Tag: ಶಾಲೆ ಪ್ರಾರಂಭ

  • ಮಕ್ಕಳಿಗೆ ಹಾಜರಾತಿ ಕಡ್ಡಾಯವಲ್ಲ: ಬಿ.ಸಿ. ನಾಗೇಶ್

    ಮಕ್ಕಳಿಗೆ ಹಾಜರಾತಿ ಕಡ್ಡಾಯವಲ್ಲ: ಬಿ.ಸಿ. ನಾಗೇಶ್

    ಬೆಂಗಳೂರು: ಮಕ್ಕಳಿಗೆ ಹಾಜರಾತಿ ಕಡ್ಡಾಯವಲ್ಲ, ಶಾಲೆ ಆರಂಭವಾದರೂ ಚಂದನದಲ್ಲಿ ತರಗತಿ ಮುಂದುವರೆಯುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಒಂದರಿಂದ ಒಂಬತ್ತನೇ ತರಗತಿಯ ಬಗ್ಗೆ ತಜ್ಞರ ಸಲಹೆ ಮೇರೆಗೆ ಶಾಲೆ ಆರಂಭದ ಕುರಿತು ನಿರ್ಧಾರ ಮಾಡುತ್ತೇವೆ. ಶಾಲೆ ಪ್ರಾರಂಭಿಸಿ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುವುದು ನಮ್ಮ ಆಧ್ಯತೆಯಾಗಿದೆ. ಆದ್ದರಿಂದ ಇಂದಿನ ಕ್ಯಾಬಿನೆಟ್‍ನಲ್ಲಿಯೂ ಈ ಬಗ್ಗೆ ಚರ್ಚೆ ನಡೆಸುತ್ತೇವೆ. ತಜ್ಞರು ಒಪ್ಪಿಗೆ ನೀಡಿದರೆ ಸೋಮವಾರದಿಂದ ಶಾಲೆ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.

    ಕೊರೊನಾ ಮೂರನೇ ಅಲೆಯಿಂದ ಯಾವ ಮಕ್ಕಳಿಗೂ ಹೆಚ್ಚಿನ ತೊಂದರೆಯಿಲ್ಲ. ಆದರೂ ಆರೊಗ್ಯದ ವಿಚಾರದಲ್ಲಿ ಶಿಕ್ಷಣ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದರಿಂದ ಆರೋಗ್ಯ ಇಲಾಖೆ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಇದನ್ನೂ ಓದಿ: ಪಂಜಾಬ್ ಚುನಾವಣೆ: ನವಜೋತ್ ಸಿಂಗ್ ಸಿಧು ವಿರುದ್ಧ ಬಿಕ್ರಮ್ ಸಿಂಗ್ ಕಣಕ್ಕೆ

    ಈ ವರ್ಷ ಮಕ್ಕಳಿಗೆ ಹಾಜರಾತಿ ಕಡ್ಡಾಯ ಇಲ್ಲ. ಯಾವ ಮಕ್ಕಳಿಗೂ ಶಾಲೆಗೆ ಬರಲು ಬಲವಂತ ಇಲ್ಲ. ಪರೀಕ್ಷೆಗೂ 75% ಹಾಜರಾತಿ ಕಡ್ಡಾಯ ಮಾಡುವುದಿಲ್ಲ. ಎಸ್‍ಎಸ್‍ಎಲ್ಸಿ ಮತ್ತು ಪಿಯುಸಿ ಪರೀಕ್ಷೆ ನಿಗದಿಯಂತೆ ನಡೆಯುತ್ತದೆ. ಪೂರ್ಣ ಪ್ರಮಾಣದ ಆಫ್‍ಲೈನ್ ತರಗತಿ ಪ್ರಾರಂಭ ಆಗೋವರೆಗೂ ಚಂದನ, ಆಕಾಶವಾಣಿಯಲ್ಲಿ ಪಠ್ಯ ಬೋಧನೆ ಮುಂದುವರೆಯುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಗುಲಾಂ ನಬಿ ಆಜಾದ್ ಪ್ರತಿಕೃತಿ ದಹಿಸಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು

  • ಪ್ರಾಥಮಿಕ ಶಾಲೆ ಆರಂಭ – ಕಾರವಾರದಲ್ಲಿ ಉತ್ತಮ ಸ್ಪಂದನೆ

    ಪ್ರಾಥಮಿಕ ಶಾಲೆ ಆರಂಭ – ಕಾರವಾರದಲ್ಲಿ ಉತ್ತಮ ಸ್ಪಂದನೆ

    – ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಮಕ್ಕಳ ದಾಖಲಾತಿಯಲ್ಲಿ ಇಳಿಕೆ

    ಕಾರವಾರ: 1 ರಿಂದ 5ನೇ ತರಗತಿಯು ಇಂದು ಪ್ರಾರಂಭವಾಗುತ್ತಿದ್ದಂತೆ ಉ.ಕನ್ನಡ ಜಿಲ್ಲೆಯ ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲಿಯೂ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವ ಮೂಲಕ ಶಿರಸಿ ಜಿಲ್ಲೆಯನ್ನು ಹಿಂದಿಕ್ಕಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಹಳಿಯಾಳದಲ್ಲಿ ಅತ್ಯಲ್ಪ ಮಕ್ಕಳು ಶಾಲೆಗೆ ಇಂದು ಹಾಜರಾಗಿದ್ದಾರೆ. ಇದನ್ನೂ ಓದಿ: ಜನರನ್ನು ನೇರವಾಗಿ ಮಾತನಾಡಿಸಬೇಕು ಎಂದು ಬುಲೆಟ್ ಪ್ರೂಫ್ ಶೀಲ್ಡ್ ತೆಗೆದ ಶಾ

    ಕಾರವಾರ ಶೈಕ್ಷಣಿಕ ಜಿಲ್ಲೆ

    ಕಾರವಾರ – 93.33%
    ಅಂಕೋಲ – 82.74%
    ಭಟ್ಕಳ – 94.59%
    ಹೊನ್ನಾವರ – 83.40%
    ಕುಮಟಾ – 89.94%
    ಖಾಸಗಿ ಶಾಲೆಗಳ ಹಾಜರಾತಿ(ಕಾರವಾರ ಜಿಲ್ಲಾವಾರು) – 89.51%
    ಅನುದಾನಿತ ಶಾಲೆಗಳ ಒಟ್ಟು ಹಾಜರಾತಿ – 86.81%
    ಸರ್ಕಾರಿ ಶಾಲೆಗಳು ಒಟ್ಟು ಹಾಜರಾತಿ – 89.29%

    ಶಿರಸಿ ಶೈಕ್ಷಣಿಕ ಜಿಲ್ಲೆ

    ಶಿರಸಿ – 91.4%
    ಸಿದ್ದಾಪುರ – 71.34%
    ಯಲ್ಲಾಪುರ – 80.99%
    ಮುಂಡಗೋಡು – 60.37%
    ಹಳಿಯಾಳ – 44.02%
    ಜೋಯಿಡಾ – 85.79 %
    ಒಟ್ಟು ಹಾಜರಾದ ಮಕ್ಕಳ ಸಂಖ್ಯೆ – 66.37%

  • ಕಾಂಗ್ರೆಸ್ ವೋಟಿಗೋಸ್ಕರ ಧರ್ಮವನ್ನ ಉಪಯೋಗಿಸುತ್ತೆ: ಬಿ.ಸಿ ನಾಗೇಶ್

    ಕಾಂಗ್ರೆಸ್ ವೋಟಿಗೋಸ್ಕರ ಧರ್ಮವನ್ನ ಉಪಯೋಗಿಸುತ್ತೆ: ಬಿ.ಸಿ ನಾಗೇಶ್

    ಕಾರವಾರ: ಕಾಂಗ್ರೆಸ್ ವೋಟಿಗೋಸ್ಕರ ಧರ್ಮವನ್ನ ಉಪಯೋಗಿಸುತ್ತೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಟೀಕಿಸಿದ್ದಾರೆ

    ತಾಲೂಕಿನ ಬಂಗಾರಮಕ್ಕಿ ಶ್ರೀ ಕ್ಷೇತ್ರ ವೀರಾಂಜನೇಯ ದೇವಾಲಯಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ಕಡೆ ಜಾತಿ-ಧರ್ಮ ಹುಡುಕೋದೇ ಅವರ ಹಣೆಬರಹ. ಕಾಂಗ್ರೆಸ್ ಓಟಿಗೋಸ್ಕರ ಧರ್ಮವನ್ನು ಉಪಯೋಗಿಸುತ್ತೆ. ಮಕ್ಕಳಿಗೆ ಕೊಡುವ ಪಠ್ಯಪುಸ್ತಕ ಸರಿಯಾಗಿರಬೇಕು. ಕಸ್ತೂರಿ ರಂಗನ್ ನೇತೃತ್ವದಲ್ಲಿ ಮಾಡಿದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ಮಾಡ್ತಾರೆ. ಅವರ ಜೊತೆ ಇದ್ದಾಗ ಇವರು ಏನು ಮಾಡಿದ್ದರು ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಬಡವರ ಆಹಾರ ಇಂದಿನ ದಿನಗಳಲ್ಲಿ ಶ್ರೀಮಂತರ ಆಹಾರವಾಗಿದೆ: ಬಿ.ಸಿ.ಪಾಟೀಲ್

    ಪಠ್ಯ ಪುಸ್ತಕ ಸಮಿತಿ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಪಠ್ಯ ಪುಸ್ತಕ ಈಗಾಗಲೇ 82 ಶೇ. ಪೂರೈಕೆಯಾಗಿದೆ. ಕಳೆದ ಸಲ ಈ ವಿಷಯ ಏಕೆ ಟೀಕೆಗೊಳಗಾಗಿಲ್ಲ. ಯಾವುದೇ ಪಠ್ಯಪುಸ್ತಕ ಕ್ರಮ 20 ರಿಂದ 15 ವರ್ಷ ಇರುತ್ತೆ. ಕಾಲಕಾಲಕ್ಕೆ ಅವಶ್ಯಕತೆಗನುಗುಣವಾಗಿ ಪಠ್ಯಕ್ರಮ ರಚನೆಯಾಗುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಬರುವ ಮುನ್ನ ದುಡ್ಡಿನ ಆಫರ್ ಕೊಟ್ಟಿದ್ದು ನಿಜ: ಶ್ರೀಮಂತ ಪಾಟೀಲ್

    2015ರಲ್ಲಿ ಆದ ಪಠ್ಯಕ್ರಮ 2017ರಲ್ಲಿ ಏಕೆ ಆಯಿತು ಎಂದು ಪ್ರಶ್ನಿಸಿದ ಅವರು, ಪ್ರತಿಸಲ ಪಠ್ಯಕ್ರಮದಲ್ಲಿ ಇರುವ ಅಲ್ಪಸ್ವಲ್ಪ ತಪ್ಪುಗಳನ್ನು ಸರಿಪಡಿಸಲು ಸಮಿತಿ ನಿರ್ಮಾಣವಾಗಿರುತ್ತೆ. ಕಾಂಗ್ರೆಸ್ ಅವರಿಗೆ ಬಿಜೆಪಿಯವರನ್ನು ಟೀಕೆ ಮಾಡುವುದು ಕೆಟ್ಟ ಅಭ್ಯಾಸ. ಕಾಂಗ್ರೆಸ್ ಗೆ ರೂಲಿಂಗ್ ಪಾರ್ಟಿ ಮಾಡಿ ರೂಢಿಯಾಗಿದೆ ಹೊರತು ಪ್ರತಿಪಕ್ಷ ಸ್ಥಾನದಲ್ಲಿನ ನಡತೆ ಅವರಿಗೆ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಅರಣ್ಯ ಇಲಾಖೆಯ ಹುತಾತ್ಮ ಅಧಿಕಾರಿ, ಸಿಬ್ಬಂದಿಗೆ ಗೌರವ ನಮನ ಸಲ್ಲಿಕೆ

    ಶಾಲೆ ಪ್ರಾರಂಭದ ಬಗ್ಗೆ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯ ಪಡೆದು ಆರನೇ ತರಗತಿಯಿಂದ ಶಾಲೆ ಆರಂಭ ಮಾಡಿದ್ದು, ಯಶಸ್ವಿಯಾಗಿದ್ದೇವೆ. ತಾಂತ್ರಿಕ ಸಲಹಾ ಸಮಿತಿ ಸಲಹೆ ಇಲ್ಲದೇ ಒಂದನೇ ತರಗತಿ ಪ್ರಾರಂಭಿಸುವುದಿಲ್ಲ. ಈಗಾಗಲೇ ಒಂದರಿಂದ ಶಾಲೆ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

  • ಆನ್‍ಲೈನ್ ತರಗತಿ, ಶಾಲೆಗಳ ಪ್ರಾರಂಭ- ಸರ್ಕಾರಕ್ಕೆ ತಜ್ಞರ ಸಮಿತಿ ಸಲ್ಲಿಸಿದ ವರದಿಯಲ್ಲೇನಿದೆ?

    ಆನ್‍ಲೈನ್ ತರಗತಿ, ಶಾಲೆಗಳ ಪ್ರಾರಂಭ- ಸರ್ಕಾರಕ್ಕೆ ತಜ್ಞರ ಸಮಿತಿ ಸಲ್ಲಿಸಿದ ವರದಿಯಲ್ಲೇನಿದೆ?

    ಬೆಂಗಳೂರು: ಆನ್ ಲೈನ್ ತರಗತಿ ಮತ್ತು ಶಾಲೆಗಳ ಪ್ರಾರಂಭಕ್ಕೆ ಸಂಬಂಧಿಸಿದಂತೆ ಸರ್ಕಾರ  ಡಾ. ಶ್ರೀಧರ್ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ವರದಿಯನ್ನು ಸಲ್ಲಿಕೆ ಮಾಡಿದೆ.

    ಮಕ್ಕಳ ದೈಹಿಕ ಮತ್ತು ಮಾನಸಿಕ ಹಾಗೂ ಆರೋಗ್ಯ ದೃಷ್ಟಿಯಿಂದ ಯಾವ ತರಗತಿಯ ಮಕ್ಕಳಿಗೆ ಎಷ್ಟು ಸಮಯ ಆನ್‍ಲೈನ್ ಶಿಕ್ಷಣ ನೀಡಬೇಕು. ಕೊರೊನಾ ಕಾರಣದಿಂದ ಶಾಲೆಗಳ ಪ್ರಾರಂಭ ಯಾವ ರೀತಿ ಆಗಬೇಕು ಎಂಬ ಬಗ್ಗೆ ಸಮಿತಿ ಮಾರ್ಗಸೂಚಿಗಳನ್ನು ರಚಿಸಿ ವರದಿ ನೀಡಿದೆ. ಸಮಿತಿಯ ಶಿಫಾರಸುಗಳ ಅನ್ವಯ ಸರ್ಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ.

    ಆನ್‍ಲೈನ್ ಶಿಕ್ಷಣಕ್ಕೆ ಸಮಿತಿಯ ಶಿಫಾರಸ್ಸುಗಳು:
    1) ಪೂರ್ವ ಪ್ರಾಥಮಿಕ ತರಗತಿ ಮತ್ತು 2 ನೇ ತರಗತಿವರೆಗೆ ಆನ್‍ಲೈನ್ ತರಗತಿ ವೇಳೆ ಪೋಷಕರ ಉಪಸ್ಥಿತಿ ಕಡ್ಡಾಯವಾಗಿ ಇರಬೇಕು.
    2) ಆನ್‍ಲೈನ್ ತರಗತಿ ಗರಿಷ್ಠ ಪರದೆ ಸಮಯ 30 ನಿಮಿಷ ಮಾತ್ರ ಇರಬೇಕು.
    3) 6ನೇ ತರಗತಿ ನಂತರ ಹೆಚ್ಚುವರಿ 15 ನಿಮಿಷ ನೀಡಬಹುದು.
    4) 2 ನೇ ತರಗತಿಗೆ ಪರ್ಯಾಯ ದಿನಗಳು. 3 ನೇ ತರಗತಿ ನಂತರ ವಾರಕ್ಕೆ 5 ದಿನ ಆನ್ ಲೈನ್ ತರಗತಿ ನೀಡಬೇಕು. ಎರಡು ದಿನ ಆಫ್ ಲೈನ್ ತರಗತಿ ಕಡ್ಡಾಯವಾಗಿರಬೇಕು.
    5) ಆನ್‍ಲೈನ್, ಆಫ್‍ಲೈನ್ ತರಗತಿಗೆ ಅವಕಾಶ ನೀಡಲಾಗಿದೆ.

    6) ಆನ್‍ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಒತ್ತಾಯ ಮಾಡಬಾರದು.
    7) ಆನ್‍ಲೈನ್ ತರಗತಿಯನ್ನ ಅಗತ್ಯ ಸೈಬರ್ ಸುರಕ್ಷತೆ ಮತ್ತು ದುರುಪಯೋಗ ನಿಷೇಧಿಸುವ ಷರತ್ತಿನಲ್ಲಿ ಒದಗಿಬೇಕು.
    8) ದೂರದರ್ಶನ, ರೇಡಿಯೋ ಮೂಲಕ ಬೋಧನಾ ವ್ಯವಸ್ಥೆ ಪ್ರಾರಂಭ ಮಾಡಬೇಕು.

    ಶಾಲೆಗಳ ಪ್ರಾರಂಭಕ್ಕೆ ಸಮಿತಿ ಶಿಫಾರಸ್ಸು:
    1) ಗ್ರಾಮೀಣ, ನಗರ ಪ್ರದೇಶ ಮತ್ತು ಜನದಟ್ಟಣೆಯ ಪ್ರದೇಶದಲ್ಲಿ ಕೆಂಪು, ಕಿತ್ತಳೆ, ಹಸಿರು ಭಾಗಗಳಾಗಿ ವಿಂಗಡಿಸಬೇಕು.
    2) ಈ ಆಧಾರದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡು ಶಾಲೆ ಪ್ರಾರಂಭಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
    3) ಶಾಲಾ ದಿನಗಳ ಸಂಖ್ಯೆ, ಸುರಕ್ಷತಾ, ನೈರ್ಮಲ್ಯ ಕಾರ್ಯ ವಿಧಾನ ಅನುಸರಿಸಬೇಕು. ಇದಕ್ಕೆ ಅಗತ್ಯ ಮಾರ್ಗಸೂಚಿ ಬಿಡುಗಡೆ ಮಾಡಬೇಕು.
    4) ಶಾಲೆಗಳು ಪ್ರಾರಂಭ ಮಾಡುವ ಕೆಲಸ ಪ್ರಾಮಾಣಿಕವಾಗಿ ಇರಬೇಕು. ಮಗುವಿನ ಹಿತಾಸಕ್ತಿಯನ್ನ ಗಮನದಲ್ಲಿಟ್ಟುಕೊಂಡು ನವೀನ ಪರಿಹಾರಗಳನ್ನ ಹುಡುಕಬೇಕು.
    5) ಮಾರ್ಗಸೂಚಿಗಳು ಉಲ್ಲಂಘನೆಯಾಗದಿರುವವರೆಗೂ ಶಾಲೆಗಳಿಗೆ ಶಿಕ್ಷಣ ಒದಗಿಸಲು ಅವಕಾಶ ನೀಡಬೇಕು. ಶಿಕ್ಷಣ ತಜ್ಞರು ಶಾಲೆಯಲ್ಲಿದ್ದು ಮಕ್ಕಳು, ಪೋಷಕರಿಗೆ ಅಗತ್ಯ ತಿಳುವಳಿಕೆ ನೀಡುವುದು.

    6) ಶಾಲೆಗಳು ನೀಡುವ ಮಾರ್ಗಸೂಚಿ ಉಲ್ಲಂಘನೆ ಆದ್ರೆ ಪೋಷಕರು ದೂರು ನೀಡಬಹುದು.
    7) ಕೊರೊನಾ ಸಂದರ್ಭ ಗಮನದಲ್ಲಿಟ್ಟುಕೊಂಡು ಪಠ್ಯಕ್ರಮದಲ್ಲಿ ಪರಿಷ್ಕರಿಸಬೇಕು.
    8) ಶಾಲೆಗಳು ಪರ್ಯಾಯ ಶೈಕ್ಷಣಿಕ ಪಠ್ಯ ಕ್ರಮ, ಕ್ಯಾಲೆಂಡರ್, ವೇಳಾಪಟ್ಟಿ ರಚನೆ ಮಾಡಿಕೊಳ್ಳಬೇಕು.
    9) ಮಕ್ಕಳಿಗೆ ಚಟುವಟಿಕೆಗಳನ್ನು ಕೈಗೊಳ್ಳುಲು ವರ್ಕ್ ಶೀಟ್, ಚಟುವಟಿಕೆ ಹಾಳೆ, ಹ್ಯಾಂಡ್ ಔಟ್ ಗಳನ್ನು ನೀಡಬೇಕು.
    10) ತಂತ್ರಜ್ಞಾನ ವಿಧಾನ ಬಳಸಲು ಸಾಧ್ಯವಾಗದ ಯಾವುದೇ ಮಗು ಶಾಲೆಯಿಂದ ಹೊರಗೆ ಉಳಿಯಬಾರದು. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು.
    11) ವಿಶೇಷ ಅಗತ್ಯವಿರುವ ಮಕ್ಕಳಿಗೆ ವಿಶೇಷ ಕಾಳಜಿವಹಿಸಬೇಕು.