Tag: ಶಾಲೆಗಳು

  • ಸಿಎಂ, ಡಿಸಿಎಂ ಮನೆಗೆ ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಲರ್ಟ್‌ – ಪ್ರಕರಣ ಭೇದಿಸಲು SIT ರಚಿಸಿದ ಸರ್ಕಾರ

    ಸಿಎಂ, ಡಿಸಿಎಂ ಮನೆಗೆ ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಲರ್ಟ್‌ – ಪ್ರಕರಣ ಭೇದಿಸಲು SIT ರಚಿಸಿದ ಸರ್ಕಾರ

    – ಡಿಕೆಶಿ ಮನೆ ಎದುರಿನ ಶಾಲೆಗೂ ಬಂದಿತ್ತು ಬಾಂಬ್ ಬೆದರಿಕೆ

    ಬೆಂಗಳೂರು: ಆಗಾಗ್ಗೆ ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಬರುತ್ತಿವೆ. ಇತ್ತೀಚೆಗಷ್ಟೇ ಸಿಎಂ, ಡಿಸಿಎಂ ಮನೆಗಳನ್ನು (CM, DCM Home) ಸ್ಫೋಟಿಸುವುದಾಗಿ ಹುಸಿ ಬೆದರಿಕೆ ಬಂದಿತ್ತು. ಈ ಬೆನ್ನಲ್ಲೇ ಎಚ್ಚೆತ್ತಿರುವ ಪೊಲೀಸ್‌ ಇಲಾಖೆ ಬಾಂಬ್‌ ಬೆದರಿಕೆ ಪ್ರಕರಣಗಳನ್ನ ಭೇದಿಸಲು ವಿಶೇಷ ತನಿಖಾ ತಂಡ (SIT) ರಚನೆ ಮಾಡಿದೆ.

    ಕೆಲ ಶಾಲೆಗಳು, ಸರ್ಕಾರಿ ಕಚೇರಿಗಳಿಗೆ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಬಾಂಬ್‌ ಬೆದರಿಕೆ (Bomb Threat) ಬರುತ್ತಲೇ ಇದೆ. ಬೆಂಗಳೂರು ಒಂದರಲ್ಲೇ 34 ಪ್ರಕರಣಗಳು ದಾಖಲಾಗಿವೆ. ಮುಂಬೈನಲ್ಲಿ 27, ಚೆನ್ನೈ 22 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಬಾಂಬ್‌ ಬೆದರಿಕೆಗಳನ್ನು ತಪ್ಪಿಸಲು ಹಾಗೂ ಹುಸಿ ಬೆದರಿಕೆಯೊಡ್ಡುವವರ ಹೆಡೆಮುರಿ ಕಟ್ಟಲು ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ತನಿಖಾ ತಂಡ ರಚನೆ ಮಾಡಿದ್ದಾರೆ.

    ಸಿಎಂ, ಡಿಸಿಎಂ ಮನೆ ಸ್ಫೋಟಿಸುವುದಾಗಿ ಬೆದರಿಕೆ
    ಕಳೆದ ಶನಿವಾರ ಸಿಎಂ ಮತ್ತು ಡಿಸಿಎಂ ಮನೆಗಳಲ್ಲಿ 4 ಕೆಜಿಯಷ್ಟು ಆರ್‌ಡಿಎಕ್ಸ್ ಮತ್ತು ಐಇಡಿ ಸ್ಫೋಟಕ ಇರಿಸಲಾಗಿದೆ. ಅವುಗಳನ್ನು ದೂರದಿಂದಲೇ ಸ್ಫೋಟಿಸಲಾಗುತ್ತದೆ ಎಂದು ಇ-ಮೇಲ್‌ ಮೂಲಕ ಹುಸಿ ಬೆದರಿಕೆ ಬಂದಿತ್ತು. ಶನಿವಾರ ಬೆಳಗಿನ ಜಾವ 4:20ರ ಸುಮಾರಿಗೆ, ಆರ್ನಾ ಅಶ್ವಿನ್ ಶೇಖರ್ (aarna.ashwinshekher@outlook.com) ಮೇಲ್ ಐಡಿಯಿಂದ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಇಮೇಲ್ ಐಡಿ (cm.kar@nic.in) ಮತ್ತು ಡಿಸಿಎಂ ಅವರ ವೈಯಕ್ತಿಕ ಇಮೇಲ್ ಐಡಿ dkshivakumar1@gmail.com ಗೆ ಇಮೇಲ್ ಬೆದರಿಕೆ ಸಂದೇಶ ಬಂದಿತ್ತು.

    ಇದರ ನಂತರ, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದೊಂದಿಗೆ ಸಿಎಂ ಮತ್ತು ಡಿಸಿಎಂ ಅವರ ನಿವಾಸಗಳನ್ನು ಸಂಪೂರ್ಣ ಶೋಧ ನಡೆಸಲಾಗಿತ್ತು. ಬಳಿಕ ಹುಸಿ ಬಾಂಬ್‌ ಬೆದರಿಕೆ ಅನ್ನೋದು ಗೊತ್ತಾಯ್ತು. ಬಳಿಕ ಅರ್ನಾ ಅಶ್ವಿನ್ ಶೇಖರ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಬೆನ್ನಲ್ಲೇ ಎಸ್‌ಐಟಿ ರಚಿಸಲಾಗಿದೆ.

    ಬಂಗಾಳದಲ್ಲಿ ಓರ್ವನ ಬಂಧನ
    ಕಳೆದ ವರ್ಷ ಅಕ್ಟೋಬರ್‌ 4ರಂದು ಬಸವನಗುಡಿಯ ಬಿಐಟಿ ಕಾಲೇಜಿಗೆ ಇ-ಮೇಲ್‌ ಮೂಲಕ ಆರೋಪಿಯು ಬಾಂಬ್‌ ಬೆದರಿಕೆ ಹಾಕಿದ್ದ. ಕಾಲೇಜು ಆವರಣದಲ್ಲೇ ಹೈಡ್ರೋಜನ್‌ ಸುಧಾರಿತ ಐಇಡಿ (IED) ಇಟ್ಟಿದ್ದು, ಅದನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ವಿವಿ ಪುರಂ ಪೊಲೀಸರು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಆರೋಪಿಯನ್ನ ಬಂಧಿಸಿದ್ದರು.

    ಆರೋಪಿಯಿಂದ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ವೇಳೆ ಆರೋಪಿ ಇದೇ ರೀತಿ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅನ್ನೋದು ಗೊತ್ತಾಗಿತ್ತು.

    ಇದಕ್ಕೂ ಮುನ್ನ ಹಲವು ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿತ್ತು. ಡಿಕೆಶಿ ಮನೆ ಎದುರಿನ ಶಾಲೆಗೂ ಬಾಂಬ್ ಬೆದರಿಕೆ ಬಂದಿತ್ತು.

  • ದೆಹಲಿಯಲ್ಲಿ ಮತ್ತೆ ಶಾಲೆಗಳಿಗೆ ಬಾಂಬ್‌ ಬೆದರಿಕೆ – ತೀವ್ರ ಶೋಧ

    ದೆಹಲಿಯಲ್ಲಿ ಮತ್ತೆ ಶಾಲೆಗಳಿಗೆ ಬಾಂಬ್‌ ಬೆದರಿಕೆ – ತೀವ್ರ ಶೋಧ

    ನವದೆಹಲಿ: ಇಲ್ಲಿನ ದ್ವಾರಕಾದ ದೆಹಲಿ ಪಬ್ಲಿಕ್‌ ಶಾಲೆ (DPS) ಸೇರಿದಂತೆ ಅನೇಕ ಶಾಲೆಗಳಿಗೆ ಬಾಂಬ್‌ ಬೆದರಿಕೆ (Bomb Threat) ಬಂದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಕ್ಕಳಿಗೆ ರಜೆ ಘೋಷಣೆ ಮಾಡಲಾಗಿದೆ.

    ಮೂಲಗಳ ಪ್ರಕಾರ, ದೆಹಲಿ ಪೊಲೀಸ್‌ ತಂಡಗಳು (Delhi Police Team) ಹಾಗೂ ಬಾಂಬ್‌ ನಿಷ್ಕ್ರಿಯ ದಳಗಳು ಸ್ಥಳಕ್ಕೆ ದೌಡಾಯಿಸಿದ್ದು, ಪೂರ್ಣ ಶೋಧ ನಡೆಸುತ್ತಿವೆ. ಅಗ್ನಿಶಾಮಕ ದಳಗಳೂ ಸ್ಥಳದಲ್ಲೇ ಬೀಡುಬಿಟ್ಟಿವೆ.

    ಪೊಲೀಸರು ಹೇಳುವಂತೆ, ದ್ವಾರಕಾದ ಸೆಕ್ಟರ್-19 ಬಳಿಯ ಸೇಂಟ್ ಥಾಮಸ್ ಶಾಲೆ, ಸೆಕ್ಟರ್ 18 ಎನ ದೆಹಲಿ ಇಂಟರ್ನ್ಯಾಷನಲ್ ಸ್ಕೂಲ್ ಎಡ್ಜ್, ಸೆಂಟ್ರಲ್ ಅಕಾಡೆಮಿ ಸ್ಕೂಲ್, ಸೆಕ್ಟರ್ 10ರ ದ್ವಾರಕಾದ ಜಿಡಿ ಗೋನೆಕಾ ಸ್ಕೂಲ್, ಸೆಕ್ಟರ್ 19ರ ದ್ವಾರಕಾ ಮತ್ತು ಮಾಡರ್ನ್ ಇಂಟರ್ನ್ಯಾಷನಲ್ ಶಾಲೆಗಳಿಗೆ ಬೆದರಿಕೆ ಬಂದಿವೆ. ಎಲ್ಲ ಬೆದರಿಕೆಗಳೂ ಒಂದೇ ಇಮೇಲ್‌ ಐಡಿಯಿಂದ ಬೆದರಿಕೆ ಬಂದಿರುವುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಟ್ರಾಫಿಕ್‌ ಸಮಸ್ಯೆಗೆ ಕೊನೆಗೂ ಮುಕ್ತಿ – 700 ಮೀಟರ್ ಉದ್ದದ ಹೆಬ್ಬಾಳ ಮೇಲ್ಸೇತುವೆ ಇಂದು ಉದ್ಘಾಟನೆ

    ಇದರಿಂದ ಎಚ್ಚೆತ್ತ ಪೊಲೀಸರು ಕೂಡಲೇ ಶಾಲೆಗಳಿಗೆ ರಜೆ ಘೊಷಿಸುವಂತೆ ಸೂಚಿಸಿದ್ದಾರೆ. ಇಡೀ ಶಾಲಾ ಆವರಣವನ್ನು ತೀವ್ರವಾಗಿ ಶೋಧಿಸಲಾಗುತ್ತಿದೆ. ಇದನ್ನೂ ಓದಿ: ಕೃಷ್ಣಾಷ್ಟಮಿ ಮೆರವಣಿಗೆ ವೇಳೆ ರಥಕ್ಕೆ ವಿದ್ಯುತ್‌ ತಂತಿ ತಗುಲಿ ಅವಘಡ – ಐವರು ಸಾವು

    ಕೆಲ ದಿನಗಳ ಹಿಂದೆ ಬೆಂಗಳೂರಿನಾದ್ಯಂತ 40 ಖಾಸಗಿ ಶಾಲೆಗಳಿಗೆ ಒಂದೇ ದಿನ ಇಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿತ್ತು.

  • CBSE ಯಿಂದ ಸೇಫ್ಟಿ ಗೈಡ್‌ಲೈನ್ಸ್ ‌- ಶೌಚಾಲಯ ಹೊರತುಪಡಿಸಿ ಶಾಲೆಯ ಉಳಿದೆಲ್ಲಕಡೆ ಆಡಿಯೋವಿಶುವಲ್ ಸಿಸಿಟಿವಿ ಕಡ್ಡಾಯ

    CBSE ಯಿಂದ ಸೇಫ್ಟಿ ಗೈಡ್‌ಲೈನ್ಸ್ ‌- ಶೌಚಾಲಯ ಹೊರತುಪಡಿಸಿ ಶಾಲೆಯ ಉಳಿದೆಲ್ಲಕಡೆ ಆಡಿಯೋವಿಶುವಲ್ ಸಿಸಿಟಿವಿ ಕಡ್ಡಾಯ

    ನವದೆಹಲಿ: ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಹೊಸ ಮಾರ್ಗಸೂಚಿಯನ್ನ ಬಿಡುಗಡೆಗೊಳಿಸಿದೆ. ಈ ಉಪಕ್ರಮದ ಭಾಗವಾಗಿ ತನ್ನೆಲ್ಲಾ ಅಂಗಸಂಸ್ಥೆಯ ಶಾಲೆಗಳಲ್ಲಿ ಹೈ-ರೆಸಲ್ಯೂಶನ್ (ಉತ್ತಮ ಗುಣಮಟ್ಟದ) ಆಡಿಯೋವಿಶುವಲ್‌ ರೆಕಾರ್ಡಿಂಗ್‌ ಸಾಮರ್ಥ್ಯದ ಸಿಸಿಟಿವಿ ಕ್ಯಾಮೆರಾಗಳನ್ನ (CCTV Cameras) ಅಳವಡಿಸಲು ನಿರ್ದೇಶನ ನೀಡಿದೆ.

    ವಿದ್ಯಾರ್ಥಿಗಳು (School Students) ಮತ್ತು ಶಾಲಾ ಸಿಬ್ಬಂದಿಯ ಸುರಕ್ಷತಾ ದೃಷ್ಟಿಯಿಂದ ಶೌಚಾಲಯ ಹೊರತುಪಡಿಸಿ ಶಾಲೆಯ ಉಳಿದೆಲ್ಲ ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚಿಸಿದೆ. ಅಲ್ಲದೇ ಕನಿಷ್ಠ 15 ದಿನಗಳವರೆಗೆ ರೆಕಾರ್ಡಿಂಗ್‌ ಸಂಗ್ರಹಿಸುವ ಶೇಖರಣಾ ಸಾಧನಗಳನ್ನ ಹೊಂದಿರಬೇಕು. ಅಗತ್ಯವಿದ್ದರೆ, ಅಧಿಕಾರಿಗಳು ಅದನ್ನು ಪರಿಶೀಲಿಸಬಹುದು ಎಂದು ಮಂಡಳಿ ಹೇಳಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಪೇದೆಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ – ಸಿಬಿಐ ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್

    ಎಲ್ಲೆಲ್ಲಿ ಸಿಸಿಟಿವಿ ಅಳವಡಿಕೆ?
    ಶೌಚಾಲಯ, ಸ್ನಾನಗೃಹ (ವಾಶ್‌ರೂಮ್‌) ಹೊರತುಪಡಿಸಿ, ಶಾಲೆಗಳ ಎಲ್ಲಾ ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ಲಾಬಿಗಳು, ಕಾರಿಡಾರ್‌ಗಳು, ಮೆಟ್ಟಿಲುಗಳು, ಎಲ್ಲಾ ತರಗತಿ ಕೊಠಡಿಗಳು, ಪ್ರಯೋಗಾಲಯಗಳು (labs), ಗ್ರಂಥಾಲಯ, ಕಾಲೇಜು ಕ್ಯಾಂಪಸ್‌ನಲ್ಲಿರುವ ಕ್ಯಾಂಟೀನ್ ಪ್ರದೇಶ, ಸ್ಟೋರ್‌ರೂಮ್‌, ಆಟದ ಮೈದಾನ, ಇತರ ಸಾಮಾನ್ಯ ಪ್ರದೇಶಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಹೈ-ರೆಸಲ್ಯೂಶನ್ ಆಡಿಯೋವಿಶುವಲ್‌ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ನಿರ್ದೇಶನ ನೀಡಿದೆ. ಇದನ್ನೂ ಓದಿ: ಭಾರೀ ಸರಕು ವಾಹನ ಪರವಾನಗಿಯುಳ್ಳ ಚಾಲಕರು ಪ್ರಯಾಣಿಕ ವಾಹನ ಚಾಲನೆ ಮಾಡಲು ಅರ್ಹರು: ಕಾಶ್ಮೀರ ಹೈಕೋರ್ಟ್ 

    ಅಲ್ಲದೇ 15 ದಿನ ರೆಕಾರ್ಡಿಂಗ್‌ ಉಳಿಸಿಕೊಳ್ಳುವ ಶೇಖರಣಾ ಸಾಧನಗಳನ್ನ ಹೊಂದಿರಬೇಕು. ರೆಕಾರ್ಡಿಂಗ್‌ ಬ್ಯಾಕಪ್‌ ವ್ಯವಸ್ಥೆಯೊಂದಿಗೆ ನಿಯಮಿತವಾಗಿ ನಿರ್ವಹಣೆ ಮಾಡಬೇಕು ಎಂದು ಸಿಬಿಎಸ್‌ಇ ಮಂಡಳಿ ತನ್ನ ಅಂಗಸಂಸ್ಥೆಯ ಶಾಲೆಗಳಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ ಭಾರತದ ಸೇನಾ ಶಕ್ತಿಯನ್ನ ಇಡೀ ವಿಶ್ವವೇ ನೋಡಿದೆ; ಸಂಸತ್ ಅಧಿವೇಶನಕ್ಕೂ ಮುನ್ನ ಮೋದಿ ಮಾತು

  • ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ 6 ದಿನ ಮೊಟ್ಟೆ ವಿತರಿಸಬೇಕು: ಶಿಕ್ಷಣ ಇಲಾಖೆ ಆದೇಶ

    ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ 6 ದಿನ ಮೊಟ್ಟೆ ವಿತರಿಸಬೇಕು: ಶಿಕ್ಷಣ ಇಲಾಖೆ ಆದೇಶ

    ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ 6 ದಿನ ಮೊಟ್ಟೆ ವಿತರಿಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

    1-10 ನೇ ತರಗತಿ ವರೆಗೂ ವಾರದ 6 ದಿನ ಮೊಟ್ಟೆ ಕೊಡುವ ಕಾರ್ಯಕ್ರಮ ಸರ್ಕಾರ ಘೋಷಣೆ ಮಾಡಿದೆ. ಆದರೆ, ಕೆಲವು ಶಾಲೆಗಳಲ್ಲಿ SDMC ಸೂಚನೆ ಮೇರೆಗೆ 3 ದಿನ ಮೊಟ್ಟೆ, 3 ದಿನ ಬಾಳೆಹಣ್ಣು ಕೊಡುವ ಕೆಲಸ ಆಗ್ತಿದೆ. ಸೋಮವಾರ ಮತ್ತು ಶನಿವಾರ ಮೊಟ್ಟೆ ಕೊಡದ ಬಾಳೆಹಣ್ಣು ಕೊಡ್ತಿದ್ದಾರೆ. ಇದನ್ನೂ ಓದಿ: ಶಿರಸಿ ನಗರಸಭೆಯಲ್ಲಿ 21 ಲಕ್ಷ ಮೌಲ್ಯದ ಐರನ್ ಪೈಪ್ ಕಳ್ಳತನ ಕೇಸ್‌ – ನಗರಸಭೆ ಕಮಿಷನರ್, ಮಾಜಿ ಅಧ್ಯಕ್ಷ ಸೇರಿ 7 ಆರೋಪಿಗಳು

    762 ಶಾಲೆಗಳಲ್ಲಿ ಪರಿಶೀಲನೆ ಮಾಡಿದಾಗ ಸುಮಾರು 568 ಶಾಲೆಗಳಲ್ಲಿ ಮೊಟ್ಟೆ ಕಡ್ಡಾಯವಾಗಿ ಕೊಡುತ್ತಿಲ್ಲದ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ 568 ಶಾಲೆಗಳಿಗೆ ಭೇಟಿ ನೀಡಿ SDMC ಅವರಿಗೆ ತಿಳುವಳಿಕೆ ಹೇಳಬೇಕು ಎಂದು DDPIಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

    ಪಿಎಂ ಪೋಷಣ್‌ ಶಕ್ತಿ ನಿರ್ಮಾಣದ ನಿರ್ದೇಶಕರು ಈ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ನಮಗೆ ಕುಡಿಯೋಕೆ ನೀರು ಕೊಡಿ: ಸಿಎಂಗೆ ವಿದ್ಯಾರ್ಥಿನಿ ಪತ್ರ

  • ಜ್ವರ, ಕೆಮ್ಮು, ನೆಗಡಿ ಲಕ್ಷಣ ಇರೋ ಮಕ್ಕಳು ಶಾಲೆಗೆ ಹೋಗೋದು ಬೇಡ: ಶಾಲೆಗಳಿಗೆ ಸರ್ಕಾರ ಗೈಡ್‌ಲೈನ್ಸ್‌

    ಜ್ವರ, ಕೆಮ್ಮು, ನೆಗಡಿ ಲಕ್ಷಣ ಇರೋ ಮಕ್ಕಳು ಶಾಲೆಗೆ ಹೋಗೋದು ಬೇಡ: ಶಾಲೆಗಳಿಗೆ ಸರ್ಕಾರ ಗೈಡ್‌ಲೈನ್ಸ್‌

    ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ, ಅನುದಾನರಹಿತ ಶಾಲೆಗಳಿಗೆ ಮಾರ್ಗಸೂಚಿ ಪ್ರಕಟ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು (Covid-19) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ (Schools) ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.

    ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಗೈಡ್‌ಲೈನ್ಸ್‌ ಹೊರಡಿಸಲಾಗಿದೆ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ, ಚಿಕಿತ್ಸೆ ಕೊರತೆ ಇದ್ರೆ ದೂರು ಕೊಡಿ – ಆರೋಗ್ಯ ಇಲಾಖೆಯಿಂದ ವಾಟ್ಸಪ್‌ ನಂಬರ್‌ ರಿಲೀಸ್‌

    ಶಾಲಾ ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಹಾಗೂ ಇತರೆ ಲಕ್ಷಣಗಳು ಕಂಡು ಬಂದಲ್ಲಿ, ಅವರನ್ನು ಶಾಲೆಗೆ ಕಳುಹಿಸದೇ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಹಾಗೂ ಆರೈಕಾ ಕ್ರಮಗಳನ್ನು ಪಾಲಿಸಬೇಕು. ಸದರಿ ಲಕ್ಷಣಗಳು ಸಂಪೂರ್ಣವಾಗಿ ಗುಣಮುಖವಾದ ನಂತರವೇ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಎಂದು ಸೂಚನೆ ನೀಡಲಾಗಿದೆ.

    ಜ್ವರ, ಕೆಮ್ಮು, ನೆಗಡಿ ಮತ್ತು ಇತರೆ ಲಕ್ಷಣಗಳಿರುವ ಮಕ್ಕಳು ಶಾಲೆಗೆ ಬಂದಲ್ಲಿ, ಪೋಷಕರಿಗೆ ಮಾಹಿತಿಯನ್ನು ನೀಡಿ, ಅಂತಹ ಮಕ್ಕಳನ್ನು ಸುರಕ್ಷಿತವಾಗಿ ಪೋಷಕರೊಂದಿಗೆ ಮನೆಗೆ ಕಳುಹಿಸುವುದು. ಶಾಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳಲ್ಲಿ ಜ್ವರ, ಕೆಮ್ಮು, ನೆಗಡಿ ಹಾಗೂ ಇತರೆ ಲಕ್ಷಣಗಳು ಕಂಡು ಬಂದಲ್ಲಿ, ಅಗತ್ಯ ಮುಂಜಾಗೃತಾ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಬಾಲಕಿ ಸಾವು ಪ್ರಕರಣ – ಭುಗಿಲೆದ್ದ ಆಕ್ರೋಶ, ತನಿಖೆಗೆ ವೈದ್ಯರ ತಂಡ ರಚನೆ

    ಶಾಲಾ ಅವಧಿಯಲ್ಲಿ ಮುಂಜಾಗೃತಾ ಕ್ರಮಗಳಾದ ಸಾಮಾನ್ಯ ಸ್ವಚ್ಛತೆಯೊಂದಿಗೆ ಪ್ರಮುಖವಾಗಿ ಕೈಗಳ ಸ್ವಚ್ಛತೆ ಮತ್ತು ಕೆಮ್ಮುವಾಗ, ಸೀನುವಾಗ ಎಚ್ಚರ ವಹಿಸಿ Covid-19 Appropirate Behaviour (CAB) ನ ಪಾಲನೆಯನ್ನು ಖಚಿತಪಡಿಸಿಕೊಳ್ಳುವುದು ಎಂದು ತಿಳಿಸಲಾಗಿದೆ.

  • ಸದ್ಯ ಶಾಲೆಗಳಿಗೆ ಯಾವುದೇ ಕೊರೊನಾ ಮಾರ್ಗಸೂಚಿ ಇಲ್ಲ: ಮಧು ಬಂಗಾರಪ್ಪ

    ಸದ್ಯ ಶಾಲೆಗಳಿಗೆ ಯಾವುದೇ ಕೊರೊನಾ ಮಾರ್ಗಸೂಚಿ ಇಲ್ಲ: ಮಧು ಬಂಗಾರಪ್ಪ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Corona) ಆತಂಕ ಏರ್ಪಟ್ಟಿದ್ದು, ಸದ್ಯಕ್ಕೆ ಶಾಲೆಗಳಿಗೆ ಯಾವುದೇ ಮಾರ್ಗಸೂಚಿ ಇಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮೇ 29ರಿಂದ ಶಾಲೆಗಳು ಪ್ರಾರಂಭವಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಮಾರ್ಗಸೂಚಿ ಶಾಲೆಗಳಿಗೆ ಕೊಡೋದಿಲ್ಲ. ಆದರೆ ಎಚ್ಚರಿಕೆ, ಮುಂಜಾಗ್ರತಾ ಕ್ರಮವಹಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮತ್ತೊಮ್ಮೆ ಭಾರತದ ಜೊತೆ ಶಾಂತಿ ಮಾತುಕತೆಯ ಪ್ರಸ್ತಾಪ ಇರಿಸಿದ ಪಾಕ್‌

    ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನ ಕೊಟ್ಟರೆ ಅದನ್ನ ಅನುಷ್ಠಾನಕ್ಕೆ ತರುತ್ತೇವೆ. ಆರೋಗ್ಯ ಇಲಾಖೆ ಮತ್ತು ಕೇಂದ್ರ ಸರ್ಕಾರ ಕೊಡುವ ಮಾರ್ಗಸೂಚಿಯನ್ನೂ ನಾವು ಜಾರಿ ಮಾಡುತ್ತೇವೆ. ಇಲ್ಲಿವರೆಗೆ ಆರೋಗ್ಯ ಇಲಾಖೆ ಯಾವುದೇ ಮಾರ್ಗಸೂಚಿ ಕೊಟ್ಟಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಗಾಂಧಿನಗರದಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ – ಎರಡೇ ದಿನದಲ್ಲಿ ಕೋವಿಡ್ ಪಾಸಿಟಿವ್ ದರ ದುಪ್ಪಟ್ಟು ಏರಿಕೆ

    ಸೋಮವಾರ ಸಿಎಂ ಸಭೆ ಮಾಡಿದ್ದಾರೆ. ಸಿಎಂ ನಿರ್ದೇಶನ ಪಾಲನೆ ಮಾಡುತ್ತೇವೆ. ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಹಾಕೋದು ಒಳ್ಳೆಯದು. ಆರೋಗ್ಯದಲ್ಲಿ ವ್ಯತ್ಯಾಸ ಇರೋ ಮಕ್ಕಳು ಶಾಲೆಗೆ ಬರೋದು ಬೇಡ ಎಂದು ಸೋಮವಾರ ನಡೆದ ಸಿಎಂ ಸಭೆಯಲ್ಲಿ ನಿರ್ಧಾರ ಆಗಿದೆ. ಶಿಕ್ಷಕರು, ಮಕ್ಕಳು, ಪೋಷಕರು ಎಚ್ಚರಿಕೆಯಿಂದ ಇರೋದು ಒಳ್ಳೆಯದು ಎಂದು ಹೇಳಿದ್ದಾರೆ.

  • ಕೊಡಗಿನಲ್ಲಿ ಧಾರಾಕಾರ ಮಳೆ; ಜು.18 ರಂದು ಶಾಲೆಗಳಿಗೆ ರಜೆ

    ಕೊಡಗಿನಲ್ಲಿ ಧಾರಾಕಾರ ಮಳೆ; ಜು.18 ರಂದು ಶಾಲೆಗಳಿಗೆ ರಜೆ

    – 2 ದಿನ ರೆಡ್ ಅಲರ್ಟ್ ಘೋಷಣೆ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಜು.18 ಮತ್ತು 19 ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಸೋಮವಾರಪೇಟೆಯ ಶಾಂತಳ್ಳಿಯಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 10 ಇಂಚು ಮಳೆ ಸುರಿದಿದೆ. ಕಾವೇರಿಯ ಉಗಮ ಸ್ಥಾನ ತಲಕಾವೇರಿ ವ್ಯಾಪ್ತಿಯ ಭಾಗಮಂಡಲದಲ್ಲಿ 7 ಇಂಚು ಮಳೆಯಾಗಿದೆ.

    ಶಾಲೆಗಳಿಗೆ ರಜೆ
    ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜು.18 ರಂದು ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಅಂಗನವಾಡಿ ಹಾಗೂ ಶಾಲಾ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ರಜೆ ಘೋಷಿಸಿದ್ದಾರೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1347.30 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 594.88 ಮಿ.ಮೀ ಮಳೆಯಾಗಿತ್ತು. ಇದನ್ನೂ ಓದಿ: ಉಡುಪಿಯ ಹಲವೆಡೆ ನೆರೆ ಪರಿಸ್ಥಿತಿ; ಹಾಸನ, ಕೊಡಗಿನನಲ್ಲಿ ಭೂಕುಸಿತದ ಅವಾಂತರ; ಕಪಿಲಾ ನದಿ ತೀರದಲ್ಲೂ ಪ್ರವಾಹ ಭೀತಿ!

    ಬ್ರಹ್ಮಗಿರಿಯ ತಪ್ಪಲಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಏರ್ಪಟ್ಟಿರುವ ಕಾವೇರಿಯ ಪ್ರವಾಹದಿಂದ ನದಿ ಪಾತ್ರದ ಹಲ ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಬಿರುಮಳೆಯಿಂದ ಜಿಲ್ಲೆಯಾದ್ಯಂತ ಅವಘಡಗಳ ಸರಮಾಲೆ ಮುಂದುವರೆದಿದೆ. ಭಾಗಮಂಡಲ ಮತ್ತು ತಲಕಾವೇರಿ ವ್ಯಾಪ್ತಿಯಲ್ಲಿ ಕಿರು ತೊರೆಗಳು ಉಕ್ಕಿ ಹರಿದು ಕಾವೇರಿಯ ಪ್ರವಾಹದ ಮಟ್ಟ ಮತ್ತಷ್ಟು ಹೆಚ್ಚಿದೆ. ಭಾಗಮಂಡಲದ ಅಯ್ಯಂಗೇರಿ ರಸ್ತೆ ಹಾಗೂ ಮಡಿಕೇರಿಯನ್ನು ಸಂಪರ್ಕಿಸುವ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಗ್ರಾಮೀಣರ ಬದುಕು ಅಸ್ತವ್ಯಸ್ತಗೊಂಡಿದೆ.

    ಸೇತುವೆ ಮುಳುಗಡೆ
    ದಕ್ಷಿಣ ಕೊಡಗಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿದು ಪ್ರವಾಹ ಏರ್ಪಟ್ಟಿದೆ. ಇದರ ಪರಿಣಾಮ ಶ್ರೀಮಂಗಲ-ನಾರಿ ಸೇತುವೆ ಮುಳುಗಡೆಯಾಗಿದ್ದು, ಸಮಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಇದರ ಪರಿಣಾಮ ಮಡಿಕೇರಿ-ವಿರಾಜಪೇಟೆ ಮುಖ್ಯ ರಸ್ತೆಯ ಬೇತ್ರಿ ಸೇತುವೆ ಮೇಲೆ ನೀರು ಬರಲು ಇನ್ನು ಕೆಲವೆ ಅಡಿ ಬಾಕಿ ಉಳಿದಿದೆ. ಮಳೆಯ ಪ್ರಮಾಣ ಹೆಚ್ಚಿದಲ್ಲಿ ಸೇತುವೆ ಮುಳುಗಡೆಯಾಗುವ ಸಂಭವವಿದೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಭೂಕುಸಿತ ದುರಂತ – ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದ ಕೇಂದ್ರ ಸಚಿವ ಹೆಚ್‌ಡಿಕೆ

    ಕಾವೇರಿ ನದಿ ಪಾತ್ರದಲ್ಲಿ ಬರುವ ನಾಪೋಕ್ಲುವಿನಿಂದ ಮೂರ್ನಾಡುವಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬೊಳಿಬಾಣೆಯಲ್ಲಿ, ರಸ್ತೆಯ ಮೇಲೆ 4 ಅಡಿಯಷ್ಟು ಪ್ರವಾಹದ ನೀರು ಆವರಿಸಿದ್ದು, ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಚೆರಿಯಪರಂಬು- ಕಲ್ಲುಮೊಟ್ಟೆ ಸಂಪರ್ಕರಸ್ತೆ, ನಾಪೋಕ್ಲು -ಬಲಮುರಿ ಮಾರ್ಗದ ಮಕ್ಕಿಕಡವು ರಸ್ತೆ ಜಾಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

    ಈ ಹಿನ್ನೆಲೆ ವಾಹನ ಸಂಚಾರ ನಾಪೋಕ್ಲು, ಕೊಟ್ಟಮುಡಿ, ಕೇಮಾಟ್, ಕುಯ್ಯಂಗೇರಿ, ಹೊದ್ದೂರು ಬಳಸು ಹಾದಿಯನ್ನು ಅವಲಂಬಿಸುವಂತಾಗಿದೆ. ನಾಪೋಕ್ಲು-ಕೊಟ್ಟಮುಡಿ ಬೆಟ್ಟಗೇರಿ ಮಡಿಕೇರಿ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಮಳೆಯ ಅಬ್ಬರ ಇದೇ ರೀತಿ ಮುಂದುವರೆದರೆ ನಾಪೋಕ್ಲು- ಕೊಟ್ಟಮುಡಿ ಸಂಪರ್ಕ ರಸ್ತೆ ಸೇರಿದಂತೆ ನಾಪೋಕ್ಲು ವ್ಯಾಪ್ತಿಯ ಎಲ್ಲಾ ಪ್ರಮುಖ ರಸ್ತೆಗಳ ಸಂಚಾರ ಕಡಿತಗೊಳ್ಳುವ ಸಾಧ್ಯತೆ ಇದೆ.

  • ರಾಮಮಂದಿರ ಉದ್ಘಾಟನೆಗೆ ರಜೆ ಕೊಡೋ ಬಗ್ಗೆ ಬಿಜೆಪಿಯವ್ರು ಹೇಳಿಕೊಡಬೇಕಿಲ್ಲ: ಡಿಕೆ ಶಿವಕುಮಾರ್

    ರಾಮಮಂದಿರ ಉದ್ಘಾಟನೆಗೆ ರಜೆ ಕೊಡೋ ಬಗ್ಗೆ ಬಿಜೆಪಿಯವ್ರು ಹೇಳಿಕೊಡಬೇಕಿಲ್ಲ: ಡಿಕೆ ಶಿವಕುಮಾರ್

    – ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದ್ದಾನೆ. ನನ್ನ ಹೆಸರಲ್ಲಿ ಶಿವ ಇದ್ದಾನೆ ಎಂದ ಡಿಕೆಶಿ

    ಬೆಂಗಳೂರು: ರಾಮನ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸರ್ಕಾರದಿಂದ ರಜೆ ಕೊಡೋದಿಲ್ಲ ಅಂತ ಡಿಸಿಎಂ ಡಿಕೆ ಶಿವಕುಮಾರ್ (DK Sivakumar) ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.

    ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಜೆ ಘೋಷಣೆ ‌ಮಾಡಲು ಬಿಜೆಪಿಯಿಂದ (BJP) ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ ಅವರು, ನಾವು ನಮ್ಮ ಭಕ್ತಿ, ನಮ್ಮ ಗೌರವ, ನಮ್ಮ ಧರ್ಮ ಪ್ರಚಾರಕ್ಕೆ ನಾವು ಏನು ಮಾಡಲ್ಲ. ನಮ್ಮ ಭಾವನೆ ಇದೆಯಲ್ಲ. ನಮ್ಮ ಮಂತ್ರಿಗಳೇ ಎಲ್ಲಾ ದೇವಸ್ಥಾನಗಳಲ್ಲಿ ಮಾಡಬೇಕಾದ ಆಚರಣೆಗಳಿಗೆ ಆದೇಶ ಹೊರಡಿಸಿದ್ದಾರೆ ಎಂದು ಹೇಳಿದ್ದಾರೆ.

    ಪೂಜೆ, ಪುನಸ್ಕಾರ ಏನು ಮಾಡಬೇಕೋ ಆ ಕೆಲಸ ಮಾಡ್ತಿದ್ದೇವೆ. ನಮ್ಮ ಪ್ರಾರ್ಥನೆಗೆ ಫಲ ನಮಗೆ ದೊರೆಯುತ್ತದೆ ಅನ್ನೋ ನಂಬಿಕೆಯಿದೆ. ಹೀಗಾಗಿ ಎಲ್ಲರೂ ಪ್ರಾರ್ಥನೆ ಮಾಡಿಕೊಳ್ಳಿ ಅಂತ ಹೇಳ್ತಿದ್ದೇವೆ ಎಂದರು. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಸಮಯಕ್ಕೆ ಮೈಸೂರಿನಲ್ಲೂ ವಿಶೇಷ ಪೂಜೆ – ಶ್ರೀರಾಮನಿಗೆ ಸಪ್ತ ನದಿಗಳ ನೀರಿನಿಂದ ಜಲಾಭೀಷೇಕ!

    ಸಿದ್ದರಾಮಯ್ಯ (Siddaramaiah) ಹೆಸರಲ್ಲಿ ರಾಮ ಇದ್ದಾನೆ. ನನ್ನ ಹೆಸರಲ್ಲಿ ಶಿವ ಇದ್ದಾನೆ. ನಮಗೆ ಯಾರೂ ಹೇಳಿಕೊಡಬೇಕಿಲ್ಲ. ಯಾರು ಒತ್ತಡ ಹಾಕೋದು ಬೇಕಿಲ್ಲ. ನಮ್ಮ ಕರ್ತವ್ಯ ನಾವು ಮಾಡ್ತೀವಿ. ರಾಜಕಾರಣದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸಿಎಂ ತವರಲ್ಲಿ ಶ್ರೀರಾಮನ ಹೆಸರಿನ ಲಕ್ಷ ದೀಪೋತ್ಸವಕ್ಕೆ ಅನುಮತಿ ರದ್ದು – ರಾಮಭಕ್ತರಿಂದ ಆಕ್ಷೇಪ

  • ಆಂಧ್ರ ಪ್ರದೇಶದ ಶಾಲೆಗಳಲ್ಲಿ ಮೊಬೈಲ್‌ ಬ್ಯಾನ್‌, ಶಿಕ್ಷಕರೂ ಮೊಬೈಲ್‌ ಬಳಸುವಂತಿಲ್ಲ

    ಆಂಧ್ರ ಪ್ರದೇಶದ ಶಾಲೆಗಳಲ್ಲಿ ಮೊಬೈಲ್‌ ಬ್ಯಾನ್‌, ಶಿಕ್ಷಕರೂ ಮೊಬೈಲ್‌ ಬಳಸುವಂತಿಲ್ಲ

    ಅಮರಾವತಿ: ಆಂಧ್ರ ಪ್ರದೇಶ ಸರ್ಕಾರ (Andhra Pradesh Government) ರಾಜ್ಯಾದ್ಯಂತ ಶಾಲೆಗಳಲ್ಲಿ ಮೊಬೈಲ್‌ ಫೋನ್‌ ಬಳಕೆಯನ್ನ ನಿಷೇಧಿಸಿದೆ. ವಿದ್ಯಾರ್ಥಿಗಳು ಶಾಲೆಗಳಿಗೆ ಮೊಬೈಲ್‌ ತರುವುದನ್ನ ನಿಷೇಧಿಸಿ ಶಿಕ್ಷಣ ಇಲಾಖೆ (Education Departments) ಆದೇಶ ಹೊರಡಿಸಿದೆ.

    ಅಲ್ಲದೇ ತರಗತಿಗಳಲ್ಲಿ ಶಿಕ್ಷಕರೂ ಸಹ ಮೊಬೈಲ್‌ ಫೋನ್‌ (Mobile Phones) ಬಳಸುವುದನ್ನ ಶಿಕ್ಷಣ ಇಲಾಖೆ ನಿಷೇಧಿಸಿದೆ. ತರಗತಿಗಳಿಗೆ ಹೋಗುವ ಮುನ್ನ ಶಿಕ್ಷಕರು ತಮ್ಮ ಮೊಬೈಲ್‌ಗಳನ್ನು ಮುಖ್ಯಶಿಕ್ಷಕರ ಬಳಿ ಕೊಟ್ಟು ಹೋಗಬೇಕು ಎಂದು ಸೂಚಿಸಿದೆ. ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಲೋಕಸಭಾ ಚುನಾವಣೆ: ಮಮತಾ ಬ್ಯಾನರ್ಜಿ ಭವಿಷ್ಯ

    ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ (UNESCO) ಜಾಗತಿಕ ಶಿಕ್ಷಣ ಮೇಲ್ವಿಚಾರಣಾ ವರದಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಶಿಕ್ಷಕರಿಂದ ಮಕ್ಕಳಿಗೆ ಉಂಟಾಗುವ ತೊಂದರೆ ತಪ್ಪಿಸಲು ಶಿಕ್ಷಕರೂ ತರಗತಿಗಳಲ್ಲಿ ಮೊಬೈಲ್‌ ಬಳಸುವುದನ್ನ ನಿಷೇಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತನಗಿಂತ 2 ವರ್ಷ ಕಿರಿಯವನನ್ನ ಪ್ರೀತಿಸಿ ಮದ್ವೆಯಾಗಿದ್ದ ವಿವಾಹಿತೆ ಆತ್ಮಹತ್ಯೆ

    ವಿಶ್ವಸಂಸ್ಥೆಯು ಶಾಲೆಗಳಲ್ಲಿ ಫೋನ್‌ ಬಳಕೆಯನ್ನ ನಿಷೇಧಿಸಿದೆ. ಡೇಟಾ ಗೌಪ್ಯತೆ, ಸುರಕ್ಷತೆ ಮತ್ತು ಮಗುವಿನ ಯೋಗಕ್ಷೇಮ ಕಾಳಜಿಯಿಂದ ಜಾಗತೀಕವಾಗಿ ನಾಲ್ಕು ದೇಶಗಳಲ್ಲಿ ಈ ಕ್ರಮ ಅನುಷ್ಠಾನಕ್ಕೆ ಬಂದಿದೆ. ಇದನ್ನ ಮಾದರಿಯಾಗಿ ತೆಗೆದುಕೊಂಡಿರುವ ಶಿಕ್ಷಣ ಇಲಾಖೆ ಆಂಧ್ರ ಪ್ರದೇಶದ ಶಾಲೆಗಳಲ್ಲಿಯೂ ಮೊಬೈಲ್‌ ಬಳಕೆಗೆ ನಿಷೇಧ ಹೇರಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರೀ ಮಳೆ; ದೆಹಲಿಯ ಶಾಲೆಗಳಿಗೆ ನಾಳೆ ರಜೆ – ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ

    ಭಾರೀ ಮಳೆ; ದೆಹಲಿಯ ಶಾಲೆಗಳಿಗೆ ನಾಳೆ ರಜೆ – ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ

    ನವದೆಹಲಿ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಹವಾಮಾನ ಇಲಾಖೆಯ ಎಚ್ಚರಿಕೆ ಹಿನ್ನೆಲೆಯಲ್ಲಿ ದೆಹಲಿಯ (New Delhi) ಎಲ್ಲಾ ಶಾಲೆಗಳಿಗೆ ಸೋಮವಾರ ರಜೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಭಾನುವಾರ ಘೋಷಿಸಿದ್ದಾರೆ.

    ಇಂದು ಬೆಳಿಗ್ಗೆಯಿಂದ ದೆಹಲಿಯಲ್ಲಿ ಮಳೆಯ (Delhi Rain) ಪ್ರಮಾಣ ಹೆಚ್ಚಾಗತೊಡಗಿದ್ದು, ದೆಹಲಿಯ ಹಲವು ಭಾಗಗಳಲ್ಲಿ ರಸ್ತೆಗಳು ಜಾಲವೃತವಾಗಿದೆ. ಸದ್ಯ ನಾಳೆ ಸಹ ದೆಹಲಿಯಲ್ಲಿ ಮಳೆ ಮುಂದುವರಿಯುವ ಸಂಭವವಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಹಿಮಾಚಲದಲ್ಲಿ ಭಾರೀ ಮಳೆ – ಕೊಚ್ಚಿ ಹೋಯ್ತು ಕಾರು, ಕುಸಿದು ಬಿದ್ದವು ಅಂಗಡಿಗಳು

    ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 153 ಮಿಮೀ ಮಳೆಯಾಗಿದೆ. ಇದು 1982 ರಿಂದ ಇಲ್ಲಿಯವರೆಗೆ ಜುಲೈ ತಿಂಗಳಲ್ಲಿ ಒಂದೇ ದಿನದಲ್ಲಾದ ಅತಿ ಹೆಚ್ಚು ಮಳೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

    ದೆಹಲಿಯಲ್ಲಿ ಮುಂದಿನ 2-3 ದಿನಗಳ ಕಾಲ ಹೆಚ್ಚಿನ ತೀವ್ರತೆಯ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಹೊಸ ಬಣ್ಣ – ಫೋಟೋ ಹಂಚಿಕೊಂಡ ಅಶ್ವಿನಿ ವೈಷ್ಣವ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]