Tag: ಶಾಸಕರ ಭವನ

  • ಶಾಸಕರಿಗೆ ಶಾಸಕರ ಭವನದಲ್ಲಿ ಸೇಫ್ ಲಾಕರ್ಸ್ ಸಿಸ್ಟಮ್!?

    ಶಾಸಕರಿಗೆ ಶಾಸಕರ ಭವನದಲ್ಲಿ ಸೇಫ್ ಲಾಕರ್ಸ್ ಸಿಸ್ಟಮ್!?

    ಬೆಂಗಳೂರು: ಎಲ್ಲ ಶಾಸಕರಿಗೂ ಸೇಫ್ ಲಾಕರ್ಸ್, ಸೇಫ್ ಡೋರ್ ಲಾಕ್ ವ್ಯವಸ್ಥೆ ಸಿಗಲಿದೆ. ವಿಧಾನಸಭೆ ಸಚಿವಾಲಯದಿಂದ ಸೇಫ್ ಲಾಕರ್ಸ್ ವ್ಯವಸ್ಥೆಗೆ ನಿರ್ಧಾರ ಕೈಗೊಳ್ಳಲಾಗಿದೆ.

    ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವ ವಿಧಾನಸಭೆ ಸಚಿವಾಲಯ ಒಪ್ಪಿಗೆ ಸಿಕ್ಕ‌ ಮೇಲೆ ಸೇಫ್ ಡೋರ್, ಸೇಫ್ ಲಾಕರ್ಸ್ ವ್ಯವಸ್ಥೆ ಮಾಡಿಕೊಡಲಿದೆ.

    ಶಾಸಕರ ಭವನದಲ್ಲಿ ಒಟ್ಟಾರೆ 264 ಕೊಠಡಿಗಳಿಗೆ ಸೇಫ್ ಡೋರ್ ಲಾಕ್, ಸೇಫ್ ಲಾಕರ್ಸ್ ಸಿಸ್ಟಮ್‌ ಹಾಕುವ ಪ್ಲ್ಯಾನ್ ಇದೆ. ಸುಮಾರು 4.80 ಕೋಟಿ ಅಂದಾಜು ವೆಚ್ಚದಲ್ಲಿ ಸೇಫ್ ಲಾಕರ್ಸ್, ಸೇಫ್ ಡೋರ್ ಲಾಕ್, ವಾಟರ್ ಪ್ಯೂರಿಫೈಯರ್‌ಗಳ ಅಳವಡಿಕೆಗೂ ವಿಧಾನಸಭೆ ಸಚಿವಾಲಯದಿಂದ ಪ್ರಸ್ತಾಪ ಇದೆ.

    ಆದರೆ, ಪ್ರಸ್ತಾಪ ಆರ್ಥಿಕ‌ ಇಲಾಖೆಯ ಪರಿಶೀಲನೆಯಲ್ಲಿದ್ದು, ಗ್ರೀನ್ ಸಿಗ್ನಲ್ ಇನ್ನೂ ಸಿಕ್ಕಿಲ್ಲ. ಬಜೆಟ್ ಅಧಿವೇಶನದ ಸಂದರ್ಭದಲ್ಲಿಯೇ ಹಣಕಾಸು ಇಲಾಖೆಯಿಂದ ಒಪ್ಪಿಗೆ ಸಿಗುವ ಸಾಧ್ಯತೆ ಇದೆ.

  • ಶಾಸಕರ ಭವನದ ಮಹಡಿ ಮೇಲಿನಿಂದ ಬಿದ್ದು ನಿರ್ವಾಹಕ ಸಾವು

    ಶಾಸಕರ ಭವನದ ಮಹಡಿ ಮೇಲಿನಿಂದ ಬಿದ್ದು ನಿರ್ವಾಹಕ ಸಾವು

    ಬೆಂಗಳೂರು: ಶಾಸಕರ ಭವನದ ಮೇಲಿನಿಂದ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    44 ವರ್ಷದ ಶಿವಶಂಕರ್ ಮೃತಪಟ್ಟ ವ್ಯಕ್ತಿ. ಶಿವಶಂಕರ್ ಕೆಎಸ್‍ಆರ್ ಟಿಸಿಯಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದರು. ಲೋಕಸಭಾ ಚುನಾವಣೆ ಇರುವ ಹಿನ್ನಲೆಯಲ್ಲಿ ಒಒಡಿ ಆಧಾರದ ಮೇಲೆ ಶಾಸಕರ ಭವನದಲ್ಲಿ ಕೆಲಸ ಮಾಡಿಕೊಂಡಿದರು.

    ಭಾನುವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಶಿವಶಂಕರ್ ಶಾಸಕರ ಭವನದ ಮೂರನೇ ಮಹಡಿಗೆ ಹೋಗುವಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಶಿವಶಂಕರ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಶಾಸಕರ ಭವನದಲ್ಲಿ ಶಿಸ್ತು ಕಾಪಾಡಲು ಸ್ಪೀಕರ್ ಖಡಕ್ ವಾರ್ನಿಂಗ್ – ಹೊಸ ನಿಯಾಮಾವಳಿ ಜಾರಿ

    ಶಾಸಕರ ಭವನದಲ್ಲಿ ಶಿಸ್ತು ಕಾಪಾಡಲು ಸ್ಪೀಕರ್ ಖಡಕ್ ವಾರ್ನಿಂಗ್ – ಹೊಸ ನಿಯಾಮಾವಳಿ ಜಾರಿ

    ಬೆಂಗಳೂರು: ಶಾಸಕರ ಖಾಸಗಿತನ ಹಾಗೂ ಶಾಸಕರ ಭವನದ ದುರ್ಬಳಕೆ ತಡೆಯಲು ಸ್ಪೀಕರ್ ರಮೇಶ್ ಕುಮಾರ್ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ.

    ಈ ಕುರಿತು ಮಾಹಿತಿ ನೀಡಿದ ಅವರು, ಶಾಸಕರ ಭವನದ ಭೇಟಿಯ ಸಮಯವನ್ನು ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ನಿಗಧಿ ಮಾಡಲಾಗಿದೆ. ಈ ಸಮಯ ಬಿಟ್ಟು ಶಾಸಕರ ಭವನದಲ್ಲಿ ಶಾಸಕರ ಕುಟುಂಬ ಸದಸ್ಯರು ಬಿಟ್ಟು ಇನ್ನು ಯಾರಿಗೂ ಪ್ರವೇಶವಿಲ್ಲ ಎಂದು ಹೇಳಿದರು.

    ಹೊಸ ನಿಯಾಮವಳಿ ಅನ್ವಯ ಪಾಸ್ ಹೊರತಾಗಿ ಬರುವ ಖಾಸಗಿ ವಾಹನಗಳಿಗೂ ನಿರ್ಬಂಧ ಹೇರಲಾಗುತ್ತದೆ. ಶಾಸಕರ ಭವನ ದುರ್ಬಳಕೆ ಆಗುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಇಂತಹ ನಿರ್ಧಾರ ಮಾಡಿದ್ದು, ಇಂದಿನಿಂದಲೇ ಈ ನಿಯಮ ಜಾರಿಗೆ ಬರುತ್ತೆ. ಇನ್ನು ಮುಂದೆ ಇಂತಹವುಗಳಿಗೆ ಹೇಗೆ ಕಡಿವಾಣ ಹಾಕುತ್ತೇನೆ ನೋಡಿ ಎಂದು ಹೇಳಿದರು.

    ಇದೇ ವೇಳೆ ಸರ್ಕಾರದ ಗೊಂದಲಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಮೇಶ್ ಕುಮಾರ್ ಅವರು, ನಾನು ಸ್ಪೀಕರ್ ಆಗಿದ್ದು ಸದನ ನಡೆಸುವುದು ನನ್ನ ಕೆಲಸ ಅಷ್ಟೇ. ಆದರೆ ಶಾಸಕರ ಹಾಜರಾತಿಗಾಗಿ ಬಯೋ ಮೆಟ್ರಿಕ್ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ಈ ಬಗ್ಗೆ ಯಾವುದೇ ಚಿಂತನೆ ಇಲ್ಲ. ಈಗಲೇ ಶಾಸಕರು ಬರೋದಿಲ್ಲ ಅಂತ ಹೇಳೋದು ಬೇಡ. ಶಾಸಕರು ಎಂಪ್ಲಾಯ್ ಗಳು ಅಲ್ಲ. ಅವರು ಜನ ಪ್ರತಿನಿಧಿಗಳು ಎಂದು ಹೇಳುವ ಮೂಲಕ ಬಯೋ ಮೆಟ್ರಿಕ್ ವ್ಯವಸ್ಥೆ ಜಾರಿಯನ್ನು ವಿರೋಧಿಸಿದರು.

  • ಕುರುಬ ಸಮುದಾಯದ ಬಹು ವರ್ಷಗಳ ಕನಸನ್ನ ನನಸು ಮಾಡಲಿದ್ದಾರೆ ಸಿಎಂ ಸಿದ್ದರಾಮಯ್ಯ

    ಕುರುಬ ಸಮುದಾಯದ ಬಹು ವರ್ಷಗಳ ಕನಸನ್ನ ನನಸು ಮಾಡಲಿದ್ದಾರೆ ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಇಂದು ಶಾಸಕರ ಭವನದಲ್ಲಿ ಕುರುಬ ಸಮುದಾಯದ ಬಹು ವರ್ಷಗಳ ಕನಸನ್ನು ಸಿಎಂ ಸಿದ್ದರಾಮಯ್ಯ ನನಸು ಮಾಡಲಿದ್ದಾರೆ.

    ವಿಧಾನಸೌಧ ಆವರಣದಲ್ಲಿ ಕನಕದಾಸ ಪ್ರತಿಮೆ ಸ್ಥಾಪಿಸಬೇಕು ಎಂಬ ಬೇಡಿಕೆ ಮೊದಲಿನಿಂದಲು ಇತ್ತು. ಕುರುಬ ಸಮುದಾಯದ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಪ್ರತಿಮೆ ಸ್ಥಾಪಿಸಬೇಕು ಎಂಬ ಒತ್ತಡ ಹೆಚ್ಚಿತ್ತು. ಆದ್ರೆ ವಿಧಾನಸೌಧ ಆವರಣದಲ್ಲಿ ಕನಕದಾಸ ಪ್ರತಿಮೆ ಸ್ಥಾಪನೆಗೆ ಅವಕಾಶ ಸಿಕ್ಕಿರಲಿಲ್ಲ.

    ವಿಧಾನಸೌಧ ಆವರಣದಲ್ಲಿ ಪ್ರತಿಮೆ ಸ್ಥಾಪನೆಗೆ ಅವಕಾಶ ಆಗದ ಹಿನ್ನೆಲೆ, ಶಾಸಕರ ಭವನದ ಆವರಣದಲ್ಲಿ ಪ್ರತಿಮೆ ಸ್ಥಾಪಿಸಲಾಗಿದೆ. ಇಂದು ಸಂಜೆ 5 ಗಂಟೆಗೆ ಶಾಸಕರ ಭವನದ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣ ವಾಗಿರುವ ಪ್ರತಿಮೆ ಲೋಕಾರ್ಪಣೆ ಆಗಲಿದೆ. ಈ ಮೂಲಕ ತಮ್ಮ ಸಮುದಾಯದ ಬಹು ವರ್ಷಗಳ ಕನಸು ನನಸು ಮಾಡುವಲ್ಲಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.