Tag: ಶಾಸಕ ರವೀಂದ್ರ ಶ್ರೀಕಂಠಯ್ಯ

  • ಶಾಸಕ ರವೀಂದ್ರ ಶ್ರೀಕಂಠಯ್ಯ, ತಹಶೀಲ್ದಾರ್ ರೂಪ ನಡುವೆ ವಾಕ್ಸಮರ

    ಶಾಸಕ ರವೀಂದ್ರ ಶ್ರೀಕಂಠಯ್ಯ, ತಹಶೀಲ್ದಾರ್ ರೂಪ ನಡುವೆ ವಾಕ್ಸಮರ

    ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ವರ್ಸಸ್ ಅಧಿಕಾರಿಗಳ ಸಮರ ಜೋರಾಗಿದೆ. ಸರ್ಕಾರಿ ಸಭೆಯೊಂದರಲ್ಲಿ ಶಾಸಕರ ಬಗ್ಗೆ ತಹಶೀಲ್ದಾರ್ ಬಳಸಿದ ಆ ಒಂದು ಪದ ಕ್ಷೇತ್ರದಲ್ಲಿ ಬಾರಿ ಸಂಚಲ ಸೃಷ್ಟಿಸಿದೆ.

    ಕಳೆದ 3 ದಿನಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಸರ್ಕಾರಿ ಕಾರ್ಯಕ್ರಮವನ್ನ ಆಯೋಜಿಸಿದ್ದರು. ಆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಅಧಿಕಾರಿಗಳು ಪಾಲ್ಗೊಂಡಿದ್ರು. ಆ ಕಾರ್ಯಕ್ರಮದಲ್ಲಿ ಸ್ಥಳೀಯ ಅಧಿಕಾರಿಗಳ ನಡೆ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ಹೊರ ಹಾಕಿದ್ರು. ಈ ವೇಳೆ ಮದ್ಯ ಪ್ರವೇಶಿಸಿದ ತಹಶೀಲ್ದಾರ್ ರೂಪ ಅವರನ್ನ ಶಾಸಕರು ಸೆಟಪ್ ಅಂತೇಳಿ ಗದರಿದ್ದರು. ಇದಕ್ಕೆ ಪ್ರತಿಯಾಗಿ ತಹಶೀಲ್ದಾರ್ ರೂಪ ಅವರು “ಯೂ ಶಟಪ್” ಅಂತ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ತಿರುಗೇಟು ನೀಡಿದ್ದರು. ಈ ವೇಳೆ ಶಾಸಕ-ತಹಶೀಲ್ದಾರ್ ನಡುವೆ ಮಾತಿನ ಚಕಮಕಿ ಜೋರಾಗಿಯೇ ನಡೆಯಿತು. ತಹಶೀಲ್ದಾರ್ ನಡೆಯನ್ನ ಸಚಿವ ಮತ್ತು ಹಿರಿಯ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದರು. ಇದು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನ ಮತ್ತಷ್ಟು ಕೆರಳಿಸಿದ್ದು, ಅಂದೇ ಇಲ್ಲಿನ ಅಧಿಕಾರಿಗಳ ಕಾರ್ಯವೈಖರಿಯನ್ನ ಜನರೆದುರೇ ಪ್ರದರ್ಶನ ಮಾಡುವ ಸವಾಲು ಹಾಕಿದರು.

    ಅಂದು ಹಾಕಿದ ಸವಾಲಿನಂತೆ ಜನಸಂಪರ್ಕ ಸಭೆಗೆ ಶಾಸಕರು ದಿನಾಂಕ ನಿಗದಿ ಮಾಡಿದ್ದರು. ಆದರೆ ತಹಶೀಲ್ದಾರ್ ರೂಪ ಕೊರೊನಾ ನೆಪ ಹೇಳಿ ಶಾಸಕರು ನಿಗದಿ ಮಾಡಿದ್ದ ಸಭೆಯನ್ನ ಏಕಾಏಕಿ ರದ್ದು ಮಾಡಿದ್ದರು. ಡಿಸಿ ಬಳಿಗೆ ತೆರಳಿದ ಶಾಸಕರು ವಿಶೇಷ ಅನುಮತಿ ಪಡೆದು ಸಭೆ ನಿಗದಿ ಮಾಡಿಸಿದ್ರು. ನಿಗದಿಯಂತೆ ಇಂದು ನಡೆದ ಸಭೆಯಲ್ಲಿ ಸಮಸ್ಯೆಗಳು ಹಾಗೂ ಪರಿಹಾರ ಸಿಗದ ತಾವು ಕೂಟ್ಟ ಅರ್ಜಿಗಳನ್ನ ಹಿಡಿದು ನೂರಾರು ಮಂದಿ ಸೇರಿದ್ದರು. ಆರಂಭದಿಂದ ಅಂತ್ಯದವರೆಗೂ ಸಭೆಯಲ್ಲಿ ಭಾಗವಹಿಸಿದ್ದ ಜನರು ತಹಶೀಲ್ದಾರ್ ಮತ್ತು ಕಚೇರಿ ಸಿಬ್ಬಂದಿ ವಿರುದ್ಧ ದೂರುಗಳ ಸುರಿಮಳೆಗೈದರು. ಒಂದೊಂದು ಅರ್ಜಿ ಪಡೆದಾಗಲೂ ಹಾಗೂ ಅದಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊಟ್ಟ ಸಮಜಾಯಿಷಿಗೆ ಶಾಸಕರು ಕಟುವಾಗಿಯೇ ಜನರೆದುರು ಆಕ್ರೋಶ ಹೊರ ಹಾಕಿದ್ರು. ಆ ಮೂಲಕ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ ಅವರ ಅಂದಿನ ನಡೆಗೆ ತೀಕ್ಷಣವಾಗಿಯೇ ತಿರುಗೇಟು ನೀಡಿದರು.

    ಇಂದಿನ ಜನಸಂಪರ್ಕ ಸಭೆಯಲ್ಲಿ ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕೊಡಿಸುವ ಕೆಲಸ ಮಾಡಲಾಯ್ತು. ಈ ವೇಳೆ ಸ್ಥಳದಲ್ಲಿದ್ದ ಶಾಸಕರ ಬೆಂಬಲಿಗರು, ಸಾರ್ವಜನಿಕರು ಚಪ್ಪಾಳೆ, ಶಿಳ್ಳೆ ಹೊಡೆದು ಸಂಭ್ರಮಿಸಿದ್ರು. ಇನ್ನು ಆಕ್ಷೇಪಾರ್ಹ ಅರ್ಜಿಗಳನ್ನ ಹೊತುಪಡಿಸಿ, ತಾಂತ್ರಿಕ ಸಮಸ್ಯೆ ಹಾಗೂ ಇತರೆ ಸಮಸ್ಯೆ ಇರುವ ಅರ್ಜಿಗಳಿಗೆ ಇಂತಿಷ್ಟು ದಿನಗಳ ಕಾಲಾವಕಾಶ ಪಡೆದು ಇತ್ಯರ್ಥ ಮಾಡುವ ಭರವಸೆ ನೀಡಲಾಯ್ತು.

    ಇಂದಿನ ಜನಸಂಪರ್ಕ ಸಭೆಯಲ್ಲಿ ಕೊರೊನಾ ರೂಲ್ಸ್ ಸಂಪೂರ್ಣ ಉಲ್ಲಂಘನೆಯಾಗಿತ್ತು. ಶಾಸಕ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಸಮ್ಮುಖದಲ್ಲೇ ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದು ಎದ್ದು ಕಾಣ್ತಿತ್ತು. ಕೊರೊನಾ ಆತಂಕ ಮರೆತು ಜನ, ಕಚೇರಿ ಸಿಬ್ಬಂದಿ ಗುಂಪು ಗುಂಪಾಗಿ ಸೇರಿದ್ದರು. ಕೆಲವೊಮ್ಮೆ ಪೊಲೀಸರು ಜನರ ನಿಯಂತ್ರಿಸಲು ಹರಸಾಹಸ ಪಡಬೇಕಾಯ್ತು.

  • ‘ಕ್ವಾರಂಟೈನ್ ಮಾಡೋದು ಅವಮಾನ ಅಲ್ಲ’- ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ತಿಳಿ ಹೇಳಿದ ಸಂಸದೆ ಸುಮಲತಾ

    ‘ಕ್ವಾರಂಟೈನ್ ಮಾಡೋದು ಅವಮಾನ ಅಲ್ಲ’- ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ತಿಳಿ ಹೇಳಿದ ಸಂಸದೆ ಸುಮಲತಾ

    ಮಂಡ್ಯ: ಕ್ವಾರಂಟೈನ್ ಮಾಡೋದು ಅವಮಾನ ಅಲ್ಲ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಸಂಸದೆ ಸುಮಲತಾ ತಿಳಿ ಹೇಳಿದ್ದಾರೆ.

    ಆಶಾ ಕಾರ್ಯಕರ್ತೆಗೆ ಕ್ವಾರಂಟೈನ್ ಮಾಡಿದ್ದಾರೆ. ಮೊದಲೇ ಮನನೊಂದು ಆತ್ಮಹತ್ಯೆಗೆ ಆಶಾ ಕಾರ್ಯಕರ್ತೆ ಯತ್ನಿಸಿದ್ದರು. ಈಗ ಕ್ವಾರಂಟೈನ್ ಮಾಡಿ ಇನ್ನೊಂದು ಅವಮಾನ ಮಾಡಿದ್ದಾರೆ. ಕ್ವಾರಂಟೈನ್ ಮಾಡುವ ಅಗತ್ಯ ಏನಿತ್ತು? ನನಗೆ ಅವರು ಫೋನ್ ಮಾಡಿ ನೋವು ತೋಡಿಕೊಂಡಿದ್ದಾರೆ ಎಂದು ಶಾಸಕ ರವೀಂದ್ರ ಶೀಕಂಠಯ್ಯ ಅವರು ಮಂಡ್ಯದ ಜಿಲ್ಲಾ ಪಂಚಾಯತಿಯ ಸಭೆಯಲ್ಲಿ ಪ್ರಸ್ತಾಪಿಸಿದರು.

    ಈ ವೇಳೆ ಮಾತನಾಡಿದ ಸಂಸದೆ ಸುಮಲತಾ ಅವರು, ಕ್ವಾರಂಟೈನ್ ಮಾಡೋದು ಅವಮಾನ ಅಂತ ತಿಳಿದುಕೊಳ್ಳೋದು ತಪ್ಪು. ಅರಿವು ಮೂಡಿಸಬೇಕಾದ ನಮ್ಮಂತ ಜನಪ್ರತಿನಿಧಿಗಳೇ ಅವಮಾನ ಎಂದು ಹೇಳಿದು ಸರಿಯಲ್ಲ. ಅವಮಾನ ಅಂತ ಹೇಳಿದರೆ ಬಹಳಷ್ಟು ಜನ ಹೆದರುತ್ತಾರೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಸಚಿವರಾದ ಡಾ.ಸುಧಾಕರ್, ನಾರಾಯಣಗೌಡ ಅವರು ಹಾಜರಿದ್ದರು.

    ಏನಿದು ಘಟನೆ: ಇತ್ತೀಚೆಗೆ ಮಂಡ್ಯ ಆಶಾ ಕಾರ್ಯಕರ್ತೆ ಮೇಲಾಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದರು. ಮಂಡ್ಯ ತಾಲೂಕಿನ ಕಾಗೇಹಳ್ಳ ದೊಡ್ಡಿ ಗ್ರಾಮದ ಅಂಗನವಾಡಿಯ ಆಶಾ ಕಾರ್ಯಕರ್ತೆ ಭಾಗ್ಯಮ್ಮ (45) ಆತ್ಮಹತ್ಯೆಗೆ ಯತ್ನಿಸಿದ್ದರು. ಮತದಾರರ ಪಟ್ಟಿಗೆ ಹೆಸರು ಸೇರಿಸುವ ಮತ್ತು ಪರಿಷ್ಕರಿಸುವ ಕೆಲಸಕ್ಕೆ ಭಾಗ್ಯಮ್ಮ ಅವರನ್ನು ನಿಯೋಜನೆ ಮಾಡಲಾಗಿತ್ತು. ಈ ವೇಳೆ ಗ್ರಾಮ ಪಂಚಾಯ್ತಿ ಸದಸ್ಯ ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿಸುವಂತೆ ಒತ್ತಡ ಹೇರಿದ್ದರು. ಇದಕ್ಕೆ ಭಾಗ್ಯ ಅವರು ನಿರಾಕರಿಸಿದರು ಎನ್ನಲಾಗಿತ್ತು. ಬಳಿಕ ರಾಜಕೀಯ ಪ್ರಭಾವ ಬಳಸಿ ಭಾಗ್ಯಮ್ಮ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ವಿಚಾರದಲ್ಲಿ ಮೇಲಾಧಿಕಾರಿಗಳು ಶಾಮೀಲಾಗಿ ಕಿರುಕುಳ ನೀಡುತ್ತಿದ್ದರು ಎಂದು ಭಾಗ್ಯಮ್ಮ ಹೇಳಿಕೊಂಡಿದ್ದರು ಎನ್ನಲಾಗಿತ್ತು. ಆತ್ಮಹತ್ಯೆ ಪ್ರತ್ನಿಸಿದ್ದ ಭಾಗ್ಯಮ್ಮ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದರು. ಆದ್ದರಿಂದ ಅವರಿಗೆ ಮನೆಯಲ್ಲೇ ಉಳಿದುಕೊಳ್ಳುವಂತೆ ಕ್ವಾರಂಟೈನ್ ಮಾಡಲಾಗಿದೆ ಎಂದು ಶಾಸಕರು ಪ್ರಶ್ನಿಸಿದ್ದರು.

  • ಸುಮಲತಾ ಕಾಂಗ್ರೆಸ್ ಅಭ್ಯರ್ಥಿ: ರವೀಂದ್ರ ಶ್ರೀಕಂಠಯ್ಯ

    ಸುಮಲತಾ ಕಾಂಗ್ರೆಸ್ ಅಭ್ಯರ್ಥಿ: ರವೀಂದ್ರ ಶ್ರೀಕಂಠಯ್ಯ

    – ಮಾತಿನ ಭರದಲ್ಲಿ ಶ್ರೀಕಂಠಯ್ಯ ಎಡವಟ್ಟು
    – ಸುಮಲತಾ ಪರ ಪ್ರಚಾರ ಮಾಡೋರಲ್ಲಿ ಯಾರು ಜಿಲ್ಲೆಗಾಗಿ ದುಡಿದಿದ್ದಾರೆ?

    ಮಂಡ್ಯ: ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಮಾತಿನ ಭರದಲ್ಲಿ ಸುಮಲತಾ ಅಂಬರೀಶ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಜಿಲ್ಲೆಯ ಶ್ರೀರಂಗಪಟ್ಟಣ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕರು, “ಸುಮಲತಾ ಅವರು ಕಾಂಗ್ರೆಸ್ ಅಭ್ಯರ್ಥಿ” ಎಂದು ಹೇಳಿದರು. ತಕ್ಷಣವೇ ಕಾರ್ಯಕರ್ತರು, ಮೈತ್ರಿ ಪಕ್ಷಗಳ ಸ್ಥಳೀಯ ಮುಖಂಡರು “ಅಲ್ಲ, ಅಲ್ಲ” ಎಂದು ಕೂಗಿದರು. ಶಾಸಕರು ಕೂಡಲೇ ಎಚ್ಚೆತ್ತುಕೊಂಡು ತನ್ನ ಹೇಳಿಕೆಯನ್ನು ಸರಿಪಡಿಸಿಕೊಂಡು,”ಸುಮಲತಾ ಅವರು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ” ಎಂದರು.

    ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಸ್ಪರ್ಧೆಗೆ ಇಳಿಸುವ ಪ್ರಸ್ತಾವನೆ ಇರಲಿಲ್ಲ. ನಮ್ಮ ಒತ್ತಾಯದ ಮೇರೆಗೆ ಹಾಗೂ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಿಖಿಲ್ ಅವರನ್ನು ಚುನಾವಣಾ ಕಣಕ್ಕೆ ಇಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

    ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕರು, ಮಾಜಿ ಸಚಿವ ಅಂಬರೀಶ್ ಅವರು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದಿದ್ದಾರೆ. ಆದರೂ ಮೂರು ಬಾರಿ ಕಾಂಗ್ರೆಸ್ಸಿನ ಠೇವಣಿ ಕಳೆದರು. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಭವಿಷ್ಯ ಧೂಳೀಪಟವಾಯಿತು ಎಂದು ವ್ಯಂಗ್ಯವಾಡಿದರು.

    ಮಧ್ಯರಾತ್ರಿ ದುಡ್ಡು ಪಡೆದವರನ್ನು ನೀವು ನಂಬಿದ್ದೀರಿ. ಪ್ರಾಮಾಣಿಕ ಕಾಂಗ್ರೆಸ್ಸಿಗರನ್ನು ನೀವು ಧೂಳೀಪಟ ಮಾಡುತ್ತಾ ಇದ್ದೀರಿ. 30 ವರ್ಷಗಳ ಕಾಲ ಕಾಂಗ್ರೆಸ್‍ನಲ್ಲಿದ್ದು ದ್ರೋಹ ಮಾಡುತ್ತಿರುವಿರಿ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಉಪವಾಸ ಕುಳಿತ್ತಿದ್ದರಿಂದ ಕಾವೇರಿ ಉಳಿಯಿತು. ಸಂಕಷ್ಟ ಪರಿಸ್ಥಿತಿಯಲ್ಲಿ ಇದ್ದೇವೆ. ಜಿಲ್ಲೆಯ ಜನರಿಗೆ ತೊಂದರೆ ಕೊಟ್ಟು ರಾಜಕಾರಣ ಮಾಡಬೇಡಿ. ನಿಮ್ಮ ಪರ ಪ್ರಚಾರ ಮಾಡುತ್ತಿರುವವರಲ್ಲಿ ಯಾರು ಜಿಲ್ಲೆಯ ಅಭಿವೃದ್ಧಿಗೆ ದುಡಿದಿದ್ದಾರೆ? ಪ್ರಚಾರಕ್ಕೆ ಸಿನಿಮಾದವರನ್ನು ಕರೆದುಕೊಂಡು ಬಂದಿದ್ದೀರಿ. ಅಭಿವೃದ್ಧಿ ವಿಚಾರವಾಗಿ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದರು.

  • ಶ್ರೀರಂಗಪಟ್ಟಣ ಜೆಡಿಎಸ್ ಶಾಸಕರನ್ನು ರಸ್ತೆ ಮಧ್ಯದಲ್ಲಿಯೇ ನಿಲ್ಲಿಸಿ ಕಾರ್ಯಕರ್ತರಿಂದ ತರಾಟೆ: ವಿಡಿಯೋ ವೈರಲ್

    ಶ್ರೀರಂಗಪಟ್ಟಣ ಜೆಡಿಎಸ್ ಶಾಸಕರನ್ನು ರಸ್ತೆ ಮಧ್ಯದಲ್ಲಿಯೇ ನಿಲ್ಲಿಸಿ ಕಾರ್ಯಕರ್ತರಿಂದ ತರಾಟೆ: ವಿಡಿಯೋ ವೈರಲ್

    ಮಂಡ್ಯ: ಶ್ರೀರಂಗಪಟ್ಟಣ ಮತಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ಕಿರಗಂದೂರಿಗೆ ಬರದಂತೆ ಪಕ್ಷದ ಕಾರ್ಯಕರ್ತರೇ ರಸ್ತೆ ಮಧ್ಯದಲ್ಲಿಯೇ ತಡೆದು, ತರಾಟೆಗೆ ತಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್  ಆಗಿದೆ.

    ಇತ್ತೀಚೆಗೆ ಕಿರಗಂದೂರು ಗ್ರಾಮಕ್ಕೆ ಶಾಸಕರು ಅಧಿಕಾರಿಗಳೊಂದಿಗೆ ಭೇಟಿ ನೀಡಲು ಆಗಮಿಸುತ್ತಿದ್ದರು. ತಕ್ಷಣವೇ ಮಾಹಿತಿ ಪಡೆದ ಗ್ರಾಮದ ಜೆಡಿಎಸ್ ಕಾರ್ಯಕರ್ತರು ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಶಾಸಕರನ್ನು ತಡೆದು, ನೀವು ಬರುವುದನ್ನು ಮೊದಲೇ ಹೇಳಬೇಕಿತ್ತು. ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳುತ್ತಿದ್ದೇವು. ನೀವು ಹಣ ನೀಡುವ ಅಗತ್ಯವಿರಲಿಲ್ಲ, ನಮ್ಮ ಸ್ವಂತ ಹಣದಲ್ಲಿ 5 ಲಕ್ಷ ರೂ. ಖರ್ಚು ಮಾಡಿ ಸ್ವಾಗತ ಮಾಡಿಕೊಳ್ಳುತ್ತಿದ್ದೇವು. ಕಾರ್ಯಕರ್ತರಿಗೆ ತಿಳಿಸದೇ ದಿಢೀರ್ ಗ್ರಾಮಕ್ಕೆ ಭೇಟಿ ನೀಡಲು ಮುಂದಾದ ನಿಮ್ಮ ನಡೆ ಸೂಕ್ತವಲ್ಲ ಎಂದು ದೂರಿದರು.

    ಪಕ್ಷದ ಕಾರ್ಯಕರ್ತರು ರಸ್ತೆ ಮಧ್ಯದಲ್ಲಿಯೇ ಹೀಗೆ ನಡೆದುಕೊಂಡಿದ್ದರಿಂದ ರೋಸಿ ಹೋದ ಶಾಸಕರು, ಇವತ್ತು ನಿಮ್ಮ ಯೋಗ್ಯತೆಯನ್ನು ತೋರಿಸಿದ್ದೀರಿ. ಇನ್ನು ಮುಂದೆ ನಾನು ಯಾವತ್ತೂ ನಿಮಗೆ ಹತ್ತಿರ ಆಗಿರಲು ಸಾಧ್ಯತೆ ಇಲ್ಲ. ಅಧಿಕಾರಿಗಳನ್ನು ಕರೆದುಕೊಂಡು ಗ್ರಾಮಕ್ಕೆ ಬರುವಾಗ ಹೀಗೆ ನಡೆದುಕೊಂಡಿದ್ದು ಸೂಕ್ತವಲ್ಲ ಎಂದು ಕಾರು ಹತ್ತಿ ಕುಳಿತ ಶಾಸಕರು, ನಾನು ರಾಜಕೀಯ ನೋಡಿರುವೆ, ನಿಮಗೆ ಹೆದರಿ ಹೋಗುತ್ತಿಲ್ಲ. ನೀವು ನನ್ನ ಅಡ್ಡಗಟ್ಟಿ ಮರ್ಯಾದೆ ಕಳೆಯುವ ಕೆಲಸ ಮಾಡಿದ್ದೀರಿ ಎಂದು  ಹೇಳಿ ಜಾಗ ಖಾಲಿ ಮಾಡಿದರು.

    ಕಾರು ಏರಿ ಶಾಸಕರು ಜಾಗ ಖಾಲಿ ಮಾಡುತ್ತಿದ್ದಂತೆ, ನಮ್ಮ ಗ್ರಾಮದ ಅಭಿವೃದ್ಧಿಯನ್ನು ಹೇಗೆ ಮಾಡಿಕೊಳ್ಳಬೇಕು ಅಂತಾ ಗೊತ್ತು. ಹೋಗಿ, ಹೋಗಿ ಎಂದು ಕಾರ್ಯಕರ್ತರು ವ್ಯಂಗ್ಯವಾಡಿದರು. ಶಾಸಕರು ಹಾಗೂ ಕಾರ್ಯಕರ್ತರ ವಾಗ್ದಾಳಿಯನ್ನು ಸ್ಥಳಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿದೆ.

    https://youtu.be/oNt9qzy9Bso

  • ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರ ಗೂಂಡಾಗಿರಿ!

    ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರ ಗೂಂಡಾಗಿರಿ!

    ಮಂಡ್ಯ: ಕೆಆರ್ ಎಸ್ ಡ್ಯಾಂ ಯಾರ ತಾತನೂ ಕಟ್ಟಿದ್ದಲ್ಲ, ಒಳಹೋಗ್ಬೇಡಿ ಅನ್ನೋ ಹಕ್ಕು ನಿನಗಿಲ್ಲ ಎಂದು ಮಹಿಳಾ ಪೊಲೀಸ್ ಪೇದೆಗೆ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಅವಾಜ್ ಹಾಕಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

    ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ ಶ್ರೀರಂಗಪಟ್ಟಣದಲ್ಲಿರುವ ಕೆಆರ್ ಎಸ್ ಬೃಂದಾವನ ಪ್ರವೇಶಕ್ಕೆ ತಡೆ ನೀಡಲಾಗಿತ್ತು. ಸಾರ್ವಜನಿರಕರಿಗೆ ಯಾವುದೇ ಅಪಾಯ ಸಂಭವಿಸದೇ ಇರಲು ಮುನ್ನೆಚ್ಚರಿಕೆಯ ಕ್ರಮವಾಗಿ ನಿಷೇಧ ಮಾಡಲಾಗಿತ್ತು. ಈ ವೇಳೆ ಸಾರ್ವಜನಿಕರು ಪ್ರವೇಶ ಮಾಡದಂತೆ ಸ್ಥಳದಲ್ಲಿ ಮಹಿಳಾ ಪೇದೆಯನ್ನು ನಿಯೋಜಿಸಲಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ಶಾಸಕರ ಬೆಂಬಲಿಗರು ಬೃಂದಾವನ ಪ್ರವೇಶ ಮಾಡಲು ಮುಂದಾಗಿದ್ದರು, ಇದನ್ನು ತಡೆದ ಕರ್ತವ್ಯ ನಿರತ ಮಹಿಳಾ ಪೇದೆ ಮೇಲೆ ಅವಾಜ್ ಹಾಕಿದ್ದಾರೆ.

    ಮಹಿಳಾ ಪೇದೆಗೆ ರೌಡಿ ಹಾಗೇ ನಡೆದುಕೊಳ್ಳುತ್ತೀಯಾ, ಈ ಡ್ಯಾಂ ಯಾರ ತಾತನೂ ಕಟ್ಟಿದ್ದಲ್ಲ, ಒಳಹೋಗ್ಬೇಡಿ ಎನ್ನಲು ನಿನಗೆ ಹಕ್ಕು ನೀಡಿಲ್ಲ. ನಾವು ಪ್ರವೇಶ ಮಾಡುತ್ತೇವೆ ಅದ್ಯಾರನ್ನ ಕರೆಸುತ್ತೀಯಾ ಕರೆಸು ಎಂದು ಬ್ಯಾರಿಕೇಡನ್ನು ಬದಿಗೆ ತಳ್ಳಿ ಗುಂಡಾವರ್ತನೆ ನಡೆಸಿದ್ದಾರೆ. ಸದ್ಯ ಪೊಲೀಸ್ ಪೇದೆ ಮೇಲೆ ಶಾಸಕರ ಬೆಂಬಲಿಗರು ನಡೆಸಿದ ಗುಂಡಾವರ್ತನೆ ದೃಶ್ಯಗಳು ಸ್ಥಳದಲ್ಲಿದ್ದ ಪ್ರವಾಸಿಗರ ಮೊಬೈಲ್‍ನಲ್ಲಿ ಸೆರೆಯಾಗಿದೆ.