Tag: ಶಾರುಖ್ ಖಾನ್

  • 50 ದಿನ ಪೂರೈಸಿದ ಪಠಾಣ್: 20 ದೇಶ, 135 ಚಿತ್ರಮಂದಿರ, 800 ಸ್ಕ್ರೀನ್ ಏನಿದು ಲೆಕ್ಕಾಚಾರ

    50 ದಿನ ಪೂರೈಸಿದ ಪಠಾಣ್: 20 ದೇಶ, 135 ಚಿತ್ರಮಂದಿರ, 800 ಸ್ಕ್ರೀನ್ ಏನಿದು ಲೆಕ್ಕಾಚಾರ

    ಶಾರುಖ್ ಖಾನ್ (Shahrukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ನ ಪಠಾಣ್ (Pathan) ಸಿನಿಮಾ ಇಂದಿಗೆ ಐವತ್ತು ದಿನಗಳನ್ನು ಪೂರೈಸಿದೆ. ಬೈಕಾಟ್, ವಿರೋಧ, ಹೋರಾಟ, ಕಾನೂನು ಸಮರ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಎಲ್ಲ ವಿರೋಧಗಳ ಮಧ್ಯಯೇ ಭರ್ಜರಿ ಯಶಸ್ಸು ಸಾಧಿಸಿದೆ. ಅಲ್ಲದೇ ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ.

    50 ದಿನಗಳನ್ನೂ ಪಠಾಣ್ ಸಿನಿಮಾ ಪೂರೈಸಿದ್ದರೂ, ಇನ್ನೂ 20 ದೇಶಗಳಲ್ಲಿ ಈ ಸಿನಿಮಾ ತನ್ನ ಪ್ರದರ್ಶನವನ್ನು ಮುಂದುವರೆಸಿದೆ. ಭಾರತದಲ್ಲೇ 135 ಚಿತ್ರಮಂದಿರಗಳಲ್ಲಿ 800 ಸ್ಕ್ರೀನ್ ಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಎರಡ್ಮೂರು ವರ್ಷಗಳಲ್ಲಿ ಈ ಪ್ರಮಾಣದಲ್ಲಿ ಗೆದ್ದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಠಾಣ್ ಪಾತ್ರವಾಗಿದೆ. ಐಸಿಯುವಿನಲ್ಲಿದ್ದ ಬಾಲಿವುಡ್ ಗೆ ಈ ಸಿನಿಮಾದಿಂದ ಮರುಜೀವ ಬಂದಿದೆ. ಇದನ್ನೂ ಓದಿ:  ಕ್ರಿಕೆಟರ್ ಶುಭಮನ್ ಗಿಲ್ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ರಶ್ಮಿಕಾ ಮಂದಣ್ಣ

    ಬಾಕ್ಸ್ ಆಫೀಸಿನ ಅನೇಕ ದಾಖಲೆಗಳನ್ನು ಪಠಾಣ್ ಮುರಿದಿದೆ. ಅತೀ ಕಡಿಮೆ ಸಮಯದಲ್ಲೇ ಸಾವಿರ ಕೋಟಿ ಸಂಪಾದನೆ ಮಾಡಿದ ಬಾಲಿವುಡ್ ಸಿನಿಮಾ ಎನ್ನುವ ಖ್ಯಾತಿಯೂ ಅದು ಪಾತ್ರವಾಗಿದೆ. ಅಲ್ಲದೇ, ಸಾವಿರಾರು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುವ ಮೂಲಕ ಏಕಕಾಲದಲ್ಲಿ ದೇಶ ವಿದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಬಿಡುಗಡೆಯಾದ ಅಷ್ಟೂ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಚಿತ್ರಕಂಡಿದೆ.

    ಸಿನಿಮಾ ಬಿಡುಗಡೆಗೂ ಮುನ್ನ ಭಾರೀ ಟೀಕೆಗೆ ಪಠಾಣ್ ಗುರಿ ಆಯಿತು. ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದರು ಎನ್ನುವ ಕಾರಣಕ್ಕಾಗಿ ಪ್ರತಿಭಟನೆ ಕೂಡ ನಡೆಯಿತು. ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆ ಸಿನಿಮಾವನ್ನು ಬ್ಯಾನ್ ಮಾಡುವ ವಿಚಾರ ಮುನ್ನೆಲೆಗೆ ಬಂತು. ಈ ಸಿನಿಮಾದ ಬಗ್ಗೆ ಏನೂ ಮಾತನಾಡಬಾರದು ಎಂದು ಸ್ವತಃ ಪ್ರಧಾನಿ ಮೋದಿ ಅವರೇ ಕರೆಕೊಟ್ಟಿದ್ದರು. ಆದರೂ, ಪ್ರತಿಭಟನೆ ನಿಲ್ಲಲಿಲ್ಲ. ಸಿನಿಮಾ ಗೆಲ್ಲುವುದು ಮಾತ್ರ ಬಿಡಲಿಲ್ಲ.

  • ಹಾಲಿವುಡ್ ಎಂಟ್ರಿ ಬಗ್ಗೆ ಶಾರುಖ್‌ಗೆ ತಿರುಗೇಟು ಕೊಟ್ಟ ಪ್ರಿಯಾಂಕಾ ಚೋಪ್ರಾ

    ಹಾಲಿವುಡ್ ಎಂಟ್ರಿ ಬಗ್ಗೆ ಶಾರುಖ್‌ಗೆ ತಿರುಗೇಟು ಕೊಟ್ಟ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿಕ್ ಜೋನಸ್ ಅವರನ್ನ ಮದುವೆಯಾಗಿ ಅಮೆರಿಕಾದಲ್ಲೇ ನಟಿ ಸೆಟಲ್ ಆಗಿದ್ದಾರೆ. ಹೀಗಿರುವಾಗ ಹಾಲಿವುಡ್ (Hollywood) ಎಂಟ್ರಿಯ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದಾರೆ.

    ಪ್ರಿಯಾಂಕಾ ನಟನೆಯ ಹಾಲಿವುಡ್‌ನ `ಸಿಟಾಡೆಲ್’ (Citadel) ಸಿನಿಮಾ ಮುಂದಿನ ಏಪ್ರಿಲ್ 28ಕ್ಕೆ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಇದೀಗ ತಮ್ಮ ಸಿಟಾಡೆಲ್ ವೆಬ್ ಸರಣಿ ಬಗ್ಗೆ ಮಾತನಾಡಿದ್ದಾರೆ.  ಶಾರುಖ್ ಖಾನ್‌ (Sharukh Khan) ಹಾಲಿವುಡ್‌ ಎಂಟ್ರಿ ಬಗ್ಗೆ ನೀಡಿದ್ದ ಹೇಳಿಕೆಗೆ ಪ್ರಿಯಾಂಕಾ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಡಾಲಿ ನಟನೆಯ `ಹೊಯ್ಸಳ’ ಚಿತ್ರದ ಟೈಟಲ್ ಬದಲಾಗಿದ್ದೇಕೆ?

    ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಹೇಳಿಕೆಯ ಬಗ್ಗೆ ಪ್ರಿಯಾಂಕಾ ಚೋಪ್ರಾ ಅವರಿಗೆ ಪ್ರಶ್ನೆ ಮಾಡಲಾಯಿತು. ಶಾರುಖ್ ಈ ಹಿಂದೆ ತಾನು ಯಾಕೆ ಹಾಲಿವುಡ್‌ಗೆ ಹೋಗಲ್ಲ ಎಂದು ಬಹಿರಂಗಪಡಿಸಿದ್ದರು. ಹಾಲಿವುಡ್‌ಗೆ ಹೋಗುವ ಪ್ರಶ್ನೆ ಮಾಡಿದ್ದಕ್ಕೆ ಶಾರುಖ್, ನಾನೇಕೆ ಅಲ್ಲಿಗೆ ಹೋಗಬೇಕು. ನಾನು ಇಲ್ಲೇ ಆರಾಮಾಗಿ ಇದ್ದೀನಿ ಎಂದು ಹೇಳಿದರು. ಶಾರುಖ್ ಮಾತನ್ನು ಉಲ್ಲೇಖಿಸಿ ಪ್ರಿಯಾಂಕಾ ಅವರಿಗೆ ಪ್ರಶ್ನೆ ಮಾಡಲಾಯಿತು. ಉತ್ತರ ನೀಡಿದ ಪ್ರಿಯಾಂಕಾ ತನಗೆ ಆರಾಮಾಗಿ ಇರುವುದು ಬೋರಿಂಗ್ ಎಂದು ಹೇಳಿದ್ದಾರೆ.

    ಆರಾಮಾಗಿ ಇರುವುದು ನನಗೆ ಬೋರ್ ಆಗಿದೆ. ಹಾಗಂತ ನಾನು ಅಹಂಕಾರಿಯಲ್ಲ. ನಾನು ಸೆಟ್‌ಗೆ ಕಾಲಿಟ್ಟಾಗ ಏನು ಮಾಡುತ್ತೇನೆ ಎಂದು ಅರಿವಿದೆ. ನನಗೆ ಆತ್ಮವಿಶ್ವಾಸವಿದೆ. ನಾನು ಈಗಲೂ ಆಡಿಶನ್ ತೆಗೆದುಕೊಳ್ಳಲು ಸಿದ್ಧಳಿದ್ದೇನೆ. ನಾನು ಈಗಲೂ ಕೆಲಸ ಮಾಡಲು ಸಿದ್ಧ. ಇನ್ನೊಂದು ದೇಶಕ್ಕೆ ಕಾಲಿಟ್ಟಾಗ ನನ್ನ ಯಶಸ್ಸನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಪ್ರಿಯಾಂಕಾ ಹೇಳಿಕೆ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದು ಶಾರುಖ್ ಖಾನ್ ಅವರಿಗೆ ಕೊಟ್ಟ ತಿರುಗೇಟು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.

  • ಶಾರುಖ್ ಖಾನ್ ಮನೆಯಲ್ಲಿ ಆಗಂತುಕರು : ಎಂಟು ಗಂಟೆ ಮಾಡಿದ್ದೇನು?

    ಶಾರುಖ್ ಖಾನ್ ಮನೆಯಲ್ಲಿ ಆಗಂತುಕರು : ಎಂಟು ಗಂಟೆ ಮಾಡಿದ್ದೇನು?

    ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ನಿವಾಸದಲ್ಲಿ ಹೈಡ್ರಾಮಾ ನಡೆದಿದೆ. ಅಭಿಮಾನಿ ಹೆಸರಿನ ಇಬ್ಬರು ಆಗಂತುಕರು ಮಧ್ಯರಾತ್ರಿ ಮನೆ ಪ್ರವೇಶಿಸಿ ಎಂಟುಗಂಟೆಗಳ ಕಾಲ ಅವರ ಮೇಕಪ್ ರೂಮ್ ನಲ್ಲಿ ಕಳೆದಿದ್ದಾರೆ. ಅವರನ್ನು ಕಂಡು ಸ್ವತಃ ಶಾರುಖ್ ಖಾನ್ ಬೆಚ್ಚಿಬಿದ್ದಿದ್ದಾರೆ. ರಾತ್ರಿ ಮೂರು ಗಂಟೆಗೆ ಅವರು ಮನೆಯ ಕಾಂಪೌಂಡ್ ಹಾರಿಕೊಂಡು ಮನೆ ಪ್ರವೇಶಿಸಿದ್ದರು ಎಂದು ಹೇಳಲಾಗುತ್ತಿದೆ.

    ಮುಂಬೈನ (Mumbai) ಬಾಂದ್ರಾದಲ್ಲಿರುವ ಶಾರುಖ್ ಅವರ ಮನ್ನತ್ (Mannat) ಮನೆಗೆ ಸಾಕಷ್ಟು ಸೆಕ್ಯೂರಿಟಿ ಇದ್ದರೂ, ಇಬ್ಬರು ವ್ಯಕ್ತಿಗಳು ಮನೆಯನ್ನು ಹೇಗೆ ಪ್ರವೇಶ ಮಾಡಿದರು ಎನ್ನುವ ಆತಂಕ ಎದುರಾಗಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ಅವರಿಬ್ಬರೂ ಮಧ್ಯರಾತ್ರಿ 3 ಗಂಟೆಗೆ ಮನೆ ಪ್ರವೇಶ ಮಾಡಿ, ಬೆಳಗ್ಗೆ 10.30ರವರೆಗೂ ಅಲ್ಲಿಯೇ ಇದ್ದರು. ಮೇಕಪ್ ರೂಮ್ ಗೆ ಬಂದ ಶಾರುಖ್ ಅವರನ್ನು ನೋಡಿ ಗಾಬರಿ ಆಗಿದ್ದರು. ಇದನ್ನೂ ಓದಿ: ತಂದೆಯ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಕ್ಕೆ ಖುಷ್ಬೂಗೆ ನೆಟ್ಟಿಗರಿಂದ ಕ್ಲಾಸ್

    ಕೂಡಲೇ ಶಾರುಖ್ ಮನೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಂಬೈ ಪೊಲೀಸರು ಅವರನ್ನು ಬಂಧಿಸಿ, ಎಫ್.ಐ.ಆರ್ ದಾಖಲಿಸಿದ್ದಾರೆ. ಆ ಇಬ್ಬರೂ ಯುವಕರು ಶಾರುಖ್ ಅಭಿಮಾನಿಗಳು ಎಂದು ಹೇಳಲಾಗುತ್ತಿದೆ. ಗುಜರಾತ್ ನ ಭರೂಚ್ (Bharuch) ಗ್ರಾಮದಿಂದ ಬಂದಿರುವುದಾಗಿ ತಿಳಿಸಿದ್ದಾರೆ. ನಟನಿಗೆ ಸರ್ಪೈಸ್ ನೀಡುವುದಕ್ಕೆ ಹಾಗೆ ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಶಾರುಖ್ ಖಾನ್ ಮನೆ ಅದೊಂದು ದೊಡ್ಡ ಬಂಗಲೆ. ಹಲವು ಕೊಠಡಿಗಳನ್ನು ಅದು ಹೊಂದಿದೆ. ಆಮನೆಯಲ್ಲಿ ಸ್ಟುಡಿಯೋ, ಮೇಕಪ್ ರೂಮ್, ಆಫೀಸ್ ಸೇರಿದಂತೆ ಚಿತ್ರೀಕರಣಕ್ಕೆ ಸಂಬಂಧಿಸಿದ ಹಲವು ಚಟುವಟಿಕೆಗಳು ಕೂಡ ನಡೆಯುತ್ತವೆ ಎಂದು ಹೇಳಲಾಗುತ್ತಿದೆ.

  • ʻಪ್ರಾಜೆಕ್ಟ್ ಕೆ’ ಚಿತ್ರಕ್ಕೆ 10 ಕೋಟಿ ಸಂಭಾವನೆ ಪಡೆದ ದೀಪಿಕಾ ಪಡುಕೋಣೆ

    ʻಪ್ರಾಜೆಕ್ಟ್ ಕೆ’ ಚಿತ್ರಕ್ಕೆ 10 ಕೋಟಿ ಸಂಭಾವನೆ ಪಡೆದ ದೀಪಿಕಾ ಪಡುಕೋಣೆ

    ಬಾಲಿವುಡ್‌ನಲ್ಲಿ (Bollywood) ದುಬಾರಿ ನಾಯಕಿ ಎಂದೆನಿಸಿಕೊಳ್ಳುವ ಮೂಲಕ ದೀಪಿಕಾ ಪಡುಕೋಣೆ (Deepika Padukone) ಸುದ್ದಿಯಲ್ಲಿದ್ದಾರೆ. `ಪಠಾಣ್’ (Pathaan) ಚಿತ್ರದ ಸೂಪರ್ ಸಕ್ಸಸ್‌ನಲ್ಲಿರುವ ನಟಿ ಈಗ ಪ್ರಭಾಸ್ ನಟನೆಯ `ಪ್ರಾಜೆಕ್ಟ್ ಕೆ’ ಸಿನಿಮಾಗೆ ಭರ್ಜರಿ ಸಂಭಾವನೆ ಪಡೆದಿದ್ದಾರೆ.

    `ಐಶ್ವರ್ಯಾ’ (Aishwarya Kannada Film) ಸಿನಿಮಾ ಮೂಲಕ ರಿಯಲ್ ಸ್ಟಾರ್ ಉಪ್ಪಿಗೆ (Upendra)  ನಾಯಕಿಯಾಗುವ ಮೂಲಕ ಬಣ್ಣದ ಲೋಕಕ್ಕೆ ಕನ್ನಡತಿ ದೀಪಿಕಾ ಪಡುಕೋಣೆ ಎಂಟ್ರಿ ಕೊಟ್ಟರು. ಬಳಿಕ ಶಾರುಖ್ ಖಾನ್‌ಗೆ (Sharukh Khan) ನಾಯಕಿಯಾಗಿ `ಓಂ ಶಾಂತಿ ಓಂ’ ಚಿತ್ರದಿಂದ ಬಾಲಿವುಡ್‌ಗೆ ಲಗ್ಗೆ ಇಟ್ಟರು. ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡು ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಕಿರುತೆರೆ ಸುಂದರಿ ಅಮೂಲ್ಯ ಗೌಡ

    ಈ ವರ್ಷ `ಪಠಾಣ್’ ಚಿತ್ರದ ಮೂಲಕ ಭರ್ಜರಿ ಓಪನಿಂಗ್ಸ್ ಪಡೆದಿದ್ದಾರೆ. ಶಾರುಖ್ ನಾಯಕಿಯಾಗಿ ದೀಪಿಕಾ ಮಿಂಚಿದ್ದಾರೆ. ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಹಾಗಾಗಿ ತಮ್ಮ ಮುಂದಿನ ಸಿನಿಮಾ `ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ದುಬಾರಿ ಸಂಭಾವನೆಯನ್ನೇ ನಟಿ ಪಡೆದಿದ್ದಾರೆ.

    ಈ ಸಿನಿಮಾಗಾಗಿ ಅವರು ದೊಡ್ಡ ಕಾಲ್‌ಶೀಟ್ ನೀಡಿದ್ದಾರೆ. ಹಲವು ದಿನಗಳನ್ನ ಈ ಚಿತ್ರಕ್ಕಾಗಿ ಮುಡಿಪಿಟ್ಟಿದ್ದಾರೆ. ನಾಗ್ ಅಶ್ವೀನ್ ನಿರ್ದೇಶನದ ಈ ಚಿತ್ರಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಕೆಲ ಸ್ಟಾರ್ ಹೀರೋಗಳು ಕೂಡ ಇಷ್ಟು ಸಂಭಾವನೆ ಪಡೆಯಲ್ಲ ಅನ್ನೋದು ಗಮಿನಿಸಬೇಕಾದ ವಿಷಯ. ಪ್ರಭಾಸ್ ಜೊತೆಗಿನ ಈ ಚಿತ್ರ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ.

  • `ಜವಾನ್’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ

    `ಜವಾನ್’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ

    `ಪಠಾಣ್’ (Pathaan) ಸಿನಿಮಾ ಮೂಲಕ ಸೂಪರ್ ಸಕ್ಸಸ್ ಕಂಡಿರುವ ಶಾರುಖ್‌ಗೆ(Sharukh Khan) ಇದೀಗ ಗೆಲುವಿನ ಸರದಾರ ಶಿವರಾಜ್‌ಕುಮಾರ್ (Shivarajkumar) ಸಾಥ್ ನೀಡುತ್ತಿದ್ದಾರೆ. ಬಾಲಿವುಡ್ (Bollywood) ಎಸ್‌ಆರ್‌ಕೆ ಜೊತೆ ಸ್ಯಾಂಡಲ್‌ವುಡ್ ಎಸ್‌ಆರ್‌ಕೆ ಜೊತೆಯಾಗುತ್ತಿದ್ದಾರೆ. ಇಂತಹದೊಂದು ಸುದ್ದಿ ಸಿನಿನಗರಿಯಲ್ಲಿ ಹರಿದಾಡುತ್ತಿದೆ.

    ಶಾರುಖ್ ಖಾನ್ ಸದ್ಯ `ಜವಾನ್’ (Jawan) ಪ್ರಾಜೆಕ್ಟ್ ಕಡೆ ಗಮನ ಕೊಡುತ್ತಿದ್ದಾರೆ. `ಪಠಾಣ್’ ಚಿತ್ರದ ಸಕ್ಸಸ್ ನಂತರ ಜವಾನ್ ಆಗಿ ಮಿಂಚಲು ಸಜ್ಜಾಗಿದ್ದಾರೆ. ಜವಾನ್ ಚಿತ್ರದ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲೇಬೇಕು ಅಂತಾ ಪಣ ತೊಟ್ಟಿದ್ದಾರೆ. `ಜವಾನ್’ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ ಎಂಟ್ರಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಹಂಚಿಕೊಂಡ ಜಾನ್ವಿ ಕಪೂರ್

    ಗೌರಿ ಖಾನ್ (Gowri Khan Productions) ನಿರ್ಮಾಣದ ಈ ಚಿತ್ರದಲ್ಲಿ ದಕ್ಷಿಣದ ಸ್ಟಾರ್ ಕಲಾವಿದರನ್ನ ಈ ಚಿತ್ರದಲ್ಲಿ ಸೇರಿಸುವ ಪ್ರಯತ್ನ ನಡೆಯುತ್ತಿದೆಯಂತೆ. ಸ್ಟಾರ್ ಕಲಾವಿದರ ದಂಡೇ ಈ ಚಿತ್ರದಲ್ಲಿ ಇರಲಿದೆ. ಜವಾನ್‌ಗೆ ನಾಯಕಿಯಾಗಿ ನಯನತಾರಾ (Nayanatara) ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಕನ್ನಡದಿಂದ ಸೆಂಚುರಿ ಸ್ಟಾರ್ ಶಿವಣ್ಣಗೆ (Shivanna) ಚಿತ್ರದಲ್ಲಿ ನಟಿಸಲು ಶಾರುಖ್ ಟೀಂ ಅಪ್ರೋಚ್ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಈಗಾಗಲೇ ಶಿವಣ್ಣ ರಜನೀಕಾಂತ್ (Rajanikanth) ಜೊತೆ `ಜೈಲರ್’ನಲ್ಲಿ ನಟಿಸಿ ಬಂದಿದ್ದಾರೆ. ಈಗಾಗಲೇ ಪರಭಾಷಾ ಸಿನಿಮಾಗಳಲ್ಲಿ ನಟಿಸಲು ಶಿವಣ್ಣ ಪ್ರಾರಂಭ ಮಾಡಿದ್ದಾರೆ. ಹಾಗಾಗಿ ಶಾರುಖ್ ಖಾನ್ ಚಿತ್ರದಲ್ಲಿ ಶಿವಣ್ಣ ನಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಅಧಿಕೃತ ಅಪ್‌ಡೇಟ್‌ಗಾಗಿ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

  • ನಟ ಶಾರುಖ್ ಮನೆಗೆ ನುಗ್ಗಿದ ಫ್ಯಾನ್ಸ್ ವಿರುದ್ಧ ದಾಖಾಲಾಯ್ತು ಕೇಸ್

    ನಟ ಶಾರುಖ್ ಮನೆಗೆ ನುಗ್ಗಿದ ಫ್ಯಾನ್ಸ್ ವಿರುದ್ಧ ದಾಖಾಲಾಯ್ತು ಕೇಸ್

    `ಠಾಣ್’ ಸೂಪರ್ ಸ್ಟಾರ್ ಶಾರುಖ್ ಖಾನ್‌ಗೆ (Sharukh Khan) ಅಪಾರ ಅಭಿಮಾನಿಗಳಿದ್ದಾರೆ. ಅವರ ಮನ್ನತ್ ನಿವಾಸದ ಮುಂದೆ ಸದಾ ಜಾತ್ರೆಯಂತೆ ಅಭಿಮಾನಿಗಳು ಒಟ್ಟಾಗಿರುತ್ತಾರೆ. ಶಾರುಖ್‌ನ ಮೀಟ್ ಮಾಡಲೆಂದೇ ಮನೆಯ ಬಳಿ ಫ್ಯಾನ್ಸ್ ಕಾಯುತ್ತಿರುತ್ತಾರೆ. ಇದೀಗ ನೆಚ್ಚಿನ ನಟ ಶಾರುಖ್‌ನ ನೋಡಲು ಮನೆಗೆ ನುಗ್ಗಿದ ಅಭಿಮಾನಿ ವಿರುದ್ಧ ಪ್ರಕರಣ ದಾಖಲಾಗಿದೆ.

    ನಟ-ನಟಿಯರನ್ನ ಮೀಟ್ ಮಾಡೋಕೆ ಫ್ಯಾನ್ಸ್ (Fans)ನಾನಾ ತರಹದ ಕಸರತ್ತು ನಡೆಸುತ್ತಾರೆ. ಇದಕ್ಕಾಗಿ ಅವರು ಯಾವ ಹಂತಕ್ಕೆ ಹೋಗೋಕೂ ರೆಡಿ ಇರುತ್ತಾರೆ. ಈಗಲೂ ಹಾಗೆಯೇ ಆಗಿದೆ. ಶಾರುಖ್ ಖಾನ್ ಅವರನ್ನು ಭೇಟಿ ಮಾಡೋಕೆ ಗುಜರಾತ್‌ನಿಂದ (Gujrat) ಇಬ್ಬರು ಬಂದಿದ್ದಾರೆ. ಮನ್ನತ್ ನಿವಾಸದ ಹೊರಗೆ ಅವರು ಪಠಾಣ್ ಹೋರೋಗಾಗಿ ಕಾದು ನಿಂತಿದ್ದರು. ಆದರೆ, ಶಾರುಖ್ ಬರುವ ಸೂಚನೆ ಸಿಕ್ಕಿಲ್ಲ. ಹೀಗಾಗಿ, ಅವರು ಮನೆಯ ಗೋಡೆ ಏರಿ ನಿವಾಸದ ಆವರಣಕ್ಕೆ ಜಿಗಿದಿದ್ದಾರೆ. ಇದನ್ನೂ ಓದಿ: ಸದ್ದಿಲ್ಲದೇ ʻಟೋಬಿʼ ಚಿತ್ರದ ಶೂಟಿಂಗ್‌ ಮುಗಿಸಿದ ರಾಜ್‌ ಬಿ ಶೆಟ್ಟಿ

    ಇದನ್ನು ನೋಡಿದ ಭದ್ರತಾ ಸಿಬ್ಬಂದಿ, ಅವರನ್ನು ಹಿಡಿದು ಪೊಲೀಸರಿಗೆ ನೀಡಿದ್ದಾರೆ. ಇಬ್ಬರ ವಿರುದ್ಧ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಓರ್ವ 20 ವರ್ಷದವನು, ಮತ್ತೋರ್ವ 22 ವರ್ಷದವನು. `ನಾವು ಶಾರುಖ್ ಖಾನ್ ಅಭಿಮಾನಿಗಳು. ಅವರನ್ನು ಭೇಟಿ ಆಗೋಕೆ ಈ ರೀತಿ ಮಾಡಿದೆವು’ ಎಂದು ಅವರು ಹೇಳಿಕೊಂಡಿದ್ದಾರೆ. ಇದರ ಹಿಂದೆ ಬೇರೆ ಯಾವುದಾದರೂ ಉದ್ದೇಶ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

    ಶಾರುಖ್ ಖಾನ್ ಹಲವು ವರ್ಷಗಳ ಬಳಿಕ ಪಠಾಣ್ ಚಿತ್ರದ ಮೂಲಕ ಸೂಪರ್ ಸಕ್ಸಸ್ ಸಿಕ್ಕಿದೆ. ವಿಶ್ವದೆಲ್ಲೆಡೆ 1000 ಕೋಟಿ ರೂ. ಬಾಚಿದ್ರೆ ಹಿಂದಿ ಬಾಕ್ಸಾಫೀಸ್‌ನಲ್ಲಿ ಪಠಾಣ್ 509 ಕೋಟಿ ರೂ. ಕಲೆಕ್ಷನ್ ಮಾಡಿ ಗೆದ್ದು ಬೀಗಿದೆ.

  • ಸಲ್ಮಾನ್ ಖಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಗೆಸ್ಟ್ : ಇದು ‘ಪಠಾಣ್’ ಹವಾ

    ಸಲ್ಮಾನ್ ಖಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಗೆಸ್ಟ್ : ಇದು ‘ಪಠಾಣ್’ ಹವಾ

    ಶಾರುಖ್ ಖಾನ್ (Shah Rukh Khan) ನಟನೆಯ ಪಠಾಣ್ (Pathan) ಸಿನಿಮಾ ಬಾಲಿವುಡ್ ನಲ್ಲಿ ದಾಖಲೆ ಬರೆದಿದೆ. ಸಾವಿರ ಕೋಟಿ ಕ್ಲಬ್ ಸೇರುವ ಮೂಲಕ ಬಿಟೌನ್ ಗೆ ಜೀವ ನೀಡಿದೆ. ಕಳೆದ ಎರಡ್ಮೂರು ವರ್ಷಗಳಿಂದ ಕುಸಿದು ಹೋಗಿದ್ದ ಬಾಲಿವುಡ್ ಶಕ್ತಿಗೆ ನವಚೈತನ್ಯ ಬಂದಿದೆ. ಹಾಗಾಗಿ ಶಾರುಖ್ ಖಾನ್ ಗೆ (Salman Khan) ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ಶಾರುಖ್ ಇದ್ದರೆ ಸಿನಿಮಾ ಗೆಲ್ಲುವುದು ಗ್ಯಾರಂಟಿ ಎನ್ನುವ ಮಾತು ಶುರುವಾಗಿದೆ.

    ಹಾಗಂತ ಪಠಾಣ್ ಸುಮ್ಮನೆ ಗೆದ್ದಿಲ್ಲ, ನಾನಾ ರೀತಿಯಲ್ಲಿ ಹೋರಾಟ ಮಾಡಿಯೇ ಇಷ್ಟು ದೊಡ್ಡ ಯಶಸ್ಸು ಪಡೆದಿದೆ. ಬಾಯ್ಕಾಟ್ ಅಭಿಯಾನದಿಂದ ಶುರುವಾದ ಹೋರಾಟ, ಚಿತ್ರಮಂದಿರದಲ್ಲಿ ಹಾಕಿದ್ದ ಪೋಸ್ಟರ್ ಕಿತ್ತು ಹಾಕುವತನಕ ಮುಂದುವರೆಯಿತು. ಸಿನಿಮಾವನ್ನು ಮಕಾಡೆ ಮಲಗಿಸಿಲ್ಲ ಅನೇಕ ಮಾರ್ಗಗಳನ್ನು ಹುಡುಕಿದರು. ಈ ಎಲ್ಲವನ್ನೂ ದಾಟಿಕೊಂಡು ಸಿನಿಮಾ ಗೆಲುವು ಸಾಧಿಸಿತು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ಹಾಗಾಗಿಯೇ ಸಲ್ಮಾನ್ ಖಾನ್ ತಮ್ಮ ಟೈಗರ್ 3 ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಬೇಕು ಎನ್ನುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ. ಅದೊಂದು ಅತಿಥಿ ಪಾತ್ರವಾಗಿದ್ದರೂ, ಬಲು ಪ್ರೀತಿಯಿಂದಲೇ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರಂತೆ ಶಾರುಖ್. ಪಠಾಣ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕೂಡ ಅತಿಥಿ ಪಾತ್ರ ಮಾಡಿದ್ದರು. ಆ ಋಣವನ್ನು ಈ ಸಿನಿಮಾದಲ್ಲಿ ತೀರಿಸಲಿದ್ದಾರೆ ಶಾರುಖ್.

  • ನಿವೃತ್ತಿ ಪಡೆಯುವ ಮಾತೇ ಇಲ್ಲ ಎಂದ ʻಪಠಾಣ್‌ʼ ನಟ ಶಾರುಖ್‌ ಖಾನ್‌

    ನಿವೃತ್ತಿ ಪಡೆಯುವ ಮಾತೇ ಇಲ್ಲ ಎಂದ ʻಪಠಾಣ್‌ʼ ನಟ ಶಾರುಖ್‌ ಖಾನ್‌

    `ಪಠಾಣ್’ (Pathaan) ಸಕ್ಸಸ್ ಅಲೆಯಲ್ಲಿ ಬಾದಷಾ ಶಾರುಖ್ ಖಾನ್ (Sharukh Khan) ತೇಲುತ್ತಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳು ಕಂಡಿರುವ ಶಾರುಖ್ ಖಾನ್ `ಪಠಾಣ್’ ಸಿನಿಮಾ ಅವರ ಕೆರಿಯರ್‌ಗೆ ಟರ್ನಿಂಗ್ ಪಾಯಿಂಟ್ ಕೊಟ್ಟಿದೆ. ಇದೀಗ ಶಾರುಖ್ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.

    ಶಾರುಖ್ ಖಾನ್- ದೀಪಿಕಾ ಪಡುಕೋಣೆ (Deepika Padukone) ನಟನೆಯ ‘ಪಠಾಣ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಶಾರುಖ್ ಕಮ್‌ಬ್ಯಾಕ್ ಮಾಡಿದ್ದಾರೆ. ಈ ಸಿನಿಮಾದ ಒಟ್ಟು ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ಸಮೀಪಿಸುವುದರಲ್ಲಿದೆ. ಪಠಾಣ್ ಹೀರೋ ಅವರು ಅಭಿಮಾನಿಗಳ ಮಧ್ಯೆ ತೆರಳಿ ಪ್ರಚಾರ ಮಾಡಿದ್ದು ಕಡಿಮೆ. ಬದಲಿಗೆ ಸೋಶಿಯಲ್ ಮೀಡಿಯಾ ಮೂಲಕ ಪ್ರಮೋಷನ್ ಮಾಡುತ್ತಿದ್ದಾರೆ. ಟ್ವಿಟರ್‌ನಲ್ಲಿ ಅವರು ಪ್ರಶ್ನೋತ್ತರ ನಡೆಸುತ್ತಾರೆ. ಈ ವೇಳೆ ನಿವೃತ್ತಿ ಬಗ್ಗೆ ಕೇಳಲಾಗಿದೆ.

    `ನೀವು ನಿವೃತ್ತಿ ಪಡೆದ ನಂತರ ಬಾಲಿವುಡ್‌ನಲ್ಲಿ ದೊಡ್ಡ ವ್ಯಕ್ತಿ ಯಾರು’ ಎಂದು ಶಾರುಖ್‌ಗೆ (Sharukh Khan) ಕೇಳಲಾಗಿದೆ. ನಾನು ನಟನೆಯಿಂದ ನಿವೃತ್ತಿ ಪಡೆಯುವ ಮಾತೇ ಇಲ್ಲ. ನನ್ನನ್ನು ಹೊರದಬ್ಬಬೇಕು. ಬಹುಶಃ ಆಗಲೂ ನಾನು ಮತ್ತಷ್ಟು ಹಾಟ್ ಆಗಿ ಕಮ್‌ಬ್ಯಾಕ್ ಮಾಡುತ್ತೇನೆ ಎಂದಿದ್ದಾರೆ.

    ಇನ್ನೂ ʻಪಠಾಣ್‌ʼ ಸಕ್ಸಸ್‌ ನಂತರ `ಜವಾನ್‌’ ಸಿನಿಮಾ ಕೆಲಸದತ್ತ ಶಾರುಖ್‌ ಮುಖ ಮಾಡಿದ್ದಾರೆ. ಹೊಸ ಬಗೆಯ ಕಥೆಗಳನ್ನ ಬಾದಷಾ ಕೇಳುತ್ತಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ʻಪಠಾಣ್‌ʼ ಬಳಿಕ ಮತ್ತೆ ಒಂದೇ ಸಿನಿಮಾದಲ್ಲಿ ಸಲ್ಮಾನ್- ಶಾರುಖ್ ಖಾನ್

    ʻಪಠಾಣ್‌ʼ ಬಳಿಕ ಮತ್ತೆ ಒಂದೇ ಸಿನಿಮಾದಲ್ಲಿ ಸಲ್ಮಾನ್- ಶಾರುಖ್ ಖಾನ್

    ಬಾಲಿವುಡ್‌ನಲ್ಲಿ (Bollywood) ಖಾನ್‌ಗಳದ್ದೇ ದರ್ಬಾರ್ ನಡೆಯುತ್ತಿದೆ. ಶಾರುಖ್ (Sharukh Khan) ಮತ್ತು ಸಲ್ಮಾನ್ ಖಾನ್ (Salman Khan) ಸಿನಿಮಾಗಳಿಗೆ ಬಿಟೌನ್‌ನಲ್ಲಿ ಭರ್ಜರಿ ಡಿಮ್ಯಾಂಡ್‌ ಇದೆ. ಇತ್ತೀಚಿನ `ಪಠಾಣ್’ (Pathan)  ಚಿತ್ರದಲ್ಲಿ ಶಾರುಖ್‌ಗೆ ಬ್ಯಾಡ್ ಬಾಯ್ ಸಲ್ಮಾನ್  ಸಾಥ್ ನೀಡಿದ್ದರು. ಈಗ ಮತ್ತೆ ಹೊಸ ಚಿತ್ರಕ್ಕಾಗಿ ಬಾದಷಾ ಮತ್ತು ಸಲ್ಲು ಬಾಯ್ ಒಂದಾಗುತ್ತಿದ್ದಾರೆ.

    `ಪಠಾಣ್’ (Pathan) ಸಿನಿಮಾದ ಗೆಲುವಿನಿಂದ ಬಾಲಿವುಡ್‌ಗೆ ಹೊಸ ಶಕ್ತಿ ನೀಡಿತ್ತು. ಪಠಾಣ್‌ಗೆ ಸಲ್ಮಾನ್ ಎಂಟ್ರಿಯಿಂದ ಚಿತ್ರಕ್ಕೆ ತೂಕ ಹೆಚ್ಚಿಸಿತ್ತು. ಇವರಿಬ್ಬರ ಕಾಂಬಿನೇಷನ್ ಸಿನಿಮಾದಲ್ಲಿ ಕಮಾಲ್ ಮಾಡಿತ್ತು. ಇದೀಗ ಮತ್ತೆ ಈ ಖಿಲಾಡಿ ಜೋಡಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ `ಜೋಶ್’ ನಟಿ ಪೂರ್ಣ

    ಸಲ್ಮಾನ್ ಖಾನ್-ಕತ್ರಿನಾ ಕೈಫ್ (Katrina Kaif) ನಟನೆಯ ಬಹುನಿರೀಕ್ಷಿತ ಸಿನಿಮಾ `ಟೈಗರ್ 3′ ಸಿನಿಮಾದಲ್ಲಿ `ಪಠಾಣ್’ ಸೂಪರ್ ಸ್ಟಾರ್ ಶಾರುಖ್ ಖಾನ್ ಕೂಡ ಮೇಜರ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. `ಟೈಗರ್ 3′ (Tiger-3)ಅಡ್ಡಾಗೆ ಶಾರುಖ್‌ ಎಂಟ್ರಿಯಾಗುತ್ತಿದೆ. ಸಿನಿಮಾದಲ್ಲಿ ಶಾರುಖ್ ಎಂಟ್ರಿಯಿಂದ ಬಿಗ್ ಟ್ವಿಸ್ಟ್ ಸಿಗಲಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

    `ಟೈಗರ್ 3′ ಸಿನಿಮಾದಲ್ಲಿ ವಿಭಿನ್ನ ಕಥೆಯಾಗಿದ್ದು, ಸಲ್ಮಾನ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಲ್ಮಾನ್‌ಗೆ ಕತ್ರಿನಾ ನಾಯಕಿಯಾಗಿ ನಟಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್‌ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಠಾಣ್’ ಸಿನಿಮಾ ಏಟಿಗೆ, ಸಖತ್ ತಿರುಗೇಟು ನೀಡಿದ ‘ಶೆಹ್ಜಾದ’ ಟೀಮ್

    ‘ಪಠಾಣ್’ ಸಿನಿಮಾ ಏಟಿಗೆ, ಸಖತ್ ತಿರುಗೇಟು ನೀಡಿದ ‘ಶೆಹ್ಜಾದ’ ಟೀಮ್

    ಹೊಸ ಸಿನಿಮಾವೊಂದನ್ನು ತುಳಿಯಲು ಪಠಾಣ್ (Pathan) ಟೀಮ್ ಮಸಲತ್ತು ಮಾಡಿತಾ? ಇಂಥದ್ದೊಂದು ಆರೋಪ ಪಠಾಣ್ ತಂಡದ ಮೇಲೆ ಮಾಡಲಾಗಿತ್ತು. ಶಾರುಖ್ ಖಾನ್ (Shah Rukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ನ ಪಠಾಣ್ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸಿನಲ್ಲಿ 1000 ಕೋಟಿ ಕ್ಲಬ್ ತಲುಪಿದೆ. ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕೂಡ ಕಾಣುತ್ತಿದೆ. ಆದರೂ, ಹಣದಾಹ ನಿಂತಿಲ್ಲ ಎನ್ನುವ ಆರೋಪ ಮಾಡಿದ ಶೆಹ್ಜಾದ ಟೀಮ್.

    ಈ ವಾರ ಕಾರ್ತಿಕ್ ಆರ್ಯನ್ ಮತ್ತು ಕೃತಿ ಸೆನನ್ ಕಾಂಬಿನೇಷನ್ ನ ‘ಶೆಹ್ಜಾದ’ (Shehzad) ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾವನ್ನು ಹಣೆಯುವುದಕ್ಕಾಗಿಯೇ ಪಠಾಣ್ ಸಿನಿಮಾ ಏಕಾಏಕಿ ತನ್ನ ಟಿಕೆಟ್ ದರವನ್ನು ಕಡಿಮೆ ಮಾಡಿದೆ. ಇಂದು ಪಠಾಣ್ ಸಿನಿಮಾವನ್ನು ಕೇವಲ ರೂ.110ಕ್ಕೆ ನೋಡಬಹುದು ಎಂದು ಪೊಸ್ಟರ್ ರಿಲೀಸ್ ಮಾಡಿದೆ. ಸಡನ್ನಾಗಿ ಟಿಕೆಟ್ ಬೆಲೆ ಕಡಿಮೆ ಮಾಡುವುದಕ್ಕೆ ಕಾರಣ, ಹೊಸ ಸಿನಿಮಾ ಬಿಡುಗಡೆ. ಇದನ್ನೂ ಓದಿ: ಮಲಯಾಳಂ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾದ ರಾಜ್ ಬಿ ಶೆಟ್ಟಿ

    ಪಠಾಣ್ ಇಂಥದ್ದೊಂದು ನಡೆಯನ್ನು ಘೋಷಿಸುತ್ತಿದ್ದಂತೆಯೇ ಶೆಹ್ಜಾದ್ ಟೀಮ್ ಕೂಡ ಸುಮ್ಮನೆ ಕೂತಿಲ್ಲ. ಅದು ಕೂಡ ಭರ್ಜರಿಯಾಗಿಯೇ ತಿರುಗೇಟು ನೀಡಿದೆ. ಒಂದು ಟಿಕೆಟ್ ಕೊಂಡರೆ ಮತ್ತೊಂದು ಟಿಕೆಟ್ ಉಚಿತ ಎಂದು ಘೋಷಣೆ ಮಾಡಿದೆ. ಈ ಮೂಲಕ ಪಠಾಣ್‍ ಗೆ ಅದು ಮುಟ್ಟಿ ನೋಡಿಕೊಳ್ಳುವಂತಹ ಏಟನ್ನೇ ನೀಡಿದೆ.

    ಈ ಟಿಕೆಟ್ ಸಮರವನ್ನು ಬಾಲಿವುಡ್ ತುಂಬಾ ಸೂಕ್ಷ್ಮವಾಗಿ ಗಮನಿಸಿದ್ದು, ಈ ರೀತಿಯ ಪೈಪೋಟಿ ಯಾರಿಗೂ ಸರಿಯಾದದ್ದು ಅಲ್ಲ ಎಂದಿದೆ. ಸಿನಿ ಪಂಡಿತರು ಇದರಿಂದ ಮುಂದೆ ಆಗುವ ಅನಾಹುತದ ಲೆಕ್ಕಾಚಾರವನ್ನೂ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ನೆಟ್ಟಿಗರು ಪಠಾಣ್ ನಡೆಯನ್ನು ಖಂಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k