Tag: ಶಾಶಕ

  • ಪೊಲೀಸ್ ವಶಕ್ಕೆ ಡಿ.ಕೆ ಶಿವಕುಮಾರ್

    ಪೊಲೀಸ್ ವಶಕ್ಕೆ ಡಿ.ಕೆ ಶಿವಕುಮಾರ್

    ಮುಂಬೈ: ಬೆಳಗ್ಗಿನಿಂದ ರಿನೈಸನ್ಸ್ ಹೊಟೇಲ್ ಮುಂದೆ ಅತೃಪ್ತರ ಭೇಟಿಗಾಗಿ ಕಾದು ಕುಳಿತಿದ್ದ ಸಚಿವ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಡಿಕೆ ಶಿವಕುಮಾರ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೋಟೆಲ್ ಮುಂಭಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಸಹ ಪ್ರತಿಭಟಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಹೋಟೆಲ್ ಸಮೀಪ 144 ಸೆಕ್ಷನ್ ಹಾಕಿ ನಿಷೇಧಾಜ್ಞೆ ವಿಧಿಸಿದ್ದರು. ಆದರೂ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಡಿಕೆಶಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸತತ 6 ಗಂಟೆಗಳ ಕಾಲ ಹೋಟೆಲ್ ಮುಂಭಾಗ ಪ್ರತಿಭಟಿಸಿದ್ದ ಅವರನ್ನು ಪೊಲೀಸರು ತಮ್ಮ ವ್ಯಾನಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಡಿಕೆಶಿ ಜೊತೆ ಸಚಿವ ಜಿಟಿಡಿ, ಬಾಲಕೃಷ್ಣ ಹಾಗೂ ಶಿವಲಿಂಗೇ ಗೌಡ ಅವರನ್ನೂ ವಶಕ್ಕೆ ಪಡೆದಿದ್ದಾರೆ.

    ಬಿಜೆಪಿ ಮುಖಂಡರಿಬ್ಬರು ಮಂಗಳವಾರ ರಾತ್ರಿ ಅತೃಪ್ತ ಶಾಸಕರನ್ನು ಭೇಟಿಯಾದ ಬೆನ್ನಲ್ಲೇ ಇಂದು ಸಚಿವ ಡಿಕೆ ಶಿವಕುಮಾರ್, ಜಿ.ಟಿ ದೇವೇಗೌಡ ಹಾಗೂ ಶಾಸಕ ಶಿವಲಿಂಗೇ ಗೌಡ ಅವರು ಮುಂಬೈಗೆ ತೆರಳಿದ್ದರು. ಮುಂಬೈಗೆ ಬರುವ ಮಾಹಿತಿ ಬೆನ್ನಲ್ಲೇ ಅಲ್ಲಿನ ಪೊಲೀಸ್ ಅಲರ್ಟ್ ಆಗಿದ್ದು, ಹೋಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದಾರೆ. ಹೀಗಾಗಿ ಹೋಟೆಲ್ ಬಳಿ ಬಂದರೂ ಡಿಕೆಶಿಗೆ ಒಳಗಡೆ ಹೋಗಲು ಸಾಧ್ಯವಾಗಿರಲಿಲ್ಲ.

    ಹೋಟೆಲ್ ಒಳಗಡೆ ಹೋಗಲು ಪೊಲೀಸರು ನಿರಾಕರಿಸುತ್ತಿದ್ದಂತೆಯೇ ಡಿಕೆಶಿ ಹಾಗೂ ಪೊಲೀಸರ ಮಧ್ಯೆ ಮಾತುಕತೆ ನಡೆದಿತ್ತು. ನಾವು ಒಂದೇ ಕುಟುಂಬದವರು. ನಮ್ಮ ಮಧ್ಯೆ ಸ್ವಲ್ಪ ಸಮಸ್ಯೆ ಆಗಿದೆ. ಅದನ್ನು ನಾವು ಸರಿಪಡಿಸಲು ಬಂದಿದ್ದೇವೆಯೋ ಹೊರತು, ಬೆದರಿಕೆ ಹಾಕಲು ಬಂದಿಲ್ಲ. ನಿನ್ನೆ ಬಿಜೆಪಿಯವರನ್ನು ಬಿಟ್ಟಿದ್ದೀರಿ, ಆದರೆ ಇವತ್ತು ನಮ್ಮವರನ್ನು ಭೇಟಿ ಮಾಡಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ಸಚಿವರು ಮನವಿ ಮಾಡಿಕೊಂಡರೂ ಪೊಲೀಸರು ಸುತಾರಾಂ ಒಪ್ಪಿಲ್ಲ. ಹೀಗಾಗಿ ಇಬ್ಬರು ಮುಖಂಡರೊಂದಿಗೆ ಡಿಕೆಶಿ ಹೋಟೆಲ್ ಹೊರಗಡೆಯೇ ಕಾದು ಕುಳಿತಿದ್ದರು. ಕೊನೆಗೆ ಹೋಟೆಲ್ ಸಿಬ್ಬಂದಿ ಡಿಕೆಶಿ ಹಠಕ್ಕೆ ಮಣಿದು ರೂಮ್ ಕೊಡಲು ನಿರ್ಧಾರ ಮಾಡಿದ್ದರು.

    ಹೋಟೆಲ್ ಸಿಬ್ಬಂದಿ ಮತ್ತು ಪೊಲೀಸರು ನಡುವೆ ಮಾತುಕತೆ ನಡೆದಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಹೋಟೆಲ್‍ನಲ್ಲಿ ರೂಮ್ ಕೊಡಲು ಒಪ್ಪಿಗೆ ನೀಡಲಾಗಿತ್ತು. ಆದರೆ ಅತೃಪ್ತ ಶಾಸಕರ ತಂಗಿರುವ ಬಿಲ್ಡಿಂಗ್ ಬಿಟ್ಟು ಬೇರೆ ಬಿಲ್ಡಿಂಗ್‍ನಲ್ಲಿ ಡಿಕೆಶಿಗೆ ರೂಮ್ ಕೊಡಲು ಸಿಬ್ಬಂದಿ ಒಪ್ಪಿಗೆ ಸೂಚಿಸಿದ್ದರು.

    ನನಗೆ ಶಾಸಕರು ಇರುವ ಬಿಲ್ಡಿಂಗ್‍ನಲ್ಲೇ ರೂಮ್ ಬೇಕೇಬೇಕು ಎಂದು ಹೋಟೆಲ್ ಸಿಬ್ಬಂದಿ ಬಳಿ ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದಾರೆ. ಪೊಲೀಸರು ಮತ್ತು ಸಿಬ್ಬಂದಿ ಡಿಕೆಶಿ ಅವರ ಮನವೊಲಿಸಲು ಪ್ರಯತ್ನ ಮಾಡಿದ್ದರು. ಆದರೂ ಡಿಕೆಶಿ ತನ್ನ ಪಟ್ಟು ಬಿಡದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದರು.

    ಡಿಕೆಶಿ ಅವರ ಬೆಳಗ್ಗಿನ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಅತೃಪ್ತರು, ನಮಗೆ ಡಿಕೆಶಿ ಮೇಲೆ ಗೌರವವಿದೆ. ನಾವಿಂದು ಉನ್ನತ ಸ್ಥಾನಕ್ಕೇರಲು ಅವರೇ ಕಾರಣ. ಹೀಗಾಗಿ ಮುಂಬೈನಲ್ಲಿ ಅವರಿಗೆ ಅವಮಾನ ಆಗುವುದು ನಮಗೆ ಸರಿ ಅನ್ನಿಸುತ್ತಿಲ್ಲ. ಆದರೆ ಯಾವುದೇ ಕಾರಣಕ್ಕೂ ನಾವು ಯಾರನ್ನೂ ಭೇಟಿ ಮಾಡಲ್ಲ ಎಂದು ಸ್ಪಷ್ಟ ಪಡಿಸಿದ್ದರು.

  • ಬೂಟ್‍ನಿಂದ ಹೊಡಿತೀನಿ ಎಂದು ಬಿಜೆಪಿ ಶಾಸಕ ಧಮ್ಕಿ..!

    ಬೂಟ್‍ನಿಂದ ಹೊಡಿತೀನಿ ಎಂದು ಬಿಜೆಪಿ ಶಾಸಕ ಧಮ್ಕಿ..!

    ಕಲಬುರಗಿ: ಆಳಂದ ಶಾಸಕ ಸುಭಾಷ್ ಗುತ್ತೇದಾರ್ ದರ್ಪ ತೋರಿದ ಘಟನೆಯೊಂದು ಬೆಳಕಿಗೆ ಬಂದಿದೆ. ಅವಾಚ್ಯ ಶಬ್ಧಗಳಿಂದ ಪುರಸಭೆ ಮುಖ್ಯಾಧಿಕಾರಿಗೆ ನಿಂದಿಸಿದ್ದಾರೆ.

    ಆಳಂದ ಪುರಸಭೆ ಮುಖ್ಯಾಧಿಕಾರಿ ಚಂದ್ರಕಾಂತ್ ಪಾಟೀಲ್ ಅವರಿಗೆ ಶಾಸಕರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮಾಜಿ ಶಾಸಕ ಬಿ.ಆರ್ ಪಾಟೀಲ್ ಶಾಸಕರಾಗಿದ್ದಾಗ ಮಂಜೂರಾಗಿದ್ದ ಒಂದೂವರೆ ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಅನುಮತಿ ನೀಡಿದ್ದಕ್ಕೆ ಶಾಸಕರು ಕೆಂಡಾಮಂಡಲರಾಗಿದ್ದಾರೆ.

    ಇದೇ ವಿಚಾರಕ್ಕೆ ಚಂದ್ರಕಾಂತ್ ಅವರಿಗೆ ಫೋನ್ ಮಾಡಿ ಹಿಗ್ಗಾಮುಗ್ಗಾ ಬೈದಿದ್ದಾರೆ. ನಾಟಕ ನಡಿಸಿರಿ, ಬೋ ಮಗನ… ಕೆಲಸ ಬಂದ್ ಮಾಡಿಸಿರಿ, ಇಲ್ಲ ಅಂದ್ರೆ ನಾನು ಬರ್ತೇನೆ ಎಂದು ಅವಾಜ್ ಹಾಕಿದ್ದಾರೆ.


    ಇಬ್ಬರ ಸಂಭಾಷಣೆ ಇಂತಿದೆ:
    ಎಂಎಲ್‍ಎ-ಏನಾಯಿತು
    ಅಧಿಕಾರಿ-ಸರ್…ಸರ್…ಕೆಲಸ ಬಂದ್ ಮಾಡೋಕೆ ಹೇಳುತ್ತೇನೆ
    ಎಂಎಲ್‍ಎ-ಅವನು ಮಾಡುಕೆ ಹೇಗೆ ಕೊಟ್ಟ
    ಅಧಿಕಾರಿ-ಶಾಂತಪ್ಪ ಅವರೂ ಫಸ್ಟ್ ಮಾಡರಿ ಅಮೇಲೆ ಪೊಜೆ ಮಾಡುನಾ ಅಂದರು
    ಎಂಎಲ್‍ಎ-ಬೋ..ಮಗನಾ….ಏ ರಂಡಿ ಮಗನಾ…ಅವರ ಮೇಲೆ ಯಾಕ ಹೇಳತ್ತಿ. ನೀ…ಹೇಳಿದಿ ಅಂತಾ ನಿನ್ನ ಹೆಸರು ಹೇಳುತ್ತಿದ್ದಾನೆ
    ಅಧಿಕಾರಿ- ಸರ್….ಹಂಗಲ್ಲ….ಸರ್

    ಎಂಎಲ್‍ಎ-ಬೋ. ಮಗನಾ ಬೋಟ್‍ನಿಂದ ಹೊಡೆತ್ತೀನಿ ನಿನಗ…
    ಅಧಿಕಾರಿ-ಇಲ್ಲ…ಸರ್
    ಎಂಎಲ್‍ಎ-ರಾಜಕೀಯಮಾಡಿ ನಾಟಕ ಮಾಡಕಹತ್ತರಿ
    ಅಧಿಕಾರಿ-ಇಲ್ಲ ಸರ್ ಶಾಂತಪ್ಪನೆ ಹೇಳಿದ್ದು…
    ಎಂಎಲ್‍ಎ-ಬೋ.. ಮಗನಾ ಮೊದಲು ಕೆಲಸ ಬಂದ ಮಾಡಿಸು
    ಅಧಿಕಾರಿ- ಸರ್….ನಿಮ್ಮ ಎದುರಿಗೆ ನಾ ಹೇಳಿಸಿತ್ತೀನಿ ಸರ್
    ಎಂಎಲ್‍ಎ-ಬೋ..ಮಗನಾ…ಮೊದಲು ಕೆಲಸ ಬಂದ್ ಮಾಡಿಸಿತ್ತರೆ ಸರಿ…ಇಲ್ಲ ನಾನೇ ಬರತ್ತೀನಿ…

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೆಡಿಎಸ್ ಶಾಸಕನಿಂದ ಕಿರುಕುಳ – ಮಾಜಿ ಶಿಕ್ಷಕಿಯಿಂದ ಆತ್ಮಹತ್ಯೆ ಯತ್ನ

    ಜೆಡಿಎಸ್ ಶಾಸಕನಿಂದ ಕಿರುಕುಳ – ಮಾಜಿ ಶಿಕ್ಷಕಿಯಿಂದ ಆತ್ಮಹತ್ಯೆ ಯತ್ನ

    ನೆಲಮಂಗಲ: ನಾನು ಸತ್ತರೆ ಅದಕ್ಕೆ ಜೆಡಿಎಸ್ ಶಾಸಕನೇ ಕಾರಣವೆಂದು ಬರೆದು ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರೋ ಮಾಜಿ ಶಿಕ್ಷಕಿ ಆತ್ಮಹತ್ಯೆ ಯತ್ನಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲದ ಶಿವಕುಮಾರಿ ನಿದ್ರೆ ಮಾತ್ರೆ ಸೇವಿಸಿದ್ದು, ಸದ್ಯ ಮ್ಯಾಗ್ನಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಲಿ ಶಾಸಕ ಶ್ರೀನಿವಾಸ್ ಮೂರ್ತಿ ವಿರುದ್ಧ ಫೇಸ್ ಬುಕ್‍ನಲ್ಲಿ ಹಿಗ್ಗಾಮುಗ್ಗಾ ಆಪಾದನೆಗಳನ್ನು ಮಾಡಿದ್ದಾರೆ.

    ಹೆಣ್ಣು ಮಕ್ಕಳ ಬದುಕನ್ನೇ ನಾಶ ಮಾಡಿದ ನೀಚ ಶಾಸಕ. ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕಾದರೆ ಕೊಲೆ ಆಗಬೇಕು ಅಥವಾ ಅತ್ಯಾಚಾರವಾಗಬೇಕು. ಆಗಷ್ಟೇ ಸರ್ಕಾರ ಹಾಗೂ ಸಮಾಜ ನೊಂದವರ ಪರ ನಿಲ್ಲುವುದು. ನನ್ನ ಶಕ್ತಿ ಮೀರಿ ಹೋರಾಡಿದ್ದೇನೆ. ನನ್ನ ಸಾವಿಗೆ ಶಾಸಕ ಶ್ರೀನಿವಾಸ ಮೂರ್ತಿ ಕಾರಣ ಎಂದು ಡೆತ್ ನೋಟ್‍ನಲ್ಲಿ ಆರೋಪಿಸಿದ್ದಾರೆ.