Tag: ಶಾಸಕರು

  • ಪ್ರತಿಯೊಬ್ಬ ಶಾಸಕರು ಪ್ರತಿದಿನ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ- ಜೈಲಿನಿಂದ್ಲೇ ಕೇಜ್ರಿವಾಲ್‌ ಪತ್ರ

    ಪ್ರತಿಯೊಬ್ಬ ಶಾಸಕರು ಪ್ರತಿದಿನ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ- ಜೈಲಿನಿಂದ್ಲೇ ಕೇಜ್ರಿವಾಲ್‌ ಪತ್ರ

    ನವದೆಹಲಿ: ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಜೈಲಿನಿಂದಲೇ ಇದೀಗ ಮತ್ತೊಂದು ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ಮುಖ್ಯಮಂತ್ರಿಗಳು ತಮ್ಮ ಎಲ್ಲಾ ಶಾಸಕರಿಗೆ ಸಂದೇಶವನ್ನು ರವಾನಿಸಿದ್ದಾರೆ.

    ಈ ಪತ್ರವನ್ನು ಇಂದು ಸುದ್ದಿಗೋಷ್ಠಿ ನಡೆಸಿ ಪತ್ನಿ ಸುನಿತಾ ಕೇಜ್ರಿವಾಲ್‌ (Sunita Kejriwal) ಅವರು ಮಾಧ್ಯಮಗಳ ಮುಂದೆ ಓದಿದ್ದಾರೆ. ನಾನು ಜೈಲಿನಲ್ಲಿರುವ ಕಾರಣ ದೆಹಲಿಯ ಜನರು ಯಾವುದೇ ರೀತಿಯಲ್ಲಿ ತೊಂದರೆ ಅನುಭವಿಸಬಾರದು. ಪ್ರತಿಯೊಬ್ಬ ಶಾಸಕರು ಪ್ರತಿದಿನ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ. ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸಬೇಕು ಎಂದು ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ..?: ತಮ್ಮ ಗೈರುಹಾಜರಿಯಲ್ಲಿ ದೆಹಲಿ ಜನ ಯಾವುದೇ ತೊಂದರೆಗಳನ್ನು ಎದುರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಆಪ್ (AAP) ಶಾಸಕರು ಪ್ರತಿದಿನ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಜೈಲು ಸೇರಿದ ಕೇಜ್ರಿವಾಲ್‌ 4.5 ಕೆಜಿ ಕಳೆದುಕೊಂಡಿದ್ದಾರೆ: ಆಪ್‌ ಗಂಭೀರ ಆರೋಪ

    ನಾನು ಜೈಲಿನಲ್ಲಿರುವ ಮಾತ್ರಕ್ಕೆ ದೆಹಲಿಯ ಜನರು ಯಾವುದೇ ರೀತಿಯಲ್ಲಿ ತೊಂದರೆ ಅನುಭವಿಸಬಾರದು. ಪ್ರತಿಯೊಬ್ಬ ಶಾಸಕರು (Delhi MLA) ಪ್ರತಿದಿನ ತಮ್ಮ ಪ್ರದೇಶಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಚರ್ಚಿಸಿ ಅವುಗಳನ್ನು ಬಗೆಹರಿಸಬೇಕು ಎಂದು ತಿಳಿಸಿದ್ದಾರೆ.

    ಮದ್ಯ ಹಗರಣಕ್ಕೆ (Liquor Scam) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೊಳಗಾದ ಕೇಜ್ರಿವಾಲ್‌ ಅವರನ್ನು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ಸೋಮವಾರ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗಿದೆ. ಮುಖ್ಯಮಂತ್ರಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮನೆಯ ಆಹಾರವನ್ನು ನೀಡಲಾಗುತ್ತದೆ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಗಾಗಿ ಅವರ ಸೆಲ್ ಬಳಿ ಕ್ವಿಕ್‌ ರೆಸ್ಪಾನ್ಸ್‌ ತಂಡವನ್ನು ನಿಯೋಜಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

  • ಲಂಚ ಪ್ರಕರಣದಲ್ಲಿ ಕಾನೂನು ಕ್ರಮದಿಂದ ಜನಪ್ರತಿನಿಧಿಗಳಿಗೆ ವಿನಾಯಿತಿ ಇಲ್ಲ – ಸುಪ್ರೀಂ ಕೋರ್ಟ್

    ನವದೆಹಲಿ: ಸಂಸತ್ತಿನ ಸದಸ್ಯರು (MPs) ಮತ್ತು ವಿಧಾನಸಭೆಗಳ ಸದಸ್ಯರು (MLAs) ಲಂಚ ಪಡೆದ ಆರೋಪ ಬಂದಾಗ ಸಂವಿಧಾನದ 105 ಮತ್ತು 194ನೇ ವಿಧಿಯ ಅಡಿಯಲ್ಲಿ ಕಾನೂನು ಕ್ರಮದಿಂದ ಯಾವುದೇ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ (Supreme Court) ಏಳು ಮಂದಿ ನ್ಯಾಯಧೀಶರ ಸಾಂವಿಧಾನಿಕ ಪೀಠ ತೀರ್ಪು ಪ್ರಕಟಿಸಿದೆ.

    ಸಂವಿಧಾನದ (Constitution) ಪರಿಚ್ಛೇದ 105 (2) ಮತ್ತು 194 (2)ರ ಅಡಿಯಲ್ಲಿ ಶಾಸಕರ ಕಾನೂನು ವಿನಾಯಿತಿಯು ಲಂಚ ಪಡೆದ ಆರೋಪಗಳಿಂದ ಅವರನ್ನು ರಕ್ಷಿಸುತ್ತದೆಯೇ ಎಂದು ಪ್ರಶ್ನಿಸಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಸೊಸೆ ಸೀತಾ ಸೊರೆನ್ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸಾಂವಿಧಾನಿಕ ಪೀಠವು ತೀರ್ಪು ನೀಡಿದೆ.

    ಸೋಮವಾರ (ಮಾ.4) ಈ ಬಗ್ಗೆ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (DY Chandrachud), ನ್ಯಾ. ಎ.ಎಸ್ ಬೋಪಣ್ಣ, ಎಂ.ಎಂ ಸುಂದ್ರೇಶ್, ಪಿ.ಎಸ್ ನರಸಿಂಹ, ಜೆ.ಬಿ ಪರ್ದಿವಾಲಾ, ಪಿ.ವಿ ಸಂಜಯ್ ಕುಮಾರ್ ಮತ್ತು ಮನೋಜ್ ಮಿಶ್ರಾ ಅವರಿದ್ದ ಸಾಂವಿಧಾನಿಕ ಪೀಠವು, ಸಂಸತ್ತಿನಲ್ಲಿ ಅಥವಾ ಶಾಸಕಾಂಗ ಸಭೆಯಲ್ಲಿ ಹೇಳುವ ಅಥವಾ ಮಾಡಿದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ 105 (2) ಮತ್ತು 194 (2) ವಿಧಿಗಳ ಅಡಿಯಲ್ಲಿ ಶಾಸಕರಿಗೆ ನೀಡಲಾದ ವಿನಾಯಿತಿಯು ಶಾಸಕಾಂಗ ಸದನದ ಸಾಮೂಹಿಕ ಕಾರ್ಯನಿರ್ವಹಣೆಗೆ ಸಂಬಂಧಿಸಿದೆ ಎಂದು ಹೇಳಿದೆ. ಇದನ್ನೂ ಓದಿ: ಮಮತಾ ಸವಾಲು ಸ್ವೀಕಾರ – ಸಕ್ರೀಯ ರಾಜಕಾರಣಕ್ಕೆ ಇಳಿದ ಕೋಲ್ಕತ್ತಾ ಹೈಕೋರ್ಟ್‌ ಜಡ್ಜ್‌ ಗಂಗೋಪಾಧ್ಯಾಯ

    ಮುಕ್ತ ಚರ್ಚೆಗಳಿಗೆ ಅನುಕೂಲವಾಗುವ ವಾತಾವರಣವನ್ನು ಉಳಿಸಿಕೊಳ್ಳಲು ಜನಪ್ರತಿನಿಧಿಗಳಿಗೆ ಮಾತನಾಡಲು ಅವಕಾಶ ನೀಡಿದೆ. ಆದರೆ, ಸದಸ್ಯರಿಗೆ ಭಾಷಣ ಮಾಡಲು ಲಂಚ ನೀಡಿದರೆ, ಅಂತಹ ವಾತಾವರಣ ಹಾಳಾಗುತ್ತದೆ. ಆದ್ದರಿಂದ, ನ್ಯಾಯಾಲಯವು ಸಂವಿಧಾನದ ವಿಧಿ 105 (2) ಅಥವಾ 194ರ ಅಡಿಯಲ್ಲಿ ವಿನಾಯಿತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು. ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆಯಿಂದಲೇ ಸದ್ದು ಮಾಡ್ತಿದ್ದ ಮೂವರು ಸಂಸದರಿಗೆ ಬಿಜೆಪಿ ಟಿಕೆಟ್‌ ನಿರಾಕರಣೆ

    ಲಂಚದ ಕಾರಣದಿಂದ ಒಂದು ನಿರ್ದಿಷ್ಟ ರೀತಿಯಲ್ಲಿ ಮತ ಚಲಾಯಿಸಲು ಸದಸ್ಯನನ್ನು ಪ್ರೇರೇಪಿಸಿದಾಗ ಮತ್ತು ಅದು ಭಾರತೀಯ ಸಾಂವಿಧಾನಿಕ ಪ್ರಜಾಪ್ರಭುತ್ವದ ಅಡಿಪಾಯವನ್ನು ನಾಶಪಡಿಸಿದಂತಾಗುತ್ತದೆ. ಲಂಚ ಪಡೆಯುವ ಕಾರ್ಯವು ಶಾಸಕರನ್ನು ಕ್ರಿಮಿನಲ್ ಆರೋಪಗಳಿಗೆ ಒಡ್ಡಬಹುದು ಮತ್ತು ಲಂಚ ಸ್ವೀಕರಿಸುವ ಶಾಸಕರು ಲಂಚಕ್ಕೆ ಪ್ರತಿಕ್ರಿಯೆಯಾಗಿ ಅಧಿಕಾರ ದುರ್ಬಳಕೆ ಮಾಡಬಹುದು. ಲಂಚವು ಸಾರ್ವಜನಿಕ ಜೀವನದಲ್ಲಿ ನಿಷ್ಠೆಯನ್ನು ಕಳೆದುಕೊಳ್ಳುತ್ತದೆ ಎಂದು ಕೋರ್ಟ್‌ ಹೇಳಿದೆ.

    ಇದೇ ವೇಳೆ ಪಿ.ವಿ.ನರಸಿಂಹರಾವ್ ಅವರ ಹಳೆ ಪ್ರಕರಣವನ್ನು ಉಲ್ಲೇಖಿಸಿದ ಕೋರ್ಟ್‌ 1998ರ ಜನಪ್ರತಿನಿಧಿಗಳ ವಿನಾಯಿತಿಯ ತೀರ್ಪನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದನ್ನೂ ಓದಿ: ನೌಕಾಪಡೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ನಿಯೋಜನೆಗೆ ಸಿದ್ಧತೆ – ಭಾರತಕ್ಕೆ ಭೀಮ ಬಲ

  • ಎಂಪಿ, ಎಂಎಎಲ್‍ಎಗಳ ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಸುಪ್ರೀಂ ಸೂಚನೆ

    ಎಂಪಿ, ಎಂಎಎಲ್‍ಎಗಳ ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಸುಪ್ರೀಂ ಸೂಚನೆ

    ನವದೆಹಲಿ: ಸಂಸದರು (MP) ಮತ್ತು ಶಾಸಕರ (MLA) ವಿರುದ್ಧ ಬಾಕಿ ಉಳಿದಿರುವ ಪ್ರಕರಣಗಳ ಮೇಲೆ ನಿಗಾ ಇಡಲು ವಿಶೇಷ ಪೀಠ ರಚನೆ ಮಾಡುವಂತೆ ಹಾಗೂ ಪೀಠದ ನೇತೃತ್ವವನ್ನು ಹೈಕೋರ್ಟ್ (High Court) ಮುಖ್ಯ ನ್ಯಾಯಮೂರ್ತಿಗಳು ವಹಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ (Supreme Court) ಸೂಚನೆ ನೀಡಿದೆ.

    ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ತ್ವರಿತ ವಿಲೇವಾರಿಗಾಗಿ ನಿರ್ದೇಶನ ನೀಡಬೇಕು. ಆರು ವರ್ಷಗಳ ನಿಷೇಧಕ್ಕೆ ವಿರುದ್ಧವಾಗಿ ಹಾಲಿ ಶಾಸಕರು ಸೇರಿದಂತೆ ಅಪರಾಧಿ ರಾಜಕಾರಣಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಜೀವಮಾನದ ನಿಷೇಧವನ್ನು ಹೇರುವಂತೆ ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ಸಿಜೆಐ ನೇತೃತ್ವದ ಪೀಠ ವಿಚಾರಣೆ ನಡೆಸಿತು. ಇದನ್ನೂ ಓದಿ: ಗ್ರಾಹಕರಿಗೆ ರಶೀದಿ ನೀಡದೆ 1.62 ಕೋಟಿ ರೂ. ವಂಚನೆ – ಬ್ಯಾಂಕ್ ಮ್ಯಾನೇಜರ್ ಅರೆಸ್ಟ್

    ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠವು ಮುಖ್ಯವಾಗಿ ಸಂಸದರು ಅಥವಾ ಶಾಸಕರ ವಿರುದ್ಧ ಮರಣದಂಡನೆ ವಿಧಿಸಬಹುದಾದ ಪ್ರಕರಣಗಳಿಗೆ ಇತರ ಪ್ರಕರಣಗಳಿಗಿಂತ ಹೆಚ್ಚಿನ ಆದ್ಯತೆ ನೀಡಬೇಕು. ಇಂತಹ ಪ್ರಕರಣಗಳ ತ್ವರಿತ ವಿಲೇವಾರಿ ಮಾಡುವಂತೆ ಕೋರ್ಟ್ ನಿರ್ದೇಶಿಸಿದೆ. ಸಂಬಂಧಪಟ್ಟ ಪ್ರಧಾನ ಸೆಷನ್ಸ್ ನ್ಯಾಯಾಧೀಶರು ಅಂತಹ ಪ್ರಕರಣಗಳ ವಿಚಾರಣೆಗೆ ಸಾಕಷ್ಟು ಮೂಲಸೌಕರ್ಯ ಸೌಲಭ್ಯಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಇದೇ ವೇಳೆ ಹೇಳಿದೆ.

    ಉಪಾಧ್ಯಾಯ ಅವರು ಕಳೆದ ಏಪ್ರಿಲ್‍ನಲ್ಲಿ ಗಂಭೀರ ಅಪರಾಧಗಳಿಗಾಗಿ ಚಾರ್ಜ್‍ಶೀಟ್ ಮಾಡಿದ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಮನವಿ ಮಾಡಿದ್ದರು. ಇದು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಟೀಕಿಸಿತ್ತು. ಇದನ್ನೂ ಓದಿ: 2023ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆರ್‌ಡಿ ಪಾಟೀಲ್ – ಪ್ರಚಾರಕ್ಕೆ ಬಂದಿದ್ರು ಅಖಿಲೇಶ್ ಯಾದವ್

  • ಬಂಗಾಳದ ಶಾಸಕ, ಮಂತ್ರಿಗಳಿಗೆ ಸಂಬಳ ಬಂಪರ್ ಹೈಕ್ – ತನಗೆ ವೇತನ ಬೇಡ ಎಂದ ಮಮತಾ

    ಬಂಗಾಳದ ಶಾಸಕ, ಮಂತ್ರಿಗಳಿಗೆ ಸಂಬಳ ಬಂಪರ್ ಹೈಕ್ – ತನಗೆ ವೇತನ ಬೇಡ ಎಂದ ಮಮತಾ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಗುರುವಾರ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ರಾಜ್ಯದ ಸಚಿವರು, ಕ್ಯಾಬಿಬೆಟ್ ಮಂತ್ರಿಗಳ ಮಾಸಿಕ ವೇತನವನ್ನು (Salary) ಬಂಪರ್ ಹೆಚ್ಚಳ ಮಾಡಿದ್ದಾರೆ. ಆದರೂ ಬ್ಯಾನರ್ಜಿ ತನಗೆ ಯಾವುದೇ ವೇತನ ಬೇಡ ಎಂದು ಹೇಳಿದ್ದಾರೆ.

    ಬಂಗಾಳದ ಸಚಿವರು ಹಾಗೂ ಮಂತ್ರಿಗಳ ಮಾಸಿಕ ವೇತನವನ್ನು ಪ್ರತಿ ವರ್ಗಕ್ಕೆ 40,000 ರೂ.ನಷ್ಟು ಹೆಚ್ಚಳ ಮಾಡಲಾಗಿದೆ. ಈ ಹೆಚ್ಚಳದಿಂದ ಶಾಸಕರಿಗೆ ಮಾಸಿಕವಾಗಿ 10,000 ರೂ. ಬದಲು 50,000 ರೂ. ಆಗಿದೆ. ಅದೇ ರೀತಿ ಮಂತ್ರಿಗಳಿಗೆ 10,900 ರೂ. ಬದಲು 50,900 ರೂ. ನೀಡಲಾಗುತ್ತದೆ.

    ಸಂಪುಟದ ಸಚಿವರಾದರೆ ವೇತನ 11,000 ರೂ. ನಿಂದ 51,000 ರೂ. ಹೆಚ್ಚಳವಾಗಿದೆ. ಕ್ಯಾಬಿನೆಟ್ ಮಂತ್ರಿಗಳು, ರಾಜ್ಯ ಸಚಿವರು ಮತ್ತು ಶಾಸಕರು ಮಾಸಿಕ ವೇತನದ ಜೊತೆಗೆ ಅರ್ಹರಾಗಿರುವ ಇತರ ಹೆಚ್ಚುವರಿ ಸವಲತ್ತುಗಳು ಮತ್ತು ಭತ್ಯೆಗಳು ಹಿಂದೆ ಇದ್ದಂತೆಯೇ ಮುಂದುವರಿಯಲಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಇನ್ನೂ ತಮ್ಮ ಪೂರ್ವಾಶ್ರಮ RSS ಗುಂಗಿನಲ್ಲಿದ್ದಂತಿದೆ – ಸಿದ್ದರಾಮಯ್ಯ ಕಿಡಿ

    ಇದರರ್ಥ ಶಾಸಕರು ಪಡೆಯುವ ನಿಜವಾದ ಮಾಸಿಕ ಪಾವತಿಯೊಂದಿಗೆ ಸಂಬಳ, ಭತ್ಯೆಗಳು ಮತ್ತು ಸವಲತ್ತುಗಳು ಈಗ ಮಾಸಿಕವಾಗಿ 81,000 ರೂ.ಗಳಿಂದ 1.21 ಲಕ್ಷ ರೂ.ಗೆ ಹೆಚ್ಚಾಗುತ್ತದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದೇ ರೀತಿ ಇನ್ನು ಮುಂದೆ ಸಚಿವರು ಪಡೆಯುವ ನಿಜವಾದ ಮಾಸಿಕ ವೇತನವನ್ನು ತಿಂಗಳಿಗೆ 1.10 ಲಕ್ಷ ರೂ.ಗಳಿಂದ ತಿಂಗಳಿಗೆ ಸುಮಾರು 1.50 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುತ್ತಿದೆ.

    ಗುರುವಾರ ರಾಜ್ಯ ವಿಧಾನಸಭೆಯಲ್ಲಿ ವರ್ಧಿತ ವೇತನವನ್ನು ಘೋಷಿಸಿದ ಸಿಎಂ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಶಾಸಕರ ವೇತನ ಭಾರತದ ಇತರ ರಾಜ್ಯಗಳ ಶಾಸಕರಿಗೆ ಹೋಲಿಸಿದರೆ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ವೇತನವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಮಮತಾ ಬ್ಯಾನರ್ಜಿ ಈ ಹಿಂದಿನಿಂದಲೂ ಸಿಎಂ ಸ್ಥಾನಕ್ಕೆ ವೇತನವನ್ನು ಪಡೆಯದ ಹಿನ್ನೆಲೆ ತನಗೆ ಯಾವುದೇ ವೇತನ ಬೇಡ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆ ಸ್ಥಗಿತವಿಲ್ಲ, ತಪ್ಪು ಮಾಹಿತಿ ಕೊಟ್ಟವರ ವಿರುದ್ಧ ಕ್ರಮ: ಹೆಬ್ಬಾಳ್ಕರ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಘರ್‌ ವಾಪ್ಸಿ ಅಂತ ಮಾಡುವುದಕ್ಕೆ ಹೋದರೆ ಅರ್ಧ ಬಿಜೆಪಿ, ಅರ್ಧ ಜೆಡಿಎಸ್‌ ಖಾಲಿಯಾಗುತ್ತೆ: ಪ್ರಿಯಾಂಕ್‌ ಖರ್ಗೆ

    ಘರ್‌ ವಾಪ್ಸಿ ಅಂತ ಮಾಡುವುದಕ್ಕೆ ಹೋದರೆ ಅರ್ಧ ಬಿಜೆಪಿ, ಅರ್ಧ ಜೆಡಿಎಸ್‌ ಖಾಲಿಯಾಗುತ್ತೆ: ಪ್ರಿಯಾಂಕ್‌ ಖರ್ಗೆ

    ಬೆಂಗಳೂರು: ಘರ್‌ ವಾಪ್ಸಿ ಅಂತ ಮಾಡುವುದಕ್ಕೆ ಹೋದರೆ ಅರ್ಧ ಬಿಜೆಪಿ ಮತ್ತು ಅರ್ಧ ಜೆಡಿಎಸ್‌ ಖಾಲಿಯಾಗುತ್ತದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಟಾಂಗ್‌ ಕೊಟ್ಟಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ವಲಸಿಗರ ವಿಚಾರ ಸಾಕಷ್ಟು ಚರ್ಚೆ ಆಗಿದೆ. ಡಿಸಿಎಂ ಹಾಗೂ ಸಿಎಂ ಈ ಬಗ್ಗೆ ತಿಳಿಸಿದ್ದಾರೆ. ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿದರೆ ಯಾವುದೇ ಕಂಡಿಷನ್ ಇಲ್ಲದೆ ಬಂದರೆ ಸ್ವಾಗತ ಇದೆ. ನಾವು ಆಪರೇಷನ್ ಹಸ್ತ ಮಾಡುವುದಕ್ಕೆ ಹೊರಟಿಲ್ಲ. ಬಿಜೆಪಿ, ಜೆಡಿಎಸ್ ಒಡೆಯಲು ಹೋಗುತ್ತಿಲ್ಲ. ಯಾರ ಯಾರ ಅಸ್ತಿತ್ವ ಏನೂ ಅನ್ನೋದನ್ನು ಜನರೇ ತೋರಿಸಿಕೊಟ್ಟಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ನವರು ಅವರವರ ಅಸ್ತಿತ್ವ ಕಾಪಾಡಿಕೊಂಡು ಹೋದರೆ ಸಾಕು ಎಂದು ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಸೋಲಿನ ಬಳಿಕ ದಳಪತಿಗೆ ಶಾಕ್ – ಪುಟ್ಟರಾಜುಗೆ ‘ಕೈ’ ನಾಯಕರಿಂದ ಗಾಳ

    ಚೆಲುವರಾಯಸ್ವಾಮಿಗೆ ಕೆಲವರು ಸಂಪರ್ಕದಲ್ಲಿ ಇರಬಹುದು. ಕೆಲವರು ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ. ನಮ್ಮ ಭಾಗಕ್ಕೆ ದನ ಕಾಯುವ ಮಂತ್ರಿಗೆ ಬಿಜೆಪಿಯವರು ಖಾಯಂ ಸ್ಥಾನ ಕೊಡುತ್ತಿದ್ದರು. ಘರ್ ವಾಪ್ಸಿ ಅಂತ ಮಾಡೋಕೆ ಹೋದರೆ ಅರ್ಧ ಬಿಜೆಪಿ, ಅರ್ಧ ಜೆಡಿಎಸ್ ಖಾಲಿಯಾಗುತ್ತದೆ ಎಂದು ತಿಳಿಸಿದ್ದಾರೆ.

    ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಿದ ವಿಚಾರವಾಗಿ ಮಾತನಾಡಿ, ಯಡಿಯೂರಪ್ಪರನ್ನು ಬಿಜೆಪಿಯವರು ಹೇಗೆ ನಡೆಸಿಕೊಂಡರು ಅಂತ ಗೊತ್ತಿದೆ. ಈಗ ಅಲ್ಲಿ ಕ್ಯಾಪ್ಟನ್ ಆಗೋಕೂ ಯಾರೂ ರೆಡಿ ಇಲ್ಲ. ಕ್ಯಾಪ್ಟನ್ನೂ ಇಲ್ಲ. ಬಿಎಸ್‌ವೈದು ಈಗ ಮಾತು ನಡೆಯುತ್ತಿದ್ದರೆ ಇಷ್ಟು ಜನ ಬಿಜೆಪಿಯವರು ಬಿಟ್ಟು ಬರ್ತಾ ಇದ್ರಾ? ಚುನಾವಣೆ ಬಂದಾಗ ಯಡಿಯೂರಪ್ಪ ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡಿದ್ದರು. ಯಡಿಯೂರಪ್ಪ ಹೇಳಿದವರಿಗೆ ಎಷ್ಟು ಜನರಿಗೆ ಟಿಕೆಟ್ ಕೊಟ್ಟರು ಹೇಳಿ? ಯಡಿಯೂರಪ್ಪಗೆ ಕಣ್ಣೀರಿ ತರಿಸಿ ಇಳಿಸಿದ್ದನ್ನು ಎಲ್ಲರೂ ನೋಡಿದ್ದಾರೆ. ಬಿಜೆಪಿ ಈಗ ಮುಳುಗುತ್ತಿರುವ ಹಡಗು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಾಗಿನ ಅರ್ಪಣೆಗೂ ಮುನ್ನವೇ ಖಾಲಿಯಾಗ್ತಿದೆ ಕಬಿನಿಯ ಒಡಲು

    ಸುಧಾಮ್ ದಾಸ್ ನಾಮನಿರ್ದೇಶನಕ್ಕೆ ಹಿರಿಯ ದಲಿತ ಸಚಿವರ ವಿರೋಧ ಕುರಿತು ಪ್ರತಿಕ್ರಿಯಿಸಿ, ಸುಧಾಮ್ ದಾಸ್ ಅವರಿಗೆ ಕೊಡಲೇಬಾರದು ಅಂತ ಏನೂ ಹೇಳಿಲ್ಲ. ಪರಿಶೀಲಿಸಿ ಅಂತ ಪತ್ರ ಬರೆದಿದ್ದಾರೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ. ಮೂರು ತಿಂಗಳ ಹಿಂದಷ್ಟೇ ಕಾಂಗ್ರೆಸ್‌ಗೆ ಬಂದಿದ್ದಾರೆ ಅನ್ನೋದು ಬೇಡ. ಪಕ್ಷದಲ್ಲಿ ಅವರೂ ಶ್ರಮ ಹಾಕಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಂಗಾಪುರದಲ್ಲಿ ಸರ್ಕಾರವನ್ನು ಉರುಳಿಸುವ ಷಡ್ಯಂತ್ರದ ಬಗ್ಗೆ ತಿಳಿದಿಲ್ಲ: ಸಿಎಂ

    ಸಿಂಗಾಪುರದಲ್ಲಿ ಸರ್ಕಾರವನ್ನು ಉರುಳಿಸುವ ಷಡ್ಯಂತ್ರದ ಬಗ್ಗೆ ತಿಳಿದಿಲ್ಲ: ಸಿಎಂ

    ಹಾವೇರಿ: ಸಿಂಗಾಪುರದಲ್ಲಿ (Singapore) ಸರ್ಕಾರವನ್ನು ಉರುಳಿಸಲು ಷಡ್ಯಂತ್ರ ನಡೆದಿರುವ ಬಗ್ಗೆ ನನಗೆ ಗೊತ್ತಿಲ್ಲ. ಹೇಳಿಕೆ ನೀಡಿರುವ ಡಿಕೆ ಶಿವಕುಮಾರ್ (DK Shivakumar) ಅವರನ್ನೇ ಕೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.

    ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರ ಬರುತ್ತದೆ ಎಂದು ಬಿಜೆಪಿಯವರು ಟ್ರೋಲ್ ಮಾಡಿರುವ ಬಗ್ಗೆ ಉತ್ತರಿಸಿ, ಈಗ ಮಳೆಯಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು. ಈ ಮೂಢ ನಂಬಿಕೆಗಳಲ್ಲಿ ಹಾಗೂ ಮೌಢ್ಯಗಳಲ್ಲಿ ನನಗೆ ನಂಬಿಕೆ ಇಲ್ಲ. ಬಿಜೆಪಿ ಅಧಿಕಾರದ ಅವಧಿಯಲ್ಲಿ ಪ್ರವಾಹ ಬಂದು ಒಂದು ಲಕ್ಷ ಮನೆಗಳು ಬಿದ್ದುಹೋಗಿದ್ದವು. ಪ್ರವಾಹ ಉಂಟಾಗುವುದು ಹಾಗೂ ಮಳೆ ಕೊರತೆಯಾಗುವುದು ಸ್ವಾಭಾವಿಕ. ಈಗ ಹವಾಮಾನ ಬದಲಾವಣೆ ಇದೆ. ಮುಂಗಾರು ಜೂನ್ ತಿಂಗಳಲ್ಲಿ ಪ್ರಾರಂಭವಾಗುವುದು ಜುಲೈನಲ್ಲಿ ಆಗುತ್ತಿದೆ. ಜಗತ್ತಿನ ಎಲ್ಲೆಡೆ ಹವಾಮಾನ ಬದಲಾವಣೆಯಾಗುತ್ತಿದೆ ಎಂದರು. ಇದನ್ನೂ ಓದಿ: ಯಾರು ಯಾರಿಗೂ ಪತ್ರ ಬರೆದಿಲ್ಲ – ಇದೆಲ್ಲಾ ಊಹಾಪೋಹದ ಸುದ್ದಿ: ಡಿಕೆಶಿ

    ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಂದಾಗುತ್ತಿರುವ ಬಗ್ಗೆ ನನಗೆ ತಿಳಿದಿಲ್ಲ, ಮಾತುಕತೆ ನಡೆಸುತ್ತಿದ್ದಾರೆ. ಅವರು ಒಂದಾದರೆ ನಮಗೇನೂ ಭಯವಿಲ್ಲ. ನಾವು 15-20 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ಅವರು ಒಂದಾದರೂ, ಒಂದಾಗದೇ ಇದ್ದರು ಗೆಲ್ಲುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಸಚಿವರ ವಿರುದ್ಧ ಶಾಸಕರ ಅಸಮಾಧಾನ – ಸಿಎಂಗೆ 25 ಶಾಸಕರ ದೂರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾರು ಯಾರಿಗೂ ಪತ್ರ ಬರೆದಿಲ್ಲ – ಇದೆಲ್ಲಾ ಊಹಾಪೋಹದ ಸುದ್ದಿ: ಡಿಕೆಶಿ

    ಯಾರು ಯಾರಿಗೂ ಪತ್ರ ಬರೆದಿಲ್ಲ – ಇದೆಲ್ಲಾ ಊಹಾಪೋಹದ ಸುದ್ದಿ: ಡಿಕೆಶಿ

    ಬೆಂಗಳೂರು: ಯಾವ ಶಾಸಕರು (MLA) ಕೂಡಾ ಸಚಿವರ (Minister) ವಿರುದ್ಧ ಪತ್ರ ಬರೆದಿಲ್ಲ. ಅವರಲ್ಲಿ ಯಾವುದೇ ಅಸಮಾಧಾನವೂ ಇಲ್ಲ. ಇದೆಲ್ಲಾ ಊಹಾಪೋಹದ ಸುದ್ದಿಗಳು ಅಷ್ಟೇ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆ ನೀಡಿದ್ದಾರೆ.

    ಶಾಸಕರು ಸಚಿವರ ವಿರುದ್ಧ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿರುವ ಬಗೆಗಿನ ಮಾಧ್ಯಮದರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಯಾವ ಅಸಮಧಾನವೂ ಇಲ್ಲ. ಇದೆಲ್ಲಾ ಊಹಾಪೋಹದ ಸುದ್ದಿಗಳು. ಎಲ್ಲಾ ಸಚಿವರೂ ಅವರವರ ಕ್ಷೇತ್ರದಲ್ಲಿ ಶಾಸಕರ ಕೆಲಸ ಮಾಡುತ್ತಿದ್ದಾರೆ. ಸದ್ಯ ಟ್ರಾನ್ಸ್‌ಫರ್ ಟೈಮ್ ಮುಗಿದಿದ್ದು, ಇನ್ನು ಉಳಿದಿದ್ದರೆ ಅದನ್ನು ಮುಖ್ಯಮಂತ್ರಿಗಳು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.

    ನಾವು 5 ಗ್ಯಾರಂಟಿ ಕೊಟ್ಟಿದ್ದೇವೆ. ಅದನ್ನು ಜಾರಿಗೆ ತರುವ ಬಗ್ಗೆ ಶಾಸಕರ ಜೊತೆ ಮಾತನಾಡಬೇಕಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ನಮ್ಮ ಯೋಜನೆ ಇಂಪ್ಲಿಮೆಂಟ್ ಮಾಡುವ ಬಗ್ಗೆ ಚರ್ಚೆ ನಡೆಸುತ್ತೇವೆ. ಶಾಸಕರು ಹೆಚ್ಚಿನ ಅನುದಾನ ಕೇಳುತ್ತಿದ್ದಾರೆ. 10 ಕೋಟಿ, 20 ಕೋಟಿ, 100 ಕೋಟಿ, 300 ಕೋಟಿ ಅಂತ ಅನುದಾನ ಕೇಳುತ್ತಿದ್ದಾರೆ. ಕೆಲವೊಂದು ಭರವಸೆ ಕೊಟ್ಟಿರುತ್ತೇವೆ. ಆದರೆ 1 ವರ್ಷಗಳ ಸಮಯ ಸಮಾಧಾನದಿಂದ ಕಾಯಲು ಹೇಳಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಸಚಿವರ ವಿರುದ್ಧ ಶಾಸಕರ ಅಸಮಾಧಾನ – ಸಿಎಂಗೆ 25 ಶಾಸಕರ ದೂರು

    ಶಾಸಕಾಂಗ ಪಕ್ಷದ ಸಭೆಯಲ್ಲಿ ಇದನ್ನೆಲ್ಲಾ ಮಾತನಾಡುತ್ತೇವೆ. ಹಿಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲವು ವಿಚಾರ ಚರ್ಚೆ ಮಾಡಿದ್ದೆವು. ಉಳಿದ ವಿಚಾರ ನಾಡಿದ್ದು ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: PFI, ಇಂಡಿಯನ್ ಮುಜಾಹಿದೀನ್‌ನಲ್ಲೂ ಭಾರತ ಅನ್ನೋ ಪದವಿದೆ – ವಿಪಕ್ಷಗಳ INDIA ಒಕ್ಕೂಟಕ್ಕೆ ಮೋದಿ ಟಾಂಗ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇಶದ 44% ಶಾಸಕರ ವಿರುದ್ಧ ಇದೆ ಕ್ರಿಮಿನಲ್ ಕೇಸ್- ಕರ್ನಾಟಕದಲ್ಲಿದ್ದಾರೆ ಶ್ರೀಮಂತ ಎಂಎಲ್‌ಎಗಳು!

    ದೇಶದ 44% ಶಾಸಕರ ವಿರುದ್ಧ ಇದೆ ಕ್ರಿಮಿನಲ್ ಕೇಸ್- ಕರ್ನಾಟಕದಲ್ಲಿದ್ದಾರೆ ಶ್ರೀಮಂತ ಎಂಎಲ್‌ಎಗಳು!

    ನವದೆಹಲಿ: ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನಡೆಸಿದ ಇತ್ತೀಚಿನ ವಿಶ್ಲೇಷಣೆಯಲ್ಲಿ ಭಾರತದಾದ್ಯಂತ ವಿವಿಧ ರಾಜ್ಯಗಳ ವಿಧಾನಸಭೆಯ ಶಾಸಕರಲ್ಲಿ (MLA)ಸುಮಾರು 44% ರಷ್ಟು ಶಾಸಕರು ತಮ್ಮ ಮೇಲೆ ಕ್ರಿಮಿನಲ್ ಕೇಸ್‌ಗಳು (Criminal Case) ಇರುವುದಾಗಿ ಘೋಷಿಸಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.

    ರಾಷ್ಟ್ರವ್ಯಾಪಿ ರಾಜ್ಯ ವಿಧಾನಸಭೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸ್ತುತ ಶಾಸಕರು ಸಲ್ಲಿಸಿರುವ ಪ್ರಮಾಣಪತ್ರವನ್ನು ಪರಿಶೀಲಿಸಿದ ಎಡಿಆರ್ ಈ ಮಾಹಿತಿಗಳನ್ನು ತಿಳಿಸಿದೆ.

    ಇತ್ತೀಚಿನ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೂ ಮೊದಲು ಶಾಸಕರು ಸಲ್ಲಿಸಿರುವ ಡೇಟಾಗಳನ್ನು ಹೊರತೆಗೆಯಲಾಗಿದೆ. 28 ರಾಜ್ಯ ವಿಧಾನಸಭೆಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ 4,033 ವ್ಯಕ್ತಿಗಳ ಪೈಕಿ ಒಟ್ಟು 4,001 ಶಾಸಕರನ್ನು ಈ ವಿಶ್ಲೇಷಣೆ ಒಳಗೊಂಡಿದೆ.

    ವಿಶ್ಲೇಷಿಸಿದ ಶಾಸಕರಲ್ಲಿ 1,136 ಎಂದರೆ 28% ರಷ್ಟು ಜನರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಇತರ ಆರೋಪಗಳೂ ಸೇರಿವೆ.

    ರಾಜ್ಯವಾರು ನೋಡುವುದಾದರೆ ಕೇರಳದಲ್ಲಿ 135 ಶಾಸಕರ ಪೈಕಿ 95 ಶಾಸಕರು ಎಂದರೆ 70% ನಷ್ಟು ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಅದೇ ರೀತಿ ಬಿಹಾರದಲ್ಲಿ 242 ಶಾಸಕರಲ್ಲಿ 161 (67%), ದೆಹಲಿಯಲ್ಲಿ 70 ಶಾಸಕರಲ್ಲಿ 44 (63%), ಮಹಾರಾಷ್ಟ್ರದಲ್ಲಿ 284 ಶಾಸಕರಲ್ಲಿ 175 (62%), ತೆಲಂಗಾಣದಲ್ಲಿ 118 ಶಾಸಕರ ಪೈಕಿ 72 (61%), ಮತ್ತು ತಮಿಳುನಾಡಿನಲ್ಲಿ 224 ಶಾಸಕರಲ್ಲಿ 134 (60%) ತಮ್ಮ ಅಫಿಡವಿಟ್‌ಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇದನ್ನೂ ಓದಿ: Chandrayaan-3 ಬಾಹ್ಯಾಕಾಶ ನೌಕೆಯು ಸುರಕ್ಷಿತವಾಗಿದೆ: ಇಸ್ರೋ

    ಇನ್ನು ದೆಹಲಿಯಲ್ಲಿ 70 ಶಾಸಕರಲ್ಲಿ 37 (53%), ಬಿಹಾರದಲ್ಲಿ 242 ಶಾಸಕರಲ್ಲಿ 122 (50%), ಮಹಾರಾಷ್ಟ್ರದಲ್ಲಿ 284 ಶಾಸಕರಲ್ಲಿ 114 (40%), ಜಾರ್ಖಂಡ್‌ನಲ್ಲಿ 79 ಶಾಸಕರಲ್ಲಿ 31 (39%), ತೆಲಂಗಾಣದಲ್ಲಿ 118 ಶಾಸಕರಲ್ಲಿ 46 (39%), ಮತ್ತು ಉತ್ತರ ಪ್ರದೇಶದಲ್ಲಿ 403 ಶಾಸಕರಲ್ಲಿ 155 (38%) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ ಎಂದು ಎಡಿಆರ್ ತಿಳಿಸಿದೆ.

    ಆಸ್ತಿ ವಿವರ: ಕ್ರಿಮಿನಲ್ ಕೇಸ್‌ಗಳು ಮಾತ್ರವಲ್ಲದೇ ಶಾಸಕರ ಆಸ್ತಿಯ ವಿವರವನ್ನೂ ಎಡಿಆರ್ ಕಲೆಹಾಕಿದೆ. ಕರ್ನಾಟಕದಲ್ಲೇ ಅತಿ ಹೆಚ್ಚು ಶ್ರೀಮಂತ ಶಾಸಕರು ಇದ್ದಾರೆ ಎಂಬುದು ವಿಶ್ಲೇಷಣೆಯಲ್ಲಿ ತಿಳಿದುಬಂದಿದೆ. ಕರ್ನಾಟಕದ 223 ಶಾಸಕರ ಸರಾಸರಿ ಆಸ್ತಿಯ ಮೌಲ್ಯ 64.39 ಕೋಟಿ ರೂ. ಆಗಿದ್ದು, ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಆಂಧ್ರಪ್ರದೇಶ 174 ಶಾಸಕರಿಗೆ 28.24 ಕೋಟಿ ರೂ., ಮಹಾರಾಷ್ಟ್ರ 284 ಶಾಸಕರಿಗೆ 23.51 ಕೋಟಿ ರೂ.,ಇದೆ. ಇದನ್ನೂ ಓದಿ: ಖರೀದಿ ಹಾಲಿಗೆ ಲೀಟರ್‌ಗೆ 1.75 ರೂ. ಕಡಿತ ಮಾಡಿದ ಮನ್ಮುಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚುನಾವಣಾ ಕಣದಲ್ಲಿ ಸೋಲನ್ನುಂಡ 59 ಹಾಲಿ ಬಿಜೆಪಿ ಶಾಸಕರು

    ಚುನಾವಣಾ ಕಣದಲ್ಲಿ ಸೋಲನ್ನುಂಡ 59 ಹಾಲಿ ಬಿಜೆಪಿ ಶಾಸಕರು

    ಬೆಂಗಳೂರು : ಈ ಬಾರಿಯ ವಿಧಾನಸಭೆ ಚುನಾವಣೆ (Assembly Elections 2023) ನಿರೀಕ್ಷೆಗಳನ್ನು ಬುಡಮೇಲು ಮಾಡಿದೆ. ಘಾಟಾನುಘಟಿ ವ್ಯಕ್ತಿಗಳೇ ಮತದಾರರ ಮುಂದೆ ಮಂಡೆಯೂರಿದ್ದಾರೆ. ಅದರಲ್ಲೂ ಬಿಜೆಪಿಯ (BJP) ಬರೋಬ್ಬರಿ 59 ಹಾಲಿ ಶಾಸಕರು (MLA) ಸೋಲು ಮೂಲಕ ಬಿಜೆಪಿಗೆ ದೊಡ್ಡ ಪೆಟ್ಟು ನೀಡಿದ್ದಾರೆ. ಇದು ನಿರೀಕ್ಷೆ ಮಾಡದೇ ಇರುವಂತಹ ಸೋಲಾಗಿದೆ. ಅಲ್ಲದೇ, ಈ ಸೋಲನ್ನು ಬೇರೆ ಬೇರೆ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಮತ್ತೊಮ್ಮೆ ಗೆಲುವು ಬಯಸಿ, ಸೋಲುಂಡು ಬಿಜೆಪಿ ಶಾಸಕರ ಪಟ್ಟಿ ಇಲ್ಲಿದೆ.

    ಸೋಲುಂಡು ಬಿಜೆಪಿ ಶಾಸಕರ ಪಟ್ಟಿ

    ಅಥಣಿ – ಮಹೇಶ್ ಕುಮಟಳ್ಳಿ

    ಕುಡಚಿ – ಪಿ ರಾಜೀವ್

    ಕಾಗವಾಡ – ಶ್ರೀಮಂತ ಪಾಟೀಲ್

    ಕಿತ್ತೂರು – ಮಹಾಂತೇಶ್ ದೊಡ್ಡಗೌಡರ್

    ಮುಧೋಳ – ಗೋವಿಂದ ಕಾರಜೋಳ

    ಬೀಳಗಿ – ಮುರುಗೇಶ ನಿರಾಣಿ

    ಬಾಗಲಕೋಟೆ – ವೀರಣ್ಣ ಚರಂತಿಮಠ

    ಹುನಗುಂದ – ದೊಡ್ಡನಗೌಡ ಪಾಟೀಲ್

    ಮುದ್ದೇಬಿಹಾಳ – ಎ ಎಸ್ ಪಾಟೀಲ್ ನಡಹಳ್ಳಿ

    ದೇವರಹಿಪ್ಪರಗಿ – ಸೋಮನಗಗೌಡ ಪಾಟೀಲ್ ಸಾಸನೂರ್

    ಸಿಂದಗಿ – ರಮೇಶ್ ಭೂಸನೂರು

    ಸುರಪುರ – ರಾಜುಗೌಡ

    ಯಾದಗಿರಿ – ವೆಂಕಟರೆಡ್ಡಿ ಮುದ್ನಾಳ್

    ಸೇಡಂ – ರಾಜಕುಮಾರ್ ಪಾಟೀಲ್ ಸೇಡಂ

     

    ಕಲಬುರಗಿ ದಕ್ಷಿಣ – ದತ್ತಾತ್ರೇಯ ಪಾಟೀಲ್ ರೇವೂರ

    ಆಳಂದ – ಸುಭಾಷ್ ಗುತ್ತೇದಾರ್

    ದೇವದುರ್ಗ – ಶಿವನಗೌಡ ನಾಯಕ್

    ಕನಕಗಿರಿ – ಬಸವರಾಜ್ ದಡೇಸಗೂರ್

    ಗಂಗಾವತಿ – ಪರಣ್ಣ ಮುನವಳ್ಳಿ

    ಯಲಬುರ್ಗಾ – ಹಾಲಪ್ಪ ಆಚಾರ್

    ರೋಣ – ಕಳಕಪ್ಪ ಬಂಡಿ

    ನವಲಗುಂದ – ಶಂಕರ್ ಪಾಟೀಲ್ ಮುನೇನಕೊಪ್ಪ

    ಧಾರವಾಡ – ಅಮೃತ್ ದೇಸಾಯಿ

    ಕಾರವಾರ – ರೂಪಾಲಿ ನಾಯಕ್

    ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ

    ಭಟ್ಕಳ – ಸುನೀಲ್ ನಾಯ್ಕ್

    ಬ್ಯಾಡಗಿ – ವಿರೂಪಾಕ್ಷಪ್ಪ ಬಳ್ಳಾರಿ

    ಹಿರೇಕೆರೂರು – ಬಿ ಸಿ ಪಾಟೀಲ್

    ರಾಣೆಬೆನ್ನೂರು – ಅರುಣ್ ಕುಮಾರ್ ಪೂಜಾರ್

    ಶಿರಗುಪ್ಪ – ಎಂ ಎಸ್ ಸೋಮಲಿಂಗಪ್ಪ

    ಬಳ್ಳಾರಿ ಗ್ರಾಮೀಣ – ಶ್ರೀರಾಮಲು

    ಬಳ್ಳಾರಿ ನಗರ – ಸೋಮಶೇಖರ್ ರೆಡ್ಡಿ

    ಚಿತ್ರದುರ್ಗ – ತಿಪ್ಪಾರೆಡ್ಡಿ

    ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್

    ಜಗಳೂರು – ಎಸ್ ವಿ ರಾಮಚಂದ್ರಪ್ಲ

    ಹರಪನಹಳ್ಳಿ – ಕರುಣಾಕರ್ ರೆಡ್ಡಿ..

    ಹೊನ್ನಸಳ್ಳಿ – ರೇಣುಕಾಚಾರ್ಯ

    ಶಿವಮೊಗ್ಗ ಗ್ರಾಮಾಂತರ – ಅಶೋಕ್ ನಾಯಕ್

    ಸೊರಬ – ಕುಮಾರ್ ಬಂಗಾರಪ್ಪ

    ಸಾಗರ – ಹರತಾಳು ಹಾಲಪ್ಪ.

    ಚಿಕ್ಕಮಗಳೂರು – ಸಿ‌ ಟಿ ರವಿ

    ತರೀಕೆರೆ – ಡಿ ಎಸ್ ಸುರೇಶ್

    ಕಡೂರು – ಬೆಳ್ಳಿ ಪ್ರಕಾಶ್

    ಚಿಕ್ಕನಾಯಕನ ಹಳ್ಳಿ – ಜೆ ಸಿ ಮಾಧುಸ್ವಾಮಿ.

    ತಿಪಟೂರು – ಬಿ ಸಿ ನಾಗೇಶ್

    ತುರುವೇಕೆರೆ – ಮಸಾಲೆ ಜಯರಾಮ್

    ಶಿರಾ – ಡಾ. ರಾಜೇಶ್ ಗೌಡ

    ಚಿಕ್ಕಬಳ್ಳಾಪುರ – ಡಾ. ಕೆ.ಸುಧಾಕರ್

    ಹೊಸಕೋಟೆ – ಎಂಟಿಬಿ ನಾಗರಾಜ್

    ಚನ್ನಪಟ್ಟಣ – ಸಿ ಪಿ ಯೋಗೀಶ್ವರ್(ಎಮ್‌ಎಲ್‌ಸಿ)

    ಕೆ ಆರ್ ಪೇಟೆ – ನಾರಾಯಣ್ ಗೌಡ

    ಹಾಸನ – ಪ್ರೀತಮ್ ಗೌಡ

    ಮಡಿಕೇರಿ – ಅಪ್ಪಚ್ಚು ರಂಜನ್

    ವಿರಾಜಪೇಟೆ – ಕೆ ಜಿ ಬೋಪಯ್ಯ

    ನಂಜನಗೂಡು – ಹರ್ಷವರ್ಧನ

    ಚಾಮರಾಜ – ನಾಗೇಂದ್ರ

    ವರುಣಾ – ವಿ ಸೋಮಣ್ಣ

    ಕೊಳ್ಳೇಗಾಲ – ಎನ್ ಮಹೇಶ್

    ಗುಂಡ್ಲುಪೇಟೆ – ನಿರಂಜನ್ ಕುಮಾರ್

  • ದೆಹಲಿ ಶಾಸಕರ ಸಂಬಳ ಭರ್ಜರಿ ಹೆಚ್ಚಳ

    ದೆಹಲಿ ಶಾಸಕರ ಸಂಬಳ ಭರ್ಜರಿ ಹೆಚ್ಚಳ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಶಾಸಕರ (MLA) ವೇತನವನ್ನು ಭಾರೀ ಹೆಚ್ಚಳ (Salary Hike) ಮಾಡಲಾಗಿದೆ. ದೆಹಲಿ ಶಾಸಕರ ವೇತನ ಭತ್ಯೆ, ಪಿಂಚಣಿ ತಿದ್ದುಪಡಿಗೆ ದೆಹಲಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರ ಪರಿಣಾಮವಾಗಿ ದೆಹಲಿ ಶಾಸಕರ ವೇತನ ತಿಂಗಳಿಗೆ 54,000 ರೂ. ಯಿಂದ 90,000 ರೂ.ಗೆ ಏರಿಕೆಯಾಗಿದೆ.

    ಕಾಯಿದೆ ಅಂಗೀಕಾರದ ಬಳಿಕ ದೆಹಲಿ ವಿಧಾನಸಭೆಯ ಶಾಸಕರು ತಮ್ಮ ಮಾಸಿಕ ವೇತನ ಹಾಗೂ ಭತ್ಯೆಗಳಲ್ಲಿ ಶೇ.66.7 ರಷ್ಟು ಹೆಚ್ಚಳವನ್ನು ಪಡೆಯಲಿದ್ದಾರೆ. ಇದರ ಪ್ರಕಾರ ತಿಂಗಳಿಗೆ ಸುಮಾರು 54,000 ರೂ. ಯಿಂದ 90,000 ರೂ. ವರೆಗೆ ವೇತನದಲ್ಲಿ ಹೆಚ್ಚಳವನ್ನು ಪಡೆಯಲಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಬಗ್ಗೆ ಮಾತನಾಡಲು ಮೋದಿಯವರಿಗೆ ಸಬ್ಜೆಕ್ಟ್ ಇಲ್ಲ: ಹೆಚ್‍ಡಿಕೆ

    ಇದಲ್ಲದೇ ಮುಖ್ಯಮಂತ್ರಿ, ಸಚಿವರು, ಸ್ಪೀಕರ್, ಉಪಸಭಾಪತಿ, ಮುಖ್ಯ ಸಚೇತಕರು ಮತ್ತು ವಿರೋಧ ಪಕ್ಷದ ನಾಯಕರ ಸಂಬಳ ಮಾಸಿಕವಾಗಿ 72,000 ರೂ. ಯಿಂದ 1,70,000 ರೂ.ಗೆ ಏರಿಕೆಯಾಗಿದೆ.

    ದೆಹಲಿ ಸರ್ಕಾರದ ಕಾನೂನು, ನ್ಯಾಯ ಮತ್ತು ಶಾಸಕಾಂಗ ವ್ಯವಹಾರಗಳ ಇಲಾಖೆ ಗುರುವಾರ ಹೊರಡಿಸಿದ ಅಧಿಸೂಚನೆಯಲ್ಲಿ ಈ ಬದಲಾವಣೆಗಳನ್ನು ಪ್ರಕಟಿಸಿದೆ. 2011ರ ಬಳಿಕ ದೆಹಲಿ ಶಾಸಕರ ವೇತನದಲ್ಲಿ ಮಾಡಲಾಗಿರುವ ಮೊದಲ ಪರಿಷ್ಕರಣೆ ಇದಾಗಿದೆ. ಈ ಕ್ರಮಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದ್ದು, ಈ ಬದಲಾವಣೆಗಳು ಫೆಬ್ರವರಿ 14ರಿಂದ ಜಾರಿಗೆ ಬಂದಿದೆ. ಇದನ್ನೂ ಓದಿ: ತುರ್ತು ವೈದ್ಯಕೀಯ ಚಿಕಿತ್ಸೆ- ಕರಾಚಿಯಲ್ಲಿ ಭೂಸ್ಪರ್ಶ ಮಾಡುವ ಮೊದಲೇ ಪ್ರಯಾಣಿಕ ಸಾವು