Tag: ಶಾರುಖ್ ಖಾನ್

  • ಸೋಲಿನ ವಿಷಯದಲ್ಲಿ ಶಾರುಖ್ ಎಳೆತಂದ ಕಂಗನಾ ರಣಾವತ್

    ಸೋಲಿನ ವಿಷಯದಲ್ಲಿ ಶಾರುಖ್ ಎಳೆತಂದ ಕಂಗನಾ ರಣಾವತ್

    ದ್ಯ ಲೋಕಸಭಾ ಅಖಾಡದಲ್ಲಿ ಕಸರತ್ತು ಮಾಡುತ್ತಿದ್ದಾರೆ ನಟಿ ಕಂಗನಾ ರಣಾವತ್. ಇದೇ ವೇಳೆಯಲ್ಲಿ ಮಾಧ್ಯಮಗಳ ಜೊತೆಯೂ ಅವರು ಮಾತನಾಡಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಸೂಪರ್ ಸ್ಟಾರ್ ಅನಿಸಿಕೊಂಡ ಶಾರುಖ್ (Shahrukh Khan) ಕೂಡ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಸೋಲುಂಡಿದ್ದಾರೆ. ನಾನು ಮತ್ತು ಶಾರುಖ್ ಈ ಯುಗದ ಕೊನೆಯ ಸೂಪರ್ ಸ್ಟಾರ್ಸ್ ಎಂದು ಬಣ್ಣಿಸಿಕೊಂಡಿದ್ದಾರೆ.

    ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಮಿಂಚಿನ ಸಂಚಾರವನ್ನೂ ಕಂಗನಾ ಕೈಗೊಂಡಿದ್ದಾರೆ.  ಸಖತ್ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರನ್ನು ಭೇಟಿ ಮಾಡಿ ತಮ್ಮ ಕ್ಷೇತ್ರದ ಬಗ್ಗೆ ಹಾಗೂ ರಾಜಕೀಯ ನಡೆಯ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಮಾಹಿತಿಯನ್ನು ಸ್ವತಃ ಅವರೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಕೂಡ ಮಾಡಿಕೊಂಡಿದ್ದಾರೆ.

    ಬಿಜೆಪಿ ತನ್ನ ಲೋಕಸಭಾ (Lok Sabha) ಚುನಾವಣೆಯ 5ನೇ ಪಟ್ಟಿ ಘೋಷಣೆ ಮಾಡಿ, ಈ ಪಟ್ಟಿಯಲ್ಲಿ ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut)ಗೆ ತವರು ರಾಜ್ಯ ಹಿಮಾಚಲ ಪ್ರದೇಶದ (Himachal Pradesh) ಮಂಡಿ (Mandi) ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಕಂಗನಾ ಮಂಡಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿನ  ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ಕೂಡ ಆಡುತ್ತಿದ್ದಾರೆ.

     

    ಹಲವು ತಿಂಗಳುಗಳಿಂದ ಕಂಗನಾ ರಣಾವತ್ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿ ಇತ್ತು. ಅವರು ಕೂಡ ಕೃಷ್ಣ ಕಣ್ಬಿಟ್ಟರೆ ರಾಜಕೀಯಕ್ಕೆ ಬರೋದು ದೊಡ್ಡ ವಿಷಯವೇ ಅಲ್ಲ ಎಂದೂ ಹೇಳಿದ್ದರು. ಜೊತೆಗೆ ರಾಜಕೀಯ ಮುಖಂಡರನ್ನು ಭೇಟಿ ಮಾಡುವ ಮೂಲಕ ಟಿಕೆಟ್ ಬೇಡಿಕೆಯನ್ನೂ ಇಟ್ಟಿದ್ದರು.

  • ರಾಮ್ ಚರಣ್‌ಗೆ ‘ಇಡ್ಲಿ ವಡಾ’ ಎಂದ ಶಾರುಖ್ ಖಾನ್- ಫ್ಯಾನ್ಸ್ ಆಕ್ರೋಶ

    ರಾಮ್ ಚರಣ್‌ಗೆ ‘ಇಡ್ಲಿ ವಡಾ’ ಎಂದ ಶಾರುಖ್ ಖಾನ್- ಫ್ಯಾನ್ಸ್ ಆಕ್ರೋಶ

    ವಿಶ್ವದ ಟಾಪ್ ಶ್ರೀಮಂತರಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ (Mukesh Ambani) ಮಗ ಅನಂತ್ ಪ್ರೀ- ವೆಡ್ಡಿಂಗ್‌ ಕಾರ್ಯಕ್ರಮ ಅದ್ಧೂರಿಯಾಗಿ ತೆರೆಬಿದ್ದಿದೆ. ಇಡೀ ಬಾಲಿವುಡ್ ಸೆಲೆಬ್ರಿಟಿಗಳು ಅಂಬಾನಿ ಮನೆ ಫಂಕ್ಷನ್‌ನಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮ ಭಾಗಿಯಾಗಿದ್ದ ವೇಳೆ, ‘ಆರ್‌ಆರ್‌ಆರ್’ (RRR) ಹೀರೋ ರಾಮ್ ಚರಣ್‌ಗೆ (Ram Charan) ಇಡ್ಲಿ- ವಡಾ ಎಂದು ಶಾರುಖ್ ಖಾನ್ ಕರೆದಿದ್ದಾರೆ. ಅದಕ್ಕೆ ಚರಣ್ ಫ್ಯಾನ್ಸ್ ಕಿಂಗ್ ಖಾನ್ ವಿರುದ್ಧ ಫುಲ್ ಗರಂ ಆಗಿದ್ದಾರೆ.

    ಇಡ್ಲಿ- ವಡಾ ಸೌತ್‌ನ ಸ್ಪೆಷಲ್ ತಿಂಡಿ. ಆದರೆ ಆಸ್ಕರ್ ಪ್ರಶಸ್ತಿ ತಂದುಕೊಟ್ಟ ಸೌತ್ ನಟ ರಾಮ್ ಚರಣ್‌ನನ್ನು ಇಡ್ಲಿ ಅಂತ ಕರೆಯೋದಾ? ಕಿಂಗ್‌ಖಾನ್ ಶಾರುಖ್ ಮಾತಿನ ಭರದಲ್ಲಿ ಮದ ಹೊರಹಾಕಿದ್ದಾರೆ. ಅಷ್ಟಕ್ಕೂ ಇಡ್ಲಿ ವಡೆ ಅಂದಿದ್ದು ಯಾರಿಗ್ ಗೊತ್ತೆ? ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಇದನ್ನೂ ಓದಿ:ಕಮಲ್ ಹಾಸನ್ ನಟನೆಯ ಬಿಗ್ ಬಜೆಟ್ ಚಿತ್ರದಿಂದ ದುಲ್ಕರ್ ಸಲ್ಮಾನ್ ಔಟ್

    ಅಂಬಾನಿ ಕುಡಿ ಅನಂತ್ ಅಂಬಾನಿ ಮದುವೆಗೆ ಸಾಕ್ಷಿಯಾಗಿದ್ದ ದಕ್ಷಿಣ ಸೆಲೆಬ್ರಿಟಿಗಳು ಅಂದ್ರೆ ರಜನಿಕಾಂತ್ ಕುಟುಂಬ ಇನ್ನೊಂದು ರಾಮ್‌ಚರಣ್ ಕುಟುಂಬ. ಜಗತ್ತಿನ ಖ್ಯಾತನಾಮರೆಲ್ಲ ಸೇರಿದ್ದ ಮದುವೆ ಪ್ರೀ- ವೆಡ್ಡಿಂಗ್‌ ಕಾರ್ಯಕ್ರಮದ ವೇದಿಕೆಯಲ್ಲಿ ನಟ-ನಟಿಯರು ಬಂದು ತಮ್ಮ ಟ್ಯಾಲೆಂಟ್ ತೋರಿಸಿದ್ರು. ಈ ವೇಳೆ, ಆತುರಕ್ಕೆ ಬಿದ್ದ ಶಾರುಖ್ ಎಡವಟ್ಟು ಮಾಡ್ಕೊಂಡಿದ್ದಾರೆ. ರಾಮ್‌ಚರಣ್ ಹಾಡಿಗೆ ಹೆಜ್ಜೆ ಹಾಕುವ ವೇಳೆ, ರಾಮ್‌ಚರಣ್‌ರನ್ನ ವೇದಿಕೆ ಮೇಲೆ ಕರೆಯೋ ಭರದಲ್ಲಿ ಇಡ್ಲಿ-ವಡೆ ರಾಮ್‌ಚರಣ್ ಮೇಲೆ ಬನ್ನಿ ಎಂದಿದ್ದಾರೆ.

    ‘ಆರ್‌ಆರ್‌ಆರ್’ (RRR) ನಾಟು-ನಾಟು ಸೂಪರ್ ಹಿಟ್ ಹಾಡು. ಇದಕ್ಕೆ ಆಸ್ಕರ್ ಪ್ರಶಸ್ತಿ ಕೂಡ ದಕ್ಕಿತ್ತು. ಈ ಹಾಡಿಗೆ ಹೆಜ್ಜೆ ಬಾರದ ಸಲ್ಮಾನ್-ಶಾರುಖ್-ಆಮೀರ್ ಖಾನ್ ನೃತ್ಯ ಮಾಡಲು ಶುರು ಹಚ್ಕೊಂಡ್ರು. ಈ ವೇಳೆ, ಕೆಳಗೆ ಕುಳಿತಿದ್ದ ರಾಮ್‌ಚರಣ್‌ರನ್ನ ಮೇಲೆ ಕರೆದಿರುವ ಕಿಂಗ್ ಖಾನ್ ರಾಮ್‌ಚರಣ್ ಹೆಸರಿನ ಹಿಂದೆ ಇಡ್ಲಿ-ವಡೆ ಸೇರಿಸಿದ್ದು, ಅಪಹಾಸ್ಯ ಮಾಡಿದಂತಿದೆ ಎಂದು ಟೀಕೆಗೊಳಗಾಗಿದೆ. ಆದರೆ ಉತ್ತರದವರು ಇದೊಂದು ಸಿನಿಮಾ ಡೈಲಾಗ್ ಬದಲಿಸಿ ಹೇಳಿದ್ದಾರೆ. ಶಾರುಖ್ ಎಲ್ಲರಿಗೂ ಗೌರವ ಕೊಡ್ತಾರೆ ಎಂದು ಫ್ಯಾನ್ಸ್ ಚರ್ಚೆಗಿಳಿದಿದ್ದಾರೆ.

  • ಯಾವಾಗ ಶುರುವಾಗಲಿದೆ ಶಾರುಖ್ ಖಾನ್, ಸುಹಾನಾ ನಟನೆಯ ಸಿನಿಮಾ?

    ಯಾವಾಗ ಶುರುವಾಗಲಿದೆ ಶಾರುಖ್ ಖಾನ್, ಸುಹಾನಾ ನಟನೆಯ ಸಿನಿಮಾ?

    ‘ಪಠಾಣ್’ (Paathan) ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರು ತಮ್ಮ ಮಗಳ ಜೊತೆ ಸಿನಿಮಾ ಮಾಡುವ ಬಗ್ಗೆ ಈಗಾಗಲೇ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಒಂದೇ ಸಿನಿಮಾದಲ್ಲಿ ಅಪ್ಪ-ಮಗಳನ್ನ ಕಣ್ತುಂಬಿಕೊಳ್ಳುವ ಭಾಗ್ಯ ಫ್ಯಾನ್ಸ್‌ಗೆ ಸಿಗಲಿದೆ. ಶಾರುಖ್ ಮತ್ತು ಸುಹಾನಾ (Suhana Khan) ಖಾನ್ ಜೊತೆಯಾಗಿ ನಟಿಸುತ್ತಿದ್ದಾರೆ ಎಂಬುದು ಹಳೆಯ ವಿಚಾರ. ಆದರೆ ಈ ಸಿನಿಮಾ ಯಾವಾಗ ಶುರುವಾಗುತ್ತೆ? ಇಬ್ಬರ ಪಾತ್ರ ಹೇಗಿದೆ? ಎಂಬುದರ ಮಾಹಿತಿ ಇಲ್ಲಿದೆ.

    ‘ಪಠಾಣ್ 2’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಶಾರುಖ್ ಬ್ಯುಸಿಯಿದ್ರೆ, ಇತ್ತ ಸುಹಾನಾ ನಟಿಸಿದ ಮೊದಲ ಸಿನಿಮಾ ‘ಆರ್ಚೀಸ್’ ರಿಲೀಸ್ ಆದ್ಮೇಲೆ ಮತ್ತೊಂದು ಬಿಗ್ ಆಫರ್ ಅನ್ನು ಸುಹಾನಾ ಬಾಚಿಕೊಂಡಿದ್ದಾರೆ. ಸದ್ಯ ಶಾರುಖ್‌- ಸುಹಾನಾ ನಟನೆಯ ಈ ಚಿತ್ರಕ್ಕೆ ‘ಕಿಂಗ್’ (King) ಎಂದು ಟೈಟಲ್‌ ಫೈನಲ್‌ ಮಾಡಿದ್ದಾರೆ.

    ‘ಕಿಂಗ್’ ಆ್ಯಕ್ಷನ್ ಕುರಿತ ಸಿನಿಮಾ ಆಗಿರೋದ್ರಿಂದ ಸುಹಾನಾಗೆ ಪಾತ್ರಕ್ಕೆ ತಕ್ಕಂತೆ ಟ್ರೈನಿಂಗ್ ಕೊಡಲಾಗುತ್ತಿದೆ. ತಮ್ಮ ಪಾತ್ರಕ್ಕಾಗಿ ತೆರೆಮರೆಯಲ್ಲಿ ನಟಿ ಸಖತ್ ಕಸರತ್ತು ಮಾಡ್ತಿದ್ದಾರೆ. ಶಾರುಖ್ ಮತ್ತು ಸುಹಾನಾ ಇಬ್ಬರ ಪಾತ್ರ ಕೂಡ ವಿಭಿನ್ನವಾಗಿದೆ. ಈ ಸಿನಿಮಾಗೆ ಸುಜೋಯ್ ಘೋಷ್ ನಿರ್ದೇಶನ ಮಾಡ್ತಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಪ್ರಥಮ್ ನಟಿಸಿ, ನಿರ್ದೇಶಿಸಿದ ‘ಫಸ್ಟ್ ನೈಟ್ ವಿತ್ ದೆವ್ವ’ ಟೀಸರ್ ಬಿಡುಗಡೆ

    ಮಗಳ ಸಿನಿಮಾಗೆ ತಂದೆಯೇ ಸಾಥ್ ನೀಡ್ತಿದ್ದಾರೆ. ‘ಪಠಾಣ್’ ಸಿನಿಮಾ ಸಕ್ಸಸ್ ಆದ್ಮೇಲೆ ಶಾರುಖ್ ಖಾನ್‌ಗೆ ಹೆಚ್ಚಿನ ಬೇಡಿಕೆಯಿದೆ. ತನ್ನ ಹಾಗೆಯೇ ಮಗಳು ಕೂಡ ಸಕ್ಸಸ್ ಫುಲ್ ಕಲಾವಿದೆಯಾಗಿ ಮಿಂಚಬೇಕು ಎಂದು ಕಿಂಗ್ ಖಾನ್ ಆಸೆ. ಹಾಗಾಗಿ ಮಗಳಿಗೆ ಎಲ್ಲಾ ರೀತಿಯ ಟ್ರೈನಿಂಗ್ ಕೊಟ್ಟು ಕ್ಯಾಮೆರಾ ಮುಂದೆ ನಿಲ್ಲಿಸಲು ಶಾರುಖ್ ನಿರ್ಧರಿಸಿದ್ದಾರೆ.

    ಈ ವರ್ಷ ಮೇ ಅಂತ್ಯದಲ್ಲಿ ‘ಕಿಂಗ್’ ಸಿನಿಮಾ ಶೂಟಿಂಗ್ ಶುರುವಾಗಲಿದೆ. ರೆಡ್ ಚಿಲ್ಲೀಸ್ ಸಂಸ್ಥೆ ನಿರ್ಮಾಣ ಮಾಡ್ತಿದೆ. ಈ ಚಿತ್ರದ ನಿರ್ಮಾಣಕ್ಕೆ ‘ಪಠಾಣ್’ ಡೈರೆಕ್ಟರ್ ಸಿದ್ಧಾರ್ಥ್ ಆನಂದ್ ಸಾಥ್ ನೀಡುತ್ತಿದ್ದಾರೆ.

  • ಎರಡು ಎಕರೆ ಜಮೀನು ಖರೀದಿಸಿದ ಶಾರುಖ್ ಪುತ್ರಿ  ಸುಹಾನಾ ಖಾನ್

    ಎರಡು ಎಕರೆ ಜಮೀನು ಖರೀದಿಸಿದ ಶಾರುಖ್ ಪುತ್ರಿ ಸುಹಾನಾ ಖಾನ್

    ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shah Rukh Khan)  ಪುತ್ರಿ ಸುಹಾನಾ (Suhana Khan) ರಿಯಲ್ ಎಸ್ಟೇಟ್ (Real Estate) ಉದ್ಯಮಕ್ಕೆ ಕಾಲಿಟ್ಟಿದ್ದೀರಾ? ಹಾಗಂತ ಮಾತನಾಡುತ್ತಿದೆ ಬಿಟೌನ್. ಮುಂಬೈ ಸಮೀಪದ ಅಲಿಭಾಗ್ ನಲ್ಲಿ ಸುಹಾನಾ ಬರೋಬ್ಬರಿ ಎರಡು ಎಕರೆ ಜಮೀನು ಖರೀದಿಸಿದ್ದಾರಂತೆ. ಹಾಗಾಗಿ ಸುಹಾನಾ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಲಿದ್ದಾರೆ ಎನ್ನುವ ಅನುಮಾನ ಮೂಡಿದೆ.

    ಈ ಜಮೀನಿಗಾಗಿ ಅವರು 12.91 ಕೋಟಿ ರೂಪಾಯಿ ನೀಡಿದ್ದು, ಈ ಪ್ರಮಾಣದ ಹಣ ತೊಡಗಿಸಿದ್ದು ಅವರ ಹೊಸ ಯೋಜನೆಗಾಗಿ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸುಹಾನಾ ಸಿನಿಮಾ ರಂಗದಲ್ಲೇ ಸಕ್ರೀಯರಾಗುತ್ತಾರೆ ಎಂದು ಹೇಳಲಾಗಿತ್ತು. ಅದರಂತೆ ಚಿತ್ರವೊಂದರಲ್ಲಿ ನಟಿಸಿದ್ದರು. ಈಗ ರಿಯಲ್ ಎಸ್ಟೇಟ್ ನಲ್ಲಿ ಭಾರೀ ಹೂಡಿಕೆ ಮಾಡಿದ್ದಾರೆ.

    ಸುಹಾನಾ ಖಾನ್ ದುಬಾರಿ ಹುಡುಗಿ ಎಂದೇ ಫೇಮಸ್. ಸಾರ್ವಜನಿಕ ಸಮಾರಂಭಗಳಲ್ಲಿ ಅವರು ಕಾಣಿಸಿಕೊಂಡಾಗ ಅವರ ಧರಿಸುವ ಬಟ್ಟೆಗಳ ಬೆಲೆ ಬಗ್ಗೆ ಯಾವತ್ತಿಗೂ ಚರ್ಚೆ ಆಗುತ್ತದೆ.  ಇತ್ತೀಚೆಗೆ ಗೆಳತಿಯರೊಂದಿಗೆ ಕಾಣಿಸಿಕೊಂಡಿದ್ದ ಸುಹಾನಾ ಬರೋಬ್ಬರಿ 69,574 ರೂ. ಬೆಲೆಯ ಶೂ ಧರಿಸಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಕೇವಲ ಸಿನಿಮಾ ನಟ-ನಟಿಯರು ಹೆಚ್ಚು ಬೆಲೆ ಬಾಳುವ ಶೂ ಮತ್ತು ಬಟ್ಟೆಗಳನ್ನು ಧರಿಸುತ್ತಾರೆ ಎಂಬ ಮಾತನ್ನು ಸುಹಾನ ಸುಳ್ಳು ಮಾಡಿದ್ದರು.

     

    ಸುಹನಾ ತನ್ನ ಗೆಳತಿಯರಾದ ಶನಯಾ ಕಪೂರ್ ಮತ್ತು ಅಹನಾ ಪಾಂಡ್ಯೆ ರೊಂದಿಗೆ ಕಾಣಿಸಿಕೊಳ್ಳುವ ಮೂಲಕ ಎಲ್ಲರನ್ನು ಆಕರ್ಷಿಸಿದ್ದರು. ನೀಲಿ ಬಣ್ಣದ ಟೋನ್ ಜೀನ್ಸ್ ಜೊತೆಗೆ ಬಿಳಿ ಬಣ್ಣದ ಕ್ರಾಪ್ ಟಾಪ್ ಧರಿಸಿದ್ದ ಸುಹನಾ ಕ್ಲಾಸಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಅವೆಲ್ಲವೂ ದುಬಾರಿ ಬೆಲೆಯದ್ದು ಆಗಿದ್ದವು.

  • WPL 2024: ಶಾರುಖ್‌ ಖಾನ್‌ ಉಪಸ್ಥಿತಿಯಲ್ಲಿ ವುಮೆನ್‌ ಪ್ರೀಮಿಯರ್‌ ಲೀಗ್‌ಗೆ ಅದ್ಧೂರಿ ಚಾಲನೆ

    WPL 2024: ಶಾರುಖ್‌ ಖಾನ್‌ ಉಪಸ್ಥಿತಿಯಲ್ಲಿ ವುಮೆನ್‌ ಪ್ರೀಮಿಯರ್‌ ಲೀಗ್‌ಗೆ ಅದ್ಧೂರಿ ಚಾಲನೆ

    ವುಮೆನ್ ಪ್ರೀಮಿಯರ್ ಕ್ರಿಕೆಟ್ ಲೀಗ್‌ಗೆ (WPL 2024) ಇಂದು (ಫೆ.23) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವರ್ಣರಂಜಿತ ಚಾಲನೆ ಸಿಕ್ಕಿದೆ. ಮಹಿಳಾ ಕ್ರಿಕೆಟ್ ತಂಡಕ್ಕೆ ಬೆಂಬಲ ಸೂಚಿಸಲು ಶಾರುಖ್ ಖಾನ್ (Sharukh Khan) ಸೇರಿದಂತೆ ಅನೇಕ ಬಾಲಿವುಡ್‌ ನಟರು ಭಾಗಿಯಾಗಿ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಮೊದಲ ದಿನವೇ ‘ಆರ್ಟಿಕಲ್ 370’ ಚಿತ್ರಕ್ಕೆ ಅತ್ಯುತ್ತಮ ರೆಸ್ಪಾನ್ಸ್

    ಬೆಂಗಳೂರಿಗೆ ಬಾಲಿವುಡ್‌ನ ಸೂಪರ್ ಸ್ಟಾರ್‌ಗಳು ವಿಸಿಟ್ ಮಾಡಿದ್ದಾರೆ. ಬಾದಶಾ ಶಾರುಖ್ ಖಾನ್ ಜೊತೆ ಟೈಗರ್ ಶ್ರಾಫ್, ಶಾಹಿದ್ ಕಪೂರ್ (Shahid Kapoor), ವರುಣ್ ಧವನ್ (Varun Dhawan), ಸಿದ್ಧಾರ್ಥ್ ಮಲ್ಹೋತ್ರಾ ಕೂಡ ವುಮೆನ್ ಪ್ರೀಮಿಯರ್ ಕ್ರಿಕೆಟ್ ಲೀಗ್‌ನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿದ್ದಾರೆ. ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ.

    ಅದಷ್ಟೇ ಅಲ್ಲ, ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ತಮ್ಮ ನಟನೆಯ ಹಾಡುಗಳಿಗೆ ಹೆಜ್ಜೆ ಹಾಕಿ ಮನರಂಜನೆ ನೀಡಿದ್ದಾರೆ. ಶಾಹಿದ್, ಸಿದ್ಧಾರ್ಥ್, ಟೈಗರ್‌ ಶ್ರಾಫ್‌ ಸೇರಿದಂತೆ ಅನೇಕರು ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದಾರೆ.

    ಕಳೆದ ವರ್ಷ ವುಮೆನ್ ಪ್ರೀಮಿಯರ್ ಲೀಗ್ ಮುಂಬೈನಲ್ಲಿ ನಡೆದಿತ್ತು. ಈ ಬಾರಿ ಬೆಂಗಳೂರು ಮತ್ತು ನವದೆಹಲಿಯಲ್ಲಿ ನಡೆಯಲಿದೆ. ಕಳೆದ ವರ್ಷದ ಫೈನಲಿಸ್ಟ್‌ಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂದು (ಫೆ.23) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಟ ಆಡ್ತಿದ್ದಾರೆ. ಅಂತಿಮ ಪಂದ್ಯ ಮಾರ್ಚ್ 17ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

  • ‘ಪಠಾಣ್ 2’ಗೆ ನಿರ್ಮಾಪಕ ಆದಿತ್ಯ ಚೋಪ್ರಾ ಚಿಂತನೆ

    ‘ಪಠಾಣ್ 2’ಗೆ ನಿರ್ಮಾಪಕ ಆದಿತ್ಯ ಚೋಪ್ರಾ ಚಿಂತನೆ

    ಶಾರುಖ್ ಖಾನ್ (Shah Rukh Khan) ನಟನೆಯ ಪಠಾಣ್ ಸಿನಿಮಾ ಏನೆಲ್ಲ ಗೊಂದಲಗಳ ನಡುವೆಯೂ ಸೂಪರ್ ಹಿಟ್ ಆಗಿತ್ತು. ಕೇಸರಿ ಬಿಕಿನಿ ವಿಚಾರವಾಗಿ ಹೊತ್ತಿಕೊಂಡಿದ್ದ ವಿವಾದದ ಬೆಂಕಿ, ಸಿನಿಮಾವನ್ನೂ ಮುಗಿಸಲಿದೆ ಎಂದು ಭವಿಷ್ಯ ನುಡಿಯಲಾಗಿತ್ತು. ಆದರೆ, ಅದೆಲ್ಲವನ್ನೂ ಮೀರಿ ಸಿನಿಮಾ ಗೆದ್ದಿತ್ತು. ಇದೀಗ ಪಠಾಣ್ ಸಿನಿಮಾ ಸೀಕ್ವೆಲ್ (Pathan 2)ಮಾಡಲು ನಿರ್ಮಾಪಕ ಆದಿತ್ಯ ಚೋಪ್ರಾ (Aditya Chopra) ಚಿಂತನೆ ನಡೆಸಿದ್ದಾರೆ. ಈ ಕುರಿತಂತೆ ಶಾರುಖ್ ಖಾನ್ ಜೊತೆ ಅವರು ಚರ್ಚೆ ಕೂಡ ಮಾಡಿದ್ದಾರಂತೆ.

    ಪಠಾಣ್  ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿತ್ತು. ಸಿನಿಮಾ ರಿಲೀಸ್ ಆಗಿ 27ನೇ ದಿನಕ್ಕೆ ಸಾವಿರ ಕೋಟಿ (Thousand Crore) ಕ್ಲಬ್ (Club) ಸೇರಿತ್ತು. ಆ ವರ್ಷದಲ್ಲಿ ರಿಲೀಸ್ ಆದ ಬಾಲಿವುಡ್ ಸಿನಿಮಾಗಳಲ್ಲಿ ಅತೀ ಹೆಚ್ಚು ಹಣ ಮಾಡಿದ ಚಿತ್ರ ಎನ್ನುವ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿತ್ತು. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದರು.

    ಪಠಾಣ್ ಸಿನಿಮಾದ ಹಾಡೊಂದು ವಿವಾದಕ್ಕೀಡಾದಾಗ ಈ ಸಿನಿಮಾವನ್ನು ಗೆಲ್ಲಿಸಲೇಬಾರದು ಎಂದು ಹಲವರು ಕರೆ ನೀಡಿದರು. ಪ್ರತಿಭಟನೆಗಳು ನಡೆದವು, ಬಾಯ್ಕಾಟ್ ಪಠಾಣ್ ಅಭಿಯಾನ ಶುರುವಾಯಿತು. ಚಿತ್ರಮಂದಿರಗಳ ಮೇಲೆ ದಾಳಿ ನಡೆದವು. ಸಿನಿಮಾದ ಪೋಸ್ಟರ್ ಹರಿದು ಹಾಕಲಾಯಿತು. ಪೋಸ್ಟರ್ ಸುಡಲಾಯಿತು. ಏನೆಲ್ಲ ಸಂಕಷ್ಟಗಳು ಎದುರಾದರೂ, ಪಠಾಣ್ ಮಾತ್ರ ಗೆಲುವು ಸಾಧಿಸಿತ್ತು.

    ಪಠಾಣ್ ಒಂದೊಳ್ಳೆ ಸಿನಿಮಾ. ಎಲ್ಲರ ಮೆಚ್ಚುಗೆಗೂ ಅದು ಪಾತ್ರವಾಗಲಿದೆ. ದೇಶಭಕ್ತಿ ಸಾರುವಂತಹ ಕಥೆಯನ್ನು ಇದು ಒಳಗೊಂಡಿದೆ ಎಂದು ಶಾರುಖ್ ಹೇಳಿದರೂ, ವಿರೋಧಿಗಳು ಮಾತ್ರ ಕೇಳಲಿಲ್ಲ. ಕೆಲವು ರಾಜ್ಯಗಳಲ್ಲಿ ಸಿನಿಮಾವನ್ನು ನಿಷೇಧ ಮಾಡುವಂತೆ ಒತ್ತಡ ತರಲಾಯಿತು. ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಿದರು. ಆದರೂ, ಪ್ರತಿಭಟನೆ ಮಾತ್ರ ನಿಲ್ಲಲಿಲ್ಲ.

     

    ಪಠಾಣ್ ಸಿನಿಮಾಗಾಗಿ ಇಡೀ ಬಾಲಿವುಡ್ ಒಂದಾಯಿತು. ಈ ಸಿನಿಮಾವನ್ನು ಗೆಲ್ಲಿಸುವ ಮೂಲಕ ಬಾಲಿವುಡ್ ಗೆಲ್ಲಿಸೋಣ ಎನ್ನುವ ಮಾತು ಕೇಳಿ ಬಂತು. ಹಾಗಾಗಿ ಶಾರುಖ್ ವಿರೋಧಿಗಳು ಕೂಡ ಈ ಸಿನಿಮಾವನ್ನು ಮೆಚ್ಚಿ ಮಾತನಾಡಿದರು. ಮೊದ ಮೊದಲು ತೆಗಳುತ್ತಿದ್ದವರು, ಆ ಮೇಲೆ ಸಿನಿಮಾ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದರು. ಇದೇ ಸಿನಿಮಾದ ಮುಂದುವರೆದ ಭಾಗವನ್ನು ಮಾಡಲು ಚಿತ್ರತಂಡ ಸಜ್ಜಾಗಿದೆ.

  • ಒಟಿಟಿಗೆ ಬಂತು ಶಾರುಖ್ ಖಾನ್ ನಟನೆಯ ಡಂಕಿ

    ಒಟಿಟಿಗೆ ಬಂತು ಶಾರುಖ್ ಖಾನ್ ನಟನೆಯ ಡಂಕಿ

    ಡಿಸೆಂಬರ್ 21 ರಂದು ವಿಶ್ವದಾದ್ಯಂತ ರಿಲೀಸ್ ಆಗಿದ್ದ ಶಾರುಖ್ ಖಾನ್ (Shahrukh Khan) ನಟನೆಯ ಡಂಕಿ ಸಿನಿಮಾ ಇದೀಗ ಒಟಿಟಿಗೂ (OTT)  ಪ್ರವೇಶ ಮಾಡಿದೆ. ಪ್ರೇಮಿಗಳ ದಿನದಂದು ಮಧ್ಯ ರಾತ್ರಿ 12 ಗಂಟೆಯಿಂದ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಥಿಯೇಟರ್ ನಲ್ಲಿ ಅಷ್ಟೇನೂ ಸದ್ದು ಮಾಡದ ಡಂಕಿಗೆ ಒಟಿಟಿಯಲ್ಲಿ ಹೇಗೆ ಪ್ರತಿಕ್ರಿಯೆ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

    ಡಂಕಿ (Dunki) ಕ್ಲಾಸ್​ ಸಿನಿಮಾ ಆದ್ದರಿಂದ ಬಾಕ್ಸ್ ಆಫೀಸಿನಲ್ಲಿ ನಿಧಾನಗತಿಯಲ್ಲಿ ಕಲೆಕ್ಷನ್​ ಮಾಡಿತ್ತು. ಬಿಡುಗಡೆಯಾದ ಏಳು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್​  305 ಕೋಟಿ ರೂಪಾಯಿ ಆಗಿದ್ದು, ಭಾರತದಲ್ಲಿಯೇ 150 ಬಾಚಿಕೊಂಡಿತ್ತು. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿತ್ತು. ಶಾರುಖ್ ಈ ಹಿಂದಿನ ಸಿನಿಮಾಗಳಾದ ಪಠಾಣ್ ಹಾಗೂ ಜವಾನ್ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿದ್ದವು. ಈ ಎರಡು ಚಿತ್ರಗಳು 1000 ಕೋಟಿ ಕ್ಲಬ್ ಸೇರಿದ್ದವು.

    ‘ಡಂಕಿ’ ಸಿನಿಮಾದಲ್ಲಿ ಶಾರುಖ್​​ ಖಾನ್​ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್​, ಬೊಮನ್​ ಇರಾನಿ, ವಿಕ್ರಂ ಕೊಚ್ಚರ್​, ಅನಿಲ್​ ಗ್ರೋವರ್​ ಮುಂತಾದವರು ನಟಿಸಿದ್ದಾರೆ. ರಾಜ್​ಕುಮಾರ್​ ಹಿರಾನಿ ಅವರು ಪ್ರತಿ ಸಿನಿಮಾದಲ್ಲೂ ಒಂದು ಗಟ್ಟಿಯಾದ ಕಥಾವಸ್ತು ಆಯ್ಕೆ ಮಾಡಿಕೊಳ್ಳುತ್ತಾರೆ. ಅಕ್ರಮವಾಗಿ ದೇಶಗಳ ಗಡಿ ದಾಟುವವರ ಬಗ್ಗೆ ‘ಡಂಕಿ’ ಸಿನಿಮಾದಲ್ಲಿ ತೋರಿಸಲಾಗಿದೆ

    ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ರಾಜ್ ಕುಮಾರ್ ಹಿರಾನಿ ಹಾಗೂ ಶಾರುಖ್ ಕಾಂಬಿನೇಷನ್ ಅಲ್ಪಮಟ್ಟಿಗೆ  ವರ್ಕೌಟ್ ಆಗಿತ್ತು.

  • ‘ಟಾಕ್ಸಿಕ್’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸುತ್ತಾರಾ? ಯಶ್ ಸ್ಪಷ್ಟನೆ

    ‘ಟಾಕ್ಸಿಕ್’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸುತ್ತಾರಾ? ಯಶ್ ಸ್ಪಷ್ಟನೆ

    ಕೆಜಿಎಫ್, ಕೆಜಿಎಫ್ 2 (KGF 2) ಸಿನಿಮಾ ಸಕ್ಸಸ್ ಕಂಡ ಮೇಲೆ ನ್ಯಾಷನಲ್ ಸ್ಟಾರ್ ಯಶ್ (Yash) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸುತ್ತಾರೆ ಎಂದು ಸುದ್ದಿ ಹಬ್ಬಿತ್ತು ಇದು ನಿಜನಾ? ಎಂಬುದರ ಬಗ್ಗೆ ಸುದ್ದಿಗೋಷ್ಠಿಯೊಂದರಲ್ಲಿ ಯಶ್ ಸ್ಪಷ್ಟನೆ ನೀಡಿದ್ದಾರೆ.

    ‘ಟಾಕ್ಸಿಕ್’ ಶೂಟಿಂಗ್ ಇಷ್ಟರಲ್ಲೇ ಶುರು ಆಗಲಿದೆ. ದೊಡ್ಡ ಮಟ್ಟದ ಪ್ಲಾನ್ ನಡೀತಿದೆ. ‘ಟಾಕ್ಸಿಕ್’ ಚಿತ್ರದ ಬಗ್ಗೆ ಯಾವುದೇ ಕಾಂಪ್ರಮೈಸ್ ಇಲ್ಲದೇ ಮಾಡುತ್ತಿರುವ ಸಿನಿಮಾ ಆಗಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಯಶ್ ಹೇಳಿದ್ದಾರೆ. ‘ಟಾಕ್ಸಿಕ್’ ಶಾರುಖ್ ಖಾನ್ (Sharukh Khan) ನಟಿಸುತ್ತಿಲ್ಲ. ಈ ಸುದ್ದಿ ಸುಳ್ಳು, ಎನೀದರೂ ನಾನು ಮಾಹಿತಿ ನೀಡುತ್ತೇನೆ ಎಂದು ಕ್ಲ್ಯಾರಿಟಿ ಕೊಟ್ಟಿದ್ದಾರೆ.

    ಡೈರೆಕ್ಟರ್ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮೂಡಿ ಬರುತ್ತಿದೆ. ಕೆವಿಎನ್ ಸಂಸ್ಥೆ ಜೊತೆ ಯಶ್ ಕೈಜೋಡಿಸಿದ್ದಾರೆ.

    ‘ಕೆಜಿಎಫ್’ (KGF) ಸಿನಿಮಾದ ಸಕ್ಸಸ್ ನಂತರ ಯಶ್ ಮುಂದಿನ ಸಿನಿಮಾಗಳ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ. ಟಾಕ್ಸಿಕ್ ಸಿನಿಮಾದಲ್ಲಿ ವಿಭಿನ್ನ ಪಾತ್ರವಿದೆ. ಯಾವ ತರಹದ ಕಥೆ? ಪಾತ್ರ ಹೇಗಿರಲಿದೆ ಎಂಬುದನ್ನು ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

  • ಕತಾರ್‌ನಿಂದ ನೌಕಾಸೇನಾ ಮಾಜಿ ಅಧಿಕಾರಿಗಳ ಬಿಡುಗಡೆಯಲ್ಲಿ ನನ್ನ ಪಾತ್ರವಿಲ್ಲ- ಶಾರುಖ್ ಖಾನ್

    ಕತಾರ್‌ನಿಂದ ನೌಕಾಸೇನಾ ಮಾಜಿ ಅಧಿಕಾರಿಗಳ ಬಿಡುಗಡೆಯಲ್ಲಿ ನನ್ನ ಪಾತ್ರವಿಲ್ಲ- ಶಾರುಖ್ ಖಾನ್

    ತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ಅಧಿಕಾರಿಗಳ (Navy Veterans) ಬಿಡುಗಡೆಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ (Sharukh Khan) ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಶಾರುಖ್ ಖಾನ್ ಕಚೇರಿ ಸ್ಪಷ್ಟನೆ ನೀಡಿದೆ. ಶಾರುಖ್ ಬಗ್ಗೆ ಹಬ್ಬಿದ್ದ ವದಂತಿಗೆ ಉತ್ತರಿಸಿದ್ದಾರೆ.

    ಶಾರುಖ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ನಟನ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕತಾರ್‌ನಿಂದ ಭಾರತದ ನೌಕಾ ಸೇನಾ ಅಧಿಕಾರಿಗಳನ್ನು ಬಿಡುಗಡೆ ಮಾಡುವುದರಲ್ಲಿ ಶಾರುಖ್ ಖಾನ್ ಅವರ ಉದ್ದೇಶಿತ ಪಾತ್ರದ ಬಗ್ಗೆ ವರದಿಗಳ ಬಗ್ಗೆ, ಶಾರುಖ್ ಖಾನ್ ಅವರ ಕಚೇರಿಯು ಅವರ ಪಾಲ್ಗೊಳ್ಳುವಿಕೆಯ ಅಂತಹ ಯಾವುದೇ ಸಮರ್ಥನೆಗಳು ಆಧಾರರಹಿತವಾಗಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:‘ಅನಿಮಲ್’ ಸಕ್ಸಸ್ ನಂತರ ಬ್ಯುಸಿಯಾಗಿರುವ ರಶ್ಮಿಕಾ ಈ ಚಿತ್ರವನ್ನು ಅರ್ಧಕ್ಕೆ ನಿಲ್ಲಿಸಿದ್ರಾ?

    ಈ ವಿಷಯದಲ್ಲಿ ಶಾರುಖ್ ಖಾನ್ ಅವರು ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ. ರಾಜತಾಂತ್ರಿಕತೆ ಮತ್ತು ರಾಜ್ಯಕಾರ್ಯವನ್ನು ಒಳಗೊಂಡಿರುವ ಎಲ್ಲಾ ವಿಷಯಗಳನ್ನು ನಮ್ಮ ಅತ್ಯಂತ ಸಮರ್ಥ ನಾಯಕರು ಉತ್ತಮವಾಗಿ ಕಾರ್ಯಗತಗೊಳಿಸುತ್ತಾರೆ. ಶಾರುಖ್ ಖಾನ್, ಎಲ್ಲಾ ಭಾರತೀಯರಂತೆ ನೌಕಾಪಡೆಯ ಅಧಿಕಾರಿಗಳು ಮನೆಗೆ ಮರಳಿರುವುದಕ್ಕೆ ಖುಷಿಯಿದೆ ಮತ್ತು ಅವರಿಗೆ ಶುಭ ಹಾರೈಸುತ್ತಾರೆ ಎಂದು ಶಾರುಖ್ ಮ್ಯಾನೇಜರ್ ಪೂಜಾ ದದ್ಲಾನಿ ತಿಳಿಸಿದ್ದಾರೆ.

    ಬೇಹುಗಾರಿಕೆ ಆರೋಪದಲ್ಲಿ ಬಂಧಿತರಾಗಿ ಕತಾರ್‌ನ ಸೆರೆಮನೆಯಲ್ಲಿದ್ದ 8 ಭಾರತೀಯ ನೌಕಾ ಸೇನಾ ನಿವೃತ್ತ ಅಧಿಕಾರಿಗಳನ್ನು ಕತಾರ್ ಸರ್ಕಾರ ಬಿಡುಗಡೆ ಮಾಡಿದ್ದು, ಅವರಲ್ಲಿ 7 ಜನರು ಸ್ವದೇಶಕ್ಕೆ ಮರಳಿದ್ದಾರೆ.

    ಇತ್ತೀಚೆಗೆ ಶಾರುಖ್ ಖಾನ್ ಅವರು ಕತಾರ್‌ನಲ್ಲಿದ್ದರು. ಈ ವೇಳೆ, ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಾಸಿಮ್ ಅಲ್ ಥಾನಿ ಅವರನ್ನು ಭೇಟಿಯಾಗಿದ್ದರು.

  • ನಿರ್ದೇಶಕ ಅಟ್ಲಿ ಸಿನಿಮಾದಲ್ಲಿ ಸಲ್ಮಾನ್ ಖಾನ್

    ನಿರ್ದೇಶಕ ಅಟ್ಲಿ ಸಿನಿಮಾದಲ್ಲಿ ಸಲ್ಮಾನ್ ಖಾನ್

    ವಾನ್ ಸಿನಿಮಾದ ಭಾರೀ ಯಶಸ್ಸಿನ ನಂತರ ಶಾರುಖ್ ಖಾನ್ (Shah Rukh Khan) ಗಾಗಿಯೇ ಅಟ್ಲಿ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಇತ್ತು. ಅಲ್ಲದೇ ಜವಾನ್ 2 ಚಿತ್ರಕ್ಕೂ ಪ್ಲ್ಯಾನ್ ನಡೆದಿದೆ ಎಂದೂ ಹೇಳಲಾಗಿತ್ತು. ಈ ನಡುವೆ ಮತ್ತೊಂದು ಸುದ್ದಿ ಬಿಟೌನ್ ನಲ್ಲಿ ಹರಿದಾಡುತ್ತಿದೆ. ಸಲ್ಮಾನ್ ಖಾನ್ (Salman Khan) ಗಾಗಿ ಅಟ್ಲಿ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರಂತೆ.

    ಎರಡ್ಮೂರು ಬಾರಿ ಸಲ್ಮಾನ್ ಖಾನ್ ಮನೆ ಮುಂದೆ ಅಟ್ಲಿ ಕಂಡಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್ ಗೆ ಕಥೆ ಒಪ್ಪಿಸೋಕೆ ಅವರು ಹೋಗಿದ್ದರು ಎಂದು ಹೇಳಲಾಗುತ್ತಿದೆ. ಎರಡೆರಡು ಬಾರಿ ಸಲ್ಮಾನ್ ಮನೆಗೆ ಅಟ್ಲಿ (Atlee) ಹೋದ ಕಾರಣದಿಂದಾಗಿ ಚಿತ್ರವಾಗೋದು ಪಕ್ಕಾ ಎನ್ನುವ ಮಾಹಿತಿಯೂ ಇದೆ.

    ಬಾಲಿವುಡ್ ನಲ್ಲಿ ಜವಾನ್ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆಯಿತು. ನೂರಾರು ಕೋಟಿಗಳನ್ನು ಬಾಚಿತು. ಈ ಗೆಲುವಿನ ನಂತರ ಮತ್ತೆ ಶಾರುಖ್ ಖಾನ್ ಮತ್ತು ಅಟ್ಲಿ ಒಂದಾಗುತ್ತಾರೆ ಎಂದು ಹೇಳಲಾಗಿತ್ತು. ಈ ಎಲ್ಲದಕ್ಕೂ ಅಟ್ಲಿನೇ ಉತ್ತರಿಸಬೇಕು.