Tag: ಶಾರೂಖ್ ಖಾತ್

  • ಶಾರೂಖ್ ಖಾನ್ ಪುತ್ರನಾಗಿದ್ದರಿಂದ ಆರ್ಯನ್ ಖಾನ್ ಬಲಿಪಶು: ದಿಗ್ವಿಜಯ್ ಸಿಂಗ್

    ಶಾರೂಖ್ ಖಾನ್ ಪುತ್ರನಾಗಿದ್ದರಿಂದ ಆರ್ಯನ್ ಖಾನ್ ಬಲಿಪಶು: ದಿಗ್ವಿಜಯ್ ಸಿಂಗ್

    ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾತ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್‍ಗೆ ಸಂಬಂಧಿಸಿದಂತೆ ಎನ್ ಸಿಬಿಯಿಂದ ಬಂಧನಕ್ಕೊಳಗಾಗಿದ್ದಾನೆ. ಶಾರೂಖ್ ಖಾನ್ ಪುತ್ರನಾಗಿರುವುದರಿಂದ ಆತನನ್ನು ಬಲಿಪಶು ಮಾಡಲಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಶಾರೂಖ್ ಖಾನ್ ಪುತ್ರನಾಗಿರುವುದರಿಂದ ಆತನನ್ನು ಬಲಿಪಶು ಮಾಡಿರುವುದು ಬೇಸರವಾಗಿದೆ. ಆತನ ಅಪರಾಧ ಏನು? ಆತನ ಜೊತೆಯಲ್ಲಿದ್ದವನ ಬಳಿ 5 ಗ್ರಾಮ್ ಡ್ರಗ್ಸ್ ಸಿಕ್ಕಿದೆ. ಮುಂದ್ರಾ ಬಂದರಿನಲ್ಲಿ ಟನ್ ಗಟ್ಟಲೇ ವಶಕ್ಕೆ ಪಡೆದ ಹೆರಾಯಿನ್ ಬಗ್ಗೆ ಏನಾಯಿತು? ಕುಲದೀಪ್ ಸಿಂಗ್ ಯಾರು? ಎನ್‍ಸಿಬಿ ಮತ್ತು ಎನ್‍ಐಎ ಈ ಕೇಸ್ ಬಗ್ಗೆ ವಿಚಾರಣೆ ನಡೆಸುತ್ತಿದ್ದೆಯೇ ಎಂಬುದನ್ನು ನಮಗೆ ಹೇಳಲಿ ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸ್ವಿಮ್ಮಿಂಗ್‍ಪೂಲ್‍ನಲ್ಲಿ ಐರಾ, ಯಥರ್ವ್ ಮೋಜು ಮಸ್ತಿ

    ನ್ಯಾಯಾಲಯದ ಆದೇಶ ಕಾಯದೆ ಕಾಂಗ್ರೆಸ್ ಮುಖಂಡರೇ ತೀರ್ಪು ನೀಡಿದ್ದಾರೆ. ಅಂತಿಮವಾಗಿ ದಿಗ್ವಿಜಯ್ ಸಿಂಗ್ ಆರ್ಯನ್ ಖಾನ್ ರಕ್ಷಣೆಗೆ ಬಂದಿದ್ದಾರೆ. ತನಿಖಾ ತಂಡ ವಾಸ್ತವ ಅಂಶ ಪರಿಶೀಲಿಸುತ್ತಿರುವಾಗ ದಿಗ್ವಿಜಯ್ ಸಿಂಗ್ ತೀರ್ಪು ನೀಡಿದ್ದಾರೆ. ಇಂತಹ ತುಷ್ಟೀಕರಣ ರಾಜಕಾರಣ ಮಾಡುವ ಮೂಲಕ ಎಷ್ಟು ದಿನಗಳವರೆಗೆ ಜನರನ್ನು ನೀವು ಹಾದಿ ತಪ್ಪಿಸುತ್ತೀರಾ? ಎಂದು ಬಿಜೆಪಿ ಪ್ರಶ್ನಿಸಿದೆ ಎಂದು ದಿಗ್ವಿಜಯ್ ಹೇಳಿಕೆ ವಿರುದ್ಧ ಮಧ್ಯ ಪ್ರದೇಶ ಬಿಜೆಪಿ ಪ್ರತಿದಾಳಿ ನಡೆಸಿದೆ. ಇದನ್ನೂ ಓದಿ:  ಜೀವನದ ಹೊಸದೊಂದು ಹೆಜ್ಜೆ, ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ: ನಟಿ ಚಂದನಾ

    ಮುಂಬೈಯ ಕರಾವಳಿಯಲ್ಲಿ ಕ್ರೂಸ್ ಶಿಪ್ ಮೇಲೆ ಅಕ್ಟೋಬರ್ 3 ರಂದು ಎನ್‍ಸಿಬಿ ದಾಳಿಯ ನಂತರ ಆರ್ಯನ್ ಖಾನ್‍ನನ್ನು ಬಂಧಿಸಲಾಗಿದೆ. ಸದ್ಯ ಜೈಲಿನಲ್ಲಿರುವ ಆರ್ಯನ್ ಖಾನ್, ವಿಶೇಷ ಕೋರ್ಟ್ ಜಾಮೀನು ಅರ್ಜಿಯನ್ನು ನಿರಾಕರಿಸಿದ ನಂತರ ಬಾಂಬೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.