Tag: ಶಾಸಕ ರಾಜೂಗೌಡ

  • ಸಿಎಂ ರಾಜೀನಾಮೆ ಮಾತುಗಳ ಹಿಂದಿನ ರಹಸ್ಯ ತಿಳಿಸಿದ ಶಾಸಕ ರಾಜೂಗೌಡ

    ಸಿಎಂ ರಾಜೀನಾಮೆ ಮಾತುಗಳ ಹಿಂದಿನ ರಹಸ್ಯ ತಿಳಿಸಿದ ಶಾಸಕ ರಾಜೂಗೌಡ

    ಯಾದಗಿರಿ: ಸೋತು ಯಡಿಯೂರಪ್ಪನವರ ಆಶೀರ್ವಾದದಿಂದ ಸಚಿವರಾದವರು ನಡೆಸಿದ ಹುನ್ನಾರದಿಂದ ಸಿಎಂ ಮನನೊಂದು ರಾಜೀನಾಮೆ ಮಾತುಗಳನ್ನಾಡಿದ್ದಾರೆ ಎಂದು ಸುರಪುರ ಶಾಸಕ ರಾಜೂಗೌಡ ಹೇಳಿದ್ದಾರೆ.

    ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಮುಂದಿನ ಎರಡು ವರ್ಷ ಸಿಎಂ ಯಡಿಯೂರಪ್ಪ ಅಂತ ಈಗಾಗಲೇ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಮತ್ತು ಅನಂತಕುಮಾರ್ ಪರಿಶ್ರಮ ಸಾಕಷ್ಟಿದೆ. ಜನರಿಂದ ಆಯ್ಕೆದ ಪಕ್ಷದ ಎಲ್ಲಾ ಶಾಸಕರ ಬೆಂಬಲ ನಿಮಗಿದೆ ಎಂದು ಪರೋಕ್ಷವಾಗಿ ಸಚಿವರ ಸಿ.ಪಿ.ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.

    ಯಡಿಯೂರಪ್ಪ ಸರ್ ನಿಮ್ಮ ಹೋರಾಟದ ಹಾದಿ ಬಗ್ಗೆ ನಿಮ್ಮ ರಾಜಕೀಯ ಜೀವನದ ಬಗ್ಗೆ ರಾಜ್ಯದ ಜನತೆ ಗೊತ್ತು. ನಿಮ್ಮ ಹೇಳಿಕೆಯಿಂದ ಲಕ್ಷಾಂತರ ಪಕ್ಷದ ಕಾರ್ಯಕರ್ತರಿಗೆ ನೋವಾಗಿದೆ. ನಿಮ್ಮ ಜೊತೆಗೆ ಸಂಘ ಪರಿವಾರ, ಪಕ್ಷ ಜನರು ಇದ್ದಾರೆ ಅಂತ ತಮ್ಮ ಬೆಂಬಲ ನೀಡಿದ್ದಾರೆ ಎಂದರು. ಇದನ್ನೂ ಓದಿ:ಎಲ್ಲಿಯವರೆಗೆ ಹೈಕಮಾಂಡ್‍ಗೆ ವಿಶ್ವಾಸ ಇರುತ್ತೋ ಅಲ್ಲಿವರೆಗೂ ನಾನು ಸಿಎಂ ಆಗಿರುತ್ತೇನೆ – ಬಿಎಸ್‍ವೈ 

    ಸಿಎಂ ಹೇಳಿದ್ದೇನು?: ನಾನು ಯಾರ ಬಗ್ಗೆಯೂ ಟೀಕೆ ಮಾಡಲು ಹೋಗುವುದಿಲ್ಲ. ಬಿಜೆಪಿಗೆ ಪರ್ಯಾಯದ ವ್ಯಕ್ತಿ ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ರಾಜ್ಯದಲ್ಲಿ ದೇಶದಲ್ಲಿ ಪರ್ಯಾಯ ನಾಯಕರು ಇದ್ದಾರೆ. ಕರ್ನಾಟಕದಲ್ಲೂ ಪರ್ಯಾಯ ವ್ಯಕ್ತಿಗಳು ಇಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಎಲ್ಲಿಯವರೆಗೆ ಹೈಕಮಾಂಡ್ ವಿಶ್ವಾಸ ಇರುತ್ತೋ ಅಲ್ಲಿವರೆಗೂ ನಾನು ಸಿಎಂ ಆಗಿರುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಕಮಲ ಕ್ರಾಂತಿಯ ಮುನ್ಸೂಚನೆ ನೀಡಿದೆಯಾ ಬಿಜೆಪಿ ಹೈಕಮಾಂಡ್?

    ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜಕಾರಣಿಗಳಲ್ಲಿ ಬಹಳ ತಂತ್ರ ಇರುತ್ತದೆ. ರಾಜಕಾರಣದಲ್ಲಿ ಒಂದು ನೀತಿ ಇದೆ. ಹೇಳೋದೊಂದು ಮಾಡೊದೊಂದು ಇರುತ್ತದೆ. ರಾಜಕಾರಣದಲ್ಲಿ ಯಡಿಯೂರಪ್ಪನವರ ತಂತ್ರ ಬೇರೆ. ಯಡಿಯೂರಪ್ಪ ಇರೋದರಲ್ಲಿ ಗಟ್ಟಿ ಮನುಷ್ಯ. ಅವರ ನಾಯಕತ್ವದಲ್ಲಿ 104 ಸೀಟ್ ಬಂದಿದೆ. ಅವರ ನಾಯಕತ್ವದಡಿಯಲ್ಲಿ ನಮ್ಮ ಸ್ನೇಹಿತರು ಅಲ್ಲಿಗೆ ಹೋದರು. ಈಗ ಸುಮ್ಮನೆ ಅವರನ್ನು ತಗೆದು ಹಾಕುವ ಮಾತು ಅವರ ಪಾರ್ಟಿಗೆ ಬಿಟ್ಟಿದ್ದು ಎಂದಿದ್ದರು. ಇದನ್ನೂ ಓದಿ: ಸಿಎಂ ಬಿಎಸ್‍ವೈ ಬದಲಾವಣೆ ವದಂತಿ – ಹೈಕಮಾಂಡ್ ಮುಂದಿರುವ 4 ಆಯ್ಕೆ ಏನು?

  • ಮೀಸಲಾತಿ ವಿಚಾರವಾಗಿ ಶ್ರೀಗಳು ರಾಜೀನಾಮೆ ನೀಡು ಅಂದ್ರೆ ನೀಡುತ್ತೇನೆ: ರಾಜೂಗೌಡ

    ಮೀಸಲಾತಿ ವಿಚಾರವಾಗಿ ಶ್ರೀಗಳು ರಾಜೀನಾಮೆ ನೀಡು ಅಂದ್ರೆ ನೀಡುತ್ತೇನೆ: ರಾಜೂಗೌಡ

    ಯಾದಗಿರಿ: ಮೀಸಲಾತಿ ವಿಚಾರವಾಗಿ ನಮ್ಮ ಶ್ರೀಗಳು ರಾಜೀನಾಮೆ ನೀಡು ಎಂದರೇ ನಾನು ರಾಜೀನಾಮೆ ನೀಡುತ್ತೇನೆ. ವಿರೋಧ ಪಕ್ಷದಲ್ಲಿ ಇದ್ದಾಗ ಹೇಳಿದ ಮಾತನ್ನೇ ಈಗಲೂ ಹೇಳುತ್ತೇನೆ ಎಂದು ಸುರಪುರ ಬಿಜೆಪಿ ಶಾಸಕ ಮತ್ತು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ರಾಜೂಗೌಡ ಹೇಳಿಕೆ ನೀಡಿದ್ದಾರೆ.

    ಎಸ್‍ಟಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರವಾಗಿ ಮಾತನಾಡಿದ ಅವರು, ನಾನು ವಿರೋಧ ಪಕ್ಷದಲ್ಲಿ ಇದ್ದಾಗ ರಾಜೂಗೌಡ ತಂದೆ ಶಂಬನಗೌಡ ಅಂತ ನನ್ನ ಹೆಸರು ಇತ್ತು. ಇವತ್ತು ಆಡಳಿತ ಪಕ್ಷದಲ್ಲಿದ್ದೇನೆ, ಇಂದು ಕುಡ ನನ್ನ ಹೆಸರು ರಾಜೂಗೌಡ ತಂದೆ ಶಂಬನಗೌಡ ಅಂತ ಇದೆ. ನಾನು ನನ್ನ ತಂದೆ ಮಗ, ನಾನು ನಮ್ಮ ಶ್ರೀಗಳಿಗೆ ನೀಡಿದ ಮಾತಿಗೆ ಇಂದಿಗೂ ಬದ್ಧ. ನಮ್ಮ ಶ್ರೀಗಳು ವಿಧಾನಸಭೆಯಲ್ಲಿ ಹೋರಾಟ ಮಾಡು ಎಂದರೂ ಮಾಡುತ್ತೇನೆ. ಶ್ರೀಗಳ ಆಜ್ಞೆ ಏನು ಇರುತ್ತೋ ಅದನ್ನು ಪಾಲಿಸುತ್ತೇನೆ ಎಂದರು.

    ನಾವು ಇನ್ನೂ ಹುಡುಗರಿದ್ದು, ಮೈಯಲ್ಲಿ ಜೋಶ್ ಇದೆ. ಏನು ಬೇಕಾದರೂ ಮಾತನಾಡುತ್ತೇವೆ. ಆದರೆ ನಮ್ಮ ಹಿಂದೆ ಸತೀಶ್ ಜಾರಕಿಹೊಳಿಯಂತ ಹಿರಿಯರು ಇದ್ದಾರೆ. ಅವರ ಮಾರ್ಗದಲ್ಲಿ ನಮ್ಮ ಹೋರಾಟ ಮುಂದುವರಿಸುತ್ತೇವೆ. ಸಂಪುಟ ವಿಸ್ತರಣೆಗೆ ನಮ್ಮ ಮುಖ್ಯಮಂತ್ರಿಗಳು ಮನಸ್ಸು ಮಾಡಿದ್ದಾರೆ. ಈ ಬಾರಿಯಾದರೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸ್ಥಾನ ನೀಡಬೇಕು ಎಂಬುದು ನಮ್ಮ ಒತ್ತಾಯಿದೆ ಎಂದರು.

    ಇದೇ ವೇಳೆ ಡ್ರಗ್ಸ್ ಮಾಫಿಯಾ ಕುರಿತು ಮಾತನಾಡಿದ ಅವರು, ನಶೆಗೆ ಯಾವ ಫಿಲ್ಮ್ ಸ್ಟಾರ್ ಇಲ್ಲ, ಮುಖ್ಯಮಂತ್ರಿ ರಾಜಕಾರಣಿನೂ ಇಲ್ಲ. ಯಾರು ನಶೆಯಿಂದ ಬಿಳುತ್ತಾರೋ ಅಂತಹವರು ಅದಕ್ಕೆ ಒಳಗಾಗುತ್ತಾರೆ. ಯಾರು ಉಪ್ಪು ತಿನ್ನುತ್ತಾರೋ ಅವರು ನೀರು ಕುಡಿಯುತ್ತಾರೆ ಎಂದರು.

    ನಟ-ನಟಿಯರನ್ನು ಮತ್ತು ರಾಜಕಾರಣಿಗಳನ್ನು ಜನರ ಫಾಲೋ ಮಾಡುತ್ತಾರೆ. ಈ ಡ್ರಗ್ಸ್ ಚಟಕ್ಕೆ ಅವರು ಬಿದ್ದ ಮೇಲೆ ನಟ-ನಟಿಯರು ನಶೆಯನ್ನು ಫಾಲೋ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳತ್ತಾರೆ. ಮುಖ್ಯ ಮಂತ್ರಿಗಳು ಮತ್ತು ಗೃಹ ಸಚಿವರು ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಗಳ ಎಸ್‍ಪಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ರಾಜ್ಯ ಮೂಲೆ ಮೂಲೆಗಳಲ್ಲಿ ಈ ಡ್ರಗ್ ಜಾಲ ಪತ್ತೆ ಮಾಡಲು ಕ್ರಮ ತೆಗೆದುಕೊಂಡಿದ್ದಾರೆ. ಈ ಮೂಲಕ ರಾಜ್ಯವನ್ನು ಡ್ರಗ್ ಮುಕ್ತ ಮಾಡಲು ಸಿದ್ಧರಾಗಿದ್ದಾರೆ ಎಂದರು.

    ಯಾರು ಪೇಜ್ 3 ಪಾರ್ಟಿ ಮಾಡುತ್ತಾರೋ ಅವರು ಈ ಡ್ರಗ್ ಚಟಕ್ಕೆ ಬೀಳುತ್ತಾರೆ. ನಾವು ಪಾರ್ಟಿ ಮಾಡುವಾಗ ನಮಗೂ ಸಾಕಷ್ಟು ಮಂದಿ ನೀನು ಕುಡಿಯಲ್ಲಾ ಅಂತ ಗೇಲಿ ಮಾಡಿದ್ದಾರೆ. ನಮ್ಮ ಮೈಂಡ್ ಸ್ಟ್ರಾಂಗ್ ಇದೆ ಅದಕ್ಕೆ ನಾವು ಅದರ ಹತ್ತಿರ ಹೋಗಲ್ಲ. ಆದರೆ ಗೇಲಿ ಮಾಡೋರ ಮಾತು ಕೇಳಲಾಗದೆ ಕೆಲವರು ರುಚಿ ನೋಡಲು ಮುಂದಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಇತ್ತೀಚೆಗೆ ಡ್ಯಾಮೇಜಿಂಗ್ ಹೇಳಿಕೆಗಳು ಹೆಚ್ಚಾಗುತ್ತಿವೆ. ಸತ್ಯ ಯಾವುದೋ ಸುಳ್ಳು ಯಾವುದೋ ಗೊತ್ತಾಗತ್ತಿಲ್ಲ. ಪ್ರಶಾಂತ ಸಂಬರಗಿ ಎನ್ನುವರು ಜಮೀರ್ ಅಹ್ಮದ್ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಶಾಸಕರ ಮೇಲೆ ಗಂಭೀರ ಆರೋಪ ಮಾಡುವಾಗ ಸಂಬಂಧಿಸಿದ ದಾಖಲೆ ಇದ್ದರೆ ಕೇಸ್ ದಾಖಲಿಸಬೇಕು. ಜಮೀರ್ ಕ್ಯಾಸಿನೊಗೆ ಹೋದಾಗ ಸಂಜನಾ ಇದ್ದರೋ ಇಲ್ಲವೋ ಎಂಬುವುದು ತನಿಖೆಯಿಂದ ಹೊರ ಬರುತ್ತೆ ಎಂದರು.

  • ಆನಂದ್ ಸಿಂಗ್ ಸ್ಥಿತಿ ನೋಡಿ ಬಹಳ ಗಾಬರಿ ಆಯ್ತು, ಅದು ರಾಕ್ಷಸರು ಮಾಡೋ ಕೆಲಸ: ಶಾಸಕ ರಾಜೂಗೌಡ ಆಕ್ರೋಶ

    ಆನಂದ್ ಸಿಂಗ್ ಸ್ಥಿತಿ ನೋಡಿ ಬಹಳ ಗಾಬರಿ ಆಯ್ತು, ಅದು ರಾಕ್ಷಸರು ಮಾಡೋ ಕೆಲಸ: ಶಾಸಕ ರಾಜೂಗೌಡ ಆಕ್ರೋಶ

    – ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದ ಶಾಸಕ ಸಿಟಿ ರವಿ, ಮಾಜಿ ಸಚಿವ ಜನಾರ್ದನ ರೆಡ್ಡಿ
    – ಕಾಂಗ್ರೆಸ್ ಪಕ್ಷದಲ್ಲಿ ಡಿವೈಡ್ ಅಂಡ್ ರೂಲ್ ಪಾಲಿಸಿ: ಜರ್ನಾದನ ರೆಡ್ಡಿ

    ಬೆಂಗಳೂರು: ಈಗಲ್ಟನ್ ರೆಸಾರ್ಟಿನಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ಸೇರಿರುವ ಶಾಸಕ ಆನಂದ್ ಸಿಂಗ್ ಅವರನ್ನು ಬಿಜೆಪಿ ಶಾಸಕ ಸಿಟಿ ರವಿ, ರಾಜೂಗೌಡ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

    ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಾಜೂಗೌಡ, ಮೊದಲ ದಿನ ಅವರ ಭೇಟಿಗೆ ಬಂದ ವೇಳೆ ಏಕೆ ಅವಕಾಶ ನೀಡಿಲ್ಲ ಎನ್ನುವುದು ಇಂದು ಆನಂದ್ ಸಿಂಗ್ ಅವರನ್ನು ನೋಡಿದ ಬಳಿಕ ತಿಳಿಯಿತು. ಅವರ ಸ್ಥಿತಿ ನೋಡಿ ಬಹಳ ಗಾಬರಿ ಆಯ್ತು. ಆ ಮಟ್ಟದಲ್ಲಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಇಂತಹ ಕೃತ್ಯವನ್ನು ಮನುಷ್ಯರು ಮಾಡುವ ಕೆಲಸ ಅಲ್ಲ, ಇದು ರಾಕ್ಷಸರು ಮಾಡುವ ಕೆಲಸ. ನಮ್ಮ ಶತ್ರುಗಳಿಗೂ ಇಂತಹ ಪರಿಸ್ಥಿತಿ ಬರುವುದು ಬೇಡ. ಈಗಲೂ ಆನಂದ್ ಸಿಂಗ್ ಆತಂಕದಲ್ಲೇ ಇದ್ದಾರೆ ಎಂದು ಹಲ್ಲೆ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಪಕ್ಷವರು ಅವರ ಶಾಸಕರನ್ನೇ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಸಾಮಾನ್ಯ ಜನರಿಗೆ ರಕ್ಷಣೆ ಕೊಡುವುದು ಸರ್ಕಾರದಿಂದ ಸಾಧ್ಯವೇ? ಉದ್ದೇಶ ಪೂರ್ವಕವಾಗಿಯೇ ಶಾಸಕ ಗಣೇಶರನ್ನು ರಕ್ಷಣೆ ಮಾಡಲಾಗುತ್ತಿದ್ದು, ನಾವೇನಾದ್ರೂ ಈ ವಿಚಾರದಲ್ಲಿ ಒತ್ತಾಯ ಮಾಡಿದರೆ ಅದಕ್ಕೆ ರಾಜಕೀಯ ಬಣ್ಣ ಹಚ್ಚುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೇ ಪೊಲೀಸರು ಶಾಸಕ ಗಣೇಶರನ್ನು ಬಂಧನ ಮಾಡೋದಕ್ಕೆ ಅಷ್ಟು ಆಸಕ್ತಿ ತೋರಿಸುತ್ತಿಲ್ಲ ಎಂದೆನಿಸುತ್ತದೆ. ಆದ್ದರಿಂದ ಆನಂದ್ ಸಿಂಗ್ ಅವರ ಸ್ನೇಹಿತನಾಗಿ ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇನೆ. ಇತರೇ ಶಾಸಕರು ಮಾನವೀಯ ದೃಷ್ಟಿಯಿಂದ ಆದ್ರು ಈ ಬಗ್ಗೆ ಸಾಕ್ಷಿ ಹೇಳಬೇಕು ಎಂದರು.

    ಇದಕ್ಕೂ ಮುನ್ನ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ಸಿ.ಟಿ ರವಿ, ಆನಂದ್ ಸಿಂಗ್ ಅವರ ಆರೋಗ್ಯ ವಿಚಾರಿಸಿದರು. ನಾನು ಆನಂದ್ ಸಿಂಗ್ ಹತ್ತು ವರ್ಷದಿಂದ ಸ್ನೇಹಿತರು. ಅವರ ಆರೋಗ್ಯ ವಿಚಾರಣೆ ಮಾಡಿದ ವೇಳೆ ಬೇಡಿಕೊಂಡರೂ ಬಿಡದೇ ಹಲ್ಲೆ ಮಾಡಿದ್ದಾಗಿ ಆನಂದ್ ಅವರು ಹೇಳಿದ್ದು. ಇಂತಹ ಘಟನೆಗಳು ಶಾಸಕಾಂಗಕ್ಕೆ ಆಗಿರುವ ಅವಮಾನ ಎಂದರು.

    ಇದೇ ವೇಳೆ ಗಣೇಶ್ ಬಗ್ಗೆ ಬಿಜೆಪಿ ಸಾಫ್ಟ್ ಕರ್ನರ್ ವಿಚಾರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅಲ್ಲದೇ ಬಿಜೆಪಿ ಯಾರನ್ನು ರಕ್ಷಣೆ ಮಾಡುವ ಕೆಲಸ ಮಾಡಿಲ್ಲ. ಈ ಪ್ರಕರಣ ಯಾರು? ಮುಚ್ಚಿ ಹಾಕಲು ಯಾರು ಪ್ರಯತ್ನಿಸಿದ್ದರೋ ಅವರನ್ನು ಈ ಬಗ್ಗೆ ಪ್ರಶ್ನೆ ಮಾಡಿ ಎಂದು ಗರಂ ಆದರು. ಆನಂದ್ ಸಿಂಗ್ ಆರೋಗ್ಯ ವಿಚಾರಣೆಗೆ ಬಂದಿದ್ದು, ಇದು ಅದನ್ನೆಲ್ಲ ಮಾತನಾಡುವ ವೇದಿಕೆ ಅಲ್ಲ ಎಂದು ತೆರಳಿದರು.

    ಡಿವೈಡ್ ಅಂಡ್ ರೂಲ್ ಪಾಲಿಸಿ : ಬಳಿಕ ಬಿಜೆಪಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ತುಕಾರಾಂ ಅವರು ಭೇಟಿ ಮಾಡಿ ಆರೋಗ್ಯ ವಿಚಾರಣೆ ಮಾಡಿದರು. ಶಾಸಕ ಎಂಬುವುದನ್ನು ನೋಡದೇ ಹಲ್ಲೆ ಮಾಡಿದ್ದಾರೆ. ಆದರೆ ಹಲ್ಲೆ ಮಾಡಿದ ಶಾಸಕ ನಾಪತ್ತೆ ಎಂದು ಹೇಳುತ್ತಿರುವುದು ನಾಚಿಕೆ ವಿಚಾರ. ಶಾಸಕರನ್ನು ಬಂಧಿಸಿದರೆ ಸರ್ಕಾರ ತೊಂದರೆ ಎಂಬ ಕಾರಣದಿಂದ ಬಂಧನಕ್ಕೆ ಹಿಂದೇಟು ಹಾಕಲಾಗುತ್ತದೆ. ಘಟನೆಯಿಂದ ಇಡೀ ದೇಶದಲ್ಲೇ ರಾಜ್ಯದ ಮುಖ್ಯಮಂತ್ರಿಗಳು ತಲೆ ತಗ್ಗಿಸುವಂತೆ ಮಾಡಿದೆ. ಬಳ್ಳಾರಿ ಜಿಲ್ಲೆಯಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೇ ಪೈಪೋಟಿ ನಡೆದಿದೆ. ಆದ್ದರಿಂದಲೇ ಬಳ್ಳಾರಿ ಶಾಸಕರಲ್ಲಿ ಭಿನ್ನಭಿಪ್ರಾಯ ಉಂಟಾಗಿದೆ. ಕಾಂಗ್ರೆಸ್ ನಾಯಕರು ಶಾಸಕರನ್ನು ವಿಭಜನೆ ಮಾಡಿ ಆಳ್ವಿಕೆ ಮಾಡಲು ತೆರಳಿದ್ದಾರೆ ಎಂದು ಆರೋಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv