Tag: ಶಾರುಖ್ ಖಾನ್

  • ‘ಪಠಾಣ್’ ಸಿನಿಮಾದ ಅಶ್ಲೀಲ ಕಂಟೆಂಟ್ ತೆಗೆಯುವಂತೆ ಡಿಜಿಪಿಗೆ ಪತ್ರ

    ‘ಪಠಾಣ್’ ಸಿನಿಮಾದ ಅಶ್ಲೀಲ ಕಂಟೆಂಟ್ ತೆಗೆಯುವಂತೆ ಡಿಜಿಪಿಗೆ ಪತ್ರ

    ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಪಠಾಣ್’ ಸಿನಿಮಾಗೆ ಮತ್ತೊಂದು ಸಂಕಟ ಎದುರಾಗಿದೆ. ಈ ಸಿನಿಮಾದ ಅಶ್ಲೀಲ ಕಂಟೆಂಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಅವುಗಳನ್ನು ಸೋಷಿಯಲ್ ಮೀಡಿಯಾದಿಂದ ತೆಗೆದು ಹಾಕುವಂತೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯು ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದೆ.

    ಕಲ್ಯಾಣ ಸಮಿತಿಯು ಡಿಜಿಪಿಗೆ ಬರೆದ ಪತ್ರದಲ್ಲಿ, ಪಠಾಣ್ ಸಿನಿಮಾದ ಬೇಷರಂ ರಂಗ್ ಗೀತೆಯಲ್ಲಿ ಅಶ್ಲೀಲ ಅನಿಸುವಂತಹ ಕಂಟೆಂಟ್ ಇದೆ. ಇದು ಬಾಲಾಪರಾಧಿ ಕಾಯಿದೆ ಪ್ರಕಾರ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗಾಗಿ ಕೂಡಲೇ ಅವುಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆಸಬೇಕು’ ಎಂದು ಬರೆಯಲಾಗಿದೆ. ಆ ಪತ್ರಕ್ಕೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಶ್ರೀವಾಸ್ತವ ಮತ್ತು ಹಲವರು ಸಹಿ ಮಾಡಿದ್ದಾರೆ.

    ಈಗಾಗಲೇ ಸೆನ್ಸಾರ್ ಮಂಡಳಿ ಕೂಡ ಕೆಲ ದೃಶ್ಯಗಳನ್ನು ತೋರಿಸಲು ಸಾಧ್ಯವೇ ಇಲ್ಲ ಎಂದು, ಅವುಗಳನ್ನು ಸಿನಿಮಾದಿಂದ ತಗೆದು ಹಾಕಬೇಕು ಎಂದು ನಿರ್ದೇಶನ ನೀಡಿದೆ. ಇನ್ನೂ ಹಲವರು ಈ ಚಿತ್ರಕ್ಕೆ ಪಠಾಣ್ ಎಂದು ಹೆಸರಿಡಲು ಬಿಡುವುದಿಲ್ಲ ಎಂದು ಪ್ರತಿಭಟಿಸುತ್ತಿದ್ದಾರೆ. ಬೇಷರಂ ರಂಗ್ ಕೂಡ ಹಿಂದೂ ಭಾವನೆಗಳಿಗೆ ಧಕ್ಕೆ ಮಾಡುತ್ತಿದೆ. ಹಾಗಾಗಿ ಈ ಹಾಡನ್ನೂ ಬಿಡುವುದಿಲ್ಲ ಎಂದು ಕೆಲವರು ಹೇಳಿದ್ದಾರೆ. ಚಿತ್ರಕ್ಕೆ ಒಂದರ ಮೇಲೊಂದು ಸಂಕಟ ಎದುರಾಗುತ್ತಲೇ ಇವೆ.

    ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಬೇಕಿತ್ತು. ಸೆನ್ಸಾರ್ ಹಲವು ಸೂಚನೆಗಳನ್ನು ನೀಡಿದ್ದರಿಂದ ಆ ಕಾರ್ಯದಲ್ಲಿ ಚಿತ್ರತಂಡ ತೊಡಗಿದೆ. ಅಲ್ಲದೇ, ಶೀರ್ಷಿಕೆ ಸೇರಿದಂತೆ ಹಲವು ವಿಚಾರಗಳನ್ನು ಸಿನಿಮಾದಿಂದ ಕೈ ಬಿಡುವಂತೆ ನಿರಂತರ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಚಿತ್ರತಂಡಕ್ಕೆ ಬಿಡುಗಡೆಗಿಂತ ಇಂತಹ ವಿಷಯಗಳೇ ತಲೆಬಿಸಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಪಠಾಣ್ ಸಿನಿಮಾದ ‘ಬೇಷರಂ ರಂಗ್’ ಕದ್ದ ಹಾಡು: ಪಾಕಿಸ್ತಾನಿ ಗಾಯಕನ ವಿಡಿಯೋ

    ಪಠಾಣ್ ಸಿನಿಮಾದ ‘ಬೇಷರಂ ರಂಗ್’ ಕದ್ದ ಹಾಡು: ಪಾಕಿಸ್ತಾನಿ ಗಾಯಕನ ವಿಡಿಯೋ

    ಶಾರೂಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ (Pathan) ಸಿನಿಮಾ ‘ಬೇಷರಂ ರಂಗ್’ (Besharam Rang) ಹಾಡಿನ ಕಾರಣಕ್ಕಾಗಿಯೇ ಸಾಕಷ್ಟು ವಿವಾದಕ್ಕೀಡಾಗಿತ್ತು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದಾರೆ ಎನ್ನುವುದು ಒಂದು ಕಡೆಯಾದರೆ, ಕೇಸರಿ ಬಣ್ಣಕ್ಕೆ ಅವಮಾನಿಸಿದ್ದಾರೆ ಎನ್ನುವುದು ವಿವಾದಕ್ಕೆ ಮತ್ತೊಂದು ಕಾರಣವಾಗಿತ್ತು. ಹಾಗಾಗಿ ಈ ಸಿನಿಮಾ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕೇವಲ ಸೋಷಿಯಲ್ ಮೀಡಿಯಾದಲ್ಲಿ ಮಾತ್ರವಲ್ಲ, ನಾನಾ ಕಡೆ ಪ್ರತಿಭಟನೆಗಳು ಕೂಡ ನಡೆದಿವು.

    ಈಗ ಅದೇ ಹಾಡಿನ ವಿಚಾರವಾಗಿ ಮತ್ತೊಂದು ವಿವಾದ ಕೇಳಿ ಬಂದಿದೆ. ಪಾಕಿಸ್ತಾನಿಯ ಖ್ಯಾತ ಗಾಯಕ ಸಜ್ಜದ್ ಅಲಿ (Sajjad Ali) ತಮ್ಮ ಹಳೆಯ ಹಾಡೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಹಾಡನ್ನು ತಾವು ಇಪ್ಪತ್ತು ವರ್ಷಗಳ ಹಿಂದೆ ಹಾಡಿದ್ದು, ಇದೀಗ ಯಾವುದೋ ಹಾಡನ್ನು ಕೇಳಿದೆ. ಅದು ಇದೇ ರೀತಿ ಇತ್ತು ಎಂದು ಅವರು ಬರೆದುಕೊಂಡಿದ್ದಾರೆ. ಆ ಹಾಡನ್ನು ಕೇಳಿದ ಪ್ರೇಕ್ಷಕರು ಪಠಾಣ್ ಸಿನಿಮಾದಲ್ಲಿ ಇದನ್ನು ಕಾಪಿ ಮಾಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿಐದು ವರ್ಷದಲ್ಲಿ ಮೂರು ಸಾವಿರ ಕೋಟಿ ಹೂಡಿಕೆ: ಹೊಂಬಾಳೆ ಫಿಲ್ಮ್ಸ್ ಗೆ ಜೈ ಎಂದ ಚಿತ್ರೋದ್ಯಮ

    ಗಾಯಕ ಸಜ್ಜದ್ ಅಲಿ ಹಾಕಿದ ವಿಡಿಯೋಗೆ ಭಾರೀ ಪ್ರತಿಕ್ರಿಯೆಗಳು ಬಂದಿದ್ದು, ನೂರಾರು ಜನರು ತಮ್ಮ ಅಭಿಪ್ರಾಯಗಳನ್ನು ಬರೆದಿಕೊಂಡಿದ್ದಾರೆ. ಪಠಾಣ್ ಸಿನಿಮಾದಲ್ಲಿ ಇದನ್ನು ಕದಿಯಲಾಗಿದೆ ಎಂದು ಬೇಷರಂ ರಂಗ್ ಹಾಡಿನ ಬಗ್ಗೆ ಉಲ್ಲೇಖ ಮಾಡಿದ್ದಾರೆ. ನೀವು ಪರೋಕ್ಷವಾಗಿ ಹೀಗೆ ಹೇಳುವ ಬದಲು ನೇರವಾಗಿ ಕದ್ದಿದ್ದಾರೆ ಎಂದು ಹೇಳಬಹುದಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಗಳ ಬಿಕಿನಿ ಫೋಟೋ ಕಳುಹಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ

    ಮಗಳ ಬಿಕಿನಿ ಫೋಟೋ ಕಳುಹಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ

    ಮಗೆ ಶಾರುಖ್ ಖಾನ್ ಅಭಿಮಾನಿಗಳು ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಮೊನ್ನೆಯಷ್ಟೇ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆರೋಪ ಮಾಡಿದ್ದರು. ಇದೀಗ ಅವರು ತಮಗೆ ಜೀವ ಬೆದರಿಕೆಯನ್ನೂ ಹಾಕುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ತಮ್ಮ ಮಗಳ ಬಿಕಿನಿ ಫೋಟೋ ಕಳುಹಿಸುವುದರ ಜೊತೆಗೆ ಜೀವ ಬೆದರಿಕೆಯ ಬರಹಗಳನ್ನು ಬರೆಯುತ್ತಿದ್ದಾರೆ ಎಂದು ಅವರು ಕೆಲವು ಸ್ಕ್ರೀನ್ ಶಾಟ್ ಹಾಕಿದ್ದಾರೆ.

    ಕೆಲ ಕಿಡಿಗೇಡಿಗಳು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿರುವುದಕ್ಕೆ ಕಾರಣ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾಗೆ ಅವರು ಕೊಟ್ಟ ಪ್ರತಿಕ್ರಿಯೆ ಕಾರಣವೆಂದು ಹೇಳಲಾಗುತ್ತಿದೆ. ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದರು ಎನ್ನುವ ಕಾರಣಕ್ಕಾಗಿ ದೊಡ್ಡ ಸುದ್ದಿ ಆಗಿತ್ತು. ಹಿಂದೂಪರ ಸಂಘಟನೆಗಳು ಪ್ರತಿಭಟಿಸಿದವು. ಹಲವರು ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದರು. ಅದೇ ರೀತಿಯ ವಿವೇಕ್ ಅಗ್ನಿಹೋತ್ರಿ ಕೂಡ ಮಾತನಾಡಿದ್ದಾರೆ.

    ಪಠಾಣ್ ಸಿನಿಮಾದಲ್ಲಿ ಕೇಸರಿ ಬಿಕಿನಿ ಮತ್ತು ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ವಿವೇಕ್ ಅಗ್ನಿಹೋತ್ರಿ ಬಾಲಿವುಡ್ ಸಿನಿಮಾ ರಂಗವನ್ನು ಜರಿದಿದ್ದರು. ಅದರಲ್ಲೂ ಶಾರುಖ್ ಖಾನ್ ಅವರ ಈ ನಡೆಯನ್ನು ಖಂಡಿಸಿದ್ದರು. ಯಶಸ್ಸಿಗಾಗಿ ಇಂತಹ ಕೀಳುಮಟ್ಟಕ್ಕೆ ಇಳಿಯದಿರಲಿ ಎಂದು ಪರೋಕ್ಷವಾಗಿ ದೀಪಿಕಾ ಪಡುಕೋಣೆ ಅವರಿಗೂ ಚಾಟಿ ಬೀಸಿದ್ದರು. ವಿವೇಕ್ ಮಾತ್ರ ಹಲವರ ಕಂಗೆಣ್ಣಿಗೂ ಗುರಿಯಾಗಿತ್ತು. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    kashmir

    ವಿವೇಕ್ ಅಗ್ನಿಹೋತ್ರಿ ಅವರು ಪಠಾಣ್ ಚಿತ್ರಕ್ಕೆ ಮತ್ತು ಶಾರುಖ್ ಖಾನ್ ವಿರುದ್ಧ ಮಾತನಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಶಾರುಖ್ ಖಾನ್ ಹೆಸರಿನಲ್ಲಿ ಕಿಡಿಗೇಡಿಗಳು ವಿವೇಕ್ ಅವರಿಗೆ ಅಶ್ಲೀಲ ಸಂದೇಶವನ್ನು ಕಳುಹಿಸುತ್ತಿದ್ದಾರಂತೆ. ಮಸೆಂಜರ್ ಸೇರಿದಂತೆ ಹಲವು ಕಡೆ ಶಾರುಖ್ ಖಾನ್ ಫೋಟೋ ಇರುವಂತಹ ಫೇಕ್ ಐಡಿಗಳಿಂದ ನಿಂದನೆಯ ಮತ್ತು ಕೆಟ್ಟ ಬೈಗುಳ ಇರುವಂತಹ ಮಸೇಜ್ ಗಳನ್ನು ಕಳುಹಿಸುತ್ತಿದ್ದಾರೆ. ಈ ವಿಷಯವನ್ನು ಸ್ವತಃ ವಿವೇಕ್ ಅವರೇ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

    ವಿವೇಕ್ ಅವರಿಗೆ ರಾಶಿ ರಾಶಿ ಅಶ್ಲೀಲ ಮಸೇಜ್ ಗಳು ಬರುತ್ತಿವೆಯಂತೆ. ಇದೇ ರೀತಿ ಮುಂದುವರೆದರೆ ಸೈಬರ್ ಠಾಣೆಗೆ ದೂರು ಕೂಡ ನೀಡುತ್ತಾರಂತೆ. ತಾವು ಯಾವುದೇ ರೀತಿಯಲ್ಲಿ ಯಾರನ್ನೂ ನಿಂದಿಸಿಲ್ಲ. ತಪ್ಪನ್ನು ಖಂಡಿಸಿದ್ದೇನೆ. ಅದಕ್ಕಾಗಿ ಈ ರೀತಿ ಶಿಕ್ಷೆ ಎಂದು ಅವರು ಬರೆದುಕೊಂಡಿದ್ದಾರೆ. ಈ ನಡೆಯನ್ನು ಬಲವಾಗಿ ಖಂಡಿಸುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿವೇಕ್ ಅಗ್ನಿಹೋತ್ರಿಗೆ ಅಶ್ಲೀಲ ಮೆಸೇಜ್: ಶಾರುಖ್ ಖಾನ್ ಹೆಸರಿನ ಕಿಡಿಗೇಡಿಗಳಿಂದ ಕೃತ್ಯ

    ವಿವೇಕ್ ಅಗ್ನಿಹೋತ್ರಿಗೆ ಅಶ್ಲೀಲ ಮೆಸೇಜ್: ಶಾರುಖ್ ಖಾನ್ ಹೆಸರಿನ ಕಿಡಿಗೇಡಿಗಳಿಂದ ಕೃತ್ಯ

    ದಿ ಕಾಶ್ಮೀರ ಫೈಲ್ಸ್ (The Kashmir Files) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಗೆ ಕೆಲ ಕಿಡಿಗೇಡಿಗಳು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರಂತೆ. ಇಂತಹ ಮಸೇಜ್ ಬರಲು ಕಾರಣ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾಗೆ ಅವರು ಕೊಟ್ಟ ಪ್ರತಿಕ್ರಿಯೆ ಕಾರಣವೆಂದು ಹೇಳಲಾಗುತ್ತಿದೆ. ಪಠಾಣ್ (Pathan) ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದರು ಎನ್ನುವ ಕಾರಣಕ್ಕಾಗಿ ದೊಡ್ಡ ಸುದ್ದಿ ಆಗಿತ್ತು. ಹಿಂದೂಪರ ಸಂಘಟನೆಗಳು ಪ್ರತಿಭಟಿಸಿದವು. ಹಲವರು ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದರು. ಅದೇ ರೀತಿಯ ವಿವೇಕ್ ಅಗ್ನಿಹೋತ್ರಿ ಕೂಡ ಮಾತನಾಡಿದ್ದಾರೆ.

    ಪಠಾಣ್ ಸಿನಿಮಾದಲ್ಲಿ ಕೇಸರಿ ಬಿಕಿನಿ ಮತ್ತು ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ವಿವೇಕ್ ಅಗ್ನಿಹೋತ್ರಿ ಬಾಲಿವುಡ್ ಸಿನಿಮಾ ರಂಗವನ್ನು ಜರಿದಿದ್ದರು. ಅದರಲ್ಲೂ ಶಾರುಖ್ ಖಾನ್ (Shah Rukh Khan) ಅವರ ಈ ನಡೆಯನ್ನು ಖಂಡಿಸಿದ್ದರು. ಯಶಸ್ಸಿಗಾಗಿ ಇಂತಹ ಕೀಳುಮಟ್ಟಕ್ಕೆ ಇಳಿಯದಿರಲಿ ಎಂದು ಪರೋಕ್ಷವಾಗಿ ದೀಪಿಕಾ ಪಡುಕೋಣೆ ಅವರಿಗೂ ಚಾಟಿ ಬೀಸಿದ್ದರು. ವಿವೇಕ್ ಮಾತ್ರ ಹಲವರ ಕಂಗೆಣ್ಣಿಗೂ ಗುರಿಯಾಗಿತ್ತು. ಇದನ್ನೂ ಓದಿ: ‘ಬಿಗ್ ಬಾಸ್’ ಫಿನಾಲೆ ವೇದಿಕೆಯ ಮೇಲೆ ಕಣ್ಣೀರಿಟ್ಟಿ ಸುದೀಪ್

    ವಿವೇಕ್ ಅಗ್ನಿಹೋತ್ರಿ ಅವರು ಪಠಾಣ್ ಚಿತ್ರಕ್ಕೆ ಮತ್ತು ಶಾರುಖ್ ಖಾನ್ ವಿರುದ್ಧ ಮಾತನಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಶಾರುಖ್ ಖಾನ್ ಹೆಸರಿನಲ್ಲಿ ಕಿಡಿಗೇಡಿಗಳು ವಿವೇಕ್ ಅವರಿಗೆ ಅಶ್ಲೀಲ ಸಂದೇಶವನ್ನು ಕಳುಹಿಸುತ್ತಿದ್ದಾರಂತೆ. ಮಸೆಂಜರ್ ಸೇರಿದಂತೆ ಹಲವು ಕಡೆ ಶಾರುಖ್ ಖಾನ್ ಫೋಟೋ ಇರುವಂತಹ ಫೇಕ್ ಐಡಿಗಳಿಂದ ನಿಂದನೆಯ ಮತ್ತು ಕೆಟ್ಟ ಬೈಗುಳ ಇರುವಂತಹ ಮಸೇಜ್ ಗಳನ್ನು ಕಳುಹಿಸುತ್ತಿದ್ದಾರೆ. ಈ ವಿಷಯವನ್ನು ಸ್ವತಃ ವಿವೇಕ್ ಅವರೇ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

    ವಿವೇಕ್ ಅವರಿಗೆ ರಾಶಿ ರಾಶಿ ಅಶ್ಲೀಲ ಮಸೇಜ್ ಗಳು ಬರುತ್ತಿವೆಯಂತೆ. ಇದೇ ರೀತಿ ಮುಂದುವರೆದರೆ ಸೈಬರ್ ಠಾಣೆಗೆ ದೂರು ಕೂಡ ನೀಡುತ್ತಾರಂತೆ. ತಾವು ಯಾವುದೇ ರೀತಿಯಲ್ಲಿ ಯಾರನ್ನೂ ನಿಂದಿಸಿಲ್ಲ. ತಪ್ಪನ್ನು ಖಂಡಿಸಿದ್ದೇನೆ. ಅದಕ್ಕಾಗಿ ಈ ರೀತಿ ಶಿಕ್ಷೆ ಎಂದು ಅವರು ಬರೆದುಕೊಂಡಿದ್ದಾರೆ. ಈ ನಡೆಯನ್ನು ಬಲವಾಗಿ ಖಂಡಿಸುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿದೇಶದಲ್ಲಿ ಕ್ರೇಜ್ ಕ್ರಿಯೇಟ್ ಮಾಡಿದ ಶಾರುಖ್ ಖಾನ್ ‘ಪಠಾಣ್’ ಸಿನಿಮಾ

    ವಿದೇಶದಲ್ಲಿ ಕ್ರೇಜ್ ಕ್ರಿಯೇಟ್ ಮಾಡಿದ ಶಾರುಖ್ ಖಾನ್ ‘ಪಠಾಣ್’ ಸಿನಿಮಾ

    ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಕಾಂಬಿನೇಷನ್ ನ ಪಠಾಣ್ ಸಿನಿಮಾ ಭಾರತದಲ್ಲಿ ವಿವಾದಕ್ಕೆ ತುತ್ತಾದರೆ ವಿದೇಶದಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಳ್ಳುವ ಭರವಸೆ ಸಿಕ್ಕಿದೆ. ಜರ್ಮನ್ ಸೇರಿದಂತೆ ಹಲವು ದೇಶಗಳಲ್ಲಿ ಈಗಾಗಲೇ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದ್ದು, ಜರ್ಮನ್ ನಲ್ಲಿ ವಾರಂತ್ಯದ ಬಹುತೇಕ ಟಿಕೆಟ್ ಖರೀದಿಯಾಗಿವೆ. ಸಿನಿಮಾ ಬಿಡುಗಡೆಗೆ ಇನ್ನೂ 27 ದಿನಗಳು ಬಾಕಿ ಇದ್ದರೂ ಕ್ರೇಜ್ ಮಾತ್ರ ಬಿಡುಗಡೆಯ ದಿನದಂತೆ ಇದೆ.

    ‘ಪಠಾಣ್’ ಸಿನಿಮಾದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದರೂ ಮತ್ತು ಕೇಸರಿ ಬಣ್ಣಕ್ಕೆ ಅವಮಾನಿಸಲಾಗಿದೆ ಎನ್ನುವ ಕಾರಣಕ್ಕಾಗಿ ಚಿತ್ರವನ್ನು ಬಾಯ್ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಹೋರಾಟ ಮಾಡಲಾಯಿತು. ಅಲ್ಲದೇ ಕೆಲವರು ಬೀದಿಗೆ ಇಳಿದು ಕೂಡ ಪ್ರತಿಭಟನೆ ಮಾಡಿದರು. ಕೆಲ ರಾಜ್ಯಗಳಲ್ಲಿ ಹೋರಾಟ ಇನ್ನೂ ತೀವ್ರವಾಗಿತ್ತು. ಆದರೆ, ವಿದೇಶದಲ್ಲಿ ಇದ್ಯಾವುದೂ ಟೆನ್ಷನ್ ಇಲ್ಲದೇ ಚಿತ್ರ ರಿಲೀಸ್ ಗೆ ರೆಡಿಯಾಗುತ್ತಿದೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ ಮಾಡಲು ಲಂಡನ್‌ಗೆ ಹಾರಿದ ರಮ್ಯಾ- ಅಮೃತಾ

    ಈಗಷ್ಟೇ ಪಠಾಣ್ ಸಿನಿಮಾ ಸೆನ್ಸಾರ್ ಅಂಗಳದಲ್ಲಿ ಇತ್ತು. ಕೆಲ ಬದಲಾವಣೆಗಳನ್ನು ಸೂಚಿಸಿರುವ ಕಾರಣದಿಂದಾಗಿ ಇನ್ನೂ ಅದಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿಲ್ಲ. ಸೆನ್ಸಾರ್ ಮಂಡಳಿಯವರು ಹೇಳಿದ ಬದಲಾವಣೆಗಳನ್ನು ಮಾಡಿ, ಮತ್ತೆ ಸಿನಿಮಾ ತೋರಿಸಬೇಕಿದೆ. ಹೀಗಾಗಿ ಅನೌನ್ಸ್ ಮಾಡಿರುವ ದಿನಾಂಕದಂದು ಸಿನಿಮಾ ರಿಲೀಸ್ ಆಗುತ್ತದಾ ಎನ್ನುವ ಪ್ರಶ್ನೆ ಕೂಡ ಉದ್ಭವಿಸಿದೆ. ಆದರೂ, ವಿದೇಶಗಳಲ್ಲಿ ಚಿತ್ರದ ಟಿಕೆಟ್ ಅನ್ನು ನಿನ್ನೆಯಿಂದಲೇ ಮಾರಾಟ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • `ಪಠಾಣ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಶಾಕ್

    `ಪಠಾಣ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಶಾಕ್

    ಶಾರುಖ್ ಖಾನ್ (Sharukh Khan) ನಟನೆಯ `ಪಠಾಣ್’ (Pathan) ಸಿನಿಮಾ ಒಂದಲ್ಲಾ ಒಂದು ವಿಚಾರವಾಗಿ ಸಂಕಷ್ಟ ಎದುರಿಸುತ್ತಲೇ ಬಂದಿದೆ. ಇತ್ತೀಚೆಗಷ್ಟೇ `ಬೇಷರಂ ರಂಗ್’ ಹಾಡಿಗೆ ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ಬೆನ್ನಲ್ಲೇ `ಬೇಷರಂ ರಂಗ್’ (Beshramrang) ಹಾಡಿನ ಜೊತೆ ಚಿತ್ರದಲ್ಲಿನ ಅನೇಕ ದೃಶ್ಯಗಳನ್ನ ಬದಲಾವಣೆ ಮಾಡುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ.

    ಶಾರುಖ್, ದೀಪಿಕಾ ಪಡುಕೋಣೆ(Deepika Padukone) ನಟನೆಯ `ಪಠಾಣ್’ (Pathan) ಚಿತ್ರ ರಿಲೀಸ್‌ಗೂ ಮುನ್ನವೇ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಚಿತ್ರದಲ್ಲಿನ ದೀಪಿಕಾ ಕೇಸರಿ ಬಿಕಿನಿ ವಿಚಾರಕ್ಕೆ ಅನೇಕರು ವಿರೋಧಿಸಿದ್ದಾರೆ. ದೀಪಿಕಾ ಅವರ ಬೋಲ್ಡ್ ಲುಕ್ ನೋಡಿದವರೆಲ್ಲಾ, ಇಷ್ಟೊಂದು ಎಕ್ಸ್ಪೋಸ್ ಬೇಕಿರಲಿಲ್ಲ ಎಂದು ತಕರಾರು ತೆಗೆದಿದ್ದರು. ಈ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ಕೂಡ ಪಠಾಣ್ ಚಿತ್ರತಂಡಕ್ಕೆ ಶಾಕ್ ಕೊಟ್ಟಿದೆ. `ಬೇಷರಂ ರಂಗ್’ ಹಾಡಿನ ಜೊತೆ ಚಿತ್ರದಲ್ಲಿನ ಹಲವು ದೃಶ್ಯಗಳನ್ನ ತೆಗೆಯಲು ಸೆನ್ಸಾರ್ ಮಂಡಳಿಯ ಅಧ್ಯಕ್ಷರು ಪ್ರಸೂನ್ ಜೋಶಿ ಹೇಳಿದ್ದಾರೆ. ಸಿನಿಮಾ ರಿಲೀಸ್‌ಗೂ ಮೊದಲೇ ಕಟ್ಟುನಿಟ್ಟಾಗಿ ಚಿತ್ರತಂಡಕ್ಕೆ ಸೂಚನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಜಮಾಲಿಗುಡ್ಡದ ಕಥೆ ಹೇಳಲು ಡಾಲಿ, ಅದಿತಿ ರೆಡಿ

    ಸಿದ್ಧಾರ್ಥ್ ಆನಂದ್ (Siddarth) ನಿರ್ದೇಶನದ `ಪಠಾಣ್’ ಜನವರಿ 25ರಂದು ತೆರೆಗೆ ಬರಲಿದೆ. ರಿಲೀಸ್‌ಗೂ ಮುನ್ನ ಚಿತ್ರದಲ್ಲಿ ಬದಲಾವಣೆ ಆಗದೇ ಇದ್ದಲ್ಲಿ ಸಿನಿಮಾಗೆ ಸೆನ್ಸಾರ್ ಪತ್ರ ಕೂಡ ಸಿಗುವುದು ತಡವಾಗಲಿದೆ.

    ಇನ್ನೂ ಶಾರುಖ್ ಖಾನ್ ಅವರ ಕಮ್‌ಬ್ಯಾಕ್ ಚಿತ್ರವಾಗಿರುವ ಕಾರಣ, ಚಿತ್ರದ ಬಗ್ಗೆ ಫ್ಯಾನ್ಸ್ ಸಖತ್ ನಿರೀಕ್ಷೆ ಇಟ್ಟಿದ್ದಾರೆ. ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಾರುಖ್ ಖಾನ್ ಗೆ ಅಂತಿಮ ಸಂಸ್ಕಾರ ಮಾಡಿದ ಅಯೋಧ್ಯೆಯ ಸಾಧು

    ಶಾರುಖ್ ಖಾನ್ ಗೆ ಅಂತಿಮ ಸಂಸ್ಕಾರ ಮಾಡಿದ ಅಯೋಧ್ಯೆಯ ಸಾಧು

    ಬಾಲಿವುಡ್ ನಟ ಶಾರುಖ್ ಖಾನ್ (Shahrukh Khan) ಅವರ 13ನೇ ದಿನದ ಕರ್ಮಗಳನ್ನು ರಸ್ತೆ ಮಧ್ಯೆದಲ್ಲೇ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ ಅಯೋಧ್ಯೆಯ (Ayodhya) ತಪಸ್ವಿ ಜಗದ್ಗುರು ಪರಮಹಂಸ ಆಚಾರ್ಯರು (Paramahansa Acharya). ಪಠಾಣ್ ಸಿನಿಮಾದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರಿಗೆ ಕೇಸರಿ ಬಿಕಿನಿ ಹಾಕಿಸಿದ್ದಲ್ಲದೇ, ಹಿಂದೂಗಳಿಗೆ ಅವಮಾನ ಮಾಡುವಂತಹ ಸಾಲುಗಳನ್ನು ಈ ಹಾಡಿನಲ್ಲಿ ಬಳಸಿದ್ದಾರೆ ಎನ್ನುವ ಕಾರಣಕ್ಕಾಗಿ ಹಿಂದೂ ಸಂಪ್ರದಾಯದಂತೆ ಶಾರುಖ್ ತಿಥಿ ಮಾಡಲಾಗಿದೆ.

    ಈ ಹಿಂದೆ ಪಠಾಣ್ (Pathan) ಸಿನಿಮಾವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿ ಇದೇ ಅಯೋಧ್ಯೆಯ ತಪಸ್ವಿ ಶಿಬಿರದ ಜಗದ್ಗುರುಗಳು ಪ್ರತಿಭಟನೆ ಕೂಡ ಮಾಡಿದ್ದಾರೆ. ಈ ಸಿನಿಮಾವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡದಂತೆ ಒತ್ತಡ ಹೇರಿದ್ದರು. ಇಂದು ಮಡಿಕೆಗೆ ಶಾರುಖ್ ಖಾನ್ ಫೋಟೋ ಅಂಟಿಸಿ, ಅದನ್ನು ರಸ್ತೆಯಲ್ಲೇ ಇಟ್ಟು 13 ದಿನದ ಕರ್ಮಗಳನ್ನು ಮಾಡಿ ತಮ್ಮ ಪ್ರತಿಭಟನೆಯನ್ನು ವ್ಯಕ್ತ ಪಡಿಸಿದ್ದಾರೆ. ಸಂಸ್ಕಾರದ ವೇಳೆ ಹಿಂದೂ ಮಂತ್ರಗಳನ್ನೂ ಪಠಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಯುವಜನೋತ್ಸವಕ್ಕೆ ಮೋದಿ ಜೊತೆ ಅಕ್ಷಯ್ ಕುಮಾರ್‌ಗೆ ಆಹ್ವಾನ

    ಅಯೋಧ್ಯೆ ಸಾಧುಗಳು ಈ ಕ್ರಿಯೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನಡೆಯ ಬಗ್ಗೆ ಪರ ವಿರೋಧದ ಚರ್ಚೆಗಳು ಕೂಡ ಶುರುವಾಗಿದೆ. ಜೀವಂತವಾಗಿರುವಾಗ ತಿಥಿ ಮಾಡುವಂತಹ ಸಂಪ್ರದಾಯ ಹಿಂದೂಗಳಲ್ಲಿ ಇಲ್ಲ. ಹೀಗಾಗಿ ಗೊತ್ತಿರುವ ಸಾಧುಗಳೇ ಹೀಗೆ ಮಾಡಬಾರದಿತ್ತು ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ನಮ್ಮ ಪಾಲಿಗೆ ಶಾರುಖ್ ಸತ್ತಿದ್ದಾನೆ ಎಂದು ಇನ್ನೂ ಕೆಲವರು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇಸರಿ ಉಡುಪು ಧರಿಸಿದ್ದಕ್ಕೆ ಬ್ಯಾನ್‌ ಮಾಡಿ ಅನ್ನೋದು ಸರಿಯಲ್ಲ – ಪಠಾಣ್‌ ಪರ ನಿಂತ ದಾದಾ ಸಾಹೇಬ್‌ ಫಾಲ್ಕೆ ಪುರಸ್ಕೃತ ನಟಿ

    ಕೇಸರಿ ಉಡುಪು ಧರಿಸಿದ್ದಕ್ಕೆ ಬ್ಯಾನ್‌ ಮಾಡಿ ಅನ್ನೋದು ಸರಿಯಲ್ಲ – ಪಠಾಣ್‌ ಪರ ನಿಂತ ದಾದಾ ಸಾಹೇಬ್‌ ಫಾಲ್ಕೆ ಪುರಸ್ಕೃತ ನಟಿ

    ಬಾದಷಾ ಶಾರುಖ್ ನಟನೆಯ `ಪಠಾಣ್’ (Pathan) ಮುಂದಿನ ಜನವರಿಗೆ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ರಿಲೀಸ್‌ಗೂ ಮುನ್ನವೇ ಸಾಕಷ್ಟು ವಿವಾದಗಳನ್ನ ಹುಟ್ಟು ಹಾಕಿದೆ. ಇನ್ನೂ ದೀಪಿಕಾ (Deepika Padukone) ಕೇಸರಿ ಬಿಕಿನಿ ವಿವಾದ, ಸಿನಿಮಾ ಬ್ಯಾನ್ (Ban) ವಿಷ್ಯವಾಗಿ ದಾದಾ ಫಾಲ್ಕೆ ಪುರಸ್ಕೃತ ನಟಿ ಆಶಾ ಪರೇಖ್ ಮಾತನಾಡಿದ್ದಾರೆ.

    ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಕೇಸರಿ ಬಿಕಿನಿ ವಿವಾದ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. `ಪಠಾಣ್’ (Pathan) ಚಿತ್ರದ ಹಾಡಿನಲ್ಲಿ ನಟಿ ದೀಪಿಕಾ ಸಖತ್ ಹಾಟ್ ಆಗಿ ಮೈಚಳಿ ಬಿಟ್ಟು ಶಾರುಖ್‌ ಜೊತೆ ಸೊಂಟ ಬಳುಕಿಸಿದ್ದಾರೆ. ʻಬೇಷರಂ ರಂಗ್ʼ ಹಾಡಿನಲ್ಲಿ ದೀಪಿಕಾ ಧರಿಸಿರುವ ಕೇಸರಿ ಬಣ್ಣದ ಬಟ್ಟೆ ಕುರಿತಾಗಿ ಈ ಚಿತ್ರವನ್ನೇ ನಿಷೇಧಿಸಬೇಕು ಎಂಬ ಕೆಲ ಮಾತುಗಳು ಸಹ ಕೇಳಿ ಬಂದಿದ್ದವು. ಸದ್ಯ ಇದೇ ವಿಚಾರವಾಗಿ ಹಿರಿಯ ನಟಿ ಆಶಾ ಪರೇಖ್ (Asha Parekh) ಮಾತನಾಡಿದ್ದಾರೆ. ಪಠಾಣ್‌ ಪರ ಹಿರಿಯ ನಟಿ ಆಶಾ ಪರೇಖ್ ಪ್ರತಿಕ್ರಿಯೆ ನೀಡಿದ್ದಾರೆ.

    ನಟಿ ಆಶಾ ಪರೇಖ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ `ಬೇಷರಂ ರಂಗ್’ ಹಾಡಿನ ಕುರಿತಾಗಿ ಕೇಳಲಾಗಿದೆ. ಈ ಬಗ್ಗೆ ಆಶಾ ಪರೇಖ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರದ ಮೂಲ ಉದ್ದೇಶ ಮನರಂಜನೆ ನೀಡುವುದಾಗಿದೆ. ದೀಪಿಕಾ ಕೇಸರಿ ಬಣ್ಣದ ಬಟ್ಟೆ ಧರಿಸಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಕೇಸರಿ ಉಡುಪು ಧರಿಸಿದ್ದಕ್ಕೆ ಬ್ಯಾನ್‌ ಮಾಡಿ ಅನ್ನೋದು ಸರಿಯಲ್ಲ. ದೀಪಿಕಾ ಬಿಕಿನಿ ಧರಿಸಿರೋದು ಅವರ ಸಮಸ್ಯೆಯಲ್ಲ. ಕೇಸರಿ ಬಣ್ಣ ಇರೋದು ಹಲವರ ಸಮಸ್ಯೆ. ನಮ್ಮ ಯೋಚನೆ ಸಂಕುಚಿತ ಸ್ವಭಾವದಿಂದ ಇದೆ. ನಾವು ಯೋಚಿಸುವ ರೀತಿ ಬದಲಾಗಬೇಕಿದೆ. ಈ ಮೂಲಕ ಬಾಲಿವುಡ್‌ನ ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ನಟಿ ಆಶಾ ಮಾತನಾಡಿದ್ದಾರೆ. ಕೆಲ ಚಿತ್ರಗಳು ಹೇಳಿಕೊಳ್ಳುವಂತಹ ದಾಖಲೆ ಮಾಡುತ್ತಿಲ್ಲ. ಹಾಗಾಗಿ ಹಿಂದಿ ಚಿತ್ರರಂಗ ಸೋಲುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕನ್ನಡಿ ವಿಚಾರಕ್ಕೆ ರೂಪೇಶ್ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್

    ಸದ್ಯ ಚಿತ್ರರಂಗದಲ್ಲಿ ಪರಿಸ್ಥಿತಿ ಈಗಾಗಲೇ ತುಂಬಾ ಕೆಟ್ಟಿದೆ. ಸಿನಿಮಾ ನಿಷೇಧ ಮಾಡಿದ್ದರೆ ಉದ್ಯಮವೇ ಕೊನೆಗೊಳ್ಳುತ್ತದೆ. ಮುಂದೆ ಜನರು ಸಿನಿಮಾ ನೋಡಲು ಥಿಯೇಟರ್‌ಗೆ ಹೋಗುವುದಿಲ್ಲ. ಸಿನಿಮಾಗಳು ವಿಫಲವಾಗುತ್ತಲೇ ಇದ್ದರೆ, ಇನ್ನೊಂದು ಚಿತ್ರ ಹೇಗೆ ನಿರ್ಮಾಣವಾಗುತ್ತದೆ ಎಂದು ಹಿರಿಯ ನಟಿ ಆಶಾ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಒಳ್ಳೆ ಮನಸ್ಸು ಇಟ್ಕೊಂಡು ಪಠಾಣ್ ಸಿನಿಮಾ ನೋಡಿ ಎಂದ ಶಾರುಖ್ ಖಾನ್

    ಒಳ್ಳೆ ಮನಸ್ಸು ಇಟ್ಕೊಂಡು ಪಠಾಣ್ ಸಿನಿಮಾ ನೋಡಿ ಎಂದ ಶಾರುಖ್ ಖಾನ್

    ಠಾಣ್ ಸಿನಿಮಾದ ಮತ್ತೊಂದು ಹಾಡು ನಿನ್ನೆ ಬಿಡುಗಡೆ ಆಗಿದೆ. ಈ ಹಾಡಿನ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ. ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ಕಣ್ಣುಗಳು ಈ ಹಾಡನ್ನು ತುಂಬಿಕೊಂಡಿವೆ. ಈ ಹೊತ್ತಿನಲ್ಲಿ ಶಾರುಖ್ ಖಾನ್ ಪ್ರತಿಕ್ರಿಯಿಸಿದ್ದು, ಒಳ್ಳೆಯ ಮನಸ್ಸಿನಿಂದ ಹಾಡು ನೋಡಿದ್ದೀರಿ. ನಿಮಗೆ ಇಷ್ಟವಾಗಿದೆ. ಹೀಗೆಯೇ ಸಿನಿಮಾವನ್ನೂ ವೀಕ್ಷಿಸಿ ಎಂದು ಹೇಳಿದ್ದಾರೆ. ಸಿನಿಮಾವನ್ನು ಸಿನಿಮಾವಾಗಿಯೇ ತಗೆದುಕೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

    ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಈ ಹಾಡಿಗೆ ಹೆಜ್ಜೆ ಹಾಕಿದ್ದು, ಮೂರು ದಿನಗಳ ಹಿಂದೆಯಷ್ಟೇ ಈ ಹಾಡಿನ ಒಂದೇ ಒಂದು ಫೋಟೋವನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ದೀಪಿಕಾ ಪಡುಕೋಣೆ ಈ ಹಾಡಿನಲ್ಲೂ ಸಖತ್ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲೂ ಅವರು ಗ್ಲಾಮರ್ ಗೆ ಯಾವುದೇ ಕೊರತೆಯನ್ನು ಮಾಡಿಲ್ಲ ಹಾಗಾಗಿ ಶಾರುಖ್ ಮತ್ತು ದೀಪಿಕಾ ಪಡುಕೋಣೆಗೆ ಡ್ಯಾನ್ಸ್ ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಪಠಾಣ್ ಸಿನಿಮಾದ ಎರಡನೇ ಹಾಡು ಇದಾಗಿದ್ದು ‘ಜೂಮೇ ಜೋ ಪಠಾಣ್’ ಹೆಸರಿನ ಈ ಹಾಡು ಕೂಡ ಸಖತ್ ಆಗಿಯೇ ಚರ್ಚೆ ಆಗಲಿದೆ ಎಂದು ಹೇಳಲಾಗುತ್ತಿದೆ. ಮೊದಲ ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿ ಹಾಕಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೂ, ಚಿತ್ರತಂಡ ಈ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ. ಪಠಾಣ್ ಸಿನಿಮಾ ಜನವರಿ 25ಕ್ಕೆ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲ ಮೊನ್ನೆಯಷ್ಟೇ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿನಿ ಹಾಕಿದ್ದರು ಎನ್ನುವ ಕಾರಣಕ್ಕಾಗಿ ಭಾರೀ ವಿವಾದವಾಗಿತ್ತು. ಇದನ್ನೂ ಓದಿ: ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ

    ಎರಡನೇ ಹಾಡು ಬಿಡುಗಡೆಯ ಬೆನ್ನಲ್ಲೇ ಪ್ರತಿಷ್ಠಿತ ಎಂಪಾಯರ್ ಮ್ಯಾಗಜಿನ್ ಸಾರ್ವಕಾಲಿಕ ಶ್ರೇಷ್ಠ ನಟರ ಪಟ್ಟಿ ರಿಲೀಸ್ ಮಾಡಿದ್ದು, ಅದರಲ್ಲಿ ಶಾರುಖ್ ಖಾನ್ ಹೆಸರು ಇದೆ. ಭಾರತದ ನಟರಲ್ಲಿ ಈ ಸ್ಥಾನವನ್ನು ಪಡೆದ ಏಕೈಕ ನಟ ಶಾರುಖ್ ಖಾನ್ ಎನ್ನುವುದು ವಿಶೇಷ. ಈ ಮಾಹಿತಿಯನ್ನು ಶಾರುಖ್ ಮ್ಯಾನೇಜರ್ ಪೂಜಾ ದದ್ಲಾನಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಏನೇ ವಿವಾದ ಮಾಡಿದರೂ, ಅವರ ಜನಪ್ರಿಯತೆ ಯಾವತ್ತೂ ಕಡಿಮೆ ಆಗಲ್ಲ ಎಂದು ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

    ವಿವಾದದ ಕುರಿತು ಶಾರುಖ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ವಿವಾದ ಮಾಡುವ ಮೂಲಕ ಸಿನಿಮಾಗೆ ಮತ್ತಷ್ಟು ಪ್ರಚಾರ ಕೊಟ್ಟಿದ್ದೀರಿ, ನಿಮಗೆ ಧನ್ಯವಾದಗಳು ಎಂದು ಹೇಳಿದ್ದರು. ನೀವು ಏನೇ ಬಾಯ್ಕಾಟ್ ಮಾಡಿರಿ, ಸಿನಿಮಾ ಗೆಲ್ಲುತ್ತದೆ ಎನ್ನುವ ವಿಶ್ವಾವನ್ನೂ ಅವರು ವ್ಯಕ್ತ ಪಡಿಸಿದ್ದರು. ಶಾರುಖ್ ಏನೇ ಹೇಳಿದರೂ, ವಿವಾದದ ಉರಿ ಇನ್ನೂ ತಣ್ಣಗಾಗಲಿಲ್ಲ. ಸಿನಿಮಾ ಪ್ರೇಮಿಗಳು ಮಾತ್ರವಲ್ಲ, ರಾಜಕಾರಣಿಗಳು ಕೂಡ ಈ ವಿವಾದಲ್ಲಿ ಪ್ರವೇಶ ಮಾಡಿದ್ದಾರೆ. ಹಾಗಾಗಿ ವಿವಾದ ದೊಡ್ಡದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ಪಠಾಣ್’ ಮತ್ತೊಂದು ಸಾಂಗ್ ರಿಲೀಸ್ : ಡ್ಯಾನ್ಸ್ ಮೆಚ್ಚಿಕೊಂಡ ಡಿಪ್ಪಿ-ಶಾರುಖ್ ಫ್ಯಾನ್ಸ್

    ‘ಪಠಾಣ್’ ಮತ್ತೊಂದು ಸಾಂಗ್ ರಿಲೀಸ್ : ಡ್ಯಾನ್ಸ್ ಮೆಚ್ಚಿಕೊಂಡ ಡಿಪ್ಪಿ-ಶಾರುಖ್ ಫ್ಯಾನ್ಸ್

    ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕಾಂಬಿನೇಷನ್ ನ ‘ಪಠಾಣ್’ ಸಿನಿಮಾದ ಮತ್ತೊಂದು ಹಾಡು ಇಂದು ಬಿಡುಗಡೆ ಆಗಿದೆ. ಎರಡು ದಿನಗಳ ಹಿಂದೆಯಷ್ಟೇ ಈ ಹಾಡಿನ ಒಂದೇ ಒಂದು ಫೋಟೋವನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ದೀಪಿಕಾ ಪಡುಕೋಣೆ ಈ ಹಾಡಿನಲ್ಲೂ ಸಖತ್ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲೂ ಅವರು ಗ್ಲಾಮರ್ ಗೆ ಯಾವುದೇ ಕೊರತೆಯನ್ನು ಮಾಡಿಲ್ಲ ಹಾಗಾಗಿ ಶಾರುಖ್ ಮತ್ತು ದೀಪಿಕಾ ಪಡುಕೋಣೆಗೆ ಡ್ಯಾನ್ಸ್ ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಪಠಾಣ್ ಸಿನಿಮಾದ ಎರಡನೇ ಹಾಡು ಇದಾಗಿದ್ದು ‘ಜೂಮೇ ಜೋ ಪಠಾಣ್’ ಹೆಸರಿನ ಈ ಹಾಡು ಕೂಡ ಸಖತ್ ಆಗಿಯೇ ಚರ್ಚೆ ಆಗಲಿದೆ ಎಂದು ಹೇಳಲಾಗುತ್ತಿದೆ. ಮೊದಲ ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿ ಹಾಕಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೂ, ಚಿತ್ರತಂಡ ಈ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ. ಪಠಾಣ್ ಸಿನಿಮಾ ಜನವರಿ 25ಕ್ಕೆ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲ ಮೊನ್ನೆಯಷ್ಟೇ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿನಿ ಹಾಕಿದ್ದರು ಎನ್ನುವ ಕಾರಣಕ್ಕಾಗಿ ಭಾರೀ ವಿವಾದವಾಗಿತ್ತು. ಇದನ್ನೂ ಓದಿ: ಮಂಜು ಪಾವಗಡ ಮೇಲೆ ಅಮೂಲ್ಯ ಲವ್: ರಾಕೇಶ್ ಅಡಿಗ ಕಕ್ಕಾಬಿಕ್ಕಿ

    ಎರಡನೇ ಹಾಡು ಬಿಡುಗಡೆಯ ಬೆನ್ನಲ್ಲೇ ಪ್ರತಿಷ್ಠಿತ ಎಂಪಾಯರ್ ಮ್ಯಾಗಜಿನ್ ಸಾರ್ವಕಾಲಿಕ ಶ್ರೇಷ್ಠ ನಟರ ಪಟ್ಟಿ ರಿಲೀಸ್ ಮಾಡಿದ್ದು, ಅದರಲ್ಲಿ ಶಾರುಖ್ ಖಾನ್ ಹೆಸರು ಇದೆ. ಭಾರತದ ನಟರಲ್ಲಿ ಈ ಸ್ಥಾನವನ್ನು ಪಡೆದ ಏಕೈಕ ನಟ ಶಾರುಖ್ ಖಾನ್ ಎನ್ನುವುದು ವಿಶೇಷ. ಈ ಮಾಹಿತಿಯನ್ನು ಶಾರುಖ್ ಮ್ಯಾನೇಜರ್ ಪೂಜಾ ದದ್ಲಾನಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಏನೇ ವಿವಾದ ಮಾಡಿದರೂ, ಅವರ ಜನಪ್ರಿಯತೆ ಯಾವತ್ತೂ ಕಡಿಮೆ ಆಗಲ್ಲ ಎಂದು ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

    ವಿವಾದದ ಕುರಿತು ಶಾರುಖ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ವಿವಾದ ಮಾಡುವ ಮೂಲಕ ಸಿನಿಮಾಗೆ ಮತ್ತಷ್ಟು ಪ್ರಚಾರ ಕೊಟ್ಟಿದ್ದೀರಿ, ನಿಮಗೆ ಧನ್ಯವಾದಗಳು ಎಂದು ಹೇಳಿದ್ದರು. ನೀವು ಏನೇ ಬಾಯ್ಕಾಟ್ ಮಾಡಿರಿ, ಸಿನಿಮಾ ಗೆಲ್ಲುತ್ತದೆ ಎನ್ನುವ ವಿಶ್ವಾಸವನ್ನೂ ಅವರು ವ್ಯಕ್ತ ಪಡಿಸಿದ್ದರು. ಶಾರುಖ್ ಏನೇ ಹೇಳಿದರೂ, ವಿವಾದದ ಉರಿ ಇನ್ನೂ ತಣ್ಣಗಾಗಲಿಲ್ಲ. ಸಿನಿಮಾ ಪ್ರೇಮಿಗಳು ಮಾತ್ರವಲ್ಲ, ರಾಜಕಾರಣಿಗಳು ಕೂಡ ಈ ವಿವಾದಲ್ಲಿ ಪ್ರವೇಶ ಮಾಡಿದ್ದಾರೆ. ಹಾಗಾಗಿ ವಿವಾದ ದೊಡ್ಡದಾಗಿದೆ.

    Live Tv
    [brid partner=56869869 player=32851 video=960834 autoplay=true]