Tag: ಶಾಸಕ ನೆಹರು ಓಲೇಕಾರ

  • ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ – ಜಿಲ್ಲಾಧಿಕಾರಿಯನ್ನ ಭೇಟಿ ಮಾಡಿದ ಓಲೇಕಾರ

    ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ – ಜಿಲ್ಲಾಧಿಕಾರಿಯನ್ನ ಭೇಟಿ ಮಾಡಿದ ಓಲೇಕಾರ

    ಹಾವೇರಿ: ಜಿಲ್ಲಾಧಿಕಾರಿ ಶ್ರೀ ಕೃಷ್ಣ ಭಾಜಪೇಯಿ ಅವರನ್ನು ಭೇಟಿ ಮಾಡಿದ ಶಾಸಕ ನೆಹರು ಓಲೇಕಾರ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ ಎಂದು ಮನವಿ ಮಾಡಿಕೊಂಡರು.

    ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಸವನೂರ ತಾಲೂಕಿನ ಕೆಲ ಹಳ್ಳಿಗಳ ಮುಖ್ಯ ರಸ್ತೆಗಳು ಹಾಳಾಗಿದ್ದು, ಹಾಳಾದ ರಸ್ತೆ ಮಾರ್ಗವಾಗಿ ವಾಹನಗಳ ಓಡಾಟ ದುಸ್ತರವಾಗಿದೆ. ಆದ್ದರಿಂದ ಕೂಡಲೇ ಹಾಳಾದ ರಸ್ತೆಗಳ ಪುನರ್ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ, ಹಾಳಾದ ರಸ್ತೆಗಳನ್ನು ದುರಸ್ಥಿಗೊಳಿಸುವ ಕಾರ್ಯ ಪ್ರಾರಂಭಿಸಬೇಕೆಂದು ರಸ್ತೆ ಹಾಳಾದ ಹಳ್ಳಿಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಶಾಸಕ ನೆಹರು ಓಲೇಕಾರ ಒದಗಿಸಿದರು.

    ಈ ಸಂದರ್ಭದಲ್ಲಿ ಸವನೂರ ತಾಲೂಕ ಪಂಚಾಯತ್ ಅಧ್ಯಕ್ಷರಾದ ತಿಪ್ಪಣ್ಣ ಸುಬ್ಬಣ್ಣನವರ, ಮುಖಂಡರಾದ ನಾಗರಾಜ ಕೋಣನವರ, ಅಶೋಕ ಬಣಕಾರ್, ಎನ್.ಪಿ ಚಾವಡಿ, ರಾಜು ಬಳ್ಳಾರಿ, ನೀಲಪ್ಪ ರಿತ್ತಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

  • 20 ವರ್ಷದಿಂದ ಬರಿದಾಗಿದ್ದ ಕೆರೆಗೆ ಬಂತು ನೀರು – ಶಾಸಕರನ್ನು ಆನೆ ಮೇಲೆ ಕೂರಿಸಿ ಮೆರವಣಿಗೆ

    20 ವರ್ಷದಿಂದ ಬರಿದಾಗಿದ್ದ ಕೆರೆಗೆ ಬಂತು ನೀರು – ಶಾಸಕರನ್ನು ಆನೆ ಮೇಲೆ ಕೂರಿಸಿ ಮೆರವಣಿಗೆ

    ಹಾವೇರಿ: 20 ವರ್ಷಗಳಿಂದ ಬರಿದಾಗಿದ್ದ ಕೆರೆಗೆ ನೀರು ತುಂಬಿಸಿದ್ದಕ್ಕೆ ಹಾವೇರಿ ಶಾಸಕ ನೆಹರು ಓಲೇಕಾರ ಅವರನ್ನು ಗ್ರಾಮಸ್ಥರು ಆನೆ ಮೇಲೆ ಕೂರಿಸಿ ಮೆರವಣಿಗೆ ಮಾಡಿದ್ದಾರೆ.

    ಕಳೆದ 20 ವರ್ಷಗಳಿಂದ ಕನವಳ್ಳಿ ಗ್ರಾಮದ ಕೆರೆಯಲ್ಲಿ ನೀರು ಕಾಣದೆ ಗ್ರಾಮಸ್ಥರು ಕಂಗಾಲಾಗಿದ್ದರು. ಆದರೆ ಈ ಸಮಸ್ಯೆಗೆ ಶಾಸಕ ನೆಹರು ಓಲೇಕಾರ ಪರಿಹಾರ ನೀಡಿದ್ದು, ಕೆರೆಗೆ ನೀರು ತುಂಬಿಸಿ ಜನರಿಗೆ ನೆರವಾಗಿದ್ದಾರೆ. ಹೀಗಾಗಿ ತಮ್ಮ ಸಮಸ್ಯೆಗೆ ಸ್ಪಂದಿಸಿದ್ದಕ್ಕೆ ಶಾಸಕರಿಗೆ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಆನೆ ಮೇಲೆ ಶಾಸಕರನ್ನು ಕೂರಿಸಿ ಮೆರವಣಿಗೆ ಮಾಡಿ ಗೌರವಿಸಿದ್ದಾರೆ.

    ಕೆರೆಗೆ ನೀರು ತುಂಬಿಸುವ ಯೋಜನೆಗೆ ಇಂದು ಓಲೇಕಾರ ಅವರು ಚಾಲನೆ ಕೊಟ್ಟಿದ್ದಾರೆ. ಪೈಪ್ ಲೈನ್ ಮೂಲಕ ಕೆರಗೆ ನೀರು ಹರಿಸಲು ಸಹಕಾರ ನೀಡಿದ್ದಾರೆ. ಇದರಿಂದ ಇಷ್ಟು ದಿನ ನೀರಿನ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಸ್ಥರ ಮೊಗದಲ್ಲಿ ಮಂದಹಾಸ ಮೂಡಿದ್ದು, ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.