Tag: ಶಿಕ್ಷಕರ ನೇಮಕಾತಿ ಹಗರಣ

  • ದಯವಿಟ್ಟು ನನ್ನನ್ನು ಬದುಕಲು ಬಿಡಿ: ವಿಚಾರಣೆ ವೇಳೆ ಕಣ್ಣೀರು ಹಾಕಿದ ಪಾರ್ಥ ಚಟರ್ಜಿ

    ದಯವಿಟ್ಟು ನನ್ನನ್ನು ಬದುಕಲು ಬಿಡಿ: ವಿಚಾರಣೆ ವೇಳೆ ಕಣ್ಣೀರು ಹಾಕಿದ ಪಾರ್ಥ ಚಟರ್ಜಿ

    ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣದ(Teacher Recruitment Scam) ವಿಚಾರಣೆ ಸಂದರ್ಭ ಪಶ್ಚಿಮ ಬಂಗಾಳದ(West Bengal) ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ(Partha Chatterjee) ಅವರು, ನನಗೆ ಜಾಮೀನು ಕೊಡಿ, ನನ್ನನ್ನು ಬದುಕಲು ಬಿಡಿ ಎಂದು ನ್ಯಾಯಾಲಯದ(Court) ಮುಂದೆ ಕಣ್ಣಿರು ಹಾಕಿದ್ದಾರೆ.

    ಬುಧವಾರ ಪಾರ್ಥ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ(Arpita Mukherjee) ನ್ಯಾಯಾಲಯಕ್ಕೆ ಹಾಜರಾಗಿದ್ದರೆ, ಪಾರ್ಥ ಚಟರ್ಜಿ 14 ದಿನಗಳ ಬಂಧನದ ಬಳಿಕ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದರು.

    ಪಾರ್ಥ ಅವರ ಪರ ವಕೀಲರು ಜಾಮೀನು ನೀಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದ್ದ ಸಂದರ್ಭ ಚಟರ್ಜಿ ತಮ್ಮ ಅಳಲು ತೋಡಿಕೊಂಡು ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.

    ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣದ ಆರೋಪದ ಮೇಲೆ ಪಾರ್ಥ ಚಟರ್ಜಿ ಅವರನ್ನು ಜುಲೈ 23 ರಂದು ಬಂಧಿಸಲಾಗಿತ್ತು. 3 ಸುತ್ತಿನ ಇಡಿ ವಿಚಾರಣೆಯ ಬಳಿಕ ಪ್ರಸ್ತುತ ಅವರನ್ನು ಪ್ರೆಸಿಡೆನ್ಸಿ ಜೈಲಿನಲ್ಲಿ ಇರಿಸಲಾಗಿದೆ. ವರ್ಚುವಲ್ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಧೀಶ ಬಿದ್ಯುತ್ ಕುಮಾರ್ ರಾಯ್, ಪಾರ್ಥ ಅವರು ಬಯಸಿದರೆ ಏನು ಬೇಕಾದರೂ ಹೇಳಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಂಗೂಲಿ, ಜಯ್‌ ಶಾಗೆ ಸುಪ್ರೀಂನಿಂದ ಬಿಗ್‌ ರಿಲೀಫ್‌ – ಐಸಿಸಿಯ ಬಾಸ್‌ ಆಗ್ತಾರಾ ದಾದಾ?

    ಪಾರ್ಥ ವಕೀಲರು, ದಿನಕ್ಕೆ 3 ಬಾರಿ ಔಷಧಿ ತೆಗೆದುಕೊಳ್ಳಬೇಕು. ಅವರಿಗೆ ನಿಯಮಿತ ಚಿಕಿತ್ಸೆಯ ಅಗತ್ಯವಿದೆ. ತನಿಖಾಧಿಕಾರಿಗಳು ಅವರ ಮನೆಯಲ್ಲಿ 30 ಗಂಟೆಗಳ ಕಾಲ ಹುಡುಕಾಡಿದರೂ ಏನೂ ಪತ್ತೆಯಾಗಿರಲಿಲ್ಲ. ಆದರೂ ಅವರಿಗೆ ಜಾಮೀನು ಸಿಕ್ಕಿಲ್ಲ ಯಾಕೆ ಎಂದು ಪ್ರಶ್ನಿಸಿದರು.

    ಮೂಲಗಳ ಪ್ರಕಾರ ಹಲವು ಅಕ್ರಮ ವಹಿವಾಟುಗಳು ಪತ್ತೆಯಾಗಿವೆ. ಹಲವಾರು ಆಸ್ತಿಗಳು ಮತ್ತು ದಾಖಲೆಗಳ ಸ್ಥಳಗಳು ಸಹ ಪತ್ತೆಯಾಗಿವೆ. ಇವರ ಮೂಲಕ ಕಪ್ಪುಹಣವನ್ನು ಬಿಳಿ ಮಾಡಿಕೊಳ್ಳಲಾಗಿದೆ ಎಂದು ಇಡಿ ನ್ಯಾಯಾಲಯದಲ್ಲಿ ವಾದಿಸಿದೆ. ಇದುವರೆಗೆ ಪತ್ತೆಯಾಗಿರುವ ನೂರಾರು ಬ್ಯಾಂಕ್ ಖಾತೆಗಳನ್ನು ಉಲ್ಲೇಖಿಸಿದ ಇಡಿ ವಕೀಲರು, ಗಂಭೀರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಪಾರ್ಥ ಮತ್ತು ಅರ್ಪಿತಾರನ್ನು ಬಿಡುಗಡೆ ಮಾಡಬಾರದು. ಬಿಡುಗಡೆ ಮಾಡಿದರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆಯಿದೆ ಎಂದು ವಾದಿಸಿದರು. ಇದನ್ನೂ ಓದಿ: 6 ವಾರದೊಳಗೆ ಸರ್ಕಾರಿ ಬಂಗಲೆಯನ್ನು ತೊರೆಯಿರಿ – ಸುಬ್ರಮಣಿಯನ್ ಸ್ವಾಮಿಗೆ ಕೋರ್ಟ್ ಗಡುವು

    Live Tv
    [brid partner=56869869 player=32851 video=960834 autoplay=true]

  • ಶಿಕ್ಷಕರ ನೇಮಕಾತಿ ಹಗರಣ – ತೃಣಮೂಲ ನಾಯಕನ ಪತ್ನಿ, ಮಗನಿಗೆ ಅಮಾನುಷವಾಗಿ ಥಳಿತ

    ಶಿಕ್ಷಕರ ನೇಮಕಾತಿ ಹಗರಣ – ತೃಣಮೂಲ ನಾಯಕನ ಪತ್ನಿ, ಮಗನಿಗೆ ಅಮಾನುಷವಾಗಿ ಥಳಿತ

    ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣ ಪ್ರಕರಣ ಇಡೀ ಪಶ್ಚಿಮ ಬಂಗಾಳದಲ್ಲಿ ಕೋಲಾಹಲ ಸೃಷ್ಟಿಸಿದೆ. ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರನ್ನು ಇಡಿ ಬಂಧಿಸಿದೆ. ಲಕ್ಷಗಟ್ಟಲೆ ಹಣ ಲಂಚ ಪಡೆದು ಅನರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದ್ದ ಆರೋಪ ಕೇಳಿ ಬಂದಿದ್ದು, ಹಣ ನೀಡಿದರೂ ಹಲವರಿಗೆ ಕೆಲಸ ಸಿಕ್ಕಿಲ್ಲ ಎನ್ನಲಾಗಿದೆ.

    ಈ ಘಟನೆಯ ಬೆನ್ನಲ್ಲೇ ಪಶ್ಚಿಮ ಬಂಗಾಳದ ಭಗವಾನ್‌ಪುರದಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. ಅಲ್ಲಿಯೂ ತೃಣಮೂಲ ನಾಯಕರು ಜನರಿಗೆ ಕೆಲಸ ಕೊಡಿಸುವುದಾಗಿ ಹೇಳಿ, ಲಕ್ಷಗಟ್ಟಲೆ ಹಣ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಲಂಚ ಕೇಳಿ ಕೆಲಸ ಕೊಡಿಸುವುದಾಗಿ ಹೇಳಿಕೊಂಡಿದ್ದ ನಾಯಕನ ಮೇಲೆ ಕೋಪಗೊಂಡಿದ್ದ ಜನರು ಅವರ ಮನೆಗೆ ನುಗ್ಗಿ, ಅವರ ಮಗನನ್ನು ಎಳೆದು ತಂದು ಮರಕ್ಕೆ ಕಟ್ಟಿ ಹಾಕಿ ಅಮಾನುಷವಾಗಿ ಹೊಡೆದಿದ್ದಾರೆ. ಮಾತ್ರವಲ್ಲದೇ ನಾಯಕರ ಪತ್ನಿ ಹಾಗೂ ಪಂಚಾಯಿತಿ ಸದಸ್ಯನಿಗೂ ಥಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಹೊಸ ಮದ್ಯ ನೀತಿಯಲ್ಲಿ ಭ್ರಷ್ಟಾಚಾರ – ಮಾಜಿ ಲೆಫ್ಟಿನೆಂಟ್ ಗವರ್ನರ್ ಮೇಲೆ ಎಎಪಿ ಆರೋಪ

    ಈ ಘಟನೆ ಭಗವಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಬರ್ ಗ್ರಾಮದಲ್ಲಿ ನಡೆದಿದೆ. ತೃಣಮೂಲ ನಾಯಕ ಶಿವಶಂಕರ್ ನಾಯ್ಕ್ ಜನರಿಂದ ಲಂಚ ಪಡೆದಿದ್ದರು ಎನ್ನಲಾಗಿದೆ. ಆದರೆ ಆಕಾಂಕ್ಷಿಗಳಿಗೆ ಯಾವುದೇ ಉದ್ಯೋಗ ನೀಡಿರಲಿಲ್ಲ. ಪಾರ್ಥ ಚಟರ್ಜಿ ಅವರ ಎಸ್‌ಎಸ್‌ಸಿ ನೇಮಕಾತಿ ಹಗರಣ ಬೆಳಕಿಗೆ ಬರುತ್ತಿದ್ದಂತೆ ಈ ಸಾಮಾನ್ಯ ಜನರ ಕೋಪವೂ ಹೆಚ್ಚಾಗಿದೆ.

    ಉದ್ಯೋಗಾಕಾಂಕ್ಷಿಗಳು ಶನಿವಾರ ಬೆಳಗ್ಗೆ ತೃಣಮೂಲ ನಾಯಕನ ಮನೆಗೆ ನುಗ್ಗಿ, ಪ್ರತಿಭಟನೆ ನಡೆಸಿದ್ದಾರೆ. ಈ ದೃಶ್ಯವನ್ನು ನೂರಾರು ಗ್ರಾಮಸ್ಥರು ನಿಂತು ವೀಕ್ಷಿಸಿದ್ದಾರೆ. ಆದರೆ ಶಿವಶಂಕರ್ ನಾಯ್ಕ್ ಅವರು ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಅವರ ಮಗ, ಪತ್ನಿಯನ್ನು ಎಳೆದೊಯ್ದು ಅಮಾನುಷವಾಗಿ ಹೊಡೆದಿದ್ದಾರೆ. ಇದನ್ನೂ ಓದಿ: 75ನೇ ಸ್ವಾತಂತ್ರ್ಯೋತ್ಸವಕ್ಕೆ ಅಮೆರಿಕದ ಗಾಯಕಿ ಮೇರಿ ಮಿಲಾಬೆನ್‌ ಅತಿಥಿ

    ಈ ಬಗ್ಗೆ ಶಿವಶಂಕರ್ ನಾಯ್ಕ್ ಅವರ ಪತ್ನಿ ಭಾಗವಾನ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಜನಸಾಮಾನ್ಯರನ್ನು ವಂಚಿಸಿರುವ ಆರೋಪದ ಮೇಲೆ ತೃಣಮೂಲ ನಾಯಕ ಹಾಗೂ ಪತ್ನಿ ವಿರುದ್ಧ ಮೌಖಿಕ ದೂರು ದಾಖಲಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾರ್ಥ ಚಟರ್ಜಿ, ಆಪ್ತೆ ಅರ್ಪಿತಾ ಮುಖರ್ಜಿಗೆ 14 ದಿನ ನ್ಯಾಯಾಂಗ ಬಂಧನ

    ಪಾರ್ಥ ಚಟರ್ಜಿ, ಆಪ್ತೆ ಅರ್ಪಿತಾ ಮುಖರ್ಜಿಗೆ 14 ದಿನ ನ್ಯಾಯಾಂಗ ಬಂಧನ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದ ಪ್ರಮುಖ ಆರೋಪಿ ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿ ಮತ್ತು ಆಪ್ತೆ ಅರ್ಪಿತಾ ಮುಖರ್ಜಿಗೆ ವಿಶೇಷ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

    ಇಡಿ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿಯನ್ನು ಬಂಧಿಸಿ ತನಿಖೆ ನಡೆಸಿತ್ತು. ಆ ಬಳಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿಬೋನ್ ಕುಮಾರ್ ಸಾಧು ನೇತೃತ್ವದಲ್ಲಿ ಅರ್ಜಿ ವಿಚಾರಣೆ ನಡೆಸಲಾಯಿತು. ನ್ಯಾಯಾಧೀಶರು ಪ್ರಕರಣದ ಎಲ್ಲಾ ಸಾಕ್ಷ್ಯಾಧಾರಗಳನ್ನು ಆಲಿಸಿದ ನಂತರ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ವಿಚಾರಣೆಯನ್ನು ಆಗಸ್ಟ್ 18ಕ್ಕೆ ಕಾಯ್ದಿರಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಹಗರಣ ಪಾರ್ಥ ಚಟರ್ಜಿ ಆಪ್ತೆ ಮನೆ ಮೇಲೆ ಇಡಿ ದಾಳಿ – 50 ಕೋಟಿ ರೂ., 5 ಕೆ.ಜಿ ಚಿನ್ನ ಪತ್ತೆ

    ಸರ್ಕಾರಿ ಶಿಕ್ಷಕರ ನೇಮಕಾತಿ ಹಗರಣ ಮತ್ತು ಅಕ್ರಮ ಹಣ ಆರೋಪದಡಿ ಇಡಿ ಜುಲೈ 23 ರಂದು ಪಾರ್ಥ ಚಟರ್ಜಿಯನ್ನು ಬಂಧಿಸಿತ್ತು. ಬಳಿಕ ಪಾರ್ಥ ಚಟರ್ಜಿ ಹಾಗೂ ಅವರೊಂದಿಗೆ ಸಂಪರ್ಕದಲ್ಲಿರುವವರ ಮನೆಯಲ್ಲಿ ತನಿಖೆ ನಡೆಸಿತ್ತು. ಚಟರ್ಜಿ ಆಪ್ತೆ ಅರ್ಪಿತಾ ಮನೆಯಲ್ಲೂ ಇಡಿ ತನಿಖೆ ನಡೆಸಿ, ಸುಮಾರು 21 ಕೋಟಿ ರೂ. ಮೊತ್ತದ ಹಣವನ್ನು ಬಯಲಿಗೆ ತಂದಿತ್ತು. ಆ ಬಳಿಕ ಎರಡನೇ ಬಾರಿ ಇಡಿ ದಾಳಿ ನಡೆಸಿ ಬೆಲ್‍ಘಾರಿಯಾ ಟೌನ್ ಕ್ಲಬ್‍ನಲ್ಲಿರುವ ಫ್ಲಾಟ್‍ನಲ್ಲಿ 50 ಕೋಟಿ ರೂ.ಗೂ ಹೆಚ್ಚು ಮತ್ತು 5 ಕೆ.ಜಿಗೂ ಅಧಿಕ ಚಿನ್ನವನ್ನು ವಶಪಡಿಕೊಂಡಿತ್ತು. ನಂತರ ಅರ್ಪಿತಾ ಚಟರ್ಜಿಯನ್ನು ಇಡಿ ಬಂಧಿಸಿತ್ತು. ಇದನ್ನೂ ಓದಿ: ಅಧಿವೇಶನ ಇಲ್ಲದಿದ್ದಾಗಲೂ ರಾಹುಲ್, ಸೋನಿಯಾ ಇಡಿ ತನಿಖೆಗೆ ಸಹಕರಿಸಿಲ್ಲ: ಖರ್ಗೆಗೆ ಪ್ರಹ್ಲಾದ್ ಜೋಶಿ ತಿರುಗೇಟು

    Live Tv
    [brid partner=56869869 player=32851 video=960834 autoplay=true]