Tag: ಶಾಲಾ ವಾರ್ಷಿಕೋತ್ಸವ

  • ಸ್ಕೂಲ್‌ಡೇಯಲ್ಲಿ ರೇಣುಕಾಚಾರ್ಯ ರಾಜಕೀಯ ಭಾಷಣ – ಫುಲ್ ಕ್ಲಾಸ್, ವೇದಿಕೆಯಿಂದ ಕೆಳಗಿಳಿಸಿದ ಗ್ರಾಮಸ್ಥರು

    ಸ್ಕೂಲ್‌ಡೇಯಲ್ಲಿ ರೇಣುಕಾಚಾರ್ಯ ರಾಜಕೀಯ ಭಾಷಣ – ಫುಲ್ ಕ್ಲಾಸ್, ವೇದಿಕೆಯಿಂದ ಕೆಳಗಿಳಿಸಿದ ಗ್ರಾಮಸ್ಥರು

    ದಾವಣಗೆರೆ: ಸರ್ಕಾರಿ ಶಾಲೆಯ ವಾರ್ಷಿಕೋತ್ಸವದಲ್ಲಿ (School Day) ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ಮಕ್ಕಳಿಗೆ ಹಿತನುಡಿ ಹೇಳುವ ಬದಲು ರಾಜಕೀಯ ಭಾಷಣ ಮಾಡಿದ್ದಕ್ಕೆ ಗ್ರಾಮಸ್ಥರು ಶಾಸಕರನ್ನು ತರಾಟೆಗೆ ತೆಗೆದುಕೊಂಡು, ಭಾಷಣ ನಿಲ್ಲಿಸುವಂತೆ ಹೇಳಿ ವೇದಿಕೆಯಿಂದ ಕೆಳಗೆ ಇಳಿಸಿರುವ ಘಟನೆ ದಾವಣಗೆರೆಯ (Davanagere) ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದಲ್ಲಿ ನಡೆದಿದೆ.

    ಚೀಲೂರು ಗ್ರಾಮದ ಸರ್ಕಾರಿ ಶಾಲೆಯ ವಾರ್ಷಿಕೋತ್ಸವದಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ಭಾಗವಹಿಸಿದ್ದರು. ಇದಕ್ಕೂ ಮುನ್ನ ಮಾಜಿ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ನಿರ್ಗಮಿಸಿದ್ದರು. ಈ ವೇಳೆ ರೇಣುಕಾಚಾರ್ಯ ಮಕ್ಕಳಿಗೆ ಹಿತನುಡಿ ಹೇಳುವ ಬದಲು ಮಾಜಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ – ಆರೋಗ್ಯವಾಗಿದ್ದೇನೆ ಎಂದ ಬರಗೂರು ರಾಮಚಂದ್ರಪ್ಪ

    ಶಾಲಾ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಿದ್ದಕ್ಕೆ ಕಿಡಿಯಾದ ಗ್ರಾಮಸ್ಥರು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಶಾಲಾ ಕಾರ್ಯಕ್ರಮ, ಇಲ್ಲಿ ರಾಜಕೀಯ ಬೇಡ ಎಂದು ಗ್ರಾಮಸ್ಥರು ವಾಗ್ದಾಳಿ ನಡೆಸಿದ್ದಾರೆ. ಬಳಿಕ ಭಾಷಣವನ್ನು ನಿಲ್ಲಿಸಿ, ಶಾಸಕರನ್ನು ವೇದಿಕೆಯಿಂದ ಕೆಳಗಿಳಿಸಿದ್ದಾರೆ. ಇದನ್ನೂ ಓದಿ: ನನ್ನನ್ನ ರಾಷ್ಟ್ರಪತಿ, ಪಿಎಂ ಮಾಡ್ತೀನಿ ಅಂದ್ರೂ ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ: ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜನಪದ ಶೈಲಿ ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ – ಸಾಹಿತಿ ಶಂಭು ಬಳೆಗಾರ

    ಜನಪದ ಶೈಲಿ ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ – ಸಾಹಿತಿ ಶಂಭು ಬಳೆಗಾರ

    ಕೊಪ್ಪಳ: ನಮ್ಮ ಗ್ರಾಮೀಣ ಸೊಗಡಿನ ಜನಪದ ಶೈಲಿಯು ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಸಾಹಿತಿ ಡಾ. ಶಂಭು ಬಳೆಗಾರ ಅಭಿಪ್ರಾಯಪಟ್ಟರು.

    ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಪಬ್ಲಿಕ್ ಶಾಲೆಯ 26ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಚಿಣ್ಣರ ಜನಪದ ಜಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಸಂಸ್ಕೃತಿಯು ವಿಶ್ವದ ಎಲ್ಲ ರಾಷ್ಟ್ರಗಳಿಗೂ ಮಾದರಿಯಾಗಿದೆ. ನಮ್ಮ ಆಚಾರ ವಿಚಾರ, ಉಡುಗೆ ತೊಡುಗೆ, ಊಟ ಉಪಚಾರ ಸೇರಿದಂತೆ ಸಂಸ್ಕೃತಿಯನ್ನು ಬಿಂಬಿಸುವ ನಾನಾ ಬಗೆಯ ಕಾಯಕಗಳ ಶೈಲಿಗಳು ವಿಭಿನ್ನವಾಗಿ ಕಾಣುತ್ತದೆ. ಆದರೆ ಇಂದು ಆ ಜನಪದ ಶೈಲಿಯು ಮರೆಯಾಗುವ ಹಂತಕ್ಕೆ ತಲುಪುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಕೇವಲ ಬೆರಳೆಣಿಕೆಯಷ್ಟು ಗ್ರಾಮೀಣ ಭಾಗಗಳಲ್ಲಿ ಮಾತ್ರ ನಾವು ಜನಪದ ಶೈಲಿಯನ್ನು ಕಾಣವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧುನಿಕತೆಗೆ ಮಾರು ಹೋಗಿ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಜನಪದ ಶೈಲಿ, ಜನಪದ ಕಲೆ ಮರೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಜನಪದದ ಬಗ್ಗೆ ತಿಳಿಸುವ ಉದ್ದೇಶದಿಂದ ಚಿಣ್ಣರ ಜನಪದ ಜಾತ್ರೆ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

    ಮಾಜಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಗ್ರಾಮೀಣ ಭಾಗಗಳಿಂದ ದೇಶ ಬದಲಾವಣೆ ಕಂಡುಕೊಳ್ಳಲು ಸಾಧ್ಯ. ಹಾಗಾಗಿ ನಾವು ಗ್ರಾಮೀಣ ಭಾಗದ ಶೈಲಿಯನ್ನು ಕಡೆಗಣಿಸುವಂತಿಲ್ಲ. ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಕಾಪಾಡಬೇಕು ಎಂದು ಹೇಳಿದರು.

    ಕಾರ್ಯಕ್ರಮದ ಅಂಗವಾಗಿ ಶಾಲೆಯ ಆವರಣದಲ್ಲಿ ಜನಪದ ಶೈಲಿಯಲ್ಲಿ ತಾತ್ಕಾಲಿನ ಗ್ರಾಮಗಳನ್ನು ನಿರ್ಮಾಣ ಮಾಡಲಾಗಿತ್ತು. ಒಂದೊಂದು ಮನೆಯಲ್ಲಿ ಕೂಡ ಕಮ್ಮಾರರು, ನೇಕಾರರು, ಕುಂಬಾರರು ಸೇರಿದಂತೆ ನಾನಾ ರೀತಿಯ ಕಸುಬುಗಳ ಆಧಾರ ಮೇಲೆ ಮನೆಗಳನ್ನು ವಿಂಗಡಣೆ ಮಾಡಿ, ಯಾರು ಯಾವ ಕೆಲಸವನ್ನು ಮಾಡುತ್ತಿದ್ದರು ಎನ್ನುವ ಮಾಹಿತಿಯನ್ನು ಮಕ್ಕಳಿಗೆ ಪ್ರಯೋಗಿಕವಾಗಿ ನೀಡಲಾಯಿತು.

  • ಮುದ್ದಾಗಿ ಹೆಜ್ಜೆ ಹಾಕಿ ಪ್ಲಾಸ್ಟಿಕ್ ನಿಷೇಧ ಬಗ್ಗೆ ಜಾಗೃತಿ ಮೂಡಿಸಿದ ಪುಟಾಣಿಗಳು

    ಮುದ್ದಾಗಿ ಹೆಜ್ಜೆ ಹಾಕಿ ಪ್ಲಾಸ್ಟಿಕ್ ನಿಷೇಧ ಬಗ್ಗೆ ಜಾಗೃತಿ ಮೂಡಿಸಿದ ಪುಟಾಣಿಗಳು

    ತುಮಕೂರು: ಪ್ಲಾಸ್ಟಿಕ್ ಉಪಯೋಗಿಸುವುದರಿಂದ ಆಗುವ ಅನಾಹುತಗಳ ಬಗ್ಗೆ ಪುಟಾಣಿಗಳು ತಮ್ಮ ಶಾಲಾ ವಾರ್ಷಿಕೋತ್ಸವದಲ್ಲಿ ಪುಟ್ಟಪುಟ್ಟ ಹೆಜ್ಜೆ ಹಾಕಿದ್ದಾರೆ. ಹೆಜ್ಜೆ ಹಾಕುವ ಮೂಲಕ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ತುಮಕೂರು ನಗರದ ಎಸ್‍ಎಸ್ ಪುರಂನಲ್ಲಿರುವ ಮಾರುತಿ ವಿದ್ಯಾಕೇಂದ್ರದ ಒಂದನೇ ತರಗತಿ ವಿದ್ಯಾರ್ಥಿಗಳು ನೃತ್ಯದ ಮೂಲಕ ಪ್ಲಾಸ್ಟಿಕ್ ಬಳಕೆಯಿಂದಾಗುವ ತೊಂದರೆಯನ್ನು ತೆರೆದಿಟ್ಟಿದ್ದಾರೆ. ಪ್ಲಾಸ್ಟಿಕ್ ಕುರಿತಾದ ಟಿಕ್ ಟಿಕ್ ಟಿಕ್ ಟಿಕ್ ಎನ್ನುವ ಹಿಂದಿ ಹಾಡಿಗೆ ಪುಟಾಣಿಗಳು ಹೆಜ್ಜೆ ಹಾಕಿದ್ದಾರೆ.

    ವೇದಿಕೆ ಮುಂದೆ ವಿದ್ಯಾರ್ಥಿಗಳು ಹೆಜ್ಜೆ ಹಾಕುತ್ತಿದ್ದರೆ, ಹಿಂಭಾಗದ ಪರದೆ ಮೇಲೆ ಪ್ಲಾಸ್ಟಿಕ್ ತ್ಯಾಜ್ಯದಿಂದಾಗುವ ಪರಿಣಾಮಗಳ ದೃಶ್ಯಾವಳಿಗಳು ಮೂಡುತ್ತಿದ್ದವು. ವಿಶೇಷ ಎಂದರೆ ಪ್ರಧಾನಿ ಮೋದಿ ಕಡಲ ಕಿನಾರೆಯಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಶುಚಿಗೊಳಿಸುವ ದೃಶ್ಯಾವಳಿ ಕಂಡು ಬಂದಿತ್ತು. ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ಹಲವು ಪರಿಸರ ಮಾಲಿನ್ಯಗಳ ಬಗ್ಗೆ ಪುಟಾಣಿ ಕಂದಮ್ಮಗಳು ನೃತ್ಯದ ಮೂಲಕ ಜಾಗೃತಿ ಮೂಡಿಸಿದ್ದಾರೆ.

    ಟಿಕ್ ಟಿಕ್ ಎನ್ನುತ್ತಾ ಎಳೆಯರು ಹೆಜ್ಜೆ ಇಡುತಿದ್ದಂತೆ ನೆರೆದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಪರಿಸರ ಜಾಗೃತಿ ಮಕ್ಕಳ ನೃತ್ಯ ಮನೋಜ್ಞವಾಗಿ ಮೂಡಿ ಬಂದಿತ್ತು.