Tag: ಶಾರುಖ್ ಖಾನ್

  • ಮುಖಮುಚ್ಚಿಕೊಂಡು ‘ಪಠಾಣ್’ ಸಿನಿಮಾಗೆ ಬಂದ ದೀಪಿಕಾ ಪಡುಕೋಣೆ

    ಮುಖಮುಚ್ಚಿಕೊಂಡು ‘ಪಠಾಣ್’ ಸಿನಿಮಾಗೆ ಬಂದ ದೀಪಿಕಾ ಪಡುಕೋಣೆ

    ಬಾಲಿವುಡ್ ಪಠಾಣ್ (Pathan) ಸಿನಿಮಾ ಬಿಡುಗಡೆಯಾದ ಬಹುತೇಕ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಯ್ಕಾಟ್ ನಡುವೆಯೂ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ನಟಿ ದೀಪಿಕಾ ಪಡುಕೋಣೆ (Deepika Padukone) ಮಾರುವೇಷದಲ್ಲಿ ಚಿತ್ರಮಂದಿರಕ್ಕೆ (Theatre) ಹೋಗಿದ್ದಾರೆ. ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ (Shah Rukh Khan) ಕಾಂಬಿನೇಷನ್ ನ ಸಿನಿಮಾ ಪಠಾಣ್. ಈ ಸಿನಿಮಾದ ಹಾಡೊಂದರಲ್ಲಿ ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದರು ಎನ್ನುವ ಕಾರಣಕ್ಕಾಗಿ ವಿವಾದ ಎದ್ದಿತ್ತು. ಕೇಸರಿ ಬಣ್ಣವನ್ನು ಅವಮಾನಿಸಲಾಗಿದೆ ಎಂದು ಹಲವರು ತಗಾದೆ ತಗೆದಿದ್ದರು. ಸೆನ್ಸಾರ್ ಮಂಡಳಿ ಕೂಡ ಮಧ್ಯ ಪ್ರವೇಶ ಮಾಡಿತ್ತು. ಆದರೂ, ಕೇಸರಿ ಬಿಕಿನಿ ತಗೆಯುವಂತಹ ಸಾಹಸವನ್ನು ಚಿತ್ರತಂಡ ಮಾಡಿಲ್ಲ. ಆದರೂ, ಸಿನಿಮಾ ಗೆದ್ದಿದೆ. ಇದನ್ನೂ ಓದಿ: `ಗಟ್ಟಿಮೇಳ’ ನಟಿ ಪ್ರಿಯಾ ಜೊತೆ ಸಿದ್ದು ಮದುವೆ ಡೇಟ್ ಫಿಕ್ಸ್ 

    ಅಂಗರಕ್ಷಕರೊಂದಿಗೆ ದೀಪಿಕಾ ಪಡುಕೋಣೆ ಥಿಯೇಟರ್ ಗೆ ಬಂದಿದ್ದಾರೆ. ಮುಖ ಕವರ್ ಮಾಡಿಕೊಂಡು ಪ್ರೇಕ್ಷಕರ ಮಧ್ಯೆ ಸಿನಿಮಾ ನೋಡಿದ್ದಾರೆ. ಆ ಅನುಭವವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರೇಕ್ಷಕರು ಸಿನಿಮಾ ಗೆಲ್ಲಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ, ಥಿಯೇಟರ್ ನಲ್ಲಿ ನೋಡುಗರು ಸಂಭ್ರಮಿಸುತ್ತಿರುವ ರೀತಿ ಕಂಡು ತುಂಬಾ ಖುಷಿಯಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಪಠಾಣ್ ಸಿನಿಮಾ ರಿಲೀಸ್ ಆಗಿ ಐದು ದಿನಗಳಾಗಿವೆ. ಬಾಕ್ಸ್ ಆಫೀಸ್ ಭರ್ತಿಯಾಗಿದೆ. ನಾಲ್ಕು ನೂರು ಕೋಟಿಗೂ ಅಧಿಕ ಹಣವನ್ನು ಅದು ಬಾಚಿದೆ. ಕಳೆದ ಎರಡ್ಮೂರು ವರ್ಷಗಳಲ್ಲಿ ಈ ಪ್ರಮಾಣದಲ್ಲಿ ಹಣ ಹರಿದು ಬಂದ ಮೊದಲ ಸಿನಿಮಾ ಇದಾಗಿದೆ. ಈ ವರ್ಷದ ಮೊದಲ ಸೂಪರ್ ಹಿಟ್ ಸಿನಿಮಾಗಳ ಸಾಲಿಗೂ ಪಠಾಣ್ ಸೇರಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಖಾನ್ ಗಳನ್ನು ದೇಶ ಪ್ರೀತಿ ಮಾಡುತ್ತೆ, ಹಾಗಾಗಿ ಪಠಾಣ್ ಗೆದ್ದಿದೆ : ಕಂಗನಾ ರಣಾವತ್

    ಖಾನ್ ಗಳನ್ನು ದೇಶ ಪ್ರೀತಿ ಮಾಡುತ್ತೆ, ಹಾಗಾಗಿ ಪಠಾಣ್ ಗೆದ್ದಿದೆ : ಕಂಗನಾ ರಣಾವತ್

    ಠಾಣ್ (Pathan) ಸಿನಿಮಾದ ಗೆಲುವನ್ನು ದಿನಕ್ಕೊಂದು ರೀತಿಯಲ್ಲಿ ಬಣ್ಣಿಸುತ್ತಿದ್ದಾರೆ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut). ಶಾರುಖ್ ಖಾನ್ (Shah Rukh Khan) ನಟನೆಯ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ನಾಲ್ಕು ದಿನದಲ್ಲಿ ಮುನ್ನೂರೈವತ್ತು ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ. ಇದಕ್ಕೆಲ್ಲ ಕಾರಣ ಖಾನ್ ಗಳನ್ನು ದೇಶ ಪ್ರೀತಿ ಮಾಡುತ್ತೆ. ಹಾಗಾಗಿ ಪಠಾಣ್ ಸಿನಿಮಾ ಗೆದ್ದಿದೆ ಎಂದು ಟಾಂಗ್ ಕೊಟ್ಟಿದ್ದಾರೆ ಕಂಗನಾ.

    ಮೊನ್ನೆಯಷ್ಟೇ ಈ ಸಿನಿಮಾ ಗೆಲುವಿನ ಕುರಿತು ಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದರು ಇದೇ ಕಂಗನಾ. ಪಠಾಣ್ ಸಿನಿಮಾ ಈ ಪ್ರಮಾಣದಲ್ಲಿ ಗೆಲ್ಲಲು ಐ.ಎಸ್.ಐ ಕಾರಣವೆಂದು ಹೇಳಿದ್ದರು. ಈ ಸಿನಿಮಾದಿಂದ ಬಂದ ಹಣವನ್ನು ಐಎಸ್ಐಗೆ ನೀಡಲಾಗುತ್ತದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದರು. ಈ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಗೆಲುವನ್ನು ಖಾನ್ ಗಳ ಪ್ರೀತಿಗೆ ಹೋಲಿಸಿ ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ಸಾನಿಯಾ ಅಯ್ಯರ್ ಕೈ ಹಿಡಿದು ಎಳೆದು, ಧರ್ಮದೇಟು ತಿಂದ ಅಭಿಮಾನಿ

    ಪಠಾಣ್ ಸಿನಿಮಾ ಬಾಯ್ಕಾಟ್ ಕಾರಣದಿಂದಾಗಿ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಲಿದೆ ಎಂದು ಹೇಳಲಾಗಿತ್ತು. ಹಿಂದೂಪರ ಸಂಘಟನೆಗಳು ಅಲ್ಲಲ್ಲಿ ಗಲಾಟೆ ಮಾಡಿ, ಚಿತ್ರಕ್ಕೆ ಅಡ್ಡಿ ಪಡಿಸಿದರು. ಕೆಲವು ಕಡೆ ಸಿನಿಮಾ ರಿಲೀಸ್ ಆಗದಂತೆ ನೋಡಿಕೊಂಡರು. ಕೆಲವು ರಾಜ್ಯಗಳು ಸಿನಿಮಾ ರಿಲೀಸ್ ಆಗದಂತೆ ನೋಡಿಕೊಂಡವು. ಆದರೆ, ಪಠಾಣ್ ಚಿತ್ರವನ್ನು ಕಟ್ಟಿಹಾಕುವುದಕ್ಕೆ ಸಾಧ್ಯವಾಗಲೇ ಇಲ್ಲ.

    ನಿರೀಕ್ಷೆಗೂ ಮೀರಿ ಪಠಾಣ್ ಸಿನಿಮಾ ಗೆದ್ದಿರುವುದಕ್ಕೆ ದಿನಕ್ಕೊಂದು ಕಾರಣವನ್ನು ಕೊಡುತ್ತಿದ್ದಾರೆ ಕಂಗನಾ ರಣಾವತ್. ಐಎಸ್ಐ ಕೈವಾಡ ಸೇರಿದಂತೆ ಅನೇಕ ಆರೋಪಗಳನ್ನು ಅವರು ಮಾಡಿದ್ದಾರೆ. ಆದರೆ, ಶಾರುಖ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗೆಲುವಿಗೆ ಕಾರಣರಾದ ಎಲ್ಲರಿಗೂ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತಾನೊಂದು ದೇಶಭಕ್ತಿ ಸಾರುವಂತಹ ಚಿತ್ರ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಕ್ಸಾಫೀಸ್‌ನಲ್ಲಿ 160 ಕೋಟಿ ಬಾಚಿದ ಶಾರುಖ್ ನಟನೆಯ `Pathaan’ ಸಿನಿಮಾ

    ಬಾಕ್ಸಾಫೀಸ್‌ನಲ್ಲಿ 160 ಕೋಟಿ ಬಾಚಿದ ಶಾರುಖ್ ನಟನೆಯ `Pathaan’ ಸಿನಿಮಾ

    ಬಾಲಿವುಡ್‌ಗೆ (Bollywood) ಇದೀಗ ಶುಕ್ರದೆಸೆ ಶುರುವಾಗಿದೆ. ಸಾಲು ಸಾಲು ಸಿನಿಮಾಗಳ ಸೋಲು ಕಂಡಿದ್ದ ಬಾಲಿವುಡ್‌ಗೆ `ಪಠಾಣ್’ (Pathaan) ಚಿತ್ರದ ಮೂಲಕ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಸಿನಿಮಾ ರಿಲೀಸ್ ಆಗಿ ಮೂರೇ ದಿನಕ್ಕೆ ಶಾರುಖ್ (Sharukh Khan) ಚಿತ್ರ ಈಗ 160 ಕೋಟಿ ರೂ. ಕಲೆಕ್ಷನ್ ಮಾಡಿದೆ.

    `ಜೀರೋ’ (Zero) ಚಿತ್ರದ ಹೀನಾಯ ಸೋಲಿನ ನಂತರ ಶಾರುಖ್ ಸಿನಿಮಾದಿಂದ ದೂರ ಉಳಿದಿದ್ದರು. ಈಗ ಪಠಾಣ್ ಚಿತ್ರದ ಮೂಲಕ ಶಾರುಖ್ ವೃತ್ತಿ ಜೀವನಕ್ಕೆ ಅಷ್ಟೇ ಅಲ್ಲ, ಬಾಲಿವುಡ್‌ಗೂ ಶಕ್ತಿ ಬಂದಂತಾಗಿದೆ. `ಪಠಾಣ್’ (Pathaan) ಬಾಕ್ಸಾಫೀಸ್‌ನಲ್ಲಿ 160 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿದೆ. ಇದನ್ನೂ ಓದಿ: ಪೇಪರ್ ಡ್ರೆಸ್ ಧರಿಸಿ ಮಿಂಚಿದ ʻಬಿಗ್‌ ಬಾಸ್‌ʼ ಖ್ಯಾತಿಯ ನಿವೇದಿತಾ ಗೌಡ

    ಹಿಂದಿ ಬಾಕ್ಸಾಫೀಸ್‌ನಲ್ಲಿ ಶಾರುಖ್ ಮತ್ತು ದೀಪಿಕಾ ಪಡುಕೋಣೆ (Deepika Padukone) ನಟನೆಯ ಪಠಾಣ್ ಸಿನಿಮಾ 161 ಕೋಟಿ ರೂ. ಗಳಿಕೆ ಮಾಡಿದೆ. ಈ ಸಿನಿಮಾ ಮೂರು ದಿನಗಳಲ್ಲಿ ಒಟ್ಟು ವಿಶ್ವಾದ್ಯಂತ 313 ಕೋಟಿ ರೂ. ಗಳಿಕೆ ಮಾಡಿದೆ.

    ಇನ್ನೂ `ಪಠಾಣ್’ ಸಿನಿಮಾ ಶಾರುಖ್ ಖಾನ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರಕ್ಕೆ ಜೀವತುಂಬಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಠಾಣ್’ ಗೆಲುವಿನ ಹಿಂದೆ ಐಎಸ್ಐ ಕೈವಾಡವಿದೆ : ನಟಿ ಕಂಗನಾ ರಣಾವತ್

    ‘ಪಠಾಣ್’ ಗೆಲುವಿನ ಹಿಂದೆ ಐಎಸ್ಐ ಕೈವಾಡವಿದೆ : ನಟಿ ಕಂಗನಾ ರಣಾವತ್

    ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ (Pathan) ಸಿನಿಮಾ ಎಲ್ಲ ಅಡೆತಡೆಗಳನ್ನು ನೂಕಿಕೊಂಡು ಭಾರೀ ಗೆಲುವಿನತ್ತ ಹೆಜ್ಜೆ ಹಾಕಿದೆ. ರಿಲೀಸ್ ಆದ ಮೂರೇ ಮೂರು ದಿನಕ್ಕೆ 150 ಕೋಟಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸಿನಿಂದ ಕೊಳ್ಳೆ ಹೊಡೆದಿದೆ. ಈ ಹೊತ್ತಿನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ (Kangana Ranaut) ಶಾಕಿಂಗ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಪಠಾಣ್ ಸಿನಿಮಾ ಈ ಪ್ರಮಾಣದಲ್ಲಿ ಗೆಲ್ಲಲು ಐ.ಎಸ್.ಐ (ISI) ಕಾರಣವೆಂದು ಮಾತನಾಡಿದ್ದಾರೆ.

    ಪಠಾಣ್ ಸಿನಿಮಾ ಬಾಯ್ಕಾಟ್ ಕಾರಣದಿಂದಾಗಿ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಲಿದೆ ಎಂದು ಹೇಳಲಾಗಿತ್ತು. ಹಿಂದೂಪರ ಸಂಘಟನೆಗಳು ಅಲ್ಲಲ್ಲಿ ಗಲಾಟೆ ಮಾಡಿ, ಚಿತ್ರಕ್ಕೆ ಅಡ್ಡಿ ಪಡಿಸಿದರು. ಕೆಲವು ಕಡೆ ಸಿನಿಮಾ ರಿಲೀಸ್ ಆಗದಂತೆ ನೋಡಿಕೊಂಡರು. ಕೆಲವು ರಾಜ್ಯಗಳು ಸಿನಿಮಾ ರಿಲೀಸ್ ಆಗದಂತೆ ನೋಡಿಕೊಂಡವು. ಆದರೆ, ಪಠಾಣ್ ಚಿತ್ರವನ್ನು ಕಟ್ಟಿಹಾಕುವುದಕ್ಕೆ ಸಾಧ್ಯವಾಗಲೇ ಇಲ್ಲ. ಇದನ್ನೂ ಓದಿ: ನಂದಮೂರಿ ತಾರಕ ರತ್ನಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

    ನಿರೀಕ್ಷೆಗೂ ಮೀರಿ ಪಠಾಣ್ ಸಿನಿಮಾ ಗೆದ್ದಿರುವುದಕ್ಕೆ ದಿನಕ್ಕೊಂದು ಕಾರಣವನ್ನು ಕೊಡುತ್ತಿದ್ದಾರೆ ಕಂಗನಾ ರಣಾವತ್. ಐಎಸ್ಐ ಕೈವಾಡ ಸೇರಿದಂತೆ ಅನೇಕ ಆರೋಪಗಳನ್ನು ಅವರು ಮಾಡಿದ್ದಾರೆ. ಆದರೆ, ಶಾರುಖ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗೆಲುವಿಗೆ ಕಾರಣರಾದ ಎಲ್ಲರಿಗೂ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತಾನೊಂದು ದೇಶಭಕ್ತಿ ಸಾರುವಂತಹ ಚಿತ್ರ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೊದಲ ದಿನದ ʻಕೆಜಿಎಫ್‌ 2ʼ ದಾಖಲೆ ಬ್ರೇಕ್- ಬಾಲಿವುಡ್‌ನಲ್ಲಿ ಪಠಾಣ್‌ ಭರ್ಜರಿ ಕಲೆಕ್ಷನ್‌

    ಮೊದಲ ದಿನದ ʻಕೆಜಿಎಫ್‌ 2ʼ ದಾಖಲೆ ಬ್ರೇಕ್- ಬಾಲಿವುಡ್‌ನಲ್ಲಿ ಪಠಾಣ್‌ ಭರ್ಜರಿ ಕಲೆಕ್ಷನ್‌

    ಬಾಲಿವುಡ್‌ನಲ್ಲಿ (Bollywood) ಈಗ ಶಾರುಖ್ ಖಾನ್ (Sharukh Khan) ಮೇನಿಯಾ ಜೋರಾಗಿದೆ. ಸಾಕಷ್ಟು ವಿವಾದಗಳ ಮಧ್ಯೆ ರಿಲೀಸ್ ಆಗಿದ್ದ ಶಾರುಖ್ ನಟನೆಯ ಪಠಾಣ್ ಸಿನಿಮಾ ಈಗ ಬಾಕ್ಸಾಫೀಸ್‌ನಲ್ಲಿ (Boxoffice) ದಾಖಲೆ ಬರೆದಿದೆ.

    ಹಲವು ವರ್ಷಗಳಿಂದ ಸತತ ಸೋಲು ಕಂಡಿದ್ದ ಶಾರುಖ್ ಖಾನ್ (Sharukh Khan) ಅವರು ಈಗ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ತಾವು ಬಾಕ್ಸಾಫೀಸ್ ಸುಲ್ತಾನ ಎಂಬುದನ್ನು ಮತ್ತೆ ಪ್ರೂವ್ ಮಾಡಿದ್ದಾರೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾಗೆ ಮೊದಲ ದಿನ ನಿರೀಕ್ಷೆಗೂ ಮೀರಿ ಕಲೆಕ್ಷನ್ ಆಗಿದೆ. ಮೊದಲ ದಿನ ಯಶ್ ನಟನೆಯ `ಕೆಜಿಎಫ್ 2′ (Kgf 2) ಚಿತ್ರದ ಹಿಂದಿ ವರ್ಷನ್ ಮೊದಲ ದಿನ ಮಾಡಿದ್ದ ದಾಖಲೆಯನ್ನು ಈಗ `ಪಠಾಣ್’ ಸಿನಿಮಾ ಮುರಿದಿದೆ. `ಪಠಾಣ್’ ಚಿತ್ರದ ಫಸ್ಟ್ ಡೇ ಮತ್ತು ಎರಡನೇ ದಿನ ಕಲೆಕ್ಷನ್ ಸೇರಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

    ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ `ಕೆಜಿಎಫ್ 2′ ಸಿನಿಮಾದ ಹಿಂದಿ ವರ್ಷನ್‌ಗೆ ಉತ್ತರ ಭಾರತದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆ ಸಿನಿಮಾ ಮೊದಲ ದಿನ 53.95 ಕೋಟಿ ರೂಪಾಯಿ ಗಳಿಸಿ ಬೀಗಿತ್ತು. ಈಗ `ಪಠಾಣ್’ (Pathaan) ಸಿನಿಮಾ ಮೊದಲ ದಿನ 55 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆದಿದೆ. ದೇಶಾದ್ಯಂತ ಈ ಚಿತ್ರದ ಸದ್ದು ಜೋರಾಗಿದೆ. ಶಾರುಖ್ ಖಾನ್ ಕೆರಿಯರ್‌ನಲ್ಲಿ ಮತ್ತೆ ದೊಡ್ಡ ಗೆಲುವು ಪಡೆದಿದ್ದಾರೆ.  ಅವರ ಗೆಲುವು ಅಭಿಮಾನಿಗಳಿಗೆ ಖುಷಿ ನೀಡಿದೆ. ಶಾರುಖ್‌ ಪಠಾಣ್‌ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆಗೆ ಸಾಕ್ಷಿಯಾದ ಸೆಲೆಬ್ರಿಟಿಗಳು

    ಗಣರಾಜ್ಯೋತ್ಸವ ದಿನ (ಜ.26) ರಜೆ ದಿನ ಕಾರಣ ಸಿನಿಮಾಗೆ ಮತ್ತಷ್ಟು ಪ್ಲಸ್ ಪಾಯಿಂಟ್ ಆಗಿದೆ. ಸಿನಿಮಾ ನೋಡಲು ಫ್ಯಾನ್ಸ್ ಚಿತ್ರಮಂದಿರದತ್ತ ಮುಗಿಬಿದ್ದಿದ್ದಾರೆ. ಹಾಗಾಗಿ ಸಿನಿಮಾ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಶಾರುಖ್ ನಟನೆಯ ಪಠಾಣ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಂಗಾರದ ಬೆಳೆ ತೆಗೆದ `ಪಠಾಣ್’ ಚಿತ್ರಕ್ಕೆ ಕಂಗನಾ ರಣಾವತ್ ಮೆಚ್ಚುಗೆ

    ಬಂಗಾರದ ಬೆಳೆ ತೆಗೆದ `ಪಠಾಣ್’ ಚಿತ್ರಕ್ಕೆ ಕಂಗನಾ ರಣಾವತ್ ಮೆಚ್ಚುಗೆ

    ಬಾದಷಾ ಶಾರುಖ್ ಖಾನ್ (Sharukh Khan) ನಟನೆಯ `ಪಠಾಣ್’ (Pathaan Film) ಚಿತ್ರ ಬಾಕ್ಸಾಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ಶಾರುಖ್ ಚಿತ್ರದಿಂದ ಬಾಲಿವುಡ್‌ಗೆ ಮರುಜೀವ ಬಂದಂತೆ ಆಗಿದೆ. ಇದೀಗ ʻಪಠಾಣ್ʼ ಚಿತ್ರದ ನೋಡಿ ಕಂಗನಾ ರಣಾವತ್ ಹಾಡಿ ಹೊಗಳಿದ್ದಾರೆ.

    ನಿರೀಕ್ಷೆಗೂ ಮೀರಿ ಪಠಾಣ್ ಸಿನಿಮಾ ಬಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ. ಹಿಂದಿ ಸಿನಿಮಾಗಳಿಂದ ಗೆಲುವು ಸಿಗದೇ ಸೋತಿದ್ದ ಬಾಲಿವುಡ್‌ಗೆ ಇದೀಗ ಹೊಸ ಕಳೆ ಬಂದಿದೆ. ಜ.25ರಂದು ತೆರೆಗೆ ಅಬ್ಬರಿಸಿದ್ದ `ಪಠಾಣ್’ ಚಿತ್ರಕ್ಕೆ ವ್ಯಾಪಕ್ತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೂಲಗಳ ಪ್ರಕಾರ ಮೊದಲ ದಿನವೇ ಶಾರುಖ್ ಚಿತ್ರ 50ರಿಂದ 51.5 ಕೋಟಿ ರೂ. ಕಲೆಕ್ಷನ್ ಮಾಡಿದೆ. 2ನೇ ದಿನವೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

    `ಜೀರೋ’ (Zero) ಚಿತ್ರದಿಂದ ಸೋತು ಸುಣ್ಣಗಾಗಿದ್ದ ಶಾರುಖ್‌ಗೆ `ಪಠಾಣ್’ ಚಿತ್ರದಿಂದ ಬೂಸ್ಟ್ ಸಿಕ್ಕಂತೆ ಆಗಿದೆ. ಇನ್ನೂ ಈ ಸಿನಿಮಾ ನೋಡಿ ಕಂಗನಾ ಕೂಡ ರಿಯಾಕ್ಟ್ ಮಾಡಿದ್ದಾರೆ. ಪಠಾಣ್ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಈ ರೀತಿಯ ಸಿನಿಮಾಗಳು ಖಂಡಿತಾ ವರ್ಕ್ ಆಗಬೇಕು. ಹಿಂದಿ ಚಿತ್ರರಂಗವು ಇತರೆ ಚಿತ್ರರಂಗಕ್ಕಿಂತ ಹಿಂದೆ ಬಿದ್ದಿದೆ. ಕೊನೆಗೂ ನಮ್ಮ ಸಿನಿಮಾಗಳ ಮೂಲಕ ಕಮ್‌ಬ್ಯಾಕ್ ಆಗಿದ್ದೇವೆ ಎಂದು ನಟಿ ಹೊಗಳಿದ್ದಾರೆ. ಸಿನಿಮಾ ಮತ್ತು ಶಾರುಖ್ ನಟನೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಪುತ್ರಿ ಅಥಿಯಾ- ರಾಹುಲ್‌ ಮದುವೆಗೆ ದುಬಾರಿ ಉಡುಗೊರೆ ನೀಡಿದ ಸುನೀಲ್ ಶೆಟ್ಟಿ

    ಶೀಘ್ರದಲ್ಲಿಯೇ 100 ಕೋಟಿ ರೂಪಾಯಿ ಕ್ಲಬ್‌ಗೆ ಪಠಾಣ್ ಸಿನಿಮಾ ಸೇರಲಿದೆ. ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ಒಳ್ಳೆಯ ಕಮಾಯಿ ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಠಾಣ್’ ಚಿತ್ರ ತಂಡಕ್ಕೆ ಶಾಕ್ : ಆನ್ ಲೈನ್ ನಲ್ಲಿ ಸಿನಿಮಾ ಲೀಕ್

    ‘ಪಠಾಣ್’ ಚಿತ್ರ ತಂಡಕ್ಕೆ ಶಾಕ್ : ಆನ್ ಲೈನ್ ನಲ್ಲಿ ಸಿನಿಮಾ ಲೀಕ್

    ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ (Pathan) ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಬಾಯ್ಕಾಟ್ (Boycott) ನಡುವೆಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಪೈರಸಿ (Piracy) ಚಿತ್ರತಂಡಕ್ಕೆ ಶಾಕ್ ನೀಡಿದೆ. ಸಿನಿಮಾ ರಿಲೀಸ್ ಗೂ ಮೊದಲೇ ಹಲವು ವೆಬ್ ಸೈಟ್ ಗಳಲ್ಲಿ ಸಿನಿಮಾವನ್ನು ಲೀಕ್ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆಯೂ ಕೂಡ ಪಠಾಣ್ ಸಿನಿಮಾದ ಟ್ರೈಲರ್ ಕೂಡ ಒಂದು ದಿನ ಮುಂಚೆಯೇ ಲೀಕ್ ಆಗಿತ್ತು.

    ಹಿಂದೂ ಧರ್ಮಕ್ಕೆ ಸಿನಿಮಾ ತಂಡ ಅವಮಾನ ಮಾಡಿದೆ ಎನ್ನುವ ಕಾರಣಕ್ಕಾಗಿ ಕೆಲವರು ಚಿತ್ರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಸಂಚು ಮಾಡಿ ಸಿನಿಮಾವನ್ನು ಸೋಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಹಣದಾಹಿ ಕೆಲ ವೆಬ್ ಸೈಟ್ ಗಳು ಸಿನಿಮಾ ರಿಲೀಸ್ ದಿನವೇ ಇಡೀ ಚಿತ್ರವನ್ನು ಲೀಕ್ ಮಾಡಿವೆ. ಹಾಗಾಗಿ ಚಿತ್ರತಂಡಕ್ಕೆ ಆತಂಕ ಎದುರಾಗಿದೆ. ಇದನ್ನೂ ಓದಿ: Oscars 2023: `ಆರ್‌ಆರ್‌ಆರ್’ ಸಿನಿಮಾದ `ನಾಟು ನಾಟು’ ಸಾಂಗ್ ನಾಮಿನೇಟ್

    ಸಿನಿಮಾ ರಿಲೀಸ್ ಆದ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎಂದು ಸ್ವತಃ ಶಾರುಖ್ ಖಾನ್ ಅವರೇ ತಿಳಿಸಿದ್ದಾರೆ. ಉತ್ತಮ ಪ್ರತಿಕ್ರಿಯೆ ನೀಡಿದಕ್ಕೆ ಅವರು ಧನ್ಯವಾದಗಳನ್ನೂ ಅರ್ಪಿಸಿದ್ದಾರೆ. ಆದರೆ, ಹಲವು ಅಡೆತಡೆಗಳನ್ನು ಅವರು ಎದುರಿಸುವುದು ಅನಿವಾರ್ಯವಾಗಿದೆ. ಕೆಲ ರಾಜ್ಯಗಳಲ್ಲಂತೂ ವಿಪರೀತ ತೊಂದರೆ ಮಾಡಲಾಗುತ್ತಿದೆ. ಥಿಯೇಟರ್ ಗೆ ನುಗ್ಗಿ ಪ್ರದರ್ಶನವನ್ನು ನಿಲ್ಲಿಸಲಾಗುತ್ತಿದೆ.

    ಈ ಪ್ರತಿಭಟನೆ ಕರ್ನಾಟಕದಲ್ಲೂ ನಡೆದಿದೆ. ಬೆಳಗಾವಿ ಸೇರಿದಂತೆ ಹಲವು ಕಡೆ ಚಿತ್ರಪ್ರದರ್ಶನ ನಿಲ್ಲಿಸುವಂತೆ ಥಿಯೇಟರ್ ಗೆ ಮುತ್ತಿಗೆ ಹಾಕುವಂತಹ ಕೆಲಸಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಸಿನಿಮಾಗಳಿಗೆ ತೊಂದರೆ ಮಾಡಬಾರದು ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದರೂ, ಜನರು ಮಾತ್ರ ಪ್ರತಿಭಟನೆಯನ್ನು ಕೈ ಬಿಟ್ಟಿಲ್ಲ. ಹಲವು ಕಡೆ ಮತ್ತೆ ಬಾಯ್ಕಾಟ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾತ್ರಿ 2 ಗಂಟೆಗೆ ಅಸ್ಸಾಂ ಸಿಎಂಗೆ ಶಾರುಖ್‌ ಖಾನ್‌ ಫೋನ್‌ ಕಾಲ್‌

    ರಾತ್ರಿ 2 ಗಂಟೆಗೆ ಅಸ್ಸಾಂ ಸಿಎಂಗೆ ಶಾರುಖ್‌ ಖಾನ್‌ ಫೋನ್‌ ಕಾಲ್‌

    ಸ್ಸಾಂ ಗುವಾಹಟಿಯಲ್ಲಿ `ಪಠಾಣ್’ (Pathaan) ಸಿನಿಮಾ ವಿರುದ್ಧ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. `ಪಠಾಣ್’ ಚಿತ್ರಕ್ಕೆ ತೊಂದರೆಯಾಗುತ್ತಿರುವ ಬೆನ್ನಲ್ಲೇ ಅಸ್ಸಾಂ ಸಿಎಂಗೆ (Assam Cm) ಬಾಲಿವುಡ್ ನಟ ಶಾರುಖ್ ಖಾನ್ (Sharukh Khan) ಫೋನ್ ಕಾಲ್ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಹಿಂದಿ ಸಿನಿಮಾಗಳ ಬಗ್ಗೆ ಟೀಕೆ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ (Naredra Modi) ಅವರು ತಿಳಿಸಿದ್ದರು. ಈ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ಆದೇಶ ನೀಡಿದ್ದರು. ಈ ಬೆನ್ನಲ್ಲೇ ಗುವಾಹಟಿಯಲ್ಲಿ `ಪಠಾಣ್’ ಸಿನಿಮಾಗೆ ತೊಂದರೆಯಾಗಿದೆ. ಶಾರುಖ್‌ ಚಿತ್ರದ ವಿರುದ್ಧ ಹಿಂದೂ ಪರ ಸಂಘಟನೆಗಳು ನಿಂತಿದ್ದಾರೆ. ಚಿತ್ರದ ಪೋಸ್ಟರ್‌ಗಳನ್ನ ಹರಿದು ಹಾಕಿದ್ದಾರೆ. ಗುವಾಹಟಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿ ಅಸ್ಸಾಂ ಸಿಎಂ ಬಳಿ ಶಾರುಖ್ ಫೋನ್‌ ಕಾಲ್‌ ಮೂಲಕ ಮಾತನಾಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ಮೂಲಕ ಸಿಎಂ ಹಿಮಂತ್ ಬಿಸ್ವ (Himanta Biswa) ಖಚಿತಪಡಿಸಿದ್ದಾರೆ. ಇದನ್ನೂ ಓದಿ: `ಕೆಜಿಎಫ್ 2′ ನಟಿ ರವೀನಾ ಟಂಡನ್ ಪುತ್ರಿ ರಾಶಾ ಬಾಲಿವುಡ್‌ಗೆ ಎಂಟ್ರಿ

    ಬಾಲಿವುಡ್ ನಟ ಶಾರುಖ್ ಖಾನ್ ಬೆಳಿಗ್ಗೆ 2 ಗಂಟೆಗೆ ಕರೆ ಮಾಡಿದ್ದರು. ಪಠಾಣ್ ಸಿನಿಮಾ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಗುವಾಹಟಿಯಲ್ಲಿ ಘಟನೆ ಬಗ್ಗೆ ನಟ ಆತಂಕ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಹೊಣೆಯಾಗಿದೆ. ಇಂಥ ಅಹಿತಕರ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಸ್ಸಾಮ್ ಸಿಎಂ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಇತ್ತೀಚೆಗೆ ಶಾರುಖ್ ಖಾನ್ ಕರೆ ಮಾಡುವ ಮೊದಲೇ, ಶಾರುಖ್ ಖಾನ್ ಎಂದರೆ ಯಾರು ಎಂದು ಅಸ್ಸಾಂ ಸಿಎಂ ಪ್ರಶ್ನೆ ಮಾಡಿದ್ದರು. ʻಪಠಾಣ್ʼ ಸಿನಿಮಾ ವಿರುದ್ಧ ಹಿಂದೂ ಸಂಘಟನೆಗಳು ಪ್ರತಿಭಟನೆ ಕುರಿತು ಸುದ್ದಿಗಾರರ ಪ್ರಶ್ನೆ ಅಚ್ಚರಿಯ ಉತ್ತರ ನೀಡಿದ್ದರು. ಶಾರುಖ್ ಆಗಲಿ, ಅವರ ಸಿನಿಮಾಗಳ ಬಗ್ಗೆಯಾಗಲಿ ನನಗೇನು ಗೊತ್ತಿಲ್ಲ ಎಂದು ಸಿಎಂ ಉತ್ತರಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಠಾಣ್ ನಿರ್ದೇಶಕನ ಸಿನಿಮಾಗೆ ಪ್ರಭಾಸ್ ಗ್ರೀನ್ ಸಿಗ್ನಲ್

    ಪಠಾಣ್ ನಿರ್ದೇಶಕನ ಸಿನಿಮಾಗೆ ಪ್ರಭಾಸ್ ಗ್ರೀನ್ ಸಿಗ್ನಲ್

    `ಬಾಹುಬಲಿ 2′ (Bahubali 2) ನಂತರ ಸಕ್ಸಸ್ ಸಿಗದೇ ಪ್ರಭಾಸ್ ಒದ್ದಾಡುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳು ಪ್ರಭಾಸ್ ಕೈಯಲ್ಲಿದ್ದರು. ಕೆರಿಯರ್‌ನ ಮತ್ತೊಂದು ಬಿಗ್ ಬ್ರೇಕ್ ಕಾಯ್ತಿದ್ದಾರೆ. ಸದ್ಯ `ಪಠಾಣ್’ (Pathan) ನಿರ್ದೇಶಕ ಸಿದ್ಧಾರ್ಥ್ ಆನಂದ್ (Siddarth Anand) ಜೊತೆ ನಟ ಸಿನಿಮಾ ಮಾಡಲು ಮುಂದಾಗಿದ್ದಾರೆ.

    ಹೊಡಿ ಬಡಿ ಕಡಿ ಎಂಬ ಸಿನಿಮಾಗಳನ್ನ ತೆರೆಯ ಮೇಲೆ ತೋರಿಸುವುದರಲ್ಲಿ ಸಿದ್ಧಾರ್ಥ್ ಆನಂದ್ ಯಾವಾಗಲೂ ಮುಂದು. ಅದಕ್ಕೆ ತಾಜಾ ಉದಾಹರಣೆ ಎಂದರೆ `ವಾರ್’ ಸಿನಿಮಾ, ಇತ್ತೀಚಿನ ಪಠಾಣ್ ಕೂಡ ಒಂದು. ರಿಲೀಸ್‌ಗೂ ಮುಂಚೆಯೇ ಟ್ರೈಲರ್‌ನಿಂದ ಶಾರುಖ್ (Sharukh Khan) ಚಿತ್ರ ಸದ್ದು ಮಾಡ್ತಿದೆ. ಈ ಬೆನ್ನಲ್ಲೇ ಸಿದ್ಧಾರ್ಥ್ ಆನಂದ್ ಮತ್ತು ಪ್ರಭಾಸ್ (Actor Prabhas) ಕಾಂಬಿನೇಷನ್ ಚಿತ್ರಕ್ಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಇದನ್ನೂ ಓದಿ: ಸತತ ಸೋಲಿನಿಂದ ಬೇಸತ್ತ ಪೂಜಾಗೆ ನಿರ್ದೇಶಕ ತ್ರಿವಿಕ್ರಮ್ ಸಲಹೆ

    `ಬಾಹುಬಲಿ 2′ ನಂತರ ಪ್ರಭಾಸ್ ನಟಿಸಿರುವ ಚಿತ್ರಗಳಿಂದ ಸೋತು ಬೇಸತ್ತಿದ್ದಾರೆ. ಹಾಗಾಗಿ ಸಿದ್ಧಾರ್ಥ್ ಹೆಣೆದಿರುವ ಕಥೆ ಕೇಳಿ ಥ್ರಿಲ್ ಆಗಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಖಡಕ್ ಆ್ಯಕ್ಷನ್ ಚಿತ್ರ ನೋಡೋದಂತು ಪಕ್ಕಾ ಎನ್ನಲಾಗುತ್ತಿದೆ. ಈ ಜೋಡಿಯ ಹೊಸ ಚಿತ್ರ ಅದೆಷ್ಟರ ಮಟ್ಟಿಗೆ ಕಮಾಲ್‌ ಮಾಡಲಿದೆ ಎಂದು ಕಾದುನೋಡಬೇಕಿದೆ.

    ಪ್ರಭಾಸ್ ನಟನೆಯ ಆದಿಪುರುಷ್, ಸಲಾರ್, ಪ್ರಾಜೆಕ್ಟ್ ಕೆ ಸಿನಿಮಾಗಳು ತೆರೆಗೆ ಅಪ್ಪಳಿಸೋದಕ್ಕೆ ರೆಡಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಿಮ್ಮ ಆಸ್ಕರ್ ಅವಾರ್ಡ್ ಮುಟ್ಟಲು ಅವಕಾಶ ಕೊಡ್ತೀರಾ: ರಾಮ್ ಚರಣ್‌ಗೆ ಕಿಂಗ್ ಖಾನ್ ಮನವಿ

    ನಿಮ್ಮ ಆಸ್ಕರ್ ಅವಾರ್ಡ್ ಮುಟ್ಟಲು ಅವಕಾಶ ಕೊಡ್ತೀರಾ: ರಾಮ್ ಚರಣ್‌ಗೆ ಕಿಂಗ್ ಖಾನ್ ಮನವಿ

    ಸ್ಕರ್ 2023 ಭಾರತೀಯರಿಗೆ ಬಾರಿ ನಿರೀಕ್ಷೆ ಮೂಡಿಸಿದೆ. ಈ ಬಾರಿ ಆಸ್ಕರ್ ಅಂಗಳದಲ್ಲಿ ಭಾರತದ ಅನೇಕ ಸಿನಿಮಾಗಳಿವೆ. ಇದರ ಮಧ್ಯೆ ಶಾರುಖ್ ಟ್ವೀಟ್ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. `ಆರ್‌ಆರ್‌ಆರ್’ (RRR Film) ಸ್ಟಾರ್ ರಾಮ್ ಚರಣ್‌ಗೆ ಬಾಲಿವುಡ್ ಬಾದಷಾ ಶಾರುಖ್ ಖಾನ್ (Sharukh Khan) ವಿಶೇಷ ಮನವಿವೊಂದು ಮಾಡಿದ್ದಾರೆ.

    `ಆರ್‌ಆರ್‌ಆರ್’ ಸಿನಿಮಾ ಇದೀಗ ಆಸ್ಕರ್ ರೇಸ್‌ನಲ್ಲಿದೆ. 10ಕ್ಕೂ ಹೆಚ್ಚು ಚಿತ್ರಗಳು ಪ್ರತಿಷ್ಠಿತ ಅಕಾಡೆಮಿ ಅವಾರ್ಡ್ ರೇಸ್‌ನಲ್ಲಿ ಇರುವುದು ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ. ಯಾವ ಸಿನಿಮಾ ಆಸ್ಕರ್ (Oscar Award) ಗೆದ್ದು ಭಾರತಕ್ಕೆ ತರುತ್ತಾರೆ ಎನ್ನುವ ಕುತೂಹಲ ಮೂಡಿಸಿದೆ. ಈ ನಡುವೆ ಶಾರುಖ್ ಖಾನ್ ಟ್ವೀಟ್ ಅಚ್ಚರಿ ಮೂಡಿಸಿದೆ. ಆಸ್ಕರ್ ತಂದಾಗ ದಯವಿಟ್ಟು ಮುಟ್ಟಲು ಕೊಡಿ ಎಂದು ಕೇಳಿಕೊಂಡಿದ್ದಾರೆ. ಹೌದು, ಈ ಬಾರಿಯ ಆಸ್ಕರ್ ರೇಸ್‌ನಲ್ಲಿ ರಾಜಮೌಳಿ (Rajamouli) ನಿರ್ದೇಶನದ `ಆರ್‌ಆರ್‌ಆರ್’ ಸಿನಿಮಾ ಕೂಡ ಇದೆ. `ಆರ್‌ಆರ್‌ಆರ್’ ತಂಡಕ್ಕೆ ಬಾಲಿವುಡ್ ಕಿಂಗ್ ಖಾನ್ ವಿಶೇಷ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಿಂದಿ ಸೇರಿ ಏಳು ಸಿನಿಮಾಗಳಲ್ಲಿ ರಾಗಿಣಿ ದ್ವಿವೇದಿ ಬ್ಯುಸಿ

    ಸೌತ್ ಸಿನಿಮಾಗಳ (South Film Industry)  ಸಕ್ಸಸ್ ನಂತರ ಇದೀಗ ಹಿಂದಿ ಚಿತ್ರರಂಗದ ಸ್ಟಾರ್ ನಟರು ದಕ್ಷಿಣದ ಸ್ಟಾರ್‌ಗಳ ಜೊತೆ ಉತ್ತಮ ಬಾಂಧವ್ಯಹೊAದಿದ್ದಾರೆ. ಆಗಾಗ ದಕ್ಷಿಣ ಹೀರೋಗಳ ಜೊತೆ ಕಾಣಿಸಿಕೊಳ್ಳುತ್ತಿರುತ್ತಾರೆ. ಶಾರುಖ್ ಮತ್ತು ರಾಮ್ ಚರಣ್ ಇಬ್ಬರೂ ಉತ್ತಮ ಸ್ನೇಹಿತರು. ರಾಮ್ ಚರಣ್ ಸೋಷಿಯಲ್ ಮೀಡಿಯಾದಲ್ಲಿ `ಪಠಾಣ್’ (Pathan) ಟ್ರೈಲರ್ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಆಸ್ಕರ್ ಪ್ರಶಸ್ತಿಯನ್ನು `ಆರ್‌ಆರ್‌ಆರ್’ (RRR) ಚಿತ್ರತಂಡ ಭಾರತಕ್ಕೆ (India) ತಂದಾಗ ನನಗೆ ಅದನ್ನು ಮುಟ್ಟಲು ಕೊಡಿ ಪ್ಲೀಸ್ ಎಂದು ಶಾರುಖ್ ಮನವಿ ಮಾಡಿದ್ದಾರೆ. ನಟನ ಮಾತಿಗೆ ರಾಮ್ ಚರಣ್ ಕೂಡ ಪ್ರತಿಕ್ರಿಯಿಸಿದ್ದಾರೆ. ಖಂಡಿತವಾಗಿಯೂ ಶಾರುಖ್ ಸರ್. ಆ ಪ್ರಶಸ್ತಿ ಭಾರತೀಯ ಚಿತ್ರರಂಗಕ್ಕೆ ಸೇರಿದ್ದು ಎಂದು ಟ್ವೀಟ್ ಮಾಡಿದ್ದಾರೆ. ಈ ನಟರಿಬ್ಬರ ಟ್ವಿಟರ್ ಮಾತುಕತೆ ವೈರಲ್ ಆಗಿದೆ. ಇಬ್ಬರ ನಡುವಿನ ಸ್ನೇಹವನ್ನು ಫ್ಯಾನ್ಸ್ ಕೊಂಡಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k