು ಬಿಟ್ಟು ಹೋಗ್ಬೇಡಿ ಸಾರ್ ಪ್ಲೀಸ್’ – ಶಿಕ್ಷಕನನ್ನು ಬಿಗಿದಪ್ಪಿ ಅತ್ತ ವಿದ್ಯಾರ್ಥಿಗಳು

    ಬೀದರ್: ಶಿಕ್ಷಕರನ್ನು ವಿದ್ಯಾರ್ಥಿಗಳು ಹೆಚ್ಚು ಹಚ್ಚಿಕೊಂಡಿರುತ್ತಾರೆ. ಅದರಲ್ಲೂ ತಮ್ಮ ಅಚ್ಚುಮೆಚ್ಚಿನ ಶಿಕ್ಷಕರು ಶಾಲೆ ಬಿಟ್ಟುಹೋಗುತ್ತಾರೆ ಎಂದರೆ ಮಕ್ಕಳಿಗೆ ಬೇಸರವಾಗುತ್ತೆ. ಆದರೆ ಬೀದರ್‌ನಲ್ಲಿ ವರ್ಗಾವಣೆಯಾಗಿ ಶಾಲೆ ಬಿಟ್ಟು ಹೋಗುತ್ತಿದ್ದ ಶಿಕ್ಷಕರಿಗಾಗಿ ಮಕ್ಕಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಿಟ್ಟು ಹೋಗ್ಬೇಡಿ ಸಾರ್ ಎಂದು ಶಿಕ್ಷಕನನ್ನು ಬಿಗಿದಪ್ಪಿ ಮಕ್ಕಳು ಕಣ್ಣೀರಿಟ್ಟಿದ್ದಾರೆ.

    ಹೌದು. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಕುಮಾರ ಚಿಂಚೋಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಅತ್ತಿದ್ದಾರೆ. ಈ ಶಾಲೆಯ ಕನ್ನಡ ಮಾಧ್ಯಮ ಶಿಕ್ಷಕ ಅನಿಲ್ ರಾಠೋಡ್ ಅವರ ಮೇಲೆ ಮಕ್ಕಳು ತೋರಿದ ಪ್ರೀತಿ ನೋಡಿ ಇತರೆ ಶಿಕ್ಷಕರೂ ಕೂಡ ಭಾವುಕರಾಗಿದ್ದಾರೆ. ಶಾಲೆಯಿಂದ ವರ್ಗಾವಣೆಗೊಂಡು ತೆರಳುತ್ತಿದ್ದ ಅನಿಲ್ ಅವರಿಗೆ ಬೀಳ್ಕೊಡುವಾಗ ವಿದ್ಯಾರ್ಥಿಗಳು ಸಾಮೂಹಿಕವಾಗಿ ಬಿಕ್ಕಿ, ಬಿಕ್ಕಿ ಅಳುವ ದೃಶ್ಯ ಗುರು ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ:ಶಿಕ್ಷಕಿಯರ ವರ್ಗಾವಣೆ- ಬಿಕ್ಕಿಬಿಕ್ಕಿ ಅತ್ತ ವಿದ್ಯಾರ್ಥಿಗಳು

    ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗುಲ್ಲಳ್ಳಿ ತಾಂಡಾದವರಾದ ಶಿಕ್ಷಕ ಅನಿಲ್ ರಾಠೋಡ್ ಕಳೆದ 9 ವರ್ಷದಿಂದ ಇದೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲಿ ಇಲ್ಲಿನ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು. ಆದರೆ ಈಗ ತಮ್ಮೂರಿನ ಸಮೀಪವೇ ಇರುವ ಆಳಂದ ತಾಲೂಕಿನ ರುದ್ರವಾಡಿ ಗ್ರಾಮಕ್ಕೆ ಅನಿಲ್ ಅವರು ವರ್ಗಾವಣೆಗೊಂಡಿದ್ದು, ಕುಮಾರ ಚಿಂಚೊಳಿ ಗ್ರಾಮದ ಶಾಲೆಯಿಂದ ತೆರಳುತ್ತಿದ್ದ ಶಿಕ್ಷಕರಿಗಾಗಿ ವಿದ್ಯಾರ್ಥಿಗಳೆಲ್ಲರೂ ಗೊಳೋ ಎಂದು ಅತ್ತಿದ್ದಾರೆ. ನಮ್ಮನ್ನು ಬಿಟ್ಟು ಹೊಗಬೇಡಿ ಸಾರ್ ಎಂದು ಅಂಗಲಾಚಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋ ನೋಡಿದರೆ ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎನ್ನುವುದು ತಿಳಿಯುತ್ತದೆ.

  • ಅಶ್ಲೀಲ ವಿಡಿಯೋ ತೋರಿಸಿ ಮುತ್ತು ನೀಡುವಂತೆ ಕಿರುಕುಳ- ಶಿಕ್ಷಕ ಅರೆಸ್ಟ್

    ಅಶ್ಲೀಲ ವಿಡಿಯೋ ತೋರಿಸಿ ಮುತ್ತು ನೀಡುವಂತೆ ಕಿರುಕುಳ- ಶಿಕ್ಷಕ ಅರೆಸ್ಟ್

    ಶಿವಮೊಗ್ಗ: ಎಂಟನೇ ತರಗತಿ ವಿದ್ಯಾರ್ಥಿನಿ ಜೊತೆ ಶಿಕ್ಷಕ ಅನುಚಿತವಾಗಿ ವರ್ತಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

    ದೂದ್ಯನಾಯ್ಕ ಅನುಚಿತವಾಗಿ ವರ್ತಿಸಿದ ಶಿಕ್ಷಕ. ದೂದ್ಯನಾಯ್ಕ ವಿಜ್ಞಾನ ವಿಷಯದ ಶಿಕ್ಷಕನಾಗಿದ್ದು, ಕಳೆದ ವಾರ ಶಾಲೆಯ ಲ್ಯಾಬ್ ಸ್ವಚ್ಚಗೊಳಿಸಲು ಮೂವರು ವಿದ್ಯಾರ್ಥಿನಿಯರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಇನ್ನೊಬ್ಬ ವಿದ್ಯಾರ್ಥಿನಿ ಸಹ ಈ ಮೊದಲೇ ಲ್ಯಾಬ್‍ನಲ್ಲಿದ್ದಳು.

    ಮೊದಲೇ ವಿದ್ಯಾರ್ಥಿನಿ ಇರುವುದನ್ನು ಗಮನಿಸಿದ ಶಿಕ್ಷಕ ಮೂವರು ವಿದ್ಯಾರ್ಥಿನಿಯರನ್ನು ಹೊರಗೆ ಕಳುಹಿಸಿದ್ದಾನೆ. ಬಳಿಕ ಅಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿನಿಯ ಹೆಗಲ ಮೇಲೆ ಕೈ ಹಾಕಿ ಅಶ್ಲೀಲ ವಿಡಿಯೋ ನೋಡುವಂತೆ ಹೇಳಿದ್ದಾನೆ. ಅಲ್ಲದೆ ಮುತ್ತು ಕೊಡುವಂತೆ ಪೀಡಿಸಿದ್ದಾನೆ.

    ಶಿಕ್ಷಕನ ವರ್ತನೆ ವಿರೋಧಿಸಿ ವಿದ್ಯಾರ್ಥಿನಿ ಅಲ್ಲಿಂದ ತಪ್ಪಿಸಿಕೊಂಡು ಹೊರಗಡೆ ಓಡಿ ಬಂದಿದ್ದಾಳೆ. ಶಿಕ್ಷಕನ ಈ ಅನುಚಿತ ವರ್ತನೆ ವಿರುದ್ಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಪೋಕ್ಸೋ ಕಾಯ್ದೆಯಡಿ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.

  • 500 ರೂ. ಕಳ್ಕೊಂಡು, ವಿದ್ಯಾರ್ಥಿಗಳನ್ನ ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ

    500 ರೂ. ಕಳ್ಕೊಂಡು, ವಿದ್ಯಾರ್ಥಿಗಳನ್ನ ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ

    -ಕೊಠಡಿಯೊಳಗೆ ಕೂಡಿ ಹಾಕಿ ಥಳಿತ

    ಹಾವೇರಿ: 500 ರುಪಾಯಿ ಹಣ ಕಳೆದುಕೊಂಡ ಶಿಕ್ಷಕರೊಬ್ಬರು ಅದನ್ನು ಮಕ್ಕಳೇ ಕದ್ದಿದ್ದಾರೆ ಎಂದು ಆರೋಪಿಸಿ, ಬಾಸುಂಡೆ ಬರುವಂತೆ ವಿದ್ಯಾರ್ಥಿಗಳಿಗೆ ಥಳಿಸಿದ ಅಮಾನವೀಯ ಘಟನೆ ಹಾವೇರಿ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಹನುಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಒಟ್ಟು 8 ಮಂದಿ ವಿದ್ಯಾರ್ಥಿಗಳನ್ನು ಶಾಲಾ ಕೊಠಡಿಯೊಳಗೆ ಕೂಡಿ ಹಾಕಿ ಶಿಕ್ಷಕ ಕುಮಾರಸ್ವಾಮಿ ಹಿರೇಮಠ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಶಾಲೆಯ ಪಕ್ಕದಲ್ಲಿಯೇ ಸಿಗುವ ಹಸಿ ಕಟ್ಟಿಗೆ ತುಂಡಾಗುವಂತೆ ಮಕ್ಕಳ ಮುಖ, ಕೈ ಹಾಗೂ ಬೆನ್ನಿಗೆ ಮನಸೋಯಿಚ್ಛೆ ಶಿಕ್ಷಕ ಥಳಿಸಿದ್ದಾರೆ.

    ಈ ವಿಷಯ ತಿಳಿದ ವಿದ್ಯಾರ್ಥಿಗಳ ಪೋಷಕರು ಶಿಕ್ಷಕ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು ಸಭೆ ನಡೆಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ.

  • ನಿವೃತ್ತಿಯಾದ್ರೂ ಮಕ್ಕಳಿಗೆ ಉಚಿತ ಪಾಠ- ಶಂಕ್ರಪ್ಪ ಮೇಷ್ಟ್ರು ಇವತ್ತಿನ ಪಬ್ಲಿಕ್ ಹೀರೋ

    ನಿವೃತ್ತಿಯಾದ್ರೂ ಮಕ್ಕಳಿಗೆ ಉಚಿತ ಪಾಠ- ಶಂಕ್ರಪ್ಪ ಮೇಷ್ಟ್ರು ಇವತ್ತಿನ ಪಬ್ಲಿಕ್ ಹೀರೋ

    ಕೊಪ್ಪಳ: ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿದರೆ ಸಾಕಪ್ಪ ಸಾಕು. ಮುಂದಿನ ಜೀವನವನ್ನು ಮಕ್ಕಳು, ಮೊಮ್ಮಕ್ಕಳೊಂದಿಗೆ ಆರಾಮಾಗಿ ಕಳೆಯಬಹುದೆಂದು ಬಹುತೇಕರು ಯೋಚನೆ ಮಾಡುತ್ತಾರೆ. ಕೆಲವರು ಖಾಸಗಿ ಉದ್ಯೋಗದತ್ತ ಮುಖ ಮಾಡುತ್ತಾರೆ. ಇಂದಿನ ನಮ್ಮ ಪಬ್ಲಿಕ್ ಹೀರೋ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾಗಿ 16 ವರ್ಷ ಕಳೆದರೂ ಇಂದಿಗೂ ಮಕ್ಕಳಿಗೆ ಉಚಿತ ಪಾಠ ಮಾಡುತ್ತಿದ್ದಾರೆ.

    ಕೊಪ್ಪಳದ ಕಿನ್ನಾಳ ಗ್ರಾಮದ ಶಂಕ್ರಪ್ಪ ಮಹೇಂದ್ರಕರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. 75 ವರ್ಷದ ಶಂಕ್ರಪ್ಪ ಮೇಷ್ಟ್ರು ನಿವೃತ್ತ ಮುಖ್ಯ ಶಿಕ್ಷಕರು. ವಿಶ್ರಾಂತ ಜೀವನಕ್ಕೆ ಮೊರೆ ಹೋಗದ ಶಂಕ್ರಪ್ಪ ಮೇಷ್ಟ್ರು ಈಗಲೂ ವಾರಕ್ಕೆ ಮೂರು ಸರ್ಕಾರಿ ಶಾಲೆಗೆ ತೆರಳಿ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಾರೆ. ಮಕ್ಕಳಿಗೆ ಕಬ್ಬಿಣದ ಕಡಲೆ ಎನಿಸುವ ಗಣಿತ ಮತ್ತು ಇಂಗ್ಲಿಷ್‍ನ್ನು ಪ್ರೀತಿಯಿಂದ ಕಲಿಸುತ್ತಾರೆ.

    ನಿವೃತ್ತಿಯಾಗಿ ಹದಿನಾರು ವರ್ಷ ಕಳೆದರೂ ಮನೆಯಲ್ಲಿ ಕೂರದ ಹಿರಿಜೀವ ಮಕ್ಕಳಿಗೆ ಅಕ್ಷರ ಜ್ಞಾನ ನೀಡುತ್ತಿದ್ದಾರೆ. ಕೊಪ್ಪಳ, ಕಿಡದಾಳ ಸಿಂಧೋಗಿ ಸೇರಿದಂತೆ ನಾನಾ ಕಡೆ ಸ್ವಂತ ಹಣದಲ್ಲಿ ಖರ್ಚು ಮಾಡಿಕೊಂಡು ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳೊಂದಿಗೆ ಮಗುವಾಗಿ ಆಟವಾಡುತ್ತಾರೆ. ಹೀಗಾಗಿ ಶಂಕ್ರಪ್ಪ ಮಾಸ್ಟರ್ ಅಂದ್ರೆ ಮಕ್ಕಳಿಗೆ ಅಚ್ಚು ಮೆಚ್ಚು.

    ಒಟ್ಟಾರೆ ನಿವೃತ್ತಿಯಾಗಿ ಮನೆಯಲ್ಲಿ ಹಾಯಾಗಿ ಇರಬೇಕಿದ್ದ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಧಾರೆ ಎರೆಯುತ್ತಿರೋದು ನಿಜಕ್ಕೂ ಹೆಮ್ಮೆಯ ಕೆಲಸವಾಗಿದೆ. ನಿವೃತ್ತಯಾಗಿದ್ದೇವೆ, ಇನ್ನೇನು ಕೆಲಸ ಮಾಡೋದು ಅನ್ನೋರ ಮಧ್ಯೆ ಶಂಕ್ರಪ್ಪ ಮೇಷ್ಟ್ರು ತುಂಬಾನೆ ಡಿಫರೆಂಟ್.

  • ಕ್ಲಾಸ್‍ರೂಮಲ್ಲಿ ವಿದ್ಯಾರ್ಥಿಯನ್ನ ಅಟ್ಟಾಡಿಸಿಕೊಂಡು ಹೊಡೆದು ಕ್ಷಮೆ ಕೇಳಿದ ಶಿಕ್ಷಕ

    ಕ್ಲಾಸ್‍ರೂಮಲ್ಲಿ ವಿದ್ಯಾರ್ಥಿಯನ್ನ ಅಟ್ಟಾಡಿಸಿಕೊಂಡು ಹೊಡೆದು ಕ್ಷಮೆ ಕೇಳಿದ ಶಿಕ್ಷಕ

    ಬೆಂಗಳೂರು: ಕ್ಲಾಸ್‍ರೂಮಿನಲ್ಲಿ ವಿದ್ಯಾರ್ಥಿಯನ್ನ ಶಿಕ್ಷನೋರ್ವ ಅಟ್ಟಾಡಿಸಿಕೊಂಡು ಹೊಡೆದಿರುವ ಘಟನೆ ಸಿಲಿಕಾನ್ ಸಿಟಿಯ ರಾಜಾಜಿನಗರದ ಬಸವೇಶ್ವರ ಕಾಲೇಜಿನಲ್ಲಿ ನಡೆದಿದೆ.

    ವಿದ್ಯಾರ್ಥಿಯೊರ್ವ ಕೋಲು ಮುರಿದು ಹಾಕಿದ್ದಾನೆ ಎಂದು ಕಾರಣಕ್ಕೆ ಶಿಕ್ಷಕ ಹರೀಶ್ ಕ್ಲಾಸ್ ರೂಮ್‍ನಲ್ಲಿ ವಿದ್ಯಾರ್ಥಿಯೊಬ್ಬನಿಗೆ ಮನಬಂದಂತೆ ಥಳಿಸಿದ್ದಾನೆ. ವಿದ್ಯಾರ್ಥಿಯ ಮೇಲೆ ಬ್ಯಾಗ್ ಎಸೆದು ಕೈಗಳಿಂದ ಹಲ್ಲೆ ಮಾಡಿ ದೌರ್ಜನ್ಯ ಮಾಡಿದ್ದಾನೆ.

    ಶಿಕ್ಷಕ ಹರೀಶ್ ವಿದ್ಯಾರ್ಥಿಗಳ ಮುಂದೆಯೇ ಹಲ್ಲೆ ಮಾಡಿದ ಕಾರಣ ಕ್ಲಾಸ್ ರೂಮ್‍ನಲ್ಲಿದ್ದ ಕೆಲ ವಿದ್ಯಾರ್ಥಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಚಾರವಾಗಿ ಹರೀಶ್ ಮೇಲೆ ಶಾಲಾ ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿದ್ದು, ನಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡಿರುವ ಶಿಕ್ಷಕ ಕ್ಷಮೆಯಾಚಿಸಿದ್ದಾನೆ.

  • ಮದ್ವೆಯಾಗುವಂತೆ ಶಿಕ್ಷಕನ ಹಿಂದೆ ಬಿದ್ದಾಕೆ ಚರಂಡಿಯಲ್ಲಿ ಹೆಣವಾದ್ಳು

    ಮದ್ವೆಯಾಗುವಂತೆ ಶಿಕ್ಷಕನ ಹಿಂದೆ ಬಿದ್ದಾಕೆ ಚರಂಡಿಯಲ್ಲಿ ಹೆಣವಾದ್ಳು

    -ಕೊಲೆಯ ಮರುದಿನ ಅದ್ಧೂರಿ ಬರ್ತ್ ಡೇ ಪಾರ್ಟಿ

    ನವದೆಹಲಿ: ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ವಿದ್ಯಾರ್ಥಿನಿಯನ್ನು ಮಾಜಿ ಶಿಕ್ಷಕನೊಬ್ಬ ಕೊಲೆ ಮಾಡಿ ಜೀವ ಇರುವಾಗಲೇ ಗೋಣಿಚೀಲದಲ್ಲಿ ತುಂಬಿ ಚರಂಡಿಗೆ ಎಸೆದಿರುವ ಘಟನೆ ನಗರದಲ್ಲಿ ನಡೆದಿತ್ತು. ಘಟನೆ ನಡೆದ 10 ದಿನಗಳ ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾರಾವಾಲ್ ನಗರ ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಶಿಕ್ಷಕ ನೌಶದ್ ಅಲಿ (33) ಮತ್ತು ಮೊಹಮ್ಮದ್ ರಜಿಕ್ (28) ಬಂಧಿತ ಆರೋಪಿಗಳು. ಇವರಿಬ್ಬರು ಸೇರಿಕೊಂಡು ಸೆಪ್ಟೆಂಬರ್ 26 ರಂದು ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದಾರೆ. ನಂತರ ಆಕೆಯನ್ನು ಜೀವಂತವಾಗಿ ಗೋಣಿಚೀಲದಲ್ಲಿ ತುಂಬಿ ಚರಂಡಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ವಿದ್ಯಾರ್ಥಿನಿ ಆರೋಪಿ ಅಲಿಯನ್ನು ಮದುವೆಯಾಗುವಂತೆ ಒತ್ತಡ ಹಾಕುತ್ತಿದ್ದಳು. ಆದ್ದರಿಂದ ಆತ ವಿದ್ಯಾರ್ಥಿನಿಯನ್ನು ಕೊಲೆ ಮಾಡಲು ನಿರ್ಧರಿಸಿದನು. ಅದರಂತೆಯೇ ಸೆಪ್ಟೆಂಬರ್ 26 ರಂದು ಯುವತಿ ಅಲಿಯನ್ನು ಭೇಟಿಯಾಗಲು ಹೋಗಿದ್ದಳು. ಆಗ ಅವಳ ತಲೆಗೆ ರಾಡ್‍ನಿಂದ ಹೊಡೆದಿದ್ದಾನೆ. ತಕ್ಷಣ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ನಂತರ ಇಬ್ಬರು ಆರೋಪಿಗಳು ಸೇರಿಕೊಂಡು ಆಕೆಯನ್ನು ಗೋಣಿಚೀಲದಲ್ಲಿ ಹಾಕಿ ಚರಂಡಿಗೆ ಎಸೆದಿದ್ದಾರೆ. ಯುವತಿ ಗೋಣಿಚೀಲದಲ್ಲಿದ್ದಾಗ ಜೀವಂತವಾಗಿದ್ದಳು. ಆದರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇತ್ತ ಶಿಕ್ಷಕನನ್ನು ಭೇಟಿಯಾಗಿ ಬರುತ್ತೇನೆಂದು ಮನೆಯಿಂದ ಹೋಗಿದ್ದ ಮಗಳು ಸಂಜೆಯಾದರೂ ಬರಲಿಲ್ಲವೆಂದು ಪೋಷಕರು ಯುವತಿಗೆ ಫೋನ್ ಮಾಡಿದ್ದಾರೆ. ಆಗ ಅವಳ ಫೋನ್ ಸ್ವಿಚ್ ಆಫ್ ಆಗಿತ್ತು. ತಕ್ಷಣ ಈ ಕುರಿತು ನಾಪತ್ತೆ ದೂರನ್ನು ದಾಖಲಿಸಿದ್ದರು. ಕಳೆದ ಭಾನುವಾರ ಚರಂಡಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಆಕೆಯ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದೆವು. ಅವರು ಬಂದು ಯುವತಿಯ ಬಟ್ಟೆ ಮತ್ತು ಕಿವಿಯೋಲೆಯನ್ನು ನೋಡಿ ಗುರುತಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೊಲೀಸರು ಈ ಕುರಿತು ತನಿಖೆಯನ್ನು ಶುರು ಮಾಡಿದ್ದಾರೆ. ಮೊದಲಿಗೆ ಯುವತಿಯ ಫೋನ್ ಕಾಲ್ ವಿವರಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಅಲಿ ನಂಬರ್ ಗೆ ಹೆಚ್ಚಾಗಿ ಫೋನ್ ಕಾಲ್ ಹೋಗಿತ್ತು. ನಂತರ ಪೊಲೀಸರು ಅನುಮಾನದ ಮೇರೆಗೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಆರೋಪಿ ಅಲಿ ಎಂಟನೇ ತರಗತಿಯಿಂದ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದನು. ಆಗ ಯುವತಿ ಈತನ ವಿದ್ಯಾರ್ಥಿಯಾಗಿದ್ದಳು. ನಂತರ ಯುವತಿ ಆತನನ್ನು ಪ್ರೀತಿ ಮಾಡುತ್ತಿದ್ದು, ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದಳು. ಆದ್ದರಿಂದ ಆರೋಪಿ ಅಲಿ ಕೊಲೆ ಮಾಡಿದ್ದಾನೆ. ಕೊಲೆಯಾದ ಮರುದಿನ ತನ್ನ ಮನೆಯಲ್ಲಿ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದನು ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  • ಕಡ್ಡಾಯ ವರ್ಗಾವಣೆಗೆ ಹೆದರಿ ಕೋಮಾಗೆ ಜಾರಿದ್ದ ಶಿಕ್ಷಕ ಸಾವು

    ಕಡ್ಡಾಯ ವರ್ಗಾವಣೆಗೆ ಹೆದರಿ ಕೋಮಾಗೆ ಜಾರಿದ್ದ ಶಿಕ್ಷಕ ಸಾವು

    ಹುಬ್ಬಳ್ಳಿ: ರಾಜ್ಯ ಸರ್ಕಾರದ ಕಡ್ಡಾಯ ವರ್ಗಾವಣೆಗೆ ಹೆದರಿ ಕೋಮಾಗೆ ಜಾರಿದ್ದ ಮುಖ್ಯ ಶಿಕ್ಷಕ ಮೃತಪಟ್ಟಿದ್ದಾರೆ.

    48 ವರ್ಷದ ಸುಭಾಷ್ ತಲಘಟ್ಟ ಇಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸುಭಾಷ್, ಆನಂದ ನಗರದ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

    ರಾಜ್ಯದಲ್ಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕಲಿಕಾ ಮಟ್ಟ ಸುಧಾರಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸದ್ಯ ಕಡ್ಡಾಯ ವರ್ಗಾವಣೆ ನೀತಿಯನ್ನ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಸುಭಾಷ್ ಅವರು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ರಾಮಗಿರಿಗೆ ವರ್ಗಾವಣೆಗೊಂಡಿದ್ದರು. ಇದರಿಂದ ಮನನೊಂದು ಶಿಕ್ಷಕ ಕೋಮಾ ಸ್ಥಿತಿಗೆ ಜಾರಿದ್ದಾರೆ ಎಂದು ಅವರ ಪತ್ನಿ ಹಾಗೂ ಸಂಬಂಧಿಕರು ಆರೋಪ ಮಾಡಿದ್ದರು.

    ಅಲ್ಲದೆ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆ ಮುಂದೆ ಶಿಕ್ಷಕರು, ಸಂಬಂಧಿಕರು ಹಾಗೂ ಸುಭಾಷ್ ಪತ್ನಿ ಜಮಾಯಿಸಿ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಕಾರ ಸುಭಾಷ್ ಅವರನ್ನು ವರ್ಗಾವಣೆ ಮಾಡಿದ್ದೇ ಅವರ ಈ ಸ್ಥಿತಿಗೆ ಕಾರಣ ಎಂದು ಆರೋಪ ಮಾಡಲಾಗಿತ್ತು.

  • ಶಿಷ್ಯೆ ಜೊತೆ ಪತಿಯ ಸೆಕ್ಸ್- ಪತಿ, ಪತ್ನಿಗೆ ಪಾಠ ಹೇಳದಂತೆ ಬ್ಯಾನ್

    ಶಿಷ್ಯೆ ಜೊತೆ ಪತಿಯ ಸೆಕ್ಸ್- ಪತಿ, ಪತ್ನಿಗೆ ಪಾಠ ಹೇಳದಂತೆ ಬ್ಯಾನ್

    – ಮನೆಯಲ್ಲಿ ಪತಿ ಜೊತೆ ಒಳಉಡುಪಿನಲ್ಲಿ ಸಿಕ್ಕ ಶಿಷ್ಯೆ

    ಲಂಡನ್: ಅಪ್ರಾಪ್ತೆ ಶಿಷ್ಯೆ ಜೊತೆ ಅಕ್ರಮ ಸಂಬಂಧ ಹೊಂದಿದ ಅಪರಾಧದ ಹಿನ್ನೆಲೆಯಲ್ಲಿ ಶಿಕ್ಷಕ ಮತ್ತು ಆತನ ಪತ್ನಿಗೆ ಭವಿಷ್ಯದಲ್ಲಿ ಪಾಠ ಹೇಳದಂತೆ ಬ್ಯಾನ್ ಮಾಡಲಾಗಿದೆ. ಅಪ್ರಾಪ್ತೆ ಶಿಷ್ಯೆ ಜೊತೆ ಪತಿ ಅಕ್ರಮ ಸಂಬಂಧವನ್ನ ಬಚ್ಚಿಟ್ಟದ್ದರಿಂದ ಪತ್ನಿಯೂ ಶಿಕ್ಷೆಗೆ ಗುರಿಯಾಗಿದ್ದಾಳೆ. ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಯ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಸಮಿತಿ ಇಬ್ಬರನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದೆ.

    ಜೇನ್ ಮತ್ತು ಬ್ರಿಯಾನಾ ಇಂಗ್ಲೆಂಡಿನ ವಾರ್‍ವಿಕ್ ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದರು. ಜೊತೆಗೆ ಮಕ್ಕಳಿಗೆ ಮನೆ ಪಾಠ ಸಹ ಮಾಡುತ್ತಿದ್ದರು. ಮನೆ ಪಾಠಕ್ಕೆ ಬರುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ಜೊತೆ ಶಿಕ್ಷಕ ಅಕ್ರಮ ಸಂಬಂಧ ಹೊಂದಿದ್ದನು.

    ಮೊದಲ ಬಾರಿಗೆ ಸೂಪರ್ ಮಾರ್ಕೆಟ್ ನಲ್ಲಿ ವಿದ್ಯಾರ್ಥಿನಿಯನ್ನ ಭೇಟಿಯಾಗಿದ್ದ ಶಿಕ್ಷಕ ಕಾರ್ ಪಾರ್ಕಿಂಗ್ ನಲ್ಲಿ ಆಕೆಗೆ ಕಿಸ್ ಮಾಡಿದ್ದನು. ತದನಂತರ ತನ್ನ ಮನೆಗೆ ಆಹ್ವಾನಿಸಿ ವಿದ್ಯಾರ್ಥಿನಿ ಜೊತೆ ಮೂರು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದನು.

    ಒಂದು ಸಾರಿ ಮನೆಯ ಗೆಸ್ಟ್ ರೂಮಿನಲ್ಲಿ ವಿದ್ಯಾರ್ಥಿನಿ ಒಳಉಡುಪಿನಲ್ಲಿ ಪತಿ ಜೊತೆ ಸಿಕ್ಕಿದ್ದಾಳೆ. ಆದ್ರೆ ಶಿಕ್ಷಕಿ ವಿಷಯವನ್ನು ಬಾಲಕಿಯ ಕುಟುಂಬಕ್ಕೂ ಮತ್ತು ಶಿಕ್ಷಣ ಮಂಡಳಿಗೆ ತಿಳಿಸಿದೇ ಮರೆ ಮಾಚಿದ್ದಳು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಭೋಧನಾ ನಿಯಂತ್ರಣ ಏಜೆನ್ಸಿಗೆ ಕೇಸ್ ವರ್ಗಾವಣೆ ಆಗಿತ್ತು. ಸುದೀರ್ಘ ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆಸಿರುವ ಏಜೆನ್ಸಿ ಇಬ್ಬರ ಮೇಲೆ ನಿಷೇಧ ಹೇರಿದೆ. 2015 ಸೆಪ್ಟೆಂಬರ್ ನಲ್ಲಿ ಪ್ರಕರಣ ನಡೆದಿದ್ದು, ಇದೀಗ ಶಿಕ್ಷಕನಿಗೆ 42 ವರ್ಷ. ಈತ ಖಾಸಗಿ ಬೋರ್ಡಿಂಗ್ ಶಾಲೆಯ ಮಾಲೀಕ ಮತ್ತು ಶಿಕ್ಷಕನಾಗಿದ್ದು, ಇಲ್ಲಿ ಓರ್ವ ವಿದ್ಯಾರ್ಥಿ ವಾರ್ಷಿಕ ಅಂದಾಜು 69 ಲಕ್ಷ ರೂ. ಪಾವತಿಸಬೇಕು.

    ಸೆಪ್ಟೆಂಬರ್ ನಲ್ಲಿ ವಿದ್ಯಾರ್ಥಿನಿ ಜೊತೆಗಿನ ಪತಿಯ ಸಂಬಂಧ ಪತ್ನಿಗೆ ನವೆಂಬರ್ ನಲ್ಲಿ ತಿಳಿದಿದೆ. ಪತ್ನಿಗೆ ವಿಷಯ ತಿಳಿದಿದ್ದರೂ ಇಬ್ಬರ ಅಕ್ರಮ ಸಂಬಂಧ ಮಾರ್ಚ್ 2016ರವರೆಗೆ ನಡೆದಿದೆ. ವಿದ್ಯಾರ್ಥಿನಿಯ ಸಹಪಾಠಿ ಸುಳಿವು ನೀಡಿದ್ದರಿಂದ ಇಬ್ಬರ ಕಳ್ಳ ಸಂಬಂಧ ಬಯಲಿಗೆ ಬಂದಿದೆ. ಸುದ್ದಿ ಹರಡುತ್ತಿದ್ದಂತೆ ಇಬ್ಬರ ಸಂಬಂಧಕ್ಕೆ ಬೇಸತ್ತ ಪತ್ನಿ ಮನೆ ತೊರೆಯಲು ಮುಂದಾಗ ಶಿಕ್ಷಕ ಇಬ್ಬರ ಸಂಬಂಧಕ್ಕೆ ಪೂರ್ಣ ವಿರಾಮ ಹಾಕಿದ್ದಾನೆ.

    ಇದೊಂದು ಅನೈತಿಕ ಸಂಬಂಧವಾಗಿದ್ದು, ಕ್ರಿಮಿನಲ್ ಪ್ರಕರಣವಲ್ಲ. ವಿದ್ಯಾರ್ಥಿನಿ ಬೇರೊಂದು ಶಾಲೆಯವಳಾಗಿದ್ದಾಳೆ. ಇಬ್ಬರ ಮೇಲೆ ನಿಷೇಧ ಹೇರಲಾಗಿದೆ ಎಂದು ಏಜೆನ್ಸಿ ಹೇಳಿದೆ. ವಿಚಾರಣೆಯಲ್ಲಿ ಶಿಕ್ಷಕಿ, ನನ್ನ ಪತಿ ಆಕೆಯೊಂದಿಗೆ ಸಂಬಂಧ ಹೊಂದಿರುವ ವಿಚಾರ ನನಗೆ ಗೊತ್ತಿತ್ತು. ಬೆಡ್ ರೂಮಿನಲ್ಲಿ ಸಿಕ್ಕಾಗ ತನ್ನ ವಯಸ್ಸು 18 ಎಂದು ಹೇಳಿದ್ದರಿಂದ ನಾನು ಯಾರೊಂದಿಗೂ ಈ ವಿಚಾರ ಹಂಚಿಕೊಳ್ಳಲಿಲ್ಲ ಎಂದಿದ್ದಾರೆ.