Tag: ಶಾರುಖ್ ಖಾನ್

  • Stardom: ಕ್ಲೈಮ್ಯಾಕ್ಸ್‌ ಶೂಟಿಂಗ್‌ನಲ್ಲಿ ಬ್ಯುಸಿಯಾದ ಆರ್ಯನ್‌ಗೆ ಸಾಥ್ ಕೊಟ್ಟ ಶಾರುಖ್ ಖಾನ್

    Stardom: ಕ್ಲೈಮ್ಯಾಕ್ಸ್‌ ಶೂಟಿಂಗ್‌ನಲ್ಲಿ ಬ್ಯುಸಿಯಾದ ಆರ್ಯನ್‌ಗೆ ಸಾಥ್ ಕೊಟ್ಟ ಶಾರುಖ್ ಖಾನ್

    ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ನಿರ್ದೇಶಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಕೊನೆಯ ಹಂತದ ಚಿತ್ರೀಕರಣದಲ್ಲಿ ಆರ್ಯನ್ ಬ್ಯುಸಿಯಾಗಿದ್ದಾರೆ. ಮಗನ ಚೊಚ್ಚಲ ಚಿತ್ರಕ್ಕೆ ಶಾರುಖ್ ಖಾನ್ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾರಾ ಕಿಚ್ಚನ ಪುತ್ರಿ ಸಾನ್ವಿ?

    ‘ಸ್ಟಾರ್ ಡಮ್’ (Stardom) ಎಂಬ ವೆಬ್ ಸಿರೀಸ್‌ಗೆ ಆರ್ಯನ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದ್ದು, ಈಗ ಕೊನೆಯ ಹಂತಕ್ಕೆ ತಲುಪಿದೆ. ಮುಂಬೈನ ಬಾಂದ್ರಾದಲ್ಲಿ ಲಾಸ್ಟ್ ಶೆಡ್ಯೂಲ್ ಶೂಟಿಂಗ್‌ನಲ್ಲಿ ಆರ್ಯನ್ ಜೊತೆ ಶಾರುಖ್ ಖಾನ್ ಭಾಗಿಯಾಗಿದ್ದಾರೆ. ಈ ವರ್ಷದ ಅಂತ್ಯದಲ್ಲಿ ವೆಬ್‌ ಸಿರೀಸ್‌ ರಿಲೀಸ್‌ ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ.

    ‘ಸ್ಟಾರ್ ಡಮ್’ ವೆಬ್ ಸಿರೀಸ್‌ನಲ್ಲಿ ಶಾರುಖ್ (Sharukh Khan) ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಶಾರುಖ್‌ಗೆ ಯಾವ ಪಾತ್ರ? ಆ ಪಾತ್ರದ ಲುಕ್ ಹೇಗಿರಲಿದೆ ಎಂಬುದನ್ನು ಫ್ಯಾನ್ಸ್ ಊಹಿಸಲು ಶುರು ಮಾಡಿದ್ದಾರೆ.

    ಇನ್ನೂ ಮಗಳು ಸುಹಾನಾಗಾಗಿ 200 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಲು ಶಾರುಖ್ ಮುಂದಾಗಿದ್ದಾರೆ. ಮಗಳ ಚೊಚ್ಚಲ ಸಿನಿಮಾದ ಎಂಟ್ರಿ ಅದ್ಧೂರಿಯಾಗಿರಬೇಕು ಎಂದು ಶಾರುಖ್ ತಯಾರಿ ಮಾಡಿಕೊಳ್ತಿದ್ದಾರೆ. ಆ ಚಿತ್ರಕ್ಕೆ ಕಿಂಗ್ ಎಂದು ಟೈಟಲ್ ಇಡಲಾಗಿದೆ.

  • ಅಭಿಮಾನಿಗಳಿಗೆ ಹೊಸ ಸಿನಿಮಾದ ಗುಡ್ ನ್ಯೂಸ್ ಕೊಟ್ಟ ಶಾರುಖ್

    ಅಭಿಮಾನಿಗಳಿಗೆ ಹೊಸ ಸಿನಿಮಾದ ಗುಡ್ ನ್ಯೂಸ್ ಕೊಟ್ಟ ಶಾರುಖ್

    ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪಠಾಣ್, ಜವಾನ್, ಡಂಕಿ ಸಿನಿಮಾದ ನಂತರ ಹೊಸ ಸಿನಿಮಾ ಘೋಷಣೆ ಮಾಡದೇ ಉಳಿದಿದ್ದ ಅವರು, ಅಭಿಮಾನಿಗಳಿಗೆ ಹೊಸ ಚಿತ್ರದ ಅಪ್ ಡೇಟ್ ನೀಡಿದ್ದಾರೆ. ತಮ್ಮ ಹೊಸ ಸಿನಿಮಾ ಜುಲೈ ಅಥವಾ ಆಗಸ್ಟ್ ನಿಂದ ಶುರುವಾಗಲಿದೆ ಎಂದಿದ್ದಾರೆ. ಉಳಿದಂತೆ ಅವರು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

    ಈ ನಡುವೆ ಶಾರುಖ್ ಖಾನ್ (Kamal Haasan) ಕುರಿತಾಗಿ ಅಚ್ಚರಿಯ ಮಾತುಗಳನ್ನು ಆಡಿದ್ದಾರೆ ದಕ್ಷಿಣದ ಹೆಸರಾಂತ ನಟ ಕಮಲ್ ಹಾಸನ್.  ಪುತ್ರಿ ಶ್ರುತಿ ಹಾಸನ್ ಜೊತೆಗಿನ ಮಾತುಕತೆಯಲ್ಲಿ ಶಾರುಕ್ ಆಸೆಗಳನ್ನು ಅವರು ರಿವೀಲ್ ಮಾಡಿದ್ದಾರೆ.

    ತಂದೆಗೆ ಇನ್ನೂ ಏನಾದರೂ ಆಸೆಗಳು ಉಳಿದಿದ್ದವಾ? ಎಂದು ಶ್ರುತಿ ಕೇಳ್ತಾರೆ. ಆಗ ಯಾವುದೇ ಆಸೆಗಳು ಇಲ್ಲ ಎಂದು ಹೇಳುವ ಕಮಲ್ ಹಾಸನ್, ಈ ಸಮಯದಲ್ಲಿ ಶಾರುಖ್ (Shah Rukh Khan) ಆಸೆಯನ್ನು ಹೊರ ಹಾಕುತ್ತಾರೆ. ಮಣಿರತ್ನಂ (Mani Ratnam) ಜೊತೆ ಸಿನಿಮಾ ಮಾಡಬೇಕು ಎನ್ನುವುದು ಶಾರುಖ್ ಆಸೆ. ಅದಕ್ಕಾಗಿ ಅವರು ಪ್ರೈವೆಟ್ ಜೆಟ್ ತಗೆದುಕೊಳ್ಳೊ ಕನಸು ಕಂಡಿದ್ದಾರೆ. ಒಂದಾದರೂ ಅವರಿಗೆ ಕನಸಿದೆ ಎಂದಿದ್ದಾರೆ ಕಮಲ್.

     

    ಶಾರುಖ್ ಅವರಿಗೆ ವಿಮಾನ ಖರೀದಿಸುವ ಮತ್ತು ಮಣಿರತ್ನಂ ಸಿನಿಮಾದಲ್ಲಿ ನಟಿಸುವ ಆಸೆಯನ್ನು ವ್ಯಕ್ತ ಪಡಿಸಿರುವ ವಿಚಾರ ಅವರ ಅಭಿಮಾನಿಗಳಲ್ಲಿ ಸಹಜವಾಗಿಯೇ ಅಚ್ಚರಿ ತರಿಸಿದೆ. ವಿಮಾನ ಏನೋ ಖರೀದಿಸಬಹುದು. ಆದರೆ, ಮಣಿರತ್ನಂ ಅವರನ್ನು ಖರೀದಿಸೋಕೆ ಆಗಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

  • ಶಾರುಖ್ ಖಾನ್ ಆಸೆಯನ್ನು ರಿವೀಲ್ ಮಾಡಿದ ಕಮಲ್ ಹಾಸನ್

    ಶಾರುಖ್ ಖಾನ್ ಆಸೆಯನ್ನು ರಿವೀಲ್ ಮಾಡಿದ ಕಮಲ್ ಹಾಸನ್

    ಬಾಲಿವುಡ್ ನಟ ಶಾರುಖ್ ಖಾನ್ (Kamal Haasan) ಕುರಿತಾಗಿ ಅಚ್ಚರಿಯ ಮಾತುಗಳನ್ನು ಆಡಿದ್ದಾರೆ ದಕ್ಷಿಣದ ಹೆಸರಾಂತ ನಟ ಕಮಲ್ ಹಾಸನ್.  ಪುತ್ರಿ ಶ್ರುತಿ ಹಾಸನ್ ಜೊತೆಗಿನ ಮಾತುಕತೆಯಲ್ಲಿ ಶಾರುಕ್ ಆಸೆಗಳನ್ನು ಅವರು ರಿವೀಲ್ ಮಾಡಿದ್ದಾರೆ.

    ತಂದೆಗೆ ಇನ್ನೂ ಏನಾದರೂ ಆಸೆಗಳು ಉಳಿದಿದ್ದವಾ? ಎಂದು ಶ್ರುತಿ ಕೇಳ್ತಾರೆ. ಆಗ ಯಾವುದೇ ಆಸೆಗಳು ಇಲ್ಲ ಎಂದು ಹೇಳುವ ಕಮಲ್ ಹಾಸನ್, ಈ ಸಮಯದಲ್ಲಿ ಶಾರುಖ್ (Shah Rukh Khan) ಆಸೆಯನ್ನು ಹೊರ ಹಾಕುತ್ತಾರೆ. ಮಣಿರತ್ನಂ (Mani Ratnam) ಜೊತೆ ಸಿನಿಮಾ ಮಾಡಬೇಕು ಎನ್ನುವುದು ಶಾರುಖ್ ಆಸೆ. ಅದಕ್ಕಾಗಿ ಅವರು ಪ್ರೈವೆಟ್ ಜೆಟ್ ತಗೆದುಕೊಳ್ಳೊ ಕನಸು ಕಂಡಿದ್ದಾರೆ. ಒಂದಾದರೂ ಅವರಿಗೆ ಕನಸಿದೆ ಎಂದಿದ್ದಾರೆ ಕಮಲ್.

     

    ಶಾರುಖ್ ಅವರಿಗೆ ವಿಮಾನ ಖರೀದಿಸುವ ಮತ್ತು ಮಣಿರತ್ನಂ ಸಿನಿಮಾದಲ್ಲಿ ನಟಿಸುವ ಆಸೆಯನ್ನು ವ್ಯಕ್ತ ಪಡಿಸಿರುವ ವಿಚಾರ ಅವರ ಅಭಿಮಾನಿಗಳಲ್ಲಿ ಸಹಜವಾಗಿಯೇ ಅಚ್ಚರಿ ತರಿಸಿದೆ. ವಿಮಾನ ಏನೋ ಖರೀದಿಸಬಹುದು. ಆದರೆ, ಮಣಿರತ್ನಂ ಅವರನ್ನು ಖರೀದಿಸೋಕೆ ಆಗಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

  • ಕನ್ನಡದ ಕಿರುತೆರೆಯಲ್ಲಿ ಶಾರುಖ್ ನಟನೆಯ ‘ಜವಾನ್’ ಸಿನಿಮಾ

    ಕನ್ನಡದ ಕಿರುತೆರೆಯಲ್ಲಿ ಶಾರುಖ್ ನಟನೆಯ ‘ಜವಾನ್’ ಸಿನಿಮಾ

    ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾ ಕನ್ನಡದ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದು, ಮುಂದಿನ ದಿನಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ (TV) ಪ್ರಸಾರವಾಗಲಿದೆ. ಈಗಾಗಲೇ ವಾಹಿನಿಯು ಪ್ರೋಮೋ ಕೂಡ ರಿಲೀಸ್ ಮಾಡಿದೆ.

    ಜವಾನ್ ಸಿನಿಮಾ ಒಟ್ಟು ಕಲೆಕ್ಷನ್ 1103.27 ಕೋಟಿ ರೂಪಾಯಿ ಎಂದು ಸ್ವತಃ ನಿರ್ಮಾಣ ಸಂಸ್ಥೆಯೇ ಘೋಷಣೆ ಮಾಡಿದೆ. ಶಾರುಖ್ ಖಾನ್ ಅವರ ರೆಡ್ ಚಿಲ್ಲಿ ಎಂಟರ್ ಟೇನ್ಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ವೊಂದನ್ನು ಹಂಚಿಕೊಳ್ಳುವ ಮೂಲಕ ಅಧಿಕೃತ ಮಾಹಿತಿಯನ್ನು ಹೊರ ಹಾಕಿದೆ. ಇದು ವಿಶ್ವದಾದ್ಯಂತ ಬಂದ ಒಟ್ಟು ಕಲೆಕ್ಷನ್ ಆಗಿದೆ.

    ವಿಶ್ವದಾದ್ಯಂತ ‘ಜವಾನ್’ ಸಿನಿಮಾ ದಾಖಲೆ ರೀತಿಯಲ್ಲಿ ಕಲೆಕ್ಷನ್ (Collection) ಮಾಡಿದರೆ, ಭಾರತದಲ್ಲೇ ಅದು ಗಳಿಸಿದ ಒಟ್ಟು ಮೊತ್ತ ಅಂದಾಜು 600 ಕೋಟಿ ರೂಪಾಯಿಗೂ ಹೆಚ್ಚು ಆಗಿದೆ. ಈ ಪ್ರಮಾಣದಲ್ಲಿ ಹಣ ಗಳಿಕೆ ಮಾಡಿದ ಮೊದಲ ಹಿಂದಿ ಸಿನಿಮಾ ಎನ್ನುವ ದಾಖಲೆ ಕೂಡ ಬರೆದಿದೆ. ಇದೆಲ್ಲವೂ ಅಧಿಕೃತ ಘೋಷಣೆ ಎನ್ನುವುದು ವಿಶೇಷ.

    ಸಿನಿಮಾ ಭರ್ಜರಿ ಗೆಲುವು ಕಾಣುತ್ತಿದ್ದಂತೆಯೇ ಸಿನಿಮಾ ನಿರ್ದೇಶಕ ಅಟ್ಲಿ (Atli) ತಮ್ಮ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ. ‘ಜವಾನ್’ ಯಶಸ್ಸಿನ ಬೆನ್ನಲ್ಲೇ ಅವರು ‘ಜವಾನ್ 2’ (Jawan 2) ಸಿನಿಮಾ ಮಾಡಲು ಮುಂದಾಗಿದ್ದು, ಇದರ ಜೊತೆಗೆ ಶಾರುಖ್ ಖಾನ್ (Shahrukh Khan) ಅಭಿಮಾನಿಗಳಿಗೆ ಮತ್ತೊಂದು ಸರ್ ಪ್ರೈಸ್ ನೀಡಿದ್ದಾರೆ.

     

    ಜವಾನ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಾವಿರಾರು ಕೋಟಿ ಬ್ಯುಸಿನೆಸ್ ಮಾಡಿದೆ. ಈ ಖುಷಿಯಲ್ಲೇ ಅಟ್ಲಿ ಜವಾನ್ 2 ಸಿನಿಮಾ ಘೋಷಣೆ ಮಾಡಿದ್ದಾರೆ. ಜೊತೆಗೆ ಶಾರುಖ್ ಖಾನ್ ಮತ್ತು ವಿಜಯ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಮಾಡುವ ಆಲೋಚನೆಯನ್ನೂ ಅವರು ಹೇಳಿಕೊಂಡಿದ್ದಾರೆ.

  • ಮಗಳು ಹೀರೋಯಿನ್, ಅಪ್ಪ ವಿಲನ್: ಇದು ‘ಕಿಂಗ್’ ಖಾನ್ ಸ್ಟೋರಿ

    ಮಗಳು ಹೀರೋಯಿನ್, ಅಪ್ಪ ವಿಲನ್: ಇದು ‘ಕಿಂಗ್’ ಖಾನ್ ಸ್ಟೋರಿ

    ಪ್ಪ-ಮಗಳನ್ನು ಒಂದೇ ಬಾರಿ ಸ್ಕ್ರೀನ್ ಮೇಲೆ ನೋಡುವ ಸೌಭಾಗ್ಯ ಸಿಕ್ಕಿದೆ ಶಾರುಖ್ (Shah Rukh Khan) ಅಭಿಮಾನಿಗಳಿಗೆ. ಬಾಲಿವುಡ್ ನಟ ಶಾರುಖ್ ಮತ್ತು ಪುತ್ರಿ ಸುಹಾನಾ ಖಾನ್ (Suhana Khan) ಒಂದೇ ಚಿತ್ರದಲ್ಲಿ ನಟಿಸುತ್ತಿದ್ದು, ಮಗಳು ಆ ಚಿತ್ರಕ್ಕೆ ನಾಯಕಿಯಾದರೆ, ಅಪ್ಪ ವಿಲನ್ ಎನ್ನುವ ಮಾಹಿತಿ ಹರಿದಾಡುತ್ತಿದೆ.

    ಪಠಾಣ್, ಜವಾನ್ ಚಿತ್ರದ ಸಕ್ಸಸ್ ನಂತರ ಡಂಕಿ ಸಿನಿಮಾ ರಿಲೀಸ್‌ಗೆ ತಯಾರಾಗಿದೆ. ಈ ಸಿನಿಮಾಗಳಲ್ಲಿ ಶಾರುಖ್ ಬ್ಯುಸಿಯಿದ್ರೆ, ಇತ್ತ ಸುಹಾನಾ ನಟಿಸಿದ ಮೊದಲ ಸಿನಿಮಾ ‘ಆರ್ಚೀಸ್’ ರಿಲೀಸ್ ಆಗುವ ಮುನ್ನವೇ ಮತ್ತೊಂದು ಬಿಗ್ ಆಫರ್ ಸುಹಾನಾ ಬಾಚಿಕೊಂಡಿದ್ದಾರೆ.

    ಹೊಸ ಚಿತ್ರದಲ್ಲಿ ಶಾರುಖ್- ಸುಹಾನಾ ಜೊತೆಯಾಗಿ ನಟಿಸುತ್ತಿದ್ದಾರೆ. ರೀಲ್‌ನಲ್ಲಿಯೂ ಕೂಡ ತಂದೆ- ಮಗಳಾಗಿಯೇ ಬಣ್ಣ ಹಚ್ಚಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ. ಇಬ್ಬರ ಕಾಂಬೋ ಚಿತ್ರಕ್ಕೆ ‘ಕಿಂಗ್’ (King) ಎಂದು ಕ್ರೇಜಿ ಟೈಟಲ್ ಇಟ್ಟಿದ್ದಾರೆ.

     

    ಈ ಚಿತ್ರ ಮುಂದಿನ ವರ್ಷ ಜನವರಿಯಲ್ಲಿ ಶೂಟಿಂಗ್ ಶುರುವಾಗಲಿದೆ. ಈ ಚಿತ್ರವೂ ಆ್ಯಕ್ಷನ್ ಜೊತೆ ಥ್ರಿಲ್ಲಿಂಗ್ ಆಗಿ ಮೂಡಿ ಬರಲಿದೆ. ಒಟ್ನಲ್ಲಿ ಈ ಸುದ್ದಿ ಕೇಳಿ ಕಿಂಗ್ ಖಾನ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.

  • ನಟ ಶಾರುಖ್ ಖಾನ್ ಗೂ ಹೆಚ್ಚಿದ ಭದ್ರತೆ

    ನಟ ಶಾರುಖ್ ಖಾನ್ ಗೂ ಹೆಚ್ಚಿದ ಭದ್ರತೆ

    ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮನೆ ಮುಂದೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಬಾಲಿವುಡ್ ಅನೇಕ ನಟರಿಗೆ ನಡುಕು ಶುರುವಾಗಿದೆ. ಸಲ್ಮಾನ್ ಅವರಿಗೆ ಜೀವ ಬೆದರಿಕೆಯ ಕಾರಣದಿಂದಾಗಿ ಸರಕಾರ ಸಾಕಷ್ಟು ಭದ್ರತೆಯನ್ನು (Security) ನೀಡಲಾಗಿದೆ. ಅದೇ ರೀತಿ ಈಗ ಶಾರುಖ್ ಖಾನ್ ಗೂ ಹೆಚ್ಚಿನ ಭದ್ರತೆ ನೀಡಲಾಗಿದೆ.

    ಐಪಿಎಲ್ ಕಾರಣದಿಂದಾಗಿ ಶಾರುಖ್ ಖಾನ್ (Shahrukh Khan) ನಾನಾ ಕಡೆ ಪ್ರವಾಸ ಮಾಡುತ್ತಿದ್ದಾರೆ. ಹಾಗಾಗಿ ರಕ್ಷಣೆಯನ್ನು ಹೆಚ್ಚು ಮಾಡಲಾಗಿದೆ. ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳುವಂತೆ ಅವರಿಗೆ ತಿಳಿಸಲಾಗಿದೆ. ಶಾರುಖ್ ಖಾನ್ ಕೂಡ ಖಾಸಗಿ ಭದ್ರತೆಯನ್ನು ಇಟ್ಟುಕೊಂಡಿದ್ದಾರೆ.

     

    ಜೀವ ಬೆದರಿಕೆ ಇದ್ದರೂ ಸಲ್ಮಾನ್ ದುಬೈಗೆ ಹಾರಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವರು ಪ್ರಯಾಣ  ಬೆಳೆಸಿದ್ದಾರೆ. ಈ ಸಂದರ್ಭದಲ್ಲೂ ಅವರಿಗೆ ಹೆಚ್ಚಿನ ಭದ್ರತೆಯನ್ನು ನೀಡಲಾಗಿತ್ತು.

  • ಮಗಳಿಗಾಗಿ 200 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಲು ಮುಂದಾದ ಶಾರುಖ್ ಖಾನ್

    ಮಗಳಿಗಾಗಿ 200 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಲು ಮುಂದಾದ ಶಾರುಖ್ ಖಾನ್

    ಬಾಲಿವುಡ್ ನಟ ಶಾರುಖ್ ಖಾನ್ (Sharukh Khan) ‘ಪಠಾಣ್’ (Pathaan Film) ಸಿನಿಮಾದಿಂದ ಸೂಪರ್ ಡೂಪರ್ ಸಕ್ಸಸ್ ಕಂಡಿದ್ದಾರೆ. ಶಾರುಖ್ ನಟನೆಯ ‘ಕಿಂಗ್’ (King Film) ಚಿತ್ರದ ಮೂಲಕ ಮಗಳು ಸುಹಾನಾ ಖಾನ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮಗಳ ಚೊಚ್ಚಲ ಚಿತ್ರಕ್ಕೆ 200 ಕೋಟಿ ರೂ. ಸುರಿಯಲು ಕಿಂಗ್ ಖಾನ್ ಮುಂದಾಗಿದ್ದಾರೆ.

    ಈ ಹಿಂದೆ ‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ಖಾನ್ (Suhana Khan) ನಟಿಸಿದ್ದರು. ಅದು ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಈಗ ‘ಕಿಂಗ್’ ಚಿತ್ರದಲ್ಲಿ ಶಾರುಖ್ ಜೊತೆ ನಟಿಸುವ ಮೂಲಕ ಸುಹಾನಾ ಬೆಳ್ಳಿಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಮಗಳ ಮೊದಲ ಚಿತ್ರ ಅದ್ಧೂರಿಯಾಗಿರಬೇಕು ಎಂಬ ಕಾರಣಕ್ಕೆ 200 ಕೋಟಿ ರೂ. ಬಜೆಟ್‌ನಲ್ಲಿ ಹಣ ಸುರಿಯಲು ಶಾರುಖ್ ಖಾನ್ ಮುಂದಾಗಿದ್ದಾರೆ.

    ಈ ಸಿನಿಮಾಗೆ ಸುಜಯ್ ಘೋಶ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಕೂಡ ಭರದಿಂದ ಸಾಗುತ್ತಿದೆ. ಕಲಾವಿದರ ಆಯ್ಕೆ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಇದನ್ನೂ ಓದಿ:‘ಕಂಗುವ’ ಸಿನಿಮಾದಲ್ಲಿ ಸೂರ್ಯ ಡಬಲ್ ರೋಲ್

    ‘ಪಠಾಣ್’ ಸಿನಿಮಾದಂತೆ ‘ಕಿಂಗ್’ ಸಿನಿಮಾ ಕೂಡ ಸಕ್ಸಸ್ ಕಾಣಲೇಬೇಕು ಅಂತ ಶಾರುಖ್ ಖಾನ್ ಪಣ ತೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲೇ ಮಗಳು ಸುಹಾನಾ ಗೆದ್ದು ಬೀಗಬೇಕು ಎಂದು ಶಾರುಖ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅದಕ್ಕಾಗಿ ತಮ್ಮ ಒಡೆತನದ ನಿರ್ಮಾಣ ಸಂಸ್ಥೆಯಿಂದ ಬಿಗ್‌ ಬಜೆಟ್‌ನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ.

  • ಶಾರುಖ್ ನೋಡಲು ಮನೆಮುಂದೆ ಜನಸಾಗರ: ಅಭಿಮಾನಿಗಳಿಗೆ ಲಾಠಿ ರುಚಿ

    ಶಾರುಖ್ ನೋಡಲು ಮನೆಮುಂದೆ ಜನಸಾಗರ: ಅಭಿಮಾನಿಗಳಿಗೆ ಲಾಠಿ ರುಚಿ

    ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ (Shah Rukh Khan) ನನ್ನು ನೋಡಲು ಅವರ ಮನೆ ಮುಂದೆ ನಿನ್ನೆ ಅಭಿಮಾನಿಗಳ (Fans) ಜಮಾಯಿಸಿದ್ದರು. ಈದ್ ಹಬ್ಬದ ಪ್ರಯುಕ್ತವಾಗಿ ಸೇರಿದ್ದ ಅಭಿಮಾನಿಗಳು ತುಂಬಾ ಹೊತ್ತು ನೆಚ್ಚಿನ ನಟನಿಗಾಗಿ ಕಾದರು. ಮನೆ ಮುಂದೆ ಜನಸಾಗರವೇ ಹರಿದು ಬಂದಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

    ಶಾರುಖ್ ಮನೆ ಮುಂದೆ ಪೊಲೀಸರು ಬ್ಯಾರಿಕೇಡ್ ಹಾಕಿ ಅಭಿಮಾನಿಗಳನ್ನು ಕಂಟ್ರೋಲ್ ಮಾಡುತ್ತಿದ್ದರೆ, ಮತ್ತೊಂದು ಕಡೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು. ಕೊನೆಗೂ ಶಾರುಖ್ ಮನೆಯ ಟೆರಸ್ ಏರಿ ಬಂದು ಅಭಿಮಾನಿಗಳತ್ತ ಕೈ ಬೀಸಿದರು. ಎಲ್ಲರಿಗೂ ಈದ್ ಶುಭಾಶಯ ಹೇಳಿದರು.

    ಐದತ್ತು ನಿಮಿಷ ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸುತ್ತಲೇ ಇದ್ದರು. ನಮಸ್ಕಾರ ಮಾಡಿದರೆ, ಕೃತಜ್ಞತೆ ಹೇಳಿದರು. ಜೊತೆಗೆ ತಮ್ಮ ಕಿರಿ ಮಗನನ್ನು ಅವರು ಕರೆದುಕೊಂಡು ಬಂದಿದ್ದರಿಂದ, ಅವನಿಗೂ ಅಭಿಮಾನಿಗಳಿಗೆ ವಿಶ್ ಮಾಡಲು ಹೇಳಿದರು. ನಂತರ ಮನೆಯೊಳಗೆ ತೆರಳಿದರು. ಶಾರುಖ್ ಹೋದರೂ, ಅಭಿಮಾನಿಗಳು ಹೋಗಲಿಲ್ಲ. ಹಾಗಾಗಿ  ಲಾಠಿ ರುಚಿ ತೋರಿಸಿ, ಅಭಿಮಾನಿಗಳನ್ನು ಅಲ್ಲಿಂದ ಕಳುಹಿಸಬೇಕಾಯಿತು.

  • ‘ಜವಾನ್’ ಸಿನಿಮಾ ಒಪ್ಪಿಕೊಳ್ಳಲು ಶಾರುಖ್ ಕಾರಣ: ನಟಿ ನಯನತಾರಾ

    ‘ಜವಾನ್’ ಸಿನಿಮಾ ಒಪ್ಪಿಕೊಳ್ಳಲು ಶಾರುಖ್ ಕಾರಣ: ನಟಿ ನಯನತಾರಾ

    ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ಅಭಿನಯದ ಜವಾನ್ (Jawaan) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಇತಿಹಾಸ ಬರೆದಿದೆ. ನೂರಾರು ಕೋಟಿಗಳ ಲಾಭ ಕಂಡಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ನಯನತಾರಾ (Nayantara) ಹಾಗೂ ಪ್ರಿಯಾಮಣಿ ಕೂಡ ನಟಿಸಿದ್ದರು. ಆದರೂ, ದೀಪಿಕಾಗೆ ಹೆಚ್ಚು ಮಹತ್ವ ನೀಡಲಾಗಿತ್ತು.

    ಈ ಕಾರಣದಿಂದಾಗಿಯೇ ನಯನತಾರಾ ಅವರು ನಿರ್ದೇಶಕ ಅಟ್ಲಿ ವಿರುದ್ಧ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ನಯನತಾರಾ ಉತ್ತರವನ್ನೂ ಕೊಟ್ಟಿದ್ದರು. ಯಾವುದೇ ಅಸಮಾಧಾನವಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಇದೀಗ ಆ ಚಿತ್ರವನ್ನು ಒಪ್ಪಿಕೊಳ್ಳಲು ಕಾರಣವನ್ನೂ ನೀಡಿದ್ದಾರೆ.

     

    ದೊಡ್ಡ ತಾರಾಗಣ ಹೊಂದಿರುವ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ನಯನತಾರಾ ಅವರ ಕನಸಾಗಿತ್ತಂತೆ. ಅಲ್ಲದೇ, ಅವರು ಶಾರುಖ್ ಅಭಿಮಾನಿ ಆಗಿರೋದ್ರಿಂದ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಲಿಲ್ಲ. ಅವರು ಅದ್ಭುತ ನಟ ಹಾಗೂ ಮಹಿಳೆಯರಿಗೆ ತುಂಬಾ ಗೌರವ ಕೊಡುತ್ತಾರೆ. ಈ ಕಾರಣ ಕೂಡ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ನೆರವಾಗಿದೆ ಎಂದಿದ್ದಾರೆ.

  • ‘ಪಠಾಣ್ 2’ಗೆ ಸಿದ್ಧತೆ- ಹೊಸ ನಿರ್ದೇಶಕನ ಹುಡುಕಾಟದಲ್ಲಿ ಚಿತ್ರತಂಡ

    ‘ಪಠಾಣ್ 2’ಗೆ ಸಿದ್ಧತೆ- ಹೊಸ ನಿರ್ದೇಶಕನ ಹುಡುಕಾಟದಲ್ಲಿ ಚಿತ್ರತಂಡ

    ಬಾಲಿವುಡ್ ನಟ ಶಾರುಖ್ ಖಾನ್ (Sharukh Khan) ಕೆರಿಯರ್‌ಗೆ ಮರುಜೀವ ಕೊಟ್ಟ ಸಿನಿಮಾ ಪಠಾಣ್. ಗಲ್ಲಾಪೆಟ್ಟಿಗೆ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಇದೀಗ ಇದರ ಸೀಕ್ವೆಲ್‌ಗಾಗಿ ಸಿದ್ಧತೆ ನಡೆಯುತ್ತಿದೆ. ಈ ಚಿತ್ರಕ್ಕೆ ಸಕ್ಸಸ್ ತಂದು ಕೊಟ್ಟ ಡೈರೆಕ್ಟರ್‌ ಸಿದ್ಧಾರ್ಥ್‌ ಆನಂದ್‌ಗೆ ನಿರ್ಮಾಪಕ ಗೇಟ್ ಪಾಸ್ ನೀಡಿದ್ದಾರೆ.

    ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ (Pathaan) ಸಿನಿಮಾವನ್ನು ಆದಿತ್ಯಾ ಚೋಪ್ರಾ ನಿರ್ಮಾಣ ಮಾಡಿದ್ದರು. ಶಾರುಖ್ ಖಾನ್- ದೀಪಿಕಾ ಪಡುಕೋಣೆ (Deepika Padukone) ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಇದೀಗ ಪಠಾಣ್ ಪಾರ್ಟ್ 2ಗೆ ಸಿದ್ಧತೆ ಮಾಡಲಾಗುತ್ತಿದೆ. ಈ ವರ್ಷದ ಅಂತ್ಯದಲ್ಲಿ ಶೂಟಿಂಗ್ ಶುರುವಾಗಲಿದ್ದು, ಶಾರುಖ್ ಭಾಗಿಯಾಗಲಿದ್ದಾರೆ.

    ಆದರೆ ಈಗ ‘ಪಠಾಣ್’ ತಂಡ ಸಿನಿಮಾ ಬಗ್ಗೆ ಸುದ್ದಿಯಾಗುವ ಬದಲು ಡೈರೆಕ್ಟರ್ ವಿಚಾರವಾಗಿ ಹೈಲೈಟ್‌ ಆಗುತ್ತಿದೆ. ಸಿದ್ಧಾರ್ಥ್ ಆನಂದ್ ಬದಲು ಬೇರೆ ನಿರ್ದೇಶಕನಿಗೆ ಮಣೆ ಹಾಕಲು ನಿರ್ಮಾಪಕ ಆದಿತ್ಯಾ ಚೋಪ್ರಾ ಯೋಚಿಸಿದ್ದಾರೆ. ಈ ಹಿಂದೆ ತಮ್ಮ ನಿರ್ಮಾಣದ ‘ಟೈಗರ್’ ಮತ್ತು ‘ವಾರ್’ ಸಿನಿಮಾದ ಸೀಕ್ವೆಲ್‌ನಲ್ಲೂ ನಿರ್ದೇಶಕರನ್ನು ಆದಿತ್ಯಾ ಬದಲಿಸಿದ್ದರು. ಅದೇ ಫಾರ್ಮುಲಾ ಇಲ್ಲಿಯೂ ಬಳಸಲು ಮುಂದಾಗಿದ್ದಾರೆ.

    ಇತ್ತ ಪಠಾಣ್ ಸಕ್ಸಸ್ ನಂತರ ‘ಫೈಟರ್’ ಸಿನಿಮಾಗೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದರು. ಆದರೆ ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಹಾಗಾಗಿ ನಿರ್ಮಾಪಕ ಆದಿತ್ಯಾ ನಿರ್ದೇಶಕರನ್ನು ಬದಲಿಸೋದೇ ಸೂಕ್ತ ಎಂದು ನಿರ್ಧರಿಸಿದ್ದಾರೆ. ಬೇರೇ ನಿರ್ದೇಶಕನ ಕಲ್ಪನೆಯಲ್ಲಿ ‘ಪಠಾಣ್ 2’ ಮೂಡಿ ಬಂದರೆ ಉತ್ತಮ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಅದಕ್ಕಾಗಿ ಆದಿತ್ಯಾ ಹೊಸ ನಿರ್ದೇಶಕನ ಹುಡುಕಾಟಕ್ಕೆ ಇಳಿದಿದ್ದಾರೆ.