Tag: ಶಾಲಿನಿ ಪಾಂಡೆ

  • ರೆಡ್ ಡ್ರೆಸ್‌ನಲ್ಲಿ ಮಾದಕ ಪೋಸ್ ಕೊಟ್ಟ ‘ಅರ್ಜುನ್ ರೆಡ್ಡಿ’ ನಟಿ

    ರೆಡ್ ಡ್ರೆಸ್‌ನಲ್ಲಿ ಮಾದಕ ಪೋಸ್ ಕೊಟ್ಟ ‘ಅರ್ಜುನ್ ರೆಡ್ಡಿ’ ನಟಿ

    ಸೌತ್ ನಟಿ ಶಾಲಿನಿ ಪಾಂಡೆ (Shalini Pandey) ಅವರು ಸದಾ ಒಂದಲ್ಲಾ ಒಂದು ಬೋಲ್ಡ್ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಈಗ ರೆಡ್ ಕಲರ್ ಉಡುಗೆಯಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಶಾಲಿನಿ ಮಾದಕ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಹಾಟ್ ಹಾಟ್ ಆಗಿ ‘ಅರ್ಜುನ್ ರೆಡ್ಡಿ’ (Arjun Reddy) ನಟಿ ಫೋಟೋಶೂಟ್ ಮಾಡಿಸಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನಟಿಯ ಫಿಟ್‌ನೆಸ್ ನೋಡಿ ಪಡ್ಡೆಹುಡುಗರು ಬೋಲ್ಡ್ ಆಗಿದ್ದಾರೆ. ಇದನ್ನೂ ಓದಿ:‘ಟೈಗರ್ 3’ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್

    ವಿಜಯ್ ದೇವರಕೊಂಡ ನಟನೆಯ ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಶಾಲಿನಿ ಪಾಂಡೆ ಗಮನ ಸೆಳೆದಿದ್ದರು. ವಿಜಯ್-ಶಾಲಿನಿ ಜೋಡಿ ಅಪಾರ ಅಭಿಮಾನಿಗಳನ್ನು ಮೋಡಿ ಮಾಡಿತ್ತು.

    ಸೌತ್ ಸಿನಿಮಾಗಳ ಜೊತೆ ಬಾಲಿವುಡ್ ಸಿನಿಮಾಗಳಲ್ಲೂ ಶಾಲಿನಿ ಪಾಂಡೆ ನಟಿಸಿದ್ದಾರೆ. ಹೊಸ ಹೊಸ ಬಗೆಯ ಪಾತ್ರಗಳನ್ನ ಮಾಡುವ ಮೂಲಕ ನಟಿ ಸೈ ಎನಿಸಿಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಾಟ್‌ ಫೋಟೋ ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ `ಅರ್ಜುನ್ ರೆಡ್ಡಿ’ ಚೆಲುವೆ

    ಹಾಟ್‌ ಫೋಟೋ ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ `ಅರ್ಜುನ್ ರೆಡ್ಡಿ’ ಚೆಲುವೆ

    ಟಾಲಿವುಡ್‌ನ `ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ಪರಿಚಿತರಾದ ನಟಿ ಶಾಲಿನಿ ಪಾಂಡೆ, ಬಾಲಿವುಡ್‌ಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಇತ್ತೀಚೆಗೆ ರಣ್‌ವೀರ್ ಸಿಂಗ್ ಜೊತೆ ನಟಿಸಿದ ಸಿನಿಮಾ ನೆಲಕಚ್ಚಿದ ಬೆನ್ನಲ್ಲೇ ಮತ್ತೆ ಬೋಲ್ಡ್ ಲುಕ್ಕಿನಲ್ಲಿ ಶಾಲಿನಿ ಪಾಂಡೆ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಭಾರೀ ವೈರಲ್ ಆಗಿದೆ.

    ವಿಜಯ್ ದೇವರಕೊಂಡಗೆ ನಾಯಕಿಯಾಗುವ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ನಟಿ ಶಾಲಿನಿ ಪಾಂಡೆ, ತಮ್ಮ ಮೊದಲ ಚಿತ್ರದಲ್ಲೇ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡು, ಎಲ್ಲರೂ ಹುಬ್ಬೇರುವಂತೆ ಮಾಡಿದ್ರು. ನಂತರ ಸಾಕಷ್ಟು ತೆಲುಗು. ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಗಮನ ಸೆಳೆದ್ದರು. ಇತ್ತೀಚೆಗೆಷ್ಟೇ ರಣ್‌ವೀರ್ ಸಿಂಗ್‌ಗೆ ನಾಯಕಿಯಾಗಿ ನಟಿಸಿದ್ದ `ಜಯೇಶ್ ಭಾಯ್ ಜೋರ್ದಾರ್’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯ ಸೋಲು ಕಂಡಿತ್ತು. ಆದರೆ ಸೋಲಿಗೆ ಬೇಸರಿಸದೆ ಬೋಲ್ಡ್ ಫೋಟೋಶೂಟ್ ಮೂಲಕ ಬ್ಯೂಟಿ ಕ್ವೀನ್ ಶಾಲಿನಿ ಪಾಂಡೆ ಕಮ್ ಬ್ಯಾಕ್ ಆಗಿದ್ದಾರೆ. ಇದನ್ನೂ ಓದಿ: ಕನ್ನಡ ಚಿತ್ರರಂಗ- ನಟಿಯರ ಬಗ್ಗೆ ತುಚ್ಚವಾಗಿ ಮಾತನಾಡಿದ ತೆಲುಗು ನಿರ್ದೇಶಕ

    ಬಾಲಿವುಡ್‌ನ `ಜಯೇಶ್ ಭಾಯ್ ಜೋರ್ದಾರ್’ ಚಿತ್ರದ ಸೋಲಿನ ನಂತರ `ಮಹಾರಾಜ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗ ಹಾಟ್ ಹಾಟ್ ಲುಕ್ಕಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟು ಸೋಷಿಯಲ್ ಮೀಡಿಯಲ್ಲಿ ವೈರಲ್ ಆಗಿದ್ದಾರೆ.

  • ಸಮಂತಾ ನಟನೆಯ `ಹೂ ಅಂತೀಯಾ ಮಾವ’ ಹಾಡಿಗೆ ರಣವೀರ್ ಸಿಂಗ್ ಫಿದಾ

    ಸಮಂತಾ ನಟನೆಯ `ಹೂ ಅಂತೀಯಾ ಮಾವ’ ಹಾಡಿಗೆ ರಣವೀರ್ ಸಿಂಗ್ ಫಿದಾ

    ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಸದ್ಯ `ಜಯೇಶ್‌ಭಾಯ್ ಜೋರ್ದಾರ್’ ಪ್ರಮೋಷನ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ವೇಳೆ ನಟ ರಣ್‌ವೀರ್‌ ತಮ್ಮ ಫೇವರೇಟ್ ಸಾಂಗ್ ಬಗ್ಗೆ ಮಾತಾನಾಡಿದ್ದಾರೆ. ಸಮಂತಾ ನಟನೆಯ `ಪುಷ್ಪ’ ಸಾಂಗ್ ಕುರಿತು ಮಾತನಾಡಿದ್ದಾರೆ.

    ʻಪುಷ್ಪʼ ಚಿತ್ರದಲ್ಲಿನ ಸಮಂತಾ ನಟನೆಯ ಹೂ ಅಂತೀಯಾ ಮಾವ ಸಾಂಗ್ ಅದೆಷ್ಟು ಕ್ರೇಜ್ ಹುಟ್ಟು ಹಾಕಿತ್ತು ಅಂದ್ರೆ ಕರ್ನಾಟಕ ಮಾತ್ರವಲ್ಲ. ದೇಶ ವಿದೇಶದ ಸ್ಟಾರ್ಸ್‌ಗೆ ಈ ಸಾಂಗ್ ಹುಚ್ಚು ಹಿಡಿಸಿತ್ತು. ಇದೀಗ ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ಕೂಡ ಈ ಹಾಡಿನ ದೊಡ್ಡ ಫ್ಯಾನ್, ಈ ಹಾಡಿನ ಕ್ರೇಜ್ ಎಷ್ಟಿತ್ತು ಎಂಬುದರ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    ನನ್ನ ಫೇವರೇಟ್ ಹಾಡು `ಊ ಅಂಟಾವ ಮಾಮ’ ಈ ಸಾಂಗ್ ಕೇಳಿದರೆ ನಾನು ಕ್ರೇಜ್‌ಗೆ ಒಳಗಾಗುತ್ತೇನೆ. ಈ ಹಾಡು ನನಗೆ ಅರ್ಥವಾಗುವುದಿಲ್ಲ. ಅದರೆ ಆ ಮ್ಯೂಸಿಕ್ ನನಗೆ ಹತ್ತಿರವಾಗಿದೆ ಎಂದು ರಣ್‌ವೀರ್ ಸಿಂಗ್ ಹೇಳಿಕೊಂಡಿದ್ದಾರೆ. ಸಮಂತಾ ನಟನೆಯ ಈ ಸಾಂಗ್ ರಣವೀರ್ ಅದೆಷ್ಟರ ಮಟ್ಟಿಗೆ ಕಾಡಿತ್ತು ಅಂತಾ ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ

    ರಣವೀರ್ ಸಿಂಗ್ ಮತ್ತು ಶಾಲಿನಿ ಪಾಂಡೆ ನಟನೆಯ `ಜಯೇಶ್‌ಭಾಯ್ ಜೋರ್ದಾರ್’ ಇದೇ ಮೇ 13ಕ್ಕೆ ತೆರೆಗೆ ಅಬ್ಬರಿಸಲಿದೆ. ರಣವೀರ್ ಸಿಂಗ್ ಬಹುನಿರೀಕ್ಷಿತ ಚಿತ್ರ ನೋಡೋದಕ್ಕೆ ಅಭಿಮಾನಿಗಳು ಕಾಯ್ತಿದ್ದಾರೆ.