ಚಿತ್ರದುರ್ಗ: ಇಂದು ನಗರದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಪ್ರತಿಷ್ಠಾಪಿಸಿರುವ ಮಹಾಗಣಪತಿ (Mahaganapathi) ವಿಸರ್ಜನೆ & ಶೋಭಾಯಾತ್ರೆ ನಡೆಯಲಿದೆ.
4 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು ಚಿತ್ರದುರ್ಗ (Chitradurga) ನಗರ ಸಂಪೂರ್ಣ ಕೇಸರಿಮಯವಾಗಿದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರ ಪಥ ಸಂಚಲನ ನಡೆಸಲಾಯಿತು. ವಿಜ್ಞಾನ ಕಾಲೇಜ್ ಮುಂಭಾಗದಿಂದ ಆರಂಭವಾಗುವ ಮೆರವಣಿಗೆ ಒಟ್ಟು ಮೂರೂವರೆ ಕಿಲೋಮೀಟರ್ ಕ್ರಮಿಸಿ ಚಂದ್ರವಳ್ಳಿ ಕೆರೆಯಲ್ಲಿ ಮೂರ್ತಿ ವಿಸರ್ಜನೆಯಾಗಿಲಿದೆ. ಇದನ್ನೂ ಓದಿ: ವಿಮಾನದಲ್ಲಿ ಭಾರತಕ್ಕೆ ಬರುತ್ತಿದೆ 8 ಚೀತಾ – ವಿಶೇಷತೆ ಏನು? ತಯಾರಿ ಹೇಗೆ?
ಭದ್ರತೆಗಾಗಿ 8ಕೆಎಸ್‍ಆರ್‌ಪಿ ತುಕಡಿಗಳು, 8 ಡಿಎಆರ್ ತುಕಡಿಗಳು ಸಜ್ಜಾಗಿವೆ. ಯಾವುದೆ ಅಹಿತಕರ ಘಟನೆ ನಡೆಯದಂತೆ ನಗರದ ನಾಲ್ಕು ಕಡೆ ನಾಕಾಬಂದಿ ಹಾಕಲಾಗಿದೆ. ಪ್ರಮುಖ ವೃತ್ತಗಳಲ್ಲಿ ವಾಚ್ ಟವರ್‌ಗಳಲ್ಲಿ ಸಿಸಿಟಿವಿ (CCTV) ಹಾಕಲಾಗಿದೆ. ನಗರದ ಶಾಲಾ-ಕಾಲೇಜುಗಳಿಗೆ (School-College) ಇಂದು ರಜೆ ಘೋಷಿಸಿ ಡಿಡಿಪಿಐ ರವಿಶಂಕರ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಸರ್ಕಾರಕ್ಕೆ ಜನ ಉಪಯೋಗಿ ಶಾಸಕರು, ಜನೋಪಯೋಗಿ ಮಂತ್ರಿಗಳು ಬೇಕು. ಮುನಿರತ್ನ, ಭೈರತಿ, ಗೋಪಾಲಯ್ಯ, ನಾಗೇಶ್ ಜನೋಪಯೋಗಿ ಮಂತ್ರಿಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವರನ್ನು ಹಾಡಿ ಹೊಗಳಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಪೀಣ್ಯದಲ್ಲಿ ಹೈಟೆಕ್ ಪದವಿ ಮತ್ತು ಪಿಯುಸಿ ಕಾಲೇಜ್, ಮಾದರಿ ಶಾಲೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸದಾ ಕಾಲ ಕ್ಷೇತ್ರದ ಜನರ ಬಗ್ಗೆ ಯೋಚನೆ ಮಾಡೋರು ಶಾಸಕ ಮುನಿರತ್ನ. ರಾಜರಾಜೇಶ್ವರಿ ಆಶೀರ್ವಾದ ಮುನಿರತ್ನ ಅವ್ರಿಗೆ ಇದೆ. ನಮಗೆ ಜನೋಪಯೋಗಿ ಶಾಸಕರು, ಜನೋಪಯೋಗಿ ಮಂತ್ರಿಗಳು ಬೇಕು. ಮುನಿರತ್ನ, ಭೈರತಿ, ಗೋಪಾಲಯ್ಯ, ನಾಗೇಶ್ ಜನೋಪಯೋಗಿ ಮಂತ್ರಿಗಳು. ದಕ್ಷತೆಯಿಂದ ಕೆಲಸ ಮಾಡ್ತಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ. ಬೆಂಗಳೂರನ್ನು ವಿಶ್ವದರ್ಜೆಯ ಸಿಟಿ ಮಾಡಲು ಮುಂದಾಗಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕ್ಷೇತ್ರದ ಅಭಿವೃದ್ಧಿಗೆ ಮನೆ ಮಗನಂತೆ ಕೆಲಸ ಮಾಡ್ತೀನಿ: ಮುನಿರತ್ನ
ನಾವು ಎರಡು ಪ್ರಮುಖ ಜಂಕ್ಷನ್ ಮಾಡ್ತಿದ್ದೇವೆ. ಗೊರಗುಂಟೆ ಪಾಳ್ಯ ಜಂಕ್ಷನ್ ಮಾಡ್ತಿದ್ದೇವೆ. ಹೆಬ್ಬಾಳ ಜಂಕ್ಷನ್ ಮಾಡಲು ಮಾಸ್ಟರ್ ಪ್ಲ್ಯಾನ್ ನಿರ್ಮಾಣ ಮಾಡಿದ್ದೇವೆ. ಶೀಘ್ರವೇ ಇಲ್ಲಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಕೊಡ್ತೀವಿ. ಮುನಿರತ್ನ ಡಿಗ್ರಿ, ಪಿಯುಸಿ ಕಾಲೇಜ್ ಕಟ್ಟಿ ಪುಣ್ಯದ ಕೆಲಸ ಮಾಡಿದ್ದಾರೆ. ಆಸ್ಪತ್ರೆ, ರಸ್ತೆ ನಿರ್ಮಾಣ ಮಾಡಿದ್ದಾರೆ. ಮುನಿರತ್ನ ದೂರದೃಷ್ಟಿ ಕೆಲಸ ಮಾಡಿದ್ದಾರೆ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಬಳಿಕ ಮಾತನಾಡಿದ ಸಚಿವ ಮುನಿರತ್ನ, 3,500 ವಿದ್ಯಾರ್ಥಿಗಳು ಓದುವ ವ್ಯವಸ್ಥೆ ಮಾಡಲಾಗಿದೆ. ನಾವು ಶಾಶ್ವತವಾಗಿ ಉಳಿಯೋದಿಲ್ಲ. ನಾವು ಮಾಡಿದ ಕೆಲಸ ಶಾಶ್ವತವಾಗಿ ಉಳಿಯಬೇಕು ಅಂತ ತಿಳಿಸಿದ್ರು. ಕ್ಷೇತ್ರದ ಅಭಿವೃದ್ಧಿಗೆ ಮನೆ ಮಗನಂತೆ ಕೆಲಸ ಮಾಡ್ತೀನಿ ಅಂತ ಭರವಸೆ ನೀಡಿದ್ರು. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ, ಮುನಿರತ್ನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಬೈರತಿ ಬಸವರಾಜ್, ಬಿ.ಸಿ ನಾಗೇಶ್, ಗೋಪಾಲಯ್ಯ ಭಾಗವಹಿಸಿದ್ದರು. ಇದನ್ನೂ ಓದಿ: ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಮಾಯಕರಲ್ಲ: ಸಿ.ಟಿ. ರವಿ
ಹೈಟೆಕ್ ಶಾಲಾ-ಕಾಲೇಜ್ ವಿಶೇಷತೆ:
ಪೀಣ್ಯದಲ್ಲಿ ಹೈಟೆಕ್ ಪದವಿ, ಪಿಯುಸಿ ಕಾಲೇಜ್ ಮತ್ತು ಮಾದರಿ ಶಾಲೆ ಕ್ಷೇತ್ರದ ಶಾಸಕರಾದ ಮುನಿರತ್ನ ಅವ್ರ ಆಸಕ್ತಿಯಿಂದ ಈ ಅತ್ಯಾಧುನಿಕ ಸರ್ಕಾರಿ ಶಾಲಾ-ಕಾಲೇಜ್‍ಗಳ ನಿರ್ಮಾಣ ಆಗಿದೆ. ಖಾಸಗಿ ಶಾಲಾ-ಕಾಲೇಜ್‍ಗಳಿಗೆ ಕಡಿಮೆ ಇಲ್ಲದಂತೆ ಈ ನೂತನ ಶಾಲಾ-ಕಾಲೇಜ್‍ಗಳ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅತ್ಯಾಧುನಿಕ ಲ್ಯಾಬ್ ವ್ಯವಸ್ಥೆ, ಸುಸಜ್ಜಿತವಾದ ಕೊಠಡಿಗಳು, ನುರಿತ ಶಿಕ್ಷಣ, ಉಪನ್ಯಾಸಕರ ವರ್ಗ, ವಿಶಾಲವಾದ ಆಟದ ಮೈದಾನ ಈ ಶಾಲಾ-ಕಾಲೇಜ್‍ಗಳು ಹೊಂದಿವೆ.
Live Tv
[brid partner=56869869 player=32851 video=960834 autoplay=true]
ಉಡುಪಿ/ಶಿವಮೊಗ್ಗ: ಹಿಜಬ್-ಕೇಸರಿ ವಿವಾದದ ನಡುವೆ ಹೈಕೋರ್ಟ್ ಆದೇಶ ಮೇಲೆ ಪಿಯುಸಿ, ಪದವಿ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ತೀರ್ಮಾನಿಸಿತು. ಆದರೆ ಇತ್ತ ಉಡುಪಿ ಮತ್ತು ಶಿವಮೊಗ್ಗದ ಕೆಲ ಕಾಲೇಜ್‍ಗಳ ಆಡಳಿತ ಮಂಡಳಿ ನಿರ್ಧಾರದಂತೆ ಕಾಲೇಜ್‍ಗೆ ರಜೆ ಘೋಷಿಸಲಾಗಿದೆ.
ಹಿಜಬ್-ಕೇಸರಿ ವಿವಾದ ಹೈಕೋರ್ಟ್‍ನಲ್ಲಿರುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಕಾಲೇಜುಗಳನ್ನು ತೆರೆಯಲು ಮುಂದಾಗಿತ್ತು. ಅಲ್ಲದೇ ಸರ್ಕಾರದ ಆದೇಶ ಪಾಲನೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಸ್ಪಷ್ಟ ಸಂದೇಶ ಕೂಡ ಶಾಲಾ-ಕಾಲೇಜುಗಳಿಗೆ ನೀಡಿತ್ತು. ಆದರೆ ರಾಜ್ಯದ ಕೆಲ ಶಾಲಾ-ಕಾಲೇಜ್‍ಗಳಲ್ಲಿ ವಿದ್ಯಾರ್ಥಿಗಳು ಹಿಜಬ್ ಧರಿಸಿಯೇ ಬಂದಿರುವುದು ಕಂಡುಬಂತು. ಇದನ್ನೂ ಓದಿ: ಹಿಜಬ್ ತೆಗೆಯಿರಿ ಅನ್ನೋದಕ್ಕೆ ಹೆತ್ತವರಿಗೆ ರೈಟ್ಸ್ ಇಲ್ಲ, ಅವನ್ಯಾವನು ಹೇಳೋಕೆ: ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿಯರು ರೆಬೆಲ್
ಉಡುಪಿಯಲ್ಲಿ ಆರಂಭವಾದ ಹಿಜಬ್ ಗಲಾಟೆ ರಾಜ್ಯದ್ಯಾಂತ ಹಬ್ಬಿದೆ. ಈ ನಡುವೆ ಉಡುಪಿಯಲ್ಲಿ ಮತ್ತೆ ಗೊಂದಲ ಜಟಾಪಟಿಗೆ ಅವಕಾಶ ಕೊಡದಿರಲು ನಿರ್ಧರಿಸಿ ನಗರದ ಎಂಜಿಎಂ ಪಿಯು ಕಾಲೇಜ್‍ಗೆ ಇನ್ನೆರಡು ದಿನ ರಜೆ ನೀಡಲು ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದೆ. ಕಾಲೇಜ್‍ಗೆ ರಜೆ ಘೋಷಿಸಿ ಉಪನ್ಯಾಸಕರು ಆನ್‍ಲೈನ್ ಕ್ಲಾಸ್ ಮುಂದುವರಿಸಿದ್ದಾರೆ. ಈಗಾಗಲೇ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮಾತ್ರ ಕಾಲೇಜ್‍ನಲ್ಲಿ ಮಾಡಲು ಎಂಜಿಎಂ ಕಾಲೇಜು ಆಡಳಿತ ಮಂಡಳಿ ತೀರ್ಮಾನಿಸಿದೆ. ಇದನ್ನೂ ಓದಿ: ಹಿಜಬ್ ವಿವಾದ – ಇಂದು ಹೈಕೋರ್ಟ್‌ನಲ್ಲಿ ಏನಾಯ್ತು..?
ಇತ್ತ ಶಿವಮೊಗ್ಗದಲ್ಲೂ ಕೂಡ ಮುಂಜಾಗ್ರತಾ ಕ್ರಮವಾಗಿ ಮೂರು ಕಾಲೇಜ್‍ಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಬಾಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಿ.ಹೆಚ್.ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್‍ಗೆ ರಜೆ ಘೋಷಿಸಿರುವ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳ 200 ಮೀ. ವ್ಯಾಪ್ತಿಯಲ್ಲಿ 4 ದಿನಗಳ ಕಾಲ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಿದೆ. ಜಿಲ್ಲೆಯ ಬಹುತೇಕ ಕಾಲೇಜ್‍ಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.