Tag: ಶಾಸಕ ಬೆಳ್ಳಿ ಪ್ರಕಾಶ್

  • ನಾನಿನ್ನೂ ಬೆಳೆಯುತ್ತಿರೋನು, ರಿಯಾಕ್ಷನ್ ಬೇಡ: ಗಲಾಟೆ ಬಗ್ಗೆ ಪ್ರತಿಕ್ರಿಯೆಗೆ ಬೆಳ್ಳಿ ಪ್ರಕಾಶ್ ನಕಾರ

    ನಾನಿನ್ನೂ ಬೆಳೆಯುತ್ತಿರೋನು, ರಿಯಾಕ್ಷನ್ ಬೇಡ: ಗಲಾಟೆ ಬಗ್ಗೆ ಪ್ರತಿಕ್ರಿಯೆಗೆ ಬೆಳ್ಳಿ ಪ್ರಕಾಶ್ ನಕಾರ

    ಬೆಂಗಳೂರು: ವಿಧಾನಸೌಧದ ಲಾಂಜ್‍ನಲ್ಲಿರುವ ಕ್ಯಾಂಟೀನ್‍ನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಶಾಸಕ ಬೆಳ್ಳಿ ಪ್ರಕಾಶ್ ನಿರಾಕರಿಸಿದ್ದಾರೆ.

    ಮಾಧ್ಯಮಗಳನ್ನು ಕಂಡ ಕೂಡಲೇ ಅಣ್ಣತಮ್ಮಂದಿರ ಗಲಾಟೆ ಬಿಡ್ರಣ್ಣ, ನಾನು ಇನ್ನೂ ಬೆಳೆಯುತ್ತಿರೋನು, ರಿಯಾಕ್ಷನ್ ಬೇಡ ಎಂದು ಹೇಳಿ ಹೊರಟಿದ್ದಾರೆ.

    ಏನಿದು ಗಲಾಟೆ?:
    ಕ್ಯಾಂಟೀನ್ ನಲ್ಲಿ ಇಂದು ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮತ್ತು ಸಚಿವ ನಾರಾಯಣಗೌಡ ನಡುವೆ ಜಗಳ ನಡೆದಿದೆ. ಈ ಗಲಾಟೆ ಹೊಡೆದಾಟದ ಹಂತಕ್ಕೂ ಹೋಗಿದೆ. ಈ ಗಲಾಟೆ ಮಾಜಿ ಸಿಎಂ ಸಿದ್ದರಾಮಯ್ಯ, ಈಶ್ವರಪ್ಪ, ಸೋಮಣ್ಣ, ಸಿ.ಡಿ.ರವಿ ಎಲ್ಲರ ಸಮ್ಮುಖದಲ್ಲಿ ನಡೆದಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕಡೂರು ಕ್ಷೇತ್ರಕ್ಕೆ ತೋಟಗಾರಿಕೆ ಇಲಾಖೆಯಿಂದ ನೀಡಬೇಕಿದ್ದ ಅನುದಾನ ತಾರತಮ್ಯವಾದ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ಸಚಿವ ನಾರಾಯಣಗೌಡ ಅವರಿಗೆ ಏಕವಚನದಲ್ಲಿ ಬೈದಿದ್ದಾರೆ ಎನ್ನಲಾಗಿದೆ. ಬೆಳ್ಳಿ ಪ್ರಕಾಶ್ ಮೊದಲ ಬಾರಿ ಗೆದ್ದು ಕಡೂರು ಶಾಸಕರಾಗಿದ್ದಾರೆ. ಅನೇಕ ತಿಂಗಳ ಹಿಂದೆಯೇ ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಸಚಿವರು ಅನುದಾನ ಕೊಡದೇ ಸತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಅಸಮಾಧನಾಗೊಂಡಿದ್ದ ಶಾಸಕ ಬೆಳ್ಳಿ ಕ್ಯಾಂಟೀನ್‍ನಲ್ಲಿ ಅನುದಾನ ಬಿಡುಗಡೆಯ ಮಾಡದ್ದಕ್ಕೆ ಆಕ್ರೋಶ ವ್ಯಕ್ತಪಿಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಗಲಾಟೆಯಲ್ಲಿ ಸಚಿವ ನಾರಾಯಣ ಗೌಡರಿಗೆ ಏಟು ಬಿದ್ದಿದ್ದು, ಶಾಸಕ ಬೆಳ್ಳಿ ಪ್ರಕಾಶ್ ಅವರ ಹೊಟ್ಟೆಗೆ ಗುದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಜೆಡಿಎಸ್ ಶಾಸಕ ಅನ್ನಧಾನಿ ಬಂದು ಹೊಡೆದಾಟ ಬಿಡಿಸಿದ್ದಾರೆ. ಸಿದ್ದರಾಮಯ್ಯ ಕಣ್ಣ ಮುಂದೆಯೇ ಶಾಸಕ ಬೆಳ್ಳಿ ಪ್ರಕಾಶ್ ಮುಷ್ಟಿ ಬಿಗಿ ಹಿಡಿದು ನಾರಾಯಣ ಗೌಡರ ಹೊಟ್ಟೆಗೆ ಬಲವಾಗಿ ಗುದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

  • ಕ್ಷೇತ್ರದಲ್ಲಿಲ್ಲ ಅನ್ನೋ ಕೊರಗಿದೆ, ರೆಸಾರ್ಟಿನಲ್ಲಿ ವೈಭವದ ಜೀವನವಿಲ್ಲ: ಬೆಳ್ಳಿ ಪ್ರಕಾಶ್

    ಕ್ಷೇತ್ರದಲ್ಲಿಲ್ಲ ಅನ್ನೋ ಕೊರಗಿದೆ, ರೆಸಾರ್ಟಿನಲ್ಲಿ ವೈಭವದ ಜೀವನವಿಲ್ಲ: ಬೆಳ್ಳಿ ಪ್ರಕಾಶ್

    ಬೆಂಗಳೂರು: ಕ್ಷೇತ್ರದಲ್ಲಿಲ್ಲ ಅನ್ನೋ ಕೊರಗು ನಮಗಿದೆ. ಆದರೂ ನಮ್ಮ ಆಪ್ತ ಸಹಾಯಕರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಹೇಳಿದ್ದಾರೆ.

    ರಮಡ ರೆಸಾರ್ಟ್ ಬಳಿ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿ ಸದಸ್ಯರು, ಕಾರ್ಯಕರ್ತರು ನಮ್ಮ ಅನುಪಸ್ಥಿತಿಯಲ್ಲಿಯೂ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಎದುರಾಗಿರುವ ರಾಜಕೀಯ ಸನ್ನಿವೇಶ ಸರ್ವೇ ಸಾಮಾನ್ಯ. ರಾಮಾಯಣ, ಮಹಾಭಾರತ ಕಾಲದಿಂದಲೂ ರಾಜಕೀಯ ದಾಹ ಇದ್ದೇ ಇದೆ. ಸೋಮವಾರ ನಮ್ಮ ಧರ್ಮಯುದ್ಧದಲ್ಲಿ ನಾವು ಜಯಗಳಿಸುತ್ತೇವೆ ಎಂಬ ಭರವಸೆ ನನಗಿದೆ ಎಂದು ಹೇಳಿದರು.

    ರೆಸಾರ್ಟಿನಲ್ಲಿ ನಾವು ಅತ್ಯಂತ ವೈಭವದ ಜೀವನ ನಡೆಸುತ್ತಿಲ್ಲ. ಮಾಮೂಲಿ ಊಟ, ತಿಂಡಿ, ನಮ್ಮ ಮನೆಯಲ್ಲಿರುವ ರೀತಿ ಬೆಡ್, ಬಾತ್ ರೂಂ ಇಲ್ಲಿದೆ. ಬೇರೆ ರೆರ್ಸಾಟಿನಲ್ಲಿ ಐಷಾರಾಮಿ ವ್ಯವಸ್ಥೆ ಇರಬಹುದು. ಆದರೆ ಈ ರಮಡ ರೆಸಾರ್ಟಿನಲ್ಲಿ ಅಂತಹ ವ್ಯವಸ್ಥೆ ಇಲ್ಲ ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ವಿಶ್ವಾಸ ಮತಯಾಚನೆಯನ್ನು ಮತಕ್ಕೆ ಹಾಕುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಸ್ಪೀಕರ್ ರಮೇಶ್ ಕುಮಾರ್ ಅವರು ಮತ ಎಣಿಕೆಗೆ ಹಾಕುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಈ ಮೂಲಕ ಸಮ್ಮಿಶ್ರ ಸರ್ಕಾರ ಬಹುಮತ ಸಾಬೀತುಪಡಿಸದೇ ಬಿದ್ದು ಹೋಗಲಿದೆ ಎಂದು ಹೇಳಿದರು.

    ಇದೇ ವೇಳೆ ಮಾತನಾಡಿದ ಶಾಸಕ ಸುನೀಲ್ ನಾಯಕ್, ಇಲ್ಲಿದ್ದುಕೊಂಡೇ ನಮ್ಮ ಕ್ಷೇತ್ರದ ಜನರಿಗೆ ಬೇಕಾದ ಸ್ಪಂದನೆ ಕೊಟ್ಟಿದ್ದೇವೆ. ನಮ್ಮ ಅಜೆಂಡಾ ಒಂದೇ ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವುದು. ಸಮ್ಮಿಶ್ರ ಸರ್ಕಾರ ತೊಲಗಿಸಬೇಕು ಎಂದರು.

    ಕಡತ ವಿಲೇವಾರಿ ಕೂಡ ಜೋರಾಗಿ ನಡೆಯುತ್ತಿದೆ. ಬಹುಮತ ಇಲ್ಲದಿದ್ದರೂ ಕಾಲಹರಣ ಮಾಡುತ್ತಿದ್ದಾರೆ. ಸೋಮವಾರ ನಮಗೆ ಗೆಲುವು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.