Tag: ಶಾಲಾ ಮಕ್ಕಳು

  • ರಸ್ತೆ ಕುಸಿದು ಉಕ್ಕಿ ಹರಿದ ನೀರು – ಮಾನವ ಸೇತುವೆ ನಿರ್ಮಿಸಿ 35 ಶಾಲಾ ಮಕ್ಕಳನ್ನು ರಸ್ತೆ ದಾಟಿಸಿದ ಗ್ರಾಮಸ್ಥರು

    ರಸ್ತೆ ಕುಸಿದು ಉಕ್ಕಿ ಹರಿದ ನೀರು – ಮಾನವ ಸೇತುವೆ ನಿರ್ಮಿಸಿ 35 ಶಾಲಾ ಮಕ್ಕಳನ್ನು ರಸ್ತೆ ದಾಟಿಸಿದ ಗ್ರಾಮಸ್ಥರು

    ಚಂಡೀಗಢ: ರಸ್ತೆ ಕುಸಿದು ಉಕ್ಕಿ ಹರಿಯುತ್ತಿದ್ದ ನೀರಿನ ನಡುವೆ ಎರಡೂ ಬದಿಗೆ ಸೇತುವೆಯಂತೆ ನಿಂತು ಶಾಲಾ ಮಕ್ಕಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ದಾಟಿಸಿದ ಘಟನೆ ಪಂಜಾಬ್‌ನಲ್ಲಿ (Punjab) ನಡೆದಿದೆ.

    ಭಾರೀ ಮಳೆಯಿಂದಾಗಿ ರಸ್ತೆ ಕುಸಿದು ಗದ್ದೆಗಳು ಜಲಾವೃತಗೊಂಡಿದ್ದವು. ಪಂಜಾಬ್‌ನ ಮೋಗಾದಲ್ಲಿ ವೇಗವಾಗಿ ಹರಿಯುತ್ತಿದ್ದ ನೀರಿನ ಮಧ್ಯೆ ರಸ್ತೆ ಎರಡೂ ಬದಿಗೆ ಸಂಪರ್ಕ ಕೊಂಡಿಯಂತೆ ನಿಂತು 35 ಶಾಲಾ ಮಕ್ಕಳನ್ನು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟಿಸಿದ್ದಾರೆ. ‘ಜುಗಾಡ್’ ಎಂದು ಕರೆಯಲ್ಪಡುವ ಈ ವಿಶಿಷ್ಟ ವಿಧಾನದ ಮೂಲಕ ಶಾಲಾ ಮಕ್ಕಳಿಗೆ ನೆರವಾದವರನ್ನು ಮಲ್ಲೆಯನ್ ಗ್ರಾಮದ ಪಂಚಾಯಿತಿ ಗೌರವಿಸಿದೆ. ಇದನ್ನೂ ಓದಿ: Digital Arrest | ಸಿಬಿಐ ಅಧಿಕಾರಿ ಸೋಗಿನಲ್ಲಿ ಕರೆ – ಬ್ಯಾಂಕ್‌ ಅಧಿಕಾರಿಗೆ 56 ಲಕ್ಷಕ್ಕೂ ಅಧಿಕ ಹಣ ವಂಚನೆ

    ಮಲ್ಲೆಯಾನ್‌ನಲ್ಲಿ ಭಾರೀ ಮಳೆಯಿಂದಾಗಿ ಹೊಲ, ಗದ್ದೆಗಳು ಜಲಾವೃತಗೊಂಡಿದ್ದವು. ಶಾಲೆಗೆ ಹೋಗಿದ್ದ ಮಕ್ಕಳಿಗೆ ರಜೆ ಘೋಷಿಸಲಾಗಿತ್ತು. ಹೀಗಾಗಿ, ಮಕ್ಕಳು ಶಾಲೆಯಿಂದ ವಾಪಸ್‌ ಆಗಬೇಕಾಯಿತು. ಆದರೆ, ಗುರುದ್ವಾರದಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಕುಸಿದು ಕನಿಷ್ಠ 35 ಮಕ್ಕಳು ಸಿಲುಕಿಕೊಂಡಿದ್ದರು. ಸುಖ್ಬಿಂದರ್ ಸಿಂಗ್ ಮತ್ತು ಗಗನ್‌ದೀಪ್ ಸಿಂಗ್ ಇತರರೊಂದಿಗೆ ಮಕ್ಕಳಿಗೆ ಸಹಾಯ ಮಾಡಿದ್ದಾರೆ.

    ರಸ್ತೆ ಕುಸಿದು ಎರಡೂ ತುದಿಯ ಅಂತರ 5 ಅಡಿ ಇತ್ತು. ನೀರು ಉಕ್ಕಿ ಹರಿಯುತ್ತಿತ್ತು. ಮಾನವ ಸೇತುವೆ ನಿರ್ಮಿಸಿ ಮಕ್ಕಳಿಗೆ ನೆರವಾಗಲಾಯಿತು. ಈ ಕಾರ್ಯದಿಂದ 35 ಶಾಲಾ ಮಕ್ಕಳು ಮತ್ತು ಕನಿಷ್ಠ 10 ಜನರು ಸುರಕ್ಷಿತವಾಗಿ ದಾಟಲು ಸಾಧ್ಯವಾಯಿತು. ಇದನ್ನೂ ಓದಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ 6 ತಿಂಗಳು ವಿಸ್ತರಣೆ – ಸದನದಲ್ಲಿ ಅನುಮೋದನೆ

    ಮಲ್ಲೆಯಾನ್ ಮತ್ತು ರಸೂಲ್ಪುರ್ ಗ್ರಾಮಗಳನ್ನು ಸಂಪರ್ಕಿಸುವ ಮತ್ತು ಜನರು ಕೆಲಸಕ್ಕೆ ಹೋಗಲು, ಮಕ್ಕಳು ಶಾಲೆಗೆ ಹೋಗಲು ಇರುವ ಏಕೈಕ ಮಾರ್ಗವಾಗಿರುವ ರಸ್ತೆಯನ್ನು ದುರಸ್ತಿ ಮಾಡಲು ಲುಧಿಯಾನ ಜಿಲ್ಲಾಡಳಿತವಾಗಲಿ ಅಥವಾ ರಸೂಲ್ಪುರ್ ಗ್ರಾಮ ಪಂಚಾಯತ್ ಆಗಲಿ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ ಎಂದು ಪಂಚಾಯತ್ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ. ಗ್ರಾಮದ ಜನರು ರಾಜ್ಯ ಸರ್ಕಾರ ಮತ್ತು ಲುಧಿಯಾನ ಆಡಳಿತಕ್ಕೆ ರಸ್ತೆಯನ್ನು ತಕ್ಷಣ ದುರಸ್ತಿ ಮಾಡುವಂತೆ ಮನವಿ ಮಾಡಿದ್ದಾರೆ.

  • ಸರ್ಕಾರಿ ಶಾಲಾ ಮಕ್ಕಳಿಗೆ ಬಸ್‌ ಫ್ರೀ – ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

    ಸರ್ಕಾರಿ ಶಾಲಾ ಮಕ್ಕಳಿಗೆ ಬಸ್‌ ಫ್ರೀ – ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

    ಬೆಂಗಳೂರು: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳ (School Children) ಭವಿಷ್ಯ ಉಜ್ವಲಕ್ಕೆ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದೆ.

    ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ (Karnataka Public School) LKG ಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಮುಖ ಒತ್ತು ನೀಡಲಾಗುತ್ತಿದೆ. ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವದ ಪ್ರತಿಷ್ಠಿತ ಕಾರು ಸಂಸ್ಥೆ ರೋಲ್ಸ್ ರಾಯ್ಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಕನ್ನಡತಿ

    ಸರ್ಕಾರಿ ಶಾಲೆಯ ಮಕ್ಕಳ ಹಾಜರಾತಿ, ಗುಣಮಟ್ಟ ಹೆಚ್ಚಿಸಲು ಸರ್ಕಾರದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕಾಗಿ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅನುಕೂಲ ಕಲ್ಪಿಸಲು ಉಚಿತ ಬಸ್‌ ವ್ಯವಸ್ಥೆಯನ್ನ ಸರ್ಕಾರ ನೀಡಲಿದೆ ಎಂದಿದ್ದಾರೆ. ಇದನ್ನೂ ಓದಿ: 3ನೇ ಆಷಾಢ ಸಂಭ್ರಮ; ಗಜ ಲಕ್ಷ್ಮಿ, ನಾಗಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡಿ ತಾಯಿ

    ಎಲ್‌ಕೆಜಿಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಸರ್ಕಾರ ಸರ್ಕಾರ ತೀರ್ಮಾನಿಸಿದೆ. ವಿದ್ಯಾಭ್ಯಾಸ ಮಾಡುವ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಬಡವರ ಮಕ್ಕಳಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಬಲ ನೀಡಲು ಸರ್ಕಾರದ ಈ ಕ್ರಮ ಮಹತ್ವದ್ದಾಗಿದೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರದ ದಿಟ್ಟ ಹೆಜ್ಜೆಯೂ ಇದಾಗಿದೆ ಎಂದು ಎಕ್ಸ್‌ಪೋಸ್ಟ್‌ನಲ್ಲಿ ಕಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಡೋದಾಗಿ ಮೌಲ್ವಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ – ಕೇಸ್‌ ದಾಖಲು

  • ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸಕ್ಕೆ ಹಸು ಬಲಿ ರೈತ ಕಂಗಾಲು

    ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸಕ್ಕೆ ಹಸು ಬಲಿ ರೈತ ಕಂಗಾಲು

    – ಮಕ್ಕಳ ಮೇಲೆ ನಿಗಾ ಇಡುವಂತೆ ಎಚ್ಚರಿಕೆ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಒಂದೆಡೆ ಕಾಡಾನೆ ಹಾವಳಿಯಿಂದ ಗ್ರಾಮೀಣ ಜನರು ತೋಟಗಳಲ್ಲಿ ಓಡಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಹಲವೆಡೆ ಹುಲಿಗಳ (Tigers) ಅಟ್ಟಹಾಸ ಮುಂದುವರೆಯುತ್ತಿದೆ.

    ಮಂಗಳವಾರ ರಾತ್ರಿ ಕೂಡ ಪೋನ್ನಂಪೇಟೆ ತಾಲೂಕಿನ ಮಾಯಮುಡಿಯ ಕೊಂಗಂಡ ನಂಜಪ್ಪ ಅವರ ಹಸುವನ್ನು ಹುಲಿ ಕೊಂದು ಹಾಕಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವನ್ನು ಕೊಂದು ಹುಲಿ ಬಹಳ ದೂರದ ವರೆಗೆ ಎಳೆದೊಯ್ದಿದಿದೆ. ಇದನ್ನೂ ಓದಿ: Lokayukta Raid | ಹುಟ್ಟುಹಬ್ಬದಂದು ಹಾಸ್ಟೆಲ್‌ನಲ್ಲಿ ಹೂಮಳೆ – ಅಂದು ವಾರ್ಡನ್‌, ಈಗ ಅಧಿಕಾರಿ

    ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಾಟು ಮೊಣ್ಣಪ್ಪ, ಹುಲಿ ಕಾಫಿ ತೋಟದ ಒಳಗೆ ಸುಳಿದಾಡುತ್ತಿದ್ದು, ಕಾರ್ಮಿಕರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ ಲುಕ್‌ನಲ್ಲಿ ಯಶ್-‌ ‘ಟಾಕ್ಸಿಕ್‌’ ಬರ್ತ್‌ಡೇ ಪೀಕ್‌ ಗ್ಲಿಂಪ್ಸ್‌ ಔಟ್‌

  • ಟೀಚರ್ ಹೊಡೆದ್ರು ಅಂತಾ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ – ಶಾಲಾ ಬಿಲ್ಡಿಂಗ್‌ನ 3ನೇ ಫ್ಲೋರ್‌ನಿಂದ ಏಕಾಏಕಿ ಜಿಗಿದ ವಿದ್ಯಾರ್ಥಿನಿ!

    ಟೀಚರ್ ಹೊಡೆದ್ರು ಅಂತಾ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ – ಶಾಲಾ ಬಿಲ್ಡಿಂಗ್‌ನ 3ನೇ ಫ್ಲೋರ್‌ನಿಂದ ಏಕಾಏಕಿ ಜಿಗಿದ ವಿದ್ಯಾರ್ಥಿನಿ!

    ಬೆಂಗಳೂರು: ಇಂದಿನ ಮಕ್ಕಳಿಗೆ ಪೋಷಕರಾಗಲಿ, ಶಿಕ್ಷಣ ಕಲಿಸಿಕೊಡುವ ಗುರುಗಳಾಗಲಿ ಏನು ಅನ್ನುವಂತೆಯೇ ಇಲ್ಲ. ಸಣ್ಣ ಪುಟ್ಟದ್ದಕ್ಕೆಲ್ಲಾ ಜೀವ ಕಳೆದುಕೊಳ್ಳುವ ಮಟ್ಟಿಗೆ ಯೋಚಿಸಿಬಿಟ್ಟಿರ್ತಾರೆ. ಟೀಚರ್ ಹೊಡೆದ್ರು ಅಂತಾ ಪ್ರತಿಭಾನ್ವಿನ ವಿದ್ಯಾರ್ಥಿನಿಯೊಬ್ಬಳು (SSLC Student) ಶಾಲೆಯ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರೊ ಘಟನೆ ಬೆಂಗಳೂರಿನಲ್ಲಿ ನಡೆದಿದೆ ನೋಡಿ..

    ಆಕೆ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ. ಈ ಬಾರಿ SSLC ಯಲ್ಲಿ ಓದುತ್ತಿದ್ದಳು. ಇವತ್ತು ಏನೊ ತಪ್ಪು ಮಾಡಿದ್ಲು ಅಂತಾ ಟೀಚರ್ ಒಂದೆರಡು ಏಟು ಹೊಡೆದಿದ್ದಾರೆ. ಅಷ್ಟಕ್ಕೇ ಶಾಲೆಯ 3ನೇ ಫ್ಲೋರ್‌ನ ಕಟ್ಟಡದಿಂದ ಜಿಗಿದು ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬ್ಯಾಟರಾಯನಪುರ ಪೊಲೀಸ್ ಠಾಣಾ (Byatarayanapura Police Station) ವ್ಯಾಪ್ತಿಯ ಬಾಪೂಜಿನಗರದಲ್ಲಿಂದು ಮಧ್ಯಾಹ್ನ 1 ಗಂಟೆಗೆ ನಡೆದಿದೆ. ಹೀಗೆ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಹ ಹೆಸ್ರು ಫರಿಯಾ ಖಾನಂ. ಇದನ್ನೂ ಓದಿ: ಸಿದ್ದರಾಮಯ್ಯ ಸಂಡೇ ಲಾಯರ್, ರಾಹುಲ್ ಗಾಂಧಿ ಮೌನ ಏಕೆ?: ಛಲವಾದಿ ನಾರಾಯಣಸ್ವಾಮಿ ಕಿಡಿ

    ಶಾಮಣ್ಣ ಗಾರ್ಡನ್‌ ನಿವಾಸಿಯಾಗಿರುವ ಫರಿಯಾ, ಅಲ್‌ ಫಹದ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಇಂದು (ಶುಕ್ರವಾರ) ಮಧ್ಯಾಹ್ನ 1.30ರ ಸುಮಾರಿಗೆ ಶಾಲಾ ಕಟ್ಟಡದ ಮೂರನೇ‌ ಮಹಡಿಯಿಂದ ವಿದ್ಯಾರ್ಥಿನಿ ಜಿಗಿದಿದ್ದಾಳೆ. ಬಳಿಕ ಗಂಭೀರ ಗಾಯಗೊಂಡ ಪರಿಣಾಮ ಸ್ಥಳೀಯರು ಪೋಷಕರಿಗೆ ಮಾಹಿತಿ ನೀಡಿದ್ದಾರೆ.‌ ಇದನ್ನೂ ಓದಿ: ಉಕ್ರೇನ್‌ಗೆ ಮೋದಿ ಭೇಟಿ – ಝೆಲೆನ್ಸ್ಕಿ ಜೊತೆ ಮಾತುಕತೆ; ಯುದ್ಧದಲ್ಲಿ ಮಡಿದ ಮಕ್ಕಳ ಸ್ಮಾರಕ ವೀಕ್ಷಿಸಿದ ಪ್ರಧಾನಿ!

    ಸ್ಥಳಕ್ಕೆ ಬಂದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂರನೇ ಮಹಡಿಯಿಂದ ಕೆಳಗೆ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಾಂಶುಪಾಲರು ಬೈದ್ದಿದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ‌.‌ ಪೋಷಕರು ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಮೊದಲ ಚಾರ್ಜ್‌ಶೀಟ್‌ ಸಲ್ಲಿಕೆ – 2,144 ಪುಟಗಳ ದೋಷಾರೋಪ ಪಟ್ಟಿಯಲ್ಲೇನಿದೆ?

  • ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ – ಕುಂದಾಪುರ, ಬ್ರಹ್ಮಾವರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

    ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ – ಕುಂದಾಪುರ, ಬ್ರಹ್ಮಾವರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

    ಉಡುಪಿ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ (Heavy Rain) ಹೆಚ್ಚಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ (Udupi) ಜಿಲ್ಲೆಯ ಎರಡು ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

    ಉಡುಪಿ ಜಿಲ್ಲೆಯ ಕುಂದಾಪುರ (Kundapura), ಬ್ರಹ್ಮಾವರ (Brahmavara) ತಾಲೂಕಿನಲ್ಲಿ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ವಿಭಾಗಕ್ಕೆ ರಜೆ (Holiday For School) ಘೋಷಿಸಲಾಗಿದೆ. ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್, ಐಟಿಐ ವಿದ್ಯಾಸಂಸ್ಥೆಗಳು ಎಂದಿನಂತೆ ನಡೆಯಲಿವೆ. ಅಲ್ಲದೇ ಉಡುಪಿ, ಬೈಂದೂರು, ಕಾಪು, ಕಾರ್ಕಳ, ಹೆಬ್ರಿಯಲ್ಲಿ ಶಾಲಾ, ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರವಾಹ ಪರಿಸ್ಥಿತಿ ನಿರ್ಮಾಣ:
    ಮಳೆಯ ಆರ್ಭಟ ಹೆಚ್ಚಿದ ಹಿನ್ನೆಲೆಯಲ್ಲಿ ಅಂಕೋಲದ ಸೇರಿ ವಿವಿಧೆಡೆ ಮಳೆಗೆ ಮನೆ, ಸೇತುವೆ, ರಸ್ತೆಗಳು ಜಲಾವೃತವಾಗಿದೆ. ಹೊನ್ನಾವರದ ವರ್ನಕ್ಕೇರಿ ಬಳಿ ಹೆದ್ದಾರಿ ಮೇಲೆ ಗುಡ್ಡ ಕುಸಿದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಹೊನ್ನಾವರದ ಗುಂಡಬಾಳ ನದಿ ಉಕ್ಕಿ ಹರಿದು, 50 ಮನೆಗಳಿಗೆ ನೀರು ನುಗ್ಗಿದೆ.

    ಮಳೆ ನೀರಿನೊಂದಿಗೆ ತೇಲಿಬಂತು ಹೆಬ್ಬಾವು:
    ಕದಂಬ ನೌಕಾನೆಲೆಯ ಕಾಂಪೌಂಡ್, ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಕಾರಣ ಆರಗಾ ಗ್ರಾಮ ಜಲಾವೃತದ ಭೀತಿ ಎದುರಿಸ್ತಿದೆ. ಜನರ ರಕ್ಷಣೆಗೆ ಎನ್‌ಡಿಆರ್‌ಎಫ್, ಬೋಟ್ ನಿಯೋಜಿಸಲಾಗಿದೆ. ಈ ನಡುವೆ ಕಾರವಾರದ ಸೋನಾರವಾಡದಲ್ಲಿ ಮಳೆಯ ನೀರಿನೊಂದಿಗೆ 12 ಅಡಿ ಉದ್ದದ ಹೆಬ್ಬಾವು ಮನೆಯೊಳಕ್ಕೆ ತೇಲಿಬಂದ ದೃಶ್ಯವೂ ಕಂಡುಬಂದಿದೆ.

    ಇನ್ನು, ಉಡುಪಿಯಲ್ಲಿ ಸೌಪರ್ಣಿಕಾ ನದಿ ಮೈದುಂಬಿದೆ. ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ಜಲಾವೃತವಾಗಿದೆ. 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಮಂಗಳೂರಿನ ಕೆತ್ತಿಕ್ಕಲ್‌ನಲ್ಲಿ ಗುಡ್ಡ ಕುಸಿಯುತ್ತಿದೆ. ಮಣ್ಣಿನ ದಿಬ್ಬ ರಸ್ತೆ ಮೇಲೆ ಬೀಳುವ ಆತಂಕ ಎದುರಾಗಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿಯೂ ಮಳೆ ಅಬ್ಬರಿಸುತ್ತಿದೆ. ಬೆಳಗಾವಿಯ ಸಪ್ತ ನದಿಗಳಿಗೆ ಜೀವ ಕಳೆ ಬಂದಿದೆ. ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭವ ಕಂಡುಬರುತ್ತಿದೆ. ಬೆಳಗಾವಿ-ಸಾವಗಾಂವ ಜಿಲ್ಲಾ ಮುಖ್ಯರಸ್ತೆ ಬಿರುಕು ಬಿಟ್ಟಿರುವುದು ಕಂಡುಬಂದಿದೆ.

  • ಗುಜರಾತ್‌ ಗಲಭೆ, ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT ನಿರ್ದೇಶಕ

    ಗುಜರಾತ್‌ ಗಲಭೆ, ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT ನಿರ್ದೇಶಕ

    ನವದೆಹಲಿ: ಬಾಬ್ರಿ ಮಸೀದಿ ಧ್ವಂಸ, 2002ರ ಗುಜರಾತ್‌ ಗಲಭೆಗಳ (Gujarat Riots And Babri Masjid) ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿರಲಿಲ್ಲ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ನಿರ್ದೇಶಕ ದಿನೇಶ್‌ ಪ್ರಸಾದ್‌ ಸಕ್ಲಾನಿ (Dinesh Prasad Saklani) ಹೇಳಿದ್ದಾರೆ.

    ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತಮಾಡಿದ ಅವರು, ನಾವು ನಮ್ಮ ವಿದ್ಯಾರ್ಥಿಗಳನ್ನು ಆಕ್ರಮಣಕಾರಿಗಳನ್ನಾಗಿ ಮಾಡಬೇಕೇ? ಸಮಾಜದಲ್ಲಿ ದ್ವೇಷ ಬಿತ್ತಬೇಕೆ? ದ್ವೇಷಕ್ಕೆ ಮಕ್ಕಳು ಬಲಿಯಾಗಬೇಕೇ? ಇದು ಶಿಕ್ಷಣದ ಉದ್ದೇಶವೇ? ಅಂತಹ ಚಿಕ್ಕ ಮಕ್ಕಳಿಗೆ ನಾವು ಗಲಭೆಗಳ ಬಗ್ಗೆ ಕಲಿಸಬೇಕೇ? ಪ್ರಶ್ನೆಗಳ ಮಳೆ ಸುರಿಸಿದರಲ್ಲದೇ ಪ್ರತಿ ವರ್ಷ ನಡೆಸುವ ಪರಿಷ್ಕರಣೆ ಭಾಗವಾಗಿ ಪಠ್ಯಪುಸ್ತಕಗಳಲ್ಲಿ ಬದಲಾವಣೆ ಮಾಡಲಾಗಿದ್ದು, ವಿವಾದ ಎಬ್ಬಿಸುವಂತಹ ವಿಷಯವೇ ಇದಲ್ಲ ಎಂದಿದ್ದಾರೆ.

    ಎನ್‌ಸಿಇಆರ್‌ಟಿ 12ನೇ ತರಗತಿ ರಾಜ್ಯಶಾಸ್ತ್ರ ಪುಸ್ತಕದಲ್ಲಿ ಅಯೋಧ್ಯೆ ಪಠ್ಯ ವಿಭಾಗವನ್ನು 2 ಪುಟಗಳಿಗೆ ಇಳಿಸಲಾಗಿದೆ. ಗಲಭೆಗಳ ಕುರಿತ ಬೋಧನೆಯು ಆವೇಶಭರಿತ ಮತ್ತು ಖಿನ್ನತೆಯಿಂದ ಬಳಲುವ ನಾಗರಿಕರನ್ನು ಸೃಷ್ಟಿಸುತ್ತದೆ. ಈ ಕಾರಣಕ್ಕಾಗಿಯೇ, ಗುಜರಾತ್ ಗಲಭೆಗಳು, ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಗಳಲ್ಲಿ ಬೋಧಿಸುವ ಅಗತ್ಯ ಇಲ್ಲ. ವಿದ್ಯಾರ್ಥಿಗಳು ಬೆಳೆದು ದೊಡ್ಡವರಾದಾಗ ಅದರ ಬಗ್ಗೆ ಕಲಿಯಬಹುದು ಶಾಲೆಯ ಪಠ್ಯಪುಸ್ತಕಗಳು ಏಕೆ? ಅವರು ಬೆಳೆದಾಗ ಏನಾಯಿತು ಮತ್ತು ಏಕೆ ಸಂಭವಿಸಿತು ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಿ ಎಂದು ಅವರು ಪ್ರತಿಪಾದಿಸಿದ್ದಾರೆ.

    ಶಾಲಾ ಪಠ್ಯಕ್ರಮದಲ್ಲಿ ಕೇಸರಿಕರಣದ ಆರೋಪವನ್ನು ತಳ್ಳಿಹಾಕಿರುವ ಅವರು, ನಮ್ಮ ಶಿಕ್ಷಣದ ಉದ್ದೇಶ ಹಿಂಸಾತ್ಮಕ ಪ್ರವೃತ್ತಿಯ, ಖಿನ್ನತೆಗೆ ಒಳಗಾದ ನಾಗರಿಕರನ್ನು ಸೃಷ್ಟಿಸುವುದಲ್ಲ. ದ್ವೇಷ ಮತ್ತು ಹಿಂಸೆ ಬೋಧನೆಯ ವಿಷಯಗಳಲ್ಲ. ಅವು ನಮ್ಮ ಪಠ್ಯಪುಸ್ತಕಗಳ ಕೇಂದ್ರಬಿಂದುವಾಗಿರಬಾರದು ಎಂದು ಸಕ್ಲಾನಿ ಹೇಳಿದ್ದಾರೆ.

  • ಮಕ್ಕಳೊಂದಿಗೆ ಮಗುವಾದ ಮೋದಿ – ತನಗಾಗಿ ವಿಶೇಷ ಕವಿತೆ ಹಾಡಿದ ಬಾಲಕಿಗೆ ಭೇಷ್‌ ಎಂದ ಪ್ರಧಾನಿ

    ಮಕ್ಕಳೊಂದಿಗೆ ಮಗುವಾದ ಮೋದಿ – ತನಗಾಗಿ ವಿಶೇಷ ಕವಿತೆ ಹಾಡಿದ ಬಾಲಕಿಗೆ ಭೇಷ್‌ ಎಂದ ಪ್ರಧಾನಿ

    ಲಕ್ನೋ: ವಾರಣಾಸಿಯಲ್ಲಿ (Varanas) ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರವಾದ ʻಸ್ವರವೇದ ಮಹಾಮಂದಿರʼ (Swarved Mahamandir) ಉದ್ಘಾಟಿಸಿದರು. ಬಳಿಕ ಕೆಲ ಕಾಲ ಬಿಡುವು ಮಾಡಿಕೊಂಡು ಶಾಲಾ ಮಕ್ಕಳೊಂದಿಗೆ ಕಾಲ ಕಳೆದ ಪ್ರಸಂಗ ಕಂಡುಬಂದಿತು.

    ಸಿಎಂ ಯೋಗಿ ಆದಿತ್ಯನಾಥ್‌ ಅವರೊಂದಿಗೆ ವಾರಣಾಸಿಯ ಶಾಲೆಯೊಂದಕ್ಕೆ (Varanasi School) ಭೇಟಿ ನೀಡಿದ ಮೋದಿ, ಪುಟ್ಟ ಮಕ್ಕಳೊಂದಿಗೆ ಸಂವಾದ ನಡೆಸುತ್ತಾ? ತಾವೂ ಮಕ್ಕಳಾಗಿಯೇ ಕಾಲ ಕಳೆದರು. ಈ ವೀಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಾರಣಾಸಿಯಲ್ಲಿ ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರ ಉದ್ಘಾಟಿಸಿದ ಪಿಎಂ ಮೋದಿ- ವಿಶೇಷತೆ ಏನು?

    ಮೋದಿ ಶಾಲೆಯೊಳಗೆ ಬರುತ್ತಿದ್ದಂತೆ ವಿಶೇಷ ಗೀತೆಯೊಂದನ್ನು ಹಾಡಿದ ಮಕ್ಕಳು ಗೌರವದಿಂದ ತಲೆಭಾಗಿ ನಮಸ್ಕರಿಸಿದರು. ಬಳಿಕ ಅಲ್ಲಿಯೇ ಮೋದಿ ಮಕ್ಕಳ ಸಾಮರ್ಥ್ಯ ಪರೀಕ್ಷಿಸುವ ಸಣ್ಣ ಪ್ರಯತ್ನ ಮಾಡಿದರು. ಮಕ್ಕಳಿಗೆ ಏನು ಇಷ್ಟ? ಇಂತಹ ಸುಂದರ ಶಾಲೆಯಲ್ಲಿ ಹೇಗೆ ಕಲಿಯುತ್ತಿದ್ದೀರಿ? ಎಂದು ಪ್ರಶ್ನಿಸಿದರು. ಅದಕ್ಕೆ ಮಕ್ಕಳು ಹಾಡಿನ ಮೂಲಕವೇ ಉತ್ತರ ಕೊಟ್ಟು ಪ್ರಧಾನಿಗಳನ್ನು ಸಂತಸಪಡಿಸಿದರು.

    ಈ ವೇಳೆ ಪುಟ್ಟ ಬಾಲಕಿಯೊಬ್ಬಳು ʻನಿಮಗಿಷ್ಟವಾದ ಒಂದು ಕವಿತೆಯೊಂದನ್ನು ಬರೆದಿದ್ದೇನೆ ನಿಮಗೆ ಹೇಗನ್ನಿಸುತ್ತದೆ ಹೇಳಿ? ಎಂದು ಕೇಳಿದಳು, ಅದಕ್ಕೆ ಮೋದಿ ಹೌದಾ.. ಹಾಡು ನೋಡೋಣ ಎಂದು ನಯವಾಗಿಯೇ ಹೇಳಿದರು. ಆಗ ಬಾಲಕಿ ʻಜನಮನ ನಾಯಕ ಶ್ರೇಷ್ಠ ವಿಧಾಯಕ, ವಿಶ್ವ ಚೇತನಕೆ ಅಧಿನಾಯಕ, ಜೈ ಮೋದಿ ಜೈ ಹಿಂದೂಸ್ತಾನ್‌ʼ ಎಂದು ಕವಿತೆ ಹಾಡಿದಳು. ಇದಕ್ಕೆ ಮೋದಿ ವ್ಹಾ ವ್ಹಾ ಎಂದು ಚಪ್ಪಾಳೆ ಬಾರಿಸಿ, ಬೆನ್ನುತಟ್ಟಿದರು.

    ಬಳಿಕ ಮತ್ತೊಂದು ಕೊಠಡಿಯಲ್ಲಿದ್ದ ಮಕ್ಕಳನ್ನು ಭೇಟಿಯಾಗಿ ಸ್ಮಾರ್ಟ್‌ ಕ್ಲಾಸ್‌ ನಿಮಗೆ ಹೇಗೆ ಅನ್ನಿಸುತ್ತಿದೆ? ನೀರಿನ ಸೌಲಭ್ಯ ಚೆನ್ನಾಗಿದೆಯೇ ಎಂದೆಲ್ಲಾ ಪ್ರಶ್ನಿಸಿದರು. ಮಕ್ಕಳು ಅದಕ್ಕೆಲ್ಲ ಸುಲಲಿತವಾಗಿಯೇ ಉತ್ತರ ಕೊಟ್ಟರು. ಇದನ್ನೂ ಓದಿ: ಐಸಿಸ್ ಉಗ್ರರ ನಂಟು ಪ್ರಕರಣ – ಬೆಂಗ್ಳೂರು ಸೇರಿದಂತೆ 4 ರಾಜ್ಯಗಳ 19 ಕಡೆ NIA ದಾಳಿ

  • ಕೋಲಾರದಲ್ಲಿ ವಸತಿ ಶಾಲೆ ಕರ್ಮಕಾಂಡ – ನಾಲ್ವರ ವಿರುದ್ಧ FIR, ಪ್ರಾಂಶುಪಾಲೆ ಸೇರಿ ಇಬ್ಬರು ಅರೆಸ್ಟ್

    ಕೋಲಾರದಲ್ಲಿ ವಸತಿ ಶಾಲೆ ಕರ್ಮಕಾಂಡ – ನಾಲ್ವರ ವಿರುದ್ಧ FIR, ಪ್ರಾಂಶುಪಾಲೆ ಸೇರಿ ಇಬ್ಬರು ಅರೆಸ್ಟ್

    ಕೋಲಾರ: ವಸತಿ ಶಾಲೆ (Residential School) ಮಕ್ಕಳನ್ನ ಮಲದ ಗುಂಡಿ (Toilet Pond )ಸ್ವಚ್ಚಗೊಳಿಸಲು ಇಳಿಸಿದ್ದು ಹಾಗೂ ಬಾಲಕಿಯರ ಬಟ್ಟೆ ಬದಲಿಸುವ ವೀಡಿಯೋ ತೆಗೆದ ಪ್ರಕರಣಕ್ಕೆ ಸಂಬಂಧಿಸಿದಂರೆ ನಾಲ್ವರ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಒಬ್ಬರ ಮೇಲೆ ಪೋಕ್ಸೊ ಪ್ರಕರಣ ದಾಖಲಾಗಿದೆ. ಇಬ್ಬರನ್ನ ಬಂಧಿಸಿರುವ ಪೊಲೀಸರು (Kolar Police) ಇನ್ನೂ ಮೂವರಿಗಾಗಿ ಹುಡುಕಾಟ ನಡೆಸಿದ್ದಾರೆ.

    ಪ್ರಿನ್ಸಿಪಾಲ್ ಅರೆಸ್ಟ್: ಮಾಲೂರಿನ ಯಲವಳ್ಳಿ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಿಬ್ಬಂದಿ, ಬಾಲಕಿಯರ ಕೊಠಡಿಯಲ್ಲಿ ಬಾಲಕಿಯರು ಬಟ್ಟೆ ಬದಲಿಸುವ ಹಾಗೂ ಮಲಗಿದ್ದ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಪ್ರಕರಣವೂ ಬೆಳಕಿಗೆ ಬಂದಿದೆ.

    ಮೂವರು ವಿದ್ಯಾರ್ಥಿನಿಯರ (School Students) ವೀಡಿಯೋ ಮಾಡಲಾಗಿದ್ದು, ಈ ಬಗ್ಗೆ ವಿದ್ಯಾರ್ಥಿನಿಯರಿಗೆ ತಿಳಿದಾಗ ದಂಗಾಗಿದ್ದಾರೆ. ವಿಚಾರ ಬೆಳಕಿಗೆ ಬಂದೊಡನೆ ಪೋಷಕರು ಶಾಲೆಗೆ ಧಾವಿಸಿ ಪ್ರತಿಭಟನೆ ಮಾಡಿದ್ದಾರೆ. ಈ ಬಗ್ಗೆ `ಪಬ್ಲಿಕ್ ಟಿವಿ’ ಜೊತೆ ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿಗಳು ಇಲ್ಲಿನ ಶಿಕ್ಷಕರು ಮತ್ತು ಸಿಬ್ಬಂದಿ, ಹೆಣ್ಣುಮಕ್ಕಳು ಬಟ್ಟೆ ಬದಲಿಸುವ ದೃಶ್ಯಗಳನ್ನು ಸೆರೆಹಿಡಿದು ಬೇರೆಯವರಿಗೆ ಕಳಿಸುತ್ತಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ.

    ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಕ್ರೈಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ನವೀನ ಕುಮಾರ್ ರಾಜು, ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಮುನಿಯಪ್ಪ, ವಾರ್ಡನ್ ಮಂಜುನಾಥ್‌ನನ್ನು ಅಮಾನತ್ತು ಮಾಡಲಾಗಿದೆ. ವಿದ್ಯಾರ್ಥಿನಿಯ ಖಾಸಗಿ ವೀಡಿಯೋಗಳ ಬಗ್ಗೆ ಗಮನಕ್ಕೆ ಬಂದಿದೆ. ಕೂಡಲೇ ಇದರ ಹಿಂದೆ ಇರುವ ಜಾಲದ ಕುರಿತು ಪರಿಶೀಲನೆ ಮಾಡಲಾಗುವುದು. ಪೊಲೀಸ್ ಇಲಾಖೆ ಈಗಾಗಲೇ ಪ್ರಕರಣ ದಾಖಲು ಮಾಡಿಕೊಂಡಿದೆ. ಇಲ್ಲಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲಾಗುವುದು. ಮಕ್ಕಳು ಮತ್ತು ಪೋಷಕರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಪೋಷಕರು ನವೀನ್ ಕುಮಾರ್ ರಾಜು ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

    ಅಲ್ಲದೇ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲ ಗುಂಡಿಗೆ ಇಳಿಸಿದ ವಿಚಾರವಾಗಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ದಾಖಲಿಸಿದ ದೂರಿನಡಿ 4 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಸಂಬAಧ ಪ್ರಾಂಶುಪಾಲೆ ಭಾರತಮ್ಮ ಮತ್ತು ಸಹ ಶಿಕ್ಷಕ ಮುನಿಯಪ್ಪನನ್ನು ಮಾಸ್ತಿ ಪೊಲೀಸರು ಬಂಧಿಸಿದ್ದಾರೆ. ವಾರ್ಡನ್ ಮಂಜುನಾಥ್ ಹಾಗೂ ಅತಿಥಿ ಶಿಕ್ಷಕ ಅಭಿಷೇಕ್ ಪರಾರಿಯಾಗಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ.

    ಆರೋಪಿಗಳ ವಿರುದ್ಧ ಮಲ ಹೊರುವ ಪದ್ದತಿ ನಿಷೇಧ ಕಾಯ್ದೆ, ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.

  • ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ – ಪ್ರಿನ್ಸಿಪಾಲ್, ವಾರ್ಡನ್‌, ಡಿ-ಗ್ರೂಪ್‌ ನೌಕರರ ಅಮಾನತಿಗೆ ಸೂಚನೆ

    ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ – ಪ್ರಿನ್ಸಿಪಾಲ್, ವಾರ್ಡನ್‌, ಡಿ-ಗ್ರೂಪ್‌ ನೌಕರರ ಅಮಾನತಿಗೆ ಸೂಚನೆ

    ಬೆಂಗಳೂರು: ಕೋಲಾರದ (Kolar) ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನ ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸಿರುವ ಅಮಾನವೀಯ ಘಟನೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್‌.ಸಿ ಮಹಾದೇವಪ್ಪ (HC Mahadevappa) ಪ್ರತಿಕ್ರಿಯಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನನಗೂ ಬೆಳಗ್ಗೆ ವಿಷಯ ತಿಳಿಯಿತು. ಪ್ರಿನ್ಸಿಪಾಲ್‌ ಸೆಕ್ರೆಟರಿ ಮಣಿವಣ್ಣನ್ ಅವರೊಂದಿಗೆ ಮಾತನಾಡಿ, ಶಾಲೆಯ ಪ್ರಾಂಶುಪಾಲರು, ವಾರ್ಡನ್‌ ಹಾಗೂ ಡಿ.ಗ್ರೂಪ್‌ ನೌಕರ ಎಲ್ಲರನ್ನೂ ಅಮಾನತು ಮಾಡಲು ಸೂಚನೆ ನೀಡಿದ್ದೇನೆ. ಸಮಾಜ ಕಲ್ಯಾಣ ಇಲಾಖೆಯಿಂದ‌ ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

    ಡಿ.ಗ್ರೂಪ್ ನೌಕರ (D Group Workers) ಮಾಡಿರುವ ಕೆಲಸ ಎಂದಿದ್ದಾರೆ. ಆದ್ರೆ ಪ್ರಾಂಶುಪಾಲರು ಹಾಗೂ ವಾರ್ಡನ್ ಸಹ ಇದಕ್ಕೆ ಜವಬ್ದಾರಿ. ಮಕ್ಕಳೇ ಆಗಲಿ, ಯಾರೇ ಆಗಲಿ ಇನ್ನೊಬ್ಬರ ಮಲ ಸ್ವಚ್ಛ ಮಾಡುವುದು ಸರಿಯಲ್ಲ. ಇದು ಅಕ್ಷಮ್ಯ ಅಪರಾಧ. ಇಲಾಖೆಯಿಂದ ಹೆಚ್ಚಿನ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ – ಕೋಲಾರದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಅಮಾನವೀಯ ಘಟನೆ

    ಏನಿದು ಅಮಾನವೀಯ ಘಟನೆ?
    ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಯಲವಳ್ಳಿ ಗ್ರಾಮದ ಬಳಿಯಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ಪ್ರಾಂಶುಪಾಲರು, ಶಿಕ್ಷಕರ ಎದುರಲ್ಲೇ ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸಿರುವ ಘಟನೆ ನಡೆದಿದೆ. ಪ್ರಾಂಶುಪಾಲರ ಎದುರಲ್ಲೇ ಸಿಬ್ಬಂದಿ, ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ್ದಾರೆ.

    ಅಮಾನವೀಯ ಕೃತ್ಯದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಸತಿ ಶಾಲೆಯಲ್ಲಿ ಸುಮಾರು 250 ಮಕ್ಕಳಿದ್ದಾರೆ. ಮಕ್ಕಳಿಗೆ ಕಿರುಕುಳ ನೀಡಿರುವ ಶಿಕ್ಷಕರ ವಿರುದ್ಧ ಕ್ರಮಕ್ಕೆ ಪೋಷಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾತ್ರಿ ವೇಳೆ ಭೀಕರ ಸಿಲಿಂಡರ್ ಸ್ಫೋಟ – ಹಸುಗೂಸು ಸೇರಿ ಒಂದೇ ಕುಟುಂಬದ 7 ಮಂದಿಗೆ ಗಂಭೀರ ಗಾಯ

    ಎಲ್ಲಾ ಮಕ್ಕಳೂ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ. ಅದು ಮಲದ ಗುಂಡಿ ಅಲ್ಲ ಸ್ವಚ್ಛತಾ ಆಂದೋಲನದ ಭಾಗವಾಗಿ ಚೇಂಬರ್ ಒಳಗೆ ಇಳಿಸಿ ಸ್ವಚ್ಛಗೊಳಿಸಲಾಗಿದೆ ಎಂದು ಪ್ರಾಂಶುಪಾಲೆ ಭಾರತಮ್ಮ ಸಮಜಾಯಿಷಿ ನೀಡಿದ್ದಾರೆ. ಆದರೆ ಅದು ಮಲದ ಗುಂಡಿ ಎಂಬುದು ಶಿಕ್ಷಕರ ಮಾತು. ಚೇಂಬರ್‌ನೊಳಗಾದರೂ ನಮ್ಮ ಮಕ್ಕಳನ್ನು ಏಕೆ ಇಳಿಸಬೇಕು? ಎಂದು ಪೋಷಕರು ಪ್ರಶ್ನಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.‌ ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೊರೊನಾ ಆತಂಕ; ಪಕ್ಕದ ಕೇರಳದಲ್ಲಿ ಜೆಎನ್.1 ಸೋಂಕು ಪತ್ತೆ – ಕರ್ನಾಟಕದಲ್ಲೂ ಹೈ ಅಲರ್ಟ್

  • ಮುಂದಿನ ವರ್ಷದಿಂದ್ಲೇ ಶಾಲಾ ಮಕ್ಕಳಿಗೆ ಉಚಿತ ʻಸೈಕಲ್‌ ಭಾಗ್ಯʼ – ಮಧು ಬಂಗಾರಪ್ಪ ಭರವಸೆ

    ಮುಂದಿನ ವರ್ಷದಿಂದ್ಲೇ ಶಾಲಾ ಮಕ್ಕಳಿಗೆ ಉಚಿತ ʻಸೈಕಲ್‌ ಭಾಗ್ಯʼ – ಮಧು ಬಂಗಾರಪ್ಪ ಭರವಸೆ

    ಬೆಂಗಳೂರು: ಮುಂದಿನ ವರ್ಷದಿಂದಲೇ ಶಾಲಾ ಮಕ್ಕಳಿಗೆ ಸೈಕಲ್ (Cycle) ವಿತರಣೆ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಭರವಸೆ ನೀಡಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ (Ravikumar) ಪ್ರಶ್ನೆಗೆ ಅವರು ಉತ್ತರಿಸಿದರು. ಶಾಲಾ ಮಕ್ಕಳಿಗೆ ಯಾಕೆ ಸೈಕಲ್ ಕೊಡ್ತಿಲ್ಲ? ಬಿಜೆಪಿ‌ ಸರ್ಕಾರ (BJP Government) ಸೈಕಲ್ ನಿಲ್ಲಿಸಿತ್ತು ಒಪ್ಪುತ್ತೇನೆ? ಅದಕ್ಕೆ ಜನ ನಮ್ಮನ್ನ ಇಲ್ಲಿಗೆ ಕೂರಿಸಿದ್ದಾರೆ. ಆದ್ರೆ ಈ ಸರ್ಕಾರಕ್ಕೆ ಸೈಕಲ್ ಕೊಡಲು ಹಣದ ಕೊರತೆ ಇದೆಯಾ? ಎಂದು ಪ್ರಶ್ನೆ ಮಾಡಿದರು. ಮಕ್ಕಳಿಗೆ ಶೂ, ಸಾಕ್ಸ್, ಸಮವಸ್ತ್ರಕ್ಕೆ 100 ರೂ. ಕೊಡ್ತಿದ್ದಾರೆ. ಖರ್ಚೀಫ್ ಗೆ ಕೊಡುವಷ್ಟು ಹಣ ಕೊಡ್ತಿದ್ದಾರೆ. ಇಷ್ಟು ಹಣ ಶೂ, ಸಾಕ್ಸ್, ಸಮವಸ್ತ್ರಕ್ಕೆ ಸಾಕಾಗುತ್ತದೆಯೇ? ಶೂ, ಸಾಕ್ಸ್ ಹಣ ಹೆಚ್ಚಳ ಮಾಡಬೇಕು ಅಂತ ಒತ್ತಾಯ ಮಾಡಿದರು. ಇದನ್ನೂ ಓದಿ: ನನ್ನ, ಸಿದ್ದರಾಮಯ್ಯ ನಡುವೆ ಅಸಮಾಧಾನವಿಲ್ಲ, ಅವರಿಗೆ ಸಿಎಂ ಆಗುವ ಅದೃಷ್ಟ ಇತ್ತು: ಬಿ.ಕೆ ಹರಿಪ್ರಸಾದ್

    ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, 2023-24ನೇ ಸಾಲಿನಲ್ಲಿ 55,43,828 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಲಾಗಿದೆ. 45,45,749 ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಸಾಕ್ಸ್ ವಿತರಿಸಲಾಗಿದೆ. ವಿದ್ಯಾರ್ಥಿಗಳಿಗೆ ಸೈಕಲ್ ಹಿಂದಿನ ಸರ್ಕಾರ ಕೊಡೋದು ನಿಲ್ಲಿಸಿದೆ. ನಾನು ಈಗಾಗಲೇ ಸಿಎಂ ಜೊತೆಗೆ ಮಾತಾಡಿದ್ದೇನೆ. ಮುಂದಿನ ವರ್ಷದಿಂದಲೇ 8ನೇ ತರಗತಿ ಮಕ್ಕಳಿಗೆ ಸೈಕಲ್ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ಕೊಟ್ಟರು. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ‘ವಿಕ್ಷಿತ್ ಭಾರತ್ @2047: ಯುವಜನತೆಯ ಧ್ವನಿ’ ಚಾಲನೆ: ಸಾಕ್ಷಿಯಾದ ರಾಜ್ಯಪಾಲರು

    1-8ನೇ ತರಗತಿ ಮಕ್ಕಳಿಗೆ ನೀಡಲಾಗುತ್ತಿದ್ದ ಮೊಟ್ಟೆ, ಚಿಕ್ಕಿಯನ್ನು ನಮ್ಮ ಸರ್ಕಾರ ಬಂದ್ಮೇಲೆ 9 ಮತ್ತು 10ನೇ ತರಗತಿಗೂ ವಿಸ್ತರಿಸಿದ್ದೇವೆ. ಕಳೆದ ಸರ್ಕಾರದ ಅವಧಿಯಲ್ಲಿ ಸಮವಸ್ತ್ರ ಖರೀದಿಯಲ್ಲಿ ಕ್ವಾಲಿಟಿ ಸಮಸ್ಯೆ ಆಗಿದೆ. ಹಾಗಾಗಿ ಒಪನ್ ಟೆಂಡರ್ ಮೂಲಕ ಸಮವಸ್ತ್ರ ಖರೀದಿ ಆಗುತ್ತದೆ. ಈ ವರ್ಷದ ಟೆಂಡರ್ ಪ್ರಕ್ರಿಯೆ ಮುಗಿದು ಹೋಗಿದೆ. ಮುಂದಿನ ವರ್ಷದಿಂದ ಉತ್ತಮ ಕ್ವಾಲಿಟಿ ಸಮವಸ್ತ್ರ ನೀಡಲು ಕ್ರಮವಹಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕೈ ಜಿಲ್ಲಾಧ್ಯಕ್ಷನ ಮೇಲೆ 50 ಲಕ್ಷ ವಂಚನೆ ಆರೋಪ- ನ್ಯಾಯ ಸಿಗದಿದ್ರೆ ಆತ್ಮಹತ್ಯೆಯ ಎಚ್ಚರಿಕೆ