Tag: ಶಾರುಖ್ ಖಾನ್

  • ಶಾರುಖ್‌ ಖಾನ್‌ ನಟನೆಯ ʻಜವಾನ್‌ʼ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌

    ಶಾರುಖ್‌ ಖಾನ್‌ ನಟನೆಯ ʻಜವಾನ್‌ʼ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌

    ‘ಪಠಾಣ್’ (Pathaan) ಸಿನಿಮಾದ ಸಕ್ಸಸ್ ಅಲೆಯಲ್ಲಿರುವಾಗಲೇ ಶಾರುಖ್ ಖಾನ್ ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದಾರೆ. ಕಳೆದ ಆರೇಳು ವರ್ಷಗಳಿಂದ ಸಿನಿಮಾ ಸಕ್ಸಸ್ ಕಾಣದೇ ಬೆಸತ್ತ ಶಾರುಖ್‌ಗೆ ‘ಪಠಾಣ್’ ಸಿನಿಮಾದಿಂದ ಮರುಜೀವ ಸಿಕ್ಕಿದೆ. ಇದೀಗ ‘ಜವಾನ್’ (Jawan) ಸಿನಿಮಾ ಮೂಲಕ ಮತ್ತೆ ತೆರೆಯ ಮೇಲೆ ಅಬ್ಬರಿಸಲು ಬರುತ್ತಿದ್ದಾರೆ. ಅದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.

    ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರೀಕರಣ ನಡೆಯುತ್ತಿರುವಾಗಲೇ ಶಾರುಖ್ ಖಾನ್, ಆಕ್ಷನ್-ಮಾಸ್ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದರು. ಅದುವೇ ಜವಾನ್. ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶನದ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ರಿವೀಲ್ ಮಾಡಲಾಗಿದೆ. ಇದನ್ನೂ ಓದಿ:ನಾನು ಮಾತಾಡಿದರೆ ಸಮಂತಾ ಕಥೆ ಅಷ್ಟೆ: ಮತ್ತೆ ಗುಡುಗಿದ ಚಿಟ್ಟಿ ಬಾಬು

    ಪಕ್ಕಾ ಆ್ಯಕ್ಷನ್ ಸಿನಿಮಾ ಆಗಿರುವ ‘ಜವಾನ್’ ಜೂನ್ 2ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯವನ್ನು ಮೇ ತಿಂಗಳ ಮೊದಲ ವಾರದಿಂದ ಶಾರುಖ್ ಖಾನ್ ಹಾಗೂ ತಂಡ ಪ್ರಾರಂಭಿಸಲಿದೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಸಹ ಅಂತಿಮ ಹಂತದಲ್ಲಿವೆ. ಇವುಗಳು ಮುಗಿದ ಬಳಿಕ ಸಿನಿಮಾ ತಂಡವು ಪ್ರಚಾರ ಕಾರ್ಯ ಮಾಡಲಿದ್ದಾರೆ.

    ಶಾರುಖ್ ಖಾನ್‌ಗೆ ಜೋಡಿಯಾಗಿ ಕಾಲಿವುಡ್ ಸೂಪರ್ ಸ್ಟಾರ್ ನಯನತಾರಾ (Nayanatara) ನಟಿಸಿದ್ದಾರೆ. ಹಾಸ್ಯ ನಟ ಯೋಗಿ ಬಾಬು ಕೂಡ ಸಿನಿಮಾದ ಭಾಗವಾಗಿದ್ದಾರೆ. ತಮಿಳಿನ ಸ್ಟಾರ್ ವಿಜಯ್ (Vijay) ಕೂಡ ಶಾರುಖ್ ಖಾನ್ ಜೊತೆ ‘ಜವಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ವಿಜಯ್ ನಟಿಸಿದ್ದಾರೆ. ಇಬ್ಬರ ಜುಗಲ್‌ಬಂದಿ ನೋಡಲು ಜೂನ್ 2ರವರೆಗೂ ಕಾದುನೋಡಬೇಕಿದೆ.

  • ರಿಲೀಸ್ ಗೂ ಮುನ್ನವೇ ಜವಾನ ದೃಶ್ಯ ಲೀಕ್ : ಹೈಕೋರ್ಟ್ ಮೆಟ್ಟಿಲೇರಿದ ಶಾರುಖ್ ಖಾನ್

    ರಿಲೀಸ್ ಗೂ ಮುನ್ನವೇ ಜವಾನ ದೃಶ್ಯ ಲೀಕ್ : ಹೈಕೋರ್ಟ್ ಮೆಟ್ಟಿಲೇರಿದ ಶಾರುಖ್ ಖಾನ್

    ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shahrukh Khan) ನಟನೆಯ ‘ಜವಾನ’ (Jawan) ಸಿನಿಮಾ ಜೂನ್ ನಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಈ ಚಿತ್ರದ ಮಹತ್ವದ ದೃಶ್ಯಗಳು ಮತ್ತು ಫೋಟೋಗಳು ಲೀಕ್ (Leake) ಆಗಿವೆ. ಈ ಕುರಿತು ಸ್ವತಃ ಶಾರುಖ್ ಖಾನ್ ಗರಂ ಆಗಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಬಳಸಿಕೊಳ್ಳಬೇಕಾದ ದೃಶ್ಯ ಮತ್ತು ಫೋಟೋಗಳು ಲೀಕ್ ಆಗುತ್ತಿರುವುದಕ್ಕೆ ಮತ್ತು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರುವವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಈ ಸಿನಿಮಾವನ್ನು ತಮ್ಮದೇ ರೆಡ್ ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಶಾರುಖ್ ಖಾನ್, ದೃಶ್ಯಗಳು ಸೋರಿಕೆಯಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಲಿದೆ. ಹೀಗಾಗಿ ಲೀಕ್ ಮಾಡುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಶಾರುಖ್ ಖಾನ್ ಮನವಿಯನ್ನು ಪುರಸ್ಕರಿಸಿರುವ ದೆಹಲಿ ಹೈಕೋರ್ಟ್ (High Court) , ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿರುವ ದೃಶ್ಯಗಳನ್ನು ಕೂಡಲೇ ಡಿಲಿಟ್ ಮಾಡಬೇಕು ಎಂದು ಆದೇಶ ನೀಡಿದೆ. ಯುಟ್ಯೂಬ್, ವೆಬ್ ಸೈಟ್ ಸೇರಿದಂತೆ ಜವಾನ ದೃಶ್ಯಗಳನ್ನು ಅಪ್ ಲೋಡ್ ಮಾಡಿದವರು ಕೂಡಲೇ ಡಿಲಿಟ್ ಮಾಡಬೇಕು ಎಂದು ಹೈಕೋರ್ಟ್ ಆದೇಶ ಮಾಡಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

    ಜವಾನ ಬಹುತಾರಾಗಣ ಹೊಂದಿರುವ ಸಿನಿಮಾ. ಶಾರುಖ್ ಜೊತೆ ದೀಪಿಕಾ ಪಡುಕೋಣೆ (Deepika Padukone) ಹಾಗೂ ನಯನತಾರಾ ನಟಿಸಿದ್ದಾರೆ. ಈ ಮೂವರ ಸಂಗಮದ ಮೊದಲ ಸಿನಿಮಾ ಇದಾಗಿದೆ. ಇವರ ಜೊತೆ ಖ್ಯಾತ ತಮಿಳು ನಟ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾನಾ ಕಾರಣಗಳಿಂದಾಗಿ ಈ ಸಿನಿಮಾ ಕುತೂಹಲ ಮೂಡಿಸಿದೆ.

  • ಪಠಾಣ್ ಸಿನಿಮಾದಲ್ಲಿ ನಟಿಸಲು ಭಾರೀ ಮೊತ್ತದ ಸಂಭಾವನೆ ಪಡೆದ ಶಾರುಖ್ ಖಾನ್

    ಪಠಾಣ್ ಸಿನಿಮಾದಲ್ಲಿ ನಟಿಸಲು ಭಾರೀ ಮೊತ್ತದ ಸಂಭಾವನೆ ಪಡೆದ ಶಾರುಖ್ ಖಾನ್

    ಬಾಲಿವುಡ್ (Bollywood) ಸಿನಿಮಾ ರಂಗವನ್ನು ಐಸಿಯುನಿಂದ ಆಚೆ ತಂದ ಹೆಗ್ಗಳಿಕೆ ಪಠಾಣ್ (Pathan) ಸಿನಿಮಾಗೆ ಸಲ್ಲುತ್ತದೆ. ದಕ್ಷಿಣದ ಸಿನಿಮಾಗಳ ಹಾವಳಿಗೆ ತತ್ತರಿಸಿ ಹೋಗಿದ್ದ ಬಾಲಿವುಡ್, ಒಂದು ಗೆಲುವಿಗಾಗಿ ಕಾಯುತ್ತಿತ್ತು. ಆ ಗೆಲುವನ್ನು ಪಠಾಣ್ ಸಿನಿಮಾ ತಂದುಕೊಟ್ಟಿತು. ಜೊತೆಗೆ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಕೂಡ ಮಾಡಿತು. ಇದರ ಬೆನ್ನಲ್ಲೇ ಶಾರುಖ್ ಖಾನ್ (Shah Rukh Khan) ಪಡೆದ ಮೊತ್ತದ ಬಗ್ಗೆ ಚರ್ಚೆ ಶುರುವಾಗಿದೆ. ಭಾರೀ ಮೊತ್ತದ ಸಂಭಾವನೆಯನ್ನೇ (Remuneration) ಅವರು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

    ಬಾಕ್ಸ್ ಆಫೀಸಿನ ಅನೇಕ ದಾಖಲೆಗಳನ್ನು ಪಠಾಣ್ ಮುರಿದಿದೆ. ಅತೀ ಕಡಿಮೆ ಸಮಯದಲ್ಲೇ ಸಾವಿರ ಕೋಟಿ ಸಂಪಾದನೆ ಮಾಡಿದ ಬಾಲಿವುಡ್ ಸಿನಿಮಾ ಎನ್ನುವ ಖ್ಯಾತಿಯೂ ಅದು ಪಾತ್ರವಾಗಿದೆ. ಅಲ್ಲದೇ, ಸಾವಿರಾರು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುವ ಮೂಲಕ ಏಕಕಾಲದಲ್ಲಿ ದೇಶ ವಿದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಬಿಡುಗಡೆಯಾದ ಅಷ್ಟೂ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಚಿತ್ರಕಂಡಿದೆ. ನಿರ್ಮಾಣ ಸಂಸ್ಥೆಗೆ ಬರೋಬ್ಬರಿ 603 ಕೋಟಿ ಲಾಭವನ್ನು ತಂದುಕೊಟ್ಟಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ:ತೆಲುಗು ಸಿನಿಮಾ ರಂಗದಲ್ಲೇ ಇನ್ನೂ ಹತ್ತು ವರ್ಷ ಪ್ರಶಾಂತ್ ನೀಲ್ ಲಾಕ್?

    ಈ ಸಿನಿಮಾಗೆ ಯಶ್ ರಾಜ್ ಫಿಲ್ಮ್ಸ್ ಖರ್ಚು ಮಾಡಿದ್ದು 270 ಕೋಟಿ. ಥಿಯೇಟರ್ ನಿಂದಲೇ 941 ಕೋಟಿ ರೂಪಾಯಿ ಬಂದಿದೆ. ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕುಗಳ ರೂಪದಲ್ಲಿ 150 ಕೋಟಿ ಬಾಚಿಕೊಂಡಿತ್ತು. ಹೀಗಾಗಿ ಭಾರೀ ಮೊತ್ತದ ವ್ಯಾಪಾರವನ್ನೇ ಈ ಸಿನಿಮಾ ಮಾಡಿತ್ತು. ಈ ಎಲ್ಲ ವ್ಯಾಪಾರದ ನಂತರ ಶೇರ್ ರೂಪದಲ್ಲಿ ಶಾರುಖ್ ಖಾನ್ ಗೆ 200 ಕೋಟಿ ರೂಪಾಯಿ ಸಂಭಾವನೆ ಹೋಗಿದೆಯಂತೆ.

    ಸಿನಿಮಾ ಬಿಡುಗಡೆಗೂ ಮುನ್ನ ಭಾರೀ ಟೀಕೆಗೆ ಪಠಾಣ್ ಗುರಿ ಆಯಿತು. ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದರು ಎನ್ನುವ ಕಾರಣಕ್ಕಾಗಿ ಪ್ರತಿಭಟನೆ ಕೂಡ ನಡೆಯಿತು. ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆ ಸಿನಿಮಾವನ್ನು ಬ್ಯಾನ್ ಮಾಡುವ ವಿಚಾರ ಮುನ್ನೆಲೆಗೆ ಬಂತು. ಈ ಸಿನಿಮಾದ ಬಗ್ಗೆ ಏನೂ ಮಾತನಾಡಬಾರದು ಎಂದು ಸ್ವತಃ ಪ್ರಧಾನಿ ಮೋದಿ ಅವರೇ ಕರೆಕೊಟ್ಟಿದ್ದರು. ಆದರೂ, ಪ್ರತಿಭಟನೆ ನಿಲ್ಲಲಿಲ್ಲ. ಸಿನಿಮಾ ಗೆಲ್ಲುವುದು ಮಾತ್ರ ಬಿಡಲಿಲ್ಲ.

  • ವಿಶ್ವದ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌- ರಾಜಮೌಳಿ

    ವಿಶ್ವದ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌- ರಾಜಮೌಳಿ

    ಮೆರಿಕದ ಟೈಮ್ಸ್ ಮ್ಯಾಗ್‌ಜಿನ್ 2023ರ ವಿಶ್ವದ ಟಾಪ್ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ರಿಲೀಸ್ ಮಾಡಿದೆ. ಅದರಲ್ಲಿ ‘ಆರ್‌ಆರ್‌ಆರ್’ ಖ್ಯಾತಿಯ ನಿರ್ದೇಶಕ ರಾಜಮೌಳಿ (Rajamouli) ಮತ್ತು ಬಿಟೌನ್ ಸೂಪರ್ ಸ್ಟಾರ್ ಶಾರುಖ್ ಖಾನ್ (Sharukh Khan) ಅವರು ಸೇರಿಕೊಂಡಿದ್ದಾರೆ. ಇದನ್ನೂ ಓದಿ:Saregamapa 19 Grand Finale: ಯಾರ ಪಾಲಾಗಲಿದ್ದಾಳೆ ವಿಜಯಲಕ್ಷ್ಮಿ

    ರಾಜಮೌಳಿ- ಶಾರುಖ್ ಖಾನ್ ತಮ್ಮ ಕ್ಷೇತ್ರದಲ್ಲಿ ಸಕ್ಸಸ್ ಕಂಡಿದ್ದಾರೆ. ಕಳೆದ ವರ್ಷ ರಿಲೀಸ್ ಆದ RRR ಚಿತ್ರದಿಂದ ರಾಜಮೌಳಿ ಗೆದ್ದು ಬೀಗಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದೆ. ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಮೆರಿಕದ ಪ್ರತಿಷ್ಠಿತ ಟೈಮ್ ಮ್ಯಾಗಜಿನ್ (Times Magazine) 2023ನೇ ಸಾಲಿನ ಪ್ರಭಾವಿಗಳ ಪಟ್ಟಿಯಲ್ಲಿ ರಾಜಮೌಳಿ- ಶಾರುಖ್ ಖಾನ್ ಹೆಸರು ಇದೆ. ಇದರಿಂದ ಭಾರತ ಹೆಮ್ಮೆ ಪಡುವಂತೆ ಆಗಿದೆ.

    RRR ಸಿನಿಮಾ ರಿಲೀಸ್ ಆಗಿ ಸುಮಾರು ಒಂದು ವರ್ಷದ ಬಳಿಕ ಚಿತ್ರದ ‘ನಾಟು ನಾಟು’ ಹಾಡಿಗೆ ಆಸ್ಕರ್ ಸಿಕ್ಕಿತು. ಈ ಮೂಲಕ ರಾಜಮೌಳಿ ಹೆಸರು ವಿಶ್ವಾದ್ಯಂತ ಹಬ್ಬಿತು. ಶಾರುಖ್ ಖಾನ್ ಅವರ ‘ಪಠಾಣ್’ (Pathaan) ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಸದ್ದು ಮಾಡಿತು. ಸತತ ಸೋಲು ಕಂಡಿದ್ದ ಶಾರುಖ್ ಅವರು ಈ ಚಿತ್ರದಿಂದ ಗೆದ್ದರು. ಶಾರುಖ್ ಖ್ಯಾತಿ ಹೆಚ್ಚಿತು. ಈಗ ಅವರ ಮುಂದಿನ ಚಿತ್ರ ಜವಾನ್, ಡಂಕಿ ಬಗ್ಗೆಯೂ ನಿರೀಕ್ಷೆ ಇದೆ. ಈ ಎಲ್ಲಾ ಕಾರಣದಿಂದ ಪ್ರಭಾವಿಗಳ ಸಾಲಿನಲ್ಲಿ ಅವರು ಸ್ಥಾನ ಪಡೆದಿದ್ದಾರೆ.

    ಸೋಷಿಯಲ್ ಮೀಡಿಯಾ ಖ್ಯಾತಿ, ಚಿತ್ರರಂಗಕ್ಕೆ ಅವರ ಕೊಡುಗೆ, ಅವರ ಟ್ಯಾಲೆಂಟ್, ಕಠಿಣ ಪರಿಶ್ರಮ ಮೊದಲಾದ ವಿಚಾರಗಳನ್ನು ಪರಿಗಣಿಸಲಾಗುತ್ತದೆ. ಸದ್ಯ ರಾಜಮೌಳಿ- ಶಾರುಖ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

  • ಅಮಿತಾಭ್ ಮನೆಗೆ ಸೊಸೆಯಾಗಲಿದ್ದಾರಾ ಶಾರುಖ್ ಖಾನ್ ಮಗಳು

    ಅಮಿತಾಭ್ ಮನೆಗೆ ಸೊಸೆಯಾಗಲಿದ್ದಾರಾ ಶಾರುಖ್ ಖಾನ್ ಮಗಳು

    ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಮನೆಗೆ ಶಾರುಖ್ ಖಾನ್ (Shahrukh Khan) ಪುತ್ರಿ ಸುಹಾನಾ (Suhana) ಸೊಸೆಯಾಗಿ ಬರುತ್ತಾರೆ ಎನ್ನುವ ಮಾತು ಹರಿದಾಡುತ್ತಿದೆ. ಇದು ನಂಬಲು ಅಸಾಧ್ಯವೆನಿಸಿದರೂ, ಸಾಧ್ಯವಾಗುವಂತಹ ವಿಚಾರಗಳನ್ನು ಬಿಟೌನ್ ತನ್ನ ಒಡಲಿಲ್ಲ ಇಟ್ಟುಕೊಂಡಿರುವುದಂತೂ ಸತ್ಯ. ಹಾಗಾಗಿ ಇಂಥದ್ದೊಂದು ಸುದ್ದಿಗೆ ರೆಕ್ಕೆಪುಕ್ಕಗಳು ಬಂದಿವೆ.

    ಅಮಿತಾಭ್ ಮೊಮ್ಮಗ ಅಗಸ್ತ್ಯ (Agastya) ಹಾಗೂ ಶಾರುಖ್ ಖಾನ್ ಮಗಳು ಸುಹಾನಾ ಡೇಟಿಂಗ್ (Dating) ವಿಚಾರ ಗುಟ್ಟಾಗೇನೂ ಉಳಿದಿಲ್ಲ. ಆದರೆ, ಅವರ ಪ್ರೇಮ ಮದುವೆಯವರೆಗೂ ಹೋಗಿದೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಪರಸ್ಪರ ಗೌರವ ಕೊಟ್ಟುಕೊಂಡು ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದೊಂದು ಗಟ್ಟಿ ಪ್ರೇಮವಾದ್ದರಿಂದ ಮದುವೆಯಾದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಿದೆ ಬಾಲಿವುಡ್. ಇದನ್ನೂ ಓದಿ: 2ನೇ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ಕಿರುತೆರೆ ನಟಿ ಸ್ವಾತಿ

    ಸುಹಾನಾ ಮತ್ತು ಅಗಸ್ತ್ಯ ಅನೇಕ ಬಾರಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅನೇಕ ಸಮಾರಂಭಗಳಿಗೆ ಒಟ್ಟಿಗೆ ಹೋಗಿದ್ದಾರೆ. ಅಲ್ಲದೇ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗಾಗಿ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬೆಳೆಯುತ್ತಿದ್ದಾರೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಹಾಗಂತ ಇಬ್ಬರೂ ತಾವು ಡೇಟಿಂಗ್ ಮಾಡುತ್ತಿರುವ ವಿಚಾರವನ್ನೂ ಈವರೆಗೂ ಯಾವತ್ತೂ ಬಹಿರಂಗವಾಗಿ ಮಾತನಾಡಿಲ್ಲ.

    ಈ ವಯಸ್ಸಿನ ಡೇಟಿಂಗ್ ತುಂಬಾ ದಿನ ಉಳಿಯುವುದಿಲ್ಲ ಎನ್ನುವ ಮಾತಿದೆ. ಹಲವಾರು ಪ್ರೇಮಿಗಳು ಅರ್ಧಕ್ಕೆ ಬಾಂಧವ್ಯವನ್ನು ತುಂಡರಿಸಿಕೊಂಡು ಹೋಗಿದ್ದಾರೆ. ಇವರಿಬ್ಬರ ಪ್ರೇಮವೂ ಹಾಗೆಯೇ ಆಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಏನೇ ಆಗಲಿ, ಅವರ ಪ್ರೇಮ ಗಟ್ಟಿಯಾಗಿ ಉಳಿದುಕೊಳ್ಳಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.

  • ಹುಲ್ಲು ಹಸಿರಾಗಿತ್ತು, ನೀರು ನೀಲಿಯಾಗಿತ್ತು ಅದಕ್ಕೆ ಕೇಸರಿ ಬಿಕಿನಿ ಹಾಕಿಸಿದೆ : ಸಿದ್ಧಾರ್ಥ್

    ಹುಲ್ಲು ಹಸಿರಾಗಿತ್ತು, ನೀರು ನೀಲಿಯಾಗಿತ್ತು ಅದಕ್ಕೆ ಕೇಸರಿ ಬಿಕಿನಿ ಹಾಕಿಸಿದೆ : ಸಿದ್ಧಾರ್ಥ್

    ಶಾರುಖ್ ಖಾನ್ (Shahrukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ನ ‘ಪಠಾಣ್’ (Pathan) ಸಿನಿಮಾದ ಕೇಸರಿ ಬಿಕಿನಿ (Kesari Bikini) ವಿವಾದದ ಬಗ್ಗೆ ಈಗ ನಿರ್ದೇಶಕ ಸಿದ್ದಾರ್ಥ್ ಆನಂದ್ (Siddharth Anand) ಮೌನ ಮುರಿದಿದ್ದಾರೆ. ಆ ಹಾಡಿನಲ್ಲಿ ದೀಪಿಕಾ ಪಡುಕೋಣೆಗೆ ಯಾಕೆ ಕೇಸರಿ ಬಿಕಿನಿ ಹಾಕಿಸಿದೆ ಎನ್ನುವ ಕುರಿತು ಅವರು ಮಾತನಾಡಿದ್ದಾರೆ. ಅದಕ್ಕೆ ಬಲವಾದ ಕಾರಣವನ್ನೂ ಕೊಟ್ಟಿದ್ದಾರೆ.

    ಈ ಹಾಡಿನ ಶೂಟಿಂಗ್ ನಡೆದದ್ದು ಸ್ಪೇನ್ ನಲ್ಲಿ. ಆಗ ಅಲ್ಲಿನ ವಾತಾವರಣಕ್ಕೆ ಹೊಂದುವಂತಹ ಬಣ್ಣ ಆಯ್ಕೆ ಮಾಡಿಕೊಳ್ಳಬೇಕಿತ್ತು. ಬಿಸಿಲಿತ್ತು. ಹುಲ್ಲು ಹಸಿರಾಗಿತ್ತು. ನೀರು ನೀಲಿಯಾಗಿತ್ತು. ಕೇಸರಿ ಬಣ್ಣ ಎದ್ದು ಕಾಣುತ್ತದೆ ಎನ್ನುವ ಕಾರಣಕ್ಕಾಗಿ ಕೇಸರಿ ಬಣ್ಣವನ್ನು ಆಯ್ಕೆ ಮಾಡಿಕೊಂಡರಂತೆ. ಅದರ ಹೊರತಾಗಿ ಬೇರೆ ಯಾವ ಆಲೋಚನೆಯೂ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: 2ನೇ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ಕಿರುತೆರೆ ನಟಿ ಸ್ವಾತಿ

    ಕೇಸರಿ ಬಿಕಿನಿ ಆರಿಸುವ ಧಾರ್ಮಿಕ ಭಾವನೆ, ಬೇರೆಯವರಿಗೆ ನೋವಾಗತ್ತೆ ಏನೂ ಯೋಚಿಸಲಿಲ್ಲ. ಒಬ್ಬ ನಿರ್ದೇಶಕನಾಗಿ ಯಾವ ಬಣ್ಣ ಹೈಲೈಟ್ ಆಗತ್ತೆ ಅಂತ ಮಾತ್ರ ಯೋಚನೆ ಮಾಡಿದೆ. ಆದರೆ, ಕೇಸರಿ ಬಿಕಿನಿ ಈ ರೀತಿಯಲ್ಲಿ ವಿವಾದ ಎಬ್ಬಿಸುತ್ತೆ ಎನ್ನುವ ಸಣ್ಣ ಅಂದಾಜು ಕೂಡ ನನಗೆ ಇರಲಿಲ್ಲ. ಸಿನಿಮಾದಲ್ಲಿ ಯಾರ ಭಾವನೆಯನ್ನೂ ಕೆರಳಿಸುವ ಕಥೆಯೂ ಇಲ್ಲ. ಆದರೂ, ವಿವಾದ ಮಾಡಲಾಯಿತು.

    ಸಿನಿಮಾ ಚೆನ್ನಾಗಿದ್ದರೆ, ಯಾರ ಮನಸ್ಸಿಗೂ ನೋವು ಮಾಡದೇ ಇದ್ದರೆ ಸಿನಿಮಾವನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ ಎನ್ನುವುದಕ್ಕೆ ಪಠಾಣ್ ಸಿನಿಮಾ ಸಾಕ್ಷಿ. ಸಿನಿಮಾ ಬಗ್ಗೆ ನನಗೆ ನಂಬಿಕೆಯಿತ್ತು. ಬಾಯ್ಕಾಟ್ ನಡೆಯಲ್ಲ ಅನ್ನುವ ವಿಶ್ವಾಸವಿತ್ತು. ಕೊನೆಗೂ ಪ್ರೇಕ್ಷಕ ಗೆಲ್ಲಿಸಿದ ಎಂದು ಅವರು ಮಾತನಾಡಿದ್ದಾರೆ.

  • ಶಾರುಖ್ ಚಿತ್ರಕ್ಕಾಗಿ ರೂಲ್ಸ್ ಬ್ರೇಕ್, 16 ವರ್ಷಗಳ ಬಳಿಕ ಬಿಕಿನಿಯಲ್ಲಿ ನಯನತಾರಾ

    ಶಾರುಖ್ ಚಿತ್ರಕ್ಕಾಗಿ ರೂಲ್ಸ್ ಬ್ರೇಕ್, 16 ವರ್ಷಗಳ ಬಳಿಕ ಬಿಕಿನಿಯಲ್ಲಿ ನಯನತಾರಾ

    ಕಾಲಿವುಡ್ (Kollywood) ಸೂಪರ್ ಸ್ಟಾರ್ ನಯನತಾರಾ (Nayanatara) ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಸದ್ಯ ದಕ್ಷಿಣದಿಂದ ಬಾಲಿವುಡ್‌ಗೆ (Bollywood) ಹಾರಿರುವ ನಯನತಾರಾ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ನಯನತಾರಾ ಬಿಕಿನಿ ತೊಡುವ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ.

    ಕನ್ನಡ ಮತ್ತು ಸೌತ್ ಸಿನಿಮಾಗಳಲ್ಲಿ ನಟಿಸಿ ಈಗಾಗಲೇ ಸೈ ನಟಿ ಎನಿಸಿಕೊಂಡಿದ್ದಾರೆ. ಚಿತ್ರಗಳಲ್ಲಿ ಸದಾ ಟ್ರೆಡಿಷನಲ್ ಲುಕ್‌ನಲ್ಲಿಯೇ ಕಾಣಿಸಿಕೊಳ್ಳುವ ನಯನತಾರಾಗೆ ಇಂದಿಗೂ ಡಿಮ್ಯಾಂಡ್‌ಯೇನು ಕಮ್ಮಿಯಾಗಿಲ್ಲ. ಅದಕ್ಕೆ ಸಾಕ್ಷಿ `ಜವಾನ್’. ಬಾಲಿವುಡ್ ಕಿಂಗ್ ಖಾನ್ ಶಾರುಖ್ (Sharukh Khan) ಜೊತೆ ನಯನತಾರಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಈ ಸಿನಿಮಾಗಾಗಿ ತಾನೇ ಹಾಕಿಕೊಂಡಿರೋ ರೂಲ್ಸ್ ಅನ್ನು ಬ್ರೇಕ್ ಮಾಡುತ್ತಿದ್ದಾರಂತೆ.

    ಹೌದು.. ನಯನತಾರಾ ಕಳೆದ 16 ವರ್ಷಗಳಿಂದ ಒಂದೇ ಒಂದು ಸಿನಿಮಾದಲ್ಲೂ ಬಿಕಿನಿ ಧರಿಸಿಲ್ಲ. ತನ್ನ ಜೊತೆ ಕೆಲಸ ಮಾಡೋಕೆ ಬರೋ ನಿರ್ಮಾಪಕರಿಗೆ, ನಿರ್ದೇಶಕರಿಗೆ `ನೋ ಬಿಕಿನಿ’ (No Bikini) ಅನ್ನೋ ಸಂದೇಶವನ್ನು ರವಾನೆ ಮಾಡಿದ್ದರು. ಆದ್ರೀಗ ತಾನೇ ಹಾಕಿಕೊಂಡಿದ್ದ ರೂಲ್ಸ್ ಅನ್ನು ಈಗ ಬ್ರೇಕ್ ಮಾಡುತ್ತಿದ್ದಾರಂತೆ. ಇದನ್ನೂ ಓದಿ:ನಮ್ಮ ನಡುವೆ ಏನಿಲ್ಲ, ಡಾಲಿಗೆ ಹೆಣ್ಣು ಕೊಡುತ್ತಿಲ್ಲ: ನಟಿ ಅಮೃತಾ

    ಈ ಮ್ಯಾಟರ್ ಬಾಲಿವುಡ್ ಅಂಗಳದಲ್ಲಿ ಕಳೆದ 2 ದಿನಗಳಿಂದ ಹರಿದಾಡುತ್ತಿದೆ. ನೆಚ್ಚಿನ ನಟಿ ಬಿಕಿನಿ ಧರಿಸುತ್ತಿದ್ದಾರೆ ಅನ್ನೋ ಸುದ್ದಿ ಅಭಿಮಾನಿಗಳಿಗೆ ನಂಬೋಕೆ ಆಗುತ್ತಿಲ್ಲ. ಯಾಕೆಂದ್ರೆ, ಅಷ್ಟು ಸುಲಭಕ್ಕೆ ನಯನತಾರಾ ರೂಲ್ಸ್ ಬ್ರೇಕ್ ಮಾಡೋದೇ ಇಲ್ಲ. ಆದರೂ ಬಿಕಿನಿ ಧರಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಕ್ಕೆ ಕಾರಣ ಶಾರುಖ್ ಖಾನ್ ಎನ್ನಲಾಗುತ್ತಿದೆ.

    ಶಾರುಖ್ ಖಾನ್ ಕಮ್‌ಬ್ಯಾಕ್ ಸಿನಿಮಾ `ಪಠಾಣ್’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಹಾಡೊಂದರಲ್ಲಿ ದೀಪಿಕಾ ಬಿಕಿನಿ ಧರಿಸಿ, ಅಭಿಮಾನಿಗಳ ನಿದ್ದೆ ಕೆಡಿಸಿದ್ದರು. ಈಗ ನಯನತಾರಾ ಕೂಡ `ಜವಾನ್’ನಲ್ಲಿ ಇಂತಹದ್ದೇ ದೃಶ್ಯವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.`ಜವಾನ್’ ಸಿನಿಮಾದಲ್ಲಿ ನಯನತಾರಾ ಸ್ವಿಮ್ ಸೂಟ್ ಧರಿಸುತ್ತಿದ್ದಾರಂತೆ. ನಟಿ ಕೂಡ ಬಿಕಿನಿ ಧರಿಸಲು ಓಕೆ ಎಂದಿದ್ದಾರೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಸುಳ್ಳಾ ಎಂಬುದನ್ನ ಕಾದುನೋಡಬೇಕಿದೆ.

  • ʻಪಠಾಣ್‌ʼ ಸಕ್ಸಸ್‌ ನಂತರ ದುಬಾರಿ ಕಾರು ಖರೀದಿಸಿದ ಶಾರುಖ್‌ ಖಾನ್‌

    ʻಪಠಾಣ್‌ʼ ಸಕ್ಸಸ್‌ ನಂತರ ದುಬಾರಿ ಕಾರು ಖರೀದಿಸಿದ ಶಾರುಖ್‌ ಖಾನ್‌

    ಬಾಲಿವುಡ್ (Bollywood) ಕಿಂಗ್ ಖಾನ್ ಶಾರುಖ್ `ಪಠಾಣ್’ (Pathaan)  ಚಿತ್ರದ ಸೂಪರ್ ಸಕ್ಸಸ್ ನಂತರ ಇದೀಗ ದುಬಾರಿ ಕಾರೊಂದನ್ನ ಖರೀದಿಸಿದ್ದಾರೆ. ಈ ಮೂಲಕ ಬಾದಶಾ ಸುದ್ದಿಯಲ್ಲಿದ್ದಾರೆ. ಸದ್ಯ ಕಾರ್ ವೀಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಶಾರುಖ್ ಖಾನ್- ದೀಪಿಕಾ ಪಡುಕೋಣೆ (Deepika Padukone) ನಟನೆಯ `ಪಠಾಣ್’ ಸಿನಿಮಾ ಭರ್ಜರಿ ಸಕ್ಸಸ್ ಕಂಡಿದೆ. ಸಿನಿಮಾ ಕಥೆ ಮತ್ತು ಆ್ಯಕ್ಷನ್ ಸೀಕ್ವೆನ್ಸ್‌ ಫ್ಯಾನ್ಸ್ ಫಿದಾ ಆಗಿದ್ದಾರೆ. `ಪಠಾಣ್’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ 1000 ಕೋಟಿ ರೂ. ಬಾಚಿದೆ.

    ಈ ಸಕ್ಸಸ್ ಬೆನ್ನಲ್ಲೇ ಶಾರುಖ್ ಖಾನ್ ಹೊಸ ಕಾರು ಖರೀದಿಸಿದ್ದಾರೆ. ಶಾರುಖ್ ಮನೆ ಮನ್ನತ್‌ನಲ್ಲಿ ಕಳೆದೆರಡು ದಿನಗಳಿಂದ ಹೊಸ ಕಾರು ರೌಂಡ್ ಹೊಡಿತಿದೆ. ಶಾರುಖ್ ಬಿಳಿ ಬಣ್ಣದ Rolls Royce Cullinan Black Badge ಕಾರಿನ ಒಡೆಯನಾಗಿದ್ಧಾರೆ. ಈ ಕಾರಿನ ಬೆಲೆ ಅಂದಾಜು 10 ಕೋಟಿ ರೂ.ಗೂ ಅಧಿಕ ಎನ್ನಲಾಗುತ್ತಿದೆ. ಭಾನುವಾರ ಕಿಂಗ್ ಖಾನ್ ಹೊಸ ಕಾರಿನಲ್ಲಿ ಸುತ್ತಾಡಲು ತೆರಳಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸಖತ್ ವೈರಲ್ ಆಗ್ತಿದೆ. ಕೆಲ ದಿನಗಳ ಹಿಂದೆ ಬಾಲಿವುಡ್ ಬಾದಶಾ 5 ಕೋಟಿ ರೂ. ಬೆಲೆ ವಾಚ್ ಧರಿಸಿ ಗಮನ ಸೆಳೆದಿದ್ದರು.

    `ಪಠಾಣ್’ ಸಿನಿಮಾ ಸಕ್ಸಸ್ ನಂತರ `ಜವಾನ್’ ಚಿತ್ರದಲ್ಲಿ ಶಾರುಖ್ ಖಾನ್ (Sharukh Khan) ಬ್ಯುಸಿಯಾಗಿದ್ದಾರೆ. ನಯನತಾರಾ (Nayanatara) ಜೊತೆ ಶಾರುಖ್ ರೊಮ್ಯಾನ್ಸ್ ಮಾಡಲಿದ್ದಾರೆ.

  • ಫ್ಯಾಮಿಲಿ ಫೋಟೋ ಹಂಚಿಕೊಂಡ ಶಾರುಖ್ ಪತ್ನಿ ಗೌರಿ ಖಾನ್

    ಫ್ಯಾಮಿಲಿ ಫೋಟೋ ಹಂಚಿಕೊಂಡ ಶಾರುಖ್ ಪತ್ನಿ ಗೌರಿ ಖಾನ್

    ಬಾಲಿವುಡ್ (Bollywood) ಬಾದಷಾ ಶಾರುಖ್ ಖಾನ್ (Sharukh Khan) ಸದ್ಯ ‘ಪಠಾಣ್’ (Pathaan) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಶಾರುಖ್ ಪತ್ನಿ ಬಿಟೌನ್ ನಿರ್ಮಾಪಕಿ- ಬ್ಯುಸಿನೆಸ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಗೌರಿ ಖಾನ್ (Gauri Khan) ತಮ್ಮ ಕುಟುಂಬದ ಸುಂದರ ಫೋಟೋವನ್ನ ಹಂಚಿಕೊಂಡಿದ್ದಾರೆ.

    ಶಾರುಖ್‌ಗೆ ಶಕ್ತಿಯಾಗಿ ಪತ್ನಿ ಗೌರಿ ಖಾನ್ ಕೂಡ ತಮ್ಮದೇ ಶೈಲಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚಿಗೆ ‘ಮೈ ಲೈಫ್ ಇಸ್ ಡಿಸೈನ್’ ಎಂಬ ಪುಸ್ತಕವನ್ನು ಗೌರಿ ಘೋಷಿಸಿದ್ದರು. ಈಗ ಕುಟುಂಬದ ಸುಂದರ ಫೋಟೋವನ್ನ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Gauri Khan (@gaurikhan)

    ಶಾರುಖ್- ಪತ್ನಿ ಗೌರಿ ಖಾನ್ ಮೂವರು ಮಕ್ಕಳು ಕಪ್ಪು ಉಡುಗೆಯಲ್ಲಿ ಮಿಂಚಿದ್ದಾರೆ. ಐವರು ಕ್ಯಾಮೆರಾ ಕಣ್ಣಿಗೆ ಚೆಂದದ ಪೋಸ್ ನೀಡಿದ್ದಾರೆ. ಈ ಫೋಟೋ ಶೇರ್ ಆಗ್ತಿದಂತೆ ಅಭಿಮಾನಿಗಳು ಪೋಸ್ಟ್ ನೋಡಿ ಖುಷಿಪಟ್ಟಿದ್ದಾರೆ.

    ಇನ್ನೂ ‘ಪಠಾಣ್’ ಸಕ್ಸಸ್ ನಂತರ ಶಾರುಖ್ ‘ಜವಾನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

  • ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಶಾರುಖ್ ಖಾನ್ ಪುತ್ರಿ ಸುಹಾನಾ

    ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಶಾರುಖ್ ಖಾನ್ ಪುತ್ರಿ ಸುಹಾನಾ

    ಬಾಲಿವುಡ್ (Bollywood) ನಟ ಶಾರುಖ್ ಖಾನ್ ಪುತ್ರಿ ಸುಹಾನ್ ಖಾನ್ (Suhana Khan) ನಟನಾ ಕ್ಷೇತ್ರಕ್ಕೆ ಕಾಲಿಟ್ಟಾಗಿದೆ. ಶಾರುಖ್ ಪುತ್ರಿ ಎಂಬ ಕಾರಣಕ್ಕೆ ಸುಹಾನಾರನ್ನ ಫಾಲೋ ಮಾಡುವ ಹಿಂಬಾಲಕರಿದ್ದಾರೆ. ಸಿನಿಮಾ ಜೊತೆಗೆ ಆಗಾಗ ಹಾಟ್ ಫೋಟೋಶೂಟ್ ಮೂಲಕ ಮಿಂಚ್ತಿರುತ್ತಾರೆ. ಇದೀಗ ತಮ್ಮ ಬೋಲ್ಡ್ ಲುಕ್‌ನಿಂದ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ.

    ಜೋಯಾ ಅಖ್ತರ್ ನಿರ್ದೇಶನದ `ದಿ ಆರ್ಚೀಸ್’ ಎಂಬ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯದಲ್ಲೇ ಸಿನಿಮಾ ಒಟಿಟಿಯಲ್ಲಿ ತೆರೆ ಕಾಣಲಿದೆ.  ಬಾಲಿವುಡ್‌ನಲ್ಲಿ ನಾಯಕಿಯಾಗಿ ನೆಲೆಗಿಟ್ಟಿಸಿಕೊಳ್ಳಲು ಸುಹಾನಾ ಸಖತ್ ತಯಾರಿ ಮಾಡ್ತಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ದೇವಸ್ಥಾನ ಕಟ್ಟಲು ಯಶ್ ಸಹಾಯ ನೆನೆದ ಡೇನಿಯಲ್ ಬಾಲಾಜಿ

     

    View this post on Instagram

     

    A post shared by Suhana Khan (@suhanakhan2)

    ಬಿಳಿ ಬಣ್ಣದ ಟಾಪ್‌ನಲ್ಲಿ ಸುಹಾನಾ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋಶೂಟ್ ಮೂಲಕ ನಟಿ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಶಾರುಖ್ ಪುತ್ರಿ ನಯಾ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by Suhana Khan (@suhanakhan2)

    ಸುಹಾನಾಗೆ ಇನ್ಸ್ಟಾಗ್ರಾಂ ಖಾತೆಯಲ್ಲಿ 32 ಲಕ್ಷ ಫಾಲೋವರ್ಸ್ ಇದ್ದಾರೆ. ಅವರ ಮೊದಲ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.