Tag: ಶಾಸಕ ಸಾ ರಾ ಮಹೇಶ್

  • ಮಗನನ್ನು ನೆನೆದು ಕಣ್ಣೀರು ಹಾಕಿದ ಶಾಸಕ ಸಾ.ರಾ ಮಹೇಶ್

    ಮಗನನ್ನು ನೆನೆದು ಕಣ್ಣೀರು ಹಾಕಿದ ಶಾಸಕ ಸಾ.ರಾ ಮಹೇಶ್

    ಮೈಸೂರು: ಜಿಲ್ಲೆಯ ಕೆಆರ್ ನಗರದ ಜೆಡಿಎಸ್ ಶಾಸಕ ಸಾರಾ ಮಹೇಶ್ ಸಭೆಯೊಂದರಲ್ಲಿ ತಮ್ಮ ಮಗನನ್ನು ನೆನೆದು ಕಣ್ಣೀರು ಹಾಕಿದ್ದಾರೆ.

    ಮೈಸೂರಿನ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ನಡೆದ ಸರ್ಕಾರಿ ಶಿಕ್ಷಕರ ವಾರ್ಷಿಕೋತ್ಸವ ಸಮಾರಂಭದಲ್ಲಿ ತಮ್ಮ ಪುತ್ರ ಜಯಂತ್ ರನ್ನು ನೆನೆದ ಅವರು ಭಾವುಕರಾದರು. ನನ್ನ ಹೆಸರು ಕೆಡಿಸುವ ಹುನ್ನಾರ ಮಾಡಿ ನನ್ನ ಮಗನ ಹಳೆಯ ವಿಡಿಯೋ ಇಟ್ಟುಕೊಂಡು ಅವಮಾನಿಸಿದ್ದಾರೆ. ಇಂತಹ ರಾಜಕಾರಣ ಬೇಕಾ? ನನಗೆ ಸಾಕಾಗಿದೆ ಎಂದು ಕಣ್ಣೀರು ಹಾಕಿದರು. ಮಗನನ್ನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸಿದ್ದು, ಮನೆಯಿಂದ ಹೊರಡುವಾಗಲೂ ಮಾತನಾಡಿಸಲು ಆಗಲಿಲ್ಲ ಎಂದರು.

    ಕಳೆದ ಕೆಲ ತಿಂಗಳ ಸಾರಾ ಮಹೇಶ್ ಅವರ ಪುತ್ರ ಯುವಕನೊಬ್ಬನ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆ ನಡೆದ ಒಂದು ವರ್ಷದ ಬಳಿಕ ವಿಡಿಯೋ ಬಿಡುಗಡೆ ಮಾಡಲಾಗಿತ್ತು.

    ಶಾಸಕ ಮಹೇಶ್ ಅವರ ಪುತ್ರನ ಸ್ನೇಹಿತನ ಚಿನ್ನದ ಸರ ಕದ್ದ ಕಳ್ಳ ವಿಡಿಯೋದಲ್ಲಿ ಒದೆತಿಂದ ಯುವಕನಾಗಿದ್ದು, ಕಳ್ಳತನ ಮಾಡಿರುವ ಕುರಿತು ಆರೋಪಿಯನ್ನು ವಿಚಾರಣೆ ನಡೆಸುವ ವೇಳೆ ಆತನ ಮೇಲೆ ಹಲ್ಲೆ ಮಾಡಲಾಗಿತ್ತು. ಇದನ್ನೂ ಓದಿ:  ಜೆಡಿಎಸ್ ಶಾಸಕರ ಪುತ್ರ ಯುವಕನಿಗೆ ಥಳಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

  • ಮೈಸೂರಲ್ಲಿ ಜೆಡಿಎಸ್ ಎಂಎಲ್‍ಎ ಪುತ್ರನ ದರ್ಪ- ಯುವಕನಿಗೆ ಸಾರಾ ಮಹೇಶ್ ಪುತ್ರನಿಂದ ಥಳಿತ

    ಮೈಸೂರಲ್ಲಿ ಜೆಡಿಎಸ್ ಎಂಎಲ್‍ಎ ಪುತ್ರನ ದರ್ಪ- ಯುವಕನಿಗೆ ಸಾರಾ ಮಹೇಶ್ ಪುತ್ರನಿಂದ ಥಳಿತ

    ಮೈಸೂರು: ಇಲ್ಲಿನ ಕೆ.ಆರ್ ನಗರದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಅವರ ಪುತ್ರ ದರ್ಪ ಮೆರೆದಿರೋ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ನಾಲ್ಕೈದು ಮಂದಿ ಜೊತೆಗೂಡಿ ಯುವಕನೊಬ್ಬನ ಕೈ ಕಟ್ಟಿಸಿ ಮನಬಂದಂತೆ ಥಳಿಸುತ್ತಿದ್ದಾರೆ. ಅದರಲ್ಲೂ ಶಾಸಕ ಸಾ.ರಾ. ಮಹೇಶ್ ಅವರ ಮಗ ಜಯಂತ್ ಕಟ್ಟಿಗೆಯ ಕೋಲು ಹಿಡಿದುಕೊಂಡು ಯುವಕನಿಗೆ ಮನಬಂದಂತೆ ಥಳಿಸಿದ್ದಾನೆ.

    ದಮ್ಮಯ್ಯ ಬಿಟ್ಟುಬಿಡಿ ಅಂದ್ರು ಬಿಡದೇ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ತಾನು ಯುವಕನಿಗೆ ಥಳಿಸುತ್ತಿರುವ ವೀಡಿಯೋವನ್ನು ರೆಕಾರ್ಡ್ ಮಾಡುತ್ತಿರುವುದು ಶಾಸಕನ ಮಗನಿಗೆ ಗೊತ್ತಿದೆ. ತನ್ನ ದರ್ಪವನ್ನು ಪ್ರದರ್ಶನಕ್ಕಿಡಲು ಬೇಕಂತಲೇ ವಿಡಿಯೋ ಮಾಡಿದ್ದಾರೆ ಎನ್ನಲಾಗ್ತಿದೆ.

    ಅಂದಹಾಗೆ ಈ ಘಟನೆ ನಡೆದು ಒಂದೂವರೆ ವರ್ಷವಾಗಿದೆ. ಈಗ ರಾಜಕೀಯ ದುರುದ್ದೇಶದಿಂದ ವೀಡಿಯೋ ಬಿಡುಗಡೆ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಘಟನೆ ನಡೆದು ಎಷ್ಟು ದಿನವಾದರೂ ಆಗಲಿ. ಹೀಗೇ ಒಬ್ಬ ವ್ಯಕ್ತಿಯ ಮೇಲೆ ದೌರ್ಜನ್ಯ ಮಾಡೋದು ಎಷ್ಟು ಸರಿ. ಶಾಸಕರೇ ಇದೇನಾ ನಿಮ್ಮ ಪುತ್ರನಿಗೆ ನೀವು ಕಲಿಸಿರೋ ಸಂಸ್ಕೃತಿ ಅಂತ ಜನಸಾಮಾನ್ಯರು ಪ್ರಶ್ನಿಸಿದ್ದಾರೆ.