Tag: ಶಾಲಾ ಆಡಳಿತ ಮಂಡಳಿ

  • ಫೀಸ್ ಕಟ್ಟದ್ದರಿಂದ ಶಾಲೆಯಲ್ಲಿ ಅವಮಾನ – ವಿದ್ಯಾರ್ಥಿನಿ ಆತ್ಮಹತ್ಯೆ

    ಫೀಸ್ ಕಟ್ಟದ್ದರಿಂದ ಶಾಲೆಯಲ್ಲಿ ಅವಮಾನ – ವಿದ್ಯಾರ್ಥಿನಿ ಆತ್ಮಹತ್ಯೆ

    ಹೈದರಾಬಾದ್: ಶಾಲಾ ಶುಲ್ಕ ಪಾವತಿಸದೇ ಕಾರಣ ತರಗತಿಗೆ ಹಾಜರಾಗಲು ಅನುಮತಿ ನೀಡಿಲ್ಲ ಎಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ. ವಿದ್ಯಾರ್ಥಿನಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೂಲಿ ಕಾರ್ಮಿಕ ದಂಪತಿಯ ಮಗಳಾಗಿದ್ದಾಳೆ.

    ಈ ಕುರಿತಂತೆ ಬಾಲಕಿಯ ತಂದೆ ಹರಿಪ್ರಸಾದ್ ಶಾಲೆಯ ಒಟ್ಟು ಶುಲ್ಕ 37000 ರೂ ಆಗಿದ್ದು, ಅದರ ಒಂದು ಕಂತನ್ನು ಈಗಾಗಲೇ ಪಾವತಿಸಿದ್ದೆವು. ಆದರೆ ಲಾಕ್‍ಡೌನ್‍ನಿಂದಾಗಿ ಉಳಿದ 15,000 ರೂ.ಗಳನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಆದರೂ ಉಳಿದ ಹಣವನ್ನು ಫೆಬ್ರವರಿ 20ರ ಒಳಗೆ ಪಾವತಿಸುವುದಾಗಿ ಶಾಲಾ ಆಡಳಿತ ಮಂಡಳಿಗೆ ಮೊದಲೇ ತಿಳಿಸಿದ್ದೆವು. ಹೀಗಿದ್ದರೂ ತಮ್ಮ ಮಗಳಿಗೆ ಶುಲ್ಕ ಪಾವತಿಸುವಂತೆ ಅವರು ಒತ್ತಡ ಹೇರಿದ್ದಾರೆ ಎಂದು ಪೊಲೀಸರ ಬಳಿ ಶಾಲಾ ಆಡಳಿತ ಮಂಡಳಿ ವಿರುದ್ಧ ಆರೋಪಿಸಿದ್ದಾರೆ.

     

    ನಿನ್ನೆ ನನ್ನ ಮಗಳಿಗೆ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಶಿಕ್ಷಕರು ಶಾಲೆಯ ಶುಲ್ಕ ಪಾವತಿಸುವಂತೆ ನನಗೆ ಮತ್ತು ನನ್ನ ಮಗಳಿಗೆ ಕರೆ ಮಾಡಿ ಒತ್ತಡ ಹೇರುತ್ತಿದ್ದರು. ಶಿಕ್ಷಕರು ಕರೆ ಮಾಡುತ್ತಿದ್ದ ಕಾರಣ ತಾನು ಆಸ್ಪತ್ರೆಗೆ ಹೋಗಿರುವುದಾಗಿ ಸುಳ್ಳು ಹೇಳುವಂತೆ ಮಗಳು ನನಗೆ ತಿಳಿಸಿದಳು. ಅಲ್ಲದೆ ಶಾಲಾ ಶುಲ್ಕ ಪಾವತಿಸುವವರೆಗೂ ತರಗತಿಗೆ ಹಾಜರಾಗದಂತೆ ಬಾಲಕಿಗೆ ಎಚ್ಚರಿಕೆ ನೀಡಿರುವುದಾಗಿ ಹೇಳಿದ್ದಾರೆ.

    ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ನನ್ನ ಮಗಳು ಶಾಲಾ ಆಡಳಿತ ಮಂಡಳಿಯಿಂದ ಅವಮಾನಗೊಂಡು ನೇಣುಬಿಗಿದುಕೊಂಡು ಪ್ರಾಣಬಿಟ್ಟಿದ್ದಾಳೆ ಎಂದು ಬಾಲಕಿಯ ತಾಯಿ ಸಂಕಟ ವ್ಯಕ್ತಪಡಿಸಿದ್ದಾರೆ.

    ಇದೀಗ ಶಾಲಾ ಆಡಳಿತ ಮಂಡಳಿ ವಿರುದ್ದ ಪೊಲೀಸರು ದೂರು ದಾಖಲಿಸಿದ್ದು, ಘಟನೆ ವಿಚಾರವಾಗಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

  • ಶೈಕ್ಷಣಿಕ ಪ್ರವಾಸಕ್ಕೆ ಹೋದ ಹೈಸ್ಕೂಲ್ ಮಕ್ಕಳಿಂದ ಅಸಭ್ಯ ಹಾಡಿಗೆ ರೈನ್ ಡ್ಯಾನ್ಸ್

    ಶೈಕ್ಷಣಿಕ ಪ್ರವಾಸಕ್ಕೆ ಹೋದ ಹೈಸ್ಕೂಲ್ ಮಕ್ಕಳಿಂದ ಅಸಭ್ಯ ಹಾಡಿಗೆ ರೈನ್ ಡ್ಯಾನ್ಸ್

    ಯಾದಗಿರಿ: ಶೈಕ್ಷಣಿಕ ಪ್ರವಾಸಕ್ಕೆ ಹೋದ ಹೈಸ್ಕೂಲ್ ಮಕ್ಕಳು ಅಸಭ್ಯ ಹಾಡಿಗೆ ರೈನ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಇದು ವಿದ್ಯಾರ್ಥಿಗಳ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

    ಎರಡು ದಿನಗಳ ಹಿಂದೆ ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದ ವಿದ್ಯಾಲಕ್ಷ್ಮಿ ಖಾಸಗಿ ಶಾಲೆ ಮಕ್ಕಳನ್ನು ಆಡಳಿತ ಮಂಡಳಿ ಶೈಕ್ಷಣಿಕ ಪ್ರವಾಸಕ್ಕೆ ಎಂದು ಬಳ್ಳಾರಿಯ ಖಾಸಗಿ ಪಾರ್ಕಿಗೆ ಕರೆದುಕೊಂಡು ಹೋಗಿತ್ತು.

    ಶೈಕ್ಷಣಿಕ ಪ್ರವಾಸಕ್ಕೆ ಹೋದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಉತ್ತರ ಕರ್ನಾಟಕದ ಶೈಲಿಯ ಡಬಲ್ ಮಿನಿಂಗ್ ಹಾಡಿಗೆ ರೈನ್ ಡ್ಯಾನ್ಸ್ ಮಾಡಿಸಿದೆ. ‘ನಿನೆಗು ಬಂಗಾರ ಹತ್ತಾದ ಏನ್’ ಎಂಬ ಅಸಭ್ಯ ಹಾಡಿಗೆ ವಿದ್ಯಾರ್ಥಿಗಳು ರೈನ್ ಡ್ಯಾನ್ಸ್ ಮಾಡಿದ್ದಾರೆ.

    ವಿದ್ಯಾರ್ಥಿಗಳ ಡ್ಯಾನ್ಸ್ ಸಾಮಾಜಿಕ ಜಾಲತಾಣದ ವೈರಲ್ ಆಗಿದೆ. ಸಂಸ್ಕೃತಿ- ಸಂಸ್ಕಾರ ಕಲಿಸಬೇಕಾಗಿದ್ದ ಶಾಲೆ ಈ ರೀತಿಯ ಅಸಭ್ಯ ನೃತ್ಯಕ್ಕೆ ಮಕ್ಕಳಿಗೆ ಅನುಮತಿ ನೀಡಿದ್ದು, ವಿದ್ಯಾರ್ಥಿಗಳ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

  • ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಸಾರ್ವಜನಿಕರಿಂದಲೇ ಧರ್ಮದೇಟು

    ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಸಾರ್ವಜನಿಕರಿಂದಲೇ ಧರ್ಮದೇಟು

    ಧಾರವಾಡ: ಶಾಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸಾರ್ವಜನಿಕರೇ ಧರ್ಮದೇಟು ನೀಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಗಣಿತ ಶಿಕ್ಷಕ ಗಂಡು ಮಕ್ಕಳನ್ನು ತರಗತಿಯಿಂದ ಹೊರಗೆ ಕಳುಹಿಸಿ, ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಲ್ಲದೇ ತನ್ನ ಕೃತ್ಯವನ್ನು ಪೋಷಕರಿಗೆ ತಿಳಿಸಿದರೆ ಅವರನ್ನು ಕೊಲೆ ಮಾಡುವುದಾಗಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದು ಬಂದಿದೆ.

    ಶಿಕ್ಷಕ ವಿದ್ಯಾರ್ಥಿನಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಕೃತ್ಯದ ಬಗ್ಗೆ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದರೂ ಪ್ರಯೋಜನ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಂಗೆಟ್ಟ ಪೋಷಕರು ಶಾಲೆಯ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಆದರೆ ಆಡಳಿತ ಮಂಡಳಿ ಅಧ್ಯಕ್ಷರು ಗಂಭೀರವಾಗಿ ಪರಿಗಣಿಸದೇ ಶಿಕ್ಷಕನನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಇದರಿಂದ ರೋಸಿ ಹೋದ ಸಾರ್ವಜನಿಕರು ಇದ್ದಕ್ಕಿದ್ದಂತೆ ಶಾಲೆಗೆ ಬಂದು ಶಿಕ್ಷಕನಿಗೆ ಗೂಸಾ ಕೊಟ್ಟಿದ್ದಾರೆ.

    ಈ ವೇಳೆ ಶಿಕ್ಷಕ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ತನ್ನ ತಪ್ಪಿನ ಕುರಿತು ಶಾಲಾ ಆಡಳಿತ ಮಂಡಳಿಗೆ ಲಿಖಿತ ರೂಪದಲ್ಲಿ ಪತ್ರ ಬರೆದುಕೊಟ್ಟಿದ್ದಾನೆ. ಶಾಲಾ ಆಡಳಿತ ಮಂಡಳಿಯು ಶಿಕ್ಷಕನ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದೆ.