Tag: ಶಾರುಖ್ ಖಾನ್

  • ಶಾರುಖ್ ಖಾನ್ ಜೊತೆ ಯಶ್ ಮಾತುಕತೆ: ‘ಟಾಕ್ಸಿಕ್’ನಲ್ಲಿ ಬಾಲಿವುಡ್ ನಟ

    ಶಾರುಖ್ ಖಾನ್ ಜೊತೆ ಯಶ್ ಮಾತುಕತೆ: ‘ಟಾಕ್ಸಿಕ್’ನಲ್ಲಿ ಬಾಲಿವುಡ್ ನಟ

    ಟಾಕ್ಸಿಕ್ (Toxic) ಸಿನಿಮಾ ಕುರಿತಂತೆ ವಾರಕ್ಕೊಂದು ಸುದ್ದಿಗಳು ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿವೆ. ಈ ವಾರ ಬಂದ ಸುದ್ದಿ ಏನೆಂದರೆ, ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan), ಟಾಕ್ಸಿಕ್ ಚಿತ್ರದಲ್ಲಿ ನಟಿಸಲಿದ್ದಾರಂತೆ. ಈಗಾಗಲೇ ಶಾರುಖ್ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆಯಂತೆ. ಅವರು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಲಿದ್ದಾರಂತೆ. ಈ ಹಿಂದೆಯೂ ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ನಟಿಸಲಿದ್ದಾರೆ ಎನ್ನುವ ಸುದ್ದಿ ಭಾರೀ ಸದ್ದು ಮಾಡಿತ್ತು.

    ಈ ಕುರಿತಂತೆ ಕರೀನಾ ಕಪೂರ್ ತಂಡ ಉತ್ತರವನ್ನು ಕೊಟ್ಟಿದೆ. ಟಾಕ್ಸಿಕ್ ವಿಚಾರದಲ್ಲಿ ಕರೀನಾ (Kareena Kapoor) ಹೆಸರು ಕೇಳಿ ಬಂದಿದ್ದು ಅಚ್ಚರಿ ತಂದಿದೆ. ಸುಖಾಸುಮ್ಮನೆ ಸುದ್ದಿಗಳನ್ನು ಹರಡಬೇಡಿ. ಆದರೆ, ಕರೀನಾ ಅವರು ನಟಿಸಲಿರುವ ಮುಂದಿನ ಸಿನಿಮಾ ಹಾಗೂ ಕಲಾವಿದರ ಬಗ್ಗೆ ಎಕ್ಸೈಟಿಂಗ್ ವಿಚಾರವಿದೆ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲವನ್ನು ಮೂಡಿಸಿದ್ದಾರೆ.

    ಸಂದರ್ಶನವೊಂದರಲ್ಲಿ ನಾನು ‘ಕೆಜಿಎಫ್’ (KGF) ಗರ್ಲ್ ಎಂದು ಯಶ್ (Yash) ಬಗ್ಗೆ ಹಾಡಿಹೊಗಳಿದ್ದರು ನಟಿ ಕರೀನಾ ಕಪೂರ್.  ಈ ಹೇಳಿಕೆ ನೀಡಿದ ಒಂದೇ ತಿಂಗಳಲ್ಲೇ ಟಾಕ್ಸಿಕ್ ನಲ್ಲಿ ಅವರು ನಟಿಸಲಿದ್ದಾರೆ ಎನ್ನುವ ವಿಚಾರ ಹರಿದಾಡಿತ್ತು. ಯಶ್ ಸಿನಿಮಾಗೆ ಕರೀನಾ ಕಪೂರ್ ಸಾಥ್ ನೀಡೋದು ಖಚಿತ ಎಂದು ಹೇಳಲಾಗಿತ್ತು.

     

    ‘ಕೆಜಿಎಫ್’ ಸೀರಿಸ್ ಬಳಿಕ ಯಶ್ ಟಾಕ್ಸಿಕ್ ಹೇಗೆ ಕಾಣಿಸಿಕೊಳ್ಳಬಹುದು? ಲುಕ್ ಹೇಗಿರುತ್ತೆ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಎದ್ದಿದ್ದವು. ಯಶ್ ಬರ್ತ್‌ಡೇಯಂದು ‘ಟಾಕ್ಸಿಕ್’ ಟೀಮ್ ಸರ್ಪ್ರೈಸ್ ಕೊಡಬಹುದು ಎಂಬ ನಿರೀಕ್ಷೆಯಿದೆ. ಆದರೆ, ಅದು ಆಗಲಿಲ್ಲ. ಯಶ್ ಅಭಿಮಾನಿಗಳ ದುರಂತ ಮರಣ, ಯಶ್ ಅವರಿಗೆ ಶಾಕ್ ನೀಡಿತ್ತು.

  • ಹೊಸ ರೆಕಾರ್ಡ್ ಬರೆದ ಬಾಲಿವುಡ್ ಕಿಂಗ್ ಖಾನ್

    ಹೊಸ ರೆಕಾರ್ಡ್ ಬರೆದ ಬಾಲಿವುಡ್ ಕಿಂಗ್ ಖಾನ್

    ಕಿಂಗ್ ಈಸ್ ಆಲ್ ವೆಸ್ ಕಿಂಗ್. ಹೀಗಂತ ನಾವ್ ಹೇಳ್ತಿಲ್ಲ. ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ (Shah Rukh Khan) ಅಭಿಮಾನಿಗಳು ಹೆಮ್ಮೆಯಿಂದ ಕೂಗುತ್ತಿದ್ದಾರೆ. ಅದಕ್ಕೆ ಕಾರಣ ಕಿಂಗ್ ಖಾನ್ (King Khan) ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. 2023ರಲ್ಲಿ ಬಾಕ್ಸಾಫೀಸ್ ಧೂಳಿಪಟ ಮಾಡಿದ ಕೀರ್ತಿ ಶಾರುಖ್ ಗೆ ಸಲ್ಲುತ್ತದೆ.

    ಡಂಕಿ (Dunki), ಜವಾನ್ ಹಾಗೂ ಪಠಾಣ್ ಸಿನಿಮಾಗಳ ಮೂಲಕ ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಹಿಟ್ ಬಾರಿಸಿದ ರೆಕಾರ್ಡ್ ಬಾದ್ ಷಾಗೆ ಸೇರಿದೆ. ಬರೀ ಕಲೆಕ್ಷನ್ ಅಷ್ಟೇ ಅಲ್ಲ ಈ ಮೂರು ಚಿತ್ರಗಳನ್ನು ವೀಕ್ಷಿಸಿದ್ದು, ಎಂಟು ಕೋಟಿ ಮಂದಿ. ಒಂದು ವರ್ಷದಲ್ಲಿಯೇ ಇಷ್ಟು ಮಂದಿ ಸಿನಿಮಾ ವೀಕ್ಷಿಸಿರುವುದು ದಾಖಲೆಯೇ ಸರಿ..ಜವಾನ್ ಚಿತ್ರದ 3.93 ಕೋಟಿ ಟಿಕೆಟ್ ಮಾರಾಟವಾಗಿದ್ದು, ಪಠಾಣ್ 3.20 ಕೋಟಿ, ಡಂಕಿ 1 ಕೋಟಿ..ಈ ಸಾಧನೆ ಮಾಡಿದ ಮೊದಲ ಬಾಲಿವುಡ್ ತಾರೆ ಶಾರುಖ್.

    2023ರಲ್ಲಿ ಜವಾನ್ ಹಾಗೂ‌ ಪಠಾಣ್ ‌ಗಳಿಕೆಯಲ್ಲಿ ದಾಖಲೆ ಬರೆದಿದ್ದು, ಅದಕ್ಕೆ ಡಂಕಿ ಕೂಡ ಸೇರ್ಪಡೆಯಾಯಿತು. 2023ರ ಆರಂಭದಲ್ಲಿ ಪಠಾಣ್ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿತು. ಈ ಚಿತ್ರ ಹಿಂದಿ ಬೆಲ್ಟ್ ನಲ್ಲಿಯೇ 524 ಕೋಟಿ ಬಾಚಿತ್ತು. ಭಾರತಾದ್ಯಂತ 545 ಕೋಟಿ‌ ಲೂಟಿ ಮಾಡಿದ್ದ ಪಠಾಣ್ ಒಟ್ಟಾರೆ ವಿಶ್ವಾದ್ಯಂತ 1055 ಕೋಟಿ ಗಳಿಕೆ ಕಂಡಿತ್ತು. ಆ ನಂತರ  ಜೂನ್ ನಲ್ಲಿ ತೆರೆಕಂಡ ಜವಾನ್, ಹಿಂದಿ ಚಿತ್ರರಂಗದಲ್ಲಿ 643 ಕೋಟಿ ಕಲೆಕ್ಷನ್ ಮಾಡಿದರೆ, ವಿಶ್ವಾದ್ಯಂತ 580 ಕೋಟಿ ಲೂಟಿ ಮಾಡಿತ್ತು. ಡಿಸೆಂಬರ್ ನಲ್ಲಿ ಬಿಡುಗಡೆಯಾದ ಡಂಕಿ ಕೇವಲ 13 ದಿನದಲ್ಲಿ 410 ಕೋಟಿ ಗಳಿಕೆ ಮಾಡಿತ್ತು.

    ಡಂಕಿ ಸಿನಿಮಾಗೆ ರಾಜ್ ಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಂ ಕೊಚ್ಚರ್, ಅನಿಲ್ ಗ್ರೋವರ್ ಮುಂತಾದವರು ನಟಿಸಿದ್ದಾರೆ. ಕತೆಯ ಆಯ್ಕೆಯಲ್ಲಿ ಪ್ರತಿಬಾರಿ ನಿರ್ದೇಶಕ ರಾಜ್ಕುಮಾರ್ ಹಿರಾನಿ ಒಂದು ಗಟ್ಟಿಯಾದ ಕಥಾವಸ್ತು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಸಿನಿಪ್ರೇಮಿಗಳಿಗೆ ಗೊತ್ತಿರುವ ಸಂಗತಿ.

     

    ಅದೇ ರೀತಿ ಈ ಚಿತ್ರದಲ್ಲಿ ಕೆಲಸ ಅರಸಿ ಅಕ್ರಮವಾಗಿ ದೇಶಗಳ ಗಡಿ ದಾಟುವವರ ಕಥೆಯನ್ನು ಡಂಕಿ ಮೂಲಕ ತೋರಿಸಿದ್ದಾರೆ. ‘ಡಂಕಿ’ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ.

  • ‘ಡಂಕಿ’ ಬಾಕ್ಸಾಫೀಸಿನ ಲೆಕ್ಕಾಚಾರ: 7 ದಿನದಲ್ಲಿ ಗಳಿಸಿದ್ದೆಷ್ಟು?

    ‘ಡಂಕಿ’ ಬಾಕ್ಸಾಫೀಸಿನ ಲೆಕ್ಕಾಚಾರ: 7 ದಿನದಲ್ಲಿ ಗಳಿಸಿದ್ದೆಷ್ಟು?

    ಬಾಲಿವುಡ್ (Bollywood) ಬಾದ್ ಷಾ ಶಾರುಖ್​ ಖಾನ್​ (Shah Rukh Khan) ಅಭಿನಯದ ‘ಡಂಕಿ’  (Dunki) ಸಿನಿಮಾ ಬಿಡುಗಡೆಯಾಗಿ 7 ದಿನ ಕಳೆದಿದೆ. ಡಿಸೆಂಬರ್​ 21ರಂದು ಈ ಚಿತ್ರ ಬಿಡುಗಡೆ ಆಗಿತ್ತು. ಕ್ಲಾಸ್​ ಸಿನಿಮಾ ಆದ್ದರಿಂದ ಡಂಕಿ ನಿಧಾನಗತಿಯಲ್ಲಿ ಕಲೆಕ್ಷನ್​ ಮಾಡಿದೆ. ಒಟ್ಟು ಏಳು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್​  305 ಕೋಟಿ ರೂಪಾಯಿ ಆಗಿದ್ದು, ಭಾರತದಲ್ಲಿಯೇ 150 ಬಾಚಿಕೊಂಡಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

    ಶಾರುಖ್ ಈ ಹಿಂದಿನ ಸಿನಿಮಾಗಳಾದ ಪಠಾಣ್ ಹಾಗೂ ಜವಾನ್ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿದ್ದವು. ಈ ಎರಡು ಚಿತ್ರಗಳು 1000 ಕೋಟಿ ಕ್ಲಬ್ ಸೇರಿದ್ದವು. ಅದರಂತೆ ಡಂಕಿ ಸಿನಿಮಾವೂ ಅದ್ಭುತ ಪ್ರದರ್ಶನ ಕಾಣುತಿದೆ. ರಿಲೀಸ್ ಆದ ಮೊದಲ ದಿನವೇ 29 ಕೋಟಿ ಕಲೆಕ್ಷನ್ ಮಾಡಿದ್ದ ಚಿತ್ರ ಹಂತ ಹಂತವಾಗಿ  ಒಳ್ಳೆ ಮೊತ್ತವನ್ನೇ ತನ್ನದಾಗಿಸಿಕೊಂಡಿದೆ.

    ‘ಡಂಕಿ’ ಸಿನಿಮಾದಲ್ಲಿ ಶಾರುಖ್​​ ಖಾನ್​ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್​, ಬೊಮನ್​ ಇರಾನಿ, ವಿಕ್ರಂ ಕೊಚ್ಚರ್​, ಅನಿಲ್​ ಗ್ರೋವರ್​ ಮುಂತಾದವರು ನಟಿಸಿದ್ದಾರೆ. ರಾಜ್​ಕುಮಾರ್​ ಹಿರಾನಿ ಅವರು ಪ್ರತಿ ಸಿನಿಮಾದಲ್ಲೂ ಒಂದು ಗಟ್ಟಿಯಾದ ಕಥಾವಸ್ತು ಆಯ್ಕೆ ಮಾಡಿಕೊಳ್ಳುತ್ತಾರೆ. ಅಕ್ರಮವಾಗಿ ದೇಶಗಳ ಗಡಿ ದಾಟುವವರ ಬಗ್ಗೆ ‘ಡಂಕಿ’ ಸಿನಿಮಾದಲ್ಲಿ ತೋರಿಸಲಾಗಿದೆ.

    ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ರಾಜ್ ಕುಮಾರ್ ಹಿರಾನಿ ಹಾಗೂ ಶಾರುಖ್ ಕಾಂಬಿನೇಷನ್ ವರ್ಕೌಟ್ ಆಗಿದ್ದು, ಪ್ರೇಕ್ಷಕರು ಈ ಜೋಡಿಯ ಸಿನಿಮಾಗೆ ಜೈಕಾರ ಹಾಕುತ್ತಿದ್ದಾರೆ.

  • ‘ಮನ್ನತ್’ ಮೇಲೆ ನಿಂತು ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ಶಾರುಖ್

    ‘ಮನ್ನತ್’ ಮೇಲೆ ನಿಂತು ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ಶಾರುಖ್

    ಶಾರುಖ್ ಖಾನ್ (Shah Rukh Khan) ನಟನೆಯ ‘ಡಂಕಿ’ ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಡಿ.21ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಡಂಕಿ ಸಿನಿಮಾಗೆ ಪ್ರೇಕ್ಷಕ ತೋರಿಸುತ್ತಿರುವ ಪ್ರೀತಿಗೆ ಕಿಂಗ್ ಖಾನ್ ಫಿದಾ ಆಗಿದ್ದಾರೆ. ಈ ಹಿನ್ನೆಲೆ ಭಾನುವಾರದಂದು ತಮ್ಮ ನಿವಾಸ ಮನ್ನತ್ (Mannat) ಎದುರು ಜಮಾಯಿಸಿದ್ದ ನೂರಾರು ಅಭಿಮಾನಿಗಳಿಗೆ ಶಾರುಖ್ ದರ್ಶನ ಕೊಟ್ಟಿದ್ದಾರೆ. ತಮ್ಮ ಸಿಗ್ನೇಚರ್ ಶೈಲಿಯ ಪೋಸ್ ನೀಡಿ ಫ್ಯಾನ್ಸ್ ಗೆ ಧನ್ಯವಾದ ತಿಳಿಸಿದ್ದಾರೆ.

    ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಕಾಮಿಡಿ ಡ್ರಾಮಾ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮಾನ್ ಇರಾನಿ ನಟಿಸಿದ್ದಾರೆ. ಜಿಯೋ ಸ್ಟುಡಿಯೋಸ್ ಜೊತೆ ಸೇರಿ ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಒಂದು ಸಿಂಪಲ್ ಕಥೆಯನ್ನು ಬಹಳ ತಮಾಷೆಯಾಗಿ ಅಷ್ಟೇ ಭಾವನಾತ್ಮಕವಾಗಿ ರಾಜ್‌ಕುಮಾರ್ ಹಿರಾನಿ ಹೇಳಿ ಗೆದ್ದಿದ್ದಾರೆ.

    ಕಿಂಗ್ ಖಾನ್- ಹಿರಾನಿ ಒಟ್ಟಿಗೆ ಕೈಜೋಡಿಸುತ್ತಿದ್ದಾರೆ ಎಂದಾಗಲೇ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿತ್ತು. ‘ಡಂಕಿ’ ಎನ್ನುವ ವಿಭಿನ್ನ ಟೈಟಲ್ ಕೂಡ ಕುತೂಹಲ ಮೂಡಿಸಿದ್ದು ಸುಳ್ಳಲ್ಲ. ‘ಮುನ್ನಾಭಾಯ್’ ಸರಣಿ, ‘ಪಿಕೆ’, ‘ಸಂಜು’ ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ನಿರ್ದೇಶಕರು ಈ ಬಾರಿ ಯಾವ ಕಥೆ ಹೇಳುತ್ತಾರೆ ಎನ್ನುವ ನಿರೀಕ್ಷೆ ಇತ್ತು. ‘ಜೀರೊ’ ಸಿನಿಮಾ ಸೋಲಿನ ಬಳಿಕ ಸೈಲೆಂಟ್ ಆಗಿದ್ದ ಶಾರುಖ್ ಖಾನ್ ಈ ವರ್ಷ ‘ಪಠಾಣ್’ ಆಗಿ ಭರ್ಜರಿ ಕಂಬ್ಯಾಕ್ ಮಾಡಿದ್ದರು. ಚಿತ್ರ ಸಾವಿರ ಕೋಟಿ ರೂ. ಕಲೆಕ್ಷನ್ ಗಡಿ ದಾಟಿತ್ತು. ಬಳಿಕ ಬಂದ ‘ಜವಾನ್’ ಕೂಡ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಈ ಸಿನಿಮಾ ಕೂಡ 1000 ಕೋಟಿ ರೂ. ಕ್ಲಬ್ ಸೇರಿತ್ತು. ಹಾಗಾಗಿ ‘ಡಂಕಿ’ ಸಿನಿಮಾ ಬಗ್ಗೆ ಸಹಜವಾಗಿಯೇ ಕ್ರೇಜ್ ಹೆಚ್ಚಾಗಿತ್ತು.

    ಸುಖಿ(ವಿಕ್ಕಿ ಕೌಶಲ್), ಮನು(ತಾಪ್ಸಿ), ಬಲ್ಲಿ(ಅನಿಲ್ ಗೋವರ್), ಬುಗ್ಗು(ವಿಕ್ರಂ ಕೌಚರ್) ಎನ್ನುವ ನಾಲ್ಕು ಜನ ಸ್ನೇಹಿತರು. 1995ರಲ್ಲಿ ಪಂಜಾಬ್‌ನ ಒಂದು ಹಳ್ಳಿಯಲ್ಲಿ ವಾಸಿಸುತ್ತಿರುತ್ತಾರೆ. ಆರ್ಥಿಕ ಸಮಸ್ಯೆ ಎದುರಿಸುವ ಇವರು ಲಂಡನ್‌ಗೆ ಹೋಗಿ ಹಣ ಸಂಪಾದಿಸುವ ಕನಸು ಕಾಣುತ್ತಾರೆ. ಆದರೆ ಅದಕ್ಕೆ ಬೇಕಾದ ವಿದ್ಯಾರ್ಹತೆ, ಇಂಗ್ಲೀಷ್ ಮಾತನಾಡುವ ಕೌಶಲ್ಯ ಇರುವುದಿಲ್ಲ. ಅಷ್ಟರಲ್ಲಿ ಹರ್ಡಿ ಸಿಂಗ್ ಎನ್ನುವ ಮಾಜಿ ಸೈನಿಕ ಆ ಊರಿಗೆ ಬರ್ತಾನೆ. ಆತ ಇವರನ್ನು ಲಂಡನ್‌ಗೆ ತಲುಪಿಸಲು ಪ್ರಯತ್ನಿಸುತ್ತಾನೆ. ಆದರೆ ಅದು ಲೀಗಲ್ ಆಗಿ ಅಲ್ಲ. ಇಲ್ಲೀಗಲ್ ಆಗಿ. ಅಷ್ಟಕ್ಕೂ ಅವರೆಲ್ಲಾ ವಾಮಮಾರ್ಗ(ಡಂಕಿ)ದಲ್ಲಿ ಲಂಡನ್‌ಗೆ ಹೋದ್ರಾ? ಮುಂದೆ ಏನಾಯ್ತು? ಎನ್ನುವುದೇ ಸಿನಿಮಾ ಕಥೆ.

  • ವಾರಂತ್ಯಕ್ಕೆ ‘ಡಂಕಿ’ ಗಳಿಸಿದ್ದು ಎಷ್ಟು?: ನಿರ್ಮಾಣ ಸಂಸ್ಥೆ ಹೇಳಿದ್ದೇನು?

    ವಾರಂತ್ಯಕ್ಕೆ ‘ಡಂಕಿ’ ಗಳಿಸಿದ್ದು ಎಷ್ಟು?: ನಿರ್ಮಾಣ ಸಂಸ್ಥೆ ಹೇಳಿದ್ದೇನು?

    ಬಾಲಿವುಡ್ ನ ಮತ್ತೊಂದು ಭಾರೀ ಬಜೆಟ್ ಸಿನಿಮಾ ಡಂಕಿ ಮೊನ್ನೆಯಷ್ಟೇ ರಿಲೀಸ್ ಆಗಿದೆ. ಸಲಾರ್ ಎದುರು ಈ ಸಿನಿಮಾ ಅಬ್ಬರಿಸುತ್ತಾ ಅಥವಾ ಸೋಲು ಕಾಣುತ್ತಾ ಎನ್ನುವ ಚರ್ಚೆ ಕೂಡ ಶುರುವಾಗಿತ್ತು. ಸಲಾರ್ ಮುಂದೆ ತುಸು ಮುಗ್ಗರಿಸಿದ್ದರೂ, ತನ್ನ ಪಾಡಿಗೆ ತಾನು ತಣ್ಣಗೆ ಗೆಲುವಿನತ್ತ ಹೆಜ್ಜೆ ಹಾಕಿದೆ. ಡಂಕಿ ಸಿನಿಮಾದ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಂತೆ, ವಾರಂತ್ಯಕ್ಕೆ ಡಂಕಿ ಗಳಿಸಿದ್ದು 211.13 ಕೋಟಿ ರೂಪಾಯಿ ಎಂದು ಘೋಷಣೆ ಮಾಡಿದೆ.

    ಒಂದು ಕಡೆ ಸಿನಿಮಾ ಕೋಟಿ ಕೋಟಿ ಗಳಿಸುತ್ತಿದ್ದರೆ, ಮತ್ತೊಂದು ಕಡೆ ಪೈರಸಿ ಹಾವಳಿ ಕೂಡ ಚಿತ್ರದ ಹಿನ್ನೆಡೆಗೆ ಕಾರಣವಾಗುತ್ತಿದೆ. ಡಂಕಿ (Dunki) ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ನೆಚ್ಚಿನ ನಟನ ಸಿನಿಮಾವನ್ನು ಶಾರುಖ್ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಎಲ್ಲ ಕಡೆ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಈ ನಡುವೆ ಡಂಕಿ ಸಿನಿಮಾ ಪೈರಸಿಗೆ (Piracy) ತುತ್ತಾಗಿದೆ. ಹಲವು ವೆಬ್ ಸೈಟ್ ಗಳಲ್ಲಿ ಡಂಕಿ ಸಿನಿಮಾದ ಪೈರಸಿಯನ್ನು ಅಪ್ ಲೋಡ್ ಮಾಡುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಲಾಗಿದೆ.

    ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದು ಮಾತ್ರವಲ್ಲ, ಮುಕ್ಕಾಲು ಭಾಗ ಸಿನಿಮಾವನ್ನು ಎಕ್ಸ್ (ಟ್ವೀಟರ್) ನಲ್ಲಿ ಲೈವ್ ಕೂಡ ಮಾಡಿರುವ ವಿಷಯ ಹರಿದಾಡುತ್ತಿದೆ. ಹೀಗಾಗಿ ಸಹಜವಾಗಿಯೇ ಚಿತ್ರತಂಡಕ್ಕೆ ಹೊಡೆತ ಬಿದ್ದಿದೆ. ಪೈರಸಿಯನ್ನು ತೆಗೆದು ಹಾಕಿಸುವಲ್ಲಿ ನಿರ್ಮಾಪಕರು ಹರಸಾಹಸ ಪಡುತ್ತಿದ್ದಾರೆ.

    ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ (Raj Kumar Hirani) ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳಿದ್ದಾರೆ. ಒಂದೊಳ್ಳೆ ಸಂದೇಶದ ಜೊತೆಗೆ ಮನರಂಜನಾತ್ಮಕ ಅಂಶಗಳನ್ನು ಬೆರೆಸಿ ಸಿನಿಮಾ ಮಾಡಿದ್ದಾರೆ.

     

    ಶಾರುಖ್ ಖಾನ್ ನಾಯಕನಾಗಿ ನಟಿಸಿದ್ದು, ಬೊಮನ್ ಇರಾನಿ, ತಾಪ್ಸೀ ಪನ್ನು, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ತಾರಾಬಳಗದಲ್ಲಿದ್ದಾರೆ. ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಡಿ ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ.

  • ಶಾರುಖ್‌ ಪುತ್ರಿ ಸುಹಾನಾ ಸೌಂದರ್ಯಕ್ಕೆ ಪಡ್ಡೆಹುಡುಗರು ಫಿದಾ

    ಶಾರುಖ್‌ ಪುತ್ರಿ ಸುಹಾನಾ ಸೌಂದರ್ಯಕ್ಕೆ ಪಡ್ಡೆಹುಡುಗರು ಫಿದಾ

    ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ (Sharukh Khan) ಪುತ್ರಿ ಸುಹಾನಾ ಖಾನ್ (Suhana Khan) ಹೊಸ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಸುಹಾನಾ ಸೌಂದರ್ಯಕ್ಕೆ ಕಿಂಗ್ ಖಾನ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ ಸುಹಾನಾ ನಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    ಕೆಂಪು ಬಣ್ಣದ ಗೌನ್‌ನಲ್ಲಿ ಸಖತ್ ಹಾಟ್ ಆಗಿ ನಟಿ ಸುಹಾನಾ ಖಾನ್ ಪೋಸ್ ಕೊಟ್ಟಿದ್ದಾರೆ. ನಟಿಯ ಅಂದವನ್ನ ಪಡ್ಡೆಹುಡುಗರು ಹಾಡಿ ಹೊಗಳುತ್ತಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಗ್ಲ್ಯಾಮರಸ್‌ ಆಗಿ ನಟಿ ಪೋಸ್ ನೀಡಿದ್ದಾರೆ.

    ‘ದಿ ಆರ್ಚೀಸ್’ ಎಂಬ ಸಿನಿಮಾದಲ್ಲಿ ಶಾರುಖ್ ಪುತ್ರಿ ಸುಹಾನಾ ನಟಿಸಿದ್ದರು. ಚೊಚ್ಚಲ ಸಿನಿಮಾದಲ್ಲಿ ಸುಹಾನಾ ಪುಟ್ಟ ಪಾತ್ರ ಮಾಡಿದ್ರೂ ಕೂಡ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದನ್ನೂ ಓದಿ:ಕಪಿ ಆಟಗಳಿಂದ ತೊಂದರೆ ಕೊಡುವುದನ್ನ ನಿಲ್ಲಿಸಿ- ಕಿಡಿಗೇಡಿಗಳಿಗೆ ಸಂಗೀತಾ ಅತ್ತಿಗೆ ವಾರ್ನಿಂಗ್

    ಇದೀಗ ಸುಹಾನಾ ಖಾನ್ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಲು ಸಕಲ ತಯಾರಿ ಮಾಡಿಕೊಳ್ತಿದ್ದಾರೆ. ಸುಜೋಯ್ ಘೋಷ್ ನಿರ್ದೇಶನದ ಸಿನಿಮಾದಲ್ಲಿ ಸುಹಾನಾ ಲೀಡ್ ಹೀರೋಯಿನ್ ಆಗಿ ಬಣ್ಣ ಹಚ್ಚಲಿದ್ದಾರೆ. ವಿಶೇಷ ಅಂದರೆ ಇದೇ ಸಿನಿಮಾದಲ್ಲಿ ಶಾರುಖ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ರಿಯಲ್ ಅಪ್ಪ- ಮಗಳು, ರೀಲ್‌ನಲ್ಲೂ ಅಪ್ಪ ಮತ್ತು ಮಗಳಾಗಿ ಕಾಣಿಸಿಕೊಳ್ತಿದ್ದಾರೆ. ಸದ್ಯ ಈ ಗುಡ್ ನ್ಯೂಸ್ ಕೇಳಿರೋ ಫ್ಯಾನ್ಸ್, ಇಬ್ಬರಿಗಾಗಿ ಯಾವ ರೀತಿಯ ಕಥೆ ಎಳೆಯನ್ನ ಹಣೆದಿರಬಹುದು ಎಂದು ಕ್ಯೂರಿಯಸ್ ಆಗಿದ್ದಾರೆ. ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

  • ಪೈರಸಿಗೆ ‘ಡಂಕಿ’ ಬಲಿ: ಮೊದಲ ದಿನವೇ ಚಿತ್ರತಂಡಕ್ಕೆ ಶಾಕ್

    ಪೈರಸಿಗೆ ‘ಡಂಕಿ’ ಬಲಿ: ಮೊದಲ ದಿನವೇ ಚಿತ್ರತಂಡಕ್ಕೆ ಶಾಕ್

    ಶಾರುಖ್ ಖಾನ್ (Shahrukh Khan) ನಟನೆಯ ಡಂಕಿ (Dunki) ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ನೆಚ್ಚಿನ ನಟನ ಸಿನಿಮಾವನ್ನು ಶಾರುಖ್ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಎಲ್ಲ ಕಡೆ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಈ ನಡುವೆ ಡಂಕಿ ಸಿನಿಮಾ ಪೈರಸಿಗೆ (Piracy) ತುತ್ತಾಗಿದೆ. ಹಲವು ವೆಬ್ ಸೈಟ್ ಗಳಲ್ಲಿ ಡಂಕಿ ಸಿನಿಮಾದ ಪೈರಸಿಯನ್ನು ಅಪ್ ಲೋಡ್ ಮಾಡುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಲಾಗಿದೆ.

    ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದು ಮಾತ್ರವಲ್ಲ, ಮುಕ್ಕಾಲು ಭಾಗ ಸಿನಿಮಾವನ್ನು ಎಕ್ಸ್ (ಟ್ವೀಟರ್) ನಲ್ಲಿ ಲೈವ್ ಕೂಡ ಮಾಡಿರುವ ವಿಷಯ ಹರಿದಾಡುತ್ತಿದೆ. ಹೀಗಾಗಿ ಸಹಜವಾಗಿಯೇ ಚಿತ್ರತಂಡಕ್ಕೆ ಹೊಡೆತ ಬಿದ್ದಿದೆ. ಪೈರಸಿಯನ್ನು ತೆಗೆದು ಹಾಕಿಸುವಲ್ಲಿ ನಿರ್ಮಾಪಕರು ಹರಸಾಹಸ ಪಡುತ್ತಿದ್ದಾರೆ.

    ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ (Raj Kumar Hirani) ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳಿದ್ದಾರೆ. ಒಂದೊಳ್ಳೆ ಸಂದೇಶದ ಜೊತೆಗೆ ಮನರಂಜನಾತ್ಮಕ ಅಂಶಗಳನ್ನು ಬೆರೆಸಿ ಸಿನಿಮಾ ಮಾಡಿದ್ದಾರೆ.

     

    ಶಾರುಖ್ ಖಾನ್ ನಾಯಕನಾಗಿ ನಟಿಸಿದ್ದು, ಬೊಮನ್ ಇರಾನಿ, ತಾಪ್ಸೀ ಪನ್ನು, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ತಾರಾಬಳಗದಲ್ಲಿದ್ದಾರೆ. ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಡಿ ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ.

  • ಮಗಳ ಜೊತೆ ಶಿರಡಿಗೆ ಬಂದ ಶಾರುಖ್ ಖಾನ್

    ಮಗಳ ಜೊತೆ ಶಿರಡಿಗೆ ಬಂದ ಶಾರುಖ್ ಖಾನ್

    ಡಂಕಿ ಸಿನಿಮಾ ರಿಲೀಸ್ ಬೆನ್ನಲ್ಲೇ ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan)  ಟೆಂಪಲ್ ರನ್ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಶಾರುಖ್ ಜಮ್ಮುವಿನ ವೈಷ್ಣೋದೇವಿ ದೇವಾಲಯಕ್ಕೇ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಶಿರಡಿ (Shirdi) ಸಾಯಿಬಾಬ (Saibaba) ದೇವಸ್ಥಾನಕ್ಕೆ ಪುತ್ರಿಯೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.

    ಶಾರುಖ್ ನಟನೆಯ ಚಿತ್ರಗಳು ಈ ವರ್ಷದಲ್ಲಿ ಬಾಕ್ಸ್ ಆಫೀಸಿನಲ್ಲಿ ಸಖತ್ ಕಮಾಯಿ ಮಾಡಿವೆ. ಸಾವಿರಾರು ಕೋಟಿ ರೂಪಾಯಿ ಗಳಿಸಿವೆ. ಡಂಕಿ ಸಿನಿಮಾದ ಮೇಲೂ ಅಷ್ಟೇ ನಿರೀಕ್ಷೆ ಮೂಡಿದ್ದು, ಹೀಗಾಗಿ ಶಾರುಖ್ ಖಾನ್ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

     

    ರಾಜಕುಮಾರ್ ಹಿರಾನಿ ಮತ್ತು ಶಾರುಖ್ ಕಾಂಬಿನೇಷನ್ ನ ಸಿನಿಮಾ ಡಂಕಿ. ಹಾಡು ಮತ್ತು ಟ್ರೈಲರ್ ನಿಂದಾಗಿ ಚಿತ್ರೋದ್ಯಮದಲ್ಲಿ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿದ ಚಿತ್ರ. ಅಲ್ಲದೇ, ಸಲಾರ್ ಸಿನಿಮಾ ಕೂಡ ಅದೇ ಹೊತ್ತಿಗೆ ತೆರೆ ಕಾಣುವುದರಿಂದ ಸಖತ್ ಫೈಟ್ ಇರಲಿದೆ. ಈ ಹೋರಾಟದಲ್ಲಿ ಸಲಾರ್ ಗೆಲ್ಲುತ್ತಾ ಅಥವಾ ಡಂಕಿ ಗೆಲ್ಲುತ್ತಾ ಕಾದು ನೋಡಬೇಕು.

  • ಶಾರೂಖ್, ಅಕ್ಷಯ್, ಅಜಯ್ ದೇವಗನ್‌ಗೆ ಕೇಂದ್ರ ಸರ್ಕಾರ ನೋಟಿಸ್

    ಶಾರೂಖ್, ಅಕ್ಷಯ್, ಅಜಯ್ ದೇವಗನ್‌ಗೆ ಕೇಂದ್ರ ಸರ್ಕಾರ ನೋಟಿಸ್

    ನವದೆಹಲಿ: ತಂಬಾಕು (Tobacco) ಕಂಪನಿಗಳನ್ನು ಅನುಮೋದಿಸಿದ್ದಕ್ಕೆ ನಟರಾದ ಶಾರುಖ್ ಖಾನ್ (Shah Rukh Khan), ಅಕ್ಷಯ್ ಕುಮಾರ್ (Akshay Kumar) ಹಾಗೂ ಅಜಯ್ ದೇವಗನ್ (Ajay Devgn) ಅವರಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ನೋಟಿಸ್ ನೀಡಿದೆ.

    ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯಿಸಿದ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಸ್‌ಬಿ ಪಾಂಡೆ ಅಕ್ಟೋಬರ್ 20 ರಂದು ತಂಬಾಕು ಕಂಪನಿಗಳನ್ನು ಅನುಮೋದಿಸಿದ್ದಕ್ಕಾಗಿ ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅವರಿಗೆ ಸಿಸಿಪಿಎ ನೋಟಿಸ್ ನೀಡಿದೆ ಎಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠಕ್ಕೆ ತಿಳಿಸಿದ್ದಾರೆ.

    ವಕೀಲ ಮೋತಿಲಾಲ್ ಯಾದವ್ ಅವರು ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾದ ಕೆಲವು ಉತ್ಪನ್ನಗಳು, ವಸ್ತುಗಳ ಜಾಹೀರಾತುಗಳು ಅಥವಾ ಅನುಮೋದನೆಗಳಲ್ಲಿ ಸೆಲೆಬ್ರಿಟಿಗಳು, ವಿಶೇಷವಾಗಿ ಪದ್ಮ ಪ್ರಶಸ್ತಿ ಪುರಸ್ಕೃತರು ಭಾಗವಹಿಸುವ ಕುರಿತು ಸಮಸ್ಯೆಗಳನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಲೋಕ ಸಮರ ಗೆಲ್ಲಲು ಕಾಂಗ್ರೆಸ್‌ ತಯಾರಿ – 4 ಕ್ಷೇತ್ರದಲ್ಲಿ ನಿಲ್ತಾರಾ ಸೆಲೆಬ್ರಿಟಿ ಅಭ್ಯರ್ಥಿಗಳು?

    ಸೆಪ್ಟೆಂಬರ್ 2022ರ ಆದೇಶವನ್ನು ಪಾಲಿಸದಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಕ್ರಮವನ್ನು ಕೋರಿ ಸಲ್ಲಿಸಿದ ಮನವಿಯಲ್ಲಿ ನ್ಯಾಯಾಲಯವು ಆಗಸ್ಟ್ 2023 ರಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ, ಮುಖ್ಯ ಆಯುಕ್ತರು ಮತ್ತು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಇದರಲ್ಲಿ ಅರ್ಜಿದಾರರಿಗೆ ಭಾರತ ಸರ್ಕಾರವನ್ನು ಸಂಪರ್ಕಿಸಲು ತಿಳಿಸಲಾಗಿದೆ.

    ನೋಟಿಸ್‌ಗೆ ಪ್ರತಿಕ್ರಿಯಿಸಿದ ಡೆಪ್ಯುಟಿ ಸಾಲಿಸಿಟರ್ ಜನರಲ್, ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅವರಿಗೆ ಅಕ್ಟೋಬರ್ 20 ರಂದು ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರ ಪೀಠಕ್ಕೆ ತಿಳಿಸಿದರು.

    ನಟ ಅಮಿತಾಬ್ ಬಚ್ಚನ್ ಅವರು ತಮ್ಮ ಒಪ್ಪಂದವನ್ನು ರದ್ದುಗೊಳಿಸಿದ್ದರೂ, ತಮ್ಮ ಜಾಹೀರಾತು ತೋರಿಸಿದ ತಂಬಾಕು ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ನ್ಯಾಯಾಲಯ ಮುಂದಿನ ವಿಚಾರಣೆಯನ್ನು 2024ರ ಮೇ 9ಕ್ಕೆ ನಿಗದಿಪಡಿಸಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು – ಇಂದು ಸುಪ್ರೀಂನಿಂದ ತೀರ್ಪು

  • ಶಾರುಖ್ ಪುತ್ರಿ ಸುಹಾನಾ ಬಾಲಿವುಡ್ ಆಳ್ತಾರೆ: ಹೊಗಳಿದ ಕರಣ್ ಜೋಹಾರ್

    ಶಾರುಖ್ ಪುತ್ರಿ ಸುಹಾನಾ ಬಾಲಿವುಡ್ ಆಳ್ತಾರೆ: ಹೊಗಳಿದ ಕರಣ್ ಜೋಹಾರ್

    ಬಾಲಿವುಡ್ (Bollywood) ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹಾರ್ (Karan Johar) ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಶಾರುಖ್ ಖಾನ್ (Shah Rukh Khan) ಪುತ್ರಿ ಸುಹಾನಾ ಖಾನ್ (Suhana Khan) ಕುರಿತಾಗಿ ಮಾತನಾಡಿರುವ ಕರಣ್, ‘ಮುಂದೊಂದು ದಿನ ಸುಹಾನಾ ಬಾಲಿವುಡ್ ಅನ್ನೇ ಆಳುತ್ತಾರೆ’ ಎಂದು ಹೇಳಿಕೊಂಡಿದ್ದಾರೆ. ಅದಕ್ಕೆ ಅವರು ತಮ್ಮದೇ ಆದ ಕಾರಣಗಳನ್ನೂ ನೀಡಿದ್ದಾರೆ.

    ಸ್ಟಾರ್ಸ್ ಕಿಡ್ಸ್ ಕಂಡರೆ ಕರಣ್ ಗೆ ಎಲ್ಲಿಲ್ಲದ ಅಭಿಮಾನ. ಅದರಲ್ಲೂ ತಮ್ಮ ಬ್ಯಾನರ್ ಮೂಲಕ ಸಾಕಷ್ಟು ಕಲಾವಿದರನ್ನು ಇವರು ಪರಿಚಯ ಮಾಡಿಕೊಟ್ಟಿದ್ದಾರೆ. ಸುಹಾನಾಗಾಗಿ ಪ್ರಾಜೆಕ್ಟ್ ವೊಂದನ್ನು ರೆಡಿ ಕೂಡ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸುಹಾನಾ ಬಗ್ಗೆ ಕರಣ್ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

    ಸುಹಾನಾ ಖಾನ್ ಇದೀಗ ತಂದೆಯಂತೆಯೇ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ಅವರು ವೆಬ್ ಸೀರಿಸ್ ಒಂದಕ್ಕೆ ಬಣ್ಣ ಹಚ್ಚಿದ್ದು, ಈ ವೆಬ್ ಸೀರಿಸ್ ಶೂಟಿಂಗ್ ಊಟಿಯ ವಿವಿಧ ಸ್ಥಳಗಳಲ್ಲಿ ನಡೆದಿದೆ. ತಮಗೆ ಬೋರು ಆಗಬಾರದು ಎಂದೇ ಫ್ರೆಂಡ್ಸ್ ಅನ್ನೂ ಜೊತೆಗೆ ಅವರು ಕರೆದುಕೊಂಡು ಹೋಗಿದ್ದರು.

    ದಿ ಆರ್ಚೀಸ್ ಹೆಸರಿನಲ್ಲಿ ತಯಾರಾಗುತ್ತಿರುವ ಈ ವೆಬ್ ಸೀರಿಸ್ ನಲ್ಲಿ ಸುಹಾನಾ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಬಹುತೇಕ ದೃಶ್ಯಗಳಲ್ಲಿ ಇವರೇ ಇರುವುದರಿಂದ ಕಷ್ಟವಾದರೂ ಇಷ್ಟಪಟ್ಟು ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರಂತೆ. ಶೂಟಿಂಗ್ ವೇಳೆಯಲ್ಲಿ ಪದೇ ಪದೇ ಅವರು ತಂದೆಯನ್ನು ನೆನಪಿಸಿಕೊಳ್ಳುತ್ತಿದ್ದಾರಂತೆ.

     

    ಶೂಟಿಂಗ್ ಅಂದರೆ, ಅಲ್ಲಿ ಬಿಂದಾಸ್ ಆಗಿ ಇರಬಹುದು ಎನ್ನುವ ಕಲ್ಪನೆ ನನ್ನಲ್ಲಿತ್ತು. ಈಗ ಅದರ ಕಷ್ಟ ಗೊತ್ತಾಗುತ್ತಿದೆ. ಅಪ್ಪಾಜಿ ಅಷ್ಟೊಂದು ವರ್ಷ ಅದು ಹೇಗೆ ಸಹಿಸಿಕೊಂಡು ಬಂದಿದ್ದಾರೋ ಎಂದು ನಿರ್ದೇಶಕರ ಮುಂದೆ ತಂದೆಯನ್ನು ಹಾಡಿ ಹೊಗಳಿದ್ದಾರಂತೆ. ಅಲ್ಲದೇ ತಮ್ಮೊಂದಿಗೆ ಕೆಲಸ ಮಾಡುತ್ತಿರುವ ಖುಷಿ ಕಪೂರ್ ಮತ್ತು ಜೋಯಾ ಅಖ್ತರ್ ಬಳಿಯೂ ತಮ್ಮ ತಂದೆಯನ್ನು ಗುಣಗಾನ ಮಾಡಿದ್ದಾರಂತೆ ಸುಹಾನಾ.