Tag: ಶಾಸಕ ಜಮೀರ್ ಅಹ್ಮದ್ ಖಾನ್

  • ಸಂಜನಾ, ಜಮೀರ್ ಸಹಾಯ ಕೇಳಿದ್ದೇಕೆ?- ಡ್ರಗ್ಸ್ ಪ್ರಕರಣದಲ್ಲಿ ರಾಹುಲ್‍ಗೆ ಬಿಜೆಪಿ ಟಾಂಗ್

    ಸಂಜನಾ, ಜಮೀರ್ ಸಹಾಯ ಕೇಳಿದ್ದೇಕೆ?- ಡ್ರಗ್ಸ್ ಪ್ರಕರಣದಲ್ಲಿ ರಾಹುಲ್‍ಗೆ ಬಿಜೆಪಿ ಟಾಂಗ್

    ಬೆಂಗಳೂರು: ದೇಶದಲ್ಲಿ ಡ್ರಗ್ಸ್ ಮಾಫಿಯಾ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ವೇಳೆ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧನವಾಗಿರುವ ನಟಿ ಸಂಜನಾ ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರಿಗೂ ಇರುವ ಸಂಬಂಧವನ್ನು ಪ್ರಶ್ನಿಸಿರುವ ಕರ್ನಾಟಕ ಬಿಜೆಪಿ, ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡಿದೆ.

    ಡ್ರಗ್ಸ್ ಮಾಫಿಯಾ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ನಟಿ ಸಂಜನಾ ಕಾಂಗ್ರೆಸ್ ನ ಹಿರಿಯ ನಾಯಕ, ಶಾಸಕ ಜಮೀರ್ ಅಹ್ಮದ್ ಖಾನ್ ಸಹಾಯವನ್ನು ಏಕೆ ಪಡೆದರು? ಸಂಜನಾಳೊಂದಿಗೆ ಅವರ ಸಂಬಂಧ ಏನು? ರಾಹುಲ್ ಗಾಂಧಿ ಈ ವಿಷಯದ ಬಗ್ಗೆ ತನಿಖೆಯನ್ನು ಏಕೆ ಕೇಳ್ತಿಲ್ಲ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಜಮೀರ್‌ನನ್ನು ಯಾಕೆ ಬಂಧಿಸಿಲ್ಲ- ಸರ್ಕಾರಕ್ಕೆ ಪ್ರತಾಪ್ ಸಿಂಹ ಪ್ರಶ್ನೆ

    ಕಾಂಗ್ರೆಸ್ ವಿರುದ್ಧ ಟ್ವೀಟ್ ವಾರ್ ಮುಂದುವರಿಸಿರುವ ಬಿಜೆಪಿ, ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಬೆಳೆಯುತ್ತಿದ್ದಾಗ ಅಂದಿನ ಸಿಎಂ ಸಿದ್ದರಾಮಯ್ಯ ಬೇರೆ ಕಡೆ ಬ್ಯುಸಿಯಾಗಿದ್ದರು. ಭಯೋತ್ಪಾದಕರ ಬೆಂಬಲಿತ ಪಿಎಫ್‍ಐ, ಎಸ್‍ಡಿಪಿಐ ವಿರುದ್ಧದ ಕೇಸ್‍ಗಳನ್ನು ವಾಪಸ್ ಪಡೆಯುವಲ್ಲಿ ಹಾಗೂ ಮೂಲಭೂತವಾದಿಗಳಿಂದ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ನೋಡುತ್ತಿದ್ದರು. ಆ ಮೂಲಕ ಓಲೈಕೆಯ ರಾಜಕಾರಣದಲ್ಲಿ ತೊಡಗಿದ್ದರು ಎಂದು ಬಿಜೆಪಿ ಆರೋಪಿಸಿದೆ. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?

    ಕಾಂಗ್ರೆಸ್ ನಾಯಕರು ಹಾಗೂ ಡ್ರಗ್ಸ್ ಮಾಫಿಯಾ ನಡುವಿನ ಸಂಬಂಧವೇನು? ಸಿದ್ದರಾಮ್ಯಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಡ್ರಗ್ಸ್ ಮಾಫಿಯಾ ವಿರುದ್ಧ ಏಕೆ ಕ್ರಮಕೈಗೊಳ್ಳಲಿಲ್ಲ? ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಇಂತಹ ಪ್ರಮುಖ ವಿಚಾರದಲ್ಲಿ ಮೌನವಹಿಸಿರುವುದು ಏಕೆ? ಕಾಂಗ್ರೆಸ್ ನಾಯಕರು ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಸಹಾಯ ಮಾಡುತ್ತಿರುವುದು ಏಕೆ? ನಿಮಗೆ ಎಲ್ಲದರ ಬಗ್ಗೆಯೂ ಅರಿವಿದ್ದರೂ ಇದನ್ನು ಮಾಡಲು ಏಕೆ ಅನುಮತಿ ನೀಡಿದ್ದೀರಿ ಎಂದು ರಾಹುಲ್ ಗಾಂಧಿಗೆ ಬಿಜೆಪಿ ಪ್ರಶ್ನಿಸಿದೆ. ಇದನ್ನೂ ಓದಿ: ಮೆಸೇಜ್, ಫೋಟೋಸ್ ಡಿಲೀಟ್ – ಸಂಜನಾಳ ಖತರ್ನಾಕ್ ಐಡಿಯಾಗೆ ಪೊಲೀಸ್ರು ಸುಸ್ತು