Tag: ಶಾರುಖ್ ಖಾನ್

  • ಬಾಯ್ಕಾಟ್ ಗ್ಯಾಂಗಿಗೆ ಅಕ್ಷಯ್ ಕುಮಾರ್ ತಿರುಗೇಟು: ಶಾರುಖ್ ಪರ ನಿಂತ ನಟ

    ಬಾಯ್ಕಾಟ್ ಗ್ಯಾಂಗಿಗೆ ಅಕ್ಷಯ್ ಕುಮಾರ್ ತಿರುಗೇಟು: ಶಾರುಖ್ ಪರ ನಿಂತ ನಟ

    ಬಾಲಿವುಡ್ ನಲ್ಲಿ ಬಾಯ್ಕಾಟ್ ಕಾವು ಜೋರಾಗಿದೆ. ಇದಕ್ಕೆ ಬಾಲಿವುಡ್ ನಿರ್ಮಾಪಕರು ಬೇಸತ್ತು ಹೋಗಿದ್ದಾರೆ. ಬಾಯ್ಕಾಟ್ ಗಾಳಿ ಎಷ್ಟೇ ಜೋರಾದರೂ, ಪಠಾಣ್ ಸಿನಿಮಾವನ್ನು ಏನೂ ಮಾಡುವುದಕ್ಕೆ ಆಗಲಿಲ್ಲ. ಹಾಗಾಗಿ ಅಕ್ಷಯ್ ಕುಮಾರ್ ತಮ್ಮ ಮುಂದಿನ ಸಿನಿಮಾ ಸೆಲ್ಫಿಯಲ್ಲಿ ಬಾಯ್ಕಾಟ್ ಮಾಡುವವರನ್ನೇ ಟ್ರೋಲ್ ಮಾಡಿದ್ದಾರೆ. ಈ ಮೂಲಕ ಅಕ್ಷಯ್ ಹೊಸದೊಂದು ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಸಡನ್ನಾಗಿ ಶಾರುಖ್ ಪರ ಅಕ್ಷಯ್ ನಿಂತಿದ್ದು ಅಚ್ಚರಿಯನ್ನೂ ಮೂಡಿಸಿದೆ.

    ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ಗೆಲುವನ್ನು ಅನೇಕರು, ಅನೇಕ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಬಾಲಿವುಡ್ ಸಿನಿಮಾ ರಂಗಕ್ಕೆ ಚೈತನ್ಯ ತುಂಬಿದ ಸಿನಿಮಾವಿದು ಎಂದು ಕೆಲವರು ಪ್ರಶಂಸೆ ಮಾಡುತ್ತಿದ್ದರೆ, ಶಾರುಖ್ ವಿರೋಧಿಗಳು ಈ ಗೆಲುವನ್ನು ಅರ್ಥೈಸುತ್ತಿರುವ ಪರಿಯೇ ವಿಚಿತ್ರವಿದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಬಾಯ್ಕಾಟ್ ಪರಿಯನ್ನೇ ಅವರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸಮಂತಾಗೆ ಹೋಲಿಸಿದ ನೆಟ್ಟಿಗರಿಗೆ `ಗಾಳಿಪಟ 2′ ನಾಯಕಿ ಏನಂದ್ರು ಗೊತ್ತಾ?

    ಪಠಾಣ್ ಸಿನಿಮಾ ಅತೀ ಹೆಚ್ಚು ಜನರಿಗೆ ತಲುಪುವಂತೆ ಮಾಡಿದ್ದು, ಸಿನಿಮಾದ ಕಂಟೆಂಟ್ ಗಿಂತಲೂ ವಿರೋಧಿಗಳು ನಡೆಸಿದ ಬಾಯ್ಕಾಟ್ ಎನ್ನುವ ಮಾತಿದೆ. ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ಹಲವು ಪ್ರತಿಭಟನೆಗಳು ಕೂಡ ನಡೆದವು. ಈ ಬಾಯ್ಕಾಟ್ ಸಿನಿಮಾಗೆ ವರವಾಯಿತು ಎಂದು ಹೇಳಲಾಗುತ್ತಿದೆ. ಇದೀಗ ಆ ಬಾಯ್ಕಾಟ್ ಬಗ್ಗೆಯೇ ಅಗ್ನಿಹೋತ್ರಿ ಅನುಮಾನ ವ್ಯಕ್ತಪಡಿಸಿದ್ದಾರೆ.

    ‘ನಿಜವಾಗಿಯೂ ಬಾಯ್ಕಾಟ್ ಮಾಡಿದ್ದು ಯಾರು? ಶಾರುಖ್ ಖಾನ್ ಅವರ ಗ್ಯಾಂಗೇ ಈ ರೀತಿಯಲ್ಲಿ ಪ್ರಚಾರ ಮಾಡಿತಾ ಎನ್ನುವ ಅನುಮಾನ ನನ್ನದು. ಬಾಯ್ಕಾಟ್ ಎನ್ನುವುದು ಸಿನಿಮಾ ಪ್ರಚಾರದ ಒಂದು ಭಾಗ ಆಗಿತ್ತಾ? ‘ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಪಠಾಣ್ ಗೆಲುವನ್ನು ತಾವು ಗೆಲುವು ಎಂದು ಕರೆಯುವುದಿಲ್ಲ ಎಂದೂ ಅವರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಠಾಣ್’ ಬಾಯ್ಕಾಟ್ ಗ್ಯಾಂಗ್ ಬಗ್ಗೆ ಅನುಮಾನವಿದೆ :  ವಿವೇಕ್ ಅಗ್ನಿಹೋತ್ರಿ

    ‘ಪಠಾಣ್’ ಬಾಯ್ಕಾಟ್ ಗ್ಯಾಂಗ್ ಬಗ್ಗೆ ಅನುಮಾನವಿದೆ : ವಿವೇಕ್ ಅಗ್ನಿಹೋತ್ರಿ

    ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ (Pathan) ಸಿನಿಮಾದ ಗೆಲುವನ್ನು ಅನೇಕರು, ಅನೇಕ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಬಾಲಿವುಡ್ ಸಿನಿಮಾ ರಂಗಕ್ಕೆ ಚೈತನ್ಯ ತುಂಬಿದ ಸಿನಿಮಾವಿದು ಎಂದು ಕೆಲವರು ಪ್ರಶಂಸೆ ಮಾಡುತ್ತಿದ್ದರೆ, ಶಾರುಖ್ ವಿರೋಧಿಗಳು ಈ ಗೆಲುವನ್ನು ಅರ್ಥೈಸುತ್ತಿರುವ ಪರಿಯೇ ವಿಚಿತ್ರವಿದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಬಾಯ್ಕಾಟ್ (Boycott) ಪರಿಯನ್ನೇ ಅವರು ಪ್ರಶ್ನೆ ಮಾಡಿದ್ದಾರೆ.

    ಪಠಾಣ್ ಸಿನಿಮಾ ಅತೀ ಹೆಚ್ಚು ಜನರಿಗೆ ತಲುಪುವಂತೆ ಮಾಡಿದ್ದು, ಸಿನಿಮಾದ ಕಂಟೆಂಟ್ ಗಿಂತಲೂ ವಿರೋಧಿಗಳು ನಡೆಸಿದ ಬಾಯ್ಕಾಟ್ ಎನ್ನುವ ಮಾತಿದೆ. ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ಹಲವು ಪ್ರತಿಭಟನೆಗಳು ಕೂಡ ನಡೆದವು. ಈ ಬಾಯ್ಕಾಟ್ ಸಿನಿಮಾಗೆ ವರವಾಯಿತು ಎಂದು ಹೇಳಲಾಗುತ್ತಿದೆ. ಇದೀಗ ಆ ಬಾಯ್ಕಾಟ್ ಬಗ್ಗೆಯೇ ಅಗ್ನಿಹೋತ್ರಿ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಸಮಂತಾ ಬಳಿಕ ವಿಚಿತ್ರ ಕಾಯಿಲೆ ಬಗ್ಗೆ ಬಾಯ್ಬಿಟ್ಟ ಅನುಷ್ಕಾ ಶೆಟ್ಟಿ

    ‘ನಿಜವಾಗಿಯೂ ಬಾಯ್ಕಾಟ್ ಮಾಡಿದ್ದು ಯಾರು? ಶಾರುಖ್ ಖಾನ್ ಅವರ ಗ್ಯಾಂಗೇ ಈ ರೀತಿಯಲ್ಲಿ ಪ್ರಚಾರ ಮಾಡಿತಾ ಎನ್ನುವ ಅನುಮಾನ ನನ್ನದು. ಬಾಯ್ಕಾಟ್ ಎನ್ನುವುದು ಸಿನಿಮಾ ಪ್ರಚಾರದ ಒಂದು ಭಾಗ ಆಗಿತ್ತಾ? ‘ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಪಠಾಣ್ ಗೆಲುವನ್ನು ತಾವು ಗೆಲುವು ಎಂದು ಕರೆಯುವುದಿಲ್ಲ ಎಂದೂ ಅವರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಠಾಣ್’ ಸಿನಿಮಾ ಗೆಲುವಿನ ಬೆನ್ನಲ್ಲೇ ಶಾರುಖ್ ಹಳೆ ಸಿನಿಮಾಗಳಿಗೆ ಬೇಡಿಕೆ

    ‘ಪಠಾಣ್’ ಸಿನಿಮಾ ಗೆಲುವಿನ ಬೆನ್ನಲ್ಲೇ ಶಾರುಖ್ ಹಳೆ ಸಿನಿಮಾಗಳಿಗೆ ಬೇಡಿಕೆ

    ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಸಿನಿಮಾ ಕೋಟಿ ಕೋಟಿ ಹಣ ಗಳಿಸುತ್ತಿದ್ದಂತೆಯೇ ಅವರ ಹಳೆ ಚಿತ್ರಗಳಿಗೆ ಬೇಡಿಕೆ ಬಂದಿದೆ. ಸೋಲಿನ ಸುಳಿಯಲ್ಲಿದ್ದ ಬಾಲಿವುಡ್ ಗೂ ಪಠಾಣ್ ಸಿನಿಮಾ ಟಾನಿಕ್ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಹೀಗಾಗಿ ಶಾರುಖ್ ಹಳೆಯ ಚಿತ್ರಗಳಿಗೆ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ಪ್ರೇಮಿಗಳ ದಿನಕ್ಕಾಗಿ ‘ದಿಲ್ ವಾಲೆ ದುಲ್ಹನಿಯಾ ಲೇಜಾಯೆಂಗೆ’ (Dil Wale Dulhania Le jayenge) ಚಿತ್ರ ಬಿಡುಗಡೆ ಆಗುತ್ತಿದೆ.

    28 ವರ್ಷಗಳ ಹಿಂದೆ ತೆರೆಕಂಡ ಈ ಸಿನಿಮಾದಲ್ಲಿ ಶಾರುಖ್ ಖಾನ್, ಕಾಜೋಲ್ (Kajol), ಸಿಮ್ರನ್ (Simran) ಪಾತ್ರಗಳು ನೋಡುಗರ ಮನತಟ್ಟಿದ್ದವು. ಈ ಸಿನಿಮಾ ಕೇವಲ ಪ್ರೇಮಕಥೆಯನ್ನು ಆಧರಿಸಿದ್ದಲ್ಲದೇ, ಫ್ಯಾಮಿಲಿ ಎಮೋಷನ್ ಕೂಡ ಚಿತ್ರದಲ್ಲಿತ್ತು. ಈ ಕಾರಣದಿಂದಾಗಿ ಕೇವಲ ಪ್ರೇಮಿಗಳಿಗೆ ಮಾತ್ರವಲ್ಲ, ಕುಟುಂಬದ ಪ್ರತಿ ಸದಸ್ಯರು ಒಟ್ಟಾಗಿ ಈ ಸಿನಿಮಾ ನೋಡಿ ಗೆಲ್ಲಿಸಿದ್ದರು. ಇದನ್ನೂ ಓದಿ:ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿರುವ ವಿಚಾರ ನಿಜಾನಾ? ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣ

    ಈ ಸಿನಿಮಾ ಆ ವರ್ಷದಲ್ಲಿ ಅನೇಕ ದಾಖಲೆಗಳನ್ನು ಬರೆದಿತ್ತು. ನಿರ್ದೇಶಕ, ನಟ, ನಟಿಯರು ಸೇರಿದಂತೆ ಹತ್ತು ವಿಭಾಗಗಳಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿತ್ತು. ಅಭಿಮಾನಿಗಳಿಗೆ ಶಾರುಖ್ ಖಾನ್ ಗೆ ‘ಕಿಂಗ್ ಆಫ್ ರೊಮ್ಯಾನ್ಸ್’ ಎನ್ನುವ ಬಿರುದು ನೀಡಿದ್ದರು. ಸತತ 25 ವರ್ಷಗಳ ಕಾಲ ಮುಂಬೈನ ಮರಾಠ ಮಂದಿರದಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ. ಇಂತಹ ಸಿನಿಮಾವನ್ನು ಪ್ರೇಮಿಗಳ ದಿನದ ಕೊಡುಗೆಯಾಗಿ ಈ ವಾರ ಮತ್ತೆ ಬಿಡುಗಡೆ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಠಾಣ್’ ಗಳಿಕೆ 901 ಕೋಟಿ : ಚಿತ್ರತಂಡದಿಂದ ಅಧಿಕೃತ ಘೋಷಣೆ

    ‘ಪಠಾಣ್’ ಗಳಿಕೆ 901 ಕೋಟಿ : ಚಿತ್ರತಂಡದಿಂದ ಅಧಿಕೃತ ಘೋಷಣೆ

    ಶಾರುಖ್ ಖಾನ್ (Shahrukh Khan) ನಟನೆಯ ‘ಪಠಾಣ್’ (Pathan) ಸಿನಿಮಾ ಅಚ್ಚರಿ ಎನ್ನುವಂತೆ ಬಾಕ್ಸ್ ಆಫೀಸಿನಲ್ಲಿ ಗೆಲುವು ದಾಖಲಿಸುತ್ತಿದೆ. ಜನವರಿ 25ರಂದು ವಿಶ್ವದಾದ್ಯಂತ ಬಿಡುಗಡೆ ಆಗಿರುವ ಸಿನಿಮಾ, ಈವರೆಗೂ 901 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಭಾರತವೊಂದರಲ್ಲೇ 558.40  ಕೋಟಿ ಹಣ ಬಾಚಿದ್ದರೆ, ವಿದೇಶಗಳಲ್ಲಿ 342.60 ಕೋಟಿ ಲಾಭ ಮಾಡಿದೆಯಂತೆ. ಈ ಮಾಹಿತಿಯನ್ನು ಸ್ವತಃ ನಿರ್ಮಾಣ ಸಂಸ್ಥೆಯೇ ನೀಡಿದೆ. ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

    ನಾನಾ ಕಾರಣಗಳಿಂದ ಈ ಸಿನಿಮಾ ಬಾ‍ಕ್ಸ್ ಆಫೀಸಿನಲ್ಲಿ ಸೋಲಲಿದೆ ಎಂದು ವಿಶ್ಲೇಷಣೆ ಮಾಡಲಾಗಿತ್ತು. ಈ ಸಿನಿಮಾದ ಹಾಡೊಂದರಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಹಿಂದೂಪರ ಸಂಘಟನೆಗಳು ‘ಬಾಯ್ಕಾಟ್ ಪಠಾಣ್’ ಅಭಿಯಾನ ಶುರು ಮಾಡಿದ್ದವು. ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದವರ ಜೊತೆ ದೀಪಿಕಾ ಪಡುಕೋಣೆ  (Deepika Padukone) ಕಾಣಿಸಿಕೊಂಡಿದ್ದರು ಎನ್ನುವ ಕಾರಣಕ್ಕೂ ಸಿನಿಮಾವನ್ನು ವಿರೋಧಿಸಲಾಯಿತು. ಶಾರುಖ್ ವಿರುದ್ಧವೂ ಪ್ರತಿಭಟನೆಗಳು ನಡೆದಿದ್ದವು. ಈ ಎಲ್ಲ ಕಾರಣದಿಂದಾಗಿ ಸಿನಿಮಾ ಮಕಾಡೆ ಮಲಗಲಿದೆ ಎಂದು ಹೇಳಲಾಗಿತ್ತು. ಇದನ್ನೂ ಓದಿ:`ಕಾಂತಾರ’ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಗೆಲ್ಲಲು ಅಸಲಿ ಕಾರಣ ಬಿಚ್ಚಿಟ್ಟ ರಿಷಬ್ ಶೆಟ್ಟಿ

    ಆದರೆ, ಎಲ್ಲರ ನಿರೀಕ್ಷೆಯನ್ನೂ ಮೀರಿ ಈ ಸಿನಿಮಾ ಗೆದ್ದಿದೆ. ಬಿಡುಗಡೆಯಾದ ಬಹುತೇಕ ಚಿತ್ರಮಂದಿರಗಳಲ್ಲಿ ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣದಲ್ಲಿ  ಹಣ ಗಳಿಕೆ ಮಾಡಿದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಯೂ ಇದರದ್ದು. ಈ ಕುರಿತು ಶಾರುಖ್ ಕೂಡ ಮಾತನಾಡಿದ್ದು, ಒಳ್ಳೆಯ ಸಿನಿಮಾಗಳಿಗೆ ಜಯ ಇದ್ದೆ ಇರುತ್ತದೆ ಎಂದಿದ್ದಾರೆ. ಸಿನಿಮಾ ಗೆಲ್ಲಿಸಿದವರಿಗೆ ಧನ್ಯವಾದ ಕೂಡ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಂಸತ್ ನಲ್ಲಿ ‘ಪಠಾಣ್’ ಸಿನಿಮಾ ಹೊಗಳಿದ್ರಾ ಪ್ರಧಾನಿ ಮೋದಿ?

    ಸಂಸತ್ ನಲ್ಲಿ ‘ಪಠಾಣ್’ ಸಿನಿಮಾ ಹೊಗಳಿದ್ರಾ ಪ್ರಧಾನಿ ಮೋದಿ?

    ಪ್ರಧಾನಿ ನರೇಂದ್ರ ಮೋದಿ (Narendra Modi) ‘ಪಠಾಣ್’ (Pathan) ಸಿನಿಮಾವನ್ನು ಪರೋಕ್ಷವಾಗಿ ಸಂಸತ್ ನಲ್ಲಿ ಹೊಗಳಿದ್ದಾರೆ ಎನ್ನುವ ವಿಡಿಯೋ ಸಖತ್ ವೈರಲ್ ಆಗಿದೆ.  ಸಂಸತ್ ನಲ್ಲಿ ಅವರು ಮಾತನಾಡುತ್ತಾ, ‘ದಶಕಗಳ ನಂತರ ಶ್ರೀನಗರದಲ್ಲಿ ಥಿಯೇಟರ್ (Theatre) ಹೌಸ್ ಫುಲ್ ಕಂಡಿದೆ’ ಎಂದು ಹೇಳಿದ್ದಾರೆ. ಸದ್ಯ ಶ್ರೀನಗರದಲ್ಲಿ (Srinagar) ಪಠಾಣ್ ಸಿನಿಮಾ ಪ್ರದರ್ಶನ ಆಗುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ ಎಂದು ಬಣ್ಣಿಸಲಾಗುತ್ತಿದೆ.

    ಶಾರುಖ್ (Shah Rukh Khan) ಅಭಿಮಾನಿಗಳು ಮೋದಿ ಅವರ ಮಾತುಗಳನ್ನು ‘ಪಠಾಣ್’ ಸಿನಿಮಾ ಹಿನ್ನೆಲೆಯಲ್ಲೇ ಆಡಿದ್ದು ಎಂದು ಚರ್ಚೆ ಮಾಡುತ್ತಿದ್ದರೆ, ಮೋದಿ ಹಿಂಬಾಲಕರು ಶ್ರೀನಗರ ಇದೀಗ ಶಾಂತವಾಗಿ, ನೆಮ್ಮದಿಯಾಗಿ ಸಿನಿಮಾ ನೋಡುವಂತಹ ವಾತಾವರಣ ನಿರ್ಮಾಣವಾಗಿದೆ ಎನ್ನುವ ಅರ್ಥ ವಿವರಿಸುತ್ತಿದ್ದಾರೆ. ಮೋದಿ ಆಡಿದ ಆ ಮಾತು ಪಠಾಣ್ ಸಿನಿಮಾಗಿಂತಲೂ ಸಖತ್ ಫೇಮಸ್ ಕೂಡ ಆಗಿದೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

    ಪಠಾಣ್ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎನ್ನುವ ಕಾರಣಕ್ಕಾಗಿ ಬಾಯ್ಕಾಟ್ ಪಠಾಣ್ ಅಭಿಯಾನ ಶುರುವಾಗಿತ್ತು. ಕೆಲವು ಕಡೆ ಸಿನಿಮಾ ಪ್ರದರ್ಶನಕ್ಕೂ ಅಡೆತಡೆ ನೀಡಲಾಯಿತು. ಎಲ್ಲವನ್ನೂ ದಾಟಿಕೊಂಡು ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗೆದ್ದಿದೆ. ಇನ್ನೂ ಹಲವು ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಬಾಯ್ಕಾಟ್ ನಡುವೆಯೂ ಸಿನಿಮಾ ಗೆದ್ದಿರುವುದಕ್ಕೆ ಮತ್ತೊಂದು ಸುತ್ತಿನ ಚರ್ಚೆ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾಕಿಸ್ತಾನದಲ್ಲಿ ‘ಪಠಾಣ್’ ಕ್ರೇಜ್ : ಅಕ್ರಮವಾಗಿ ಪ್ರದರ್ಶನ, ಕಾನೂನು ಕ್ರಮ

    ಪಾಕಿಸ್ತಾನದಲ್ಲಿ ‘ಪಠಾಣ್’ ಕ್ರೇಜ್ : ಅಕ್ರಮವಾಗಿ ಪ್ರದರ್ಶನ, ಕಾನೂನು ಕ್ರಮ

    ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಕ್ರೇಜ್ ಬರೀ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಹಲವು ದೇಶಗಳಲ್ಲಿ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸಿಗೆ ಕೋಟಿ ಕೋಟಿ ಹಣ ಹರಿದು ಬರುತ್ತಿದೆ. ಈವರೆಗೂ ಏಳುನೂರು ಕೋಟಿ ಹಣ ಬಂದಿದೆ ಎಂದು ಅಂದಾಜಿಸಲಾಗಿದೆ. ಈ ಸಿನಿಮಾವನ್ನು ಪಾಕಿಸ್ತಾನದಲ್ಲಿ ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಆದರೆ, ಅಲ್ಲಿ ಚಿತ್ರ ಬಿಡುಗಡೆ ಆಗದೇ ಇರುವ ಕಾರಣಕ್ಕಾಗಿ ಅಭಿಮಾನಿಗಳು ನಿರಾಸೆಯಾಗಿದ್ದರು.

    ಅಭಿಮಾನಿಗಳ ತುಡಿತವನ್ನು ಗಮನಿಸಿದ್ದ ಕರಾಚಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಪಠಾಣ್ ಸಿನಿಮಾದ ಪ್ರದರ್ಶನಕ್ಕೆ ಮುಂದಾಗಿದ್ದರು. ಆನ್ ಲೈನ್ ನಲ್ಲಿ ಟಿಕೆಟ್ ಒಂದಕ್ಕೆ 900 ರೂಪಾಯಿ ದರ ನಿಗಧಿ ಮಾಡಿ, ಪ್ರದರ್ಶನ ಕೂಡ ನಡೆಸಿದ್ದರು. ಈ ಮಾಹಿತಿ ಅಲ್ಲಿನ ಸೆನ್ಸಾರ್ ಮಂಡಳಿಗೆ ಗೊತ್ತಾಗುತ್ತಿದ್ದಂತೆಯೇ ಪ್ರದರ್ಶನ ನಿಲ್ಲಿಸಿ, ಅವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಆಶಿಕಾ ರಂಗನಾಥ್‌ಗೆ ಮನಸಾರೆ ಹಾರೈಸಿದ ಜ್ಯೂ.ಎನ್‌ಟಿಆರ್‌

    ಹೊರ ದೇಶಗಳ ಚಿತ್ರಗಳು ಅಲ್ಲಿನ ಸೆನ್ಸಾರ್ ಮಂಡಳಿ ಮುಂದೆ ಬಾರದೇ ಪ್ರದರ್ಶನ ಆಗುವಂತಿಲ್ಲ. ಅಕ್ರಮವಾಗಿ ಪ್ರದರ್ಶಿಸಿದರೆ ದಂಡ ಮತ್ತು ಜೈಲು ಶಿಕ್ಷೆ ಕೂಡ ಇದೆ. ಕೆಲವು ವರ್ಷಗಳಿಂದ ಭಾರತದ ಸಿನಿಮಾಗಳು ಪಾಕಿಸ್ತಾನದಲ್ಲಿ ಬಿಡುಗಡೆ ಆಗುತ್ತಿಲ್ಲ. ಅಲ್ಲಿನ ಸೆನ್ಸಾರ್ ಮಂಡಳಿಯು ಭಾರತದ ಚಿತ್ರಗಳಿಗೆ ಅನುಮತಿ ನೀಡುತ್ತಿಲ್ಲ. ಹೀಗಾಗಿ ಇವರ ಕಣ್ಣು ತಪ್ಪಿಸಿ ಪಠಾಣ್ ಸಿನಿಮಾವನ್ನು ಪ್ರದರ್ಶನ ಮಾಡಲಾಗಿದೆ.

    ಈ ಸಿನಿಮಾ ಬಾಂಗ್ಲಾದೇಶದಲ್ಲೂ ರಿಲೀಸ್ ಆಗದೇ ಇರುವ ಕಾರಣಕ್ಕಾಗಿ, ಅಲ್ಲಿನ ಶಾರುಖ್ ಅಭಿಮಾನಿಗಳು ಭಾರತದ ತ್ರಿಪುರಕ್ಕೆ ಬಂದು ಪಠಾಣ್ ಸಿನಿಮಾ ನೋಡಿಕೊಂಡು ಹೋಗಿದ್ದಾರೆ. ಈ ವಿಷಯವನ್ನು ತ್ರಿಪುರದ ಥಿಯೇಟರ್ ಮಾಲೀಕರೇ ಮಾಹಿತಿಯನ್ನು ಹಂಚಿಕೊಂಡಿದ್ದರು. ಶಾರುಖ್ ಅಭಿಮಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಬಾಂಗ್ಲಾದಿಂದ ಬಂದ ಅಭಿಮಾನಿಗಳ ಆ ಪ್ರೀತಿಯನ್ನು ಅವರು ಪ್ರಶಂಸಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗಲ್ಲಾಪೆಟ್ಟಿಗೆಯಲ್ಲಿ 700 ಕೋಟಿ ಬಾಚಿದ `ಪಠಾಣ್’ ಸಿನಿಮಾ

    ಗಲ್ಲಾಪೆಟ್ಟಿಗೆಯಲ್ಲಿ 700 ಕೋಟಿ ಬಾಚಿದ `ಪಠಾಣ್’ ಸಿನಿಮಾ

    ಬಾಲಿವುಡ್ (Bollywood) ಅಂಗಳದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡ್ತಿರುವ `ಪಠಾಣ್’ (Pathaan) ಸಿನಿಮಾ. ಚಿತ್ರ ರಿಲೀಸ್ ಆಗಿ 9 ದಿನಕ್ಕೆ ವಿಶ್ವಾದ್ಯಂತ 700 ಕೋಟಿ ರೂಪಾಯಿಗೂ ಕಲೆಕ್ಷನ್ ಅಧಿಕ ಕಲೆಕ್ಷನ್ ಮಾಡಿದೆ.

    ಸಾಕಷ್ಟು ವಿವಾದ ಮತ್ತು ಬಾಯ್ಕಾಟ್ ನಡುವೆಯೂ ಪಠಾಣ್ ಸಿನಿಮಾ ರಿಲೀಸ್ ಆಗಿ ಗೆದ್ದು ಬೀಗಿದೆ. ದೀಪಿಕಾ ಪಡುಕೋಣೆ (Deepika Padukone) ಧರಿಸಿದ್ದ ಬಿಕಿನಿ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸಿನಿಮಾ ಬಿಡುಗಡೆಗೂ ತೆಡೆ ನೀಡಲಾಗಿತ್ತು. ಈ ಎಲ್ಲಾ ಸಮಸ್ಯೆಗಳ ನಡುವೆ ಪಠಾಣ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

    ಶಾರುಖ್ (Sharukh Khan) ನಟನೆಯ ಪಠಾಣ್ (Pathaan) ಜ.25ಕ್ಕೆ ರಿಲೀಸ್ ಆಗಿದ್ದು, ಈ 9 ದಿನಗಳಲ್ಲಿ ವಿಶ್ವಾದ್ಯಂತ ಶಾರುಖ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ 700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಹಿಂದಿ ಬಾಕ್ಸಾಫೀಸ್‌ನಲ್ಲಿ ಪಠಾಣ್‌ ಚಿತ್ರ 350 ಕೋಟಿ ರೂ. ಗಳಿಕೆ ಮಾಡಿದೆ. ಇದನ್ನೂ ಓದಿ: ವಿಜಯ್ ಪ್ರಕಾಶ್ ಧ್ವನಿಯಲ್ಲಿ ‘ಕಡಲತೀರದ ಭಾರ್ಗವ’ ಸಿನಿಮಾ ಸಾಂಗ್

    ಹಲವು ಸಿನಿಮಾಗಳ ಸೋಲಿನಿಂದ ನರಳುತ್ತಿದ್ದ ಬಾಲಿವುಡ್‌ಗೆ ʻಪಠಾಣ್ʼ ಚಿತ್ರ ಈಗ ಮತ್ತಷ್ಟು ಶಕ್ತಿ ನೀಡಿದೆ. ಪಠಾಣ್ ಸಿನಿಮಾದಿಂದ ಮತ್ತಷ್ಟು ಬಲ ಬಂದಂತೆ ಆಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸದ್ಯಕ್ಕಿಲ್ಲ ಶಾರುಖ್ ಖಾನ್ ಸಿನಿಮಾ ಎಂದ ವಿಜಯ್ ಕಿರಗಂದೂರು

    ಸದ್ಯಕ್ಕಿಲ್ಲ ಶಾರುಖ್ ಖಾನ್ ಸಿನಿಮಾ ಎಂದ ವಿಜಯ್ ಕಿರಗಂದೂರು

    ಗಾಗಲೇ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್, (Hombale Films) ಸದ್ಯದಲ್ಲೇ ಬಾಲಿವುಡ್ (Bollywood) ಸಿನಿಮಾವನ್ನು ನಿರ್ಮಾಣ ಮಾಡಲಿದೆ ಎನ್ನುವ ಸುದ್ದಿ ಇತ್ತು. ಅದರಲ್ಲೂ ಅವರು ಶಾರುಖ್ ಖಾನ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಶಾರುಖ್ (Shah Rukh Khan)  ನಟನೆಯ ಪಠಾಣ್ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ಈ ಸುದ್ದಿ ಮತ್ತೆ ಮುನ್ನೆಲೆಗೆ ಬಂತು. ಈ ಕುರಿತು ನಿರ್ಮಾಪಕ ವಿಜಯ್ ಕಿರಗಂದೂರು (Vijay Kirgandur) ಸ್ಪಷ್ಟನೆಯನ್ನು ನೀಡಿದ್ದಾರೆ.

    ಪಠಾಣ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಕೋಟಿ ಕೋಟಿ ಬಾಚುತ್ತಿದ್ದಂತೆಯೇ, ಶಾರುಖ್ ನಟನೆಯ ಮುಂದಿನ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಹಣ ಹೂಡಲಿದೆ ಎನ್ನುವ ಸುದ್ದಿ ಹರಡಿತ್ತು. ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿರುವ ಕಿರಗಂದೂರು, ‘ಸದ್ಯ ಬಾಲಿವುಡ್ ಸಿನಿಮಾ ಮಾಡುವ ಆಲೋಚನೆ ನಮ್ಮ ಮುಂದಿಲ್ಲ. ಸದ್ಯ ನಾವು ದಕ್ಷಿಣದ ಸಿನಿಮಾಗಳಿಗೆ ಹಣ ಹೂಡಿದ್ದೇವೆ’ ಎಂದು ಹೇಳುವ ಮೂಲಕ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಪರೋಕ್ಷವಾಗಿ ತಾವು ಶಾರುಖ್ ಸಿನಿಮಾ ಮಾಡುತ್ತಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ: ʻಘೋಸ್ಟ್ʼ ಸಿನಿಮಾದಲ್ಲಿ ಪತ್ರಕರ್ತೆಯಾದ ಕೆಜಿಎಫ್‌ ನಟಿ ಅರ್ಚನಾ ಜೋಯಿಸ್

    ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮಲೆಯಾಳಂ, ತೆಲುಗು ಮತ್ತು ತಮಿಳು ಸಿನಿಮಾವನ್ನು ಮಾಡಲಾಗುತ್ತಿದೆ. ದಕ್ಷಿಣದ ಅಷ್ಟೂ ಭಾಷೆಯ ಸಿನಿಮಾಗಳಿಗೆ ದುಡ್ಡು ಹಾಕಿದ ನಂತರ, ಮುಂದಿನ ಹೆಜ್ಜೆಯಾಗಿ ಬಾಲಿವುಡ್ ಗೂ ಅದು ಬಂಡವಾಳ ಹೂಡಲಿದೆ ಎಂದು ಹೇಳಲಾಗಿತ್ತು. ಆದರೆ, ಸದ್ಯಕ್ಕೆ ತಾವು ಬಾಲಿವುಡ್ ನತ್ತ ದೃಷ್ಟಿ ನೆಟ್ಟಿಲ್ಲ ಎಂದು ಹೇಳುವ ಮೂಲಕ ನಿರಾಸೆ ಮೂಡಿಸಿದ್ದಾರೆ ವಿಜಯ್ ಕಿರಗಂದೂರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯಶ್ ಮುಂದಿಟ್ಟುಕೊಂಡು ಶಾರುಖ್ ಗೆ ಟಾಂಗ್ ಕೊಟ್ಟ ರಾಮ್ ಗೋಪಾಲ್ ವರ್ಮಾ

    ಯಶ್ ಮುಂದಿಟ್ಟುಕೊಂಡು ಶಾರುಖ್ ಗೆ ಟಾಂಗ್ ಕೊಟ್ಟ ರಾಮ್ ಗೋಪಾಲ್ ವರ್ಮಾ

    ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ (Pathan) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಧೂಳ್ ಎಬ್ಬಿಸಿದೆ. ಸಿನಿಮಾ ರಿಲೀಸ್ ಆಗಿ ಒಂದೇ ವಾರಕ್ಕೆ ಐನೂರು ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬಾಲಿವುಡ್ ಗೆ ಒಂದು ರೀತಿಯಲ್ಲಿ ಜೀವ ತುಂಬಿದ ಸಿನಿಮಾ ಕೂಡ ಇದಾಗಿದೆ. ಪಠಾಣ್ ವಿಷಯದಲ್ಲಿ ಬಾಲಿವುಡ್ ಸಂಭ್ರಮದಲ್ಲಿದ್ದರೆ, ದಕ್ಷಿಣದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Verma) ವ್ಯಂಗ್ಯವಾಡಿದ್ದಾರೆ. ತಮ್ಮ ಮಾತಿನಲ್ಲಿ ಕೆಜಿಎಫ್ 2 ಚಿತ್ರವನ್ನು ಎಳೆತಂದಿದ್ದಾರೆ.

    ಪಠಾಣ್ ಗಳಿಕೆಯ ವಿಚಾರದಲ್ಲಿ ಕೆಜಿಎಫ್ 2 (KGF 2) ಸಿನಿಮಾವನ್ನು ಹಿಂದಿಕ್ಕಿದೆ ಎಂದು ಬಣ್ಣಿಸಲಾಗಿತ್ತು. ಕೆಜಿಎಫ್ 2 ಚಿತ್ರಕ್ಕಿಂತಲೂ ಪಠಾಣ್ ಹಿಂದಿಯಲ್ಲಿ ಹೆಚ್ಚು ಹಣ ಗಳಿಕೆ ಮಾಡಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೆ, ಈ ಲೆಕ್ಕಾಚಾರ ವರ್ಮಾಗೆ ಸರಿ ಬಂದಂತೆ ಕಾಣುತ್ತಿಲ್ಲ. ಹಾಗಾಗಿಯೇ ಶಾರುಖ್ ಮತ್ತು ಯಶ್ ಗೆ (Yash) ಹೋಲಿಕೆ ಮಾಡಿ, ಪಠಾಣ್ ಚಿತ್ರಕ್ಕೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಟಾಲಿವುಡ್ ನಟ ನಾನಿಗೆ ಮೃಣಾಲ್ ಠಾಕೂರ್ ನಾಯಕಿ

    ಶಾರುಖ್ ಖಾನ್ ಬಾಲಿವುಡ್ ನಲ್ಲಿ ಬೇರೂರಿರುವ ನಟ. ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಯಶ್ ಬಾಲಿವುಡ್ ಗೆ ಏನೂ ಅಲ್ಲ. ಹೊಸಬ. ಬಾಲಿವುಡ್ ಗೆ ಪರಿಚಯವೇ ಇಲ್ಲದ ಯಶ್ ಐನೂರು ಕೋಟಿ ಗಳಿಕೆ ಮಾಡಿದ್ದಾರೆ. ಹಾಗಾಗಿ ಶಾರುಖ್ ಗೆಲುವು ನನಗೆ ಗೆಲುವು ಅನಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ನನಗೆ ಅದೊಂದು ಗೆಲುವೂ ಅನಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಠಾಣ್ ಸೋತಿದ್ದರೆ ಹೋಟೆಲ್ ನಲ್ಲಿ ಅಡುಗೆ ಮಾಡ್ತಿದ್ದೆ : ಶಾರುಖ್ ಖಾನ್

    ಪಠಾಣ್ ಸೋತಿದ್ದರೆ ಹೋಟೆಲ್ ನಲ್ಲಿ ಅಡುಗೆ ಮಾಡ್ತಿದ್ದೆ : ಶಾರುಖ್ ಖಾನ್

    ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಪಠಾಣ್ (Pathan) ಸಿನಿಮಾದ ಸಕ್ಸಸ್ (Success) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠಾಣ್ ಸಿನಿಮಾ ಒಂದು ವೇಳೆ ಸೋತಿದ್ದರೆ ತಾವು ಅಡುಗೆ (Cooking) ಭಟ್ಟ ಆಗುತ್ತಿದ್ದೆ ಎನ್ನುವ ಮಾತುಗಳನ್ನು ಆಡಿದ್ದಾರೆ. ಅದಕ್ಕಾಗಿಯೇ ಅವರು ಹೋಟೆಲ್ (Hotel) ಉದ್ಯಮಕ್ಕೆ ಕಾಲಿಡುತ್ತಿದ್ದ ಸಂಗತಿಯನ್ನೂ ತಿಳಿಸಿದ್ದಾರೆ.

    ಸತತ ನಾಲ್ಕು ವರ್ಷಗಳಿಂದ ಶಾರುಖ್ ಖಾನ್ ಅವರಿಗೆ ಯಾವುದೇ ಗೆಲುವು ಸಿಕ್ಕಿಲ್ಲ. ಪಠಾಣ್ ಸಿನಿಮಾದ ಬಗ್ಗೆ ನಿರೀಕ್ಷೆ ಇದ್ದರೂ, ಅದಕ್ಕೆ ಆದ ಅಡೆತಡೆಯಿಂದಾಗಿ ಸ್ವತಃ ಶಾರುಖ್ ಗಲಿಬಿಲಿಗೊಂಡಿದ್ದರಂತೆ. ಬಾಯ್ಕಾಟ್ ಹಾಗೂ ಮತ್ತಿತರ ಕಾರಣದಿಂದಾಗಿ ಪಠಾಣ್ ಸೋತಿದ್ದರೆ ತಾವು ತಮ್ಮದೇ ಹೋಟೆಲ್ ನಲ್ಲಿ ಅಡುಗೆ ಮಾಡುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಡುಗೆ ಮಾಡುವುದಕ್ಕಾಗಿಯೇ ಅವರು ತರಬೇತಿಯನ್ನು ಕೂಡ ಪಡೆದಿದ್ದರಂತೆ. ಇದನ್ನೂ ಓದಿ: ಟಾಲಿವುಡ್ ನಟ ನಾನಿಗೆ ಮೃಣಾಲ್ ಠಾಕೂರ್ ನಾಯಕಿ

    ಆದರೆ, ಪಠಾಣ್ ಅವರನ್ನು ಅಡುಗೆ ಮಾಡುವುದಕ್ಕೆ ಬಿಟ್ಟಿಲ್ಲ. ಕೇಳರಿಯದ ರೀತಿಯಲ್ಲಿ ಗೆಲುವು ತಂದುಕೊಟ್ಟಿದೆ. ಬಿಡುಗಡೆಯಾದ ಬಹುತೇಕ ಕಡೆ ಬಾಕ್ಸ್ ಆಫೀಸನ್ನು ಭರ್ತಿ ಮಾಡಿಸಿದೆ. ಈವರೆಗೂ ಅಂದಾಜು 500 ಕೋಟಿ ರೂಪಾಯಿ ಆದಾಯವನ್ನು ಅದು ತಂದುಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಅಧಿಕೃತವಾಗಿ ಚಿತ್ರತಂಡದಿಂದ ಲಾಭದ ವಿಚಾರ ಬಹಿರಂಗವಾಗದೇ ಇದ್ದರೂ, ಸಿನಿ ಪಂಡಿತರು ಮಾತ್ರ ದಿನದ ಲೆಕ್ಕವನ್ನು ಕೊಡುತ್ತಲೇ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k