Tag: ಶಾರ್ಟ್ಸ್

  • ಶಾರ್ಟ್ಸ್ ಧರಿಸಿದ್ದಕ್ಕೆ ಬ್ಯಾಂಕ್ ಒಳಗೆ ಬಿಡದ SBI ಸಿಬ್ಬಂದಿ

    ಶಾರ್ಟ್ಸ್ ಧರಿಸಿದ್ದಕ್ಕೆ ಬ್ಯಾಂಕ್ ಒಳಗೆ ಬಿಡದ SBI ಸಿಬ್ಬಂದಿ

    ಕೋಲ್ಕತ್ತಾ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‍ಬಿಐ) ಬ್ಯಾಂಕ್ ಗೆ ಗ್ರಾಹಕ ಇತ್ತೀಚೆಗೆ ಶಾರ್ಟ್ಸ್ ಧರಿಸಿದ್ದರಿಂದ ಅವರನ್ನು ಒಳಗೆ ಪ್ರವೇಶಿಸಲು ನಿರಾಕರಿಸಲಾಗಿದೆ.

    ಬ್ಯಾಂಕ್ ಒಳಗೆ ಪ್ರವೇಶಿಸಲು ಶಾರ್ಟ್ಸ್ ಯೋಗ್ಯವಲ್ಲ, ಪ್ಯಾಂಟ್ ಧರಿಸಿ ನಂತರ ನೀವು ಬನ್ನಿ ಎಂದು ಎಸ್‍ಬಿಐ ಸಿಬ್ಬಂದಿ ಗ್ರಾಹಕನ ಬಳಿ ಜಗಳವಾಡಿ ಅಲ್ಲಿಂದ ಕಳುಹಿಸಿದ್ದಾರೆ. ಈ ಹಿನ್ನೆಲೆ ಕೋಪಕೊಂಡ ಕೋಲ್ಕತ್ತಾದದ ಗ್ರಾಹಕ ಆಶಿಶ್ ಟ್ವಿಟ್ಟರ್ ನಲ್ಲಿ ಎಸ್‍ಬಿಐ ಅನ್ನು ಟ್ಯಾಗ್ ಮಾಡಿದ್ದು, ಬ್ಯಾಂಕ್‍ಗೆ ಭೇಟಿ ನೀಡಲು ಡ್ರೆಸ್ ಕೋಡ್ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

    ಈ ಕುರಿತು ಟ್ವಟ್ಟರ್ ನಲ್ಲಿ ವಿವರವಾಗಿ ಬರೆದ ಆಶಿಶ್, ಡ್ರೆಸ್ ಕೋಡ್ ವಿಚಾರದಲ್ಲಿ ನನಗೂ ಮತ್ತೆ ಬ್ಯಾಂಕ್ ಸಿಬ್ಬಂದಿಗೂ ವಾಗ್ವಾದ ನಡೆಯಿತು. ಈ ವೇಳೆ ನಾನು ನನ್ನ ಖಾತೆಯನ್ನು ಮುಚ್ಚಲು ಬ್ಯಾಂಕ್‍ಗೆ ಹೋಗಿದ್ದೆ. ನಾನು ಹೋಗಿ ಇನ್ನೂ ಯಾವುದೇ ರೀತಿ ಅಲ್ಲಿ ಮಾತು ಸಹ ಹಾಡಿರಲಿಲ್ಲ. ಶಾಖೆಯನ್ನು ಪ್ರವೇಶಿಸಿದ ತಕ್ಷಣ, ನನ್ನನ್ನು ಶಾಟ್ರ್ಸ್ ಧರಿಸಿದ್ದಿರಾ, ಪ್ಯಾಂಟ್‍ನಲ್ಲಿ ಬನ್ನಿ ಎಂದು ಸಿಬ್ಬಂದಿ ಹೇಳಿದನು. ನಾನು ಈ ನಿಯಮವನ್ನು ಎಲ್ಲಿ ಬರೆದಿಲ್ಲ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದೆ. ಆದರೆ ಆತ ನನ್ನ ಬಳಿ ಜಗಳವಾಡಲು ಪ್ರಾರಂಭಿಸಿದ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:  ಕ್ರಿಸ್‍ಮಸ್ ಮೆರವಣೆಗೆಯಲ್ಲಿ ಭಾರೀ ಅಪಘಾತ – 20 ಜನರಿಗೆ ತೀವ್ರಗಾಯ

    ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ನೆಟ್ಟಿಗರು, ಬ್ಯಾಂಕ್‍ನ ಇತರ ಶಾಖೆಗಳಲ್ಲಿ ತಮಗೆ ಆದ ಇದೇ ರೀತಿಯ ಘಟನೆಯನ್ನು ಹಂಚಿಕೊಂಡಿದ್ದಾರೆ.

    ಆಶಿಶ್ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಎಸ್‍ಬಿಐ, ನಾವು ನಿಮ್ಮ ಕಾಳಜಿಯನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತು ಗೌರವಿಸುತ್ತೇವೆ. ನಮ್ಮ ಗ್ರಾಹಕರಿಗೆ ಯಾವುದೇ ನೀತಿ ಅಥವಾ ನಿಗದಿತ ಡ್ರೆಸ್ ಕೋಡ್ ಇಲ್ಲ. ಅವರು ತಮ್ಮ ಆಯ್ಕೆಯ ಪ್ರಕಾರ ಡ್ರೆಸ್ ಮಾಡಬಹುದು ಮತ್ತು ಬ್ಯಾಂಕ್ ಶಾಖೆಯಂತಹ ಸಾರ್ವಜನಿಕ ಸ್ಥಳಕ್ಕಾಗಿ ಸ್ಥಳೀಯವಾಗಿ ಸ್ವೀಕಾರಾರ್ಹವಾದ ಸಂಪ್ರದಾಯ ಮತ್ತು ಸಂಸ್ಕøತಿಯನ್ನು ಪರಿಗಣಿಸಬಹುದು. ನೀವು ಈ ಸಮಸ್ಯೆಯನ್ನು ಎದುರಿಸಿದ ಶಾಖೆಯ ಕೋಡ್ ಅಥವಾ ಹೆಸರನ್ನು ಹಂಚಿಕೊಳ್ಳಲು ನಾವು ನಿಮ್ಮನ್ನು ವಿನಂತಿಸುತ್ತೇವೆ. ನಾವು ಇದನ್ನು ಪರಿಶೀಲಿಸುತ್ತೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯ

  • ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟು ಅತ್ತೆ ಮನೆಗೆ ಹೊರಟ ಬಿಗ್‍ಬಾಸ್ ಸ್ಪರ್ಧಿ

    ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟು ಅತ್ತೆ ಮನೆಗೆ ಹೊರಟ ಬಿಗ್‍ಬಾಸ್ ಸ್ಪರ್ಧಿ

    – ವೀಡಿಯೋ ವೈರಲ್, ನಟಿ ವಿರುದ್ಧ ನೆಟ್ಟಿಗರ ಕಿಡಿ

    ಮುಂಬೈ: ನಟಿ, ಗಾಯಕಿ ಜಸ್ಲೀನ್ ಮಾಥಾರೂ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದೆ.

    ವಧು ರೀತಿಯಲ್ಲಿ ಡ್ರೆಸ್ ಮಾಡಿಕೊಂಡ ನಟಿ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟು ಪೋಸ್ ನೀಡಿರುವ ವೀಡಿಯೋವನ್ನ ಜಸ್ಲೀನ್ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಧುವಿನಂತೆ ರೆಡ್ ದುಪ್ಪಟಾ, ರೆಡ್ ಟಾಪ್, ಬಿಂದಿ, ಆಭರಣ ಧರಿಸಿರುವ ಜಸ್ಲೀನ್, ಲೆಹೆಂಗಾ ಬದಲು ತಿಳಿ ನೀಲಿ ಬಣ್ಣದ ಶಾರ್ಟ್ಸ್ ಧರಿಸಿ ಅತ್ತೆಯ ಮನೆಗೆ ಹೊರಟಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಇದೀಗ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪ್ರಚಾರಕ್ಕಾಗಿ ಭಾರತೀಯ ಸಂಸ್ಕ್ರತಿಗೆ ಧಕ್ಕೆಯುಂಟು ಮಾಡಿದ್ದೀರಿ. ಹಾಗಾಗಿ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕೆಂದು ಕೆಲ ನೆಟ್ಟಿಗರು ಆಗ್ರಹಿಸಿದ್ದಾರೆ. ಇನ್ನು ಹಲವರು ನಟಿಯ ವೀಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ.

    ಬಿಗ್‍ಬಾಸ್ ಸೀಸನ್ 12ರಲ್ಲಿ ಕಾಣಿಸಿಕೊಂಡಿದ್ದ ಜಸ್ಲೀನ್ ಹೆಚ್ಚು ಸದ್ದು ಮಾಡಿದ್ದರು. ಬಿಗ್‍ಬಾಸ್ ಮನೆಯಿಂದ ಹೊರ ಬಂದಾಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಜಸ್ಲೀನ್ ವೃತ್ತಿ ಮತ್ತು ಖಾಸಗಿ ಜೀವನದ ಮಾಹಿತಿಯನ್ನ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.

  • ಶಾರ್ಟ್ಸ್​​ನಲ್ಲಿ ದೇಗುಲಕ್ಕೆ ತೆರೆಳಿದ್ದ ಅಜಯ್ ದೇವಗನ್ ಟ್ರೋಲ್

    ಶಾರ್ಟ್ಸ್​​ನಲ್ಲಿ ದೇಗುಲಕ್ಕೆ ತೆರೆಳಿದ್ದ ಅಜಯ್ ದೇವಗನ್ ಟ್ರೋಲ್

    ಮುಂಬೈ: ಶಾರ್ಟ್ಸ್ ಧರಸಿ ದೇಗುಲಕ್ಕೆ ತೆರಳಿದ್ದ ಬಾಲಿವುಡ್ ನಟ ಅಜಯ್ ದೇವಗನ್ ಅವರನ್ನು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅಜಯ್ ಕಾಲೆಳೆದು ಮಜಾ ಪಡೆಯುತ್ತಿದ್ದಾರೆ.

    ಹೌದು. ದೇವರ ದರ್ಶಕ್ಕೆ ದೇವಾಲಯಗಳಿಗೆ ತೆರೆಳುವಾಗ ಸಾಮಾನ್ಯವಾಗಿ ಸಾಪ್ರದಾಯಿಕವಾಗಿ ಹೋಗುತ್ತಾರೆ. ಆದರೆ ನಟ ಅಜಯ್ ಅವರು ಶಾರ್ಟ್ಸ್​​ನಲ್ಲಿ ದೇಗುಲಕ್ಕೆ ಹೋಗಿ ಟ್ರೋಲ್ ಆಗುತ್ತಿದ್ದಾರೆ. ಮಾಂಧ್ವಿಯ ಶ್ರೀ ರಂಗನಾಥ ಮಹಾದೇವ ದೇವಾಲಯಕ್ಕೆ ಅಜಯ್ ಅವರು ಭೇಟಿ ನೀಡಿದ್ದರು. ಈ ವೇಳೆ ಸಾಂಪ್ರದಾಯಿಕ ಉಡುಗೆಯಲ್ಲಿ ಧರಿಸಿ ದೇವರ ದರ್ಶನ ಪಡೆದಿದ್ದರೆ ತೊಂದರೆಯಾಗುತ್ತಿರಲಿಲ್ಲ. ಆದರೆ, ಅವರು ಶಾರ್ಟ್ಸ್​​ ಹಾಕಿಕೊಂಡು ದೇವರ ದರ್ಶನ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ಅಲ್ಲದೆ ನೆಟ್ಟಿಗರಿಗೂ ಟ್ರೋಲ್ ಮಾಡಲು ಹೊಸ ವಿಷಯ ಸಿಕ್ಕಿದಂತಾಗಿದೆ.

    ನೀಲಿ ಟೀ ಶರ್ಟ್ ಮತ್ತು ಡೆನಿಮ್ ಶಾರ್ಟ್ಸ್​​ ಧರಿಸಿ ಶಿವ ಲಿಂಗದ ಮುಂದೆ ಕುಳಿತು ಅಜಯ್ ಪೂಜೆ ನೆರವೇರಿಸಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಅಜಯ್ ಅವರ ಈ ನಡೆಗೆ ಕೆಲವರು ವ್ಯಂಗ್ಯವಾಡಿದ್ದರೆ, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

    ಅಜಯ್ ದೇವಗನ್ ಅವರು ಯಾವುದೇ ಉಡುಪು ಧರಿಸಿ ಕುಳಿತು ಪೂಜೆ ಮಾಡುವ ಸ್ವಾತಂತ್ರ್ಯ ಅವರಿಗೆ ಇದೆ. ಆದರೆ, ಇದೇ ದೇವಾಲಯದಲ್ಲಿ ಜನಸಾಮಾನ್ಯರಿಗೆ ಇಂತಹ ಹಕ್ಕು ಇರುವುದಿಲ್ಲ. ಇದು ಸತ್ಯದ ಸಂಗತಿಯಾಗಿದ್ದು, ನೋವುಂಟು ಮಾಡುತ್ತದೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು ಅಜಯ್ ಅವರು ಶಾರ್ಟ್ಸ್​​ ಧರಿಸಿ ಮಹದೇವನ ಪೂಜೆ ನೆರವೇರಿಸಿರುವುದರಿಂದ ಪಾಪ ಬರುತ್ತದೆ. ಕನಿಷ್ಠ ಪಕ್ಷವಾದರೂ ಅವರು ದೇವರಿಗೆ ಗೌರವ ಕೊಡಬೇಕಿತ್ತು ಎಂದು ಕಿಡಿಕಾರಿದ್ದಾರೆ.

  • ಮದುವೆ ದಿನ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟ ವಧು- ಫೋಟೋ ವೈರಲ್

    ಮದುವೆ ದಿನ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟ ವಧು- ಫೋಟೋ ವೈರಲ್

    ಸಾಮಾನ್ಯವಾಗಿ ಮದುವೆ ಅಂತ ಅಂದಾಗ ಮದುಮಗಳು ದುಬಾರಿ ವೆಚ್ಚದ ಸಾರಿ ಅಥವಾ ಲೆಹೆಂಗಾ ಮುಂತಾದ ಬಟ್ಟೆಗಳನ್ನು ಕೊಂಡು ಹಾಕುವ ಮೂಲಕ ಮಿಂಚುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬಳು ವಧು ತನ್ನ ಮದುವೆಯ ದಿನ ಲೆಹೆಂಗಾ ಬ್ಲೌಸ್ ಹಾಕಿ ಸ್ಕರ್ಟ್ ಹಾಕೋ ಬದಲು ಶಾರ್ಟ್ಸ್ ಹಾಕುವ ಮೂಲಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾಳೆ.

    ಆದ್ರೆ ಮದುವೆ ಎಲ್ಲಿ ನಡೆದಿದೆ ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಫೋಟೋ ಮಾತ್ರ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.

    ಫೋಟೋದಲ್ಲಿ ವರ ಜೊತೆ ನಿಂತಿದ್ದ ವಧು ಕೆಂಪು ಬಣ್ಣದ ಲೆಹೆಂಗಾ ಬ್ಲೌಸ್, ದುಪ್ಪಟ್ಟ ತೊಟ್ಟು, ಚಿನ್ನಾಭರಣಗಳನ್ನು ಧರಿಸಿ ಚೆನ್ನಾಗಿಯೇ ಮಿಂಚುತ್ತಿದ್ದಾಳೆ. ಆದ್ರೆ ಲೆಹೆಂಗಾ ಸ್ಕರ್ಟ್ ತೊಡುವ ಬದಲು ಶಾರ್ಟ್ಸ್ ಹಾಕಿರುವುದರಿಂದ ಇದೀಗ ಈಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದಾಳೆ.

    ಈ ಫೋಟೋ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಗೆ ಅಪ್ಲೋಡ್ ಆದ ತಕ್ಷಣವೇ ಟಿಟ್ಟರಿಗರಲ್ಲಿ ಕೆಲವರು ಫನ್ನಿಯಾದ ಕಮೆಂಟ್ಸ್ ಗಳನ್ನು ಹಾಕಿದ್ದಾರೆ. ಕೆಲವರು ಈ ರೀತಿ ಚಡ್ಡಿ ಹಾಕಿ ಪೋಸು ಕೊಟ್ಟಿರೋದನ್ನು ಟೀಕಿಸಿದ್ದರೆ, ಇನ್ನು ಕೆಲವರು 15-20 ಕೆ.ಜಿ ತೂಕವಿರುವ ಲೆಹೆಂಗಾ ತೊಡುವ ಬದಲು ಚಡ್ಡಿ ಹಾಕುವ ಮೂಲಕ ಸಮಾಜದ ಸಂಪ್ರದಾಯದ ವಿರುದ್ಧ ಹೋಗಿರುವುದಕ್ಕೆ ಶ್ಲಾಘಿಸಿದ್ದಾರೆ.

    https://twitter.com/sagarcasm/status/869607318249287680?ref_src=twsrc%5Etfw&ref_url=http%3A%2F%2Fwww.hindustantimes.com%2Ffashion-and-trends%2Fthis-bride-wore-shorts-instead-of-a-lehenga-and-inspired-the-funniest-of-internet-jokes%2Fstory-uixTDyRPBcDQ6P8IufJDTK.html

    https://twitter.com/mailpp/status/869608616021467136?ref_src=twsrc%5Etfw&ref_url=http%3A%2F%2Fwww.hindustantimes.com%2Ffashion-and-trends%2Fthis-bride-wore-shorts-instead-of-a-lehenga-and-inspired-the-funniest-of-internet-jokes%2Fstory-uixTDyRPBcDQ6P8IufJDTK.html

    https://twitter.com/auntybharvi/status/869632068300525569?ref_src=twsrc%5Etfw&ref_url=http%3A%2F%2Fwww.hindustantimes.com%2Ffashion-and-trends%2Fthis-bride-wore-shorts-instead-of-a-lehenga-and-inspired-the-funniest-of-internet-jokes%2Fstory-uixTDyRPBcDQ6P8IufJDTK.html

    https://twitter.com/musical_sia/status/869525322479304706?ref_src=twsrc%5Etfw&ref_url=http%3A%2F%2Fwww.hindustantimes.com%2Ffashion-and-trends%2Fthis-bride-wore-shorts-instead-of-a-lehenga-and-inspired-the-funniest-of-internet-jokes%2Fstory-uixTDyRPBcDQ6P8IufJDTK.html