Tag: ಶಾಸಕ ಉಮೇಶ್ ಕತ್ತಿ

  • ಒಬ್ಬ ಶಾಸಕನಿಂದ ರಾಜೀನಾಮೆ ಕೊಡಿಸೋದು ಹುಡುಗಾಟಿಕೆ ಅಲ್ಲ: ಉಮೇಶ್ ಕತ್ತಿ

    ಒಬ್ಬ ಶಾಸಕನಿಂದ ರಾಜೀನಾಮೆ ಕೊಡಿಸೋದು ಹುಡುಗಾಟಿಕೆ ಅಲ್ಲ: ಉಮೇಶ್ ಕತ್ತಿ

    – ನೂರಕ್ಕೆ ನೂರರಷ್ಟು ಬಿಜೆಪಿ ಅಧಿಕಾರಕ್ಕೆ ಬರಲಿದೆ
    – ರಮೇಶ್ ಜಾರಕಿಹೊಳಿಯಿಂದ ಕಾಂಗ್ರೆಸ್‍ಗೆ ಆಪರೇಷನ್

    ಬೆಳಗಾವಿ: ಒಬ್ಬ ಶಾಸಕನಿಂದ ರಾಜೀನಾಮೆ ಕೊಡಿಸುವುದು ಹುಡುಗಾಟಿಕೆ ಮಾತಲ್ಲ ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಶಾಸಕರು, ನಾವು ಆಪರೇಷನ್ ಕಮಲ ನಡೆಸುತ್ತಿಲ್ಲ. ಲೋಕಸಭಾ ಚುನಾವಣೆ ಹೀನಾಯ ಸೋಲಿನಿಂದಾಗಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನಮ್ಮ ಸಂಪರ್ಕದಲ್ಲಿ ಯಾವುದೇ ಶಾಸಕರು ಇಲ್ಲ. ಆಪರೇಷನ್ ಮಾಡಲು ನಾವು ವೈದ್ಯರಲ್ಲ. ಕಾಂಗ್ರೆಸ್‍ನವರೇ ಬಿಜೆಪಿ ಶಾಸಕರನ್ನು ಸೇಳೆಯುವ ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಿದರು.

    ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಅಧಿಕಾರಕ್ಕೆ ಬರಲಿದೆ. ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್‍ಗೆ ಆಪರೇಷನ್ ಮಾಡುತ್ತಿದ್ದಾರೆ. ಬಿಜೆಪಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಬಂದರೂ ಸ್ವಾಗತ ಮಾಡುತ್ತೇವೆ. ಒಂದು ವಾರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬೇಡ. ಅದನ್ನು ನಿಭಾಯಿಸುವ ತಾಕತ್ತು ನನಗಿಲ್ಲ. ಮುಖ್ಯಮಂತ್ರಿಯಾಗುವ ಪವರ್ ಕೂಡ ನನಗಿಲ್ಲ. ಕೇವಲ ಮಂತ್ರಿಯಾಗಿ ಕೆಲಸ ಮಾಡುತ್ತೇನೆ. ನಮಗೆ ಯಾವುದೇ ಆಸೆ ಇಲ್ಲ. ರೈತರ ಪರವಾಗಿ ಇರುವ ಸರ್ಕಾರದಲ್ಲಿದ್ದು ಕೆಲಸ ಮಾಡುತ್ತೇನೆ ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದರೂ ನಾನು ಹೋಗಲ್ಲ. ಎಚ್.ಡಿ.ದೇವೇಗೌಡ, ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಎಲ್ಲರೂ ನನ್ನ ಸಂಪರ್ಕದಲ್ಲಿ ಇದ್ದಾರೆ. ಅವರು ದಿನನಿತ್ಯ ಕರೆಯುತ್ತಾರೆ ಅದನ್ನು ಹೇಳಲಿಕ್ಕೆ ಆಗಲ್ಲ ಎಂದು ಹೇಳಿದರು.

    ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಡಬೇಕು. ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಬೇಕು. ಅವರಿಗೆ ಎಲ್ಲ ರೀತಿಯ ಯೋಗ್ಯತೆ ಇದೆ. ಆದಷ್ಟು ಬೇಗ ಯತ್ನಾಳ್ ಅವರು ರಾಜ್ಯಾಧ್ಯಕ್ಷರಾಗಲಿ ಅಂತ ಆಗ್ರಹಿಸುವೆ ಎಂದು ಶಾಸಕ ಯತ್ನಾಳ್ ಅವರ ಪರ ಬ್ಯಾಟ್ ಬೀರಿದರು.

  • ತಪ್ಪೊಪ್ಪಿಕೊಂಡ ಡಿಕೆಶಿ ಹೇಳಿಕೆ ಸ್ವಾಗತಾರ್ಹ: ಶ್ರೀಶೈಲ ಜಗದ್ಗುರು

    ತಪ್ಪೊಪ್ಪಿಕೊಂಡ ಡಿಕೆಶಿ ಹೇಳಿಕೆ ಸ್ವಾಗತಾರ್ಹ: ಶ್ರೀಶೈಲ ಜಗದ್ಗುರು

    ಬೆಳಗಾವಿ: ಲಿಂಗಾಯತ ಧರ್ಮ ಹೋರಾಟ ಮಾಡಿದ್ದು ತಪ್ಪು ಎಂದು ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿಕೆ ನೀಡಿರುವುದು ಸ್ವಾಗತಾರ್ಹ ಎಂದು ಪಂಚ ಪೀಠದ ಶ್ರೀಶೈಲ ಜಗದ್ಗುರು ಶ್ರೀ ಹೇಳಿದ್ದಾರೆ.

    ಹುಕ್ಕೇರಿ ಪಟ್ಟಣದ ಹಿರೇಮಠದ ದಸರಾ ಉತ್ಸವದಲ್ಲಿ ಮಾತನಾಡಿದ ಶ್ರೀಗಳು, ಧರ್ಮವನ್ನ ಇಬ್ಭಾಗ ಮಾಡುವ ಪ್ರಯತ್ನ ಹಿಂದಿನ ದಿನಮಾನಗಳಲ್ಲಿ ಒಂದು ಪಕ್ಷ ಮಾಡಿತ್ತು. ಆದರೆ ಇಂದು ಆ ತಪ್ಪನ್ನ ಒಪ್ಪಿಕೊಂಡಿರುವುದು ಸ್ವಾಗತಾರ್ಹ. ವೀರಶೈವ ಲಿಂಗಾಯತ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದರೆ ಕೆಟ್ಟ ಪ್ರತಿಫಲ ಅನುಭವಿಸುತ್ತೇವೆ ಎನ್ನುವ ಸಂದೇಶ ಅವರಿಗೆ ಸಿಕ್ಕದೆ ಎಂದು ತಿಳಿಸಿದರು.

    ಸಚಿವ ಡಿಕೆ ಶಿವಕುಮಾರ್ ಅವರು ನಮ್ಮಿಂದ ತಪ್ಪಾಗಿದೆ ಎಂದು ಹೇಳಿದ್ದಾರೆ. ಈಗಲಾದರು ಅವರಿಗೆ ತಪ್ಪು ಅರ್ಥವಾಗಿದ್ದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಧರ್ಮದ ವಿಷಯಕ್ಕೆ ಕೈ ಹಾಕಬಾರದು. ಧರ್ಮ ಒಡೆಯಲು ಸಿದ್ದರಾಮಯ್ಯ ಮುಂದಾದಾಗ ಧರ್ಮ ಒಡೆಯಬೇಡಿ ಎಂದು ತಿಳಿಸಿ ಹೇಳಿದರೂ ಹಠ ತೊಟ್ಟು ಧರ್ಮ ಒಡೆಯುವ ಕಾರ್ಯಕ್ಕೆ ಮುಂದಾದರು. ಇಂದು ಅದರ ಕೆಟ್ಟ ಪ್ರತಿಫಲವನ್ನ ಸಿದ್ದರಾಮಯ್ಯ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ಕತ್ತಿ ತಿರುಗೇಟು: ಇದೇ ವೇಳೆ ಮಾತನಾಡಿದ ಬಿಜೆಪಿ ಶಾಸಕ ಉಮೇಶ್ ಕತ್ತಿ ಡಿಕೆ ಶಿವುಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದು, ಡಿಕೆ ಶಿವುಕುಮಾರ್ ಒಕ್ಕಲಿಗನೂ ಅಲ್ಲ, ಲಿಂಗಾಯತನೂ ಅಲ್ಲ. ಒಬ್ಬ ಒಳ್ಳೆಯ ರಾಜಕಾರಣಿ. ಅವರ ಬಾಯಲ್ಲಿ ಯಾವಾಗ ಏನು ಬರುತ್ತೆ ಏನೋ ತಿಳಿಯುತ್ತೆ ಹಾಗೆ ರಾಜಕಾರಣ ಮಾಡುತ್ತಾರೆ. ಕಾಂಗ್ರೆಸಿಗರು ವೀರಶೈವ ಲಿಂಗಾಯತ ಮಹಾಸಭಾದ ಕ್ಷಮೆ ಕೇಳಿ ಬಳಿಕ ಮಾತನಾಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಧರ್ಮದ ವಿಷಯದಲ್ಲಿ ಕೈ ಹಾಕಬಾರದು ಎಂದು ಅವರು ಕಿವಿಮಾತು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv