Tag: ಶಾರ್ಟ್ ಸಕ್ರ್ಯೂಟ್

  • ಶಾರ್ಟ್ ಸರ್ಕ್ಯೂಟ್- ಪೊರಕೆ, ಫಿನಾಯಿಲ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ

    ಶಾರ್ಟ್ ಸರ್ಕ್ಯೂಟ್- ಪೊರಕೆ, ಫಿನಾಯಿಲ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ

    ಹುಬ್ಬಳ್ಳಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಫಿನಾಯಿಲ್ ಹಾಗೂ ಪೊರಕೆ ತಯಾರಿಕೆ ಕಾರ್ಖಾನೆಗೆ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ಫಿನಾಯಿಲ್ ಹಾಗೂ ಪೊರಕೆಗಳು ಸುಟ್ಟು ಕರಕಲಾದ ಘಟನೆ ಹುಬ್ಬಳ್ಳಿಯ ಸಮೀಪದ ಶೇರವಾಡ ಗ್ರಾಮದ ಬಳಿಯ ವಿಭವ್ ಇಂಡಸ್ಟ್ರೀಯಲ್ ನಲ್ಲಿ ನಡೆದಿದೆ.

    ಸಂಜೆ ವಿದ್ಯುತ್ ನಲ್ಲಿ ವ್ಯತ್ಯಯ ಉಂಟಾದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಫ್ಯಾಕ್ಟರಿ ಹೊತ್ತಿ ಉರಿದಿದೆ. ಸ್ಥಳಕ್ಕೆ ಕುಂದಗೋಳ ಹಾಗೂ ಹುಬ್ಬಳ್ಳಿಯ ನಾಲ್ಕು ಅಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿವೆ. ಬೆಂಕಿ ಅವಘಡದಿಂದ ಲಕ್ಷಾಂತರ ಮೌಲ್ಯದ ಫಿನಾಯಿಲ್ ಹಾಗೂ ಪೊರಕೆ ಸುಟ್ಟು ಕರಕಲಾಗಿವೆ. ವಿಜಯ ದಶಮಿ ಹಬ್ಬದ ಕಾರಣ ಫ್ಯಾಕ್ಟರಿ ಗೆ ರಜೆ ನೀಡಲಾಗಿತ್ತು. ಹೀಗಾಗಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

    ರಜೆ ಇದ್ದ ಕಾರಣ ಕಾರ್ಖಾನೆಯ ಒಳಗಡೆ ಹೆಚ್ಚು ಜನ ಕಾರ್ಮಿಕರು ಇರಲಿಲ್ಲ. ಹೀಗಾಗಿ ಬಹು ದೊಡ್ಡ ಅನಾಹುತ ತಪ್ಪಿದಂತಾಗಿದೆ. ಕಾರ್ಮಿಕರು ಎಂದಿನಂತೆ ಕಾರ್ಯ ನಿರ್ವಹಿಸುವ ವೇಳೆ ಬೆಂಕಿ ಹೊತ್ತಿಕೊಂಡಿದ್ದರೆ ಭಾರೀ ಅನಾಹುತವಾಗುವ ಸಂಭವವಿತ್ತು. ಹೀಗಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಬೆಂಕಿ ಬಿದ್ದ ತಕ್ಷಣ ಕಾರ್ಖಾನೆಯಲ್ಲಿದ್ದ ಕಾರ್ಮಿಕರು ಕೂಗಾಡಿದ್ದರ ಪರಿಣಾಮ ಹೆಚ್ಚಿನ ಹಾನಿಯನ್ನು ತಡೆಗಟ್ಟಲು ಸಾಧ್ಯವಾಗಿದೆ.

    ಗ್ರಾಮೀಣ ಠಾಣೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕಾರ್ಖಾನೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸೇರಿದ್ದಾಗಿದೆ.

  • ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ- ಪವಾಡ ಸದೃಶ ರೀತಿ ಪಾರಾದ ತಾ.ಪಂ.ಅಧ್ಯಕ್ಷ

    ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ- ಪವಾಡ ಸದೃಶ ರೀತಿ ಪಾರಾದ ತಾ.ಪಂ.ಅಧ್ಯಕ್ಷ

    ಗದಗ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕಾರಿನ ಮುಂಭಾಗ ಸಂಪೂರ್ಣ ಸುಟ್ಟಿದೆ. ಆದರೆ ಪವಾಡವೆಂಬಂತೆ ತಾಲೂಕು ಪಂಚಾಯತ್ ಅಧ್ಯಕ್ಷ ಪರಸಪ್ಪ ಇಮ್ಮಡಿ ಪಾರಾಗಿದ್ದಾರೆ.

    ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಬಟ್ಟೂರು ಬಳಿ ಘಟನೆ ನಡೆದಿದೆ. ಲಕ್ಷ್ಮೇಶ್ವರ ತಾಲೂಕು ಪಂಚಾಯಿತಿ ಅಧ್ಯಕ್ಷರ ಪರಸಪ್ಪ ಇಮ್ಮಡಿ ಅವರ ಡಸ್ಟರ್ ಕಾರಿನ ಮುಂಭಾಗ ಹಾಗೂ ಒಳಗಡೆಯ ಸೀಟ್‍ಗಳು ಸುಟ್ಟು ಕರಕಲಾಗಿವೆ. ಬಟ್ಟೂರಿನಿಂದ ಲಕ್ಷ್ಮೇಶ್ವರಕ್ಕೆ ಹೋಗುವ ವೇಳೆ ಆಡರಗಟ್ಟಿ ಬಳಿ ದಾರಿ ಮಧ್ಯೆ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಹೊತ್ತಿ ಉರಿದಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದ್ದು, ಡಸ್ಟರ್ ಕಾರು ಹೊತ್ತಿ ಉರಿದಿದೆ. ಆದರೆ ತಾಲೂಕು ಪಂಚಾಯಿತಿ ಅಧ್ಯಕ್ಷ ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ.

    ಸ್ವತಃ ಅಧ್ಯಕ್ಷ ಪರಸಪ್ಪ ಅವರೇ ವಾಹನ ಚಲಿಸುತ್ತಿದ್ದರು. ಬಟ್ಟೂರಿನಿಂದ ಲಕ್ಷ್ಮೇಶ್ವರಕ್ಕೆ ಹೋಗುವ ವೇಳೆ ಆಡರಗಟ್ಟಿ ಬಳಿ ದಾರಿ ಮಧ್ಯೆ ಏಕಾಏಕಿ ಕಾರು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಅಧ್ಯಕ್ಷ ಪರಸಪ್ಪ ಕ್ಷಣಾರ್ಧದಲ್ಲಿ ಪಾರಾಗಿದ್ದು, ಸ್ಥಳಿಯರು ಆಗಮಿಸಿ ಬೆಂಕಿ ನಂದಿಸಿದರು. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಶಾರ್ಟ್ ಸರ್ಕ್ಯೂಟ್- ಹಣ, ಬ್ಯಾಂಕ್ ದಾಖಲೆ ಬೆಂಕಿಗೆ ಆಹುತಿ

    ಶಾರ್ಟ್ ಸರ್ಕ್ಯೂಟ್- ಹಣ, ಬ್ಯಾಂಕ್ ದಾಖಲೆ ಬೆಂಕಿಗೆ ಆಹುತಿ

    ಬೆಳಗಾವಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಅವಘಡದಲ್ಲಿ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹೊತ್ತಿ ಉರಿದಿದೆ.

    ಶುಕ್ರವಾರ ತಡರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಕಿಯಿಂದಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹೊತ್ತಿ ಉರಿದ ಪರಿಣಾಮ ಬ್ಯಾಂಕ್ ನಲ್ಲಿದ್ದ ಹಣ ಮತ್ತು ದಾಖಲಾತಿಗಳು ಸುಟ್ಟು ಭಸ್ಮವಾಗಿವೆ.

    ಅಲ್ಲದೆ ಬ್ಯಾಂಕ್ ನಲ್ಲಿದ್ದ ಪೀಠೋಪಕರಣ, ಠೇವಣಿ, ಸಾಲದ ದಾಖಲೆ, ಕ್ಯಾಶ್ ಕೌಂಟಿಂಗ್ ಮಷೀನ್ ಬೆಂಕಿಗಾಹುತಿಯಾಗಿವೆ. ಬೆಂಕಿ ಹೊತ್ತಿಕೊಂಡ ನಂತರ ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ದಾಖಲೆಗಳು ಸುಟ್ಟು ಭಸ್ಮವಾಗಿದ್ದವು. ಕಿತ್ತೂರು ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ ಬಳಿಕ ಹಾನಿಯಾದ ಬಗ್ಗೆ ಸಮಗ್ರ ಮಾಹಿತಿ ತಿಳಿದು ಬರಲಿದೆ.

  • ಧಗಧಗನೆ ಹೊತ್ತಿ ಉರಿದ ಓಮ್ನಿ ಕಾರು

    ಧಗಧಗನೆ ಹೊತ್ತಿ ಉರಿದ ಓಮ್ನಿ ಕಾರು

    ತುಮಕೂರು: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಓಮ್ನಿ ಕಾರೊಂದು ಹೊತ್ತಿ ಉರಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಶಿರಾ ತಾಲೂಕಿನ ಬುಕ್ಕಾಪಟ್ಟಣದಲ್ಲಿ ಕಾರ್ ಬೆಂಕಿಗಾಹುತಿಯಾಗಿದೆ. ಬುಕ್ಕಾ ಪಟ್ಟಣದಿಂದ ಹಾಗಲವಾಡಿ ಮಾರ್ಗವಾಗಿ ಜಗದೀಶ್ ಪತ್ತಾರ್ ಅವರು ತಮ್ಮ ಓಮ್ನಿ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಇಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಇದನ್ನ ಗಮನಿಸಿದ ಚಾಲಕ ಮಂಜು ಪತ್ತಾರ್ ತಕ್ಷಣ ಕಾರು ನಿಲ್ಲಿಸಿ ಪರಿಶೀಲಿಸಿದ್ದಾರೆ. ಕಾರಿನಿಂದ ಜಗದೀಶ್ ಹಾಗೂ ಮಂಜು ಕೆಳಕ್ಕೆ ಇಳಿಯುತಿದ್ದಂತೆ ಕಾರು ಬೆಂಕಿ ಹೊತ್ತಿಕೊಂಡು ಉರಿದಿದೆ.

    ನೋಡ ನೋಡುತ್ತಿದ್ದಂತೆ ಕಾರು ಸುಟ್ಟು ಭಸ್ಮವಾಗಿದೆ. ಘಟನೆಗೆ ವಾಹನದ ಒಳೆಗೆ ಆದ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಅಗ್ನಿ ಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದೆ. ಈ ಸಂಬಂಧ ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ಅನಾಹುತದಿಂದ ಸುಮಾರು 4 ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.

  • ಏಕಾಏಕಿ ಹೊತ್ತಿ ಉರಿದ ನಿಂತಿದ್ದ ಕಾರ್!

    ಏಕಾಏಕಿ ಹೊತ್ತಿ ಉರಿದ ನಿಂತಿದ್ದ ಕಾರ್!

    ಮಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ಕಾರೊಂದು ನಿಂತಿದ್ದ ಜಾಗದಲ್ಲಿಯೇ ಬೆಂಕಿ ಹತ್ತಿಕೊಂಡು ಧಗಧಗನೆ ಉರಿದು ಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಗುರುವಾರ ರಾತ್ರಿ 9.40ರ ಸುಮಾರಿಗೆ ಮಂಗಳೂರಿನ ಕಾವೂರಿನಲ್ಲಿ ಐ 20 ಹುಂಡೈ ಕಾರನ್ನು ನಿಲ್ಲಿಸಿ, ಅದರಲ್ಲಿದ್ದವರು ಅಲ್ಲಿಯೇ ಏನೋ ಖರೀದಿಗೆ ಹೋಗಿದ್ದರು. ಈ ವೇಳೆ ಬೆಂಕಿ ಹೊತ್ತಿಕೊಂಡಿದ್ದು ಎಲ್ಲರೂ ನೋಡ ನೋಡುತ್ತಿದ್ದಂತೆ ಜ್ವಾಲೆ ಉಗುಳುತ್ತಾ ಉರಿಯತೊಡಗಿದೆ.

    ಬಳಿಕ ಅಗ್ನಿಶಾಮಕ ದಳ, ಪೊಲೀಸರು ಸೇರಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಕಾರು ಸಂಪೂರ್ಣ ಉರಿದು ಹೋಗಿತ್ತು. ಕಾರು ಬಜ್ಪೆ ನಿವಾಸಿ ಜಯರಾಜ್ ಎಂಬವರಿಗೆ ಸೇರಿದ್ದಾಗಿದ್ದು, ಮಂಗಳೂರಿಗೆ ಆಗಮಿಸಿ ಹಿಂತಿರುಗಿ ಹೋಗುವ ಸಂದರ್ಭದಲ್ಲಿ ಈ ಅವಘಢ ಸಂಭವಿಸಿದೆ.

  • ಕೈಲಾಶ್ ಬಾರ್ ನಲ್ಲಿ ಅಗ್ನಿ ದುರಂತ ಪ್ರಕರಣ – ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ಪರಿಹಾರ

    ಕೈಲಾಶ್ ಬಾರ್ ನಲ್ಲಿ ಅಗ್ನಿ ದುರಂತ ಪ್ರಕರಣ – ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ಪರಿಹಾರ

    ಬೆಂಗಳೂರು: ನಗರದ ಬಾರ್ ಅಂಡ್ ರೆಸ್ಟೋರೆಂಟ್‍ವೊಂದರಲ್ಲಿ ಇಂದು ಬೆಳಗ್ಗಿನ ಜಾವ ಅಗ್ನಿ ದುರಂತ ಸಂಭವಿಸಿದ್ದು, ಕೈಲಾಶ್ ಬಾರ್ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಲಾಗಿದೆ.

    ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಇಂಥ ಘಟನೆ ನಡೆಯಬಾರದು. ಇದರ ಬಗ್ಗೆ ತನಿಖೆ ಪ್ರಾರಂಭವಾಗಿದೆ. ಬಾಗಿಲ ಹತ್ತಿರ ಯುಪಿಎಸ್ ಇದೆ. ಅದರಿಂದಲೇ ಬೆಂಕಿ ಬಂದಿರೋ ಸಾಧ್ಯತೆಯಿದೆ. ತನಿಖೆ ನಡೆದ ನಂತರ ಏನು ಎಂಬುದು ಗೊತ್ತಾಗುತ್ತೆ ಅಂತ ಹೇಳಿದ್ದಾರೆ.

    ಇನ್ನು ಘಟನಾ ಸ್ಥಳಕ್ಕೆ ಗೃಹಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾರ್‍ನಲ್ಲಿ ಕೆಲಸ ಮಾಡುವಾಗ ಸುರಕ್ಷಾ ಕ್ರಮ ಅಳವಡಿಕೆ ಕಡ್ಡಾಯ. ಅಬಕಾರಿ ಇಲಾಖೆ, ಪಾಲಿಕೆ ಇದನ್ನೆಲ್ಲಾ ಗಮನಿಸುತ್ತದೆ ಎಂದರು. ಘಟನೆಗೆ ಸಂಬಂಧಿಸಿದಂತೆ ಬಾರ್ ಮಾಲೀಕ ಆರ್.ವಿ.ದಯಾಶಂಕರ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, 15 ದಿನಗಳೊಳಗಾಗಿ ಉತ್ತರ ನೀಡುವಂತೆ ನೋಟೀಸ್ ನೀಡಲಾಗಿದೆ.

    ಎಫ್‍ಎಸ್‍ಎಲ್, ವಿದ್ಯುತ್ ಪರಿವೀಕ್ಷಣಾ ತಂಡ ಮತ್ತು ಅಗ್ನಿಶಾಮಕ ಅಧಿಕಾರಿಗಳಿಂದ ಕೈಲಾಶ್ ಬಾರ್ ಪರಿಶೀಲನೆ ನಡೆಯುತ್ತಿದ್ದು, ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂದು ಹುಡುಕಾಟ ನಡೆಸಲಾಗಿದೆ. ಇನ್ನು ಸುಟ್ಟು ಕರಕಲಾದ ಐವರ ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಮೃತ ಯುವಕರ ಆಕ್ರಂದನ ಮುಗಿಲುಮುಟ್ಟಿದೆ.

    ಏನಿದು ಘಟನೆ?: ಮುಂಬೈ ರೀತಿಯಲ್ಲೇ ನಗರದ ಕೈಲಾಶ್ ಬಾರ್ ನಲ್ಲಿ ಇಂದು ಬೆಳಗಿನ ಜಾವ ಸುಮಾರು 2.30ಕ್ಕೆ ನಡೆದ ದುರಂತದಲ್ಲಿ ಕೆಲಸದ ಬಳಿಕ ನಿದ್ರೆ ಜಾರಿದ್ದ ಐವರು ಕಾರ್ಮಿಕರು ಸಜೀವ ದಹನವಾಗಿದ್ದರು. ಮೃತರನ್ನು ತುಮಕೂರು ಮೂಲದ ಸ್ವಾಮಿ(23), ಪ್ರಸಾದ್(20), ಮಹೇಶ್ (35), ಹಾಸನದ ಮಂಜುನಾಥ್ ( 45), ಮಂಡ್ಯದ ಕೀರ್ತಿ(24) ಎಂದು ಗುರುತಿಸಲಾಗಿದೆ.

    ಕೆಲಸದ ಬಳಿಕ ಅಲ್ಲಿಯ ನೌಕರರು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದು, ಸಜೀವ ದಹನಗೊಂಡಿದ್ದಾರೆ. ಬಾರ್ ಕಟ್ಟಡ ಸುಮಾರು 20 ರಿಂದ 30 ವರ್ಷಗಳ ಹಳೆಯದು ಎಂದು ತಿಳಿದು ಬಂದಿದೆ. ಹಾಗಾಗಿ ಕಟ್ಟಡದಲ್ಲಿ ಯಾವುದೇ ತುರ್ತು ನಿರ್ಗಮನ ದ್ವಾರ ಇಲ್ಲದ ಕಾರಣ ಐವರು ಸಜೀವ ದಹನವಾಗಿದ್ದಾರೆ. ಮೊದಲಿಗೆ ಕಟ್ಟಡದ ಸಾಕಷ್ಟು ವೈರ್‍ಗಳಿರುವ ಜಂಕ್ಷನ್ ಬಾಕ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ರಮೇಣ ಕಟ್ಟಡಕ್ಕೆ ಬೆಂಕಿ ಆವರಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

    https://www.youtube.com/watch?v=q1xbVb4mm4I

  • ವೈಟಿಪಿಎಸ್ ನಲ್ಲಿ ವಿದ್ಯುತ್ ಅವಘಡ- ಕಾರ್ಮಿಕನ ಸ್ಥಿತಿ ಗಂಭೀರ

    ವೈಟಿಪಿಎಸ್ ನಲ್ಲಿ ವಿದ್ಯುತ್ ಅವಘಡ- ಕಾರ್ಮಿಕನ ಸ್ಥಿತಿ ಗಂಭೀರ

    ರಾಯಚೂರು: ವಿದ್ಯುತ್ ಅವಘಡದಿಂದಾಗಿ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ವೈಟಿಪಿಎಸ್)ನಲ್ಲಿ ನಡೆದಿದೆ.

    ಸ್ವಿಚ್ ಗೇರ್ ನಲ್ಲಿ ಬೋರ್ಡ್ ಬದಲಿಸುವ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಕೆಎಎಸ್‍ಎಲ್ ಕಂಪನಿ ಗುತ್ತಿಗೆ ಕಾರ್ಮಿಕ ಮಹೇಶ್ ಗಾಯಗೊಂಡಿದ್ದಾರೆ. ಹೊಟ್ಟೆ, ತೊಡೆ, ಕಾಲಿನ ಭಾಗ ಭಾಗಶ: ಸುಟ್ಟಿದ್ದು, ಮಹೇಶ್ ಸ್ಥಿತಿ ಗಂಭೀರವಾಗಿದೆ.

    ರಾಯಚೂರಿನ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಮಹೇಶ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಸೌಲಭ್ಯ ಹಾಗೂ ವೈದ್ಯರಿಲ್ಲದ ಕಾರಣ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ವೈಟಿಪಿಎಸ್ ಹಾಗೂ ಉಪ ಗುತ್ತಿಗೆ ಪಡೆದಿರುವ ಕೆಎಎಸ್‍ಎಲ್ ಕಂಪನಿ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನ ಕೈಗೊಳ್ಳದಿರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕನಿಷ್ಠ ಮಟ್ಟದ ಸುರಕ್ಷತೆಯೂ ಇಲ್ಲದೆ ವಿದ್ಯುತ್ ಕೆಲಸ ಮಾಡುತ್ತಿದ್ದರಿಂದ ಹೆಚ್ಚು ಗಾಯಗಳಾಗಿವೆ.

    ಘಟನೆಯಿಂದ ಭಯಭೀತರಾಗಿರುವ ವೈಟಿಪಿಎಸ್ ಸಿಬ್ಬಂದಿ ಹಾಗೂ ಕಾರ್ಮಿಕರು ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

  • ಭಾರೀ ಅಗ್ನಿ ಅವಘಡದಿಂದ ಬೆಂಗ್ಳೂರಿನ 4 ಅಂತಸ್ತಿನ ಗಾರ್ಮೆಂಟ್ಸ್ ಧಗಧಗ

    ಭಾರೀ ಅಗ್ನಿ ಅವಘಡದಿಂದ ಬೆಂಗ್ಳೂರಿನ 4 ಅಂತಸ್ತಿನ ಗಾರ್ಮೆಂಟ್ಸ್ ಧಗಧಗ

    ಬೆಂಗಳೂರು: ನಗರದ ಕೋಣನಕುಂಟೆ ಕ್ರಾಸ್ ಬಳಿಯ ಗಾರ್ಮೆಂಟ್ಸ್ ನಲ್ಲಿ ರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.

    ಮೆಟ್ರೋ ಹಿಂಭಾಗದಲ್ಲಿರುವ ಲೊವೆಬಲ್ ಲಾಂಜರಿ ಗಾರ್ಮೆಂಟ್ಸ್ ನಲ್ಲಿ ಶಾರ್ಟ್ ಸರ್ಕ್ಯೂ ಟ್‍ನಿಂದ ಬೆಂಕಿಹೊತ್ತಿಕೊಂಡು ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಆವರಿಸಿಕೊಂಡಿತ್ತು.

    ಸುಮಾರು 300ಕ್ಕೂ ಹೆಚ್ಚು ಮಂದಿ ಕೆಲಸ ನಿರ್ವಹಿಸುತ್ತಿರುವ ಈ ಗಾರ್ಮೆಂಟ್ಸ್ ನಲ್ಲಿ ಬೆಂಕಿಹೊತ್ತಿಕೊಂಡಾಗ ಅದೃಷ್ಟವಶಾತ್ ಯಾರು ಇಲ್ಲದಿದ್ದರಿಂದ ಯಾವುದೇ ಸಾವು ನೋವು ಸಂಭವಿಸಲಿಲ್ಲ. ಆದ್ರೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.

    ಸ್ಥಳಕ್ಕೆ ಧಾವಿಸಿದ 14ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟವು. ಅಶೋಕ್ ರೆಡ್ಡಿ ಎಂಬವ್ರಿಗೆ ಈ ಗಾರ್ಮೆಂಟ್ಸ್ ಸೇರಿದೆ ಅಂತ ತಿಳಿದುಬಂದಿದೆ.

    https://www.youtube.com/watch?v=DJtNliKAIns&feature=youtu.be

  • ಬೇಕರಿ, ಮೊಬೈಲ್ ಶಾಪ್ ಸೇರಿದಂತೆ 5 ಅಂಗಡಿಗಳಿಗೆ ಬೆಂಕಿ- ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

    ಬೇಕರಿ, ಮೊಬೈಲ್ ಶಾಪ್ ಸೇರಿದಂತೆ 5 ಅಂಗಡಿಗಳಿಗೆ ಬೆಂಕಿ- ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

    ಕಲಬುರಗಿ: ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಗಳಿಗೆ ಬೆಂಕಿ ಹತ್ತಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.

    ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ಈ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಬೇಕರಿ, ಮೊಬೈಲ್ ಶಾಪ್ ಸೇರಿದಂತೆ ಐದು ಅಂಗಡಿಗಳಿಗೆ ಬೆಂಕಿ ತಗುಲಿದೆ.

    ಒಟ್ಟಿನಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದು, ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.