Tag: ಶಾಲಿನಿ ರಜನೀಶ್

  • ಸರ್ಕಾರದ ಎಲ್ಲಾ ಇಲಾಖೆಗಳ ನಾಮಫಲಕವನ್ನ ಕಡ್ಡಾಯವಾಗಿ ಕನ್ನಡದಲ್ಲೇ ಪ್ರದರ್ಶಿಸಬೇಕು – CS ಆದೇಶ

    ಸರ್ಕಾರದ ಎಲ್ಲಾ ಇಲಾಖೆಗಳ ನಾಮಫಲಕವನ್ನ ಕಡ್ಡಾಯವಾಗಿ ಕನ್ನಡದಲ್ಲೇ ಪ್ರದರ್ಶಿಸಬೇಕು – CS ಆದೇಶ

    ಬೆಂಗಳೂರು: ಸರ್ಕಾರದ ಎಲ್ಲಾ ಇಲಾಖೆಗಳ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲಿ (Kannada Nameplate) ಇರುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajneesh) ಆದೇಶ ಹೊರಡಿಸಿದ್ದಾರೆ.

    ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರುತ್ತದೆ. ರಾಜ್ಯದಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022 ಹಾಗೂ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಅಧಿನಿಯಮ, 2024 ಜಾರಿಗೆ ಬಂದಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022 ರನ್ವಯ ಕನ್ನಡ ಭಾಷೆಯು ರಾಜ್ಯದ ಹಾಗೂ ಸ್ಥಳೀಯ ಪ್ರಾಧಿಕಾರದ ಅಧಿಕೃತ ಭಾಷೆಯಾಗಿದೆ. ಆದ್ದರಿಂದ, ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಇಲಾಖೆಗಳ ಅಧೀನದಲ್ಲಿ ಬರುವ ಎಲ್ಲಾ ಕ್ಷೇತ್ರ ಇಲಾಖೆಗಳಲ್ಲಿ, ಆಯುಕ್ತಾಲಯ, ನಿರ್ದೇಶನಾಲಯ, ನಿಗಮ, ಮಂಡಳಿ, ಪ್ರಾಧಿಕಾರಗಳ ಆವರಣಗಳಲ್ಲಿನ ಹೆಸರು, ಪದನಾಮ, ಸೇವಾ ಅವಧಿಯ ನಾಮಫಲಕಗಳು, ಮಾರ್ಗಗಳ ಸೂಚನಾ ಫಲಕಗಳು, ಇನ್ನಿತರೆ ಯಾವುದೇ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಪ್ರದರ್ಶಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಟೀಚರ್ ಹೊಡೆದ್ರು ಅಂತಾ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ – ಶಾಲಾ ಬಿಲ್ಡಿಂಗ್‌ನ 3ನೇ ಫ್ಲೋರ್‌ನಿಂದ ಏಕಾಏಕಿ ಜಿಗಿದ ವಿದ್ಯಾರ್ಥಿನಿ!

    ತೀರಾ ಅನಿವಾರ್ಯವಿದ್ದಲ್ಲಿ ಮಾತ್ರ ಕಡ್ಡಾಯವಾಗಿ ಕನ್ನಡ ಭಾಷೆಯು ಶೇ.60 ರಷ್ಟು ನಾಮಫಲಕದ ಮೇಲ್ಬಾಗದಲ್ಲಿರುವಂತೆ ಹಾಗೂ ಶೇ.40 ರಷ್ಟು ಆಂಗ್ಲಭಾಷೆಯಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ವಹಿಸುವಂತೆ ಸರ್ಕಾರದ ‌ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ಗೆ ಮೋದಿ ಭೇಟಿ – ಝೆಲೆನ್ಸ್ಕಿ ಜೊತೆ ಮಾತುಕತೆ; ಯುದ್ಧದಲ್ಲಿ ಮಡಿದ ಮಕ್ಕಳ ಸ್ಮಾರಕ ವೀಕ್ಷಿಸಿದ ಪ್ರಧಾನಿ!

  • ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ‌ರಜನೀಶ್ ನೇಮಕ

    ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ‌ರಜನೀಶ್ ನೇಮಕ

    ಬೆಂಗಳೂರು: ಕರ್ನಾಟಕ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ (Chief Secretary) ಶಾಲಿನಿ ರಜನೀಶ್ (Shalini Rajneesh) ನೇಮಕವಾಗಿದ್ದಾರೆ. ಶುಕ್ರವಾರ (ಜು.26) ನಡೆದ ಕ್ಯಾಬಿನೆಟ್ ಸಭೆಯಲ್ಲಿ ರಜನೀಶ್ ಗೋಯಲ್ ಅವರಿಂದ ತೆರವಾಗೋ ಸ್ಥಾನಕ್ಕೆ ಅವರ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೊಯಲ್ ಅವರ ಪತ್ನಿಯವರನ್ನ ನೇಮಕ ಮಾಡುವ ಸಿಎಂ‌ ಸಿದ್ದರಾಮಯ್ಯ ನಿರ್ಧಾರಕ್ಕೆ ಕ್ಯಾಬಿನೆಟ್ ಒಪ್ಪಿಗೆ ‌ನೀಡಿದೆ.

    ಇದೇ ತಿಂಗಳ ಜುಲೈ 31ಕ್ಕೆ ಹಾಲಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ (Rajneesh Goel) ಅವರು ನಿವೃತ್ತಿ ಹೊಂದಲಿದ್ದಾರೆ. ನಂತರ ತೆರವಾಗುವ ಸ್ಥಾನಕ್ಕೆ ರಜನೀಶ್‌ ಗೋಯಲ್‌ ಅವರ ಪತ್ನಿಯೂ ಆಗಿರುವ ಐಎಎಸ್‌ ಅಧಿಕಾರಿ ಶಾಲಿನಿ ರಜನೀಶ್‌ ಅವರನ್ನ ನೇಮಕ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯಸಭೆಯಲ್ಲೂ ವಾಲ್ಮೀಕಿ ನಿಗಮದ ಹಗರಣ, ಮುಡಾ ಪ್ರಕರಣದ ಸದ್ದು – ಹಣ ಲೂಟಿ ಆರೋಪ

    ಆಗಸ್ಟ್‌ 1 ರಿಂದ ಶಾಲಿನಿ ರಜನೀಶ್‌ ಅವರು ಮುಖ್ಯಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 1989ರ ಬ್ಯಾಚ್‌ನ ಐಎಎಸ್‌ ಅಧಿಕಾರಿ ಆಗಿರುವ ಶಾಲಿನಿ ಅವರ ಸೇವಾವಧಿ 2027ರ ಜೂನ್‌ 30ರ ವರೆಗೆ ಇರಲಿದ್ದು, ಮೂರು ವರ್ಷಗಳ ಕಾಲ ದೀರ್ಘಾವಧಿ ಸೇವೆಯಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಟಿಬಿ ಡ್ಯಾಂನ 30 ಕ್ರಸ್ಟ್‌ ಗೇಟ್‌ ಓಪನ್‌; 90‌,000 ಕ್ಯುಸೆಕ್‌ ನೀರು ನದಿಗೆ – ಹಂಪಿಯ ಹಲವು ಸ್ಮಾರಕಗಳು ಮುಳುಗಡೆ

    ಕರ್ನಾಟಕದಲ್ಲಿ ಸಿಎಸ್‌ ಆದ 3ನೇ ದಂಪತಿ:
    ಈ ಹಿಂದೆ 2000 ಇಸವಿಯಲ್ಲಿ ಬಿ.ಕೆ ಭಟ್ಟಾಚಾರ್ಯ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2000 ಇಸವಿ ಜನವರಿ 1 ರಿಂದ 2002ರ ಅವಧಿಯಲ್ಲಿ ಅವರ ಪತ್ನಿ ತೆರೆಸಾ ಭಟ್ಟಾಚಾರ್ಯ ಸಿಎಸ್‌ ಆಗಿ ಸೇವೆ ಸಲ್ಲಿಸಿದ್ದರು. ಆ ನಂತರ 2006ರಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಬಿಕೆ ದಾಸ್ ಹಾಗೂ ಮಾಲತಿ ದಾಸ್ ದಂಪತಿ ಸೇವೆ ಸಲ್ಲಿಸಿದ್ದರು. ಇದೀಗ  ರಜನೀಶ್ ಗೋಯಲ್ ಮತ್ತು ಶಾಲಿನಿ ರಜನೀಶ್ ಮುಖ್ಯಕಾರ್ಯದರ್ಶಿಗಳಾದ 3ನೇ ದಂಪತಿಯಾಗಿದ್ದಾರೆ. ಇದನ್ನೂ ಓದಿ: ರಾಮನಗರ ಜಿಲ್ಲೆ ‌ಹೆಸರು ಬದಲಾವಣೆ- ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮರು ನಾಮಕರಣ ಮಾಡಲು ಕ್ಯಾಬಿನೆಟ್ ಮಹತ್ವದ ನಿರ್ಧಾರ

  • ಇಂದು, ನಾಳೆ ನೀತಿ ಆಯೋಗದ ಸಮಾಲೋಚಕರ ಸಭೆ – ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಾಂಕಗಳ ಪ್ರಗತಿ ಬಗ್ಗೆ ಚರ್ಚೆ

    ಇಂದು, ನಾಳೆ ನೀತಿ ಆಯೋಗದ ಸಮಾಲೋಚಕರ ಸಭೆ – ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಾಂಕಗಳ ಪ್ರಗತಿ ಬಗ್ಗೆ ಚರ್ಚೆ

    ಬೆಂಗಳೂರು: ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಾಂಕಗಳ ಪ್ರಗತಿ ಕುರಿತು ಚರ್ಚಿಸಲು ರಾಜ್ಯಕ್ಕೆ ಆಗಮಿಸಿರುವ ನೀತಿ ಆಯೋಗದ ಸಮಾಲೋಚಕರಾದ ಸನ್ಯುಕ್ತಾ ಸಮದ್ದಾರ್ ಅವರನ್ನು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಹೂಗುಚ್ಛ ನೀಡುವ ಮೂಲಕ ಸ್ವಾಗತ ಕೋರಿದರು.

    ಇಂದು ಮತ್ತು ನಾಳೆ ವಿಕಾಸಸೌಧದಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಭಾಗವಹಿಸಲಿದ್ದು ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷತೆವಹಿಲಿದ್ದಾರೆ.

    ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಾಂಕಗಳ ಪ್ರಗತಿಯನ್ನು ಇನ್ನಷ್ಟು ಸುಧಾರಿಸಲು ಹಾಗೂ ಇತರ ರಾಜ್ಯಗಳಲ್ಲಿ ಆಗುತ್ತಿರುವ ಉತ್ತಮ ಯೋಜನೆಗಳ/ಸಾಧನೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಅಲ್ಲದೇ ವಿಶೇಷವಾಗಿ ಕೇಂದ್ರ ಸರ್ಕಾರದ ಬಡತನ ನಿರ್ಮೂಲನೆಗಾಗಿ ಬಹು ಆಯಾಮದ ಬಡತನ ಸೂಚ್ಯಾಂಕಗಳ ಬಗ್ಗೆ ಎಲ್ಲಾ ರಾಜ್ಯಗಳೊಂದಿಗೆ ನೀತಿ ಆಯೋಗದ ಮೂಲಕ ಕೆಲವು ಕಾರ್ಯತಂತ್ರಗಳನ್ನು ಹಂಚಿಕೊಳ್ಳಲಾಗುವುದು.

    ಇಂದಿನ ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ ಹಾಗೂ ಶಾಲಿನಿ ರಜನೀಶ್ ಅವರು ಸೇರಿದಂತೆ ಅನೇಕ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ವರ್ಗಾವಣೆ

    ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ವರ್ಗಾವಣೆ

    ತುಮಕೂರು: ಸ್ಮಾಟ್ ಸಿಟಿ ಯೋಜನೆಯಿಂದ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.

    ಕಳೆದ 8 ವರ್ಷಗಳಿಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹುದ್ದೆಯಲ್ಲಿ ಭದ್ರವಾಗಿ ತಳವೂರಿದ್ದ ಶಾಲಿನಿ ರಜನೀಶ್ ವಿರುದ್ಧ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರದ ನಡೆದಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪ ಮಾಡಿದ್ದರು. ಅಲ್ಲದೆ ಅವರನ್ನು ಅಮಾನತು ಮಾಡುವಂತೆ ಕೂಡ ಒತ್ತಾಯಿಸಿದ್ದರು. ಈ ಎಲ್ಲಾ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ಶಾಲಿನಿ ರಜನೀಶ್ ಅವರನ್ನು ಚಿಕ್ಕಮಗಳೂರಿಗೆ ವರ್ಗಾವಣೆ ಮಾಡಿ ಆದೇಶಿಸಿದೆ.

    ಎಲ್.ಎ.ಅತೀಕ್ ಅವರನ್ನು ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯನ್ನಾಗಿ ನಿಯೋಜಿಸಲಾಗಿದೆ. ಹಾಲಿ ಬಿಜೆಪಿ ಸಂಸದ ಜಿ.ಎಸ್.ಬಸವರಾಜು, ನಗರ ಶಾಸಕ ಜ್ಯೋತಿಗಣೇಶ್, ಕಾಂಗ್ರೆಸ್ ಮಾಜಿ ಶಾಸಕ ರಫೀಕ್ ಅಹಮದ್ ಕೂಡ ಶಾಲಿನಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

    ಸ್ಮಾರ್ಟ್ ಸಿಟಿ ಹೆಸರಿನಲ್ಲಿ ತುಮಕೂರು ನಗರವನ್ನು ಧೂಳು ಸಿಟಿ ಮಾಡಿದ್ದಾರೆ. ಅವೈಜ್ಞಾನಿಕ ಕಾಮಗಾರಿಗಳಿಂದ ಜನ ಹೈರಾಣಾಗಿದ್ದಾರೆ. ಅಲ್ಲದೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಹಾಗೂ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ ಎಂಬ ಟೀಕೆಗಳು ಕೇಳಿ ಬಂದಾಗ ಮೆಲುಸ್ತುವಾರಿಗಾಗಿ ಅಧಿಕಾರಿಗಳನ್ನು ನೇಮಕ ಮಾಡಿ ಗುಣ ಮಟ್ಟದ ತೇಪೆ ಹಾಕಿದ್ದರು. ಆದರೆ ಈವರೆಗೆ ಅಧಿಕಾರಿಗಳು ಕಳಪೆ ಗುಣಮಟ್ಟದ ವರದಿ ನೀಡಿದ ಬಗ್ಗೆ ತುಟಿ ಬಿಚ್ಚಿರಲಿಲ್ಲ ಎಂದು ಆರೋಪಿಸಿದ್ದರು.

  • ಅಕ್ಷಯ ತೃತೀಯಗೆ ಚಿನ್ನದ ಬದಲಾಗಿ ನೀರನ್ನು ಪೂಜಿಸಿ: ಶಾಲಿನಿ ರಜನೀಶ್

    ಅಕ್ಷಯ ತೃತೀಯಗೆ ಚಿನ್ನದ ಬದಲಾಗಿ ನೀರನ್ನು ಪೂಜಿಸಿ: ಶಾಲಿನಿ ರಜನೀಶ್

    ಬೆಂಗಳೂರು: ಚಿನ್ನದ ದರದಲ್ಲಿ ಅಲ್ಪ ಪ್ರಮಾಣದ ಬೆಲೆ ಇಳಿಕೆ ಕಂಡಿದ್ದು, ಮೇ 7ರ ಅಕ್ಷಯ ತೃತೀಯದಂದು ಚಿನ್ನಾಭರಣ ಖರೀದಿಸೋಣ ಎಂದು ಪ್ಲಾನ್ ಮಾಡಿಕೊಂಡಿರುತ್ತಾರೆ. ಆದರೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರು ಚಿನ್ನದ ಬದಲು ಮನೆಯ ಪೂಜಾ ಕೋಣೆಯಲ್ಲಿ ನೀರು ಇಟ್ಟು ಪೂಜೆ ಸಲ್ಲಿಸಿ ಎಂದು ಸಲಹೆ ನೀಡಿದ್ದಾರೆ.

    ಅಕ್ಷಯ ತೃತೀಯದಂದು ಚಿನ್ನ, ಬೆಳ್ಳಿ, ವಜ್ರ ಖರೀದಿ ಮಾಡೋದು ಅಲ್ಲ. ಚಿನ್ನ-ಬೆಳ್ಳಿಗಿಂತ ನೀರು ಜೀವನಕ್ಕೆ ಮುಖ್ಯ. ಅಕ್ಷಯ ತೃತೀಯ ದಿನ ಪೂಜಾ ಮನೆಯಲ್ಲಿ ನೀರು ಇಟ್ಟು ಸಂವೃದ್ಧಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

    ಮಾರ್ಚ್ 1ರಂದು 22 ಕ್ಯಾರೆಟ್ ಚಿನ್ನದ ಬೆಲೆ 31 ಸಾವಿರ ರೂ. ಇದ್ರೆ. ಇವತ್ತು ಬೆಂಗಳೂರಲ್ಲಿ 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 32,350 ರೂಪಾಯಿ, 22 ಕ್ಯಾರೆಟ್‍ನ ಚಿನ್ನದ ಬೆಲೆ 29,950 ರೂಪಾಯಿ. 1 ಕೆಜಿ ಬೆಳ್ಳಿ 40,500 ರೂಪಾಯಿ ಆಗಿದೆ. ಅಂತರಾಷ್ಟೀಯ ಮಟ್ಟದಲ್ಲಿ ಚಿನ್ನದ ದರ ಕಡಿಮೆ ಆಗಿರೋದೇ ಚಿನ್ನದ ಬೆಲೆ ಇಳಿಕೆಗೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವವರು ಈಗಲೇ ಬುಕ್ ಮಾಡೋದು ಬೆಸ್ಟ್ ಎಂದು ಚಿನ್ನದ ವ್ಯಾಪಾರಿಗಳು ಹೇಳುತ್ತಿದ್ದಾರೆ.

  • ಪ್ರಾಥಮಿಕ ಶಿಕ್ಷಣ ಸಚಿವರ ಸಮ್ಮುಖದಲ್ಲೇ ಐಎಎಸ್ ಅಧಿಕಾರಿಗಳ ಕಿತ್ತಾಟ!- ವಿಡಿಯೋ ನೋಡಿ

    ಪ್ರಾಥಮಿಕ ಶಿಕ್ಷಣ ಸಚಿವರ ಸಮ್ಮುಖದಲ್ಲೇ ಐಎಎಸ್ ಅಧಿಕಾರಿಗಳ ಕಿತ್ತಾಟ!- ವಿಡಿಯೋ ನೋಡಿ

    ಬೆಂಗಳೂರು: ಪ್ರಾಥಮಿಕ ಶಿಕ್ಷಣ ಸಚಿವ ಮಹೇಶ್ ಮಧ್ಯಸ್ಥಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಬ್ಬರ ನಡುವಿನ ಅಸಮಾಧಾನ ಬಹಿರಂಗವಾಗಿದೆ.

    ಮೂಲ ಸೌಕರ್ಯಗಳಿಲ್ಲ ಅಂತಾ 200 ಕಾಲೇಜು ಆರಂಭಕ್ಕೆ ಪಿಯು ಶಿಕ್ಷಣ ಕೇಂದ್ರದ ನಿರ್ದೇಶಕಿ ಸಿ.ಶಿಖಾ ಅವರು ಒಪ್ಪಿಗೆ ನೀಡಲಿಲ್ಲ. ಇದಿಂದಾಗಿ ಕೋಪಗೊಂಡ ಆಯುಕ್ತೆ ಶಾಲಿನಿ ರಜನೀಶ್ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇಬ್ಬರೂ ಅಧಿಕಾರಿಗಳ ನಡುವೆ ಕೆಲಹೊತ್ತು ವಾಗ್ದಾಳಿ ನಡೆಯಿತು.

    ಶೈಕ್ಷಣಿಕ ವರ್ಷ ಪ್ರಾರಂಭದಲ್ಲಿಯೇ ಮೂಲ ಸೌಕರ್ಯ ಪೂರೈಸಲಾಗುತ್ತದೆ. ಹೀಗಾಗಿ ಕಾಲೇಜು ಪ್ರಾರಂಭಿಸಲು ಆಯುಕ್ತೆ ಶಾಲಿನಿ ರಜನೀಶ್ ಪಟ್ಟು ಹಿಡಿದರು. ಆದರೆ ಇದಕ್ಕೆ ಜಗ್ಗದ ನಿರ್ದೇಶಕಿ ಶಿಖಾ ಅವರು ಮೂಲ ಸೌಕರ್ಯವಿರದೇ ಕಾಲೇಜು ಪ್ರಾರಂಭಿಸುವುದು ಸೂಕ್ತವಲ್ಲ ಎಂದು ಸಚಿವರ ಮಧ್ಯದಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದರು.

    https://youtu.be/Dpil431aWvM

    84 ಸಂಸ್ಥೆಗಳು ಪಿಯು ಕಾಲೇಜು ಪ್ರಾರಂಭಿಸಲು ಮನವಿ ಸಲ್ಲಿಸಿದರು. ನಿರ್ದೇಶಕರ ಒಪ್ಪಿಗೆ ಇಲ್ಲದೇ ಕಾಲೇಜು ಪ್ರಾರಂಭಿಸಲು ಆಗುವುದಿಲ್ಲ. ಇದರಲ್ಲಿ ಸರ್ಕಾರ ಮಧ್ಯಸ್ಥಿಕೆ ವಹಿಸಲು ಬರುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿಯೇ ಸರ್ಕಾರವೇ ಇಂತಹ ನಿರ್ಧಾರ ಕೈಗೊಳ್ಳುವಂತೆ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಹೇಶ್ ಹೇಳಿದರು.

  • ಶಾಲಿನಿ ರಜನೀಶ್ ವರ್ಗಾವಣೆ ಮಾಡುವಂತೆ ಸಿಎಂಗೆ ತನ್ವೀರ್ ಸೇಠ್ ಪತ್ರ

    ಶಾಲಿನಿ ರಜನೀಶ್ ವರ್ಗಾವಣೆ ಮಾಡುವಂತೆ ಸಿಎಂಗೆ ತನ್ವೀರ್ ಸೇಠ್ ಪತ್ರ

    ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನ ವರ್ಗಾವಣೆ ಮಾಡಿ ಅಂತ ಸ್ವತಃ ಶಿಕ್ಷಣ ಸಚಿವ ತನ್ವೀರ್ ಸೇಠ್, ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

    ಪೋಷಕರ ಹಾಗೂ ಮಕ್ಕಳ ಮಾಹಿತಿಯನ್ನ ಖಾಸಗಿ ಸಂಸ್ಥೆಗೆ ನೀಡುವ ಕುರಿತು ಎಂಓಯು ಮಾಡಿಕೊಂಡಿದ್ದ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸಚಿವರ ಮಾತನ್ನು ಶಾಲಿನಿ ರಜನೀಶ್ ಮೀರಿದ್ರು. ಸಚಿವರ ಮಾತು ಕೇಳದೆ ನಿರ್ಧಾರಗಳನ್ನ ತೆಗೆದುಕೊಂಡಿದ್ರು. ಇದರಿಂದ ಆಕ್ರೋಶಗೊಂಡಿರುವ ಸಚಿವ ತನ್ವೀರ್ ಸೇಠ್, ಶಾಲಿನಿ ರಜನೀಶ್ ಅವರನ್ನು ಶಿಕ್ಷಣ ಇಲಾಖೆಯಿಂದ ವರ್ಗಾವಣೆ ಮಾಡಿ ಅಂತ ಸಿಎಂಗೆ ಪತ್ರ ಬರೆದಿದ್ದಾರೆ.

    ಅಲ್ಲದೆ ಈ ಹಿಂದೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿದ್ದ ಅಜಯ್ ಸೇಠ್‍ರನ್ನ ಪ್ರಭಾರ ಕೆಲಸ ನಿರ್ವಹಿಸಲು ಆದೇಶ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರದಲ್ಲಿ ತನ್ವೀರ್ ಸೇಠ್ ಮನವಿ ಮಾಡಿದ್ದಾರೆ.

  • ಶಾಲಾ ಮಕ್ಕಳ, ಪೋಷಕರ ಮಾಹಿತಿ ಬಿಕರಿ- ಕಾನೂನು ಮೀರಿ ಶಿಕ್ಷಣ ಇಲಾಖೆ ಒಪ್ಪಂದ

    ಶಾಲಾ ಮಕ್ಕಳ, ಪೋಷಕರ ಮಾಹಿತಿ ಬಿಕರಿ- ಕಾನೂನು ಮೀರಿ ಶಿಕ್ಷಣ ಇಲಾಖೆ ಒಪ್ಪಂದ

    ಬೆಂಗಳೂರು: ಶಾಲಾ ಮಕ್ಕಳ, ಪೋಷಕರ ಮಾಹಿತಿಯನ್ನೇ ಸರ್ಕಾರ ಖಾಸಗಿ ಕಂಪನಿಗೆ ಮಾರಾಟ ಮಾಡ್ತಿದೆ ಅನ್ನೋ ಅಚ್ಚರಿಯ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    1 ಕೋಟಿ 12 ಲಕ್ಷ ಮಕ್ಕಳ, ಪೋಷಕರ ಮಾಹಿತಿಯನ್ನು ಉತ್ತರ ಭಾರತದ ಸ್ಕೂಲ್ ಜಿ ಲಿಂಕ್ ಎಂಬ ಖಾಸಗಿ ಕಂಪನಿಗೆ ನೀಡಲು ಶಿಕ್ಷಣ ಇಲಾಖೆ ತಿಳುವಳಿಕೆ ಒಪ್ಪಂದ(ಎಂಒಯು) ಮಾಡಿಕೊಂಡಿದೆ. ಇದರ ಜೊತೆಗೆ ಶಿಕ್ಷಕರು, ಉಪನ್ಯಾಸಕರ ಮಾಹಿತಿಯನ್ನೂ ಖಾಸಗಿಯವರಿಗೆ ನೀಡುತ್ತಿದೆ ಎನ್ನಲಾಗಿದೆ.

    ಕಾನೂನು ಮೀರಿ ಶಿಕ್ಷಣ ಇಲಾಖೆ ಈ ಒಪ್ಪಂದ ಮಾಡಿಕೊಂಡಿದ್ದು, ಖಾಸಗಿ ಕಂಪನಿ ಮಾಹಿತಿಗಳನ್ನ ಪಡೆದು ಆಪ್ ಮೂಲಕ ಸಾರ್ವಜನಿಕರಿಗೆ ನೀಡುತ್ತದೆ ಎಂಬುದಾಗಿ ತಿಳಿದುಬಂದಿದೆ.

    ಮಹಿಳಾ ಐಎಎಸ್ ಅಧಿಕಾರಿ ಹಾಗೂ ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಶಿಕ್ಷಣ ಸಚಿವ ತನ್ವೀರ್ ಸೇಠ್ ಹಾಗೂ ಅಧಿಕಾರಿಗಳ ಮಾತಿಗೂ ಬೆಲೆ ಕೊಡದೆ ಮಾಹಿತಿಗಳನ್ನ ಶೇರ್ ಮಾಡಲು ಎಂಒಯು ಒಪ್ಪಂದ ಮಾಡಿಕೊಂಡಿದ್ದಾರೆ. ಶಾಲಿನಿ ರಜನೀಶ್ ಜೊತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ನಾದನ್, ಸಹಾಯಕ ನಿರ್ದೇಶಕ ವೆಂಕಟೇಶ್ ಎಂಒಯುಗೆ ಸಹಿ ಮಾಡಿರುವುದಾಗಿ ಮಾಹಿತಿ ಲಭಿಸಿದೆ.


    ಎಂಒಯುದಲ್ಲಿ ರಾಜ್ಯದ 1 ಕೋಟಿ 12 ಲಕ್ಷ ಮಕ್ಕಳ ಮಾಹಿತಿ, ಮಕ್ಕಳ ಪೋಷಕರ ಫೋನ್ ನಂಬರ್, ವಿಳಾಸ, ಕುಟುಂಬದ ಮಾಹಿತಿ ಇರುತ್ತದೆ. ಒಟ್ಟಾರೆ ರಾಜ್ಯದ ಜನಸಂಖ್ಯೆಯ ಅರ್ಧದಷ್ಟು ಜನರ ಮಾಹಿತಿಗಳು ಇಲ್ಲಿರುತ್ತದೆ. ಗೌಪ್ಯ ಮಾಹಿತಿಯನ್ನ ಖಾಸಗಿಯವರಿಗೆ ನೀಡಬಾರದು ಅನ್ನೋ ನಿಯಮವಿದೆ. ಆದ್ರೂ ಪೋಷಕರ, ಮಕ್ಕಳ, ಶಿಕ್ಷಕರ ಮಾಹಿತಿ ಖಾಸಗಿ ಅವರಿಗೆ ನೀಡೋದು ಅಪರಾಧವಾಗಿದೆ. ಯಾರ ಅನುಮತಿ ಇಲ್ಲದೆ ಶಾಲಿನಿ ರಜನೀಶ್ ಅವರು ಎಂಒಯು ಮಾಡಿಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಇದೀಗ ಎದ್ದಿದೆ.

    ಕ್ಯಾನ್ಸಲ್ ಮಾಡ್ತೀವಿ: ಈ ಸಂಬಂಧ ಶಿಕ್ಷಣ ಸಚಿವ ತನ್ವೀರ್ ಸೇಠ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಒಯು ಅಂಶಗಳು ನನಗೆ ತೋರಿಸಿದ್ದೇ ಬೇರೆ ಎಂಒಯು ಆಗಿರೋದು ಬೇರೆ. ನನ್ನ ಧಿಕ್ಕನ್ನೆ ಇಲಾಖೆ ಅಧಿಕಾರಿ ತಪ್ಪಿಸಿದ್ದಾರೆ. ಎಂಒಯು ಬದಲಾವಣೆ ಬಗ್ಗೆ ನನಗೆ ಮಾಹಿತಿಯೇ ಇಲ್ಲ. ಖಾಸಗಿ ಸಂಸ್ಥೆಗೆ ಮಾಹಿತಿ ನೀಡೋದು ಅಪರಾಧ. ಈ ಎಂಒಯುನಲ್ಲಿ ಸರ್ಕಾರದ ವಿರೋಧಿ ಅಂಶಗಳೇ ಹೆಚ್ಚಾಗಿವೆ. ಅಧಿಕಾರಿಗಳು ನಾವು ಮಾಡಿದ್ದೇ ಸರಿ ಅಂತ ಅಂದುಕೊಂಡಿದ್ದಾರೆ. ಪೋಷಕರ, ಮಕ್ಕಳ, ಶಿಕ್ಷಕರ ಮಾಹಿತಿ ನೀಡಬೇಕು ಅನ್ನೋ ಎಂಒಯು ಆಗಿರೋದು ನಿಜ. ಇದು ನನ್ನ ಗಮನಕ್ಕೆ ಬಾರದೆ ಆಗಿದೆ. ಎಂಒಯು ಅನ್ನು ಕ್ಯಾನ್ಸಲ್ ಮಾಡುತ್ತೇವೆ. ಅಧಿಕಾರಿಯ ವರ್ತನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ. ಪೋಷಕರಿಗೆ, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಅಂತ ಹೇಳಿದ್ದಾರೆ.