ಚಂಡೀಗಢ: ಶಾಲಾ ಬಸ್ ಪಲ್ಟಿಯಾಗಿ 6 ಮಕ್ಕಳು (School Childrens) ದಾರುಣ ಸಾವಿಗೀಡಾಗಿದ್ದು, 20ಕ್ಕೂ ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ (Haryana) ನರ್ನಾಲ್‌ನಲ್ಲಿ ಇಂದು ಬೆಳಗ್ಗೆ (ಏ.11) ನಡೆದಿದೆ.
ಪ್ರಾಥಮಿಕ ತನಿಖೆಯ ನಂತರ ಚಾಲಕನ (Bus Driver) ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವುದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಅಲ್ಲದೇ ಚಾಲಕ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಾನೆ ಎಂದು ಶಂಕಿಸಿದ್ದಾರೆ.
ಕಲಬುರಗಿ: ಇಲ್ಲಿನ ಶಾಲೆಯೊಂದರ ಮುಖ್ಯಶಿಕ್ಷಕಿ ವಿದ್ಯಾರ್ಥಿಗಳಿಂದ (School Students) ಮನೆಗೆಲಸ ಹಾಗೂ ಶೌಚಾಲಯ ಶುಚಿಗೊಳಿಸುತ್ತಿದ್ದ ಆರೋಪ ಕೇಳಿಬಂದಿದ್ದು, ಶಾಲಾ ಮುಖ್ಯಶಿಕ್ಷಕಿ ವಿರುದ್ಧ FIR ದಾಖಲಾಗಿದೆ.
ಏನಿದು ಘಟನೆ?
ಕಲಬುರಗಿ ಹೊರವಲಯದ ಸೋನಿಯಾ ಗಾಂಧಿ ಕ್ವಾಟರ್ಸ್ ಬಳಿಯಿರುವ ಶಾಲೆಯಲ್ಲಿ ಮುಖ್ಯಶಿಕ್ಷಕಿ ಶಾಲಾ ಮಕ್ಕಳಿಂದಲೇ ಶೌಚಾಲಯ ಶುಚಿತ್ವ, ಕಸಗುಡಿಸುವುದು ಹಾಗೂ ತನ್ನ ಮನೆಗೆಲಸ ಮಾಡಿಸುತ್ತಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿದ್ಯಾರ್ಥಿಯೊಬ್ಬ ಗಂಭೀರ ಆರೋಪ ಮಾಡಿದ್ದ. ವಿದ್ಯಾರ್ಥಿ ಪೋಷಕರೊಬ್ಬರು ಈ ಬಗ್ಗೆ ಪ್ರಶ್ನೆ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಕ್ರಮ ಕಾಮಗಾರಿ – ಲೋಕಾಯುಕ್ತಕ್ಕೆ ದೂರು ನೀಡಿದ ಗುತ್ತಿಗೆದಾರನಿಗೆ ಕೊಲೆ ಬೆದರಿಕೆ!
ವಿದ್ಯಾರ್ಥಿ ಪೋಷಕರಾದ ಮೊಹಮ್ಮದ್ ಜಮೀರ್, ಶಾಲೆಯ ಮುಖ್ಯಶಿಕ್ಷಕರು ಶಾಲೆ ಮತ್ತು ಮನೆ ಕೆಲಸಗಳಿಗೆ ನನ್ನ ಮಗನನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಶಿಕ್ಷಕಿ ಜೋಹಾರ ಜಬೀನ್ ಅವರ ಮನೆಯಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ನನ್ನ ಮಗನನ್ನು ಕೆಲಸಕ್ಕೆ ಬಳಸಿಕೊಂಡಿದ್ದರು. ಈ ವಿಷಯ ತಿಳಿದಾಗ ನಾನೇ ಖುದ್ದಾಗಿ ಶಾಲೆಗೆ ಹೋಗಿ ಮತ್ತೆ ರೀತಿ ಮಾಡದಂತೆ ಮನವಿ ಮಾಡಿದ್ದೆ. ಅದಾದರೂ ಹೆದರಿಸಿ, ಬೆದರಿಸಿ ನನ್ನ ಮಗನಿಂದ ಕೆಲಸ ಮಾಡಿಸಿಕೊಂಡಿದ್ದಾರೆ. ನನ್ನ ಮಗ ಶಾಲೆ ಮುಗಿಸಿ ಪ್ರತಿದಿನ ಮನೆಗೆ ತಡವಾಗಿ ಬರುತ್ತಿದ್ದ, ಇದರಿಂದ ಅನುಮಾನಗೊಂಡು ಮುಖ್ಯಶಿಕ್ಷಕಿ ಮನೆಗೆ ಹೋಗಿ ನೋಡಿದಾಗ ಅಲ್ಲಿ ಮಗ ಮನೆಗೆಲಸ ಮಾಡುತ್ತಿದ್ದದ್ದು ಕಂಡುಬಂದಿತು. ತಕ್ಷಣವೇ ವಿದ್ಯಾರ್ಥಿ ತಂದೆ ಜಮೀರ್ 112 ಪೊಲೀಸರಿಗೆ ಕರೆ ದೂರು ನೀಡಿದೆ.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆ ಕಾಣ್ಣುತ್ತಿದ್ದು, ಜಿಲ್ಲೆಯ ಜನರು ಅತಂಕಕ್ಕೆ ಒಳಗಾಗಿದ್ದಾರೆ.
ನಗರದ ಶಾಲೆಯೊಂದರ 8 ಮತ್ತು 9ನೇ ತರಗತಿಯ ಒಟ್ಟು 9 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿತ ಮಕ್ಕಳ ಪ್ರಾಥಮಿಕ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆ ಮಾಡಿ ಶಾಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆ?
ಮೊದಲು ಕೊಡಗು ವಿದ್ಯಾಲಯ ಶಾಲಾ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಬಳಿಕ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕಿತರಿಗೆ ಕೊರೊನಾ ಟೆಸ್ಟ್ ಮಾಡಿಸಿದಾಗ 9 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಪಾಸಿಟಿವ್ ಬಂದ ಮಕ್ಕಳಲ್ಲಿ ಯಾವುದೇ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಸೋಂಕಿತರೆಲ್ಲರೂ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳು. ಮಕ್ಕಳಿಗೆ ಅವರ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ಮಕ್ಕಳ ಪ್ರಾಥಮಿಕ ಸಂಪರ್ಕಿತರಿಗೂ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ ಎಂದು ಕೊಡಗು ಡಿಎಚ್‌ಒ ಡಾ. ವೆಂಕಟೇಶ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೊರೊನಾಗೆ ಮೃತಪಟ್ಟ BPL ಕುಟುಂಬಕ್ಕೆ 1 ಲಕ್ಷ ಪರಿಹಾರ – ಸರ್ಕಾರದಿಂದ ಆದೇಶ ಪರಿಷ್ಕರಣೆ
ಕಾರವಾರ: ಜಿಲ್ಲೆಯ ಹೊನ್ನಾವರ ತಾಲೂಕಿನ ಮಹಿಮೆ ಗ್ರಾಮದಲ್ಲಿ ಕಳೆದ 50 ದಶಕದಿಂದ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಅದು ಅಲ್ಲದೇ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಹಳ್ಳದ ಕಂಟಕ ಇರುವುದರಿಂದ ಶಾಲೆಯನ್ನೇ ಬಿಡುತ್ತಿದ್ದಾರೆ.
ಬಹುತೇಕ ಅರಣ್ಯವನ್ನು ಹೊಂದಿರುವ ಈ ಗ್ರಾಮ ಹೊನ್ನಾವರ ನಗರದಿಂದ 48 ಕಿಲೋಮೀಟರ್ ದೂರದಲ್ಲಿರುವ ಉಪ್ಪೋಣಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಬರುತ್ತದೆ. ಈ ಗ್ರಾಮದಲ್ಲಿ 1,200ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಈ ಕ್ಷೇತ್ರವನ್ನು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಪ್ರತಿನಿಧಿಸುತ್ತಾರೆ. ಇದನ್ನೂ ಓದಿ: ಸುರಕ್ಷಿತ, ಸುಂದರ, ಹಸಿರುಮಯ ಬೆಂಗಳೂರು ನಗರ ಮಾಡುವುದು ನಮ್ಮ ಗುರಿ: ಸಿಎಂ
ಮಹಿಮೆ ಗ್ರಾಮದ ಹಳ್ಳದಲ್ಲಿ ಜೀವ ಕೈಯಲ್ಲಿ ಹಿಡಿದು ಸಾಗುವ ವಿದ್ಯಾರ್ಥಿಗಳು ಶಾಲೆಗೆ ಹೋಗಲಾಗದೇ ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸುತ್ತಿದ್ದಾರೆ. ಈ ಗ್ರಾಮದಲ್ಲಿ 42 ವಿದ್ಯಾರ್ಥಿಗಳು ಹೊನ್ನಾವರದ ವಿವಿಧ ಶಾಲೆ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಇವರೆಲ್ಲರೂ ಪ್ರತಿ ದಿನ ಶಾಲೆ, ಕಾಲೇಜಿಗೆ ತೆರಳಲು ಮುಂಜಾನೆ 5 ಘಂಟೆಗೆ ಹೊರಡುತ್ತಾರೆ. ಮಹಿಮೆ ಗ್ರಾಮಕ್ಕೆ ರಸ್ತೆ ಹಾಗೂ ಸೇತುವೆ ಇಲ್ಲದ ಕಾರಣ ಪ್ರತಿ ವಿದ್ಯಾರ್ಥಿಗಳು 8 ಕಿಲೋಮೀಟರ್ ನೆಡೆದುಕೊಂಡು ಬರಬೇಕು. ದಾರಿಯ ಮಧ್ಯದಲ್ಲಿ ಹಳ್ಳ ಹರಿಯುವುದರಿಂದ ಈ ಹಳ್ಳ ದಾಟಬೇಕಾದರೇ ಒಬ್ಬರನ್ನೊಬ್ಬರು ಕೈ ಹಿಡಿದುಕೊಂಡು ಸಾಗಬೇಕು.
ಮಳೆಗಾಲದಲ್ಲಿ ನೆರೆ ಬರುವುದರಿಂದ ಹಳ್ಳ ದಾಟುವುದು ಕಷ್ಟ ಸಾಧ್ಯ. ಹೀಗಾಗಿ ಹೆಚ್ಚು ನೀರಿದ್ದ ದಿನ ಶಾಲೆ, ಕಾಲೇಜುಗಳಿಗೆ ತೆರಳಲಾಗುವುದಿಲ್ಲ. ಇನ್ನು ಅಲ್ಪ ನೀರು ಇಳಿದರೆ ಊರಿನ ಜನ ದಡದ ಎರಡೂ ಕಡೆ ಹಗ್ಗ ಹಾಕಿ ಮಕ್ಕಳನ್ನು ದಾಟಿಸುತ್ತಾರೆ. ಅಷ್ಟರಲ್ಲಿ ಶಾಲೆ, ಕಾಲೇಜಿನ ಸಮಯ ಪ್ರಾರಂಭವಾಗಿರುತ್ತದೆ. ಇನ್ನು ಶಾಲೆ, ಕಾಲೇಜು ಮುಗಿಸಿ ಮರಳಿ ಮನೆಗೆ ತೆರಳುವುದು ರಾತ್ರಿ 7 ಗಂಟೆ ದಾಟುತ್ತೆ. ಇದನ್ನೂ ಓದಿ: ಕೇರಳದಿಂದ ಪ್ರಯಾಣಿಕರಿಗೆ RTPCR ವರದಿ ಕಡ್ಡಾಯ – ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಕೆ
ಮಳೆಗಾಲದಿಂದ 6 ತಿಂಗಳು ಈ ಗ್ರಾಮಕ್ಕೆ ಹೊರ ಊರಿನ ಸಂಪರ್ಕ ಸಹ ಕಡಿತವಾಗುತ್ತದೆ. ಹೀಗಾಗಿ ಆರು ತಿಂಗಳು ಕಾಳು, ಕಡಿ ಸಂಗ್ರಹಿಸಿಕೊಳ್ಳಬೇಕು. ಈ ನಡುವೆ ರೋಗಿಗಳು, ಗರ್ಭಿಣಿಯರು ಇದ್ದರೆ ಅವರನ್ನು ನೆಂಟರ ಮನೆಯಲ್ಲಿ ಇರಿಸಿ ಕಾಪಾಡಬೇಕು. ಎಷ್ಟೋ ಬಾರಿ ಅಂಬುಲೆನ್ಸ್ ಸಹ ಈ ಭಾಗದಲ್ಲಿ ಬರಲಾಗದೇ ಜೋಳಿಗೆಯಲ್ಲಿ ರೋಗಿಗಳನ್ನು ಸಾಗಿಸಿದ ಉದಾಹರಣೆಗಳಿವೆ.
ಶಾಲೆ ಬಿಟ್ಟ ಆರು ವಿದ್ಯಾರ್ಥಿಗಳು!
ಪ್ರತಿ ದಿನ ಹಳ್ಳ ದಾಟಿ ಎಂಟು ಕಿಲೋಮೀಟರ್ ನಡೆಯುವುದು ವಿದ್ಯಾರ್ಥಿಗಳಿಗೆ ಕಷ್ಟಸಾಧ್ಯ. ಇನ್ನು ಈ ಭಾಗದಿಂದ ಬಾಲಕಿಯರೇ ಹೆಚ್ಚು ಶಾಲೆ, ಕಾಲೇಜಿಗೆ ತೆರಳುವುದರಿಂದ ಸಮಸ್ಯೆ ಹೆಚ್ಚಾಗಿದ್ದು, ಹಳ್ಳ ದಾಟಲು ಹೆದರಿ ಆರು ವಿದ್ಯಾರ್ಥಿಗಳು ಏಳನೇ ತರಗತಿ ನಂತರ ವಿದ್ಯಾಭ್ಯಾಸವನ್ನು ನಿಲ್ಲಿಸಿ ಮನೆಯಲ್ಲಿದ್ದಾರೆ.
ಶಿಕ್ಷಕರ ಕೊರತೆ!
ಮಹಿಮೆ ಗ್ರಾಮ ಜಿಲ್ಲೆಯಲ್ಲೇ ಅತೀ ದೊಡ್ಡ ಗ್ರಾಮಪಂಚಾಯ್ತಿಯನ್ನು ಹೊಂದಿದೆ. ಹೀಗಾಗಿ ಈ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯು ಸಹ ಇದೆ. ಆದರೇ ಇರುವ ಮಕ್ಕಳ ಸಂಖ್ಯೆಗೆ ಇಬ್ಬರು ಮಾತ್ರ ಶಿಕ್ಷಕರಿದ್ದಾರೆ. 86 ಕ್ಕೂ ಹೆಚ್ಚು ಜನ ಮಕ್ಕಳಿದ್ದರೂ ಇಲ್ಲಿಗೆ ಹೊಸದಾಗಿ ವರ್ಗಾವಣೆ ಗೊಳ್ಳುವ ಶಿಕ್ಷಕರು ಇಲ್ಲಿಗೆ ಬರಲು ನಿರಾಕರಿಸುತ್ತಾರೆ. ಒಂದು ವೇಳೆ ವರ್ಗವಾಗಿ ಬಂದರೂ ರಾಜಕೀಯ ಒತ್ತಡ ಬಳಸಿ ಬೇರೆಡೆ ವರ್ಗ ಮಾಡಿಸಿಕೊಂಡು ಹೋಗುತ್ತಾರೆ. ಹೀಗಾಗಿ ಇಲ್ಲಿ ಶಿಕ್ಷಕರ ಕೊರತೆ ಹಲವು ವರ್ಷಗಳಿಂದ ಹಾಗೆಯೇ ಇದೆ. ಇಬ್ಬರು ಶಿಕ್ಷಕರು ಮಾತ್ರ ಇರುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಹ ಕಷ್ಟಸಾಧ್ಯವಾಗಿದೆ.
ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಸರ್ಕಾರ!
ಇಲ್ಲಿನ ವಿದ್ಯಾರ್ಥಿಗಳ ಸಮಸ್ಯೆ ಕುರಿತು ಕಳೆದ ವರ್ಷ ಪಬ್ಲಿಕ್ ಟಿ.ವಿ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಅಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕುದ್ದು ಗ್ರಾಮಕ್ಕೆ ಆಗಮಿಸಿ ಇಲ್ಲಿನ ಸಮಸ್ಯೆ ಯನ್ನು ಆಲಿಸಿದ್ದರು. ವಿಧಾನ ಸಭೆಯಲ್ಲಿ ಕೂಡ ಪ್ರತಿಧ್ವನಿಸಿ ವಾಯುವ್ಯ ಸಾರಿಗೆಯಿಂದ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಿದ್ದರು. ಆದರೆ ಈ ಮಳೆಗಾಲದಲ್ಲಿ ಹೆಚ್ಚು ಮಳೆಯಾದ್ದರಿಂದ ಬಸ್ ಸಂಚಾರ ಸಹ ನಿಲ್ಲಿಸಲಾಗಿದೆ. ಇದನ್ನೂ ಓದಿ: ಡ್ರಗ್ಸ್, ಸಿಗರೇಟ್, ಸೆಕ್ಸ್‌ಗೆ ಮಗನಿಗೆ ಓಕೆ ಅಂದಿದ್ದೇನೆ: ಶಾರೂಖ್ ವೀಡಿಯೋ ವೈರಲ್
ಮನವಿ ಸಲ್ಲಿಸಿ ಸುಸ್ತಾದ ಗ್ರಾಮಸ್ಥರು:
ಹಿಂದಿನ ಸಿಎಂ ಜಗದೀಶ್ ಶೆಟ್ಟರ್ ರಿಂದ ಹಿಡಿದು ಇಂದಿನ ಸಿಎಂ ಬೊಮ್ಮಾಯಿ ಅವರಿಗೆ ಸಹ ತಮ್ಮೂರಿನ ಸಮಸ್ಯೆ ಕುರಿತು ಇಲ್ಲಿನ ಜನ ಮನವಿ ಸಲ್ಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಶಾಸಕ ಸುನಿಲ್ ನಾಯ್ಕ್ ಅವರಿಗೆ ಮನವಿ ಮಾಡಿ ಗ್ರಾಮಸ್ಥರು ಸುಸ್ತಾಗಿದ್ದಾರೆ.
ರಾಯಚೂರು: ಪಬ್ಲಿಕ್ ಟಿವಿ, ರೋಟರಿ ಕ್ಲಬ್ ವತಿಯಿಂದ ನಡೆಯುತ್ತಿರುವ ಜ್ಞಾನದೀವಿಗೆ ಅಭಿಯಾನದ ಅಡಿ ಜಿಲ್ಲೆಯ ಸಿಂಧನೂರು ತಾಲೂಕಿನ ಹೆಡಗಿನಾಳ ಗ್ರಾಮದಲ್ಲಿ ಇಂದು ಟ್ಯಾಬ್‍ಗಳನ್ನು ವಿತರಿಸಲಾಯಿತು. ಹೆಡಗಿನಾಳ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 14 ಜನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ 7 ಉಚಿತ ಟ್ಯಾಬ್‍ಗಳನ್ನು ವಿತರಿಸಲಾಯಿತು.
ಶಾಲೆಯ ಮೊದಲ ಬ್ಯಾಚ್‍ನ ವಿದ್ಯಾರ್ಥಿಗಳು ಟ್ಯಾಬ್‍ಗಳನ್ನು ಪಡೆದಿದ್ದಾರೆ. ಆದರೆ ಶಾಲೆಗೆ ಇನ್ನೂ ಮೂಲಭೂತ ಸೌಲಭ್ಯಗಳಾಗಲಿ ಪೂರ್ಣ ಪ್ರಮಾಣದ ಶಿಕ್ಷಕರಾಗಲಿ ನೇಮಕವಾಗಿಲ್ಲ. ಪ್ರೌಢಶಾಲೆಗೆ ಕೇವಲ ಮೂರು ಜನ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಹೀಗಾಗಿ ಟ್ಯಾಬ್‍ಗಳನ್ನು ವಿತರಿಸಿರುವುದಕ್ಕೆ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.
ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಆನ್‍ಲೈನ್ ತರಗತಿಗಳಲ್ಲಿ ಏನನ್ನೂ ಕಲಿಯಲು ಸಾಧ್ಯವಾಗಿಲ್ಲ. ತಾಲೂಕಿನಲ್ಲೇ ಹಿಂದುಳಿದ ಗ್ರಾಮವಾಗಿರುವುದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಮೇಲೂ ಪ್ರಭಾವ ಬೀರಿದ್ದು ಲಾಕ್‍ಡೌನ್ ವೇಳೆ ಕೆಲ ವಿದ್ಯಾರ್ಥಿಗಳು ಕೂಲಿ ಕೆಲಸಕ್ಕೆ ಸೇರಿದ್ದು, ಮಕ್ಕಳನ್ನು ಶಾಲೆಗೆ ಕರೆತರುವುದು ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಹಾಗೂ ರೋಟರಿ ಇಂಟರ್ ನ್ಯಾಷನಲ್ ಉಚಿತವಾಗಿ ಟ್ಯಾಬ್‍ಗಳನ್ನ ವಿತರಿಸಿರುವುದು ಮಕ್ಕಳ ಶೈಕ್ಷಣಿಕ ಉನ್ನತಿಗೆ ಸಹಕಾರಿಯಾಗಲಿದೆ ಎಂದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಖುಷಿ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಟ್ಯಾಬ್ ದಾನಿಗಳಾದ ಹರೀಶ್ ಪತ್ತಾರ್, ವಿರೇಶ್ ಒಳಬಳ್ಳಾರಿ, ಮಂಜುನಾಥ್ ಪಾಟೀಲ್, ಶಾಲಾ ಮುಖ್ಯೋಪಾಧ್ಯಾಯ ರವಿ ಬಿ.ಆರ್. ನಟರಾಜ್ ಕುರಕಿ, ಅನುಸೂಯ ಹವಳೆ, ನಾಗಪ್ಪ, ಮಹಾಂತೇಶ್ ಹಾಗೂ ಗ್ರಾಮದ ಮುಖಂಡರು ಸೇರಿದಂತೆ ಇತರರು ಭಾಗವಹಿದ್ದರು.
ರಾಯಚೂರು: ಸ್ವಾಮೀಜಿಗಳಿಗೆ, ಹಿರಿಯರಿಗೆ ನಾನಾ ವಸ್ತುಗಳಿಂದ ತುಲಾಭಾರ ಮಾಡುವುದನ್ನು ನೋಡಿದ್ದೇವೆ. ಆದರೆ ರಾಯಚೂರಿನ ಕಾಡ್ಲೂರಿನಲ್ಲಿ ಮಂತ್ರಾಲಯ ಪೀಠಾಧಿಪತಿ ಶ್ರೀಸುಭುದೇಂದ್ರ ತೀರ್ಥ ಸ್ವಾಮಿಗೆ ಶಾಲಾ ಪಠ್ಯ ಸಾಮಗ್ರಿಗಳಿಂದ ತುಲಾಭಾರ ಮಾಡಲಾಯಿತು.
ತುಲಾಭಾರ ಬಳಿಕ ಪಠ್ಯ ಸಾಮಗ್ರಿಗಳಾದ ಪುಸ್ತಕ, ಜಾಮೆಟ್ರಿ ಬಾಕ್ಸ್, ಡಿಕ್ಷನರಿ, ಪೆನ್, ಪೆನ್ಸಿಲ್, ಎಕ್ಸಾಂ ಪ್ಯಾಡ್ ಅನ್ನು ಕಾಡ್ಲೂರು ಗ್ರಾಮದ ಬಡ ವಿದ್ಯಾರ್ಥಿಗಳಿಗೆ ನೀಡಲಾಯಿತು. ಕಾಡ್ಲೂರು ಗ್ರಾಮದ ವನವಾಸಿ ಶ್ರೀರಾಮದೇವರು ಹಾಗೂ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನದ ನೂತನ ರಾಘವೇಂದ್ರ ಮಂಗಳ ಸಭಾಂಗಣ ಉದ್ಘಾಟನಾ ಸಮಾರಂಭ ವೇಳೆ ಶ್ರೀಗಳ ತುಲಾಭಾರ ಮಾಡಲಾಯಿತು. ಕಾಡ್ಲೂರು ಸಂಸ್ಥಾನದ ವಂಶಿಕ ಯುವಕರು ಈ ವಿಶೇಷ ಪಠ್ಯ ಸಾಮಗ್ರಿ ತುಲಾಭಾರ ನೆರವೇರಿಸಿದರು. ಈ ವೇಳೆ ಪದ್ಮಶ್ರೀ ಪುರಸ್ಕೃತ ಕನ್ನಡ ಕಬೀರ ಇಬ್ರಾಹಿಂ ಸುತಾರ್ ಅವರಿಗೆ ಸನ್ಮಾನ ಮಾಡಲಾಯಿತು.
ತುಲಾಭಾರ ಮೂಲಕ ಬಡ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳನ್ನು ನೀಡುವ ಕಾರ್ಯ ಮಾಡಿದ್ದು ಶ್ಲಾಘನೀಯ, ಪ್ರತಿಯೊಬ್ಬ ಯುವಕರು ತಮ್ಮ ಸಂಪಾದನೆಯ ಒಂದಿಷ್ಟು ಭಾಗವನ್ನು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುವುದು ಒಳ್ಳೆಯ ಕಾರ್ಯ ಎಂದು ಇಬ್ರಾಹಿಂ ಸುತಾರ್ ಹೇಳಿದರು. ರಾಘವೇಂದ್ರ ಮಂಗಳ ಸಭಾಂಗಣವನ್ನು ಉದ್ಘಾಟಿಸಿದ ಮಂತ್ರಾಲಯ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥ ಸ್ವಾಮಿ ವಿಶೇಷ ತುಲಾಭಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಡ್ಲೂರಿನ ರಂಗರಾವ್ ದೇಸಾಯಿ, ಜಯಕುಮಾರ್ ದೇಸಾಯಿ ನೇತೃತ್ವದಲ್ಲಿ ಗ್ರಾಮದ ಹಲವಾರು ಯುವಕರು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಧಾರ್ಮಿಕ ಕಾರ್ಯಕ್ರಮದ ಜೊತೆ ವಿದ್ಯಾರ್ಥಿಗಳ ಅಗತ್ಯ ವಸ್ತುಗಳನ್ನು ತುಲಾಭಾರದ ಮೂಲಕ ಹಂಚಿದರು.