Tag: ಶಾರೂಕ್ ಖಾನ್

  • ಐಶ್ವರ್ಯಾ ಮ್ಯಾನೇಜರ್ ಜೀವ ಉಳಿಸಿದ ಶಾರೂಕ್ ಬಗ್ಗೆ ಸಲ್ಮಾನ್ ಪ್ರತಿಕ್ರಿಯೆ

    ಐಶ್ವರ್ಯಾ ಮ್ಯಾನೇಜರ್ ಜೀವ ಉಳಿಸಿದ ಶಾರೂಕ್ ಬಗ್ಗೆ ಸಲ್ಮಾನ್ ಪ್ರತಿಕ್ರಿಯೆ

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಅವರು ದೀಪಾವಳಿ ಪಾರ್ಟಿಯಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಮ್ಯಾನೇಜರ್ ಜೀವ ಉಳಿಸಿದ್ದರು. ಈ ಸುದ್ದಿ ಕೇಳುತ್ತಿದ್ದಂತೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಹೀರೋ ಎಂದು ಹೇಳುವ ಮೂಲಕ ಶಾರೂಕ್‍ರನ್ನು ಹೊಗಳಿದ್ದಾರೆ.

    ಸಲ್ಮಾನ್ ತನ್ನ ಇನ್‍ಸ್ಟಾಗ್ರಾಂನಲ್ಲಿ ಶಾರೂಕ್ ಖಾನ್ ನಟಿಸಿದ ‘ಹ್ಯಾಪಿ ನ್ಯೂ ಇಯರ್’ ಚಿತ್ರದ ಹಾಡಿನ ದೃಶ್ಯವೊಂದನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ, “ಬೆಂಕಿಯಲ್ಲಿ ಜಿಗಿದು ಅದನ್ನು ನಂದಿಸಿ ಬೇರೆಯವರನ್ನು ರಕ್ಷಿಸುವವನೇ ನಿಜವಾದ ಹೀರೋ” ಎಂದು ಸಲ್ಮಾನ್ ಹಿನ್ನೆಲೆ ಧ್ವನಿ ನೀಡಿದ್ದಾರೆ.

     

    View this post on Instagram

     

    @iamsrk

    A post shared by Chulbul Pandey (@beingsalmankhan) on

    ಶಾರೂಕ್ ನಟಿ ಐಶ್ವರ್ಯಾ ಮ್ಯಾನೇಜರ್ ಜೀವ ಉಳಿಸಿದ ಸುದ್ದಿ ವೈರಲ್ ಆಗುತ್ತಿತ್ತು. ಈ ಸುದ್ದಿ ತಿಳಿದ ಸಲ್ಮಾನ್ ಹ್ಯಾಪಿ ನ್ಯೂ ಇಯರ್ ಚಿತ್ರದ ‘ಮನವಾ ಲಾಗೆ’ ಹಾಡಿದ ದೃಶ್ಯವೊಂದನ್ನು ಪೋಸ್ಟ್ ಮಾಡಿ ಶಾರೂಕ್‍ರನ್ನು ಹೀರೋ ಎಂದು ಹೊಗಳಿದ್ದಾರೆ.  ಇದನ್ನೂ ಓದಿ: ಐಶ್ವರ್ಯಾ ಮ್ಯಾನೇಜರ್ ಜೀವ ಉಳಿಸಿ ನಿಜ ಜೀವನದಲ್ಲೂ ಹೀರೋ ಆದ ಶಾರೂಕ್

    ಆಗಿದ್ದೇನು?
    ದೀಪಾವಳಿ ಹಬ್ಬವಿದ್ದ ಹಿನ್ನೆಲೆಯಲ್ಲಿ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಬಾಲಿವುಡ್‍ನ ಹಲವು ಕಲಾವಿದರು ಸೇರಿದಂತೆ ಕ್ರಿಕೆಟ್ ಆಟಗಾರರು ಕೂಡ ಭಾಗಿಯಾಗಿದ್ದರು. ಐಶ್ವರ್ಯಾ ರೈ ಮ್ಯಾನೇಜರ್ ಅರ್ಚನಾ ಸದಾನಂದ್ ಅವರು ತಮ್ಮ ಮಗಳೊಂದಿಗೆ ಗಾರ್ಡನ್‍ನಲ್ಲಿ ನಿಂತಿದ್ದರು. ಈ ವೇಳೆ ಅವರು ಧರಿಸಿದ್ದ ಲೆಹೆಂಗಾಗೆ ಅಲ್ಲಿದ್ದ ದೀಪದ ಬೆಂಕಿಯ ಕಿಡಿ ತಾಕಿತ್ತು. ಇದನ್ನು ಗಮನಿಸಿದ ಶಾರೂಕ್ ತಕ್ಷಣ ತಾವು ಧರಿಸಿದ್ದ ಜಾಕೆಟ್ ಬಿಚ್ಚಿ ಬೆಂಕಿಯನ್ನು ಆರಿಸಿದ್ದರು.

    ಈ ಘಟನೆಯಲ್ಲಿ ಅರ್ಚನಾ ಅವರ ಕೈ ಹಾಗೂ ಬಲಗಾಲಿಗೆ ಶೇ. 15ರಷ್ಟು ಸುಟ್ಟು ಗಾಯವಾಗಿದೆ. ಅಲ್ಲದೆ ಶಾರೂಕ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಗೊಂಡಿರುವ ಅರ್ಚನಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು.

     

    View this post on Instagram

     

    Renowned publicist and Aishwarya Rai Bachchan’s manager of many years, Archana Sadanand’s lehenga caught fire from a Diwali Diya and while onlookers didn’t know what to do, superstar Shah Rukh Khan jumped to her rescue. While Archana and her daughter were present in the courtyard, her lehenga caught fire and when SRK noticed it, he took off his jacket to douse the flames with it. Reportedly, Archana sustained injuries in her right leg and hand while SRK too sustained minor burns which he got during his attempt to save her. Thankfully, because of the timely medical assistance and presence of ambulance nearby, Archana was immediately rushed to Nanavati Hospital in Vile Parle area. She was admitted to the ICU and visitors are not allowed to meet her as of now. She is recovering well, said the doctors. #archanasadanand #aishwaryaraibachchan #shahrukhkhan @viralbhayani

    A post shared by Viral Bhayani (@viralbhayani) on

  • ಐಶ್ವರ್ಯಾ ಮ್ಯಾನೇಜರ್ ಜೀವ ಉಳಿಸಿ ನಿಜ ಜೀವನದಲ್ಲೂ ಹೀರೋ ಆದ ಶಾರೂಕ್

    ಐಶ್ವರ್ಯಾ ಮ್ಯಾನೇಜರ್ ಜೀವ ಉಳಿಸಿ ನಿಜ ಜೀವನದಲ್ಲೂ ಹೀರೋ ಆದ ಶಾರೂಕ್

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್, ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಮ್ಯಾನೇಜರ್ ಜೀವ ಉಳಿಸಿ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ.

    ದೀಪಾವಳಿ ಹಬ್ಬವಿದ್ದ ಹಿನ್ನೆಲೆಯಲ್ಲಿ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಬಾಲಿವುಡ್‍ನ ಹಲವು ಕಲಾವಿದರು ಸೇರಿದಂತೆ ಕ್ರಿಕೆಟ್ ಆಟಗಾರರು ಕೂಡ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಶಾರೂಕ್, ಐಶ್ವರ್ಯಾ ರೈ ಅವರ ಮ್ಯಾನೇಜರ್ ಅವರನ್ನು ಬೆಂಕಿ ಅವಘಡದಿಂದ ಪಾರು ಮಾಡಿದ್ದಾರೆ.

    ಐಶ್ವರ್ಯಾ ರೈ ಮ್ಯಾನೇಜರ್ ಅರ್ಚನಾ ಸದಾನಂದ್ ಅವರು ತಮ್ಮ ಮಗಳೊಂದಿಗೆ ಗಾರ್ಡನ್‍ನಲ್ಲಿ ನಿಂತಿದ್ದರು. ಈ ವೇಳೆ ಅವರು ಧರಿಸಿದ್ದ ಲೆಹೆಂಗಾಗೆ ಅಲ್ಲಿದ್ದ ದೀಪದ ಬೆಂಕಿಯ ಕಿಡಿ ತಾಕಿತ್ತು. ಇದನ್ನು ಗಮನಿಸಿದ ಶಾರೂಕ್ ತಕ್ಷಣ ತಾವು ಧರಿಸಿದ್ದ ಜಾಕೆಟ್ ಬಿಚ್ಚಿ ಬೆಂಕಿಯನ್ನು ಆರಿಸುವ ಮೂಲಕ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ.

    ಈ ಘಟನೆಯಲ್ಲಿ ಅರ್ಚನಾ ಅವರ ಕೈ ಹಾಗೂ ಬಲಗಾಲಿಗೆ ಶೇ. 15ರಷ್ಟು ಸುಟ್ಟು ಗಾಯವಾಗಿದೆ. ಅಲ್ಲದೆ ಶಾರೂಕ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಗೊಂಡಿರುವ ಅರ್ಚನಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಶಾರೂಕ್ ಅವರ ಈ ಕಾರ್ಯಕ್ಕೆ ಅಲ್ಲಿದ್ದ ಕಲಾವಿದರು ಮೆಚ್ಚುಗೆ ಸೂಚಿಸಿದ್ದು, ಸಮಯ ಪ್ರಜ್ಞೆಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದೇ ವೇಳೆ ತಿಲಕ ಇಟ್ಟುಕೊಂಡು ಫೋಟೋ ಹಂಚಿಕೊಂಡಿದ್ದ ನಟ ಶಾರೂಕ್ ಖಾನ್ ಮುಸ್ಲಿಂ ಸಮುದಾಯದವರಿಂದ ಟೀಕೆಗೆ ಗುರಿಯಾಗಿದ್ದರು.

    ಶಾರೂಕ್ ಖಾನ್ ಅವರ ಪತ್ನಿ ಗೌರಿ ಅವರು ಹಿಂದೂ ಆಗಿದ್ದು, ಪ್ರತಿ ವರ್ಷ ಅವರ ಮನೆಯಲ್ಲಿ ಗಣೇಶ್ ಹಬ್ಬ ಸೇರಿದಂತೆ, ದೀಪಾವಳಿಯನ್ನು ಆಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಪುತ್ರ ಅಬ್ರಾಮ್ ಖಾನ್‍ರೊಂದಿಗೆ ಹಣೆಗೆ ತಿಲಕ ಇಟ್ಟು ಶಾರೂಕ್ ಖಾನ್ ಫೋಟೋ ಹಂಚಿಕೊಂಡಿದ್ದರು.

  • ಮಧ್ಯರಾತ್ರಿ ಶಾರೂಕ್‍ರನ್ನು ನೆನಪಿಸಿಕೊಂಡು ದೀಪಿಕಾ ಟ್ವೀಟ್

    ಮಧ್ಯರಾತ್ರಿ ಶಾರೂಕ್‍ರನ್ನು ನೆನಪಿಸಿಕೊಂಡು ದೀಪಿಕಾ ಟ್ವೀಟ್

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಮಧ್ಯರಾತ್ರಿ ಕಿಂಗ್‍ಖಾನ್ ಶಾರೂಕ್ ಅವರನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ.

    ಶಾರೂಕ್ ಖಾನ್ ಅವರು ತಮ್ಮ ಟ್ವಟ್ಟರಿನಲ್ಲಿ ಬ್ಲಾಕ್ ಅಂಡ್ ವೈಟ್ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಶಾರೂಕ್ ತಲೆಕೂದಲು ಚದುರಿ ಹೋಗಿದೆ. ಅಲ್ಲದೆ, “ನನ್ನ ಲೈಬ್ರರಿ ಕ್ಲೀನ್ ಮಾಡಲು ಇಡೀ ರಾತ್ರಿ ಬೇಕಾಯಿತು. ಪುಸ್ತಕಗಳಲ್ಲಿ ವಾಸನೆ, ಧೂಳು ಮತ್ತು ಸಂತೋಷವನ್ನು ಕಂಡೆ” ಎಂದು ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್ ನೋಡಿದ ದೀಪಿಕಾ, “ಹಲೋ. ನೀವು ನನಗೆ ಫೋನ್ ಮಾಡಬೇಕಿತ್ತು” ಎಂದು ಮಧ್ಯರಾತ್ರಿ ಸುಮಾರು 1.20ಕ್ಕೆ ರೀ-ಟ್ವೀಟ್ ಮಾಡಿದ್ದಾರೆ. ದೀಪಿಕಾ ಮಧ್ಯರಾತ್ರಿ ಟ್ವೀಟ್ ಮಾಡಿರುವುದನ್ನು ನೋಡಿದ ಅಭಿಮಾನಿಗಳು ಅವರ ಕಾಲೆಳೆಯುತ್ತಿದ್ದಾರೆ.

    https://twitter.com/deepikapadukone/status/1178759077851258887?ref_src=twsrc%5Etfw%7Ctwcamp%5Etweetembed%7Ctwterm%5E1178759077851258887&ref_url=https%3A%2F%2Fhindi.news18.com%2Fnews%2Fentertainment%2Fbollywood-deepika-padukone-tweeted-to-shahrukh-khan-you-were-supposed-to-call-me-2471620.html

    ಶಾರೂಕ್ ಹಾಗೂ ದೀಪಿಕಾ ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್ ಪ್ರೆಸ್’, ಹಾಗೂ ‘ಹ್ಯಾಪಿ ನ್ಯೂ ಇಯರ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಶಾರೂಕ್ ಖಾನ್ ಕಳೆದ ವರ್ಷ ಬಿಡುಗಡೆಯಾದ ‘ಝೀರೋ’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅವರು ಯಾವ ಚಿತ್ರದಲ್ಲೂ ನಟಿಸಿಲ್ಲ.

    ಇತ್ತ ದೀಪಿಕಾ ಪಡುಕೋಣೆ, ಮೇಘನಾ ಗುಲ್ಝಾರ್ ನಿರ್ದೇಶಿಸುತ್ತಿರುವ `ಚಾಪಕ್’ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಚಿತ್ರ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮೀ ಅಗರ್ ವಾಲ್ ಜೀವನಚರಿತ್ರೆ ಆಗಿದೆ. ಈ ಚಿತ್ರದ ನಂತರ ದೀಪಿಕಾ ಪಡುಕೊಣೆ ತಮ್ಮ ಪತಿ, ನಟ ರಣ್‍ವೀರ್ ಸಿಂಗ್ ಅವರ ಜೊತೆ ’83’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ನೀನು ಶಾರುಖ್ ಮಗಳು, ನಿನಗೆ ಈ ಶೋ ಆಫ್ ಅಗತ್ಯವಿಲ್ಲ – ನೆಟ್ಟಿಗರಿಂದ ಸುಹಾನಾಗೆ ತರಾಟೆ

    ನೀನು ಶಾರುಖ್ ಮಗಳು, ನಿನಗೆ ಈ ಶೋ ಆಫ್ ಅಗತ್ಯವಿಲ್ಲ – ನೆಟ್ಟಿಗರಿಂದ ಸುಹಾನಾಗೆ ತರಾಟೆ

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಇನ್‍ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋ ನೋಡಿದ ಶಾರುಖ್ ಅಭಿಮಾನಿಗಳು ಸುಹಾನಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಸುಹಾನಾ ಖಾನ್ ಹಾಟ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಸುಹಾನಾ ಅವರ ಎದೆ ಭಾಗ ಕಾಣುವಂತೆ ಒಂದು ಕೈಯಲ್ಲಿ ಕಾಫಿ ಕಪ್ ಹಾಗೂ ಮತ್ತೊಂದು ಕೈಯಲ್ಲಿ ಫೈಲ್ ಹಿಡಿದುಕೊಂಡು ಪೋಸ್ ನೀಡಿದ್ದಾರೆ.

     

    View this post on Instagram

     

    ❤️????

    A post shared by Suhana Khan (@suhanakhanoffcial) on

    ಈ ಫೋಟೋ ನೋಡಿ ಕೆಲವರು, ಇಷ್ಟೊಂದು ಶೋ ಆಫ್ ಮಾಡಬೇಡ. ನೀನು ಸಾಧಾರಣ ಉಡುಪು ಧರಿಸಿದರೂ ಸುಂದರವಾಗಿ ಕಾಣಿಸುತ್ತೀಯಾ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ನಿಮ್ಮ ಉಡುಪು ಸರಿ ಮಾಡಿಕೊಳ್ಳಿ. ನೀವು ಶಾರುಖ್ ಖಾನ್ ಅವರ ಮಗಳು. ನಿಮಗೆ ಈ ಶೋ ಆಫ್ ಅಗತ್ಯವಿಲ್ಲ ಎಂದು ಕಮೆಂಟ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

    ಸುಹಾನಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಸದ್ಯ ಸುಹಾನಾ ನ್ಯೂಯಾರ್ಕ್ ಯೂನಿರ್ವಸಿಟಿಯಲ್ಲಿ ನಟನೆ ಕಲಿಯಲು ದಾಖಲತಿ ಮಾಡಿಕೊಂಡಿದ್ದಾರೆ. ಈ ವೇಳೆ ಅವರು ತಮ್ಮ ಹೊಸ ಸ್ನೇಹಿತರ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  • ರೈಲ್ವೆ ನಿಲ್ದಾಣದಲ್ಲಿ ಹಲವು ಯುವತಿಯರನ್ನು ಪ್ರೀತಿಸಿದ್ದೇನೆ: ಶಾರುಖ್ ಖಾನ್

    ರೈಲ್ವೆ ನಿಲ್ದಾಣದಲ್ಲಿ ಹಲವು ಯುವತಿಯರನ್ನು ಪ್ರೀತಿಸಿದ್ದೇನೆ: ಶಾರುಖ್ ಖಾನ್

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ಅವರು ರೈಲ್ವೆ ನಿಲ್ದಾಣದಲ್ಲಿ ನಾನು ಹಲವು ಯುವತಿಯರನ್ನು ಪ್ರೀತಿಸಿದ್ದೇನೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.

    ಶುಕ್ರವಾರ ಶಾರುಖ್ ಖಾನ್ ಪೋಸ್ಟಲ್ ಕವರ್ ಉದ್ಘಾಟಿಸಲು ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಅವರು ತಾನು ಹಲವು ಸಿನಿಮಾಗಳಲ್ಲಿ ನಟಿಯರ ಜೊತೆ ರೈಲ್ವೆ ನಿಲ್ದಾಣದಲ್ಲಿ ರೊಮ್ಯಾನ್ಸ್ ಮಾಡಿದ್ದೇನೆ ಎಂದು ಹೇಳಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಶಾರುಖ್, “ಇಲ್ಲಿ ಇರಲು ನನಗೆ ತುಂಬಾ ಸಂತೋಷವಾಗುತ್ತಿದೆ. ಏಕೆಂದರೆ ರೈಲ್ವೆ ನಿಲ್ದಾಣದಲ್ಲಿ ನಾನು ಹಲವು ಯುವತಿಯರನ್ನು ಪ್ರೀತಿಸಿದ್ದೇನೆ. ಆದರೆ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ನಾನು ಯಾರನ್ನು ಪ್ರೀತಿಸರಲಿಲ್ಲ. ನನಗೆ ಇಲ್ಲಿ ಆಹ್ವಾನಿಸಿದಕ್ಕೆ ಧನ್ಯವಾದಗಳು. ಸದ್ಯ ನಾನು ಈಗ ಈ ರೈಲ್ವೆ ನಿಲ್ದಾಣ ನೋಡಿಕೊಂಡಿದ್ದೇನೆ, ನಟಿಯ ಜೊತೆ ಮಾತುಕತೆ ನಡೆಸಿ ಇಲ್ಲಿ ಬಂದು ಹೋಗುವುದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

    ಶಾರುಖ್ ಖಾನ್ ಅವರ ಹಲವು ಚಿತ್ರಗಳನ್ನು ರೈಲ್ವೆ ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದೆ. ಹಾಗಾಗಿ ಶಾರುಖ್ ಅವರು ಈ ಮಾತನ್ನು ಹೇಳಿದ್ದಾರೆ. 1998ರಲ್ಲಿ ಶಾರುಖ್ ಖಾನ್ ನಟಿಸಿದ ‘ದಿಲ್ ಸೇ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಶಾರುಖ್ ನಟಿ ಮನೀಷಾ ಕೊಯಿರಾಲಾ ಅವರನ್ನು ಮೊದಲು ರೈಲ್ವೆ ನಿಲ್ದಾಣದಲ್ಲಿ ಭೇಟಿ ಮಾಡುತ್ತಾರೆ. ಈ ವೇಳೆ ಅವರಿಗೆ ಮನೀಷಾ ಅವರ ಮೇಲೆ ಪ್ರೀತಿ ಆಗುತ್ತದೆ.

    ಇದಾದ ಬಳಿಕ 2013ರಲ್ಲಿ ‘ಚೆನ್ನೈ ಎಕ್ಸ್ ಪ್ರೆಸ್’ ಚಿತ್ರದಲ್ಲಿ ಶಾರುಖ್ ರೈಲ್ವೆ ನಿಲ್ದಾಣದಲ್ಲಿಯೇ ನಟಿ ದೀಪಿಕಾ ಪಡುಕೋಣೆ ಅವರನ್ನು ಭೇಟಿ ಮಾಡುತ್ತಾರೆ. ಈ ಚಿತ್ರದ ಹಲವು ಭಾಗಗಳನ್ನು ರೈಲಿನಲ್ಲೇ ಚಿತ್ರೀಕರಿಸಲಾಗಿದೆ. ಶಾರುಖ್ ಭಾರತ ಅಲ್ಲದೆ ವಿದೇಶಿ ರೈಲ್ವೆ ನಿಲ್ದಾಣದಲ್ಲೂ ಸಿನಿಮಾಗಳನ್ನು ಚಿತ್ರೀಕರಿಸಿದ್ದಾರೆ. ಸೂಪರ್ ಹಿಟ್ ‘ದಿಲ್‍ವಾಲೆ ದುಲ್ಹಾನೀಯಾ ಲೇ ಜಾಯೆಂಗೆ’ ಚಿತ್ರದಲ್ಲಿ ಯೂರೊಪ್‍ನಲ್ಲಿ ರಾಜ್ ಮಲ್ಹೋತ್ರಾ ಪಾತ್ರಧಾರಿ ಆಗಿದ್ದ ಶಾರುಖ್ ಅವರು ಸಿಮ್ರನ್ ಸಿಂಗ್ ಪಾತ್ರಧಾರಿಯ ಕಾಜೋಲ್ ಅವರನ್ನು ಭೇಟಿ ಮಾಡಿದ್ದರು.

  • ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಶಾರೂಕ್ ಖಾನ್

    ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಶಾರೂಕ್ ಖಾನ್

    ಕ್ಯಾನ್ಬೆರಾ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಅವರು ಮೆಲ್ಬೋರ್ನ್ ಮೂಲದ ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

    ಭಾರತೀಯ ಚಿತ್ರರಂಗ ಹೊರತುಪಡಿಸಿ ಶಾರೂಕ್ ಖಾನ್ ಅವರು ಮೀರ್ ಫೌಂಡೇಶನ್ ಮೂಲಕ ದೀನದಲಿತ ಮಕ್ಕಳು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ್ದಕ್ಕೆ ಈ ಡಾಕ್ಟರೇಟ್ ನೀಡಲಾಗಿದೆ. ಈ ಬಗ್ಗೆ ಲಾ ಟ್ರೋಬ್ ವಿಶ್ವವಿದ್ಯಾಲಯ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶಾರೂಕ್ ಖಾನ್ ಡಾಕ್ಟರೇಟ್ ಪಡೆಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಬಳಿಕ ಮಾತನಾಡಿದ ಶಾರೂಕ್ ಖಾನ್, ಭಾರತೀಯ ಸಂಸ್ಕೃತಿಯೊಂದಿಗೆ ಸುದೀರ್ಘ ಒಡನಾಟ ಮತ್ತು ಮಹಿಳಾ ಸಮಾನತೆಗಾಗಿ ಪ್ರತಿಪಾದಿಸುವಲ್ಲಿ ಪ್ರಭಾವಶಾಲಿ ದಾಖಲೆಯನ್ನು ಹೊಂದಿರುವ ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆಯಲು ಹೆಮ್ಮೆಯಾಗುತ್ತಿದೆ. ಈ ಗೌರವ ಡಾಕ್ಟರೇಟ್ ಸ್ವೀಕರಿಸಲು ನನಗೆ ನಿಜವಾಗಿಯೂ ಖುಷಿಯಾಗುತ್ತಿದೆ. ನನ್ನ ಸಾಧನೆಗಳನ್ನು ಗುರುತಿಸಿದ್ದಕ್ಕಾಗಿ ಲಾ ಟ್ರೋಬ್‍ಗೆ ಪ್ರಾಮಾಣಿಕವಾಗಿ ಧನ್ಯವಾದ ತಿಳಿಸುತ್ತೇನೆ” ಎಂದು ಹೇಳಿದ್ದಾರೆ.

    ಲಾ ಟ್ರೋಬ್ ವಿಶ್ವವಿದ್ಯಾಲಯವು ಶಾರೂಖ್ ಖಾನ್ ಅವರಿಗೆ ಡಾಕ್ಟರ್ ಆಫ್ ಲೆಟರ್ಸ್ ಜೊತೆ ಗೌರವ ನೀಡಿದ ಮೊದಲ ಆಸ್ಟ್ರೇಲಿಯಾ ವಿಶ್ವವಿದ್ಯಾಲಯವಾಗಿದೆ. ಚಲನಚಿತ್ರೋತ್ಸವದಲ್ಲಿ ಶಾರೂಕ್ ಅವರಿಗೆ ‘ಎಕ್ಸಲೆನ್ಸ್ ಇನ್ ಸಿನಿಮಾ’ ಪ್ರಶಸ್ತಿ ಕೂಡ ದೊರೆತಿದೆ.

    ಈ ಮೊದಲು ಶಾರೂಕ್ ಖಾನ್ ಅವರಿಗೆ ನಾಲ್ಕು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿದೆ. 2009 ಬೆಡ್‍ಫೋಡ್ರ್ಶೈರ್ ವಿಶ್ವವಿದ್ಯಾಲಯ, 2015ರಲ್ಲಿ ಎಡಿನ್‍ಬರ್ಗ್ ವಿಶ್ವವಿದ್ಯಾಲಯ, 2016ರಲ್ಲಿ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ, 2019ರಲ್ಲಿ ಯೂನಿವರ್ಸಿಟಿ ಆಫ್ ಲಾನಿಂದ ಡಾಕ್ಟರೇಟ್ ಪಡೆದಿದ್ದಾರೆ.

  • ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ಶಾರೂಕ್ ಸರ್ಪ್ರೈಸ್

    ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ಶಾರೂಕ್ ಸರ್ಪ್ರೈಸ್

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ತಮ್ಮ ‘ಮನ್ನತ್’ ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

    ಶಾರೂಕ್ ಖಾನ್ ಪ್ರತಿ ವರ್ಷ ತಮ್ಮ ಮನ್ನತ್ ಮನೆಯಲ್ಲಿ ಈದ್ ಆಚರಿಸುತ್ತಾರೆ. ಬಳಿಕ ತಮ್ಮ ಟೆರೇಸ್‍ಗೆ ಹೋಗಿ ಮನೆಯ ಹೊರಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸುತ್ತಾರೆ. ಹಾಗೆಯೇ ರಂಜಾನ್ ಹಬ್ಬದಂದು ಕೂಡ ಶಾರೂಕ್ ಮನೆಯ ಹೊರಗೆ ಬಂದು ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.

    ಶಾರೂಕ್ ಈ ಬಾರಿ ತಮ್ಮ ಕಿರಿಯ ಮಗ ಅಬ್ರಾಹಂ ಹಾಗೂ ಅಮೆರಿಕ ಚ್ಯಾಟ್ ಶೋ ನಿರೂಪಕ ಡೇವಿಡ್ ಲೆಟರ್‍ಮ್ಯಾನ್ ಜೊತೆ ಮನೆಯ ಟೆರೇಸ್ ಬದಲು ಕಾರಿನ ಮೇಲೆ ನಿಂತುಕೊಂಡು ಅಭಿಮಾನಿಗಳಿಗೆ ಶುಭಾಶಯ ತಿಳಿಸುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಶಾರೂಕ್ ಕಾರಿನ ಮೇಲೆ ನಿಂತು ಅಭಿಮಾನಿಗಳತ್ತ ಕೈಬೀಸಿದ್ದಾರೆ. ಈ ವೇಳೆ ಶಾರೂಕ್ ಕಪ್ಪು ಬಣ್ಣದ ಟೀ-ಶರ್ಟ್‍ಗೆ ಶರ್ಟ್ ಧರಿಸಿ ಅದಕ್ಕೆ ನೀಲಿ ಬಣ್ಣದ ಡೆನಿಮ್ ಧರಿಸಿದ್ದರು.

    ಇತ್ತೀಚೆಗೆ ಶಾರೂಕ್ ಖಾನ್ ತನ್ನ ಕೇಶವಿನ್ಯಾಸಕನ ಸಹೋದರಿಯ ಮದುವೆಗೆ ಆಗಮಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಶಾರೂಕ್ ಹಿಂದುಗಡೆ ಗೇಟ್ ಮೂಲಕ ನೇರವಾಗಿ ವೇದಿಕೆ ಮೇಲೆ ಹೋಗಿ ವಧು-ವರನನ್ನು ತಬ್ಬಿಕೊಂಡು ಶುಭಾಶಯ ತಿಳಿಸಿದ್ದರು.

    ಶಾರೂಕ್ ಖಾನ್ ಕೊನೆಯದಾಗಿ `ಝೀರೋ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಬಾಕ್ಸ್ ಆಫೀಸ್‍ನಲ್ಲಿ ಅಷ್ಟು ಸದ್ದು ಮಾಡಲಿಲ್ಲ. ಈ ಚಿತ್ರ ಸೋಲು ಕಂಡಿದ್ದಕ್ಕೆ ಶಾರೂಕ್ ಖಾನ್ ಜೂನ್ ತಿಂಗಳಿನವರೆಗೂ ಯಾವುದೇ ಚಿತ್ರವನ್ನು ಸಹಿ ಮಾಡಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

  • ತನ್ನ ಹೇರ್‌ಸ್ಟೈಲಿಸ್ಟ್ ಸಹೋದರಿ ಮದ್ವೆಗೆ ಬಾಲಿವುಡ್ ಬಾದ್‍ಶಾ ಸರ್ಪ್ರೈಸ್ ಭೇಟಿ

    ತನ್ನ ಹೇರ್‌ಸ್ಟೈಲಿಸ್ಟ್ ಸಹೋದರಿ ಮದ್ವೆಗೆ ಬಾಲಿವುಡ್ ಬಾದ್‍ಶಾ ಸರ್ಪ್ರೈಸ್ ಭೇಟಿ

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ತನ್ನ ಕೇಶವಿನ್ಯಾಸಕನ ಸಹೋದರಿಯ ಮದುವೆಗೆ ಆಗಮಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

    ಇತ್ತೀಚೆಗೆ ಶಾರೂಕ್ ಖಾನ್ ಇನ್‍ಸ್ಟಾಗ್ರಾಂ ಫ್ಯಾನ್ ಪೇಜ್‍ಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಶಾರೂಕ್ ಬ್ಲಾಕ್ ಸೂಟ್ ಧರಿಸಿ ಮದುವೆಯಲ್ಲಿ ಭಾಗವಹಿಸಿದ್ದಾರೆ. ಶಾರೂಖ್ ಹಿಂದುಗಡೆ ಗೇಟ್ ಮೂಲಕ ನೇರವಾಗಿ ವೇದಿಕೆ ಮೇಲೆ ಹೋಗಿ ವಧು-ವರನನ್ನು ತಬ್ಬಿಕೊಂಡು ಶುಭಾಶಯ ತಿಳಿಸಿದ್ದಾರೆ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಾರೂಕ್ ಅಭಿಮಾನಿಗಳು ಈ ವಿಡಿಯೋ ನೋಡಿ ಸಂತಸಪಡುತ್ತಿದ್ದಾರೆ. ಈ ವಿಡಿಯೋ ನೋಡಿ ಕೆಲವರು ನಿಮಗೆ ತುಂಬಾ ದೊಡ್ಡ ಹೃದಯ. ನೀವು ನನಗೆ ಸ್ಫೂರ್ತಿ ಎಂದು ಕಮೆಂಟ್ ಮಾಡುವ ಮೂಲಕ ಶಾರೂಕ್ ಸರಳತೆಯನ್ನು ಹೊಗಳಿದ್ದಾರೆ.

    ಶಾರೂಕ್ ಅಭಿಮಾನಿಗಳು ಈ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ತಕ್ಷಣ ಸಾಕಷ್ಟು ಕಮೆಂಟ್‍ಗಳು ಬರುತ್ತಿತ್ತು. ಈ ವಿಡಿಯೋಗೆ ಇದುವರೆಗೂ 31 ಸಾವಿರಕ್ಕೂ ಹೆಚ್ಚು ವ್ಯೂ ಬಂದಿದ್ದು, 5 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

    ಶಾರೂಕ್ ಖಾನ್ ಕೊನೆಯದಾಗಿ ‘ಝೀರೋ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಬಾಕ್ಸ್ ಆಫೀಸ್‍ನಲ್ಲಿ ಅಷ್ಟು ಸದ್ದು ಮಾಡಲಿಲ್ಲ. ಈ ಚಿತ್ರ ಸೋಲು ಕಂಡಿದ್ದಕ್ಕೆ ಶಾರೂಕ್ ಖಾನ್ ಜೂನ್ ತಿಂಗಳಿನವರೆಗೂ ಯಾವುದೇ ಚಿತ್ರವನ್ನು ಸಹಿ ಮಾಡಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

  • ಮಗನನ್ನು ಮತಗಟ್ಟೆಗೆ ಕರೆದೊಯ್ದ ಸತ್ಯ ಬಿಚ್ಚಿಟ್ಟ ಶಾರೂಕ್ ಖಾನ್!

    ಮಗನನ್ನು ಮತಗಟ್ಟೆಗೆ ಕರೆದೊಯ್ದ ಸತ್ಯ ಬಿಚ್ಚಿಟ್ಟ ಶಾರೂಕ್ ಖಾನ್!

    ಮುಂಬೈ: ಮತದಾನದ ವೇಳೆ ಬಾಲಿವುಡ್ ಕಿಂಗ್ ಖಾನ್ ತಮ್ಮ ಮಗನನ್ನು ಮತಗಟ್ಟೆಯೊಳಗೆ ಕರೆದುಕೊಂಡು ಹೋಗಿದ್ದರು. ಇದೀಗ ಸ್ವತಃ ಶಾರೂಕ್ ಅವರೇ ಮಗನನ್ನು ಕರೆದೊಯ್ದ ಸತ್ಯ ಬಿಚ್ಚಿಟ್ಟಿದ್ದಾರೆ.

    ಹೌದು. ಸೋಮವಾರ ಲೋಕಸಭಾ ಚುನಾವಣೆ 2019ರ ನಾಲ್ಕನೇ ಹಂತದ ಮತದಾನ ನಡೆದಿತ್ತು. ಈ ವೇಳೆ ಸೆಲೆಬ್ರಿಟಿಗಳೆಲ್ಲರೂ ಸದೃಢ ಭಾರತಕ್ಕಾಗಿ ತಮ್ಮ ಹಕ್ಕು ಚಲಾಯಿಸಿದ್ದರು. ಸಾಮಾನ್ಯವಾಗಿ ಮತಗಟ್ಟೆಯೊಳಗೆ ಮಕ್ಕಳನ್ನು ಬಿಡುವುದಿಲ್ಲ. ಆದರೆ ಶಾರೂಕ್ ತಮ್ಮ ಕಿರಿಯ ಮಗ ಅಬ್ರಾಂನನ್ನು ಬಾಂದ್ರಾ ಮತಗಟ್ಟೆಯೊಳಗೆ ಕರೆದುಕೊಂಡು ಹೋಗಿದ್ದರು.

    ಪತ್ನಿ ಗೌರಿಯವರು ಕಿರಿಯ ಮಗ ಅಬ್ರಾಂನನ್ನು ಬಾಂದ್ರಾ ಮತದಾನ ಕೇಂದ್ರದೊಳಗೆ ಕರೆದುಕೊಂಡು ಹೋಗಿದ್ದಾರೆ. ಯಾಕಂದ್ರೆ ಅವನಿಗೆ `ಬೋಟಿಂಗ್’ ಹಾಗೂ `ವೋಟಿಂಗ್’ ಬಗ್ಗೆ ಭಾರೀ ಗೊಂದಲವಿತ್ತು. ಈ ಗೊಂದಲವನ್ನು ಕ್ಲೀಯರ್ ಮಾಡಲು ಆತನನ್ನು ಮತಗಟ್ಟೆಯೊಳಗೆ ಕರೆದುಕೊಂಡು ಹೋಗಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

    ಈ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಶಾರೂಕ್, ಪುಟ್ಟ ಮಗನಿಗೆ ಬೋಟಿಂಗ್ ಮತ್ತು ವೋಟಿಂಗ್ ಮಧ್ಯೆ ಸಾಕಷ್ಟು ಕನ್‍ಫ್ಯೂಶನ್ ಇತ್ತು. ಈ ಗೊಂದಲವನ್ನು ನಿವಾರಿಸಲು ಆತನನ್ನು ಕೂಡ ಮತಗಟ್ಟೆಯೊಳಗೆ ಕರೆದುಕೊಂಡು ಹೋಗುವ ಮೂಲಕ ಮತದಾನದ ಬಗ್ಗೆ ಮತದಾನದ ಬಗ್ಗೆ ವಿವರಿಸಲಾಯಿತು ಎಂದು ಮೂವರ ಫೋಟೋ ಹಾಕಿ ಬರೆದುಕೊಂಡಿದ್ದಾರೆ.

    ಬಾಕ್ಸ್ ಆಫೀಸಿನಲ್ಲಿ ಝೀರೋ ಚಿತ್ರ ಪ್ಲಾಪ್ ಆಗಿದ್ದು, ಆ ಬಳಿಕ ಶಾರೂಕ್ ಅವರು ಯಾವುದೇ ಚಿತ್ರಕ್ಕೆ ಸಹಿ ಹಾಕಿಲ್ಲ. ಅಲ್ಲದೆ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಶೀಘ್ರವೇ ತಿಳಿಸಲಿದ್ದಾರೆ.

    https://www.instagram.com/p/Bw1uXvgALLB/?utm_source=ig_embed

  • ‘ಝೀರೋ’ ಗೆ ಭರ್ಜರಿ ಫೈಟ್ ನೀಡಿದ ‘ಕೆಜಿಎಫ್’

    ‘ಝೀರೋ’ ಗೆ ಭರ್ಜರಿ ಫೈಟ್ ನೀಡಿದ ‘ಕೆಜಿಎಫ್’

    – 3 ದಿನದಲ್ಲಿ 60 ಕೋಟಿ ಕಲೆಕ್ಷನ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ದೇಶ-ವಿದೇಶದಲ್ಲಿ ತನ್ನದೇ ಆದ ಹವಾ ಕ್ರಿಯೇಟ್ ಮಾಡಿದ್ದು, ಬಾಲಿವುಡ್‍ನ ನಟ ಶಾರೂಕ್ ಖಾನ್ ಅಭಿನಯದ ‘ಝೀರೋ’ ಸಿನಿಮಾಗೆ ಭರ್ಜರಿ ಫೈಟ್ ನೀಡಿದೆ.

    ‘ಕೆಜಿಎಫ್’ ಸಿನಿಮಾ ಪಂಚಭಾಷೆಯಲ್ಲಿ ಇದೇ ಶುಕ್ರವಾರ ಬಿಡುಗಡೆಗೊಂಡಿತ್ತು. ಅದೇ ದಿನ ಶಾರೂಕ್ ಖಾನ್ ಅಭಿನಯದ ‘ಝೀರೋ’ ಸಿನಿಮಾ ಕೂಡ ಬಿಡುಗಡೆಯಾಗಿತ್ತು. ಆದರೆ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ‘ಝೀರೋ’ ಸಿನಿಮಾವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಇದನ್ನೂ ಓದಿ: ಗಲ್ಲಾ ಪೆಟ್ಟಿಗೆಯಲ್ಲೂ ರಾಕಿಯ ಆರ್ಭಟ- ಹಿಂದಿಯಲ್ಲಿ ಫಸ್ಟ್ ಡೇ 2.10 ಕೋಟಿ

    ‘ಕೆಜಿಎಫ್’ ಸಿನಿಮಾ ಬಿಡುಗಡೆಯಾದ ಮೊದಲ ದಿವವೇ ಸುಮಾರು 30 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಬಳಿಕ ಶನಿವಾರ ಮತ್ತು ಭಾನುವಾರ ವೀಕೆಂಡ್ ಇದ್ದ ಕಾರಣ ಮೂರು ದಿನಗಳಲ್ಲಿ ‘ಕೆಜಿಎಫ್’ ಸಿನಿಮಾ 60 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕ ವಿಜಯ ಕಿರಗಂದೂರು ತಿಳಿಸಿದ್ದಾರೆ. ಇದನ್ನೂ ಓದಿ:’ಝೀರೋ’ನ ಹಿಂದಿಕ್ಕಿದ ‘ಕೆಜಿಎಫ್

    ಮೊದಲನೇ ದಿನ 24 ಕೋಟಿ ರೂ. ಗಳಿಸಿದರೆ, ಎರಡನೇ ದಿನ ಮತ್ತು ಮೂರನೇ ದಿನ 20-21 ಕೋಟಿ ರೂ. ಗಳಿಸಿದ್ದು, ಮೂರು ದಿನಗಳಲ್ಲಿ ಸುಮಾರು 60 ಕೋಟಿ ರೂ. ಗಳಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲದೇ ಹಿಂದಿಯಲ್ಲೂ ಕೂಡ ಕಲೆಕ್ಷನ್ ಅಧಿಕವಾಗಿದ್ದು, ಕನ್ನಡ ಸಿನಿಮಾಗೆ ಬೇರೆ ಭಾಷೆಯಲ್ಲೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.

    ಕನ್ನಡದ ಕೆಜಿಎಫ್ ಸಿನಿಮಾ ಝೀರೋ ಸಿನಿಮಾಗೆ ತೀವ್ರ ಪೈಪೋಟಿ ಕೊಟ್ಟಿದ್ದು, ಇದರಿಂದ ಝೀರೋ ಸಿನಿಮಾದ ಕಲೆಕ್ಷನ್ ಕಡಿಮೆಯಾಗಿದೆ. ಮೊದಲ ದಿನವೇ ಕೆಜಿಎಫ್ 24 ಕೋಟಿ ರೂ. ಗಳಿಸಿತ್ತು. ಭಾರತದಲ್ಲಿ 18 ಕೋಟಿ, ಕನ್ನಡದಲ್ಲಿಯೇ 12.5 ಕೋಟಿ ರೂ ಗಳಿಸಿತ್ತು. ವೀಕೆಂಡ್ ಇದ್ದ ಕಾರಣ ಸುಮಾರು 40 ಕೋಟಿ ಹಣವನ್ನು ಗಳಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಝೀರೋ ಸಿನಿಮಾ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಕೇವಲ 38 ಕೋಟಿ ರೂ. ಕೆಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

    ದಿನದಿಂದ ದಿನಕ್ಕೆ ಪ್ರೇಕ್ಷಕರು ಕೂಡ ಹೆಚ್ಚಾಗುತ್ತಿದ್ದಾರೆ. ಆದ್ದರಿಂದ ಪರಭಾಷೆ ಸಿನಿಮಾಗೆ ಕನ್ನಡ ಸಿನಿಮಾ ಪೈಪೋಟಿ ನೀಡಿದೆ. ಹಿಂದಿ ಭಾಷೆಯಲ್ಲಿ ಕೆಜಿಎಫ್ ಮೊದಲ ದಿನವೇ 2.1 ಕೋಟಿ ರೂ. ಗಳಿಸಿದ್ದು, ಎರಡನೇ ದಿನ 3 ಕೋಟಿ ರೂ. ಗಳಿಸಿತ್ತು ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv