Tag: ಶಿಕ್ಷಕಿಯರು

  • ಗದಗ: ಮಾನವ ಸರಪಳಿ ವೇಳೆ ಜನರ ಮೇಲೆ ಹೆಜ್ಜೇನು ದಾಳಿ – ಸ್ಥಳದಿಂದ ಚದುರಿದ ಜನ

    ಗದಗ: ಮಾನವ ಸರಪಳಿ ವೇಳೆ ಜನರ ಮೇಲೆ ಹೆಜ್ಜೇನು ದಾಳಿ – ಸ್ಥಳದಿಂದ ಚದುರಿದ ಜನ

    ಗದಗ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ (International Democracy Day) ಅಂಗವಾಗಿ ಹಮ್ಮಿಕೊಂಡಿದ್ದ ಬೀದರ್‌ನಿಂದ (Bidar) ಚಾಮರಾಜನಗರದವರೆಗೆ (Chamarajanagar) ರಾಜ್ಯದ ಅತಿ ಉದ್ದದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಹೆಜ್ಜೇನು ದಾಳಿ ಮಾಡಿದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ (Lakshmeshwar) ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ನಡೆದಿದೆ.ಇದನ್ನೂ ಓದಿ: ಈಗ ಸೇವೆಗಳಲ್ಲಿ ಸ್ವಾರ್ಥ ಬಂದಿದೆ: ಹೆಚ್‌.ಆರ್‌.ರಂಗನಾಥ್‌ ಬೇಸರ

    ಶಿಗ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಸರಸ್ವತಿ ಗುಡಿಸಾಗರ ಹಾಗೂ ಸರೋಜಾ ದಿಂಡೂರು ಎಂಬ ಶಿಕ್ಷಕಿಯರ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಮುಖ, ತಲೆ, ಮೈ, ಕೈಗೆ ತೀವ್ರವಾಗಿ ಕಚ್ಚಿವೆ. ನೋವಿನ್ನು ಸಹಿಸಲಾಗದೇ ಅಸ್ವಸ್ಥಗೊಂಡಿದ್ದಾರೆ.

    ತಕ್ಷಣವೇ ಇಬ್ಬರು ಶಿಕ್ಷಕಿಯರಿಗೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರು ತಮ್ಮ ಕಾರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಪೆಟ್ಟಾ’ ಚಿತ್ರದ ನಟಿ ಮೇಘಾ

  • ಶಾಲಾ ಕಾಂಪೌಂಡ್ ಕುಸಿದು ವಿದ್ಯಾರ್ಥಿಗೆ ಗಂಭೀರ ಗಾಯ – 5 ಶಿಕ್ಷಕಿಯರಿಗೆ ಶೋಕಾಸ್ ನೋಟಿಸ್

    ಶಾಲಾ ಕಾಂಪೌಂಡ್ ಕುಸಿದು ವಿದ್ಯಾರ್ಥಿಗೆ ಗಂಭೀರ ಗಾಯ – 5 ಶಿಕ್ಷಕಿಯರಿಗೆ ಶೋಕಾಸ್ ನೋಟಿಸ್

    ರಾಯಚೂರು: ಶಾಲೆಯ ಕಾಂಪೌಂಡ್ (School Compound) ಕುಸಿದು 3ನೇ ತರಗತಿಯ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿರುವ ಘಟನೆ ರಾಯಚೂರಿನ (Raichur)  ಮೈಲಾರಲಿಂಗ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿ ಸುರೇಶ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಜೂನ್ 16 ರಂದು ಮಧ್ಯಾಹ್ನ ಊಟ ಮಾಡಿದ ಬಳಿಕ ಶಾಲೆಯ ಗೇಟ್ ಬಳಿ ಆವಾಡುತ್ತಿದ್ದಾಗ ಗೇಟ್ ಬಾಲಕನ ಮೈಮೇಲೆ ಬಿದ್ದು ತಲೆ, ಹೊಟ್ಟೆ, ಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.

    ಘಟನೆ ಹಿನ್ನೆಲೆ ಮುಖ್ಯ ಶಿಕ್ಷಕಿ ಮಂಜುಳಾ ಸೇರಿ 5 ಸಹಶಿಕ್ಷಕಿಯರಿಗೆ ಶಿಕ್ಷಣ ಇಲಾಖೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಭಂಡಾರಿ ಹೇಳಿದ್ದಾರೆ. ಇದನ್ನೂ ಓದಿ: ಉಚಿತ ಪ್ರಯಾಣ ಹಿನ್ನೆಲೆ ಒಂದು ಇಡೀ ಬಸ್ ಬುಕ್ ಮಾಡೋಕೆ ಬಂದ ಅಜ್ಜಿ

    ಶಾಲಾ ಶಿಕ್ಷಕರು ಹಾಗೂ ಎಸ್‌ಡಿಎಂಸಿ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಪೋಷಕರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ.

  • ಶಿಕ್ಷಕಿಯರಿಬ್ಬರ ಜಡೆ ಜಗಳ- ಮೂಕಪ್ರೇಕ್ಷರಾದ ಶಾಲಾ ಮಕ್ಕಳು

    ಶಿಕ್ಷಕಿಯರಿಬ್ಬರ ಜಡೆ ಜಗಳ- ಮೂಕಪ್ರೇಕ್ಷರಾದ ಶಾಲಾ ಮಕ್ಕಳು

    ಪಾಟ್ನಾ: ಮುಖ್ಯಶಿಕ್ಷಕಿ ಮತ್ತು ಸಹಾಯಕ ಶಿಕ್ಷಕಿ (Teacher Fight) ಶಾಲೆಯಲ್ಲಿ ಬಡಿದಾಡಿಕೊಂಡಿರುವ ಘಟನೆ ಬಿಹಾರದ ಪಾಟ್ನಾ (Patna) ಜಿಲ್ಲೆಯಲ್ಲಿ ನಡೆದಿದೆ.

    ಕೌರಿಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಿಹ್ತಾ ಮಾಧ್ಯಮಿಕ ಶಾಲೆಯಲ್ಲಿ ನಡೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಶಾಲಾ ಮುಖ್ಯಶಿಕ್ಷಕಿ ಕಾಂತಿ ಕುಮಾರಿ ಮತ್ತು ಶಿಕ್ಷಕಿ ಅನಿತಾ ಕುಮಾರಿ ನಡುವೆ ಈ ಗಲಾಟೆ ನಡೆದಿದೆ. ಸದ್ಯ ಜಗಳದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವೀಡಿಯೋದಲ್ಲೇನಿದೆ..?: ಶಾಲೆಯ ಇಬ್ಬರು ಶಿಕ್ಷಕಿಯರು ಪರಸ್ಪರ ಜಗಳವಾಡುತ್ತಿದ್ದರೆ, ಶಾಲಾ ಮಕ್ಕಳು ಮೂಕಪ್ರೇಕ್ಷಕರಂತೆ ಜಗಳ ವೀಕ್ಷಿಸುತ್ತಿದ್ದಾರೆ. ಅಲ್ಲದೆ ಶಾಲೆಯ ಒಳಗೆ ಆರಂಭವಾದ ಗಲಾಟೆ ಹೊರಗಿನ ಮೈದಾನದವರೆಗೂ ತಲುಪಿದೆ. ಕೆಳಗೆ ಬಿದ್ದುಕೊಂಡು ಮಣ್ಣಿನಲ್ಲೇ ಇಬ್ಬರು ಒದ್ದಾಡುತ್ತಾ ಗುದ್ದಾಡುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

    ತರಗತಿಯಿಂದ ಒಬ್ಬರು ಹೊರಗೆ ಹೋಗುತ್ತಿರುವಾಗ ಮತ್ತೊಬ್ಬರು ಚಪ್ಪಲಿ ಹಿಡಿದುಕೊಂಡು ಓಡಿ ಬಂದು ಹೊಡೆದಾಗ ಜಗಳ ತೀವ್ರ ಸ್ವರೂಪ ಪಡೆದುಕೊಂಡಿತು. ಈ ವೇಳೆ ಮತ್ತೊಬ್ಬ ಮಹಿಳೆಯು ಕೂಡ ಹೊಡೆದಿದ್ದಾರೆ.

    ಈ ಘಟನೆಯ ಬಗ್ಗೆ ಕ್ಷೇತ್ರ ಶಿಕ್ಷಣ ಅಧಿಕಾರಿಯನ್ನು ಕೇಳಿದಾಗ, ಇದು ಬಿಹ್ತಾ ಮಾಧ್ಯಮಿಕ ಶಾಲೆಯಲ್ಲಿ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಂಗಾಮಿ ಮುಖ್ಯಶಿಕ್ಷಕಿ ಮತ್ತು ಸಹಾಯಕ ಶಿಕ್ಷಕಿಯ ನಡುವಿನ ವೈಯಕ್ತಿಕ ವಿವಾದದಿಂದ ಈ ವಾಗ್ವಾದ ಉಂಟಾಗಿದ್ದು, ಇದು ಸರ್ಕಾರದ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

    ಘಟನೆಯಲ್ಲಿ ಭಾಗಿಯಾಗಿರುವ ಇಬ್ಬರೂ ಶಿಕ್ಷಕರಿಗೆ ವಿವರಣೆ ನೀಡಲು ಸಮನ್ಸ್ ನೀಡಲಾಗಿದೆ. ಅಧಿಕೃತ ಸೂಚನೆ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

  • ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಸೆಕ್ಸ್‌ – 6 ಮಂದಿ US ಶಿಕ್ಷಕಿಯರು ಅರೆಸ್ಟ್‌

    ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಸೆಕ್ಸ್‌ – 6 ಮಂದಿ US ಶಿಕ್ಷಕಿಯರು ಅರೆಸ್ಟ್‌

    ವಾಷಿಂಗ್ಟನ್‌: ವಿವಿಧ ಪ್ರಕರಣಗಳಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಯುಎಸ್‌ನ 6 ಮಂದಿ ಶಿಕ್ಷಕಿಯರನ್ನ (US Female Teachers) ಪೊಲೀಸರು (US Police) ಬಂಧಿಸಿರುವ ಆಘಾತಕಾರಿ ಘಟನೆ ಅಮೆರಿಕದಲ್ಲಿ ನಡೆದಿದೆ.

    ಅನೇಕ ಸಮಯದಿಂದ ವಿದ್ಯಾರ್ಥಿಗಳನ್ನ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಎರಡು ದಿನಗಳ ಅವಧಿಯಲ್ಲಿ ಒಟ್ಟು 6 ಮಂದಿ ಶಿಕ್ಷಕಿಯರನ್ನ ಬಂಧಿಸಿ ಜೈಲಿಗಟ್ಟಲಾಗಿದೆ. ಇದನ್ನೂ ಓದಿ: ಉಕ್ರೇನ್ ವಸತಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ – 8 ಸಾವು, 21 ಮಂದಿಗೆ ಗಾಯ

    6 ಶಿಕ್ಷಕಿಯರ ಪೈಕಿ ಡ್ಯಾನ್‌ವಿಲ್ಲೆ ಪಟ್ಟಣದ ಎಲ್ಲೆನ್ ಶೆಲ್ (38) ಎಂಬಾಕೆ ತಾನು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ 16 ವರ್ಷದ ಇಬ್ಬರು ಹುಡುಗರೊಂದಿಗೆ ಮೂರು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಇದು ಆಕೆಯ ವಿರುದ್ಧ 3ನೇ ಬಾರಿ ಕೇಳಿ ಬರುತ್ತಿರುವ ಅತ್ಯಾಚಾರದ ಆರೋಪ ಎಂದು ಎಫ್‌ಐಆರ್‌ನಲ್ಲಿ (FIR) ದಾಖಲಿಸಲಾಗಿದೆ. ಸದ್ಯ ಆಕೆಯನ್ನ ಗ್ಯಾರಾರ್ಡ್ ಕೌಂಟಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದನ್ನೂ ಓದಿ: ಚೀನಾದಲ್ಲಿ H3N8 ಡೆಡ್ಲಿ ವೈರಸ್‌ ಪತ್ತೆ – ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತಂತೆ ಈ ವೈರಸ್‌!

    ವುಡ್‌ಲಾನ್ ಎಲಿಮೆಂಟರಿ ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಎಲ್ಲೆನ್ ಶೆಲ್, ಅದಕ್ಕೂ ಮುನ್ನ ಲ್ಯಾಂಕಾಸ್ಟರ್ ಎಲಿಮೆಂಟರಿ ಶಾಲೆಯಲ್ಲಿ ಉದ್ಯೋಗಿಯಾಗಿದ್ದರು. ಎಲ್ಲೆನ್ ಶೆಲ್ ಕೃತ್ಯದ ಬಗ್ಗೆ ಬೋಯ್ಲ್ ಕೌಂಟಿ ಶಾಲೆಯ ಅಧಿಕಾರಿಗಳು ಆಕೆಯ ಪೋಷಕರಿಗೆ ಪತ್ರವೊಂದನ್ನ ಕಳುಹಿಸಿದ್ದು, ಬಂಧನದ ಬಗ್ಗೆ ಎಚ್ಚರಿಸಿದ್ದಾರೆ. ಈಕೆ ವಿರುದ್ಧ ಲೈಂಗಿಕ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಎಲ್ಲೆನ್ ಶೆಲ್‌ರನ್ನ ಶಾಲಾ ಸಂಸ್ಥೆ ರಜೆಯ ಮೇಲೆ ಕಳಿಸಿತ್ತು ಎನ್ನಲಾಗಿದೆ.

    ಇದೊಂದೇ ಪ್ರಕರಣವಲ್ಲದೇ, ಮಕ್ಕಳನ್ನ ಲೈಂಗಿಕವಾಗಿ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಯುಎಸ್‌ನಲ್ಲಿ 6 ಮಂದಿ ಶಿಕ್ಷಕಿಯರ ಮೇಲೆ ಪ್ರಕರಣಗಳು ದಾಖಲಾಗಿವೆ. ಅರ್ಕಾನ್ಸಾಸ್ ಶಿಕ್ಷಣತಜ್ಞೆ 32 ವರ್ಷದ ಹೀದರ್ ಹೇರ್ ಎಂಬಾಕೆಯ ಮೇಲೆ ಹದಿಹರೆಯದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಆರೋಪ ಕೇಳಿ ಬಂದಿದೆ.

    ಮತ್ತೊಂದೆಡೆ ತನ್ನ ಶಾಲಾ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಒಕ್ಲಹೋಮಾದ ಎಮಿಲಿ ಹ್ಯಾನ್‌ಕಾಕ್ (26) ಎಂಬ ಶಿಕ್ಷಕಿ ವಿರುದ್ಧ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಆಕೆಯನ್ನು ಕಳೆದ ಗುರುವಾರ ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಅಂತೆಯೇ, ಲಿಂಕನ್ ಕೌಂಟಿಯ ಅರೆಕಾಲಿಕ ಶಿಕ್ಷಕಿಯೊಬ್ಬಳು 15 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಆರೋಪ ಕೇಳಿ ಬಂದಿದೆ. ಎಮ್ಮಾ ಡೆಲಾನಿ ಎಂಬಾಕೆ ಬದಲಿ ಶಿಕ್ಷಕಿಯಾಗಿ ಹ್ಯಾನ್‌ಕಾಕ್ ವೆಲ್‌ಸ್ಟನ್ ಪಬ್ಲಿಕ್ ಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಆಕೆ ಶಾಲೆಯಲ್ಲೇ ವಿದ್ಯಾರ್ಥಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಇದಕ್ಕೆ ಪೂರಕವಾಗಿ ಆಕೆ ಸ್ನಾಪ್‌ಚಾಟ್‌ ಆ್ಯಪ್‌ನಲ್ಲಿ ಸಂಭಾಷಣೆ ನಡೆಸಿರುವ ದಾಖಲೆಗಳೂ ದೊರೆತಿವೆ ಎಂದು ಪೊಲೀಸರಿಂದ ತಿಳಿದುಬಂದಿದೆ.

    CRIME

    ಅಯೋವಾದ ಡೆಸ್ ಮೊಯಿನ್ಸ್‌ನಲ್ಲಿರುವ ಕ್ಯಾಥೋಲಿಕ್ ಹೈಸ್ಕೂಲ್‌ನಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿರುವ ಕ್ರಿಸ್ಟನ್ ಗ್ಯಾಂಟ್ (36) ಎಂಬಾಕೆ ಹದಿ ಹರೆಯದ ವಿದ್ಯಾರ್ಥಿಯೊಂದಿಗೆ ಶಾಲೆಯ ಒಳಗೆ ಮತ್ತು ಹೊರಗೆ 5ಕ್ಕೂ ಹೆಚ್ಚು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದು, ಈಕೆಯನ್ನ ಶುಕ್ರವಾರ ಬಂಧಿಸಲಾಗಿದೆ.

    ಜೇಮ್ಸ್ ಮ್ಯಾಡಿಸನ್ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಕರ್ತವ್ಯ ಮಾಡುತ್ತಿದ್ದ 33 ವರ್ಷದ ಅಲಿಹ್ ಖೇರದ್‌ಮಂಡ್ ಎಂಬಾಕೆಯ ವಿರುದ್ಧವೂ ಲೈಂಗಿಕ ದುರುಪಯೋಗದ ಪ್ರಕರಣ ದಾಖಲಾಗಿದ್ದು, ಹಲವಾರು ತಿಂಗಳುಗಳ ಕಾಲ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವ ಆರೋಪ ಕೇಳಿ ಬಂದಿದೆ.

    CRIME 2

    ಪೆನ್ಸಿಲ್ವೇನಿಯಾದಲ್ಲಿ ಜಾವೆಲಿನ್ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯ ವಿರುದ್ಧವೂ ಇಂತಹದ್ದೇ ಆರೋಪ ಕೇಳಿ ಬಂದಿದ್ದು, ತನ್ನ ಬಳಿ ಜಾವೆಲಿನ್ ತರಬೇತಿಗೆ ಬರುತ್ತಿದ್ದ 17 ವರ್ಷದ ಹುಡುಗನ ಜೊತೆ ಹಲವು ಬಾರಿ ಲೈಂಗಿಕ ಸಂಪರ್ಕ ನಡೆಸಿರುವುದಾಗಿ ದೂರು ದಾಖಲಾಗಿದೆ.

    ಇನ್ನೂ 26 ವರ್ಷದ ಹನ್ನಾ ಮಾರ್ತ್ ಎಂಬ ಶಿಕ್ಷಕಿಯನ್ನ ಪೊಲೀಸರು ಬಂಧನ ಮಾಡಿದ್ದು, ನಾರ್ಥಾಂಪ್ಟನ್ ಏರಿಯಾ ಹೈಸ್ಕೂಲ್‌ನ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ.

  • ಮಕ್ಕಳ ಎದುರೇ ಶಾಲೆಯಲ್ಲಿ ಶಿಕ್ಷಕಿಯರ ಕಿತ್ತಾಟ – ವೀಡಿಯೋ ವೈರಲ್

    ಮಕ್ಕಳ ಎದುರೇ ಶಾಲೆಯಲ್ಲಿ ಶಿಕ್ಷಕಿಯರ ಕಿತ್ತಾಟ – ವೀಡಿಯೋ ವೈರಲ್

    ಲಕ್ನೋ: ಮಕ್ಕಳಿಗೆ ಪಾಠ ಮಾಡಿ, ತಿದ್ದಿ-ಬುದ್ದಿ ಹೇಳಬೇಕಾದ ಶಿಕ್ಷಕಿಯರೇ, ಮಕ್ಕಳ ಮುಂದೆ ಕಿತ್ತಾಡಿರುವ ವೀಡಿಯೋವೊಂದು ಸೊಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಹೌದು, ಉತ್ತರ ಪ್ರದೇಶದ (Uttar Pradesh) ಹಮೀರ್‍ಪುರ (Hamirpur) ಜಿಲ್ಲೆಯ ಬಾಲಕಿಯರ ಪ್ರೌಢಶಾಲೆಯಲ್ಲಿ ಮಹಿಳಾ ಶಿಕ್ಷಕಿರ ನಡುವೆ ಮಾರಾಮಾರಿ ನಡೆದಿದೆ. ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ (Gandhi Jayanti celebrations) ವೇಳೆ ಈ ಘಟನೆ ನಡೆದಿದೆ. ಸ್ವಚ್ಛತೆ ವಿಚಾರವಾಗಿ ಶಿಕ್ಷಕರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ದೆಹಲಿಯಲಿದ್ದ 500 ರೂ. ಮಾಸ್ಕ್ ಫೈನ್ ವಾಪಸ್ – 6 ತಿಂಗಳ ಬಳಿಕ ರಿಲೀಫ್

    ಕ್ಲಾಸ್ ತುಂಬ ಮಕ್ಕಳಿರುವಾಗ ಅವರ ಮುಂದೆಯೇ ಶಿಕ್ಷಕಿಯರು ಪರಸ್ಪರ ನಿಂದಿಸುತ್ತಾ, ಹೊಡೆದಾಡಿಕೊಂಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವಿದ್ಯಾರ್ಥಿಗಳು ನೋಡುತ್ತಿದ್ದರೂ ಕೊಂಚ ಕೂಡ ಮುಜುಗರ ಹೊಂದದೆ ಸುಮಾರು 45 ನಿಮಿಷಗಳ ಕಾಲ ಜಗಳ ಮಾಡಿದ್ದಾರೆ. ಕೆಲವು ವಿದ್ಯಾರ್ಥಿಗಳು ಸಹ ಇಬ್ಬರು ಶಿಕ್ಷಕಿಯ ಜಗಳ ಬಿಡಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

    ಈ ವೀಡಿಯೋ ವೈರಲ್ ಬಳಿಕ ಜಗಳವಾಡಿದ ಮೂವರು ಶಿಕ್ಷಕಿಯರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರೀತಿ ನಿಗಮ್, ಸಹಾಯಕ ಶಿಕ್ಷಕಿ ನಹಿದ್ ಹಶ್ಮಿ ಮತ್ತು ಮಹಿಳಾ ಸಹಾಯಕಿ ಪುಷ್ಪಲತಾ ಪಾಂಡೆ ಅಮಾನತುಗೊಂಡವರಾಗಿದ್ದಾರೆ. ಇದನ್ನೂ ಓದಿ: ಬ್ಯಾಕ್ ಟೂ ಬ್ಯಾಕ್ ಭದ್ರತಾ ಪಡೆಗಳಿಂದ ನಾಲ್ವರು ಭಯೋತ್ಪಾದಕರ ಎನ್‍ಕೌಂಟರ್

    Live Tv
    [brid partner=56869869 player=32851 video=960834 autoplay=true]

  • ಶಿಕ್ಷಕಿಯರ ನಡುವೆ ಮನಸ್ತಾಪ- ಶಾಲೆಗೇ ಬೀಗ ಜಡಿದ ಗ್ರಾಮಸ್ಥರು

    ಶಿಕ್ಷಕಿಯರ ನಡುವೆ ಮನಸ್ತಾಪ- ಶಾಲೆಗೇ ಬೀಗ ಜಡಿದ ಗ್ರಾಮಸ್ಥರು

    ತುಮಕೂರು: ಶಿಕ್ಷಕಿಯರ ನಡುವಿನ ಮನಸ್ತಾಪದಿಂದ ರೋಸಿ ಹೋದ ಗ್ರಾಮಸ್ಥರು ಶಾಲೆಗೇ ಬೀಗ ಜಡಿದಿದ್ದಾರೆ.

    ತುಮಕೂರು ತಾಲೂಕಿನ ಚಿಕ್ಕಸಾರಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಪ್ರಸಂಗ ನಡೆದಿದೆ. ಶಾಲೆಯ ಶಿಕ್ಷಕಿಯರಾದ ಗಂಗಲಕ್ಷ್ಮಮ್ಮ ಹಾಗೂ ಭಾಗ್ಯಮ್ಮ ನಡುವೆ ಪರಸ್ಪರ ವೈಷಮ್ಯ ಇದೆ. ಹೀಗಾಗಿ ಪ್ರತಿದಿನವೂ ಇವರು ಶಾಲೆಗೆ ತಡವಾಗಿ ಬರುತ್ತಿದ್ದರು.

    ಶಾಲೆಗೆ ತಡವಾಗಿ ಬರುವುದು ಮಾತ್ರವಲ್ಲದೇ ಮಕ್ಕಳಿಗೆ ಪಾಠ ಮಾಡದೇ ಸದಾ ಪರಸ್ಪರ ಜಗಳವಾಡುತ್ತಿದ್ದರು. ಶಿಕ್ಷಕಿಯರ ಈ ವರ್ತನೆ ಕಂಡು ಗ್ರಾಮಸ್ಥರು, ಪಾಠ ಮಾಡದೇ ಜಗಳವಾಡುತ್ತಾರೆಂದು ಶಾಲೆಗೆ ಬೀಗ ಹಾಕಿದ್ದಾರೆ. ಇದನ್ನೂ ಓದಿ: ಸಮ್ಮತಿಯ ಸೆಕ್ಸ್‌ನಿಂದ ಅವಿವಾಹಿತೆ ಗರ್ಭಧಾರಣೆ – 20 ವಾರಗಳ ಬಳಿಕ ಗರ್ಭಪಾತಕ್ಕೆ ಅವಕಾಶವಿಲ್ಲ: ಹೈಕೋರ್ಟ್

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯರ ಮಸ್ತ್ ಡ್ಯಾನ್ಸ್ – ಕೆಲಸದಿಂದ ಅಮಾನತು

    ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯರ ಮಸ್ತ್ ಡ್ಯಾನ್ಸ್ – ಕೆಲಸದಿಂದ ಅಮಾನತು

    ಲಕ್ನೋ: ಆಗ್ರಾ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಖಾಲಿ ಕ್ಲಾಸ್ ರೂಂನಲ್ಲಿ ಸಿನಿಮಾ ಹಾಡಿಗೆ ನೃತ್ಯ ಮಾಡಿದ 5 ಶಿಕ್ಷಕಿಯರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವೈರಲ್ ಆಗುತ್ತಿರುವ ವೀಡಿಯೋದಲ್ಲಿರುವ ಶಿಕ್ಷಕಿಯರನ್ನು ರಶ್ಮಿ ಸಿಸೋಡಿಯಾ, ಜೀವಿಕಾ ಕುಮಾರಿ, ಅಂಜಲಿ ಯಾದವ್, ಸುಮನ್ ಕುಮಾರಿ ಮತ್ತು ಸುಧಾ ರಾಣಿ ಎಂದು ಗುರುತಿಸಲಾಗಿದ್ದು, ಜನಪ್ರಿಯ ‘ಮೈನು ಲೆಹೆಂಗಾ ಲೆಡೆ ಮೆಹಂಗಾ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

    ಈ ವೀಡಿಯೋವನ್ನು ಮಾರ್ಚ್ 21ರಂದು ಸೆರೆ ಹಿಡಿಯಲಾಗಿದ್ದು, ಗುರುವಾರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ನಂತರ ಈ ಕುರಿತಂತೆ ಶಿಕ್ಷಣ ಇಲಾಖೆ ತನಿಖೆ ನಡೆಸಿದೆ. ಇದನ್ನೂ ಓದಿ: ಪ್ರತಿಭಟನೆ ನಡೆದರೂ ಚಿಕ್ಕಬಳ್ಳಾಪುರದಲ್ಲಿ KSRTC ಬಸ್ಸುಗಳಿಗೆ ಇಲ್ಲ ಬಂದ್

    ಈ ಬಗ್ಗೆ ಮಾತನಾಡಿದ ಮೂಲ ಶಿಕ್ಷಣಾಧಿಕಾರಿ(ಬಿಎಸ್‍ಎ)ಬ್ರಜರಾಜ್ ಸಿಂಗ್ ಅವರು, ಶಿಕ್ಷಕಿಯರು ನೃತ್ಯ ಮಾಡಿರುವ ಹಾಡು ಅನಕ್ಷರತೆಯನ್ನು ತೋರಿಸುತ್ತದೆ. ತರಗತಿಯಲ್ಲಿ ಶಿಕ್ಷಕಿಯರು ನೃತ್ಯ ಮಾಡುವ ಮೂಲಕ ನಿಯಮವನ್ನು ಉಲ್ಲಂಘಿಸಿದ್ದಾರೆ ಮತ್ತು ಶಿಕ್ಷಣ ಇಲಾಖೆಯ ಪ್ರತಿಷ್ಠೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ. ಜೊತೆಗೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಹೀಗಾಗಿ ಐವರು ಶಿಕ್ಷಕಿಯರನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

    ಅಖ್ನೇರಾ ಬ್ಲಾಕ್‍ನ ಸಾಧನ್‍ನಲ್ಲಿರುವ ಐವರು ಸಹಾಯಕ ಶಿಕ್ಷಕಿಯರು ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕಿಯರು ಈ ವಿಚಾರವಾಗಿ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಶಿಕ್ಷಕಿಯರು ನೀಡಿದ ಸ್ಪಷ್ಟೀಕರಣ ತೃಪ್ತಿದಾಯಕದಲ್ಲ ಎಂದು ಎನಿಸಿತು. ನಂತರ ಅವರನ್ನು ಶಾಲೆಯಿಂದ ಶನಿವಾರ ಅಮಾನತುಗೊಳಿಸಲಾಗಿದೆ ಎಂದಿದ್ದಾರೆ.  ಇದನ್ನೂ ಓದಿ: ಪ್ರತಿಭಟನೆ ನಡೆದರೂ ಚಿಕ್ಕಬಳ್ಳಾಪುರದಲ್ಲಿ KSRTC ಬಸ್ಸುಗಳಿಗೆ ಇಲ್ಲ ಬಂದ್

  • ಬಿಡುವಿದ್ದಾಗ ಮಾಸ್ಕ್ ತಯಾರಿಸಿ ಗ್ರಾಮೀಣ ಜನರಿಗೆ ವಿತರಿಸ್ತಿದ್ದಾರೆ ಅಂಗನವಾಡಿ ಶಿಕ್ಷಕಿಯರು

    ಬಿಡುವಿದ್ದಾಗ ಮಾಸ್ಕ್ ತಯಾರಿಸಿ ಗ್ರಾಮೀಣ ಜನರಿಗೆ ವಿತರಿಸ್ತಿದ್ದಾರೆ ಅಂಗನವಾಡಿ ಶಿಕ್ಷಕಿಯರು

    – ಕೊರೊನಾ ಕೆಲಸದ ಮಧ್ಯೆಯೂ ಜನರಿಗೆ ಸಹಾಯ
    – ಬಿಡುವಿದ್ದಾಗಲೆಲ್ಲ ಮಾಸ್ಕ್ ಹೊಲಿಯುವ ಶಿಕ್ಷಕಿಯರು

    ಮಡಿಕೇರಿ: ಕೊರೊನಾ ವೈರಸ್ ನಿಯಂತ್ರಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದ್ದು, ಇದರ ಭಾಗವಾಗಿ ಆಶಾ ಕಾರ್ಯಕರ್ತೆಯರು ಸಹ ಟೆಸ್ಟಿಂಗ್ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಇಲ್ಲೊಂದಿಷ್ಟು ಅಂಗನವಾಡಿ ಕಾರ್ಯಕರ್ತರು ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ.

    ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಬಾಡಗ ಗ್ರಾಮದ ಅಂಗನವಾಡಿ ಶಿಕ್ಷಕಿ ಜಯಂತಿ ಸೇರಿದಂತೆ ನಾಲ್ಕೈದು ಅಂಗನವಾಡಿಗಳ ಶಿಕ್ಷಕಿಯರು ಕೊರೊನಾ ನಿಯಂತ್ರಣಕ್ಕೆ ಸಹಾಯ ಮಾಡುತ್ತಿದ್ದು, ಮಾಸ್ಕ್ ಹೊಲೆದು ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಮಾಸ್ಕ್ ಹೊಲೆಯುವ ಕಾರ್ಯ ಮಾಡುತ್ತಿದ್ದು, ಗ್ರಾಮೀಣ ಭಾಗದ ಜನರಿಗೆ ಕೊರೊನಾ ಹರಡಬಾರದು ಎಂಬ ಉದ್ದೇಶದಿಂದ ಉಚಿತವಾಗಿ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ. ಈಗಾಗಲೇ 150ಕ್ಕೂ ಹೆಚ್ಚು ಮಾಸ್ಕ್ ಗಳನ್ನು ಹೊಲೆದು ಬಡ ಜನರಿಗೆ ನೀಡಿದ್ದಾರೆ.

    ಈ ಶಿಕ್ಷಕಿಯರು ಕೂಡ ಸರ್ಕಾರ ವಹಿಸಿದ ಕೊರೊನಾ ಸಂಬಂಧಿ ಕೆಲಸ ಮಾಡುತ್ತಿದ್ದು, ಮಧ್ಯಾಹ್ನದವರೆಗೆ ಕೆಲಸ ಮಾಡಿ ಬಿಡುವಿನ ವೇಳೆಯಲ್ಲಿ ಮಾಸ್ಕ್ ಹೊಲಿಯುತ್ತಿದ್ದಾರೆ. ಕೊರೊನಾ ಕೆಲಸಕ್ಕೆ ತೆರಳಿದಾಗ ಯಾವ ಗ್ರಾಮಗಳಲ್ಲಿ ಬಡ ಜನರು ಮಾಸ್ಕ್ ಧರಿಸಿರುವುದಿಲ್ಲವೋ ಅವರನ್ನು ಗಮನಿಸಿ ಅಂತಹವರಿಗೆ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.

    ಗ್ರಾಮೀಣ ಭಾಗದ ಜನರಿಗೆ ಹಣ ನೀಡಿ ಮಾಸ್ಕ್ ಕೊಂಡು ಧರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಅವರು ಮಾಸ್ಕ್ ಧರಿಸದೆಯೇ ಓಡಾಡುತ್ತಿದ್ದಾರೆ. ಇಂತಹವರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡುತ್ತಿದ್ದೇವೆ. ಜೊತೆಗೆ ಕೊರೊನಾ ಕುರಿತು ಜನರಿಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಶಿಕ್ಷಿಯೊಬ್ಬರು ತಿಳಿಸಿದ್ದಾರೆ. ಸಾಕಷ್ಟು ಸಂಘ ಸಂಸ್ಥೆಗಳು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿವೆ. ಈ ಶಿಕ್ಷಕಿಯರು ಸಹ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

  • ಆಫೀಸ್ ರೂಮಿನಲ್ಲೇ ಇಬ್ಬರು ಶಿಕ್ಷಕಿಯರ ಜೊತೆ ಪ್ರಿನ್ಸಿಪಾಲ್ ಸೆಕ್ಸ್

    ಆಫೀಸ್ ರೂಮಿನಲ್ಲೇ ಇಬ್ಬರು ಶಿಕ್ಷಕಿಯರ ಜೊತೆ ಪ್ರಿನ್ಸಿಪಾಲ್ ಸೆಕ್ಸ್

    ಚಂಢೀಗಡ: ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್ ಇಬ್ಬರು ಶಿಕ್ಷಕಿಯರ ಜೊತೆ ದೈಹಿಕ ಸಂಬಂಧ ಬೆಳೆಸಿದ ಘಟನೆ ಪಂಜಾಬ್‍ನ ಹೋಶಿಯಾಪುರದಲ್ಲಿ ನಡೆದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಶಾಲೆಯ ಪ್ರಿನ್ಸಿಪಾಲ್‍ನ ಈ ವರ್ತನೆ ಕಂಡು ಸಿಬ್ಬಂದಿ ಬೇಸತ್ತು ಹೋಗಿದ್ದರು. ಅಲ್ಲದೆ ಆತನ ಕೃತ್ಯ ಎಲ್ಲರ ಮುಂದೆ ಬಯಲು ಮಾಡಲು ಆಫೀಸ್ ರೂಮಿನಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿ ಇಡೀ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ.

    ಎರಡು ವಿಡಿಯೋದಲ್ಲಿ ಪ್ರಿನ್ಸಿಪಾಲ್ ಇಬ್ಬರು ಶಿಕ್ಷಕಿಯರ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಈ ಆರೋಪಗಳನ್ನು ಒಪ್ಪಿಕೊಳ್ಳಲು ಶಾಲೆಯ ಪ್ರಿನ್ಸಿಪಾಲ್ ನಿರಾಕರಿಸುತ್ತಿದ್ದಾನೆ. ನನ್ನ ಹೆಸರಿಗೆ ಕಳಂಕ ತರಲು ಯಾರೋ ಈ ರೀತಿಯ ಹುಡುಗಾಟ ಆಡಿದ್ದಾರೆ ಎಂದು ಹೇಳುತ್ತಿದ್ದಾನೆ.

    ಈ ಘಟನೆ ಬಗ್ಗೆ ಸರಪಂಚ್ ಶಾಲೆಯ ಕಮಿಟಿ ಜೊತೆ ಚರ್ಚೆ ನಡೆಸಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಈ ಪ್ರಕರಣ ಈಗ ಕ್ಲೋಸ್ ಆಗಿದ್ದು, ಪ್ರಿನ್ಸಿಪಾಲ್ ಅಸಭ್ಯವಾಗಿ ವರ್ತಿಸಿದ್ದಕ್ಕೆ ಶಾಲೆಯ ಸಿಬ್ಬಂದಿ ಹಾಗೂ ಪಂಚಾಯ್ತಿಯಲ್ಲಿ ಎಲ್ಲರ ಮುಂದೆ ಕ್ಷಮೆ ಕೇಳಿದ್ದಾರೆ.

  • ಮಗಳನ್ನು ಶಾಲೆಗೆ ಸೇರಿಸಿದ್ರೆ ಹೊಡೆಯುತ್ತೇನೆ – ಮನವಿ ಮಾಡಿದ್ದ ಶಿಕ್ಷಕಿಯರಿಗೆ ತಾಯಿ ಅವಾಜ್

    ಮಗಳನ್ನು ಶಾಲೆಗೆ ಸೇರಿಸಿದ್ರೆ ಹೊಡೆಯುತ್ತೇನೆ – ಮನವಿ ಮಾಡಿದ್ದ ಶಿಕ್ಷಕಿಯರಿಗೆ ತಾಯಿ ಅವಾಜ್

    ಹುಬ್ಬಳ್ಳಿ: ಶಾಲೆ ಬಿಟ್ಟ ವಿದ್ಯಾರ್ಥಿನಿಯನ್ನು ಮರಳಿ ಶಾಲೆಗೆ ಕಳುಹಿಸಿ ಎಂದು ಪೋಷಕರ ಬಳಿ ವಿನಂತಿ ಮಾಡಿದ ಶಿಕ್ಷಕಿಯರಿಗೆ ತಾಯಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ದೇಶದ ಪ್ರತಿಯೊಂದು ಮಗು ಶಿಕ್ಷಣ ಪಡೆಯಬೇಕು ಎಂದು ಸರ್ಕಾರ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮವನ್ನು ಮಾಡಿದೆ. ಯಾರು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ಪ್ರತಿಯೊಬ್ಬರ ಹಕ್ಕು ಎಂದು ಸರ್ಕಾರ ಘೋಷಣೆ ಮಾಡಿದೆ. ಇದಕ್ಕೆ ತಕ್ಕಂತೆ ಶಿಕ್ಷಕರು ಮಕ್ಕಳನ್ನು ಶಾಲೆಯತ್ತ ಸೆಳೆಯಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಹೀಗೆ ಶಾಲೆ ಬಿಟ್ಟಿದ್ದ ವಿದ್ಯಾರ್ಥಿನಿಯನ್ನು ಮರಳಿ ಶಾಲೆಗೆ ಕರೆಯಲು ಹೋದ ಶಿಕ್ಷಕಿಯರಿಗೆ ಕಹಿ ಅನುಭವವಾಗಿದೆ.

    ಪಾಲಕರ ನಿಷ್ಕಾಳಜಿಯಿಂದಾಗಿ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ಘಟನೆಯ ವಿಡಿಯೋ ಆಗಿದ್ದು, ನಡೆದಿದ್ದು ಎಲ್ಲಿ? ಯಾವ ಜಿಲ್ಲೆ ಎನ್ನುವ ಖಚಿತ ಮಾಹಿತಿ ದೊರಕಿಲ್ಲ. ಆದ್ರೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ವಿಡಿಯೋದಲ್ಲಿ ತಾಯಿಯೊಬ್ಬರು ಮಗಳನ್ನು ಶಾಲೆಗೆ ಕರೆದೊಯ್ಯಲು ಬಂದಿದ್ದ ಶಿಕ್ಷಕಿಯರಿಗೆ ಹಿಗ್ಗಾಮುಗ್ಗಾ ಅವಾಚ್ಯ ಶಬ್ದಗಳಿಂದ ಬೈದಾಡಿ ನಿಂದಿಸಿದ್ದಾರೆ. ಅಲ್ಲದೆ ಸುಮ್ಮನೆ ಹೋಗಿ, ಶಾಲೆ ಕಲಿಯದಿದ್ದರೆ ಏನಾಗುತ್ತೆ? ನನ್ನ ಮಗಳನ್ನು ನಾನು ಶಾಲೆಗೆ ಕಳುಹಿಸಲ್ಲ. ಏನು ಜೈಲಿಗೆ ಹಾಕ್ಕುತ್ತೀರಾ ಎಂದು ಪ್ರಶ್ನಿಸಿ, ಶಿಕ್ಷಕರಿಗೆ ಹೊಡೆಯುವುದಾಗಿ ಅವಾಜ್ ಹಾಕಿದ್ದಾರೆ.

    ಮಕ್ಕಳನ್ನು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಎಂಬ ಸದುದ್ದೇಶದಿಂದ ಶಿಕ್ಷಕಿಯರು ಪರಿಪರಿಯಾಗಿ ತಾಯಿಯನ್ನು ಅಂಗಲಾಚಿದರೂ ಕೂಡ ಆ ತಾಯಿ ಯಾವುದೇ ಕಾರಣಕ್ಕೂ ನನ್ನ ಮಗಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಶಿಕ್ಷಕರಿಗೆ ಬಾಯಿಗೆ ಬಂದ ಹಾಗೆ ನಿಂದಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.