Tag: ಶಿಕ್ಷಕರ ನೇಮಕಾತಿ

  • ಒಳಮೀಸಲಾತಿ ಪ್ರಕ್ರಿಯೆ ಮುಗಿದ ಬಳಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶುರು – ಮಧು ಬಂಗಾರಪ್ಪ

    ಒಳಮೀಸಲಾತಿ ಪ್ರಕ್ರಿಯೆ ಮುಗಿದ ಬಳಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶುರು – ಮಧು ಬಂಗಾರಪ್ಪ

    ಬೆಂಗಳೂರು: ಒಳಮೀಸಲಾತಿ ಪ್ರಕ್ರಿಯೆ ಮುಗಿದ ಬಳಿಕ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ (Teachers Recruitment) ಪ್ರಕ್ರಿಯೆ ಶುರು ಮಾಡಲಾಗುತ್ತದೆ. ಶಿಕ್ಷಕರ ನೇಮಕಾತಿಯಲ್ಲಿ ದೈಹಿಕ ಶಿಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ.ಇದನ್ನೂ ಓದಿ: ಹೆಬ್ಬಾಳ ಫ್ಲೈಓವರ್ ಉದ್ಘಾಟಿಸಿದ ಡಿಸಿಎಂ – ಮೇಲ್ಸೇತುವೆಯಲ್ಲಿ ಡಿಕೆಶಿ ಬೈಕ್ ಓಡಿಸಿದ ಸ್ಟೈಲ್ ನೋಡಿ

     

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ನ (JDS) ಭೋಜೇಗೌಡ ಅವರು ಪ್ರಶ್ನೆ ಕೇಳಿದರು. ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯಿದೆ. 6ರಿಂದ 10ನೇ ತರಗತಿಗೆ ದೈಹಿಕ ಶಿಕ್ಷಣ ಒಂದು ವಿಷಯವಾಗಿ ಸೇರಿಸಬೇಕು ಎಂದು 2006-07ರಲ್ಲಿ ವರದಿಯನ್ನ ಸರ್ಕಾರ ಒಪ್ಪಿದೆ. 80% ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಇಲ್ಲ. ದೈಹಿಕ ಶಿಕ್ಷಕರಿಲ್ಲದೆ ಫಿಟ್ ಇಂಡಿಯಾ, ಖೇಲೋ ಇಂಡಿಯಾ ಹೇಗೆ ಆಗುತ್ತದೆ. ಸಮಾರೋಪಾದಿಯಲ್ಲಿ ದೈಹಿಕ ಶಿಕ್ಷಕರ ನೇಮಕ ಆಗಬೇಕು. ಖಾಲಿ ಇರುವ ದೈಹಿಕ ಶಿಕ್ಷಕರ ಹುದ್ದೆಗೂ ಅತಿಥಿ ಶಿಕ್ಷಕರನ್ನ ನೇಮಕ ಮಾಡಿಕೊಳ್ಳಿ ಎಂದು ಒತ್ತಾಯಿಸಿದರು.

    ಇದಕ್ಕೆ ಸಚಿವ ಮಧು ಬಂಗಾರಪ್ಪ ಉತ್ತರಿಸಿ, ದೈಹಿಕ ಶಿಕ್ಷಕರ ಕೊರತೆ ಇರುವುದು ಸತ್ಯ. ಈಗ ಆಗುವ ನೇಮಕಾತಿಯಲ್ಲಿ ಹೆಚ್ಚು ಪ್ರಾಮುಖ್ಯತೆ ದೈಹಿಕ ಶಿಕ್ಷಕರಿಗೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಳಮೀಸಲಾತಿ ಪ್ರಕ್ರಿಯೆ ಮುಗಿದ ಕೂಡಲೇ ನೇಮಕಾತಿ ಪ್ರಕ್ರಿಯೆ ಶುರು ಮಾಡ್ತೀವಿ. ದೈಹಿಕ ಶಿಕ್ಷಕ ಹುದ್ದೆಗೆ ಅತಿಥಿ ಶಿಕ್ಷಕರ ನೇಮಕ ಮಾಡುವ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದರು.ಇದನ್ನೂ ಓದಿ: ಸಂಜೆಯೊಳಗೆ ಮಹೇಶ್‌ ಶೆಟ್ಟಿ ತಿಮರೋಡಿ ಅರೆಸ್ಟ್‌ ಮಾಡಲು ಪರಮೇಶ್ವರ್‌ ಸೂಚನೆ

  • ಬಿಹಾರ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ – ಲಾಠಿಚಾರ್ಜ್‌ಗೆ ಬಿಜೆಪಿ ನಾಯಕ ಬಲಿ

    ಬಿಹಾರ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ – ಲಾಠಿಚಾರ್ಜ್‌ಗೆ ಬಿಜೆಪಿ ನಾಯಕ ಬಲಿ

    ಪಾಟ್ನಾ: ಶಿಕ್ಷಕರ ನೇಮಕಾತಿ ನಿಯಮಾವಳಿ ವಿರೋಧಿಸಿ ಪಾಟ್ನಾದಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಲಾಠಿಚಾರ್ಜ್‌ಗೆ (Lathicharge) ಬಿಜೆಪಿ ನಾಯಕರೊಬ್ಬರು (BJP Leader) ಮೃತಪಟ್ಟಿದ್ದಾರೆ.

    ಬಿಹಾರ ಸರ್ಕಾರದ (Bihar Government) ವಿರುದ್ಧ ಇಂದು ಬಿಜೆಪಿ ಪ್ರತಿಭಟನೆ (Protest) ಆಯೋಜಿಸಿತ್ತು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೋಗುತ್ತಿದ್ದಾಗ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ.

    ಪೊಲೀಸರ ಲಾಠಿಯಿಂದ ಬಲವಾಗಿ ಏಟು ತಿಂದಿದ್ದ ಜೆಹಾನಾಬಾದ್ ಜಿಲ್ಲೆಯ ಅಧ್ಯಕ್ಷ ವಿಜಯ್‌ ಕುಮಾರ್‌ ಸಿಂಗ್‌ (Vijay Kumar Singh) ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟು ಹೊತ್ತಿಗೆ ಅವರ ಪ್ರಾಣ ಪಕ್ಷಿ ಹೋಗಿತ್ತು.

    ಪ್ರತಿಭಟನೆಯನ್ನು ಚದುರಿಸಲು ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಟಿಯರ್‌ ಗ್ಯಾಸ್‌ ಪ್ರಯೋಗಿಸಿದ್ದರು. ಇದನ್ನೂ ಓದಿ: ಎಣ್ಣೆ ಏಟಲ್ಲಿ ಅರ್ಧ ಸುಟ್ಟ ಯುವತಿಯ ಮೃತದೇಹ ತಿಂದ್ರು!

    ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ (JP Nadda) ಪ್ರತಿಕ್ರಿಯಿಸಿ, ಪಾಟ್ನಾದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ರಾಜ್ಯ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ. ಮಹಾಘಟಬಂಧನ್ ಸರ್ಕಾರವು ಭ್ರಷ್ಟಾಚಾರದ ಕೋಟೆಯನ್ನು ರಕ್ಷಿಸುವ ಸಲುವಾಗಿ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿದೆ. ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ರಕ್ಷಿಸಲು ಬಿಹಾರದ ಮುಖ್ಯಮಂತ್ರಿಗಳು ತಮ್ಮ ನೈತಿಕತೆಯನ್ನು ಮರೆತಿದ್ದಾರೆ ಎಂದು ಹಿಂದಿಯಲ್ಲಿ ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋರ್ಟ್ ಆದೇಶ ಬಂದ ಬಳಿಕ ನೇಮಕಾತಿ – ಶಿಕ್ಷಕರ ಮನವೊಲಿಕೆಗೆ ಮುಂದಾದ ಮಧು ಬಂಗಾರಪ್ಪ

    ಕೋರ್ಟ್ ಆದೇಶ ಬಂದ ಬಳಿಕ ನೇಮಕಾತಿ – ಶಿಕ್ಷಕರ ಮನವೊಲಿಕೆಗೆ ಮುಂದಾದ ಮಧು ಬಂಗಾರಪ್ಪ

    ಬೆಂಗಳೂರು: ಶಿಕ್ಷಕರ ನೇಮಕಾತಿ (Teachers Recruitment) ವಿಳಂಬ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಕಳೆದ 4 ದಿನಗಳಿಂದ ಅಭ್ಯರ್ಥಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಸ್ಥಳಕ್ಕಾಗಮಿಸಿ ಭಾವಿ ಶಿಕ್ಷಕರನ್ನು ಭೇಟಿ ಮಾಡಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಪ್ರತಿಭಟನಾ ನಿರತ ಅಭ್ಯರ್ಥಿಗಳೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ಮೊದಲನೆಯದಾಗಿ ನಿಮ್ಮಲ್ಲಿ ನಾನು ಕ್ಷಮೆ ಕೇಳುತ್ತೇನೆ ನೀವೆಲ್ಲಾ ಮಕ್ಕಳನ್ನು ಕರೆದುಕೊಂಡು ಬರೋದು ಮನಸ್ಸಿಗೆ ನೋವಾಗುತ್ತದೆ. ಸರ್ಕಾರದ ಮೇಲೆ ಇಟ್ಟಿರೋ ನಂಬಿಕೆಯನ್ನು ನೀವು ದಯವಿಟ್ಟು ಕಳೆದುಕೊಳ್ಳಬೇಡಿ ಎಂದು ಕೇಳಿಕೊಂಡರು.

    ನಮ್ಮ ತಂದೆಯವರು ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಕೆಲಸ ಮಾಡಿದ್ರು. ನಾನು ಕೋರ್ಟ್ಗೆ ಪ್ರಶ್ನೆ ಮಾಡಲು ಹೋಗಲ್ಲ. ನಿಮ್ಮ ಬಳಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ನೀವೆಲ್ಲರೂ ಇಲ್ಲಿಂದ ದಯಮಾಡಿ ಹೊರಡಿ. ಕೋರ್ಟ್ ಆದೇಶ ಬಂದ ತಕ್ಷಣ ನಾನು ನಿಮಗೆ ನೇಮಕಾತಿ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: Karnataka Budget: 1 ರೂಪಾಯಿ ಬಂದಿದ್ಹೇಗೆ? ಹೋಗಿದ್ದು ಹೇಗೆ?

    ಈ ವಿಚಾರ ಕೋರ್ಟ್‌ನಲ್ಲಿ ಇರುವುದರಿಂದ ಯಾವಾಗ ಈಡೇರುತ್ತದೆ ಎಂದು ನಾನು ನಿಮಗೆ ಹೇಳಲು ಸಾಧ್ಯವಿಲ್ಲ. ಒಳ್ಳೆಯ ವಕೀಲರನ್ನು ಕೊಟ್ಟಿದ್ದಾರೆ. ಕೋರ್ಟ್‌ನಿಂದ ಸ್ಟೇ ಇರುವುದರಿಂದ ಇದು ಅನ್ವಯವಾಗಲ್ಲ. ಕೋರ್ಟ್ ಪರಿಶೀಲನೆ ಮಾಡಿ ಎಂದು ಹೇಳಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

    ಪ್ರತಿಭಟನೆ ಏಕೆ?
    ಪರೀಕ್ಷೆ ನಡೆದು ಒಂದು ವರ್ಷ ಕಳೆದರೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಇನ್ನೂ ನೇಮಕಾತಿ ಆದೇಶ ಮತ್ತು ಸ್ಥಳ ನಿಯೋಜನೆ ಆಗಿಲ್ಲ. ಪರೀಕ್ಷೆ ಬರೆದಿದ್ದ 70 ಸಾವಿರ ಅಭ್ಯರ್ಥಿಗಳಲ್ಲಿ 13,352 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆ ಪೈಕಿ ನೇಮಕಾತಿಯಲ್ಲಿ ಕಾನೂನು ಗೊಂದಲವಿದೆ ಎಂದು ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇ ಕಾರಣದಿಂದಾಗಿ ಯಾವುದೇ ಕಾನೂನು ತೊಡಕಿಲ್ಲದೇ ಆಯ್ಕೆಯಾದ ಅಭ್ಯರ್ಥಿಗಳಿಗೂ ಸಮಸ್ಯೆಯಾಗುತ್ತಿದೆ. ಸರ್ಕಾರ ಕೂಡಲೇ ಸಮಸ್ಯೆಯನ್ನು ಪರಿಹರಿಸಿಕೊಡಬೇಕೆಂದು ಉತ್ತೀರ್ಣರಾದ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ಇದನ್ನೂ ಓದಿ: Karnataka Budget 2023: ಸಿಎಂ ತವರು ಜಿಲ್ಲೆಗೆ ಸಿಕ್ಕಿದ್ದೇನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Teachers Recruitment: ಪದವೀಧರ ಪ್ರಾಥಮಿಕ ಶಿಕ್ಷಕರಾಗಿ 13,352 ಮಂದಿ ಆಯ್ಕೆ – ಅಂತಿಮ ಪಟ್ಟಿ ಪ್ರಕಟ

    Teachers Recruitment: ಪದವೀಧರ ಪ್ರಾಥಮಿಕ ಶಿಕ್ಷಕರಾಗಿ 13,352 ಮಂದಿ ಆಯ್ಕೆ – ಅಂತಿಮ ಪಟ್ಟಿ ಪ್ರಕಟ

    ಬೆಂಗಳೂರು: 2022ರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಾತಿಗೆ (Teachers Recruitment 2022) ಸಂಧಿಸಿದಂತೆ ಶಿಕ್ಷಣ ಇಲಾಖೆಯು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ್ದು, 13,352 ಮಂದಿ ಆಯ್ಕೆಯಾಗಿದ್ದಾರೆ.

    1:1 ಅನುಪಾತದಲ್ಲಿ ಶಿಕ್ಷಕರನ್ನ ಆಯ್ಕೆ ಮಾಡಿದ್ದು, ವೆಬ್‌ಸೈಟ್‌ನಲ್ಲಿ (https://schooleducation.kar.nic.in) ಆಯ್ಕೆಪಟ್ಟಿ ಪ್ರಕಟಿಸಿದೆ. ಇಂಗ್ಲಿಷ್ ಭಾಷೆಗೆ 1,772 ಶಿಕ್ಷಕರು, ಗಣಿತ ಮತ್ತು ವಿಜ್ಞಾನಕ್ಕೆ 5,498, ಸಮಾಜ ಪಾಠಗಳಿಗೆ 4,524, ಜೀವ ವಿಜ್ಞಾನಕ್ಕೆ 1,558 ಶಿಕ್ಷಕರು ಸೇರಿ ಸೇರಿ ಒಟ್ಟು 13,352 ಶಿಕ್ಷಕರನ್ನ ನೇಮಕ ಮಾಡಿದೆ.

    ಶಿಕ್ಷಣ ಇಲಾಖೆ (Education Department) ವೆಬ್‌ಸೈಟ್‌ನಲ್ಲಿ ಮುಖ್ಯ ಆಯ್ಕೆ ಪಟ್ಟಿ ಪ್ರಕಟಿಸಿರುವ ವಿಷಯವನ್ನು ಶಿಕ್ಷಣ ಸಚಿವ ಬಿ.ಸಿ ನಾಗೇಶ್ (BC Nagesh) ಬುಧವಾರ ತಿಳಿಸಿದ್ದಾರೆ.

    ಫೆಬ್ರವರಿ 27 ರಂದು 1:1 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಮಾ.1 ರಿಂದ ಮಾ.4 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. 700ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 15 ಆಕ್ಷೇಪಣೆಗಳು ಮಾತ್ರ ಪರಿಗಣನೆಗೆ ಅರ್ಹವಾಗಿದ್ದವು. ಇವುಗಳನ್ನ ಪರಿಶೀಲಿಸಿ ಮಾರ್ಚ್ 8 ರಂದು ಮುಖ್ಯ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಯುಗಾದಿ ನಂತರ ಮೆಗಾ ಆಪರೇಷನ್‌ಗೆ `ಕೈ’ ಪಾಳಯ ಸಿದ್ಧತೆ?

    ಮುಖ್ಯ ಆಯ್ಕೆಪಟ್ಟಿಯಲ್ಲಿ ಒಟ್ಟು 8,376 ಮಹಿಳೆಯರು, 4,973 ಪುರುಷರು ಹಾಗೂ ಮೂವರು ತೃತೀಯ ಲಿಂಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅದರಲ್ಲಿ ಕಲ್ಯಾಣ ಕರ್ನಾಟಕ ವಿಭಾಗದಿಂದ 2,413 ಮಹಿಳೆಯರು, 1779 ಪುರುಷರು ಹಾಗೂ ಒಬ್ಬರು ತೃತೀಯ ಲಿಂಗಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳಿಂದ 5,963 ಮಹಿಳೆಯರು, 3,194 ಪುರುಷರು ಹಾಗೂ ಇಬ್ಬರು ತೃತೀಯ ಲಿಂಗಿ ಅಭ್ಯರ್ಥಿಗಳು ನೇಮಕಗೊಂಡಿದ್ದಾರೆ. ಇದನ್ನೂ ಓದಿ: ಯುಗಾದಿಗೆ ಮುನ್ನವೇ ಟಿಕೆಟ್ ಘೋಷಣೆಗೆ ಒತ್ತಡ – ಕೈ ನಾಯಕರಿಗೆ ಧರ್ಮ ಸಂಕಟ

    ಈ ಪೈಕಿ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ 5 ಹಾಗೂ ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳಲ್ಲಿ 16 ಸೇರಿ ಒಟ್ಟು 21 ಇಂಜಿನಿಯರಿಂಗ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

  • 15 ಸಾವಿರ ಪ್ರಾಥಮಿಕ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

    15 ಸಾವಿರ ಪ್ರಾಥಮಿಕ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

    ಬೆಂಗಳೂರು: 15ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ(Karnataka Graduate Primary Teacher Selection List) ಪಟ್ಟಿ ಪ್ರಕ್ರಿಯೆಗೆ ಹೈಕೋರ್ಟ್‌(High Court) ತಡೆ ನೀಡಿದೆ.

    ಮೀಸಲಾತಿ(Reservation) ಸಂಬಂಧ ಹಲವು ಅಭ್ಯರ್ಥಿಗಳ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್‌ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮುಂದಿನ ಕ್ರಮ ಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಅಂತಿಮ ಆಯ್ಕೆ ಪಟ್ಟಿಗೆ ಮುಂದಿನ ವಿಚಾರಣೆವರೆಗೂ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು ವಿಚಾರಣೆಯನ್ನು ಮುಂದೂಡಿದೆ. ಇದನ್ನೂ ಓದಿ: iPhone ತಯಾರಿಸುವ ಕೋಲಾರದ ವಿಸ್ಟ್ರಾನ್‌ ಖರೀದಿಗೆ ಮುಂದಾದ ಟಾಟಾ

    court order law

    15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ನ.19 ರಂದು ಪ್ರಕಟಿಸಲಾಗಿದ್ದು, ಆ ಪೈಕಿ 13,363 ಅಭ್ಯರ್ಥಿಗಳಷ್ಟೇ ಆಯ್ಕೆ ಆಗಿದ್ದರು. ಉಳಿದ 1,637 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಲ್ಲದ ಕಾರಣ ಅವು ಖಾಲಿ ಉಳಿದಿದ್ದವು.

    ಅಕ್ಷತಾ ಚೌಗುಲೆ ಸೇರಿದಂತೆ ಇತರೆ 20 ಮಂದಿ ಅಭ್ಯರ್ಥಿಗಳು ಮೀಸಲಾತಿ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ – ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ

    ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ – ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ

    ಬೆಂಗಳೂರು: ಪದವೀಧರ ಪ್ರಾಥಮಿಕ ಶಿಕ್ಷಕರ (GPT) ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಮಗ್ರ ಶಿಕ್ಷಣ ಕಚೇರಿಯಲ್ಲಿ ಸಚಿವ ಬಿ.ಸಿ.ನಾಗೇಶ್‌ (B.C.Nagesh) ಅವರು ಶುಕ್ರವಾರ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದಾರೆ.

    ಈ ಕುರಿತು ಮಾತನಾಡಿದ ಅವರು, ತಾತ್ಕಾಲಿಕ ಆಯ್ಕೆ ಪಟ್ಟಿ ‌ಪ್ರಕಟ ಮಾಡಿದ್ದೇವೆ. 1:1 ಆಧಾರದಲ್ಲಿ ಪಟ್ಟಿ ರಿಲೀಸ್ ಮಾಡಲಾಗಿದೆ. ಎಲ್ಲರ ಆರೋಪಕ್ಕೆ ಇವತ್ತು ಉತ್ತರ ನೀಡಿದ್ದೇವೆ. ಅತ್ಯುತ್ತಮವಾಗಿ ಪರೀಕ್ಷೆ ನಡೆಸಿ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನರ ಮುಂದೆ ಏಕೆ ರಾಜಕೀಯವಾಗಿ ಬೆತ್ತಲಾಗ್ತೀರಿ – ಕಾಂಗ್ರೆಸ್‌ಗೆ ಸುಧಾಕರ್ ತಿರುಗೇಟು

    15 ಸಾವಿರ ಶಿಕ್ಷಕರ ನೇಮಕಾತಿಗೆ ಪರೀಕ್ಷೆ ಮಾಡಿದ್ದೆವು. 13,363 ಜನ 1:1 ಆಧಾರದಲ್ಲಿ ಅಭ್ಯರ್ಥಿಗಳು ಪಟ್ಟಿಯಲ್ಲಿ ಇದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ 5 ಸಾವಿರ ಹುದ್ದೆ ಇಟ್ಟಿದ್ದೇವೆ. ಆದ್ರೆ ಅಲ್ಲಿ ಸ್ವಲ್ಪ ಕೊರತೆ ಆಗಿದೆ. 5 ಸಾವಿರ ಹುದ್ದೆ ಪೈಕಿ 4,187 ಪಟ್ಟಿ ರಿಲೀಸ್ ಆಗಿದೆ (ಕಲ್ಯಾಣ ಕರ್ನಾಟಕ). ಉಳಿದ ಭಾಗದಲ್ಲಿ 9,176 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

    1,768 ಇಂಗ್ಲಿಷ್‌ ಅಭ್ಯರ್ಥಿಗಳು ಆಯ್ಕೆ ಆಗಿದೆ. ಗಣಿತ – 5,450 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಸಮಾಜ ವಿಜ್ಞಾನ- 4,521 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಜೀವ ವಿಜ್ಞಾನ- 1,624 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಒಟ್ಟು 15 ಸಾವಿರ ಪೋಸ್ಟ್‌ನಲ್ಲಿ 13,363 ಹುದ್ದೆಗೆ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ, ಕಮಿಷನರ್ ಅನುಮತಿ ಇಲ್ಲದೆ ಮಾಡಲು ಆಗುತ್ತಾ?- ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ

    ಯಾವುದೇ ತರಹದ ಗೊಂದಲ‌ ಇಲ್ಲದೆ ಇಲಾಖೆ ಪರೀಕ್ಷೆ ಮಾಡಿದೆ. 3 ಜನ ತೃತೀತ ಲಿಂಗಿಗಳು ಶಿಕ್ಷಕರಾಗಿ ಆಯ್ಕೆ ಆಗಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳು ಆಯ್ಕೆ ಆಗಿದ್ದಾರೆ. 10 ಜನ ಪರೀಕ್ಷೆ ಬರೆದಿದ್ದರು. ಅದರಲ್ಲಿ 3 ಜನ ಆಯ್ಕೆ ಆಗಿದ್ದಾರೆ. 34 ಜನ ಎಂಜಿನಿಯರ್ ಅಭ್ಯರ್ಥಿಗಳ ಪೈಕಿ 19 ಜನ ಎಂಜಿನಿಯರಿಂಗ್ ಅಭ್ಯರ್ಥಿಗಳು ಶಿಕ್ಷಕರಾಗಿ ಆಯ್ಕೆ ಆಗಿದ್ದಾರೆ. 8 ತಿಂಗಳಲ್ಲಿ ನೇಮಕಾತಿ ‌ಪ್ರಕ್ರಿಯೆ ಯಶಸ್ವಿಯಾಗಿ ಮಾಡಿದ್ದೇವೆ. ಫೆಬ್ರವರಿಯಲ್ಲಿ 2,500 ಹೈಸ್ಕೂಲ್ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮಾಡ್ತೀವಿ ಎಂದಿದ್ದಾರೆ.

    ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು https://schooleducation.kar.nic.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇದನ್ನೂ ಓದಿ: ಚಿಲುಮೆ ಸಂಸ್ಥೆ ವಿರುದ್ಧ ಆರೋಪ ಬೆನ್ನಲ್ಲೇ ರಾಜ್ಯದಲ್ಲಿ 6 ಲಕ್ಷ ಮತದಾರರ ಹೆಸರು ಡಿಲೀಟ್‌

    Live Tv
    [brid partner=56869869 player=32851 video=960834 autoplay=true]

  • ಶಿಕ್ಷಕರ ನೇಮಕಾತಿ ಹಗರಣ- ಮತ್ತೋರ್ವ ಟಿಎಂಸಿ ಶಾಸಕ ಬಂಧನ

    ಶಿಕ್ಷಕರ ನೇಮಕಾತಿ ಹಗರಣ- ಮತ್ತೋರ್ವ ಟಿಎಂಸಿ ಶಾಸಕ ಬಂಧನ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ತೃಣಮೂಲ ಕಾಂಗ್ರೆಸ್ (Trinamool Congress) ಶಾಸಕ ಮಾಣಿಕ್ ಭಟ್ಟಾಚಾರ್ಯ (Manik Bhattacharya) ಅವರನ್ನು ಜಾರಿ ನಿರ್ದೇಶನಾಲಯ (ED) ರಾತ್ರೋ ರಾತ್ರಿ ವಿಚಾರಣೆ ನಡೆಸಿತ್ತು. ಈ ಬೆನ್ನಲ್ಲೇ ಇಂದು ಮುಂಜಾನೆ ಅವರನ್ನು ಬಂಧಿಸಿದೆ.

    ಶಿಕ್ಷಕರ ನೇಮಕಾತಿ ಹಗರಣಕ್ಕೆ (Teachers Recruitment Scam) ಸಂಬಂಧಿಸಿ ತನಿಖೆ ನಡೆಸುತ್ತಿರುವ ಇಡಿ, ಪಾರ್ಥ ಚಟರ್ಜಿ ಅವರ ವಾಟ್ಸಪ್ ಹಿಸ್ಟರಿಯನ್ನು ತೆಗೆದಿದೆ. ಈ ಸಂದರ್ಭದಲ್ಲಿ ಭಟ್ಟಾಚಾರ್ಯರೊಂದಿಗೆ ಲಂಚ ವಸೂಲಿಯಲ್ಲಿ ತೊಡಗಿರುವ ಕುರಿತು ಸಂಭಾಷಣೆ ನಡೆಸಿರುವ ಆಡಿಯೋ ಬೆಳಕಿಗೆ ಬಂದಿದೆ.

    ಈ ಹಿನ್ನೆಲೆಯಲ್ಲಿ ನಿನ್ನೆ ತೀವ್ರ ವಿಚಾರಣೆ ನಡೆಸಿ ಇಂದು ಬಂಧಿಸಿದೆ. ಘಟನೆಗೆ ಸಂಬಂಧಿಸಿ ಭಟ್ಟಾಚಾರ್ಯ ಅವರನ್ನು ಇಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪುಟಿನ್ ಕನಸಿನ ಸೇತುವೆ ಧ್ವಂಸಗೊಳಿಸಿದ್ದಕ್ಕೆ ಕೆರಳಿದ ರಷ್ಯಾ – ಉಕ್ರೇನ್ ಮೇಲೆ ಮತ್ತಷ್ಟು ತೀವ್ರ ದಾಳಿ

    ಈ ಮೂಲಕ ಹಗರಣದಲ್ಲಿ ಬಂಧಿತರಾದ ಎರಡನೇ ತೃಣಮೂಲ ನಾಯಕರಾಗಿದ್ದಾರೆ. ಜುಲೈನಲ್ಲಿ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರನ್ನು ಬಂಧಿಸಲಾಗಿತ್ತು. ಅಷ್ಟೇ ಅಲ್ಲದೇ ಅವರ ಸಹಾಯಕಿ ಅರ್ಪಿತಾ ಮುಖರ್ಜಿಗೆ ಸಂಬಂಧಿಸಿದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದನ್ನೂ ಓದಿ: ಡಿಸಿ ಕಚೇರಿಗೆ ಬೀಗ ಹಾಕಿ ರೈತರಿಂದ ಪ್ರತಿಭಟನೆ

    Live Tv
    [brid partner=56869869 player=32851 video=960834 autoplay=true]

  • ಮೋದಿಯಂತೆ ಬೊಮ್ಮಾಯಿ ಸಿಎಂ ಹುದ್ದೆ ಬಿಟ್ಟು ಉಳಿದೆಲ್ಲ ಖಾತೆಗಳನ್ನ ಹಂಚಿಕೆ ಮಾಡ್ಬೇಕು – ಯತ್ನಾಳ್

    ಮೋದಿಯಂತೆ ಬೊಮ್ಮಾಯಿ ಸಿಎಂ ಹುದ್ದೆ ಬಿಟ್ಟು ಉಳಿದೆಲ್ಲ ಖಾತೆಗಳನ್ನ ಹಂಚಿಕೆ ಮಾಡ್ಬೇಕು – ಯತ್ನಾಳ್

    – ಐದೈದು ಖಾತೆ ಇಟ್ಕೊಂಡು ಕೂರೋದು ಸರಿಯಲ್ಲ
    – ಈಶ್ವರಪ್ಪಗೆ ಸಚಿವ ಸ್ಥಾನ ಕೊಡಿ

    ವಿಜಯಪುರ: ಪ್ರಧಾನಿ ಮೋದಿ (Naredra Modi) ಅವರು ಮುಖ್ಯಮಂತ್ರಿಯಾಗಿದ್ದಾಗ ಸಿಎಂ ಹುದ್ದೆ ಬಿಟ್ಟು ಬೇರೆ ಯಾವ ಖಾತೆಯನ್ನೂ ಅವರು ಹೊಂದಿರಲಿಲ್ಲ. ಹಾಗೆಯೇ ಬೊಮ್ಮಾಯಿ (Basavaraj Bommai) ಅವರು ಸಿಎಂ ಹುದ್ದೆ ಬಿಟ್ಟು ಉಳಿದೆಲ್ಲ ಖಾತೆಗಳನ್ನ ಹಂಚಿಕೆ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಒತ್ತಾಯಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕೆಲವೊಂದು ಖಾಲಿ ಇರುವ ಖಾತೆಗಳನ್ನು ಸಿಎಂ ತಾವೇ ಇಟ್ಟುಕೊಂಡು ಕೂರಬಾರದು. ಸಚಿವ ಸಂಪುಟ ವಿಸ್ತರಣೆ ಮಾಡಬೇಕು. ಐದೈದು ಖಾತೆ ಒಬ್ಬರೇ ಇಟ್ಟುಕೊಂಡು ಕೂರೋದು ಸರಿಯಲ್ಲ. ಮೋದಿಯವರು ಸಿಎಂ ಆಗಿದ್ದಾಗ ಸಿಎಂ ಬಿಟ್ಟು ಬೇರೆ ಯಾವ ಖಾತೆಯನ್ನೂ ಇಟ್ಟುಕೊಂಡಿರಲಿಲ್ಲ. ಅದೇ ರೀತಿ ಬೊಮ್ಮಾಯಿ (Basavaraj Bommai) ಅವರು ಕೂಡ ಸಿಎಂ ಸ್ಥಾನ ಬಿಟ್ಟು ಉಳಿದೆಲ್ಲವುಗಳನ್ನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ಚೀನಾದ ರಹಸ್ಯ ಪೊಲೀಸ್‌ ಠಾಣೆ ಕಾರ್ಯಾಚರಣೆ!

    ಈಶ್ವರಪ್ಪನವರ (Eshwarappa) ಮೇಲೆ ಸುಳ್ಳು ಆರೋಪ ಮಾಡಿದ ಕಾರಣ ರಾಜಿನಾಮೆ ನೀಡಿದ್ದರು. ಈಗ ಅವರಿಗೂ ಸಚಿವ ಸ್ಥಾನ ನೀಡಬೇಕು. ಅದರೊಂದಿಗೆ ಬಸವರಾಜ ಹೊರಟ್ಟಿ (Basavaraj Horatti) ಅವರಿಗೂ ನೀಡಿದ್ದ ಭರವಸೆಯಂತೆ ಸಭಾಪತಿ ಸ್ಥಾನ ಕೊಡಬೇಕು. ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಪಕ್ಷದ ಮೇಲೆ ನಂಬಿಕೆ ಹೊರಟುಹೋಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಬೀದರ್‌ನ ಮರದಾಸಾದಲ್ಲಿ (Madrasa) ಆಯುಧ ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅಲ್ಲಿ ಅಂಬಾಭವಾನಿ ಗುಡಿ ಇದ್ದದ್ದು ಸತ್ಯ. ಅಲ್ಲಿ ಪೂಜೆ ಮಾಡಿದ್ದರಲ್ಲಿ ತಪ್ಪಿಲ್ಲ. ಹಲವು ವರ್ಷಗಳಿಂದಲೂ ಅಲ್ಲಿ ಪೂಜೆ ನಡೆದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕಲ್ಯಾಣ ಪರ್ವ ಕಾರ್ಯಕ್ರಮ ಇಬ್ಭಾಗ – ಬಸವ ಭಕ್ತರು ಅಸಮಾಧಾನ

    ಶಿಕ್ಷಕರ (Teachers) ಅಕ್ರಮ ನೇಮಕಾತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರ ಕಾಲದಲ್ಲಿ ಶಿಕ್ಷಕರನ್ನು ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಮೆರಿಟ್ ಇಲ್ಲ, ಅರ್ಜಿ ಇಲ್ಲ, ಡೈರೆಕ್ಟ್ ಸೆಲೆಕ್ಷನ್ ಮಾಡಿಕೊಂಡಿದ್ದಾರೆ. ಈ ಪ್ರಮಾದಿಂದಾಗಿ ಅವರನ್ನು ಬಂಧಿಸಿರುವುದು ಸರಿಯಾಗಿಯೇ ಇದೆ. ಸಿಒಡಿ ತನಿಖೆ ನಡೆಸಿ ಇದಕ್ಕೊಂದು ತಾರ್ಕಿಕ ಅಂತ್ಯ ಕೊಡಬೇಕೆಂದು ಒತ್ತಾಯಿಸಿದ್ದಾರೆ.

    ಟಿಪ್ಪು ಮತಾಂಧ ರಾಜ: ಟಿಪ್ಪು ಹೆಸರಿಗೆ ಬದಲಾಗಿ ಒಡೆಯರ್ ಎಕ್ಸ್‌ಪ್ರೆಸ್‌ (Wodeyar Express) ಹೆಸರನ್ನು ಇಟ್ಟಿದ್ದು, ಒಳ್ಳೆಯ ವಿಚಾರ. ಟಿಪ್ಪು ಲಕ್ಷಾಂತರ ಹಿಂದೂಗಳನ್ನ ಕೊಲೆ ಮಾಡಿದ ಮತಾಂಧ ರಾಜ. ಹೈದರ್ ಅಲಿ ಒಡೆಯರ್ ಆಸ್ಥಾನಲ್ಲಿ ಸೈನಿಕನಾಗಿದ್ದ. ಅವರೆಲ್ಲಾ ಮೋಸ ಮಾಡಿದವರು. ಆ ರೈಲಿಗೆ ಟಿಪ್ಪು ಅಂತಾ ಹೆಸರಿಟ್ಟಿದ್ದೇ ತಪ್ಪು. ಒಡೆಯರ್ ಅವರ ಹೆಸರು ಇಟ್ಟಿದ್ದು ಒಳ್ಳೆಯದೇ ಆಯ್ತು ಎಂದು ಶ್ಲಾಘಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಿಕ್ಷಕರ ನೇಮಕಾತಿ ವಿಳಂಬ – ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್

    ಶಿಕ್ಷಕರ ನೇಮಕಾತಿ ವಿಳಂಬ – ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್

    ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಸೋಮವಾರ ಶಿಕ್ಷಕರ ನೇಮಕಾತಿ ವಿಳಂಬವನ್ನು ವಿರೋಧಿಸಿ ನೂರಾರು ಶಿಕ್ಷಕ ಹುದ್ದೆಗಳ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದು, ಅವರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಇದೇ ವೇಳೆ ಪ್ರತಿಭಟನಾಕಾರನೊಬ್ಬ ನೆಲದ ಮೇಲೆ ಮಲಗಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟಿಸುತ್ತಿದ್ದಾಗ ಅಧಿಕಾರಿಗಳು ಅವನನ್ನು ಥಳಿಸಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ಪಾಟ್ನಾದ ದಕ್ ಬಾಂಗ್ಲಾ ಚೌರಾದಲ್ಲಿ ಪ್ರತಿಭಟನೆ ನಡೆದಿದ್ದು ವೀಡಿಯೊದಲ್ಲಿ, ಪಾಟ್ನಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೆ.ಕೆ ಸಿಂಗ್, ನೆಲದ ಮೇಲೆ ಮಲಗಿ ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದಿದ್ದ ವ್ಯಕ್ತಿಯನ್ನು ಥಳಿಸಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಬಳಿಕ ಧ್ವಜವನ್ನು ವ್ಯಕ್ತಿಯ ಕೈಯಿಂದ ಪೊಲೀಸರು ಕಿತ್ತುಕೊಂಡಿದ್ದಾರೆ.

    ಸಿಟಿಇಟಿ, ಬಿಟಿಇಟಿ ಉತ್ತೀರ್ಣರಾದ ಅಭ್ಯರ್ಥಿಗಳು ಪ್ರಾಥಮಿಕ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳನ್ನು ನಿಯೋಜಿಸಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಜಲಫಿರಂಗಿಗಳನ್ನು ಬಳಸಲಾಯಿತು. ಇದನ್ನೂ ಓದಿ: ನಾನು ಪ್ರಧಾನಿಯಾಗಲು ಬಯಸುವುದಿಲ್ಲ: ಅರವಿಂದ್ ಕೇಜ್ರಿವಾಲ್

    ನಾವು ನೇಮಕಾತಿಗಾಗಿ 2019ರಿಂದ ಕಾಯುತ್ತಿದ್ದೇವೆ. ಕಳೆದ 3 ವರ್ಷಗಳಿಂದ ಸರ್ಕಾರ ಕೇವಲ ಭರವಸೆಯನ್ನು ಮಾತ್ರ ನೀಡುತ್ತಿದೆ. ಸರ್ಕಾರ ರಚನೆಗೂ ಮುನ್ನ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮೊದಲ ಸಂಪುಟದಲ್ಲಿಯೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದ್ದರು. ಆದರೆ ಇಲ್ಲಿಯವರೆಗೂ ಏನೂ ಆಗಿಲ್ಲ ಎಂದು ಪ್ರತಿಭಟನಾಕಾರರು ಕಿಡಿ ಕಾರಿದ್ದಾರೆ.

    ರಾಜ್ಯದಲ್ಲಿ 20 ಲಕ್ಷ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದ ಶಿಕ್ಷಕ ಅಭ್ಯರ್ಥಿಯನ್ನು ಅಮಾನವೀಯವಾಗಿ ಥಳಿಸಲಾಗಿದೆ. ಬಿಹಾರ ಸರ್ಕಾರ ಹಾಗೂ ಅಧಿಕಾರಿಗಳು ಆತನ ಮುಖದಲ್ಲಿ ರಕ್ತ ಬರುವಂತೆ ಮಾಡಿದ್ದಲ್ಲದೇ ತ್ರಿವರ್ಣ ಧ್ವಜಕ್ಕೂ ಅವಮಾನ ಮಾಡಿದ್ದಾರೆ. ಇದು ಜೆಡಿಯು-ಆರ್‌ಜೆಡಿ ಸರ್ಕಾರದ ಅಸಲಿ ಮುಖ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮನೀಶ್ ಸಿಸೋಡಿಯಾ ಭಾರತ ರತ್ನಕ್ಕೆ ಅರ್ಹರು: ಅರವಿಂದ್ ಕೇಜ್ರಿವಾಲ್

    ಪ್ರತಿಭಟನೆಯನ್ನು ನಿಯಂತ್ರಣಕ್ಕೆ ತರಲು ಲಾಠಿಚಾರ್ಜ್ ಮಾಡಲಾಗಿತ್ತು. ಈ ವೇಳೆ ಎಸ್‌ಟಿಇಟಿ ಅಭ್ಯರ್ಥಿಯನ್ನು ಎಡಿಎಂ ಥಳಿಸಿರುವುದು ತಿಳಿದುಬಂದಿದೆ. ಈ ಘಟನೆ ಬಗ್ಗೆ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಅವರು ತಪ್ಪಿತಸ್ಥರು ಎಂಬುದು ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆ ಎಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]