Tag: ಶಾಹೀದ್ ಅಫ್ರಿದಿ

  • ಬಿಸಿಸಿಐಯನ್ನು ಟೀಕಿಸಿ ಕೊಹ್ಲಿ ಪರ ಅಫ್ರಿದಿ ಬ್ಯಾಟಿಂಗ್

    ಬಿಸಿಸಿಐಯನ್ನು ಟೀಕಿಸಿ ಕೊಹ್ಲಿ ಪರ ಅಫ್ರಿದಿ ಬ್ಯಾಟಿಂಗ್

    ನವದೆಹಲಿ: ಬಿಸಿಸಿಐ ಮತ್ತು ವಿರಾಟ್ ಕೊಹ್ಲಿ ನಡುವಿನ ವಿವಾದದ ಕುರಿತು ಅನೇಕರು ಪರಿಹಾರಕ್ಕೆ ಸಲಹೆಗಳನ್ನು ಕೊಡುತ್ತಿದ್ದಾರೆ. ಈ ವಿವಾದದ ಕುರಿತು ಪಾಕಿಸ್ತಾನದ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ ಕೂಡ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ.

                                               

    ಆಟಗಾರರು ಹಾಗೂ ಕ್ರಿಕೆಟ್ ಮಂಡಳಿಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿದ್ದರೆ ಮುಖಾಮುಖಿಯಾಗಿ ಮಾತನಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

    2021 ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನಂತರ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದರು. ಹಾಗೆಯೇ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕತ್ವದಲ್ಲಿ ಮುಂದುವರಿದು ಬ್ಯಾಟಿಂಗ್ ಕಡೆಗೆ ಹೆಚ್ಚಿನ ಗಮನ ನೀಡುವುದಾಗಿ ಕೊಹ್ಲಿ ಸ್ಪಷ್ಟ ಪಡಿಸಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಫೆ.12,13 ರಂದು ಐಪಿಎಲ್ ಮೆಗಾ ಹರಾಜು?

    ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಬಿಸಿಸಿಐ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಟಿ20 ತಂಡದ ನಾಯಕತ್ವ ತ್ಯಜಿಸುವಾಗ ಯಾರೂ ನನ್ನ ಬಳಿ ಮಾತನಾಡಿರಲಿಲ್ಲ ಎಂದು ಹೇಳುವ ಮೂಲಕ ಗಂಗೂಲಿಗೆ ಟಾಂಗ್ ಕೊಟ್ಟಿದ್ದರು.

    ಈ ವಿಚಾರವಾಗಿ ಶಾಹೀದ್ ಅಫ್ರಿದಿ ನೀವು ಈ ಎಲ್ಲಾ ವಿಚಾರಗಳನ್ನು ಮಾಧ್ಯಮದ ಮುಂದೆ ಮಾತನಾಡಿದರೆ ಸಮಸ್ಯೆಯಾಗುತ್ತದೆ. ಮುಖಾಮುಖಿ ಮಾತನಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದರೆ, ಇದನ್ನು ಅನಗತ್ಯವಾಗಿ ಕೆದಕುತ್ತಿದ್ದರೆ ಪರಿಹಾರ ಸಿಗುವುದಿಲ್ಲ. ಮಂಡಳಿ ಹಾಗೂ ಆಟಗಾರರ ನಡುವೆ ಯಾವುದೇ ಸಂವಹನದ ಅಂತರವಿರಬಾರದು ಎಂದು ಶಾಹೀದ್ ಅಫ್ರಿದಿ ಹೇಳುವ ಮೂಲಕ ಬಿಸಿಸಿಐ ನಡೆಯನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಟ್ರಸ್ಟ್ ಭೂ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿ – ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ

  • ಮೋದಿ ಪವರ್‌ನಲ್ಲಿ ಇರೋವರೆಗೂ ಇಂಡೋ-ಪಾಕ್ ಟೂರ್ನಿ ನಡೆಯಲ್ಲ: ಅಫ್ರಿದಿ

    ಮೋದಿ ಪವರ್‌ನಲ್ಲಿ ಇರೋವರೆಗೂ ಇಂಡೋ-ಪಾಕ್ ಟೂರ್ನಿ ನಡೆಯಲ್ಲ: ಅಫ್ರಿದಿ

    ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಅಧಿಕಾರದಲ್ಲಿ ಇರುವವರೆಗೂ ಭಾರತ ಹಾಗೂ ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸರಣಿ ನಡೆಯಲು ಸಾಧ್ಯವಿಲ್ಲ ಎಂದು ಮಾಜಿ ಆಟಗಾರ ಶಾಹೀದ್ ಅಫ್ರಿದಿ ಅಭಿಪ್ರಾಯ ಪಟ್ಟಿದ್ದಾರೆ.

    2012ರಿಂದ ದ್ವಿಪಕ್ಷೀಯ ಸರಣಿಗಳಿಂದ ದೂರವೇ ಉಳಿದಿರುವ ಪಾಕಿಸ್ತಾನ ಹಾಗೂ ಟೀಂ ಇಂಡಿಯಾ ತಂಡಗಳು ಐಸಿಸಿ ಹಾಗೂ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಎದುರಾಗುತ್ತಿವೆ. ಆದರೆ ಕಳೆದ ವರ್ಷ ಪಾಕ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ಐಸಿಸಿಗೆ ಭಾರತದ ವಿರುದ್ಧ ದೂರು ನೀಡಿ ದ್ವಿಪಕ್ಷೀಯ ಸರಣಿ ಆಡುವಂತೆ ಇಲ್ಲವೇ ಪರಿಹಾರ ಮೊತ್ತ ನೀಡುವಂತೆ ಕೋರಿತ್ತು. ಆದರೆ ಈ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು. ಇತ್ತ ಬಿಸಿಸಿಐ ಕೂಡ ಪಾಕ್ ಮನವಿಗೆ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡಿರಲಿಲ್ಲ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಪಾಕ್ ಮಾಜಿ ಆಟಗಾರ ಶಾಹೀದ್ ಅಫ್ರಿದಿ, ಪಾಕ್-ಭಾರತ ನಡುವೆ ಸರಣಿ ನಡೆದಿರಲು ಪ್ರಧಾನಿ ಮೋದಿ ಕಾರಣ. ಅವರು ಅಧಿಕಾರದಲ್ಲಿ ಇರುವವರೆಗೂ ಟೂರ್ನಿ ನಡೆಯುವುದು ಅನುಮಾನ. ಮೋದಿ ಅಜೆಂಡಾ ಏನೆಂದು ಭಾರತೀಯರಿಗೂ ಅರಿವಿದೆ. ಮೋದಿ ಯಾವಾಗಲೂ ಋಣಾತ್ಮಕ ಆಲೋಚನೆಗಳನ್ನೇ ಹೊಂದಿರುತ್ತಾರೆ. ಅವರ ಕಾರಣದಿಂದಲೇ ಎರಡು ದೇಶಗಳ ನಡುವಿನ ಸ್ನೇಹ ವಾತಾವರಣಕ್ಕೆ ಹೊಡೆತ ಬಿದ್ದಿದೆ ಎಂದು ಹೇಳಿದ್ದಾರೆ.

    ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಲು ಪಿಸಿಬಿ ಕೈಗೊಂಡಿರುವ ಪ್ರಯತ್ನಗಳಿಗೆ ಅಫ್ರಿದಿ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಕ್ರಿಕೆಟ್‍ನಲ್ಲಿ ವಿವಿಧ ದೇಶಗಳ ಕ್ರಿಕೆಟಿಗರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಪಾಕ್ ಪ್ರವಾಸವನ್ನು ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

    ಪಾಕಿಸ್ತಾನದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ಭಾಗಿಯಾಗದಿದ್ದರೆ ಮುಂದಿನ ವರ್ಷ ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಭಾಗವಹಿಸುವುದಿಲ್ಲ ಎಂದು ಪಿಸಿಬಿ ಈಗಾಗಲೇ ಹೇಳಿದೆ. ಆದರೆ ಪಿಸಿಬಿಯ ಎಚ್ಚರಿಕೆಗಳಿಗೆ ಬಿಸಿಸಿಐ ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಸಂಕಷ್ಟಕ್ಕೆ ಒಳಗಾಗಿರುವ ಪಾಕ್, ಭಾರತವಿಲ್ಲದೇ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಸಿದರೆ ನಷ್ಟ ಸಂಭವಿಸಲಿದೆ. ಆದ್ದರಿಂದ ಪಾಕ್‍ನಲ್ಲಿ ಟೂರ್ನಿಯನ್ನು ಆಯೋಜಿಸುವುದರ ಬದಲು ಯುಎಇನಲ್ಲಿ ಟೂರ್ನಿ ಆಯೋಜಿಸುವ ಚಿಂತನೆಯಲ್ಲಿದೆ ಎನ್ನಲಾಗಿದೆ.

  • ಪಿಓಕೆ ಸಮಸ್ಯೆಯನ್ನ ನಾವೇ ಇತ್ಯರ್ಥಗೊಳಿಸುತ್ತೇವೆ – ಅಫ್ರಿದಿಗೆ ಗಂಭೀರ್ ತಿರುಗೇಟು

    ಪಿಓಕೆ ಸಮಸ್ಯೆಯನ್ನ ನಾವೇ ಇತ್ಯರ್ಥಗೊಳಿಸುತ್ತೇವೆ – ಅಫ್ರಿದಿಗೆ ಗಂಭೀರ್ ತಿರುಗೇಟು

    ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಭಾರತ ಸರ್ಕಾರದ ನಿರ್ಧಾರವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಟೀಕಿಸಿದ್ದಾರೆ. ಇದಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದ್ದಾರೆ.

    ವಿಶ್ವಸಂಸ್ಥೆ ನಿರ್ಣಯದ ಪ್ರಕಾರ ಕಾಶ್ಮೀರಿಗಳಿಗೆ ಅವರ ಹಕ್ಕುಗಳನ್ನು ನೀಡಬೇಕು. ನಮ್ಮಲ್ಲೆರಂತೆಯೇ ಅವರಿಗೂ ಸ್ವಾತಂತ್ರ್ಯದ ಹಕ್ಕು ನೀಡಬೇಕು. ವಿಶ್ವಸಂಸ್ಥೆಯನ್ನು ರಚಿಸಿದ್ದು ಯಾಕೆ ಮತ್ತು ಅದು ಯಾಕೆ ನಿದ್ರಿಸುತ್ತಿದೆ? ಕಾಶ್ಮೀರದಲ್ಲಿ ಮಾನವೀಯತೆಯ ವಿರುದ್ಧ ನಡೆಯುತ್ತಿರುವ ಅಪ್ರಚೋದಿತ ಆಕ್ರಮಣವನ್ನು ಗಮನಿಸಬೇಕು. ಈ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಬೇಕು ಎಂದು ಶಾಹೀದ್ ಅಫ್ರಿದಿ ಟ್ವೀಟ್ ಮಾಡಿದ್ದಾರೆ.

    ಇದಕ್ಕೆ ಖಾರವಾಗಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರು ಗೌತಮ್ ಗಂಭೀರ್ ಅವರು, ಶಾಹೀದ್ ಆಫ್ರಿದಿ ಅವರು ವಿಷಯದ ಮೇಲೆ ಬೆಳಕು ಚೆಲ್ಲಿದ್ದಾರೆ. ಅಲ್ಲಿ ಅಪ್ರಚೋದಿತ ಆಕ್ರಮಣ ಹಾಗೂ ಮಾನವೀಯತೆಯ ವಿರುದ್ಧ ಅಪರಾಧಗಳು ನಡೆಯುತ್ತಿದೆ. ಇದನ್ನು ಉಲ್ಲೇಖಿಸಿದ್ದಕ್ಕೆ ನಾವರನ್ನು ಶ್ಲಾಘಿಸಬೇಕು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇವೆಲ್ಲವೂ ನಡೆಯುತ್ತಿದೆ ಎಂದು ಹೇಳುವುದನ್ನು ಆಫ್ರಿದಿ ಮರೆತಿದ್ದಾರೆ. ಚಿಂತಿಸಬೇಡಿ, ನಾವು ಪಿಓಕೆ ಇತ್ಯರ್ಥಗೊಳಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

  • 14 ಎಸೆತಗಳಲ್ಲಿಯೇ ಅರ್ಧ ಶತಕ ಸಿಡಿಸಿದ ಅಫ್ರಿದಿ- ವಿಡಿಯೋ ನೋಡಿ

    14 ಎಸೆತಗಳಲ್ಲಿಯೇ ಅರ್ಧ ಶತಕ ಸಿಡಿಸಿದ ಅಫ್ರಿದಿ- ವಿಡಿಯೋ ನೋಡಿ

    ಶಾರ್ಜಾ: ಕ್ರಿಕೆಟ್ ಮಾದರಿಗೆ ಹೊಸ ರೂಪು ನೀಡುವಂತೆ ನಡೆಯುತ್ತಿರುವ ಟಿ10 ಲೀಗ್ ಬ್ಯಾಟ್ಸ್ ಮನ್‍ಗಳ ಪಾಲಿನ ಸ್ವರ್ಗವಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಹೇಳಿರುವ ಶಾಹೀದ್ ಅಫ್ರಿದಿ ಕೇವಲ 14 ಎಸೆತಗಳಲ್ಲೇ ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

    ಯುಎಇನಲ್ಲಿ ನಡೆಯುತ್ತಿರುವ ಟಿ10 ಕ್ರಿಕೆಟ್ ಲೀಗ್‍ನ ನಾರ್ಥನ್ ವಾರಿಯರ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅಫ್ರಿದಿ ಭರ್ಜರಿ ಪ್ರದರ್ಶನ ನೀಡಿದ್ದು, 17 ಎಸೆತಗಳಲ್ಲಿ 59 ರನ್ ಗಳಿಸಿದ್ದಾರೆ. ಪಂದ್ಯದ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ ಅಫ್ರಿದಿ 7 ಸಿಕ್ಸರ್, 3 ಬೌಂಡರಿ ಸಿಡಿಸಿದರು.

    ಟಿ10 ಟೂರ್ನಿಯಲ್ಲಿ ಅಫ್ರಿದಿ ಪಾಕ್ತೂನ್ಸ್ ತಂಡವನ್ನು ಮುನ್ನಡೆಸುತ್ತಿದ್ದು, ನಾರ್ಥನ್ ವಾರಿಯರ್ಸ್ ವಿರುದ್ಧ ಗೆಲುವಿನ ಮೂಲಕ ತಂಡವನ್ನು ಫೈನಲ್ ಪ್ರವೇಶಿಸುವಂತೆ ಮಾಡಿದ್ದಾರೆ. ಇದಕ್ಕೂ ಮುನ್ನ ಪಾಕ್ತೂನ್ಸ್ ತಂಡ ನೀಡಿದ್ದ 135 ರನ್ ಗಳ ಬೃಹತ್ ಗುರಿಯನ್ನ ಬೆನ್ನತ್ತಿದ ನಾರ್ಥನ್ ವಾರಿಯರ್ಸ್ ತಂಡ ರೋವ್ ಮ್ಯಾನ್ ಪೊವೆಲ್ ಬಿರುಸಿನ ಬ್ಯಾಟಿಂಗ್ ಬಳಿಕವೂ ನಿಗದಿತ 10 ಓವರ್ ಗಳಲ್ಲಿ 122 ರನ್ ಗಳಿಸಿತು. ನಾರ್ಥನ್ಸ್ ಪರ ಪೊವೆಲ್ 35 ಎಸೆತಗಳಲ್ಲಿ 80 ರನ್ ಸಿಡಿಸಿದರು.

    https://www.youtube.com/watch?v=HZuLenK-PCg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಫ್ರಿದಿಗೆ `ಬೂಮ್ ಬೂಮ್’ ಎಂದು ಹೆಸರಿಟ್ಟಿದ್ದು ಟೀಂ ಇಂಡಿಯಾ ಆಟಗಾರ!

    ಅಫ್ರಿದಿಗೆ `ಬೂಮ್ ಬೂಮ್’ ಎಂದು ಹೆಸರಿಟ್ಟಿದ್ದು ಟೀಂ ಇಂಡಿಯಾ ಆಟಗಾರ!

    ನವದೆಹಲಿ: ಪಾಕಿಸ್ತಾನದ ಮಾಜಿ ಆಟಗಾರ ಶಾಹೀದ್ ಅಫ್ರಿದಿ ತಮ್ಮ ಸಿಕ್ಸರ್ ಸಿಡಿಸುವ ಶೈಲಿಯಿಂದ ಹೆಚ್ಚು ಖ್ಯಾತಿ ಪಡೆದಿದ್ದು, ಸದ್ಯ ಅವರಿಗೆ `ಬೂಮ್ ಬೂಮ್’ ಅಫ್ರಿದಿ ಎಂಬ ಹೆಸರು ನೀಡಿದ್ದು ಟೀಂ ಇಂಡಿಯಾ ಆಟಗಾರ ಎಂದು ರಿವೀಲ್ ಮಾಡಿದ್ದಾರೆ.

    ಅಂತರಾಷ್ಟ್ರೀಯ ಕ್ರಿಕೆಟ್ ಗೆ ಈಗಾಗಲೇ ವಿದಾಯ ಘೋಷಿಸುವ ಅಫ್ರಿದಿ ತಮ್ಮ ವೃತ್ತಿ ಜೀವನದಲ್ಲಿ 476 ಸಿಕ್ಸರ್ ಸಿಡಿಸಿ, ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಜೊತೆಗೆ ಸ್ಥಾನ ಪಡೆದಿದ್ದಾರೆ. ಸದ್ಯ ಅಫ್ರಿದಿ ಅಭಿಮಾನಿಯೊಬ್ಬರು ಈ ಕುರಿತು ಪ್ರಶ್ನೆ ಮಾಡಿ ಟ್ವೀಟ್ ಮಾಡಿದ್ದು, ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಅಫ್ರಿದಿ ಟೀಂ ಇಂಡಿಯಾದ ಮಾಜಿ ಆಟಗಾರ ರವಿಶಾಸ್ತ್ರಿ ತಮ್ಮ ಹೆಸರಿನ ಮುಂದೆ ಬೂಮ್ ಬೂಮ್ ಎಂದು ಸೇರಿಸಿದ್ದರು ಎಂದು ತಿಳಿಸಿದ್ದಾರೆ.

    ರವಿಶಾಸ್ತ್ರಿ ಸದ್ಯ ಟೀಂ ಇಂಡಿಯಾದ ಮುಖ್ಯ ಕೋಚ್ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮುನ್ನ ವೀಕ್ಷಕ ವಿವರಣೆಕಾರರಾಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ತಮಗೆ ಬೂಮ್ ಬೂಮ್ ಅಫ್ರಿದಿ ಎಂದು ಹೆಸರು ನೀಡಿದ್ದಾಗಿ ವಿವರಿಸಿದ್ದಾರೆ.

    1996 ರಲ್ಲಿ ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಅಫ್ರಿದಿ ತಮ್ಮ ವೃತ್ತಿ ಜೀವನದಲ್ಲಿ 117.01 ಸ್ಟ್ರೈಕ್ ರೇಟ್ ನಿಂದ ಮೂರು ಮಾದರಿಯ ಕ್ರಿಕೆಟ್‍ನಲ್ಲಿ 11,186 ರನ್ ರನ್ ಗಳಿಸಿದ್ದಾರೆ. ಅಲ್ಲದೇ 541 ವಿಕೆಟ್ ಗಳಿಸಿ ಮಿಂಚಿದ್ದಾರೆ. ಅಲ್ಲದೇ 1996 ರಲ್ಲಿ ಶ್ರೀಲಂಕಾ ವಿರುದ್ಧದ ನಡೆದ ಪಂದ್ಯವೊಂದರಲ್ಲಿ 37 ಎಸೆತಗಳಲ್ಲಿ ಶತಕ ಸಿಡಿದ ಸಾಧನೆಯನ್ನು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv